Fundamental Analysis of IT Industry

Podcast Duration: 6:55
ಪೋಡ್ಕ್ಯಾಸ್ಟ್ - ಫಂಡಮೆಂಟಲ್ ಅನಾಲಿಸಿಸ್ ಆಫ್ ಸೆಕ್ಟರ್ಸ್: ಐಟಿ ಸೆಕ್ಟರ್ ನಮಸ್ತೆ ಸ್ನೇಹಿತರೆ, ಏಂಜಲ್ ಏಂಜಲ್ ಒನ್ನ ಮತ್ತೊಂದು ಇನ್ಸೈಟ್ಫುಲ್ ಪೋಡ್ಕ್ಯಾಸ್ಟ್ಗೆ ಸ್ವಾಗತ. ಈ ಪಾಡ್ಕ್ಯಾಸ್ಟ್ನಲ್ಲಿ ನಾವು ಈ ವರ್ಷದ ಎರಡು ಜನಪ್ರಿಯ ಸೆಕ್ಟರ್ಗಳ ಕುರಿತು ತಿಳಿಯೋಣ, ಅದೇ ಐಟಿ ಸೆಕ್ಟರ್. ನಂಗೊತ್ತು ಪೋಡ್ಕ್ಯಾಸ್ಟ ಗಾಗಿ ನಿಮ್ಮಲ್ಲಿ ಸಾಕ್ಷ್ಟು ಮಂದಿ ಕಾಯ್ತಾ ಇದ್ರಿ ಅಂತ. ಬನ್ನಿ ಶುರು ಮಾಡೋಣ. ಪ್ಯಾಂಡಮಿಕ್ ಮತ್ತು ಲೊಕ್ಡೌನ್ ಶುರುವಾದಾಗಿಂದಲೂ ಇನ್ವೆಸ್ಟರ್ಸ್ ಎರಡು ಸೆಕ್ಟರ್ನಲ್ಲಿ ಇನ್ವೆಸ್ಟ್ ಮಾಡೋದಕ್ಕೆ ಹಾತೊರೀತಿದಾರೆ. ಒಂದು ಐಟಿ ಇನ್ನೊಂದು ಫಾರ್ಮಾ. ಫಾರ್ಮಾ ಸೆಕ್ಟರ್ಗೆ ಬೇಡಿಕೆ ಹೆಚ್ಚಲು ಪ್ರಮುಖ ಕಾರಣ ಕೋವಿಡ್ಗೆ ಸಂಬಂದಿಸಿದ ವ್ಯಾಕ್ಸಿನ್ ಮತ್ತು ಅದಕ್ಕೆ ಸಂಬಂಧಪಟ್ಟ ಮೆಡಿಸಿನ್ನಿಂದಾಗಿ. ಮತ್ತು ಐಟಿ ಸೆಕ್ಟರ್ನ್ ರಿಮೋಟ್ ವರ್ಕಿಂಗ್ನ ಕಾರಣದಿಂದಾಗಿ ಸಾಕಷ್ಟು ಬೇಡಿಕೆ ಹೆಚ್ಚಾಗಿರೋದನ್ನ ಕಾಣಬಹುದು. ಇವತ್ತು ಐಟಿ ಸೆಕ್ಟರ್ನ್ ಫಂಡಮೆಂಟಲ್ ಅನಾಲಿಸಿಸ್ ಮಾಡೋಣ. ನಿಮಗೆ ಈಗಾಗಲೇ ತಿಳಿದಿರಬೇಕು ಫಂಡಮೆಂಟಲ್ ಅನಾಲಿಸಿಸ್ ಅಲ್ಲಿ ಕಂಪನಿಯ ಕಳೆದ ಕೆಲವು ವರ್ಷಗಳ ರೆವೆನ್ಯೂ ಮತ್ತು ಲಾಸ್ ಅನ್ನ ನೋಡ್ತಿವಿ. ಜೊತೆಗೆ ಮುಂದಿನ ಕೆಲ ವರ್ಷಗಳ ಪೊಟೆನ್ಷಿಯಲ್ ಅನ್ನ ನೋಡ್ತಿವಿ. ನಾವೀಗ ಈ ಸೆಕ್ಟರ್ ಅನ್ನ ನಾಲ್ಕು ಸ್ಟೇಜ್ ಗಳಲ್ಲಿ ನೋಡೋಣ: ಮೊದಲು ಅಂಕಿ ಅಂಶಗಳನ್ನ ನೋಡೋಣ, ಇದರಿಂದ ಈ ಸೆಕ್ಟರ್ನ ಪ್ರಸ್ತುತ ಸ್ಥಿತಿಗತಿಯನ್ನ ತಿಳಿಬಹುದು ನಂತರ ಇಂಡಸ್ಟ್ರಿ ಎನ್ವಿರಾನ್ಮೆಂಟ್ ನೋಡೋಣ. ಮೂರನೆಯದಾಗಿ - ಐಟಿ ಸೆಕ್ಟರ್ಗೆ ಸರಕಾರದಿಂದ ಸಿಗ್ತಾಯಿರೋ ಬೆನಿಫಿಟ್ಸ್ ಗಳನ್ನ ತಿಳಿಯೋಣ. ಮತ್ತು ಲಾಸ್ಟ ಬಟ್ ನಾಟ್ ದಿ ಲೀಸ್ಟ್ ಪೊಟೆನ್ಷಿಯಲ್ ಅಂಡ್ ಪೋಸ್ಸಿಬಿಲಿಟಿ ಇನ್ ಐಟಿ ಇಂಡಸ್ಟ್ರಿ . ಪಾರ್ಟ್ ೧- ಐಟಿ ಸೆಕ್ಟರ್ನ್ ಗ್ರೋಥ್ ಸ್ಟೋರಿ 2021 ರಲ್ಲಿ ಸೆಕ್ಟರ್ ದೇಶದ ಜಿಡಿಪಿ ಗೆ 7.7% ನ ಕೊಡುಗೆ ನೀಡಿತ್ತು. ಆದರೆ 2020 ರಲ್ಲಿ ಇದರ ಕೊಡುಗೆ 8% ನಷ್ಟಿತ್ತು, ಆ ಸಮಯದಲ್ಲಿ ಕ್ಲೌಡ್ ಬೇಸ್ಡ್ ಐಟಿ ಸೊಲ್ಯೂಷನ್ , ವರ್ಚುವಲ್ ಕಾನ್ಫರೆನ್ಸಿಂಗ್, ಮೊಬೈಲ್ ಬೇಸ್ಡ್ ಆಪ್ಸ್ ಗೆ ಹೆಚ್ಚಿನ ಬೇಡಿಕೆ ಇತ್ತು ಅನ್ನೋದನ್ನ ಕೂಡ ನೆನೆಸಿಕೊಳ್ಳ ಬೇಕು. ಈ ವರ್ಷ ಐಟಿ ಸೆಕ್ಟರನ ರೆವೆನ್ಯೂ 194 ಬಿಲಿಯನ್ USD ಇರಬಹುದು ಅಂತ ಅಂದಾಜಿಸಲಾಗ್ತಿದೆ. FY 2021 ರಲ್ಲಿ ಐಟಿ ಸೆಕ್ಟರ್ ರೆವೆನ್ಯೂ ಅನ್ನ ಪಡೆದ್ರೆ ವರ್ಷದಿಂದ ವರ್ಷಕ್ಕೆ 2.3% ನಷ್ಟು ಆದಾಯದಲ್ಲಿ ಏರಿಕೆ ಕಾಣಬಹುದು. ಭಾರತೀಯ ಖಾಸಗಿ ಷೇರು ಹೂಡಿಕೆದಾರಿಗೆ ಐಟಿ ಸೆಕ್ಟರ್ ಮೇಲೆ ಆಸಕ್ತಿ ಇದೆ. ಮೇ. 2020 ರಲ್ಲಿ ಸುಮಾರು 400 ಖಾಸಗಿ ಇಕ್ವಿಟಿ ವ್ಯವಹಾರಗಳು ಐಟಿ ಮತ್ತು ಬಿಪಿಎಂ ಕೇಂದ್ರಿತ ವಾಗಿದ್ದವು. ಇನ್ನು ವರ್ಷದ ಅಂತ್ಯದ ವೇಳೆಗೆ ಐಟಿ ಕ್ಷೇತ್ರದ ರಫ್ತಿನಲ್ಲಿ 1.9% ಬೆಳವಣಿಗೆಯನ್ನು ಕಾಣಬಹುದಾಗಿದೆ. ಇದು ನಿಜವಾದರೆ ನಮ್ಮ ಐಟಿ ರಫ್ತು ವರ್ಷಾಂತ್ಯಕ್ಕೆ 150 ಬಿಲಿಯನ್ ತಲುಪಲಿದೆ. ಪಾರ್ಟ್-೨ ಐಟಿ ಸೆಕ್ಟರ್ ಎನ್ವಿರಾನ್ಮೆಂಟ್ ಹೆಚ್ಚು ಹೆಚ್ಚು ವ್ಯವಹಾರಗಳು ಐಟಿ ಮತ್ತು ಅದರೊಳಗೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನ ಮೇಲಿನ ಅವಲಂಬನೆಯನ್ನು ಹೆಚ್ಚಿಸುತ್ತಿವೆ. ಈಗನೀವು ಟ್ರೇಡಿಂಗ್ ಮತ್ತು ಇನ್ವೆಸ್ಟ್ಮೆಂಟ್ ಆಪ್ ನಿಂದ ಮಾಡ್ತೀರಾ ಅಲ್ವಾ? ನೀವು ನಿಮ್ಮ ಬಿಲ್ಲ್ಗಳನ್ನ ಪಾವತಿಯನ್ನ ಸಹ ಆನ್‌ಲೈನ್ ಅಲ್ಲಿ ಮಾಡ್ತೀರಾ, ಬುಕಿಂಗ್ , ವಿಮೆ , ಶಾಪಿಂಗ್ , ಫೋಟೋಗಳನ್ನ ಕೂಡ ಆನ್‌ಲೈನ್ ಎಡಿಟ್ ಮಾಡ್ತೀರಾ ಅದಕ್ಕಾಗಿ ನೀವು ಎಐ ಆಧಾರಿತ ಅಪ್ಲಿಕೇಶನ್‌ಗಳನ್ನ ಬಳಸ್ತಿದ್ದೀರಿ…ಈ ಎಲ್ಲ ಬ್ಯುಸಿನೆಸ್ಸ್ಗಳು ಐಟಿ ಮೇಲೆ ಅವಲಂಬಿತವಾಗಿವೆ. ಭಾರತದಲ್ಲಿ ಹೆಚ್ಚುತ್ತಿರುವ ಸ್ಮಾರ್ಟ್‌ಫೋನ್‌ಗಳ ಬೇಡಿಕೆಯು ನಾವು ಈಗ ಮಾತನಾಡಿದ ಎಲ್ಲಾ ಸೇವೆಗಳಿಗೆ ಹೆಚ್ಚಿದ ಬೇಡಿಕೆಗೆ ಹೆಚ್ಚಿನ ಕೊಡುಗೆ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಗ್ಲೋಬಲ್ ಟ್ರೆಂಡ್ ಅನ್ನ ನೋಡಿ ಭಾರತೀಯ ಕಂಪನಿಗಳು ಸಹ ಕ್ಲೌಡ್ ಕಂಪ್ಯೂಟಿಂಗ್ ಮತ್ತು ಕ್ಲೌಡ್ ಬೇಸ್ಡ್ ಅಕೌಂಟಿಂಗ್ ಬಳಸಲು ತಯಾರಾಗಿವೆ. ಇದು ಪ್ರಿ-ಪ್ಯಾಂಡಮಿಕ್ ಗು ಮೊದಲು ಶುರುವಾಗಿತ್ತು. ವರ್ಕ್ ಫ್ರಮ್ ಹೋಂ ಭಾರತೀಯ ವ್ಯವಹಾರಗಳಲ್ಲಿ ಕ್ಲೌಡ್ ಕಂಪ್ಯೂಟಿಂಗ್ ಅಳವಡಿಸಿಕೊಳ್ಳುವುದನ್ನು ವೇಗಗೊಳಿಸಲು ನೆರವಾಯಿತು. ನಿಮಗೆ ಗೊತ್ತಿರಬಹುದು ಕ್ಲೌಡ್ ಕಂಪ್ಯೂಟಿಂಗ್ ಅಂದ್ರೆ ಕಂಪನಿಯ ಸರ್ವರ್ ಫಿಸಿಕಲ್ ಅಲ್ಲ ವರ್ಚ್ವಲ್ ಆಗಿ ಇರುತ್ತೆ. ಪಾರ್ಟ್ -೩ : ಐಟಿ ಕ್ಷೇತ್ರಕ್ಕೆ ಸರ್ಕಾರದ ಬೆಂಬಲ ಸರಕಾರ ಐಟಿ ವಲಯಗಳ ಟೆಕ್ ಪಾರ್ಕ್ ಮತ್ತು ಯಸ್.ಈ.ಝೆಡ್ ಗಳಿಗೆ ಎಕ್ಸ್ಟೆಂಡೆಡ್ ಟ್ಯಾಕ್ಸ್ ಹಾಲಿಡೇಸ್ ಇಂಟ್ರೊಡ್ಯೂಸ್ ಮಾಡಿದೆ . ನವೆಂಬರ್ 2020 ರಲ್ಲಿ ,ಬಿಪಿಓಗಳಿಗಾಗಿ ಸರ್ಕಾರವು ನಿಯಮಗಳನ್ನು ಸಡಿಲಗೊಳಿಸಿತು, ಅದು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅನುವು ಮಾಡಿ ಕೊಟ್ಟಿತು. ಲಾಕ್‌ಡೌನ್‌ಗಳು ಸಂಭವಿಸಿದಾಗ ಉದ್ಯಮವು ಆರಂಭದಲ್ಲಿ ಒಂದು ನಿಲುಗಡೆಗೆ ಬಂದಿತ್ತು. ಗಾರ್ಟ್ನರ್(Gartner) ಅನ್ನೋ ಒಂದು ಸಂಶೋಧನಾ ಸಂಸ್ಥೆ ಇದು ಐಟಿ ಸೆಕ್ಟರ್ ಅಲ್ಲಿ ಸ್ಪೇಸಿಯಲೈಜ್ಡ್(specialised ) ಆಗಿದೆ . ಈ ಕಂಪನಿಯ ಪ್ರಕಾರ ಸರಕಾರ ಐಟಿ ಸೆಕ್ಟರ್ ಮೇಲೆ 2021 ರಲ್ಲಿ 11.4% ನಿಂದ 7.3 ಬಿಲಿಯನ್ USD ವರೆಗೆ ಹೆಚ್ಚಾಗಲಿದೆ. ಪಾರ್ಟ್ -4 : ಐಟಿ ಕ್ಷೇತ್ರದ ಅಂದಾಜು ಬೆಳವಣಿಗೆ ಮತ್ತು ಸಾಮರ್ಥ್ಯ ಜಿಡಿಪಿಗೆ ಈ ವಲಯದ ಕೊಡುಗೆ 2025 ರ ವೇಳೆಗೆ 7.7% ರಿಂದ 10% ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ. ಐಬಿಇಎಫ್ ವರದಿಯ ಪ್ರಕಾರ, ಭಾರತ ಐಟಿ ವಲಯದಕ್ಕೆ 5 ಬಿಲಿಯನ್ ಡಾಲರ್ ಮೌಲ್ಯದ ಜಾಗತಿಕ ಹೂಡಿಕೆಗಳು ಬರುವ ನಿರೀಕ್ಷೆ ಇದೆ. ಈ ಹೂಡಿಕೆಗಳನ್ನ ಮುಂದಿನ 4 ವರ್ಷಗಳಲ್ಲಿ ನಿರೀಕ್ಷಿಸಲಾಗಿದೆ, ಅಂದರೆ 2025 ರ ಹೊತ್ತಿಗೆ. ಯುಎಸ್ಎ ಮತ್ತು ಯುಕೆ - ಭಾರತೀಯ ಐಟಿ ಸೇವೆಗಳ ಬೇಡಿಕೆಗೆ ಹೆಚ್ಚಿನ ಕೊಡುಗೆ ನೀಡುತ್ತವೆ, ವಿಶೇಷವಾಗಿ ಔಟ್ಸೊರ್ಸ್ ಫಸ್ಟ್ ಸರ್ವಿಸ್. ದೇಶಗಳ ಆರ್ಥಿಕ ಚೇತರಿಕೆಯೊಂದಿಗೆ, ಭಾರತದ ಐಟಿ ಕ್ಷೇತ್ರದಲ್ಲೂ ಬೆಳವಣಿಗೆ ಮತ್ತು ಆದಾಯದ ಬೆಳವಣಿಗೆಯ ಸಾಧ್ಯತೆ ಇದೆ. ಪ್ರಪಂಚದಾದ್ಯಂತದ ಐಟಿ ಸೇವೆಗಳಲ್ಲಿ ಮತ್ತು ಹೊರಗುತ್ತಿಗೆಯ ಐಟಿ ಸೇವೆಗಳಲ್ಲಿ, ಭಾರತದ ಕೊಡುಗೆ 50% ಕ್ಕಿಂತ ಹೆಚ್ಚು . ಈಗಂತೂ ಬಹಳಷ್ಟು ದೇಶಗಳಲ್ಲಿ ಆರ್ಥಿಕ ಬಿಕ್ಕಟ್ಟು ಇದೆ. ಹಾಗಾಗಿ ಪ್ರಪಂಚದಾದ್ಯಂತ ಕಂಪನಿಗಳು ನಿಷ್ಠೆಯನ್ನು ಬದಿಗಿಟ್ಟು ಕಡಿಮೆ ವೆಚ್ಚದ ಕುರಿತು ಗಮನ ಹರಿಸ ಬಹುದು. ಇದು ತಮ್ಮ ವ್ಯವಹಾರಗಳನ್ನು ಭದ್ರಗೊಳಿಸಲು ಕೆಲವು ಪರ್ಯಾಯ ಮಾರ್ಗಗಳು. ಇದರಿಂದ ಇಂಡಿಯನ್ ಐಟಿ ಸೇವೆಗಳಿಗೆ ಬೇಡಿಕೆ ಹೆಚ್ಚಳ ಆಗಬಹುದು. ಭಾರತದಲ್ಲಿನ ಐಟಿ ಸೇವೆಗಳ ವೆಚ್ಚವು ಕೆಲವು ದೇಶಗಳಿಗೆ ಹೋಲಿಸಿದರೆ 1/4 ಆಗಿದೆ. ಹಾಗಾದರೆ ನೀವು ಐಟಿ ಕ್ಷೇತ್ರದಲ್ಲಿ ಹೂಡಿಕೆ ಮಾಡಬೇಕೇ? ಇದಕ್ಕೆ ನೀವೇ ಈಗ ಉತ್ತರಿಸಬಹುದು. ನಿರ್ಧಾರ ತೆಗೆದುಕೊಳ್ಳುವ ಮೊದಲು ನಿಮ್ಮ ಅಪಾಯವನ್ನ ಎದುರಿಸುವ ಸಾಮರ್ಥ್ಯ ಮತ್ತು ನಿಮ್ಮ ಇನ್ವೆಸ್ಟ್ಮೆಂಟ್ ಹಾರಿಜಾನ್ ಅನ್ನು ಗಮನಿಸಿ. ಹಲವಾರು ಸ್ಟಾಕ್‌ಗಳನ್ನು ಶಾರ್ಟ್‌ಲಿಸ್ಟ್ ಮಾಡಿ ಮತ್ತು ಅವುಗಳ ತಾಂತ್ರಿಕ ವಿಶ್ಲೇಷಣೆ ಮಾಡಿದ ನಂತರ, ಸ್ಟಾಕ್ ನ್ಯಾಯಯುತ ಬೆಲೆಗೆ ಟ್ರೇಡ್ ಆಗ್ತಾ ಇದ್ಯಾ ಅಂತ ನೋಡಿ- ಜೊತೆಗೆ ಶೀಘ್ರದಲ್ಲೇ ತನ್ನ ಬೆಲೆಯನ್ನ ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೇಯ ನೋಡಿ. ಕಂಪನಿ ಉತ್ತಮ ಆದಾಯವನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆಯಾ ಎಂದು ನೀವೇ ನಿರ್ಣಯಿಸಲು 3 ರಿಂದ 5 ವರ್ಷಗಳ ಹಣಕಾಸು ದಾಖಲೆಗಳನ್ನ ಚೆಕ್ ಮಾಡಿ. ಈ ಪಾಡ್ಕ್ಯಾಸ್ಟ್ ಅನ್ನು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ ಮಾಡಲಾಗಿದೆ ಮತ್ತು ಹೂಡಿಕೆದಾರರು ತಮ್ಮದೇ ಆದ ಸಂಶೋಧನೆ ಮಾಡಬೇಕು. ಸರಿ ಸ್ನೇಹಿತರೆ ಈ ಪೋಡ್ ಕ್ಯಾಸ್ಟ್ ಅನ್ನ ಇಲ್ಲಿಗೆ ಮುಗಿಸ್ತಾ ಇದೀವಿ. ಮುಂದಿನ ಪೋಡ್ ಕ್ಯಾಸ್ಟ್ ಅಲ್ಲಿ ಇನ್ನೂ ಹೆಚ್ಚಿನ ಸೆಕ್ಟರ್ ಅನ್ನ ಡಿಸ್ಕಸ್ ಮಾಡೋಣ. ಸೊ ಸ್ಟೇ ಟ್ಯೂನ್ಡ್,ಸ್ಟೇ ಅಪ್ಡೇಟೆಡ್, ಅಂಡ್ ಮೋಸ್ಟ ಇಂಪೋರ್ಟೆನ್ ಟ್ಲಿ ಸ್ಟೇ ಹ್ಯಾಪಿ! ಯೂಟ್ಯೂಬ್ ಮತ್ತು ಇತರ ಸಾಮಾಜಿಕ ಮಾಧ್ಯಮ ಚಾನೆಲ್‌ಗಳ ಮೂಲಕ ಇಂತಹ ಇನ್ನಷ್ಟು ಆಸಕ್ತಿದಾಯಕ ಪಾಡ್‌ಕಾಸ್ಟ್‌ಗಳಿಗಾಗಿ ನಮ್ಮನ್ನು ಫಾಲೋ ಮಾಡಿ. ಅಲ್ಲಿಯವರೆಗೆ ಗುಡ್ ಬೈ ಮತ್ತು ಹ್ಯಾಪಿ ಇನ್ವೆಸ್ಟಿಂಗ್! ಸೆಕ್ಯುರಿಟೀಸ್ ಮಾರುಕಟ್ಟೆಯಲ್ಲಿನ ಹೂಡಿಕೆಗಳು ಮಾರುಕಟ್ಟೆಯ ಅಪಾಯಗಳಿಗೆ ಒಳಪಟ್ಟಿರುತ್ತವೆ. ಹೂಡಿಕೆ ಮಾಡುವ ಮೊದಲು ಎಲ್ಲಾ ಸಂಬಂಧಿತ ದಾಖಲೆಗಳನ್ನು ಎಚ್ಚರಿಕೆಯಿಂದ ಓದಿ.