Debunking X myths surrounding trading | Kannada

Podcast Duration: 6:50
ಟ್ರೇಡಿಂಗ್ ನ ಸುತ್ತ ಇರುವ ಐದು ನಂಬಿಕೆಗಳನ್ನ(myths) ತೆಗೆದು ಹಾಕುವುದು. ನಮಸ್ತೆ ಸ್ನೇಹಿತರೆ. ಏಂಜಲ್ ಒನ್ ನ ಈ ಪಾಡ್ಕ್ಯಾಸ್ಟ್ ಗೆ ನಿಮಗೆ ಸ್ವಾಗತ. ನೀವು ಮೊದಲ ಬಾರಿಗೆ ನಮ್ಮ ಪಾಡ್ಕ್ಯಾಸ್ಟ್ಅನ್ನ ಕೇಳ್ತಿದ್ರೆ ನಿಮಗೆ ಬೋರ್ಡ್ ಗೆ ಸ್ವಾಗತ. ಇಲ್ಲಿ ನಾವು ಕಾಂಪ್ಲೆಕ್ಸ್ ಸ್ಟಾಕ್ ಮಾರ್ಕೆಟ್ ವಿಷಯಗಳನ್ನು ಸರಳಗೊಳಿಸಿ, ಈಗತಾನೇ ಇನ್ವೆಸ್ಟ್ಮೆಂಟ್ ಆರಂಭಿಸಲು ಮುಂದಾಗಿರುವ ಟ್ರೇಡರ್ಸ್ ಗೆ ಅಗತ್ಯವಿರುವ ಮೂಲ ಶಿಕ್ಷಣವನ್ನು ನೀಡುತ್ತೇವೆ. ಹಾಗೆಯೆ ನೀವು ನಮ್ಮ ರೆಗ್ಯುಲರ್ ಕೇಳುಗರಲ್ಲಿ ಒಬ್ಬರಾಗಿದ್ರೆ ವೆಲ್ಕಮ್ ಬ್ಯಾಕ್. ನಮ್ಮ ಈ ಪಾಡ್‌ಕಾಸ್ಟ್‌ಗಳು ನಿಮಗೆ ಉಪಯೋಗ ಆಗ್ತಾ ಇರೋದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಇವತ್ತಿನ ಈ ಪಾಡ್ಕ್ಯಾಸ್ಟ್ ನಲ್ಲಿ ನಾವು ಟ್ರೇಡಿಂಗ್ ನ ಕುರಿತಾಗಿ ಇರುವ ಕೆಲವೊಂದು MYTH ಗಳನ್ನ ತಿಳಿಯೋಣ. ಬಿಗಿನರ್ ಟ್ರೇಡರ್ ಆಗಿ ನೀವು ಟ್ರೆಅಡಿಂಗ್ ಬಗ್ಗೆ ಒಳ್ಳೆಯದು ಹಾಗು ಕೆಟ್ಟದ್ದು ಎರಡನ್ನೂ ಕೇಳಿರಬಹುದು. ಈಗ ಇವೆಲ್ಲಾ ರೂಮರ್ ಗಳ ಹಿಂದೆ ಇರುವ ಸತ್ಯವನ್ನ ತಿಳಿದುಕೊಳ್ಳೋಣ. ರೂಮರ್ಸ್: MYTH ನಂಬರ್ 1: ರಾತ್ರೋರಾತ್ರಿ ಶ್ರೀಮಂತರಾಗುವ ಸ್ಥಳವೆಂದರೆ ಷೇರು ಮಾರುಕಟ್ಟೆ, ಆದರೆ ಇದು ತದ್ವಿರುದ್ದ ವಾಗಿದೆ . MYTH ನಂಬರ್ 2: ಸ್ಟಾಕ್ ಮಾರ್ಕೆಟ್ನಲ್ಲಿ ಎಲ್ಲಾ ಹಣವನ್ನ ಕಳೆದುಕೊಳ್ಳುತ್ತೀರಿ MYTH ನಂಬರ್ 1 ಮತ್ತು MYTH ನಂಬರ್ 2 ಒಂದಕ್ಕೊಂದು ಸಂಬಂಧ ಪಟ್ಟದ್ದೆ ಆಗಿರೋದ್ರಿಂದ ಅವೆರಡನ್ನು ಕಡೆಗಣಿಸಬಹುದಾಗಿದೆ. ಸ್ಟಾಕ್ ಮಾರ್ಕೆಟ್ನಲ್ಲಿ ನಿದಾನವಾಗಿ ನೀವು ನಿಮ್ಮ ಹಣವನ್ನ ಹೆಚ್ಚು ಮಾಡಿಕೊಳ್ಳ ಬಹುದಾಗಿದೆ. ಹೌದು, ನೀವು ಹೆಚ್ಚಿನ ಅಪಾಯವನ್ನು ತೆಗೆದುಕೊಳ್ಳುವ ಮೂಲಕ ದೊಡ್ಡ ಲಾಭವನ್ನು ನಿಮ್ಮ ಗುರಿಯಾಗಿಸಿ ಕೊಳ್ಳಬಹುದು ಆದರೆ ಹೆಚ್ಚಿನ ಅಪಾಯದ ಷೇರುಗಳಲ್ಲಿ ಹೂಡಿಕೆ ಮಾಡುವುದರಿಂದ ಇದು ನಷ್ಟಕ್ಕೂ ಕಾರಣವಾಗಬಹುದು. ಈ ಎಲ್ಲಾ ನಾಟಕೀಯ ಕಥೆಗಳು ಮತ್ತು ರಾತ್ರೋರಾತ್ರಿ ಸ್ಟಾಕ್ ಮಾರ್ಕೆಟ್ ಅಥವಾ ಷೇರು ಮಾರುಕಟ್ಟೆಯಲ್ಲಿ ಎಲ್ಲವನ್ನೂ ಕಳೆದುಕೊಳ್ಳುವ ಬಗ್ಗೆ ಇರುವ ಊಹೆಗಳು ಇವೆಲ್ಲವೂ ಹೈ ರಿಸ್ಕ್ ಸ್ಟಾಕ್ಸ್ ಗೆ ಸಂಬಂಧಿಸಿದ್ದಾಗಿದೆ. ಆದರೆ, ಇದು ಟ್ರೇಡಿಂಗ್ ಗೆ ಇರುವ ಏಕೈಕ ಮಾರ್ಗವಲ್ಲ. ಒಬ್ಬ ಬುದ್ಧಿವಂತ ಮತ್ತು ಸೇಫ್ ಟ್ರೇಡರ್ ಯಾವಾಗಲೂ ಸರಿಯಾದ ಸಂಶೋಧನೆಯ ಆಧಾರದ ಮೇಲೆ ಸ್ಟಾಕ್‌ಗಳನ್ನು ಆಯ್ಕೆ ಮಾಡಬಹುದು. ಟ್ರೇಡಿಂಗ್ನಲ್ಲಿ, ಕೆಲವು ಅಪಾಯ ನಿರ್ವಹಣಾ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಬರುವ ಅಪಾಯವನ್ನು ಕಡಿಮೆ ಮಾಡುವುದು ಹೆಚ್ಚು ಸೂಕ್ತ. ಸ್ಟಾಪ್ ಲಾಸ್ ಅನ್ನ ಸೆಟ್ ಮಾಡೋದಕ್ಕೆ ಮರೆಯದಿರಿ: ಅಂದರೆ ನೀವು ಒಂದು ಶೇರ್ ಅನ್ನ 100 ರೂಪಾಯಿಗೆ ಖರೀದಿ ಮಾಡಿದ್ದರೆ ನೀವು ಅದರ ಸ್ಟಾಪ್ ಲಾಸ್ ಅನ್ನ 98 ರೂಪಾಯಿಗೆ ಸೆಟ್ ಮಾಡಿ. ಯಾಕಂದ್ರೆ ಶೇರ್ ಪ್ರೈಸ್ ಸೆಟ್ ಮಾಡೋದ್ರಿಂದ ನಿಮ್ಮ ನಷ್ಟ 2 ರೂಪಾಯಿಗಿಂತ ಹೆಚ್ಚಾಗಲು ಸಾಧ್ಯ ಇಲ್ಲ. ಯಾವಾಗ ಶೇರ್ ಪ್ರೈಸ್ 98 ರುಪಾಯಿಗೆ ಇಳಿಯುತ್ತೋ ಆಗ ನಿಮ್ಮ ಶೇರ್ ಸೇಲ್ ಆಗುತ್ತದೆ. ಈಗ ಹೇಳಿ ನೀವು ಹೇಗೆ ನಿಮ್ಮ ಪೂರ್ತಿ ಹಣವನ್ನ ಕಳೆದುಕೊಳ್ಳುತ್ತೀರಿ? ಸ್ಟಾಕ್ ಅನ್ನ ಎಚ್ಚರಿಕೆಯಿಂದ ಆರಿಸಿಕೊಳ್ಳಿ: ಸ್ಟಾಕ್ ಅನ್ನ ರೂಮರ್ ಅಥವಾ ಹೆಡ್ಲೈನ್ಸ್, ಎಕ್ಸ್ಪರ್ಟ್ ಗಳ ಸಲಹೆಯ ಮೇರೆಗೆ ಆಯ್ಕೆ ಮಾಡಿಕೊಳ್ಳಬೇಡಿ. ಯಾವ ಕಂಪನಿಯ ಲಾಸ್ ಕಮ್ಮಿ ಇದ್ದು ಲಾಭ ಜಾಸ್ತಿ ಇದ್ಯೋ ಅಂತ ಕಂಪನಿಯ ಮೇಲೆ ಹೂಡಿಕೆ ಮಾಡುವುದು ಸೂಕ್ತ. ಹಾಗೆ ಯಾವ ಕಂಪನಿ ಪಾಪ್ಯುಲರ್ ಪ್ರಾಡಕ್ಟ್ ಮತ್ತು ಸರ್ವಿಸ್ ಅಲ್ಲಿ ಸ್ಟ್ರಾಂಗ್ ಇದ್ಯೋ ಅಂತಹ ಕಂಪನಿಯ ಮೇಲೆ ಇನ್ವೆಸ್ಟ್ ಮಾಡುವುದರಿಂದ ಹೆಚ್ಚಿನ ಅರ್ನಿಂಗ್ಸ್ ಮಾಡುವ ಸಾಧ್ಯತೆ ಇದೆ. ಲಾಂಗ್ ಟರ್ಮ್ ಗಾಗಿ ಇನ್ವೆಸ್ಟ್ ಮಾಡಿ: ಹೊಸ ಹೂಡಿಕೆದಾರರಿಗೆ ಡೇ ಟ್ರೇಡಿಂಗ್ ರಿಸ್ಕಿ ಆಗಿರುತ್ತದೆ. ಇಲ್ಲಿ ನೀವು ಸ್ಟಾಕ್ ಅನ್ನ ಓವರ್ ನೈಟ್ ಹೋಲ್ಡ್ ಮಾಡೋದಕ್ಕೆ ಸಾಧ್ಯ ಇಲ್ಲ. ಯಾಕಂದ್ರೆ ದಿನದ ಅಂತ್ಯದಲ್ಲಿ ನಿಮಗೆ ಇಷ್ಟ ಇರಲಿ ಇಲ್ಲದಿರಲಿ ಅಥವಾ ಸ್ಟಾಕ್ ಪ್ರೈಸ್ ಜಾಸ್ತಿ ಆಗಿರಲಿ ಅಥವಾ ಆಗದೆ ಇರಲಿ ನೀವು ಸ್ಟಾಕ್ ಅನ್ನ ಸೆಲ್ ಮಾಡಲೇ ಬೇಕು. ಆದರೆ ಸ್ನೇಹಿತರೆ, ದೀರ್ಘಾವಧಿಯಲ್ಲಿ ಅಪಾಯದ ಸಾಧ್ಯತೆ ಹೆಚ್ಚಿರುತ್ತದೆ. ಹೌದು ಒಂದೇ ದಿನದಲ್ಲಿ ಸ್ಟಾಕ್ ಬೆಲೆಯಲ್ಲಿ ಏರಿಳಿತಗೊಳ್ಳುತ್ತದೆ. ಹಾಗಾಗಿ, ಈಗ ನೀವೇ ಸ್ವತಃ ಯಾವುದೇ ಸ್ಟ್ರಾಂಗ್ ಕಂಪನಿಯ ದೀರ್ಘಾವಧಿಯ ಸ್ಟಾಕ್ ನ ಬೆಲೆಯ ಗ್ರಾಫ್ ಅನ್ನು ನೋಡಿ. ದೀರ್ಘಾವಧಿಯಲ್ಲಿ ಬೆಲೆ ಯ ಏರಿಳಿತ ಇದೆ ಅಲ್ವಾ? MYTH ನಂಬರ್ 3: ಟ್ರೇಡಿಂಗ್ ಮಾಡ್ಬೇಕಾದ್ರೆ ನೀವು ಇಡೀ ದಿನ ಇದಕ್ಕಾಗಿಯೇ ಮೀಸಲಿಡಬೇಕು ಮತ್ತು ನಿಮ್ಮ ಕೆಲಸವನ್ನ ಬಿಡಬೇಕಾಗುತ್ತೆ. ಈ ರೂಮರ್ ಎಲ್ಲಾ ಕಡೆ ಇದೆ ಆದರೆ ನೀವು ಬೇರೆ ಕಡೆ ಇನ್ವೆಸ್ಟ್ ಮಾಡೋದಕ್ಕೆ ನಿಮ್ಮ ಕೆಲಸವನ್ನ ಬಿಡುತ್ತೀರಾ? ಅದು ಫಿಕ್ಸೆಡ್ ಡೆಪಾಸಿಟ್ ಆಗಿರಲಿ, ಅಥವಾ ಪಿ ಪಿಎಫ್, ಮ್ಯೂಚುಯಲ್ ಫಂಡ್ಸ್.... ಯಾವುದೇ ಇರಲಿ, ನೀವು ಇದರಲ್ಲಿ ಇನ್ವೆಸ್ಟ್ ಮಾಡೋದಕ್ಕೆ ನಿಮ್ಮ ಕೆಲಸವನ್ನ ಬಿಡೋದಿಲ್ಲ ಅಲ್ವ? ಹೌದು, ಟ್ರೇಡಿಂಗ್ ಅನ್ನ ಪೂರ್ಣ ಸಮಯದ ಉದ್ಯೋಗವಾಗಿ ಆಯ್ಕೆ ಮಾಡಿದ ಜನರಿದ್ದಾರೆ, ಆದರೆ ಅದು ಕಡ್ಡಾಯವಲ್ಲ. ನೀವು ನಿಮ್ಮ ಕೆಲಸದ್ಲಲಿದ್ದುಕೊಂಡೇ ಸ್ಟಾಕ್ ಮಾರ್ಕೆಟ್ ಅಲ್ಲಿ ಇನ್ವೆಸ್ಟ್ ಮಾಡಬಹುದು. ನೀವು ಕಚೇರಿ ಸಮಯದ ನಂತರ ಅಥವಾ ವಾರಾಂತ್ಯದಲ್ಲಿ ಕಂಪನಿಗಳ ಕುರಿತು ಸಂಶೋದನೆ ಮಾಡ ಬಹುದು ಮತ್ತು ನಿಮಗೆ ವಿಶ್ವಾಸವಿದ್ದಾಗ, ಕ್ಷಣಾರ್ಧದಲ್ಲಿ ಸ್ಟಾಕ್ ಅನ್ನ ಖರೀದಿ ಮಾಡಬಹುದು. ಹಲವು ವರ್ಷಗಳ ಹಿಂದೆ ಆಫ್‌ಲೈನ್ ಟ್ರೇಡಿಂಗ್ ಜಟಿಲವಾಗಿತ್ತು ಆದರೆ ಇಂದು ಆನ್‌ಲೈನ್ ಟ್ರೇಡಿಂಗ್‌ನೊಂದಿಗೆ ನೀವು ನಿಮ್ಮ ಸ್ಮಾರ್ಟ್‌ಫೋನ್ ಮತ್ತು ಇಂಟರ್ನೆಟ್ ಸಂಪರ್ಕವನ್ನು ಹೊಂದಿದ್ದರೆ ಎಲ್ಲಿಂದಲಾದರೂ ಸ್ಟಾಕ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬಹುದು. ಆದರೆ ನೀವು ಡೇ ಟ್ರೇಡಿಂಗ್ ಮಾಡಬಯಸಿದ್ದರೆ ನೀವು ಅದನ್ನ ದಿನದ ಆರಂಭದಲ್ಲೇ ಮಾಡಿ ಅದನ್ನ ಬೇಗ ಕ್ಲೋಸ್ ಮಾಡಬಹುದು. ( ಇದರ ಅರ್ಥ ನೀವು ಕೆಲಸಕ್ಕೆ ಹೋಗುವ ಮೊದಲು ನೀವು ಖರೀದಿಸಿದ ಎಲ್ಲಾ ಷೇರುಗಳನ್ನು ನೀವು ಮಾರುತ್ತೀರಿ). MYTH ನಂಬರ್ 4: ಟ್ರೇಡಿಂಗ್ ಗಾಗಿ ನಿಮಗೆ ಹೆಚ್ಚಿನ ಕಂಪ್ಯೂಟರ್‌ಗಳು ಮತ್ತು ಸಂಪೂರ್ಣ ಸೆಟ್ ಅಪ್ ಅಗತ್ಯವಿದೆ. ಅದರೆ ಇದು ಆಪ್‌ಗಳಲ್ಲಿ ಟ್ರೇಡಿಂಗ್ ಮಾಡುವ ಮುನ್ನ ನಿಜವಾಗಿತ್ತು ಮತ್ತು ವಾಸ್ತವವಾಗಿ ಕೆಲವು ಪ್ರೊಫೆಷನಲ್ ಡೇ- ಟ್ರೇಡರ್ಸ್ ಸೆಕೆಂಡಿಗೆ ಮಲ್ಟಿಪಲ್ ಸ್ಟಾಕ್ ಬೆಲೆ ಯ ಗ್ರಾಫ್‌ಗಳ ಮೇಲೆ ಕಣ್ಣಿಡಲು ಇಂತಹ ಸೆಟಪ್ ಅನ್ನು ಅಳವಡಿಸಿಕೊಳ್ಳುತ್ತಿದ್ದರು. ಈ ರೀತಿಯ ವ್ಯಾಪಾರಿಗಳು ಸಣ್ಣ ಬೆಲೆಯ ಬದಲಾವಣೆಗಳನ್ನು ಬೆನ್ನಟ್ಟುತ್ತಾರೆ ಮತ್ತು ಅವರು ದೊಡ್ಡ ಪ್ರಮಾಣದಲ್ಲಿ ಟ್ರೇಡ್ ಮಾಡುವ ಮೂಲಕ ತಮ್ಮ ಗಳಿಕೆಯನ್ನು ಮಾಡುತ್ತಾರೆ.ಆದರೆ ಹಾಗೆ ಟ್ರೇಡ್ ಮಾಡುವುದು ಕಡ್ಡಾಯವಲ್ಲ.ದೀರ್ಘಾವಧಿಯ ಹೂಡಿಕೆ ಆಧಾರಿತ ಷೇರು ಮಾರುಕಟ್ಟೆಯ ಹೂಡಿಕೆಗೆ, ಒಂದು ಸ್ಮಾರ್ಟ್ಫೋನ್ ಸಾಕು. MYTH ನಂಬರ್ 5: ನೀವು ನಷ್ಟದಲ್ಲಿ ಷೇರುಗಳನ್ನ ಮಾರಾಟ ಮಾಡುತ್ತಿದ್ದರೂ ಸಹ , ಮಾರುಕಟ್ಟೆ ಕುಸಿದಾಗ ಮತ್ತು ಜನರು ಸ್ಟಾಕ್ ಅನ್ನು ಮಾರಾಟ ಮಾಡುವಾಗ ನೀವು ಕೂಡ ಮಾರಾಟ ಮಾಡಬೇಕು. ಷೇರು ಮಾರುಕಟ್ಟೆಯು ವಿವಿಧ ಶಕ್ತಿಗಳಿಂದ ಪ್ರಭಾವಿತವಾಗಿದೆ ಮತ್ತು ಇನ್ವೆಸ್ಟರ್ಸ್ ಇದರ ಕುರಿತು ತುಂಬಾ ಭಾವನಾತ್ಮಕವಾಗಿರುತ್ತಾರೆ. ಭಯದ ಕಾರಣದಿಂದ ಯಾವುದೇ ಒಳ್ಳೆಯ ಕಾರಣವಿಲ್ಲದೆ ಅನೇಕ ಜನರು ಸ್ಟಾಕ್ಗಳನ್ನ ಮಾರಾಟ ಮಾಡುತ್ತಾರೆ. ನೀವು ಹೂಡಿಕೆ ಮಾಡಿದ ಕಂಪನಿಗಳ ನಡವಳಿಕೆಗೆ ಗಮನ ಕೊಡಿ ಮತ್ತು ನಿಮ್ಮ ಗುರಿಗಳ ಕಡೆ ಗಮನ ಕೊಡಿ ಮತ್ತು ಯಾವುದೇ ಜರ್ಕ್ ರಿಯಾಕ್ಷನ್ ಅನ್ನ ತಪ್ಪಿಸಿ. ಹೆಚ್ಚಿನ ಸಂದರ್ಭಗಳಲ್ಲಿ - ವಿಶೇಷವಾಗಿ ನ್ಯೂಸ್ ಗೆ ಅತಿಯಾಗಿ ಪ್ರತಿಕ್ರಿಯಿಸುವ ಜನರಿಗೆ - ನೆನಪಿಡಿ ಮಾರುಕಟ್ಟೆ ಕೆಲವೇ ದಿನಗಳಲ್ಲಿ ಪುಟಿಯುತ್ತದೆ. ಆದರೆ ನೀವು ಹೂಡಿಕೆ ಮಾಡಿರುವ ಕಂಪನಿಗಳು ತೊಂದರೆಗೆ ಸಿಲುಕಿದ್ದರೆ ನೀವು ನಿಮ್ಮ ಷೇರುಗಳನ್ನ ಮಾರಾಟ ಮಾಡಬೇಕಾಗಬಹುದು. ಮತ್ತೊಮ್ಮೆ ಹೇಳುತ್ತಿದ್ದೇನೆ - ನಿಮ್ಮ ಹೂಡಿಕೆ ಮಾಡಿದ ಕಂಪನಿಗಳ ಆದಾಯ ಮತ್ತು ಖರ್ಚು, ಲಾಭ ಮತ್ತು ನಷ್ಟ ಮತ್ತು ಇವುಗಳ ಬಗ್ಗೆ ಗಮನ ಕೊಡಿ. ಸ್ಟಾಕ್ ಹೂಡಿಕೆ ಮಾಡಲು ಯೋಗ್ಯವಾಗಿದೆಯೇ ಎಂದು ನಿರ್ಧರಿಸಲು ಪಿ/ಇ ರೇಶಿಯೋ ಅಂದರೆ ಪ್ರೈಸ್ ಟು ಅರ್ನಿಂಗ್ ರೇಶಿಯೋ ವನ್ನ ಹೇಗೆ ಬಳಸುವುದು ಎಂದು ತಿಳಿಯಿರಿ. ಕ್ಲೋಸಿಂಗ್ ರಿಮಾರ್ಕ್ನಲ್ಲಿ, ನಾನು ಹೇಳೋದು ಏನಂದ್ರೆ ಟ್ರೇಡ್ ಮಾಡುವಾಗ, ನೀವು ನಿಮ್ಮ ಸ್ವಂತ ಸಂಶೋಧನೆಯನ್ನು ಎಚ್ಚರಿಕೆಯಿಂದ ಮಾಡುವುದು ಅತ್ಯಗತ್ಯ. Technical indicator ಮತ್ತು P/E ratioದಂತಹ ಸಾಧನಗಳನ್ನು ಬಳಸಿಕೊಂಡು ನೀವು ನಿಮ್ಮ ಖರೀದಿ ಸಮಯವನ್ನು ಸಹ ನೀವು ನಿರ್ಧರಿಸಬಹುದು. ಇದನ್ನ ಹೇಗೆ ಬಳಸುವುದು ಅಂತ ತಿಳಿಯಿರಿ. ಮತ್ತೆ ಹೌದು, ಸ್ಟಾಕ್ ಮಾರ್ಕೆಟ್ ಶಿಕ್ಷಣವು ಬಹಳ ಮುಖ್ಯವಾಗಿದೆ. ನೀವು ಪಾಡ್‌ಕಾಸ್ಟ್‌ಗಳನ್ನ ಟ್ಯೂನಿಂಗ್ ಮಾಡುವ ಕೆಲಸವನ್ನು ಮುಂದುವರಿಸಿ ಮತ್ತು ಮಾರುಕಟ್ಟೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ನಿಮ್ಮ ತಿಳುವಳಿಕೆಯನ್ನು ಹೆಚ್ಚಿಸಿ.ಈ ಪಾಡ್‌ಕ್ಯಾಸ್ಟ್ ಅನ್ನು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ ಮಾಡಲಾಗಿದೆ ಮತ್ತು ಆದರೆ ಇನ್ವೆಸ್ಟರ್ ಆಗಿ ನೀವು ನಿಮ್ಮ ಸ್ವಂತ ಸಂಶೋಧನೆಯನ್ನೂ ಮಾಡಬೇಕು. Risk appetite ಕುರಿತು ಚಿಂತನೆ ಮಾಡಿ ಟ್ರೇಡ್ ಮಾಡಿ. ಮತ್ತು ದೈನಂದಿನ ಜೀವನ ವೆಚ್ಚಗಳಿಗಾಗಿ ನೀವು ಸಾಕಷ್ಟು ಬದಿಗಿರಿಸಿದ ನಂತರ ಉಳಿದಿರುವ ಬಂಡವಾಳದೊಂದಿಗೆ ಯಾವಾಗಲೂ ಟ್ರೇಡ್ ಮಾಡಿ.ಸೆಕ್ಯುರಿಟೀಸ್ ಮಾರುಕಟ್ಟೆಗಳಲ್ಲಿನ ಹೂಡಿಕೆಗಳು ಮಾರುಕಟ್ಟೆಯ ಅಪಾಯಗಳಿಗೆ ಒಳಪಟ್ಟಿರುತ್ತವೆ. ಹೂಡಿಕೆ ಮಾಡುವ ಮೊದಲು ಎಲ್ಲಾ ಸಂಬಂಧಿತ ದಾಖಲೆಗಳನ್ನು ಎಚ್ಚರಿಕೆಯಿಂದ ಓದಿ. ​ ​ ​ ​