ತೆರಿಗೆ ರಿಟರ್ನ್ ಮತ್ತು ತೆರಿಗೆ ರಿಫಂಡ್ ನಡುವಿನ ವ್ಯತ್ಯಾಸ

ತೆರಿಗೆ ರಿಟರ್ನ್ ವರ್ಸಸ್ ತೆರಿಗೆ ರಿಫಂಡ್: ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಿ! ತೆರಿಗೆ ರಿಟರ್ನ್ ಎಂದರೆ ಆದಾಯವನ್ನು ವರದಿ ಮಾಡಲು ಮತ್ತು ತೆರಿಗೆ ಹೊಣೆಗಾರಿಕೆಯನ್ನು ಲೆಕ್ಕ ಹಾಕಲು ದಾಖಲೆ ಸಲ್ಲಿಸುವುದು. ತೆರಿಗೆ ರಿಫಂಡ್ ಪಾವತಿಸಲಾದ ಹೆಚ್ಚುವರಿ ತೆರಿಗೆಗಳ ಮರುಪಾವತಿಯಾಗಿದೆ.

ತೆರಿಗೆಗಳ ಬಗ್ಗೆ ವಿವರಗಳು ಸಾಮಾನ್ಯವಾಗಿ ಅಗಾಧವಾಗಿರಬಹುದು, ಇದು ಸಂಕೀರ್ಣ ಪದಗಳು ಮತ್ತು ಪ್ರಕ್ರಿಯೆಗಳನ್ನು ಹೊಂದಿರುವುದರಿಂದ, ಅನೇಕ ವ್ಯಕ್ತಿಗಳು ಇದನ್ನು ಕಷ್ಟವೆಂದು ಅಂದುಕೊಳ್ಳುತ್ತಾರೆ. ಗೊಂದಲಕ್ಕೆ ಕಾರಣವಾಗುವ ಎರಡು ಪದಗಳು “ತೆರಿಗೆ ರಿಟರ್ನ್” ಮತ್ತು “ತೆರಿಗೆ ರಿಫಂಡ್” ಆಗಿರುತ್ತವೆ. ಈ ಪರಿಕಲ್ಪನೆಗಳು ಒಂದೇ ರೀತಿಯಾಗಿ ಕಾಣಬಹುದಾದರೂ, ಅವುಗಳು ತೆರಿಗೆ ವ್ಯವಸ್ಥೆಯ ವಿವಿಧ ಅಂಶಗಳನ್ನು ಸೂಚಿಸುತ್ತವೆ. ತೆರಿಗೆಗಳೊಂದಿಗೆ ವ್ಯವಹರಿಸುವ ಪ್ರತಿಯೊಬ್ಬರೂ ತೆರಿಗೆ ರಿಟರ್ನ್ಸ್ ಮತ್ತು ತೆರಿಗೆ ರಿಫಂಡ್‌ಗಳ ನಡುವಿನ ಮೂಲಭೂತ ವ್ಯತ್ಯಾಸವನ್ನು ತಿಳಿದುಕೊಳ್ಳಬೇಕು. ಈ ಲೇಖನದಲ್ಲಿ, ತೆರಿಗೆ ರಿಟರ್ನ್ಸ್ ವರ್ಸಸ್ ತೆರಿಗೆ ರಿಫಂಡ್‌ಗಳ ಬಗ್ಗೆ ವಿವರವಾಗಿ ತಿಳಿಯಿರಿ.

ತೆರಿಗೆ ರಿಟರ್ನ್ ಎಂದರೇನು?

ಭಾರತದಲ್ಲಿ, ತೆರಿಗೆ ರಿಟರ್ನ್ ಎನ್ನುವುದು ವ್ಯಕ್ತಿಗಳು, ವ್ಯವಹಾರಗಳು ಅಥವಾ ಇತರ ಘಟಕಗಳು ತಮ್ಮ ಆದಾಯ, ಕಡಿತಗಳು ಮತ್ತು ಇತರ ಹಣಕಾಸಿನ ವಿವರಗಳನ್ನು ನಿರ್ದಿಷ್ಟ ಮೌಲ್ಯಮಾಪನ ವರ್ಷಕ್ಕೆ ವರದಿ ಮಾಡಲು ಭಾರತದ ಆದಾಯ ತೆರಿಗೆ (ಐಟಿ (IT)) ಇಲಾಖೆಗೆ ಸಲ್ಲಿಸುವ ಔಪಚಾರಿಕ ದಾಖಲೆಯನ್ನು ಉಲ್ಲೇಖಿಸುತ್ತದೆ. ಈ ಡಾಕ್ಯುಮೆಂಟನ್ನು ಆದಾಯ ತೆರಿಗೆ ರಿಟರ್ನ್ (ಐಟಿಆರ್ (ITR)) ಎಂದು ಕರೆಯಲಾಗುತ್ತದೆ ಮತ್ತು ಭಾರತೀಯ ಆದಾಯ ತೆರಿಗೆ ಕಾಯ್ದೆಯ ನಿಬಂಧನೆಗಳಿಗೆ ಅನುಗುಣವಾಗಿ ತೆರಿಗೆದಾರರು ಸಲ್ಲಿಸಬೇಕಾಗುತ್ತದೆ.

ಐಟಿಆರ್ (ITR0 ವಿವಿಧ ಮೂಲಗಳಿಂದ ತೆರಿಗೆದಾರರ ಆದಾಯ, ಕ್ಲೈಮ್ ಮಾಡಲಾದ ಕಡಿತಗಳು, ಪಾವತಿಸಿದ ತೆರಿಗೆಗಳು ಮತ್ತು ಇತರ ಯಾವುದೇ ಸಂಬಂಧಿತ ಹಣಕಾಸಿನ ವಿವರಗಳಂತಹ ಮಾಹಿತಿಯನ್ನು ಒಳಗೊಂಡಿದೆ. ತೆರಿಗೆದಾರರು ತಮ್ಮ ಆದಾಯವನ್ನು ನಿಖರವಾಗಿ ವರದಿ ಮಾಡಲು ಮತ್ತು ಚಾಲ್ತಿಯಲ್ಲಿರುವ ತೆರಿಗೆ ಕಾನೂನುಗಳ ಆಧಾರದ ಮೇಲೆ ಅವರಿಗೆ ನೀಡಬೇಕಾದ ತೆರಿಗೆ ಹೊಣೆಗಾರಿಕೆ ಅಥವಾ ರಿಫಂಡ್ ಅನ್ನು ಲೆಕ್ಕ ಹಾಕಲು ಇದು ಸಹಾಯ ಮಾಡುತ್ತದೆ.

ಆದಾಯ ತೆರಿಗೆ ಇಲಾಖೆಯು ತೆರಿಗೆದಾರರ ತೆರಿಗೆ ಹೊಣೆಗಾರಿಕೆಯನ್ನು ನಿರ್ಣಯಿಸಲು, ತೆರಿಗೆ ನಿಯಮಾವಳಿಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಯಾವುದೇ ಹೆಚ್ಚುವರಿ ತೆರಿಗೆಗಳ ಬಾಕಿ ಇದೆಯೇ ಅಥವಾ ರಿಫಂಡ್ ಬಾಕಿ ಇದೆಯೇ ಎಂಬುದನ್ನು ನಿರ್ಧರಿಸಲು ತೆರಿಗೆ ರಿಟರ್ನ್‌ನಲ್ಲಿನ ಮಾಹಿತಿಯನ್ನು ಬಳಸುತ್ತದೆ. ತಮ್ಮ ತೆರಿಗೆ ಜವಾಬ್ದಾರಿಗಳನ್ನು ಪೂರೈಸಲು ಭಾರತದಲ್ಲಿ ವ್ಯಕ್ತಿಗಳು ಮತ್ತು ವ್ಯವಹಾರಗಳಿಗೆ ತ್ವರಿತವಾಗಿ ಮತ್ತು ನಿಖರವಾಗಿ ತೆರಿಗೆ ರಿಟರ್ನ್ ಸಲ್ಲಿಸುವುದು ಅಗತ್ಯ ಜವಾಬ್ದಾರಿಯಾಗಿದೆ.

ಆದಾಯ ತೆರಿಗೆ ರಿಟರ್ನ್ ಫೈಲಿಂಗ್‌ಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳನ್ನು ತಿಳಿದುಕೊಳ್ಳಿ

ತೆರಿಗೆ ರಿಫಂಡ್ ಎಂದರೇನು?

ತೆರಿಗೆ ರಿಫಂಡ್ ಎಂದರೆ ಪಾವತಿಸಿದ ತೆರಿಗೆಯು ಅವರು ನೀಡಬೇಕಾದ ತೆರಿಗೆಯ ನಿಜವಾದ ಮೊತ್ತವನ್ನು ಮೀರಿದಾಗ ತೆರಿಗೆದಾರರಿಗೆ ಹಿಂದಿರುಗಿಸಲಾಗುವ ಅಥವಾ ಮರುಪಾವತಿಸಲಾಗುವ ಮೊತ್ತವಾಗಿದೆ. ಉದ್ಯೋಗದಾತರ ತಡೆಹಿಡಿತಗಳು ಅಥವಾ ಅಂದಾಜು ತೆರಿಗೆ ಪಾವತಿಗಳ ಮೂಲಕ ಸಾಮಾನ್ಯವಾಗಿ ತಮ್ಮ ತೆರಿಗೆ ಹೊಣೆಗಾರಿಕೆಗಿಂತ ವರ್ಷದಾದ್ಯಂತ ಹೆಚ್ಚು ತೆರಿಗೆಗಳನ್ನು ಪಾವತಿಸಿದ್ದಾಗ ಇದು ಸಂಭವಿಸುತ್ತದೆ.

ತೆರಿಗೆ ರಿಫಂಡ್‌ಗಳು ಸಾಮಾನ್ಯವಾಗಿ ತೆರಿಗೆಗಳ ಓವರ್‌ಪೇಮೆಂಟ್, ಅರ್ಹ ತೆರಿಗೆ ಕ್ರೆಡಿಟ್‌ಗಳು ಅಥವಾ ತೆರಿಗೆದಾರರ ಒಟ್ಟಾರೆ ತೆರಿಗೆ ಹೊಣೆಗಾರಿಕೆಯನ್ನು ಕಡಿಮೆ ಮಾಡುವ ತೆರಿಗೆ ಕಡಿತಗಳಂತಹ ಅಂಶಗಳ ಫಲಿತಾಂಶವಾಗಿರುತ್ತವೆ. ಇದು ವ್ಯಕ್ತಿಗಳು ಮತ್ತು ವ್ಯವಹಾರಗಳಿಗೆ ಅವರು ಪಾವತಿಸಿದ ಹೆಚ್ಚುವರಿ ತೆರಿಗೆಗಳ ಮರುಪಾವತಿಯನ್ನು ಒದಗಿಸುತ್ತದೆ, ಆ ಮೂಲಕ ಹಣಕಾಸಿನ ಪ್ರಯೋಜನ ಅಥವಾ ಪರಿಹಾರವನ್ನು ನೀಡುತ್ತದೆ. ಆದಾಗ್ಯೂ, ಎಲ್ಲರೂ ತೆರಿಗೆ ಮರುಪಾವತಿಗೆ ಅರ್ಹರಾಗಿರುವುದಿಲ್ಲ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ, ಏಕೆಂದರೆ ಇದು ವೈಯಕ್ತಿಕ ಸಂದರ್ಭಗಳು ಮತ್ತು ದೇಶದ ನಿರ್ದಿಷ್ಟ ತೆರಿಗೆ ಕಾನೂನುಗಳು ಅಥವಾ ಅಧಿಕಾರ ವ್ಯಾಪ್ತಿಯನ್ನು ಅವಲಂಬಿಸಿರುತ್ತದೆ.

ತೆರಿಗೆ ರಿಟರ್ನ್ ಮತ್ತು ತೆರಿಗೆ ರಿಫಂಡ್ ನಡುವಿನ ವ್ಯತ್ಯಾಸ

“ತೆರಿಗೆ ರಿಟರ್ನ್” ಮತ್ತು “ತೆರಿಗೆ ರಿಫಂಡ್” ಈ ಎರಡನ್ನು  ಸಾಮಾನ್ಯವಾಗಿ ಬಳಸಲಾಗುತ್ತದೆ, ಆದರೆ ಅವುಗಳು ನಿಜವಾಗಿಯೂ ತೆರಿಗೆ ಪ್ರಕ್ರಿಯೆಯ ವಿವಿಧ ಅಂಶಗಳನ್ನು ಉಲ್ಲೇಖಿಸುತ್ತವೆ. ತೆರಿಗೆ ರಿಟರ್ನ್ ಎಂಬುದು ವ್ಯಕ್ತಿಗಳು ಅಥವಾ ವ್ಯವಹಾರಗಳು ತಮ್ಮ ಆದಾಯ, ವೆಚ್ಚಗಳು ಮತ್ತು ನಿರ್ದಿಷ್ಟ ಅವಧಿಗೆ ಇತರ ಹಣಕಾಸಿನ ಮಾಹಿತಿಯನ್ನು ವರದಿ ಮಾಡಲು ಸಲ್ಲಿಸುವ ಡಾಕ್ಯುಮೆಂಟ್ ಆಗಿದೆ. ಅನ್ವಯವಾಗುವ ಕಾನೂನುಗಳ ಆಧಾರದ ಮೇಲೆ ನೀಡಬೇಕಾದ ತೆರಿಗೆಯನ್ನು ಲೆಕ್ಕ ಹಾಕಲು ಇದು ಸಹಾಯ ಮಾಡುತ್ತದೆ. ಮತ್ತೊಂದೆಡೆ, ತೆರಿಗೆ ರಿಫಂಡ್ ಪಾವತಿಸಲಾದ ಹೆಚ್ಚುವರಿ ತೆರಿಗೆಯ ಮರುಪಾವತಿಯಾಗಿದೆ. ತೆರಿಗೆದಾರರು ವರ್ಷದಾದ್ಯಂತ ತಮ್ಮ ನಿಜವಾದ ತೆರಿಗೆ ಹೊಣೆಗಾರಿಕೆಗಿಂತ ಹೆಚ್ಚು ತೆರಿಗೆಗಳನ್ನು ಪಾವತಿಸಿದಾಗ ಇದು ಸಂಭವಿಸುತ್ತದೆ.

ತೆರಿಗೆ ರಿಟರ್ನ್‌ನಲ್ಲಿ ಅಗತ್ಯ ಮಾಹಿತಿಯನ್ನು ಒಳಗೊಂಡಂತೆ ತೆರಿಗೆ ರಿಫಂಡ್‌ಗಳನ್ನು ಸಾಮಾನ್ಯವಾಗಿ ಕ್ಲೈಮ್ ಮಾಡಲಾಗುತ್ತದೆ. ತೆರಿಗೆ ರಿಟರ್ನ್ ತೆರಿಗೆ ಹೊಣೆಗಾರಿಕೆಯನ್ನು ನಿರ್ಧರಿಸಿದರೆ, ತೆರಿಗೆ ರಿಫಂಡ್ ಎಂಬುದು ತೆರಿಗೆ ಕ್ರೆಡಿಟ್‌ಗಳು/ಕಡಿತಗಳಿಗೆ ಓವರ್‌ಪೇಮೆಂಟ್ ಅಥವಾ ಅರ್ಹತೆಯ ಆಧಾರದ ಮೇಲೆ ಸಂಭಾವ್ಯವಾಗಿ ಸಿಗುತ್ತದೆ . ಆದ್ದರಿಂದ, ತೆರಿಗೆ ರಿಟರ್ನ್ ಎಂಬುದು ತೆರಿಗೆ ಹೊಣೆಗಾರಿಕೆಯನ್ನು ವರದಿ ಮಾಡುವ ಮತ್ತು ಲೆಕ್ಕ ಹಾಕುವ ಪ್ರಕ್ರಿಯೆಯಾಗಿದೆ, ಆದರೆ ತೆರಿಗೆ ರಿಫಂಡ್ ಹೆಚ್ಚುವರಿ ಪಾವತಿ ಅಥವಾ ಅರ್ಹ ಕಡಿತಗಳ ಫಲಿತಾಂಶವಾಗಿದ್ದು, ಪಾವತಿಸಿದ ಹೆಚ್ಚುವರಿ ತೆರಿಗೆಯನ್ನು ಮರುಪಾವತಿಸುತ್ತದೆ.

FAQs

ಭಾರತದಲ್ಲಿ ತೆರಿಗೆ ರಿಟರ್ನ್ಸ್‌ಗಾಗಿ ನಾವು ಯಾವಾಗ ಫೈಲ್ ಮಾಡಬೇಕು?

 ಅದೇ ವರ್ಷದ ಜುಲೈ 31 ರೊಳಗೆ ಮಾರ್ಚ್ 31 ಕ್ಕೆ ಕೊನೆಗೊಳ್ಳುವ ಹಣಕಾಸು ವರ್ಷಕ್ಕೆ ನಿಮ್ಮ ಆದಾಯ ತೆರಿಗೆ ರಿಟರ್ನ್ಸ್ ಅನ್ನು ನೀವು ಸಲ್ಲಿಸಬೇಕು. ಮತ್ತು ರಿಟರ್ನ್ಸ್ ಫೈಲ್ ಮಾಡುವ ಮೊದಲು, ಕಡಿತಗಳ ಮೊದಲು ನಿಮ್ಮ ಒಟ್ಟು ಆದಾಯಕ್ಕಾಗಿ ಅವುಗಳ ಅಗತ್ಯವಿದೆಯೇ ಎಂದು ಪರಿಶೀಲಿಸಿ.

ನಾವು ತೆರಿಗೆ ಮರುಪಾವತಿಯನ್ನು ಹೇಗೆ ಕ್ಲೈಮ್ ಮಾಡಬಹುದು?

ತೆರಿಗೆ ರಿಫಂಡ್ ಕ್ಲೈಮ್ ಮಾಡಲು, ನೀವು ತೆರಿಗೆ ರಿಟರ್ನ್ ಫೈಲ್ ಮಾಡಬೇಕು ಮತ್ತು ನಿಮ್ಮ ಆದಾಯ, ಕಡಿತಗಳು ಮತ್ತು ಯಾವುದೇ ಅರ್ಹ ತೆರಿಗೆ ಕ್ರೆಡಿಟ್‌ಗಳ ಬಗ್ಗೆ ನಿಖರ ಮಾಹಿತಿಯನ್ನು ಒದಗಿಸಬೇಕು. ನೀವು ಹೆಚ್ಚುವರಿ ಪಾವತಿಸಿದ್ದೀರಿ ಎಂದು ತೆರಿಗೆ ಅಧಿಕಾರಿಗಳು ನಿರ್ಧರಿಸಿದರೆ, ಅವರು ರಿಫಂಡ್ ನೀಡುತ್ತಾರೆ.

ತೆರಿಗೆ ರಿಟರ್ನ್ಸ್ ಮತ್ತು ತೆರಿಗೆ ರಿಫಂಡ್‌ಗಳ ಗ್ಯಾರಂಟಿ ಇದೆಯೇ?

ತೆರಿಗೆ ರಿಟರ್ನ್ಸ್ ಕಡ್ಡಾಯವಾಗಿದೆ, ಆದರೆ ಎಲ್ಲರಿಗೂ ತೆರಿಗೆ ರಿಫಂಡ್‌ಗಳನ್ನು ಖಚಿತಪಡಿಸಲಾಗುವುದಿಲ್ಲ. ನೀವು ತೆರಿಗೆ ಮರುಪಾವತಿಯನ್ನು ಪಡೆಯುವುದು ನಿಮ್ಮ ಆದಾಯ, ಕಡಿತಗಳು, ಕ್ರೆಡಿಟ್‌ಗಳು ಮತ್ತು ನೀವು ಈಗಾಗಲೇ ಪಾವತಿಸಿದ ತೆರಿಗೆ ಮೊತ್ತದಂತಹ ಅಂಶಗಳನ್ನು ಅವಲಂಬಿಸಿರುತ್ತದೆ.

ಭಾರತದಲ್ಲಿ ತೆರಿಗೆ ಮರುಪಾವತಿಯನ್ನು ಪಡೆಯಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ?

ತೆರಿಗೆ ರಿಫಂಡ್ ಪಡೆಯಲು ಬೇಕಾಗುವ ಸಮಯವು ತೆರಿಗೆ ಅಧಿಕಾರಿಗಳು ಮತ್ತು ರಿಫಂಡ್ ಪಡೆಯಲು ನೀವು ಆಯ್ಕೆ ಮಾಡುವ ವಿಧಾನವನ್ನು ಅವಲಂಬಿಸಿ ಬದಲಾಗಬಹುದು. ಇದು ಕೆಲವು ವಾರಗಳಿಂದ ಹಲವಾರು ತಿಂಗಳವರೆಗೆ ಇರಬಹುದು.

ರಿಫಂಡ್ ಪಡೆದ ನಂತರ ನಾನು ನನ್ನ ತೆರಿಗೆ ರಿಟರ್ನ್ ಅನ್ನು ತಿದ್ದುಪಡಿ ಮಾಡಬಹುದೇ?

ಹೌದು, ನೀವು ದೋಷವನ್ನು ನೋಡಿದರೆ ಅಥವಾ ನಿಮ್ಮ ತೆರಿಗೆ ರಿಫಂಡ್ ಮೇಲೆ ಪರಿಣಾಮ ಬೀರುವ ನಿಮ್ಮ ಮೂಲ ತೆರಿಗೆ ರಿಟರ್ನ್‌ನಲ್ಲಿ ನೀವು ಏನಾದರೂ ತಪ್ಪಾಗಿ ಹಾಕಿದ್ದರೆ, ತಪ್ಪನ್ನು ಸರಿಪಡಿಸಲು ನೀವು ತಿದ್ದುಪಡಿ ಮಾಡಿದ ತೆರಿಗೆ ರಿಟರ್ನ್ ಫೈಲ್ ಮಾಡಬೇಕಾಗಬಹುದು.

ಭಾರತದಲ್ಲಿ ಐಟಿ (IT) ರಿಟರ್ನ್ಸ್‌ಗಾಗಿ ಎಲ್ಲರೂ ಫೈಲ್ ಮಾಡಬೇಕೇ?

ಭಾರತ ಸರ್ಕಾರವು ನಿಗದಿಪಡಿಸಿದ ಮೂಲ ವಿನಾಯಿತಿ ಮಿತಿಯನ್ನು ಮೀರಿದ ವಾರ್ಷಿಕ ಆದಾಯ ಹೊಂದಿರುವ ಭಾರತೀಯ ನಾಗರಿಕರು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಬೇಕಾಗುತ್ತದೆ.

ಭಾರತದಲ್ಲಿ ಐಟಿ (IT) ರಿಟರ್ನ್ಸ್ ಫೈಲ್ ಮಾಡದಿದ್ದರೆ ಏನಾಗುತ್ತದೆ?

ಭಾರತದಲ್ಲಿ ಆದಾಯ ತೆರಿಗೆ ಕಾನೂನುಗಳನ್ನು ಅನುಸರಿಸಲು ಮತ್ತು ದೊಡ್ಡ ದಂಡಗಳು ಅಥವಾ ಕಾನೂನು ಕ್ರಮಗಳನ್ನು ತಪ್ಪಿಸಲು, ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡುವುದು ಅಗತ್ಯವಾಗಿದೆ. ಅಲ್ಲದೆ, ನೀವು ಲೋನ್ ಅಥವಾ ವೀಸಾಗೆ ಅರ್ಜಿ ಸಲ್ಲಿಸುವಾಗ, ಐಟಿ (IT) ರಿಟರ್ನ್ಸ್ ಪ್ರಮುಖ ಹಣಕಾಸಿನ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ.

ನಾವು ಭಾರತದಲ್ಲಿ ಐಟಿ (IT) ರಿಟರ್ನ್ಸ್ ಅನ್ನು ಆನ್ಲೈನಿನಲ್ಲಿ ಫೈಲ್ ಮಾಡಬಹುದೇ?

ಹೌದು. ಐಟಿಆರ್ (ITR)-1 ಮತ್ತು ಐಟಿಆರ್ (ITR)-4 ಗಾಗಿ ಫೈಲ್ ಮಾಡುತ್ತಿರುವ ಭಾರತದ ನಿವಾಸಿಗಳು ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ನಲ್ಲಿ ತೆರಿಗೆ ರಿಟರ್ನ್ಸ್ ಫೈಲ್ ಮಾಡಬಹುದು. ನಿಮ್ಮ ಆದಾಯ ತೆರಿಗೆ ರಿಟರ್ನ್ ಅನ್ನು ಆನ್ಲೈನಿನಲ್ಲಿ ಸಲ್ಲಿಸುವಾಗ ನಿಮ್ಮ ಪ್ಯಾನ್ ಕಾರ್ಡ್‌ನಂತಹ ಎಲ್ಲಾ ಸಂಬಂಧಿತ ಹಣಕಾಸಿನ ಮಾಹಿತಿ ಮತ್ತು ಡಾಕ್ಯುಮೆಂಟ್‌ಗಳನ್ನು ನಿಮ್ಮ ಹತ್ತಿರ  ಇರಿಸಿಕೊಳ್ಳಿ. ಐಟಿಆರ್ (ITR) ಫೈಲ್ ಮಾಡಲು ಕೊನೆಯ ದಿನಾಂಕ 31 ಜುಲೈ 2023. ಆನ್ಲೈನ್ ಪೋರ್ಟಲ್ ನಿಮ್ಮ ಯಾವುದಾದರೂ ತೆರಿಗೆ ರಿಫಂಡ್‌ಗಳ ಸ್ಥಿತಿ ಇದ್ದರೆ ಟ್ರ್ಯಾಕ್ ಮಾಡಲು ಸಹಾಯ ಮಾಡುತ್ತದೆ.