How to retire in your 30s

Podcast Duration: 12:43
ನಿಮ್ಮ 30 ನೇ ವಯಸ್ಸಿನಲ್ಲಿ ನಿವೃತ್ತರಾಗುವುದು ಹೇಗೆ? ನಮಸ್ಕಾರ ಸ್ನೇಹಿತರೇ, ಏಂಜೆಲ್‌ ಒನ್ ನ ಈ ಹಣಕಾಸು ಯೋಜನೆಯ ವಿಶೇಷ ಪಾಡ್‌ಕಾಸ್ಟ್‌ಗೆ ಸ್ವಾಗತ. ಸ್ನೇಹಿತರೇ, ನಮ್ಮ 30 ನೇ ವಯಸ್ಸಿನಲ್ಲಿ ಯಾರು ನಿವೃತ್ತಿ ಹೊಂದಲು ಬಯಸುವುದಿಲ್ಲ? ತಂಪಾದ ತಂಗಾಳಿಯಲ್ಲಿ ತಣ್ಣಗಿರುವ ಗೋವಾ ಕಡಲತೀರದಲ್ಲಿ ಸೂರ್ಯಾಸ್ತವನ್ನು ವೀಕ್ಷಿಸಲು ಯಾರು ಬಯಸುವುದಿಲ್ಲ? ಆದರೆ ............ ಆದರೆ........... ಇದಕ್ಕೆ ಕಠಿಣ ಪರಿಶ್ರಮ ಮತ್ತು ಬುದ್ಧಿವಂತಿಕೆ ಎರಡೂ ಬೇಕು. ನಿಮ್ಮ 20 ರ ಹರೆಯದಲ್ಲಿ ಕಚೇರಿಯಲ್ಲಿ ಕೆಲಸ ಮಾಡಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ ಮತ್ತು ಈಗ ನೀವು ಹೂಡಿಕೆಗಳಲ್ಲಿ ಕೂಡ ಚುರುಕಾಗಿರುವುದು ಮುಖ್ಯವಾಗಿದೆ. ಇದರಿಂದ ನೀವು 5-7 ವರ್ಷಗಳಲ್ಲಿ ಉತ್ತಮ ಲಾಭವನ್ನು ಗಳಿಸ ಬಹುದು. ಇದನ್ನ ಹೇಗೆ ಮಾಡುವುದು? ಬನ್ನಿ ,ಇನ್ನು ತಡಮಾಡದೆ ಅದರ ಕುರಿತು ನೋಡೋಣ . ಸ್ನೇಹಿತರೆ, ನೀವು ನೆನಪಿಟ್ಟುಕೊಳ್ಳಬೇಕಾದ ಮೊದಲ ಮತ್ತು ಅಗ್ರಗಣ್ಯ ವಿಷಯವೆಂದರೆ ಚಿಕ್ಕ ವಯಸ್ಸಿನಿಂದಲೇ ಉಳಿತಾಯ ಮತ್ತು ಹೂಡಿಕೆ ಮಾಡುವುದು ಬಹಳ ಮುಖ್ಯ.ನಾಳೆಯ ಉಳಿತಾಯವನ್ನು ನೀವು ಮುಂದೂಡಲು ಸಾಧ್ಯವಿಲ್ಲ. ಅದಕ್ಕೆ ಆದಷ್ಟು ಬೇಗ ಉಳಿತಾಯ ಆರಂಭಿಸಬೇಕು. ನೀವು ನಿಮ್ಮ 20 ರ ಹರೆಯದಲ್ಲಿದ್ದರೆ, ನಿಮ್ಮ ಮೇಲೆ ಕಡಿಮೆ ಆರ್ಥಿಕ ಹೊರೆಗಳಿರುತ್ತವೆ. ಹಾಗೆ ನಿಮ್ಮ ಉಳಿತಯಾದ ಹಣವನ್ನು ನೀವು ಏನು ಮಾಡುತ್ತೀರಿ ಎಂಬುದು ನಿಮಗೆ ಬಿಟ್ಟದ್ದು - ಅವುಗಳನ್ನು ಉಳಿಸಿವುದೇ ಅಥವಾ ಎಲ್ಲವನ್ನೂ YOLO ಹೆಸರಿನಲ್ಲಿ ಖರ್ಚು ಮಾಡುವುದೇ? ನಿಮ್ಮ 30 ರ ವೇಳೆಗೆ ನೀವು ನಿವೃತ್ತಿ ಹೊಂದಲು ಬಯಸಿದರೆ, ಪ್ರತಿ ಪೈಸೆಯನ್ನ ಉಳಿಸುವ ಮತ್ತು ಹೂಡಿಕೆ ಮಾಡುವ ಬಗ್ಗೆ ನೀವು ಅತ್ಯಂತ ಗಂಭೀರವಾಗಿರಬೇಕು. ನೀವು ಎಷ್ಟು ಬೇಗ ಹೂಡಿಕೆಯನ್ನು ಪ್ರಾರಂಭಿಸುತ್ತೀರೋ, ಅಷ್ಟು ಬೇಗ ನಿಮ್ಮ ಫಂಡ್ ಬೆಳೆಯುತ್ತದೆ ಮತ್ತು ನಿಮ್ಮ ನಫಂಡ್ ನ ಬೆಳವಣಿಗೆಯ ಅವಧಿಯು ಹೆಚ್ಚಾದಂತೆ ಕಂಪೌಂಡಿಂಗ್ ನ ಲಾಭವು ಹೆಚ್ಚಾಗುತ್ತದೆ. ನಾವು ಇಲ್ಲಿ ಒಂದು ಕ್ಷಣ ಪೌಸ್ (pause) ಮಾಡೋಣ ಮತ್ತು ಕಂಪೌಂಡಿಂಗ್ ಕಾನ್ಸೆಪ್ಟ್ ಅನ್ನ ನೋಡೋಣ. ಏನಿದು ಕಂಪೌಂಡಿಂಗ್ ಕಾನ್ಸೆಪ್ಟ್ ? ಕಂಪೌಂಡಿಂಗ್ ಅಥವಾ ಕಂಪೌಂಡಿಂಗ್ ಇಂಟ್ರೆಸ್ಟ್ ಅಂದ್ರೆ ಬಡ್ಡಿಯ ಮೇಲೆ ಸಿಗುವ ಬಡ್ಡಿ ಆಗಿದೆ. ಕಾಂಪೌಂಡ್ ಇಂಟ್ರೆಸ್ಟ್ನಿಂದಾಗಿ ನಿಮ್ಮ ಚಿಕ್ಕ ಇನ್ವೆಸ್ಟ್ಮೆಂಟ್ ಕೂಡ ಸಮಯ ಕಳೆದಂತೆ ದೊಡ್ಡ ಮೊತ್ತವಾಗುತ್ತದೆ.ಒಂದು ಸಣ್ಣ ಹೂಡಿಕೆಯು ಐದು ವರ್ಷಗಳ ಅವಧಿಯಲ್ಲಿ ನಿಮಗೆ ಉತ್ತಮವಾದ ಲಾಭವನ್ನು ತರಬಹುದು. ನಿಮ್ಮ ಆರಂಭಿಕ ಹೂಡಿಕೆಯು ರೂ 1 ಲಕ್ಷ ಎಂದು ಹೇಳೋಣ ಮತ್ತು ಇದು 15 ವರ್ಷಗಳ ಅವಧಿಯಲ್ಲಿ ವಾರ್ಷಿಕ 10% ದರದಲ್ಲಿ ಕಂಪೌಂಡಿಂಗ್ ಆಗಿರುತ್ತದೆ. ಅದು ಸಂಭವಿಸಿದಲ್ಲಿ 15 ವರ್ಷಗಳ ಕೊನೆಯಲ್ಲಿ, ನೀವು ರೂ. 4,17,725 ಬೇಸ್ ಅಮೌಂಟ್ ಹೊಂದಿರುತ್ತೀರಿ. ಈ ರೀತಿಯ ಆದಾಯ ಹೊಂದಲು ಹೂಡಿಕೆದಾರರಾಗಿ ನೀವು ನಿಮಗೆ ಸಿಗುವ ಬಡ್ಡಿಯನ್ನು ಮರುಹೂಡಿಕೆ ಮಾಡುವುದು ಮುಖ್ಯವಾಗಿದೆ. ಹಾಗೆಯೆ ನೀವು ಮ್ಯೂಚುಯಲ್ ಫಂಡ್ ಮೇಲೆ ಇನ್ವೆಸ್ಟ್ ಮಾಡುತ್ತಿದ್ದರೆ ನೀವು ಒಳ್ಳೆಯ ಮಾರ್ಗದಲ್ಲಿ ಇನ್ವೆಸ್ಟ್ ಮಾಡುತ್ತಿದ್ದೀರಿ ಅಂತ ಅರ್ಥ. ನೀವು ಪ್ರತಿ ತಿಂಗಳು 1000 ರೂಪಾಯಿಗಳಂತೆ ೧೦ ವರ್ಷಗಳ ಕಾಲ ಮ್ಯೂಚುಯಲ್ ಫಂಡ್ ಮೇಲೆ ಇನ್ವೆಸ್ಟ್ ಮಾಡುತ್ತೀರಿ ಅಂದುಕೊಳ್ಳೋಣ. ಮತ್ತು ಅದರ ರಿಟರ್ನ್ಸ್ 8% ಆಗಿದೆ , ಹಾಗಾದರೆ 10 ವರ್ಷಗಳ ಅವಧಿಗೆ ನೀವು 1,20,000 ಇನ್ವೆಸ್ಟ್ ಮಾಡಿದ್ದೀರಿ ಮತ್ತು ಅದು ನಿಮಗೆ 1,82,946 ಪ್ರಾಫಿಟ್ ನೀಡುತ್ತದೆ. ಈ ಮೊತ್ತವನ್ನ ನೀವು ಮತ್ತೆ 10 ವರ್ಷಗಳ ಕಾಲ ರೀ ಇನ್ವೆಸ್ಟ್ ಮಾಡಿದರೆ ನಿಮಗೆ 3,94,967 ರೂಪಾಯಿಗಳ ರಿಟರ್ನ್ಸ್ ಸಿಗುತ್ತದೆ. ಮ್ಯೂಚುಯಲ್ ಫಂಡ್ ಗಳ ಕಂಪೌಂಡಿಂಗ್ ಮಾಡುವುದರಿಂದ ನೀವು ಹೆಚ್ಚಿನ ಆದಾಯವನ್ನ ನಿರೀಕ್ಷಿಸ ಬಹುದು. ಮತ್ತೆ ನೀವು ಪಾರ್ ಈಕ್ವಿಟಿ(paar equities) ಅಲ್ಲಿ ಇನ್ವೆಸ್ಟ್ ಮಾಡೋದಕ್ಕೆ ಬಯಸಿದರೆ, ನೀವು ಹೇಳಿದ ಕಂಪನಿ ಅಥವಾ ಕಂಪನಿಗಳ ಮೇಲೆ ರಿಸೆರ್ಚ್ ಮಾಡಿ ಖಚಿತಪಡಿಸಿಕೊಳ್ಳಿ. ಈಗ ಐಪಿಒ ಸೀಸನ್ ಕೂಡ ನಡೆಯುತ್ತಿದೆ, ಅನೇಕ ಜನರ ಪ್ರಕಾರ ಈಗ ಹೊಸ issue ಮೇಲೆ ಹೂಡಿಕೆ ಮಾಡುವ ಮೂಲಕ ಆರಂಭಿಕ ಲಾಭವನ್ನು ಪಡೆದುಕೊಳ್ಳ ಬಹುದು ಅಂತ,ಆದರೆ ಅದಕ್ಕಿಂತ ಹೆಚ್ಚಿನ ಹೂಡಿಕೆಯಿದೆ.ಸ್ಟಾಕ್ ಅನಾಲಿಸಿಸ್, ಪಿ ಮತ್ತು ಎಲ್ ಅನಾಲಿಸಿಸ್, ಪಾಸ್ಟ್ ಪರ್ಫಾರ್ಮೆನ್ಸ್ , ಇತ್ಯಾದಿ. ಹೀಗೆ ನೀವು ಯೋಚಿಸಬೇಕಾದ ಹಲವು ಮೆಟ್ರಿಕ್ಸ್ ಗಳಿವೆ. ಬನ್ನಿ ಈಗ ಎರಡನೇ ಸ್ಟೆಪ್ ಗೆ ಹೋಗೋಣ- ಇದು ನಿಮಗಾಗಿ ಮತ್ತು ನಿಮ್ಮ ಕುಟುಂಬಕ್ಕೆ ಆರೋಗ್ಯ ವಿಮೆಯನ್ನು ಪಡೆಯುವುದಾಗಿದೆ. ನಿಮ್ಮಲ್ಲಿ ಕೆಲವರು ನಿಮ್ಮ 20 ವರ್ಷಗಳ ಹರೆಯದಲ್ಲಿದ್ದೀರಿ ನೀವು ಈಗ ನನ್ನ ಅರೋಗ್ಯ ಉತ್ತಮವಾಗಿದೆ ಹಾಗಾಗಿ ನನಗೆ ಹೆಲ್ತ್ ಇನ್ಸೂರೆನ್ಸ್ನ ಅಗತ್ಯ ಇಲ್ಲ ಅಂತಾನೂ ಯೋಚಿಸ್ತಾ ಇರಬಹುದು. ಹಾಗಿದ್ರೆ ಅದು ತಪ್ಪು! ಯಾಕಂದ್ರೆ ನಿಮಗೆ ಈಗಾಗಲೇ ಕೋವಿಡ್ ನ ಸಮಯದ ಹಠಾತ್ ಖರ್ಚು ಮತ್ತು ಅದು ಎಷ್ಟು ದುಬಾರಿ ಅನ್ನೋದು ತಿಳಿದಿರ ಬೇಕು ಅಲ್ವ ? ನಮ್ಮಲ್ಲಿ ಅನೇಕರು ಆಸ್ಪತ್ರೆಯ ಖರ್ಚುಗಳ ಆಘಾತವನ್ನು ಅನುಭವಿಸಿರಬೇಕು. ನೀವು ನಿಮ್ಮ ಉಳಿತಾಯವನ್ನ ಇಂತಹ ಹಠಾತ್ ನಷ್ಟಗಳಿಂದ ಉಳಿಸಲು ಬಯಸಿದರೆ ಹೆಲ್ತ್ ಇನ್ಸೂರೆನ್ಸ್ ಪಡೆಯುವುದು ಅನಿವಾರ್ಯವಾಗಿದೆ. ಹೆಲ್ತ್ ಇನ್ಸೂರೆನ್ಸ್ ಇಲ್ಲದಿದ್ದಲ್ಲಿ ನಿಮ್ಮ ಉಳಿತಾಯದ ಒಂದು ದೊಡ್ಡ ಮೊತ್ತ ಆಸ್ಪತ್ರೆಗಾಗಿ ಖರ್ಚಾಗಬಹುದು . ಮತ್ತು ಇದು ನಿಮ್ಮ ಹೂಡಿಕೆಗೆ ಹಾನಿಕಾರಕವಾಗಿದೆ. ಇದರೊಂದಿಗೆ ನಿಮ್ಮ ಹೆತ್ತವರಿಗೂ ಇನ್ಸೂರೆನ್ಸ್ ಕವರ್ ಆಗೋ ತರಹ ನೋಡಿಕೊಳ್ಳಿ ಮತ್ತು ಆ ಕವರೇಜ್ ಎಷ್ಟು ಹೆಚ್ಚಾಗಿರುತ್ತದೋ ಅಷ್ಟು ಒಳ್ಳೆಯದು. ಯಾಕಂದ್ರೆ ಅವರಿಗೆ ಇನ್ಸುರೆನ್ಸ್ ನ ಅವಶ್ಯಕತೆ ಇರುತ್ತದೆ. ಮತ್ತು ಇನ್ಸೂರೆನ್ಸ್ ನ ಕಾಗದ ಪಾತ್ರಗಳನ್ನ ಸರಿಯಾಗಿ ಓದಿ. ಇದರಲ್ಲಿ ರೂಮ್ ಬಾಡಿಗೆ, ಇತರ ವೆಚ್ಚಗಳು ಮತ್ತು ಒಪಿಡಿ ವೆಚ್ಚಗಳು ಮತ್ತು ಕ್ಯಾಪಿಂಗ್‌ಗಳ ಕುರಿತು ಓದಿ ಅರ್ಥಮಾಡಿಕೊಂಡಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. ಕೇವಲ ಕವರೇಜ್ ಅಮೌಂಟ್ ನೋಡಿ ಸಹಿ ಮಾಡಬೇಡಿ. ಮೂರನೇ ಸ್ಟೆಪ್ ಎಮರ್ಜನ್ಸಿ ಕಾರ್ಪಸ್ ಅನ್ನ ಹೊಂದುವುದು. ಸ್ನೇಹಿತರೆ ಲೈಫ್ ಇಸ್ unpredictable ಹಾಗಾಗಿ ಲೈಫ್ ನ ಎಲ್ಲ ಸಂದರ್ಭಗಳಿಗೆ ರೆಡಿ ಆಗಿರುವುದು ಅನಿವಾರ್ಯವಾಗಿದೆ. ಪದೇ ಪದೇ, ಹಣಕಾಸು ತಜ್ಞರು ತುರ್ತು ನಿಧಿಯ ಮಹತ್ವವನ್ನು ಒತ್ತಿ ಹೇಳುತ್ತಿದ್ದಾರೆ. ಯಾವುದೇ ಸಮಯದಲ್ಲಿ, ನಿಮ್ಮ ತುರ್ತು ನಿದಿಯು ನಿಮ್ಮ ಕನಿಷ್ಠ 12 ತಿಂಗಳುಗಳ ಖರ್ಚುಗಳನ್ನ ಹೊಂದಿರಬೇಕು, ಇದರಲ್ಲಿ ನಿಮ್ಮ ತಿಂಗಳ ಖರ್ಚುಗಳು ಮತ್ತು ದಿನಸಿ ಬಿಲ್ಲುಗಳು ಹಾಗೂ ಬಾಡಿಗೆ ಪಾವತಿಗಳು, ವಿಮಾ ಕಂತುಗಳು ಮತ್ತು ಸಾಲದ ಕಂತುಗಳು ಒಳಗೊಂಡಿರಬೇಕು. ಎಮರ್ಜೆನ್ಸಿ ಕಾರ್ಪಸ್‌ನೊಂದಿಗೆ, ನಿಮ್ಮ ಮ್ಯೂಚುವಲ್ ಫಂಡ್‌ಗಳನ್ನು ರಿಡೀಮ್ ಮಾಡಲು ನಿಮ್ಮನ್ನ ಎಂದಿಗೂ ಒತ್ತಾಯಿಸುವುದಿಲ್ಲ ಮತ್ತು ನೀವು ಅದನ್ನ ಅದರ ಸ್ವಂತ ವೇಗದಲ್ಲಿ ಬೆಳೆಯಲು ಬಿಡಬಹುದು. ಬನ್ನಿ ಸ್ನೇಹಿತರೆ ಇವತ್ತಿಗೆ ಇದಿಷ್ಟೇ, ಈಗ ನೀವು ಸ್ಥಿರವಾಗಿ ಮತ್ತು ನಿರ್ಧರಿಸಿದ ರೀತಿಯಲ್ಲಿ ಉಳಿಸುತ್ತೀರಿ ಎಂದು ನಾನು ಭಾವಿಸುತ್ತೇನೆ. ಒಂದು ವಿಷಯ ನೆನಪಿಡಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಅಪಾಯ ಯಾವಾಗಲು ಇರುತ್ತದೆ ಮತ್ತು ಹೂಡಿಕೆ ಮಾಡುವುದಕ್ಕೂ ಮೊದಲು ಹಣಕಾಸು ಸಲಹೆಗಾರಿಂದ ಸಲಹೆ ಪಡೆಯಿರಿ. ಹೊರಡುವ ಮುನ್ನ ಇನ್ನೊಂದು ಮುಖ್ಯ ವಿಷಯ. ಈ ಪಾಡ್‌ಕ್ಯಾಸ್ಟ್ ಅನ್ನು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ ಮಾಡಲಾಗಿದೆ ಮತ್ತು ಹೂಡಿಕೆದಾರರು ತಮ್ಮದೇ ಸಂಶೋಧನೆಯನ್ನು ಸಹ ಮಾಡಬೇಕು. ಇಂತಹ ಇಂಟ್ರೆಸ್ಟಿಂಗ್ ಪಾಡ್ಕ್ಯಾಸ್ಟ್ ಗಳಿಗಾಗಿ ನಮ್ಮ ಸೋಶಿಯಲ್ ಮೀಡಿಯಾ ಹಾಗು ಯೌಟ್ಯೂಬ್ ಚಾನೆಲ್ ಅನ್ನ ಫಾಲೋ ಮಾಡಿ. ಅಲ್ಲಿವರೆಗೆ ಗುಡ್ ಬೈ ಅಂಡ್ ಹ್ಯಾಪ್ಪಿ ಇನ್ವೆಸ್ಟಿಂಗ್! ಸೆಕ್ಯುರಿಟೀಸ್ ಮಾರುಕಟ್ಟೆಗಳಲ್ಲಿನ ಹೂಡಿಕೆಗಳು ಮಾರುಕಟ್ಟೆಯ ಅಪಾಯಗಳಿಗೆ ಒಳಪಟ್ಟಿರುತ್ತವೆ, ಹೂಡಿಕೆ ಮಾಡುವ ಮೊದಲು ಎಲ್ಲಾ ಸಂಬಂಧಿತ ದಾಖಲೆಗಳನ್ನು ಎಚ್ಚರಿಕೆಯಿಂದ ಓದಿ. Investments in the securities markets are subject to market risks. Read all the related documents carefully before investing.