What is FINNIFTY? – Nifty Financial Services Index | Kannada

Podcast Duration: 07:36

ಹಾಯ್ ಸ್ನೇಹಿತರೇ! ಏಂಜಲ್ ಬ್ರೋಕಿಂಗ್‍ನ ಈ ಪಾಡ್‍ಕಾಸ್ಟ್‍ಗೆ ನಿಮಗೆ ಸ್ವಾಗತ! ​ಸ್ನೇಹಿತರೇ, ನೀವ್ ನಿಮ್ಮ ಸ್ಟ್ರೀಮಿಂಗ್ ಪ್ಲಾಟ್‍ಫಾರ್ಮ್‍ನಲ್ಲಿ ಮ್ಯೂಸಿಕ್ ಸೆಲೆಕ್ಟ್ ಮಾಡ್ತಿರೋವಾಗ, ಆಗ ನಿಮಗೆ ಪ್ರಾಬಬ್ಲಿ “ಮೋಸ್ಟ್ ಪಾಪ್ಯುಲರ್ ಹಿಟ್ಸ್” ಅಥ್ವಾ “ಟ್ರೆಂಡಿಂಗ್ ಟ್ರ್ಯಾಕ್ಸ್”ನ ರೆಡಿಮೇಡ್ ಲಿಸ್ಟ್ ಸಿಗತ್ತೆ. ಇವೆಲ್ಲಾ ಗ್ಲೋಬಲ್ಲಿ ಅಥ್ವಾ ಇಂಡಿಯಾದಲ್ಲಿ ಮೋಸ್ಟ್ ಪಾಪ್ಯುಲರ್ ಆದ ಹಾಡುಗಳು. ಆದ್ರೇ ನೀವು ನಿಮ್ಮ ಫಿಲ್ಟರ್‍ನ ಸ್ವಲ್ಪ ಮಾಡಿಫೈ ಕೂಡ ಮಾಡ್ಬೋದು. ನೀವು “ಮೋಸ್ಟ್ ಪಾಪ್ಯುಲರ್ ಬಾಲಿವುಡ್ (/ಸ್ಯಾಂಡಲ್‍ವುಡ್) ಸಾಂಗ್ ರಿಲೀಸಸ್” ಅಥ್ವಾ “ಮೋಸ್ಟ್ ಪಾಪ್ಯುಲರ್ ಹಿಪ್ ಹಾಪ್ ಟ್ರ್ಯಾಕ್ಸ್” ಅಂತ ಕೂಡ ಸರ್ಚ್ ಮಾಡ್ಬೋದು. ಆಗ ನಿಮಗೆ ಈ ಸ್ಪೆಸಿಫಿಕ್ ಜೆನರ್ ಆಫ್ ಮ್ಯೂಸಿಕ್‍ನ ಮೋಸ್ಟ್ ಪಾಪ್ಯುಲರ್ ಹಾಡ್‍ಗಳ್ ಕಾಣ್ಸತ್ತೆ, ಅಲ್ವಾ? ​ಹೊಸದಾಗಿ ಅನೌನ್ಸ್ ಮಾಡಿರೋ ಫಿನ್ನಿಫ್ಟಿ ಅನ್ನೋದು ಮಾಡಿಫೈಡ್ ಸರ್ಚ್ ಫಿಲ್ಟರ್ ತರ. ಫಿನ್ನಿಫ್ಟಿಯನ್ನ ಅರ್ಥ ಮಾಡ್ಕೋಳೋಕೂ ಮೊದ್ಲು ನೀವು ನಿಫ್ಟಿ 50 ಅನ್ನ ಅರ್ಥ ಮಾಡ್ಕೋಳೋದು ಬಹಳ ಮುಖ್ಯ. ನೀವ್ ಈಗಾಗಲೇ ನಿಫ್ಟಿ 50ಯ ಕಾನ್ಸೆಪ್ಟ್ ಅನ್ನ ಅರ್ಥ ಮಾಡ್ಕೊಂಡಿರ್‍ಬಹುದು, ಆದ್ರೇ ವೀ ಆರ್ ಆನ್ ದ ಸೇಮ್ ಪೇಜ್ ಅನ್ನೋದ್ನ ಚೆಕ್ ಮಾಡ್ಕೊಳೋಣ್ವಾ : ನಿಫ್ಟಿ 50 ಅನ್ನೋದು ಒಂದು ಸೂಚ್ಯಂಕ (ಇಂಡೆಕ್ಸ್), ಅಥ್ವಾ ದೇಶದಲ್ಲಿರೋ ದೊಡ್ಡ ಕಂಪೆನಿಗಳ 50 ಸ್ಟಾಕ್‍ಗಳ ಕಲೆಕ್ಷನ್. ಹೇಗೆ ದೊಡ್ಡದು? ಇದ್ರ ಫಾರ್ಮುಲಾದಿಂದ ಮಾರ್ಕೆಟ್‍ನ ಶೇರ್‍ಗಳ ನಂಬರ್‍ಗಳಿಂದ ಸ್ಟಾಕ್ ಪ್ರೈಸ್ ಮಲ್ಪಿಪೈ ಆಗತ್ತೆ. ಈ 50 ಸ್ಟಾಕ್‍ಗಳು ಬೇರೆ ಬೇರೆ ಸೆಕ್ಟರ್‍ಗಳಿಂದ ಇವೆ – ಇದು ಕಂಪಲ್‍ಸರಿಯಾಗಿ ಒಂದು ಡಿವೆರ್‍ಸಿಫೈಡ್ ಲಿಸ್ಟ್. ಈ ಲಿಸ್ಟ್ ಪ್ರತಿ 6 ತಿಂಗಳಿಗೂ ಅಪ್‍ಡೆಟ್ ಆಗ್ತಿರತ್ತೆ. ​ನಾವೀಗ ಫಿನ್ನಿಫ್ಟಿಯನ್ನ ಡಿಫೈನ್ ಮಾಡೋಕ್ ರೆಡಿ ಇದೀವಿ. ​ಫಿನ್ನಿಫ್ಟಿಯನ್ನ ನಿಫ್ಟಿ ಫೈನಾನ್ಷಿಯಲ್ ಸರ್ವಿಸಸ್ ಇಂಡೆಕ್ಸ್ ಅಥ್ವಾ ಜಸ್ಟ್ ನಿಫ್ಟಿ ಫೈನಾನ್ಷಿಯಲ್ ಸರ್ವಿಸಸ್ ಅಂತ ಕೂಡ ಕರೆಯಲಾಗುತ್ತೆ, ಇದು ನಿಫ್ಟಿ 50 ತರಾನೇ ಆದ್ರೇ ಫೈನಾನ್ಷಿಯಲ್ ಇನ್ಸ್ಟಿಟ್ಯೂಷನ್‍ಗಳ ಸ್ಟಾಕ್‍ಗಳ ಮೇಲೆ ಮಾತ್ರ ಸ್ಪೆಸಿಫಿಕ್ ಆಗಿ ಫೋಕಸ್ ಮಾಡತ್ತೆ. ನೀವು ಮೋಸ್ಟ್ ಪಾಪ್ಯುಲರ್ ಟ್ರ್ಯಾಕ್‍ಗಳನ್ನ ಸ್ಪೆಸಿಫಿಕ್ ಆಗಿ ಹುಡುಕೋಕೆ ಮಾಡಿಫೈ ಮಾಡೋ ಫಿಲ್ಟರ್ ಹಾಗೇನೇ, ನ್ಯಾಷನಲ್ ಸ್ಟಾಕ್ ಎಕ್ಸ್‍ಚೇಂಜ್ ಈ ವರ್ಷದ ಜನವರಿಯಲ್ಲಿ ಫಿನ್ನಿಫ್ಟಿಯನ್ನ ಇಂಟ್ರಡ್ಯೂಸ್ ಮಾಡ್ತು. ಇದು ಬ್ಯಾಂಕ್‍ಗಳ, ಇನ್ಷ್ಯೂರೆನ್ಸ್ ಕಂಪೆನಿಗಳ, ಎನ್.ಬಿ.ಎಫ್.ಸಿ.ಗಳ, ಗೃಹ ಸಾಲ ಕಂಪೆನಿಗಳ ಮತ್ತಿ ಇನ್ನಿತರೇ ಫೈನಾನ್ಷಿಯಲ್ ಇನ್ಸ್ಟಿಟ್ಯೂಟ್‍ಗಳು ಅಥ್ವಾ ಹಣಕಾಸು ಸೇವಾ ಕಂಪೆನಿಗಳ 20 ಸ್ಟಾಕ್‍ಗಳ ಕಲೆಕ್ಷನ್ ಆಗಿದೆ. ನಿಫ್ಟಿ 50ಯ ಹಾಗೇನೇ, ಈ ಸ್ಟಾಕ್‍ಗಳೂ ಕೂಡ ಅವುಗಳ ಫ್ರೀ ಫ್ಲೋಟ್ ಮಾರ್ಕೆಟ್ ಕ್ಯಾಪಿಟಲೈಸೇಷನ್ ಆಧಾರದಲ್ಲಿ ಈ ಸ್ಟಾಕ್‍ಗಳನ್ನ ಸೆಲೆಕ್ಟ್ ಮಾಡಲಾಗುತ್ತೆ. ಅದು ಕರೆಕ್ಟಾ ಅನ್ನೋದು ನಿಮಗ್ ಈಗಾಗ್ಲೇ ಗೊತ್ತಿದ್ಯಾ? ಇದು ಮಾರ್ಕೆಟ್‍ನಲ್ಲಿರೋ ಶೇರ್‍ಗಳು, ಔಟ್‍ಸ್ಟ್ಯಾಂಡಿಗ್ ಶೇರ್‍ಗಳಿಂದ ಗುಣಿಸಿದಾಗ ಸಿಗೋ ಕರೆಕ್ಟ್ ಸ್ಟಾಕ್ ಪ್ರೈಸ್ ಅದು. ​ನಿಫ್ಟಿ 50ರ ಹಾಗೇನೇ, ಫಿನ್ನಿಫ್ಟಿಯಲ್ಲಿ ಲಿಸ್ಟ್ ಆಗಿರೋ ಸ್ಟಾಕ್‍ಗಳು ಪ್ರತಿ ಆರು ತಿಂಗಳಿಗೂ ಅಪ್‍ಡೇಟ್ ಆಗ್ತಿರುತ್ತೆ. ​ಈಗ ರಸವತ್ತಾದ ಸೆಕ್ಷನ್ - ಫಿನ್ನಿಫ್ಟಿಯಲ್ಲಿ ಲಿಸ್ಟ್ ಮಾಡಿರೋ ಸ್ಟಾಕ್‍ಗಳು ಯಾವ್ದು? ​• ಎಚ್.ಡಿ.ಎಫ್.ಸಿ. ಬ್ಯಾಂಕ್ ​• ಎಚ್.ಡಿ.ಎಫ್.ಸಿ. ಹೌಸಿಂಗ್ ಫೈನಾನ್ಸ್ ​• ಐ.ಸಿ.ಐ.ಸಿ.ಐ. ಬ್ಯಾಂಕ್ ​• ಕೊಟ್ಯಾಕ್ ಬ್ಯಾಂಕ್ ​• ಎಕ್ಸಿಸ್ ಬ್ಯಾಂಕ್ ​• ಬಜಾಜ್ ಫೈನಾನ್ಸ್ ​• ಎಸ್.ಬಿ.ಐ. ಬ್ಯಾಂಕ್ ​ ​ವಾವ್… ಕ್ಲಿಯರ್ ಆಗಿ ಈ ಲಿಸ್ಟಲ್ಲಿ ಇನ್ನೂ ಸಾಕಷ್ಟು ಬ್ಯಾಂಕ್‍ಗಳಿವೆ! ನಾವು ಮುಂದುವರ್ಸಿದ್ರೇ ​• ಎಚ್.ಡಿ.ಎಫ್.ಸಿ. ಇನ್ಷ್ಯೂರೆನ್ಸ್ ​• ಎಸ್.ಬಿ.ಐ. ಲೈಫ್ ಇನ್ಷ್ಯೂರೆನ್ಸ್ ​• ಐ.ಸಿ.ಐ.ಸಿ.ಐ ಲೋಂಬಾರ್ಡ್ ಜನರಲ್ ಇನ್ಷ್ಯೂರೆನ್ಸ್ ​…ಸೋ ಇನ್ಷ್ಯೂರೆನ್ ಕಂಪೆನಿಗಳು ಕೂಡ ಇರ್ಬಹುದಾ? ​• ಶ್ರೀರಾಮ್ ಟ್ರಾನ್ಸ್‍ಪೋರ್ಟ್ ಫೈನಾನ್ಸ್ ​• ಐ.ಸಿ.ಐ.ಸಿ.ಐ ಪ್ರುಡೆನ್ಷಿಯಲ್ ಲೈಫ್ ಇನ್ಷ್ಯೂರೆನ್ಸ್ ​• ಪಿರಮಾಳ್ ಕ್ಯಾಪಿಟಲ್ ಅಂಡ್ ಹೌಸಿಂಗ್ ಫೈನಾನ್ಸ್ ​• ಬಜಾಜ್ ಹೋಲ್ಡಿಂಗ್ಸ್ ಅಂಡ್ ಇನ್ವೆಸ್ಟ್‍ಮೆಂಟ್ಸ್ ​• ಚೋಳಮಂಡಳಮ್ ಇನ್ವೆಸ್ಟ್‍ಮೆಂಟ್ ಅಂಡ್ ಫೈನಾನ್ಸ್ ​• ಎಚ್.ಡಿ.ಎಫ್.ಸಿ ಅಸ್ಸೆಟ್ ಮ್ಯಾನೆಜ್‍ಮೆಂಟ್ ಕಂಪೆನಿ ​• ಪವರ್ ಫೈನಾನ್ಸ್ ಕಾರ್ಪೋರೇಷನ್ ​• ಆರ್.ಇ.ಸಿ. ಲಿಮಿಟೆಡ್ – ಇವರು ಪವರ್ ಸೆಕ್ಟರ್‍ಗೆ ಸಂಬಂಧಿಸಿದ ಫೈನಾನ್ಸ್ ಕಂಪೆನಿ ​• ಮಹಿಂದ್ರಾ ಅಂಡ್ ಮಹಿಂದ್ರಾ ಫೈನಾನ್ಷಿಯಲ್ ​ ​ಈ ಲಿಸ್ಟ್‍ನ ಕೇಳಿದ್ ಮೇಲೆ, ನೀವು ಫಿನ್ನಿಫ್ಟಿ ಇಂಡೆಕ್ಸ್‍ನ ಮೇಲೆ 60%ಕ್ಕೂ ಹೆಚ್ಚಾಗಿ ಬ್ಯಾಂಕ್‍ಗಳು ಅಧಿಕವಾಗಿ ಪ್ರೆಸೆಂಟಿವೆ ಅನ್ನೋದನ್ನ ಗೆಸ್ ಮಾಡಿರ್ಬಹುದು. ಅವುಗಳ ನಡುವೆ ಹೌಸಿಂಗ್ ಫೈನಾನ್ಸ್ ಕಂಪೆನಿಗಳು ಆಲ್‍ಮೋಸ್ಟ್ 20% ಪ್ರೆಸೆಂಟಿವೆ, ಎನ್.ಬಿ.ಎಫ್.ಸಿ.ಗಳು ಸುಮಾರು 10% ಮತ್ತು ಉಳಿದ ಎಲ್ಲವೂ 2%ರಷ್ಟು ಇವೆ. ​ನೀವು ನಿಫ್ಟಿ ಫೈನಾನ್ಷಿಯಲ್ ಸರ್ವೀಸ್‍ಗಳನ್ನ ಹೇಗೆ ಯೂಸ್ ಮಾಡ್ಬಹದು? ​ನಿಫ್ಟಿ 50 ಮತ್ತು ಬಿ.ಎಸ್.ಇ. ಸೆನ್ಸೆಕ್ಸ್‍ನ್ನ ಬಳಸೋ ಹಾಗೇನೆ ಬಳಸ್ಬಹುದು. ​ಆಪ್ಷನ್ 1 : ಬೆಂಚ್‍ಮಾರ್ಕಿಂಗ್‍ಗಾಗಿ ಫಿನ್ನಿಫ್ಟಿಯನ್ನ ಬಳಸಿ ​ಈ ಸೂಚ್ಯಂಕಗಳನ್ನ ಬೆಂಚ್‍ಮಾರ್ಕ್‍ಗಳಾಗಿ ಪಾಪ್ಯುಲರ್ ಆಗಿ ಬಳಸ್ಲಾಗುತ್ತೆ. ಸ್ಟಾಕ್‍ಗಳ ಪರ್ಫಾರ್ಮೆನ್ಸ್‍ನ ಸಾಮಾನ್ಯವಾಗಿ ನಿಫ್ಟಿ 50 ಅಥ್ವಾ ಬಿ.ಎಸ್.ಇ. ಸೆನ್ಸೆಕ್ಸ್ ಜೊತೆಗೆ ಕಂಪೇರ್ ಮಾಡಲಾಗುತ್ತೆ. ಈಗ ಇನ್ವೆಸ್ಟರ್‍ಗಳು ತಮ್ಮ ಫೈನಾನ್ಸ್ ಸೆಕ್ಟರ್ ಸ್ಟಾಕ್‍ಗಳನ್ನ ಈ ಫೋಕಸಡ್ ಬೆಂಚ್‍ಮಾರ್ಕ್‍ಗಳ ಜೊತೆಗೆ ಈ ಹೊಸ ನಿಫ್ಟಿ ಫೈನಾನ್ಷಿಯಲ್ ಸರ್ವಿಸಸ್ ಇಂಡೆಕ್ಸ್‍ನ್ನ ಬಳಸಿ ಕಂಪೇರ್ ಮಾಡ್ತಾರೆ. ​ಆಪ್ಷನ್ 2 : ಶಾಪಿಂಗ್ ಲಿಸ್ಟ್‍ನ ಹಾಗೆ ಫಿನ್ನಿಫ್ಟಿಯನ್ನ ಬಳಸಿ ​ಆಲ್ಟರ್‍ನೇಟಿವ್ ಆಗಿ, ಕೆಲವು ಅನುಭವಿ ಇನ್ವೆಸ್ಟರ್‍ಗಳು ಇಂಡೆಕ್ಸ್‍ನಲ್ಲಿ ಡಿಸ್ಪ್ಲೇ ಆಗೋ ಸೇಮ್ ವೇಟೇಜ್‍ನಲ್ಲೇ ಇಂಡೆಕ್ಸ್‍ನ ಎಲ್ಲ 50 ಸ್ಟಾಕ್‍ಗಳನ್ನ ಬಯ್ ಮಾಡೋಕೆ ಇಷ್ಟ ಪಡ್ತಾರೆ. ಈಗ ನಾವು ಹಿಂದೆ ಡಿಸ್ಕಸ್ ಮಾಡಿದ ಲಿಸ್ಟ್ನಲ್ಲಿನ ಮೊದಲ ಫೈನಾನ್ಷಿಯಲ್ ಕಂಪೆನಿಯ ಅಂದ್ರೇ ಎಚ್.ಡಿ.ಎಫ್.ಸಿ. ಬ್ಯಾಂಕಿನ ವೇಟೇಜ್ 27.13%, ಮತ್ತೊಂದ್ ಕಂಪೆನಿ, ಎಚ್.ಡಿ.ಎಫ್.ಸಿ. ಹೌಸಿಂಗ್ ಫೈನಾನ್ಸ್‍ನ ವೇಟೇಜ್ 17.51%.. ಆ್ಯಂಡ್ ಸೋ ಆನ್.. ನೀವು ಲಿಸ್ಟ್‍ನಿಂದ ಕೆಳಗೆ ಹೋದಷ್ಟು ವೇಟೇಜ್ ಕಡ್ಮೆ ಆಗ್ತಾ ಹೋಗುತ್ತೆ. ನಿಫ್ಟಿ ಫೈನಾನ್ಷಿಯಲ್ ಸರ್ವಿಸಸ್ ಲಿಸ್ಟ್‍ನ ಕೊನೆಯ ಕಂಪೆನಿ ಮಹಿಂದ್ರಾ ಅಂಡ್ ಮಹಿಂದ್ರಾ ಫೈನಾನ್ಷಿಯಲ್‍ನ ವೇಟೇಜ್ 0.44% ಆಗಿದೆ. ​ಆಪ್ಷನ್ 3 : ಫಿನ್ನಿಫ್ಟಿಯನ್ನ ಬಳಸಿ ಮ್ಯೂಚ್ಯುಯಲ್ ಫಂಡ್‍ಗಳ ಮೇಲೆ ಸವಾರಿ ಮಾಡಿ. ​ಮೂರನೆಯ ಆಪ್ಷನ್ ಅಂದ್ರೇ, ಇಂಡೆಕ್ಸ್‍ನಲ್ಲಿನ ಸ್ಟಾಕ್‍ಗಳ ಟ್ರ್ಯಾಕ್ ಮಾಡಿ, ಮ್ಯೂಚ್ಯುಯಲ್ ಫಂಡ್‍ಗಳಲ್ಲಿ ಇನ್‍ವೆಸ್ಟ್ ಮಾಡೋದು. ಇದಕ್ಕೆ ಒಂದಷ್ಟು ಉದಾಹರಣೆಗಳನ್ನ ಕೊಡೋದಾದ್ರೇ ಡಿ.ಎಸ್.ಪಿ. ನಿಫ್ಟಿ 50 ಇಂಡೆಕ್ಸ್ ಫಂಡ್, ಎಲ್&ಟಿ ನಿಫ್ಟಿ 50 ಇಂಡೆಕ್ಸ್ ಫಂಡ್ ಮತ್ತು ಮೋತಿಲಾಲ್ ಓಸ್ವಾಲ್ ನಿಫ್ಟಿ 50 ಇಂಡೆಕ್ಸ್ ಫಂಡ್. ಇನ್ನೂ ಸುಮಾರು ಆಪ್ಷನ್ಸ್ ಇವೆ - ನಾನ್ ನಿಮಗ್ ಹೇಳಿದ್ದು ಕೆಲವೇ ಹೆಸರುಗಳಷ್ಟೇ. ​4ನೇ ಆಪ್ಷನ್ : ಎಕ್ಸ್‍ಚೇಂಜ್ ಟ್ರೇಡೆಡ್ ಫಂಡ್ ಅನ್ನ ಬಯ್ ಮಾಡೋಕೆ ಹಾಯ್ ಅನ್ನಿ ​ಇದನ್ನ ಇ.ಟಿ.ಎಫ್. ಎನ್ನಲಾಗುತ್ತದೆ – ಇದು ಸ್ಟಾಕ್‍ಗಳನ್ನ ಟ್ರ್ಯಾಕ್ ಮಾಡುತ್ತೆ ಮತ್ತು ಫಂಡ್‍ನ ಪರ್‍ಫಾರ್ಮೆನ್ಸ್ ಮೇಲೆ ಟಿಪಿಕಲ್ ಆಗಿ ರಿಫ್ಲೆಕ್ಟ್ ಮಾಡುತ್ತೆ. ​ ​ಹೈ ಡೆರಿವೇಟಿವ್ಸ್, ಇದನ್ನ ಎಫ್&ಒ ನಹಿ ತೋ (/ಅಥ್ವಾ) ಫ್ಯೂಚರ್ಸ್ ಅಂಡ್ ಆಪ್ಷನ್ಸ್ ಅಂತಾನೂ ಕರೆಯಲಾಗುತ್ತೆ. ​ಇದರರ್ಥ ಫಿನ್ನಿಫ್ಟಿಯ ಭಾಗವಾಗಿರುವ ಸ್ಟಾಕ್‍ಗಳಿಗೆ ನೀವು ಫ್ಯೂಚರ್ ಕಾಂಟ್ರ್ಯಾಕ್ಟ್ಸ್ ನಹಿ ತೋ (ಇಲ್ಲಾ ಅಂದ್ರೇ) ಆಪ್ಷನ್ ಕಾಂಟ್ರ್ಯಾಕ್ಟ್‍ಗಳನ್ನ ಬಯ್ ಮಾಡ್ಬಹುದು. ಈ ಕಾಂಟ್ರ್ಯಾಕ್ಟ್‍ಗಳು ಪ್ರೈಸ್ ಮತ್ತು ಎಕ್ಸ್ಪೈರಿ ಡೇಟ್ ಅನ್ನು ಹೊಂದಿರುತ್ತೆ. ಎಫ್.& ಓ ಬಗ್ಗೆಇನ್ನಷ್ಟು ತಿಳ್ಕೋಳೋದಕ್ಕೆ ಅಥ್ವಾ ಕಾನ್ಸೆಪ್ಟ್‍ನ ಅರ್ಥ ಮಾಡ್ಕೋಳೋದಕ್ಕೆ ಫ್ಯೂಚರ್ಸ್ ಮತ್ತು ಆಪ್ಷನ್ ಟ್ರೇಡಿಂಗ್ ಅಂತ ಟೈಟಲ್ ಇರೋ ನಮ್ಮ ಪಾಡಕಾಸ್‍ನ ಚೆಕ್ ಮಾಡಿ. ​ನೀವೇನಾದ್ರೂ “ನಿಫ್ಟಿ 50ರಲ್ಲಿರೋ ಸ್ಟಾಕ್ ಜೊತೆಗೆ ಫಿನ್ನಿಫ್ಟಿಯ ಸ್ಟಾಕ್‍ಗಳನ್ನ ಹೇಗೆ ಕಂಪೇರ್ ಮಾಡೋದು?” ಅಂತ ಪ್ರಶ್ನೆ ಕೇಳ್ತಿದ್ರೇ, ನೀವು ಸರ್ಯಾದ್ ಪ್ರಶ್ನೆನೇ ಕೇಳ್ತಿದೀರಾ. ಈ ಕುತೂಹಲ ಮತ್ತೆ ಕಾಷಿಯಸ್ ಆ್ಯಟಿಟ್ಯೂಡ್ ನಿಮ್ಮ ಇನ್ವೆಸ್ಟ್‍ಮೆಂಟ್ ಜರ್ನಿಯಲ್ಲಿ ಖಂಡಿತವಾಗ್ಲೂ ಕೆಲ್ಸಕ್ ಬರತ್ತೆ. ​ಬನ್ನಿ ಕಂಪೇರ್ ಮಾಡೋಣ : ​• ಫಿನ್ನಿಫ್ಟಿಯಲ್ಲಿ ಲಿಸ್ಟ್ ಮಾಡಿರೋ 10 ಸ್ಟಾಕ್‍ಗಳನ್ನ, ನಿಫ್ಟಿ 50ರಲ್ಲೂ ಲಿಸ್ಟ್ ಮಾಡಲಾಗಿವೆ. ​• ಫಿನ್ನಿಫ್ಟಿಯಲ್ಲಿ ಸುಮಾರು 93%ರಷ್ಟು ವೇಟೇಜ್ ಅನ್ನ ಈ 10 ಸ್ಟಾಕ್‍ಗಳು ಕಲೆಕ್ಟಿವ್ ಆಗಿ ಕ್ಯಾರಿ ಮಾಡುತ್ತೆ. ಮತ್ತು ಇವುಗಳಿಗೆ ನಿಫ್ಟಿ 50ರಲ್ಲಿ 40%ಕ್ಕಿಂತ ಕಡಿಮೆ ವೇಟೇಜ್ ಇದೆ. ​• ಬ್ಯಾಂಕ್‍ಗಳು ಮತ್ತು ಫೈನಾನ್ಷಿಯಲ್ ಇನ್ಸ್ಟಿಟ್ಯೂಟ್‍ಗಳಲ್ಲಿ ಫೋಕಸ್ ಮಾಡಿರೋದ್ರಿಂದ, ಫಿನ್ನಿಫ್ಟಿಯಲ್ಲಿ ಹೈಯರ್ ವೋಲಟಿಲಿಟಿಯನ್ನ ಎಕ್ಸ್ಪೆಕ್ಟ್ ಮಾಡಬಹುದು ​• ನಿಫ್ಟಿ 50ರ 0.61 ರ ರಿಸ್ಕ್ ರಿವಾರ್ಡ್ ರೇಷಿಯೋಗೆ ಹೋಲಿಸಿದಾಗ ಫಿನ್ನಿಫ್ಟಿಯದು 0.64ರಷ್ಟಿದೆ. ​ ​ಫಿನ್ನಿಫ್ಟಿಗಾಗಿ ಮಾರ್ಕೆಟ್‍ನಲ್ಲಿ ಯಾವ ರಿಯಾಕ್ಷನ್ ಇದೆ ಅನ್ನೋದನ್ನ ಈಗ ನೋಡೋಣ್ವಾ? ​ಬೇಸ್ ಡೇಯಲ್ಲಿ ಫಿನ್ನಿಫ್ಟಿ, ಸುಮಾರು 140 ಪಾಯಿಂಟ್‍ಗಳಷ್ಟು ಏರಿತು. ಇವತ್ತಿಗೆ ಸುಮರು 15,000ರ ಮೇಲೆ ಟ್ರೇಡಿಂಗ್ ನಡೀತಿದೆ. ಈ ರಿಯಾಕ್ಷನ್ ಅನ್ನ ನೀವು ಪಾಸಿಟಿವ್ ಅಂತ ಹೇಳ್ಬಹುದು. – ಯಾಕಂದ್ರೇ ಮುಖ್ಯವಾಗಿ ಅಪ್‍ವರ್ಡ್ ಮೂವ್‍ಮೆಂಟ್ ಕಾಣಿಸ್ತಿರೋದು ನಿಜಕ್ಕೂ ಒಳ್ಳೆ ವಿಷ್ಯ. ​ಇಂಡಸ್ಟ್ರೀ ಸ್ಟೇಕ್‍ಹೋಲ್ಡರ್ಸ್‍ಗಳಿಂದಲೂ ಸಾಕಷ್ಟು ಎಕ್ಸೈಟ್‍ಮೆಂಟ್ ಆಗಿ ಕಾಣಿಸ್ತಾ ಇದೆ : ಸಾಕಷ್ಟು ಸ್ಟಾಕ್ ಬ್ರೋಕರ್ಸ್ ಲಾಂಚ್ ಮಂತ್‍ಗಾಗಿ ಫಿನ್ನಿಫ್ಟಿ ಇಂಡೆಕ್ಸ್ ಮೇಲಿದ್ದ ಬ್ರೋಕರೇಜ್ ಚಾರ್ಜ್‍ಗಳನ್ನ ವೇವ್ ಆಫ್ ಮಾಡಿದ್ದಾರೆ. ​ ​ಎನ್.ಎಸ್.ಇ. ಕೂಡ ಈ ವರ್ಷದ ಜೂನ್ ತನಕ ಟ್ರ್ಯಾನ್ಸಾಕ್ಷನ್ ಚಾರ್ಜ್‍ಗಳನ್ನ ವೇವ್ ಮಾಡಿದೆ. ​ ​ಸ್ನೇಹಿತರೇ, ಇವತ್ತಿನ ಪಾಡ್‍ಕಾಸ್ಟ್‍ನಲ್ಲಿ ಇರೋ ವಿಷ್ಯ ಇಷ್ಟು. ನಾನಿನ್ನ ಒಂದಷ್ಟು ಸ್ಟಾಕ್ ಮಾರ್ಕೆಟ್ ನ್ಯೂಸ್‍ನ ನೋಡೋಕಂತ ಹೊರಡ್ತೀನಿ. ನೆಕ್ಸ್ಟ್ ಪಾಡ್‍ಕಾಸ್ಟ್‍ನಲ್ಲಿ ಮತ್ತೆ ಸಿಗೋಣ. ಅಲ್ಲಿ ತನಕ, ಅಲ್ಲಿ ತನ್ಕ ಏಂಜೆಲ್ ಬ್ರೋಕಿಂಗ್ ಕಡೆಯಿಂದ ಶುಭವಿದಾಯ ಮತ್ತು ಹ್ಯಾಪಿ ಇನ್ವೆಸ್ಟಿಂಗ್! ​ ​ ​ಹೂಡಿಕೆಗಳು ಮತ್ತು ಭದ್ರತಾ ಮಾರುಕಟ್ಟೆಗಳು ಮಾರುಕಟ್ಟೆಯ ಅಪಾಯಗಳಿಗೆ ಒಳಪಟ್ಟಿರುತ್ತವೆ. ಹೂಡಿಕೆಗೂ ಮುನ್ನ ಎಲ್ಲ ಸಂಬಂಧಿತ ದಾಖಲಾತಿಗಳನ್ನು ಎಚ್ಚರಿಕೆಯಿಂದ ಓದಿ. ​ ​