CALCULATE YOUR SIP RETURNS

FDI ವಿಧಗಳು

2 min readby Angel One
Share

ಒಂದು ಕಂಪನಿಯು ವಿದೇಶಿ ಭೂಮಿಯಲ್ಲಿ ಬೇರೊಂದು ಕಂಪನಿಯಲ್ಲಿ ಹೂಡಿಕೆ ಮಾಡಿದಾಗ, ಹೂಡಿಕೆಯನ್ನು ವಿದೇಶಿ ನೇರ ಹೂಡಿಕೆ (FDI) ಎಂದು ಕರೆಯಲಾಗುತ್ತದೆ. ಎಫ್ಡಿಐ(FDI)ಗಳನ್ನು ನಾಲ್ಕು ಪ್ರಕಾರಗಳಾಗಿ ವರ್ಗೀಕರಿಸಲಾಗುತ್ತದೆ. ಅದು ಏನು ಎಂಬುದನ್ನು ಕಂಡುಹಿಡಿಯಲು ಮುಂದೆ ಓದಿ.

ಹೂಡಿಕೆ ಮಾರುಕಟ್ಟೆಯು ಅಗಾಧವಾದ ಜಾಗವಾಗಿದೆ. ವೈಯಕ್ತಿಕ ಹೂಡಿಕೆದಾರರು ಮತ್ತು ದೊಡ್ಡ ಕಂಪನಿಗಳು ತಮ್ಮ ದೇಶಗಳಲ್ಲಿ ಮತ್ತು ವಿದೇಶಿ  ಕಂಪನಿಗಳಲ್ಲಿ ಹೂಡಿಕೆ ಮಾಡಬಹುದು. ಒಂದು ಕಂಪನಿಯು ವಿದೇಶಿ ಭೂಮಿಯಲ್ಲಿ ಬೇರೊಂದು ಕಂಪನಿಯಲ್ಲಿ ಬಿಸಿನೆಸ್ನಲ್ಲಿ ಹೂಡಿಕೆ ಮಾಡಿದಾಗ, ಹೂಡಿಕೆಯನ್ನು ವಿದೇಶಿ ನೇರ ಹೂಡಿಕೆ ಅಥವಾ ಎಫ್ಡಿಐ(FDI) ಎಂದು ಪರಿಗಣಿಸಲಾಗುತ್ತದೆ. ನಾಲ್ಕು ವಿವಿಧ ವಿದೇಶಿ ನೇರ ಹೂಡಿಕೆಗಳಿವೆ. ಅವುಗಳು ಕೆಳಗಿನಂತಿವೆ:

ವಿವಿಧ ರೀತಿಯ ವಿದೇಶಿ ಹೂಡಿಕೆಗಳು ಇಲ್ಲಿವೆ


  1. ಹಾರಿಜಂಟಲ್ ಎಫ್ಡಿಐ (FDI)

ಅತ್ಯಂತ ಸಾಮಾನ್ಯ ಪ್ರಕಾರದ ಎಫ್ಡಿಐ(FDI) ಹಾರಿಜಂಟಲ್ ಎಫ್ಡಿಐ(FDI) ಆಗಿದೆ, ಇದು ಪ್ರಾಥಮಿಕವಾಗಿ ಎಫ್ಡಿಐ(FDI) ಹೂಡಿಕೆದಾರರಿಂದ ಮಾಲೀಕತ್ವ ಹೊಂದಿರುವ ಅಥವಾ ಕಾರ್ಯನಿರ್ವಹಿಸುವ ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡುವ ಫಂಡ್ಗಳನ್ನು ಸುತ್ತುತ್ತದೆ. ಇಲ್ಲಿ, ಒಂದು ಕಂಪನಿಯು ಬೇರೆ ದೇಶದಲ್ಲಿರುವ ಬೇರೊಂದು ಕಂಪನಿಯಲ್ಲಿ ಹೂಡಿಕೆ ಮಾಡುತ್ತದೆ, ಇದರಲ್ಲಿ ಎರಡೂ ಕಂಪನಿಗಳು ಒಂದೇ ರೀತಿಯ ಸರಕುಗಳನ್ನು ಉತ್ಪಾದಿಸುತ್ತಿವೆ. ಉದಾಹರಣೆಗೆ, ಸ್ಪೇನ್-ಆಧಾರಿತ ಕಂಪನಿ ಜಾರಾ ಭಾರತೀಯ ಕಂಪನಿಯಾದ  ಫ್ಯಾಬ್ ಇಂಡಿಯಾದಲ್ಲಿ ಹೂಡಿಕೆ ಮಾಡಬಹುದು ಅಥವಾ ಖರೀದಿಸಬಹುದು, ಇದು ಜಾರಾ ಮಾಡುವಂತಹ ರೀತಿಯ ಉತ್ಪನ್ನಗಳನ್ನು ಕೂಡ ಉತ್ಪಾದಿಸುತ್ತದೆ. ಎರಡೂ ಕಂಪನಿಗಳು ವ್ಯಾಪಾರ ಮತ್ತು ಉಡುಪುಗಳ ಒಂದೇ ಉದ್ಯಮಕ್ಕೆ ಸೇರಿರುವುದರಿಂದ, ಎಫ್ಡಿಐ(FDI)ಯನ್ನು ಹಾರಿಜಂಟಲ್ ಎಫ್ಡಿಐ(FDI) ಎಂದು ವರ್ಗೀಕರಿಸಲಾಗುತ್ತದೆ.


  1. ವರ್ಟಿಕಲ್ FDI

ವರ್ಟಿಕಲ್ FDI ಇನ್ನೊಂದು ರೀತಿಯ ವಿದೇಶಿ ಹೂಡಿಕೆಯಾಗಿದೆ. ಒಂದು ಕಂಪನಿಯಲ್ಲಿ ಸಾಮಾನ್ಯ ಸಪ್ಲೈ ಚೈನ್ನಲ್ಲಿ ಹೂಡಿಕೆ ಮಾಡಿದಾಗ ವರ್ಟಿಕಲ್ ಎಫ್ಡಿಐ(FDI) ಸಂಭವಿಸುತ್ತದೆ, ಅದು ಅಗತ್ಯವಾಗಿ ಅದೇ ಉದ್ಯಮಕ್ಕೆ ಸೇರಿರಬಹುದು ಅಥವಾ ಇಲ್ಲದಿರಬಹುದು. ಅಂತಹ, ವರ್ಟಿಕಲ್ ಎಫ್ಡಿಐ ಸಂಭವಿಸಿದಾಗ, ಉತ್ಪನ್ನಗಳನ್ನು ಪೂರೈಸಬಹುದಾದ ಅಥವಾ ಮಾರಾಟ ಮಾಡಬಹುದಾದ ವಿದೇಶಿ ಸಂಸ್ಥೆಯಲ್ಲಿ ಬಿಸಿನೆಸ್ ಹೂಡಿಕೆ ಮಾಡುತ್ತದೆ. ವರ್ಟಿಕಲ್ ಎಫ್ಡಿಐ(FDI)ಗಳನ್ನು ಬ್ಯಾಕ್ವಾರ್ಡ್ ವರ್ಟಿಕಲ್ ಇಂಟೆಗ್ರಾಷನ್ಸ್  ಮತ್ತು ಫಾರ್ವಾರ್ಡ್ ವರ್ಟಿಕಲ್ ಇಂಟೆಗ್ರಾಷನ್ಸ್ ಗಳಾಗಿ ವರ್ಗೀಕರಿಸಲಾಗುತ್ತದೆ. ಉದಾಹರಣೆಗೆ, ಸ್ವಿಸ್ ಕಾಫಿ ಉತ್ಪಾದಕರ ನೆಸ್ಕಫೆ ಬ್ರಾಜಿಲ್, ಕೊಲಂಬಿಯಾ, ವಿಯಟ್ನಾಮ್ ಮುಂತಾದ ದೇಶಗಳಲ್ಲಿನ ಕಾಫಿ ಉದ್ಯಾನಗಳಲ್ಲಿ ಹೂಡಿಕೆ ಮಾಡಬಹುದು. ಹೂಡಿಕೆ ಸಂಸ್ಥೆಯು ಖರೀದಿಸುವುದರಿಂದ, ಸಪ್ಲೈ ಚೈನ್ನಲ್ಲಿ ಒಬ್ಬ ಸಪ್ಲೈಯರ್ ಆಗಿರುವುದರಿಂದ, ರೀತಿಯ FDI ಯನ್ನು ಬ್ಯಾಕ್ವರ್ಡ್ ವರ್ಟಿಕಲ್ ಇಂಟೆಗ್ರಾಷನ್ಸ್ ಎಂದು ಕರೆಯಲಾಗುತ್ತದೆ. ವಿರುದ್ಧವಾಗಿ, ಒಂದು ಕಂಪನಿಯು ಸಪ್ಲೈ ಚೈನ್ನಲ್ಲಿ ಹೆಚ್ಚಿನ ಶ್ರೇಣಿಯನ್ನು ಹೊಂದಿರುವ ಇನ್ನೊಂದು ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿದಾಗ ಫಾರ್ವರ್ಡ್ ವರ್ಟಿಕಲ್ ಇಂಟೆಗ್ರಾಷನ್ಸ್ ಸಂಭವಿಸಲಾಗುತ್ತದೆ, ಉದಾಹರಣೆಗೆ, ಭಾರತದ ಕಾಫಿ ಕಂಪನಿಯು ಫ್ರೆಂಚ್ ದಿನಸಿ ಬ್ರ್ಯಾಂಡ್ನಲ್ಲಿ ಹೂಡಿಕೆ ಮಾಡಲು ಬಯಸಬಹುದು.


  1. ಕಾಂಗ್ಲೋಮರೇಟ್ FDI

ಸಂಪೂರ್ಣವಾಗಿ ವಿವಿಧ ಉದ್ಯಮಗಳ ಎರಡು ವಿವಿಧ ಕಂಪನಿಗಳಲ್ಲಿ ಹೂಡಿಕೆಗಳನ್ನು ಮಾಡಿದಾಗ, ಟ್ರಾನ್ಸಾಕ್ಷನನ್ನು ಕಾಂಗ್ಲೋಮರೇಟ್ FDI ಎಂದು ಕರೆಯಲಾಗುತ್ತದೆ. ಅಂತಹ ರೀತಿಯಲ್ಲಿ, FDI ಅನ್ನು ನೇರವಾಗಿ ಹೂಡಿಕೆದಾರರ ವ್ಯವಹಾರಕ್ಕೆ ಲಿಂಕ್ ಮಾಡಲಾಗಿಲ್ಲ. ಉದಾಹರಣೆಗೆ, ಯುಎಸ್(US) ರಿಟೇಲರ್ ವಾಲ್ಮಾರ್ಟ್ ಭಾರತೀಯ ಆಟೋಮೊಬೈಲ್ ಉತ್ಪಾದಕರಾದ ಟಾಟಾ ಮೋಟಾರ್ಸ್ ರಲ್ಲಿ ಹೂಡಿಕೆ ಮಾಡಬಹುದು.


  1. ಪ್ಲಾಟ್ಫಾರ್ಮ್ FDI

ವಿದೇಶಿ ನೇರ ಹೂಡಿಕೆಯ ಕೊನೆಯ ವಿಧವೆಂದರೆ ಪ್ಲಾಟ್‌ಫಾರ್ಮ್ FDI ಆಗಿದೆ. ಪ್ಲಾಟ್‌ಫಾರ್ಮ್ ಎಫ್‌ಡಿಐ(FDI) ಸಂದರ್ಭದಲ್ಲಿ, ಒಂದು ವ್ಯಾಪಾರವು ವಿದೇಶಕ್ಕೆ ವಿಸ್ತರಿಸುತ್ತದೆ, ಆದರೆ ಉತ್ಪಾದಿಸಲಾದ ಉತ್ಪನ್ನಗಳನ್ನು ಇನ್ನೊಂದು, ಮೂರನೇ ದೇಶಕ್ಕೆ ರಫ್ತು ಮಾಡಲಾಗುತ್ತದೆ. ಉದಾಹರಣೆಗೆ, ಫ್ರೆಂಚ್ ಪರ್ಫ್ಯೂಮ್ ಬ್ರ್ಯಾಂಡ್ ಚಾನೆಲ್ ಯುಎಸ್ಎ(USA)ಯಲ್ಲಿ ಉತ್ಪಾದನಾ ಘಟಕವನ್ನು ಸ್ಥಾಪಿಸಿತು ಮತ್ತು ಅಮೆರಿಕಾ, ಏಷ್ಯಾ ಮತ್ತು ಯುರೋಪಿನ ಇತರ ಭಾಗಗಳಲ್ಲಿನ ಇತರ ದೇಶಗಳಿಗೆ ರಫ್ತು ಉತ್ಪನ್ನಗಳನ್ನು ಸ್ಥಾಪಿಸಿದೆ.

ನೀವು FDI ಮೂಲಕ ಹೂಡಿಕೆ ಮಾಡಲು ಬಯಸಿದರೆ, ಉದಾಹರಣೆಗಳೊಂದಿಗೆ ವಿವಿಧ ರೀತಿಯ FDI ಬಗ್ಗೆ ತಿಳಿದುಕೊಳ್ಳಬೇಕು. FDI ಯೊಂದಿಗೆ, ಹೂಡಿಕೆ ಮಾಡಿದ ಹಣವನ್ನು ವಿದೇಶದಲ್ಲಿ ಹೊಸ ಬಿಸಿನೆಸ್ ಅನ್ನು ಪ್ರಾರಂಭಿಸಲು ಅಥವಾ ಈಗಾಗಲೇ ಅಸ್ತಿತ್ವದಲ್ಲಿರುವ ಬಿಸಿನೆಸ್ನಲ್ಲಿ ಹೂಡಿಕೆ ಮಾಡಲು ಬಳಸಬಹುದು. FDI ಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ಏಂಜಲ್ ಒನ್ ಸಲಹೆಗಾರರನ್ನು ಕನ್ಸಲ್ಟ್ ಮಾಡಿ.

Open Free Demat Account!
Join our 3 Cr+ happy customers