How millenial investors can retire in their 30s

Podcast Duration: 8:02
ಮಿಲೇನಿಯಲ್ ಇನ್ವೆಸ್ಟರ್ಸ್ ತಮ್ಮ 30 ರ ದಶಕದಲ್ಲಿ ಹೇಗೆ ನಿವೃತ್ತರಾಗಬಹುದು - ಹಲೋ ಫ್ರೆಂಡ್ಸ್ , ಏಂಜಲ್ ಒನ್ ನ ಈ ಮಿಲೇನಿಯಲ್ಸ್ ಮತ್ತು ಇನ್ವೆಸ್ಟಿಂಗ್ ಸ್ಪೆಷಲ್ ಪೋಡ್ಕ್ಯಾಸ್ಟ್ ಗೆ ನಿಮಗೆ ಸ್ವಾಗತ. ಸ್ನೇಹಿತರೆ, ನಮ್ಮಲ್ಲಿ ಯಾರಿಗೆ ಆದಷ್ಟು ಬೇಗ ರಿಟೈರ್ಡ್ ಹೊಂದಿ ಯಾವುದಾದ್ರೂ ಹಿಲ್ ಸ್ಟೇಷನ್ ಅಥವಾ ಸಮುದ್ರಗಳ ನಗರಗಳಲ್ಲಿ ಖುಷಿಯಾಗಿ ಇರೋದಕ್ಕೆ ಇಷ್ಟ ಇರೋದಿಲ್ಲ ಹೇಳಿ ? ಆದರೆ ಅದು ಅಷ್ಟು ಸುಲಭವಲ್ಲ. ನಾವು ಬೇಗನೆ ನಿವೃತ್ತಿ ಹೊಂದಲು ಬಯಸಿದರೆ, ಅದಕ್ಕಾಗಿ ಇಂದು ತ್ಯಾಗ ಮತ್ತು ಉಳಿತಾಯ ಎರಡನ್ನೂ ಮಾಡಬೇಕಾಗುತ್ತದೆ. ಈಗ, ಯು ಎಸ್ ಎ ಯಲ್ಲಿ ಒಂದು ಆಂದೋಲನ ನಡೀತಿದೆ ಅದರಲ್ಲಿ ಸಾಕಷ್ಟು ಪ್ರೊಫೆಶನಲ್ಸ್ ಅವಿರತವಾಗಿ ತಮ್ಮ ಅರ್ಲಿ ರಿಟೈರ್ಡ್ಮೆಂಟ್ ಗಾಗಿ ದುಡಿತಾ ಇದಾರೆ. ಈ ಆಂದೋಲನ ವನ್ನ FIRE ಅಂತ ಕರೀತಾರೆ. ಅಂದ್ರೆ ಫೈನಾನ್ಸಿಯಲ್ ಇಂಡಿಪೆಂಡೆನ್ಸ್ ಆಂಡ್ ರಿಟೈರ್ ಅರ್ಲಿ. ಈ ಆಂದೋಲನದಲ್ಲಿ, ಯುವ ಕಾರ್ಪೊರೇಟ್ ವೃತ್ತಿಪರರು ಸಾಧ್ಯವಾದಷ್ಟು ಉಳಿತಾಯ ಮಾಡುವ ಉದ್ದೇಶವನ್ನು ಹೊಂದಿದ್ದು ಮತ್ತು ಆ ಉಳಿತಾಯದಿಂದ ತಮ್ಮ ನಿವೃತ್ತಿಯ ನಂತರದ ಜೀವನವನ್ನು ರೂಪಿಸಿಕೊಳ್ಳುತ್ತಾರೆ. ಹೆಸರೇ ಸೂಚಿಸುವಂತೆ, ಈ ಆಂದೋಲನಕ್ಕೆ ಎರಡು ಪ್ರಮುಖ ಕಾರಣಗಳಿವೆ. ಒಂದು ಆರ್ಥಿಕ ಸ್ವಾತಂತ್ರ್ಯವನ್ನ ಗಳಿಸುವುದು , ಇನ್ನೊಂದು ಬೇಗನೆ ನಿವೃತ್ತಿ ಹೊಂದುವುದು. ಆದರೆ ಇದರಲ್ಲೂ ಇನ್ನೂ ಅನೇಕ ಅಂಶಗಳಿವೆ, ಸ್ವಲ್ಪ ಆಳವಾಗಿ ತಿಳಿಯೋಣ: ಆರ್ಥಿಕ ಸ್ವಾತಂತ್ರ್ಯದ ಭಾಗದಲ್ಲಿ, ಹಣ ನಿಮಗೆ ಕೆಲಸಕ್ಕೆ ಬರಬೇಕು. ನಿಮಗೆ ಎರಡು ತರಹದ ಆದಾಯ ಇದೆ - ಒಂದು ಆಕ್ಟಿವ್ ಇನ್ಕಮ್ ಇನ್ನೊಂದು ಪ್ಯಾಸಿವ್ ಇನ್ಕಮ್. ಯಾವಾಗ ನಿಮ್ಮ ಪ್ಯಾಸಿವ್ ಇನ್ಕಮ್ ಜಾಸ್ತಿ ಇರುತ್ತೋ, ಅವಾಗ ನೀವು ಆರ್ಥಿಕವಾಗಿ ಸ್ವತಂತ್ರ್ಯರಾಗುತ್ತೀರಿ. ಆದರೆ ನೀವು ನಿಮ್ಮ 9 to 5 ಜಾಬ್ ಗೆ ಡಿಪೆಂಡ್ ಆಗಿದ್ರೆ ನಿಮ್ಮ ಅರ್ಲಿ ರಿಟೈರ್ಡಮೆಂಟ್ ಗೆ ಸೇವಿಂಗ್ಸ್ ಮಾಡೋದು ಕಷ್ಟ ಆಗ್ಬಹುದು. ನೀವು ವಿವಿಧ ಮೂಲಗಳಿಂದ ಪ್ಯಾಸಿವ್ ಇನ್ಕಮ್ ಗೆ ತಯಾರಿ ಮಾಡುವುದು ಉತ್ತಮ. ಆದರೆ ಇದನ್ನ ನೀವು ಹೇಗೆ ಮಾಡ್ತೀರಾ? ಮೊದಲಿಗೆ, ನೀವು ನಿಮ್ಮ ಸೇವಿಂಗ್ಸ್ ನಿಮ್ಮ ಆದಾಯದ ಎಷ್ಟು ಭಾಗ ಇದೆ ಎಂದು ತಿಳಿಯಿರಿ. ನೀವು ನಿಮ್ಮ ಆದಾಯದ 50-70% ಸೇವಿಂಗ್ ಮಾಡಬಹುದು ಅಂದ್ರೆ ನಿಮ್ಮ ಅರ್ಲಿ ರಿಟೈರ್ಡಮೆಂಟ್ ತೆಗೆದುಕೊಳ್ಳುವ ಅವಕಾಶ ಹೆಚ್ಚಾಗುತ್ತೆ. ಇದು ಕಷ್ಟ ಅನ್ನಿಸಬಹುದು ಅದ್ರೆ ಅಸಾಧ್ಯ ಅಲ್ಲ. ಮೂರನೇ ಪಾಯಿಂಟ್ , ನೀವು ನಿಮ್ಮ ಗೋಲ್ ಅನ್ನ ರೀಚ್ ಆಗೋದಕ್ಕೆ ಎಷ್ಟು ಸಮಯ ಬೇಕು ಅಂತ ಪ್ಲಾನ್ ಮಾಡಿ. ಮೂರು ಬೇರೆ ಬೇರೆ ವಿಧಾನಗಳಿಂದ ನೀವು FIRE ಮೆಥಡ್ ಅನ್ನ ಅಪ್ರೋಚ್ ಮಾಡಬಹುದು. ಮೊದಲ ವಿಧಾನದಲ್ಲಿ ನೀವು ನಿಮ್ಮ ಖರ್ಚನ್ನ ಕಡಿಮೆ ಮಾಡುವ ಮತ್ತು ಸೇವಿಂಗ್ಸ್ ಅನ್ನ ಹೆಚ್ಚು ಮಾಡುವ ಗುರಿಯನ್ನ ಹೊಂದಿರಬೇಕು. ಎರಡನೆಯ ವಿಧಾನದಲ್ಲಿ ಸ್ವಲ್ಪ ಹೆಚ್ಚು ಖರ್ಚು ಮಾಡಲು ಸಿಗುತ್ತದೆ ಆದರೆ ಹೆಚ್ಚಿನ ಖರ್ಚಿನ ಕಾರಣ, ನೀವು ಬಯಸಿದಷ್ಟು ಬೇಗ ನಿವೃತ್ತಿ ಹೊಂದಲು ಸಾಧ್ಯವಾಗುವುದಿಲ್ಲ. ಮತ್ತು ಮೂರನೆಯ ವಿಧಾನದಲ್ಲಿ, ನಿಮ್ಮ ಆರಂಭಿಕ ಪ್ರಯಾಣವನ್ನು ಕಿಕ್‌ಸ್ಟಾರ್ಟ್ ಮಾಡಲು ನೀವು ಸಾಧ್ಯವಾದಷ್ಟು ಉಳಿತಾಯವನ್ನು ಪ್ರಯತ್ನಿಸುತ್ತೀರಿ ಮತ್ತು ಸಂಗ್ರಹಿಸುತ್ತೀರಿ. ನಿಮ್ಮ ಈ ವಿಧಾನವು ಯಶಸ್ವಿಯಾದರೆ ನೀವು ಬೇಗನೆ ನಿವೃತ್ತಿ ಹೊಂದಲು ಸಾಧ್ಯವಾಗುತ್ತದೆ. ಸ್ಟಾರ್ಟ್ಅಪ್ಗಳು ಯಾವಾಗಲೂ ಆಕರ್ಷಕವಾಗಿಯೇ ಇರುತ್ತೆ, ಅಂತೆಯೇ ಹೆಚ್ಚಿನ ಅಪಾಯಗಳನ್ನ ಮತ್ತು ಹೆಚ್ಚಿನ ರಿವಾರ್ಡ್ ಗಳನ್ನ ಕೂಡ ನಿರೀಕ್ಷಿಸಬಹುದು. ಇದರೊಂದಿಗೆ ಇನ್ನು ಅನೇಕ ವಿಷಯಗಳನ್ನ ನೀವು ಮಾಡಬಹುದು : ನಿಮಗೆ ನಿಮ್ಮ ಸಂಬಂಧಿಕರಿಂದ ಮತ್ತು ಸ್ನೇಹಿತರಿಂದ ದೊರೆಯುವ ಕ್ಯಾಶ್ ಗಿಫ್ಟ್ ಗಳನ್ನ ಖರ್ಚು ಮಾಡ್ಬೇಡಿ ಬದಲಿಗೆ ಅದನ್ನ ಫಿಕ್ಸೆಡ್ ಡೆಪಾಸಿಟ್ ಅಥವಾ ಈಕ್ವಿಟಿ ಅಥವಾ ಡೆಬ್ಟ್ ಫಂಡ್ ಗಳಲ್ಲಿ ಇನ್ವೆಸ್ಟ್ ಮಾಡಿ. ಹಣ ಉಳಿತಾಯದ ಉಪಾಯವೇ ಹಣ ಗಳಿಕೆಯ ಮಾರ್ಗವಾಗಿರುತ್ತದೆ. ಡೆಬ್ಟ್ ಅನ್ನ ಆದಷ್ಟು ಅವಾಯ್ಡ್ ಮಾಡಿ: ನಮ್ಮಲ್ಲಿ ಬಹಳಷ್ಟು ಮಂದಿ ಕ್ರೆಡಿಟ್ ಕಾರ್ ಅನ್ನ ಹೊಂದುವುದು ಅನಿವಾರ್ಯ ಅಂತ ಭಾವಿಸ್ತಾರೆ. ಇದರಿಂದಾಗಿ ಅನೇಕ ಮಂದಿ ಕ್ರೆಡಿಟ್ ಕಾರ್ಡ್ ಬಡ್ಡಿ ಮತ್ತು ಲೇಟ್ ಪೇಮೆಂಟ್ ಫೀಸ್ ಅಂತ ಅನಗತ್ಯ ಖರ್ಚಿಗೆ ತುತ್ತಾಗುತ್ತಾರೆ. ಆದ್ದರಿಂದ ನಿಮಗೆ ಕ್ರೆಡಿಟ್ ಕಾರ್ಡ್ ಅನ್ನ ಎಚ್ಚರಿಕೆಯಿಂದ ಬಳಸಲು ಸಾಧ್ಯ ಆಗದಿದ್ದರೆ ಅದರಿಂದ ದೂರವೇ ಇರಿ. ನಿಮ್ಮ ಖರ್ಚನ್ನ ಸರಿಯಾಗಿ ಗಮನಿಸುತ್ತಲೇ ಇರಿ . ಆದಾಯ ಬರುತ್ತಲೇ ಅದನ್ನ ಉಳಿತಾಯದ ಕಡೆಗೆ ಇನ್ವೆಸ್ಟ್ ಮಾಡಿ . ಉಳಿದ ಹಣವನ್ನ ನಿಮ್ಮ ಅಗತ್ಯ ಖರ್ಚಿಗೆ ಬಳಸಿ. ಹೀಗೆ ವೆಚ್ಚಗಳಿಗೆ ಕಡಿವಾಣ ಹಾಕಿ ಮತ್ತು ಸೇವಿಂಗ್ಸ್ ಗೆ ಮಹತ್ವ ಕೊಡಿ. ಇದರಿಂದಾಗಿ ನಿಮ್ಮ ರಿಟೈರ್ಡ್ಮೆಂಟ್ ಕಾರ್ಪಸ್ ಹೆಚ್ಚು ಮಾಡಬಹುದು. ಅರೋಗ್ಯ ವಿಮೆ ಇಲ್ಲದಿದ್ದರೆ ನಿಮ್ಮ ಉಳಿತಾಯದ ಹಣ ನಿಮ್ಮ ಅನಾರೋಗ್ಯದ ಖರ್ಚಿಗೆ ವೆಚ್ಚವಾಗಬಹುದು. ಆದ್ದರಿಂದ ವಿಮೆಯನ್ನ ಹೊಂದುವುದು ಕೂಡ ಅಗತ್ಯ. ಹಾಗೆಯೆ ಎಮರ್ಜೆನ್ಸಿ ಫಂಡ್ ಅನ್ನ ಹೊಂದುವುದು ಕೂಡ ಅಗತ್ಯ. ಯಾಂಕಂದ್ರೆ ಜೀವನ ಹೀಗೆ ಇರುತ್ತೆ ಅಂತ ನಿರ್ಧರಿಸೋದಕ್ಕೆ ಸಾಧ್ಯ ಇಲ್ಲ. ಹಾಗಾಗಿ ಒಂದು ಎಮರ್ಜೆನ್ಸಿ ಫಂಡ್ ನಿಮ್ಮ ಅಗತ್ಯ ಸಮಯದಲ್ಲಿ ಸಹಾಯಕ್ಕೆ ಬರುತ್ತೆ. ಒಂದು ಬ್ಯಾಕಪ್ ಪ್ಲಾನ್ ಯಾವತ್ತೂ ರೆಡಿ ಮಾಡಿ ಇಡಿ. ನಿಮ್ಮ ಜೀವನ ನಿಮ್ಮ ಪ್ಲಾನ್ ನ ಅನುಸಾರವಾಗಿ ನಡೆಯುತ್ತೆ ಅಂತ ಹೇಳೋದಕ್ಕೆ ಆಗಲ್ಲ ಅಲ್ವಾ . ಲೈಫ್ ಕೂಡ ಒಬ್ಬ ಮಾಜಿ ಆಟಗಾರನ ಹೇಳಿಕೆಯಂತೆ ಇದೆ ಅದೇನೆಂದ್ರೆ - " Everyone has a plan until they get punched in the face.” ಆದ್ದರಿಂದ ಒಂದು ಬ್ಯಾಕ್ ಅಪ್ ಪ್ಲಾನ್ ಯಾವಾಗಲು ರೆಡಿ ಮಾಡಿ ಇಡೋದು ಉತ್ತಮ. ನಿಮಗೆ ಬರುವ ಇಂಟರೆಸ್ಟ್ ಹಣವನ್ನ ಕೂಡ ಖರ್ಚು ಮಾಡಬೇಡಿ ಅದನ್ನ ಕೂಡ ರಿ-ಇನ್ವೆಸ್ಟ್ ಮಾಡಿ ಅದರಿಂದ ಕೂಡ ನಿಮಗೆ ಬಡ್ಡಿ ಬರುತ್ತದೆ. ಸರಿ, ಈಗ ನಾವು ಫೈರ್‌ಗಾಗಿ ಅನುಸರಿಸಬೇಕಾದ ನಿಯಮಗಳನ್ನ ನೋಡಿದ್ದೇವೆ , ಈಗ ಹೇಗೆ ಮತ್ತು ಎಲ್ಲಿ ಹೂಡಿಕೆ ಮಾಡಬೇಕು ಅನ್ನುವುದನ್ನ ನೋಡೋಣ. ನೀವು ಯಂಗ್ ಪ್ರೊಫೆಷನಲ್ ಆಗಿದ್ದು ಮತ್ತು ನೋ - ಡಿಪೆಂಡೆಂಟ್ ಆದ್ರೆ : ಈ ಸಂದರ್ಭದಲ್ಲಿ ನಿಮ್ಮ ಮ್ಯಾಕ್ಸಿಮಮ್ ಇನ್ವೆಸ್ಟ್ಮೆಂಟ್ ಈಕ್ವಿಟಿ ಮಾರ್ಕೆಟ್ ಮೇಲೆ ಇನ್ವೆಸ್ಟ್ ಮಾಡೋದು ಉತ್ತಮ. ಇಲ್ಲಿ ಒಂದು ರೂಲ್ ಇದೆ - ನಿಮ್ಮ ಈಕ್ವಿಟಿ ಇನ್ವೆಸ್ಟ್ಮೆಂಟ್ ಯಾವತ್ತೂ 100 -(ಮೈನಸ್) ನಿಮ್ಮ ವಯಸ್ಸು. ಅಂದ್ರೆ ನಿಮ್ಮ ವಯಸ್ಸು 25 ಆಗಿದ್ರೆ, ನಿಮ್ಮ 75% ಆದಾಯ ನಿಮ್ಮ ಈಕ್ವಿಟಿ ಮೇಲೆ ಇನ್ವೆಸ್ಟ್ ಮಾಡಬೇಕು . ಇದು ಸಾಮಾನ್ಯ ನಿಯಮದಲ್ಲಿ ಒಂದು. ಅಸಲಿಗೆ ನೀವು ನಿಮ್ಮ ರಿಸ್ಕ್ ಟೇಕಿಂಗ್ ಕ್ಯಾಪಾಸಿಟಿಯ ಅನುಸಾರವಾಗಿ ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲಿ, ಯಾವುದೂ ಗ್ಯಾರಂಟಿ ಇಲ್ಲ. ಒಂದುವೇಳೆ ನೀವು ಇಬ್ಬರು ಮಕ್ಕಳಿರುವ ವೃತ್ತಿಪರರಾಗಿದ್ದಲ್ಲಿ: ನಿಮಗೆ ಕ್ಯಾಪಿಟಲ್ ಪ್ರಿಸರ್ವೇಷನ್ ಮೇಲೆ ಫೋಕಸ್ ಮಾಡಬೇಕಾದಲ್ಲಿ. ನೀವು ಈಕ್ವಿಟಿ ಮೇಲೆ ನಿಮ್ಮ ಹೂಡಿಕೆಯನ್ನ ಕಡಿಮೆ ಮಾಡಿ ಡೆಬ್ಟ್ ಮೇಲೆ ಜಾಸ್ತಿ ಇನ್ವೆಸ್ಟ್ ಮಾಡಬೇಕು. ನಿಮ್ಮ ಹೂಡಿಕೆ 40% ಈಕ್ವಿಟಿ ಸ್ಕೀಮ್ ಅಥವಾ ಡೈರೆಕ್ಟ್ ಈಕ್ವಿಟಿ ಮೇಲೆ ಇರಬೇಕು, 20% ಈ ಟಿ ಎಫ್ ಅಲ್ಲಿ,30% ಡೆಬ್ಟ್ ಅಲ್ಲಿ, 10% ಲಿಕ್ವಿಡ್ ಸ್ಕೀಮ್ ಅಲ್ಲಿ ಇರಬೇಕು. ನಿಜ ಹೇಳಬೇಕೆಂದರೆ, ಹಾರ್ಡ್ ಮತ್ತು ಫಾಸ್ಟ್ ರೂಲ್ ಅಂತ ಏನು ಇಲ್ಲ. ನಾನು ಮೊದಲೇ ಹೇಳಿದಂತೆ - ನಿಮ್ಮ ರಿಸ್ಕ್ ಟೇಕಿಂಗ್ ಕೆಪ್ಯಾಸಿಟಿ ಮೇಲೆ ನಿಮ್ಮ ಇನ್ವೆಸ್ಟ್ಮೆಂಟ್ ಪೋರ್ಟ್ಪೋಲಿಯೋ ನಿಗದಿಯಾಗುತ್ತೆ. ಇನ್ನೊಂದು ವಿಷಯ, ಅರ್ಲಿ ರಿಟೈರ್ಡ್ಮೆಂಟ್ ಹೊಂದಬೇಕು ಅನ್ನುವವರು , ಮೊದಲಿಗೆ ಯಾಕೆ ಅರ್ಲಿ ರಿಟೈರ್ಡ್ಮೆಂಟ್ ಹೊಂದಬೇಕು ? ಅನ್ನುವುದನ್ನ ತಿಳಿದಿರಬೇಕು. ಅಂತಹ ಯಾವ ಕೆಲಸ ಮಾಡುವುದಕ್ಕೆ ನೀವು ಉತ್ಸುಕರಾಗಿದ್ದೀರಿ? ಮತ್ತು ಅದರಿಂದ ನಿಮಗೆ ಆದಾಯ ಬರುತ್ತಾ? ಒಂದುವೇಳೆ ನಿಮಗೆ ನಿಮ್ಮ ಇಷ್ಟದ ಕೆಲಸ ದೊರಕಿದ್ದು ಅದನ್ನ ನೀವು ನಿಮ್ಮ 50 -60 ರ ವರೆಗೆ ಇಷ್ಟ ಪಟ್ಟು ಮಾಡಬಹುದಾಗಿದ್ರೆ ನಿಮಗೆ ಅರ್ಲಿ ರಿಟೈರ್ಡಮೆಂಟ್ ನ ಅವಶ್ಯಕತೆಯೇ ಬರುವುದಿಲ್ಲ. ಸರಿ ಸ್ನೇಹಿತರೆ, ಒಂದು ವಿಷಯ ನೆನಪಿಡಿ ಸ್ಟಾಕ್ ಮಾರ್ಕೆಟ್ನಲ್ಲಿ ಇನ್ವೆಸ್ಟ್ ಮಾಡುವುದು ಯಾವತ್ತು ರಿಸ್ಕ್ ನಿಂದ ಕೂಡಿರುತ್ತೆ . ಈ ಪಾಡ್ಕ್ಯಾಸ್ಟ್ ಅನ್ನ ಶೈಕ್ಷಣಿಕ ಉದ್ದೇಶದಿಂದ ಮಾಡಲಾಗಿದೆ ಆದ್ದರಿಂದ ಹೂಡಿಕೆದಾರರು ತಮ್ಮ ಸ್ವಂತ ರಿಸರ್ಚ್ ಅನ್ನ ಮಾಡಲೇಬೇಕು. ಇಂತಹ ಇನ್ನಷ್ಟು ಕುತೂಹಲಕಾರಿ ಪಾಡ್ಕ್ಯಾಸ್ಟ್ ಕೇಳುವುದಕ್ಕಾಗಿ- ನಮ್ಮ ಯೌಟ್ಯೂಬ್ ಮತ್ತು ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಅನ್ನ ಫಾಲೋ ಮಾಡಿ. ಅಲ್ಲಿವರೆಗೆ ಗುಡ್ ಬೈ ಮತ್ತು ಹ್ಯಾಪಿ ಇನ್ವೆಸ್ಟಿಂಗ್! ಸೆಕ್ಯುರಿಟೀಸ್ ಮಾರುಕಟ್ಟೆಯಲ್ಲಿನ ಹೂಡಿಕೆಗಳು ಮಾರುಕಟ್ಟೆಯ ಅಪಾಯಗಳಿಗೆ ಒಳಪಟ್ಟಿರುತ್ತವೆ. ಹೂಡಿಕೆ ಮಾಡುವ ಮೊದಲು ಎಲ್ಲಾ ಸಂಬಂಧಿತ ದಾಖಲೆಗಳನ್ನು ಎಚ್ಚರಿಕೆಯಿಂದ ಓದಿ.