Will the festive season have an impact on Auto stocks? | Kannada

Podcast Duration: 6:56
ಹಬ್ಬದ ಸೀಸನ್ ಆಟೋ ಸ್ಟಾಕ್ ಮೇಲೆ ಪರಿಣಾಮ ಬೀರುತ್ತದೆಯೇ? ನಮಸ್ಕಾರ ಗೆಳೆಯರೆ, ಏಂಜಲ್ ಒನ್ ಅವರ ಈ ಪಾಡ್ಕ್ಯಾಸ್ಟ್ ಗೆ ನಿಮಗೆ ಸ್ವಾಗತ. ನೀವು ಮೊದಲ ಬಾರಿಗೆ ನಮ್ಮ ಪಾಡ್ಕ್ಯಾಸ್ಟ್ ಕೇಳುತ್ತಿದ್ದರೆ ನಿಮಗೆ ಸ್ವಾಗತ - ಕಂಫರ್ಟಬಲ್ ಆಗಿರಿ ಯಾಕಂದ್ರೆ ನಾವಿಲ್ಲಿ ಸ್ಟಾಕ್ ಮಾರ್ಕೆಟ್ ಕಾನ್ಸೆಪ್ಟ್ಸ್, ಐಡಿಯಾಸ್, ಜಾರ್ಗನ್ ಮತ್ತು ಇಂದಿನ ಹಾಟ್ ಟಾಪಿಕ್ಸ್ ಕುರಿತು ಚರ್ಚಿಸೋಣ. ನೀವು ನಮ್ಮ ರೆಗ್ಯುಲರ್ ಕೇಳುಗರಾಗಿದ್ರೆ, ನಮ್ಮನೊಂದಿಗೆ ಮತ್ತೆ ಜಾಯಿನ್ ಆಗಿದ್ದಕ್ಕೆ ಧನ್ಯವಾದಗಳು. ನಿಮ್ಮ ರೆಗ್ಯುಲಾರಿಟಿ ಮತ್ತು ಪಾಡ್‌ಕ್ಯಾಸ್ಟ್ ಶೇರಿಂಗ್ ನಿಂದ ನಮಗೆ ಇನ್ನಷ್ಟು ಹೊಸ, ರೋಮಾಂಚಕಾರಿ ಮತ್ತು ಉಪಯುಕ್ತ ವಿಷಯಗಳನ್ನು ನಿಮಗೆ ತಲುಪಿಸಲು ಸಾಕಷ್ಟು ಪ್ರೋತ್ಸಾಹ ಸಿಗುತ್ತಿದೆ. ಸ್ನೇಹಿತರೆ, ಇಂದಿನ ಪಾಡ್ಕ್ಯಾಸ್ಟ್ನಲ್ಲಿ ನಾವು ಆಟೋ ಸೆಕ್ಟರ್, ಆಟೋಮೊಬೈಲ್ ವಲಯದ ಕುರಿತು ಅಂದ್ರೆ ಮುಂಬರುವ ಹಬ್ಬಗಳ ಸೀಸನ್ ಆಟೋಮೊಬೈಲ್ ವಲಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಅಂತಾ ತಿಳಿಯೋಣ. ಭಾರತದ ಸುದೀರ್ಘ ಹಬ್ಬದ ಸೀಸನ್ ಈಗಾಗಲೇ ಗಣಪತಿ ಹಬ್ಬದೊಂದಿಗೆ ಆರಂಭವಾಗಿದೆ- ಮತ್ತು ಮುಂದೆ ದೀಪಾವಳಿ, ನವರಾತ್ರಿ, ದಸರಾ, ಕ್ರಿಸ್ಮಸ್ ಮತ್ತು ಹೊಸ ವರ್ಷ ಕೂಡ ಬರ್ತಿದೆ. ಹೆಚ್ಚಾಗಿ ಮದುವೆಗಳು ಕೂಡ ಇದೆ ಸಮಯದಲ್ಲಿ ನಡೆಯುತ್ತದೆ. ಒಟ್ಟಾರೆ ಖರ್ಚು ... ಕಾರುಗಳಂತಹ ದುಬಾರಿ ವಸ್ತುಗಳ ಖರೀದಿ ಕೂಡ ಇದೆ ಸಮಯದಲ್ಲಿ ನಡೆಯುತ್ತದೆ. ಹಾಗಾದ್ರೆ ಬನ್ನಿ ಈ ವೆಚ್ಚದ ಅವಧಿಯು ಆಟೋ ವಲಯದ ಮೇಲೆ ಹೇಗೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂಬುದನ್ನು ಕಂಡುಕೊಳ್ಳೋಣ. ಆದರೆ ಇದನ್ನು ಅರ್ಥಮಾಡಿಕೊಳ್ಳಲು, ಆಟೋ ಕ್ಷೇತ್ರದ ಪ್ರಸ್ತುತ ಪರಿಸ್ಥಿತಿಯನ್ನು ತಿಳಿದುಕೊಳ್ಳುವುದು ಮುಖ್ಯ, ಅಲ್ವಾ? ಬನ್ನಿ ಇಂದಿನ ಚರ್ಚೆಯನ್ನು ಈ ರೀತಿ ಆರಂಭಿಸೋಣ: ಮೊದಲಿಗೆ ನಾವು ಆಟೋ ಸೆಕ್ಟರ್ನ ಪ್ರಸ್ತುತ ಸನ್ನಿವೇಶವನ್ನ ಸಂಕ್ಷಿಪ್ತವಾಗಿ ತಿಳಿಯೋಣ. ನಂತರ ಈ ಹಬ್ಬದ ಸೀಸನ್ ಮತ್ತು ಆಟೋ ಸ್ಟಾಕ್‌ಗಳ ಬಗ್ಗೆ ಜನರು ಏಕೆ ಆಶಾವಾದಿಗಳಾಗಿದ್ದಾರೆ ಎಂದು ನಾವು ನೋಡೋಣ. ಮೂರನೆಯದಾಗಿ, ಯಾರು ವಾಸ್ತವಿಕವಾಗಿ ಏನನ್ನು ನಿರೀಕ್ಷಿಸಬಹುದು ಎಂದು ಚರ್ಚಿಸಿಸೋಣ? ಪಾರ್ಟ್ ೧: ಆಟೋ ವಲಯದ ಪ್ರಸ್ತುತ ಸನ್ನಿವೇಶದ ಸಾರಾಂಶ . ಪ್ಯಾಂಡಮಿಕ್ ನ ಕಾರಣದಿಂದಾಗಿ ಆಟೋಮೊಬೈಲ್ ಕಂಪನಿಗಳು ಕಡಿಮೆ ಬೇಡಿಕೆಗೆಯನ್ನ ಹೊಂದಿವೆ. ಇಲ್ಲಿ ಕೆಲವು ಕ್ಷಣಿಕ, ಅಲ್ಪಾವಧಿಯ ಬೆಳವಣಿಗೆಗಳಿವೆ , ಇದರಂತೆ: ಒಂದೆರಡು ವಾರಗಳ ಹಿಂದೆ ಪಿಎಲ್ಐ ಯೋಜನೆಯನ್ನು ಪರಿಚಯಿಸಿದಾಗ, ಆಟೋ ಸ್ಟಾಕ್ನ ಬೆಲೆಯಲ್ಲಿ ಸ್ವಲ್ಪ ಮಟ್ಟಿನ ಚೇತರಿಕೆ ಕಂಡೆವು.ಕೆಲವು ದಿನಗಳ ಹಿಂದೆ, ಟೆಸ್ಲಾ ,ಸೋನಾ ಕಾಮ್‌ಸ್ಟಾರ್, ಸಂಧರ್ ಟೆಕ್ನಾಲಜೀಸ್ ಮತ್ತು ಭಾರತ್ ಫೋರ್ಜ್‌ನೊಂದಿಗೆ ಸೊರ್ಸ್ ಪಾರ್ಟ್ ಕುರಿತು ಮಾತುಕತೆ ನಡೆಸುತ್ತಿದ್ದಾಗ, ಕಂಪನಿಗಳ ಸ್ಟಾಕ್‌ನಲ್ಲಿ ಸಾಕಷ್ಟು ಚೇತರಿಕೆ ಕಂಡಿತ್ತು. ಆದರೆ ೨೦೨೧ರಲ್ಲಿ ಆಟೋ ಸ್ಟಾಕ್ನಲ್ಲಿ ಕಡಿಮೆ ಗ್ರೋಥ್ ಕಾಣಿಸಿತ್ತು. ಅಂದ್ರೆ ಆಟೋ ಸ್ಟಾಕ್‌ಗಳು ಯಾವುದೇ ಬೆಳವಣಿಗೆಯನ್ನು ಕಂಡಿಲ್ಲ ಅಂತ ಅಲ್ಲ, ಆದರೆ ಬೆಳವಣಿಗೆ ಕಡಿಮೆಯಾಗಿತ್ತು. 2021 ರವರೆಗೆ ನಿಫ್ಟಿ ಆಟೋದಲ್ಲಿ ಸುಮಾರು 6% ಬೆಳವಣಿಗೆ ಕಂಡುಬಂದಿದೆ, ಇದು ಸಾಕಷ್ಟು ನಿರಾಶಾದಾಯಕವಾಗಿದೆ ಯಾಕಂದ್ರೆ ನಿಫ್ಟಿ 50(kyunki Nifty50 mein about 18% growth has been seen. ) ಯಲ್ಲಿ ಸುಮಾರು 18% ಬೆಳವಣಿಗೆಯನ್ನು ಹೊಂದಿರುತ್ತು. ಆದರೆ ಆಟೋ ಕಂಪನಿಗಳು ಈಗ ಕಷ್ಟಪಡುತ್ತಿರುವುದಕ್ಕೆ ಕಡಿಮೆ ಬೇಡಿಕೆ ಇರುವುದು ಮಾತ್ರ ಕಾರಣವಲ್ಲ. ಕಾಂಪೊನೆಂಟ್ ಗಳ ಪೂರೈಕೆಯಲ್ಲಿಯೂ ಸಮಸ್ಯೆ ಇದೆ ಹಾಗಾಗಿ ಉತ್ಪಾದನೆ ಮತ್ತು ಪೂರೈಕೆಗೂ ಇದರಿಂದ ಹೊಡೆತ ಬೀಳುತ್ತದೆ. ಪಾರ್ಟ್ ೨: ಸಡನ್ ಓಪ್ಟಿಮಿಸಂ(sudden optimism) ಏಕೆ? ಹಬ್ಬದ ಸೀಸನ್‌ಗೆ ಮನ್ನಣೆ ನೀಡಬೇಕೇ ಅಥವಾ ಇತರ ಕೆಲವು ಅಂಶಗಳು ಕೂಡ ಇಲ್ಲಿ ಪ್ರಮುಖ ಪಾತ್ರ ವಹಿಸುತ್ತವೆಯಾ? ಕಳೆದ ವರ್ಷ ಪ್ಯಾಂಡಮಿಕ್ ಫುಲ್ ಸ್ವಿನಿಂಗ್ನಲ್ಲಿ ಇದ್ದ ಸಂದರ್ಭದಲ್ಲೂ ಹಬ್ಬಗಳ ಸೀಸನ್ನಲ್ಲಿ ಕಾರ್ ಗಳಿಗೆ ಬಹಳ ಡಿಮ್ಯಾಂಡ್ ಇತ್ತು. ಈಗಲೂ ಲಾಕ್ಡೌನ್ ತೆರವಾಗುತ್ತಲೇ ಹಬ್ಬದ ಸೀಸನ್ ಬರುತ್ತಿದೆ.(ಇದು ಹೀಗೆ ಇರಲಿ ಅಂತ ಫಿಂಗರ್ ಕ್ರಾಸ್ ಮಾಡ್ತೀನಿ) ಆದ್ದರಿಂದ ಜನರು ಖುಷಿಯಿಂದ ಖರ್ಚು ಮಾಡೋದಕ್ಕೆ ರೆಡಿ ಆಗಿರ್ತಾರೆ. ಮೂರನೇ ಕಾರಣ ಲೊಕ್ಡೌನ್ ಮುಗಿದಂತೆಲ್ಲ ಜನ ಹೊರಗಡೆ ಹೋಗೋದಕ್ಕೆ ಇಷ್ಟ ಪಡ್ತಾರೆ ಹಾಗೆ ಆಫೀಸ್ ಕೂಡ ಶುರು ಆಗುತ್ತೆ ... ಅದರೊಂದಿಗೆ ಪಬ್ಲಿಕ್ ಟ್ರಾನ್ಸ್ಪೋರ್ಟ್ನಲ್ಲಿ ಟ್ರಾವೆಲ್ ಮಾಡೋದು ರಿಸ್ಕಿ ಅನ್ಸುತ್ತೆ, ಅದೂ ಕೂಡ ಈ ಕೋವಿಡ್ ಸಂದರ್ಭದಲ್ಲಿ. ಆದ್ದರಿಂದ ಯಾರಿಗೆ ಸ್ವಂತ ವೆಹಿಕಲ್ ತೆಗೆದುಕೊಳ್ಳಲು ಸಾಧ್ಯ ಇದ್ಯೋ ಅವರು ರೆಡಿ ಆಗಿ. ಇಲ್ಲಿ ಹಬ್ಬದ ಸೀಸನ್ಗಿಂತಲೂ ಇನ್ನೊಂದು ಪ್ರಮುಖ ಕಾರಣವೆಂದರೆ ಅದು ಲೊಕ್ಡೌನ್ ಸಂಬಂಧಿಸಿದ್ದು. ಈ ಆಶಾವಾದಕ್ಕೆ ನಾಲ್ಕನೇ ಕಾರಣವೆಂದರೆ ಹಲವಾರು ವಲಯಗಳಲ್ಲಿ ಸಂಬಳ ಹೆಚ್ಚಳವಾಗಿದೆ. ಪ್ರಮುಖವಾಗಿ ಭಾರತದಲ್ಲಿ ಯಾವಾಗ ಜನರಿಗೆ ಹಣ ಕೈಗೆ ಸಿಗುತ್ತದೋ ಆಗ ಹೊಸ ಗಾಡಿ ಖರೀದಿಸುವುದರ ಮೂಲಕ ಲೈಫ್ ಸ್ಟೈಲ್ ಅನ್ನ ಅಪ್ ಗ್ರೇಡ್ ಮಾಡಿಕೊಳ್ಳುವುದು ಒಂದು ಬಹಳ ಪ್ರಸಿದ್ದವಾದ ರೀತಿಯಾಗಿದೆ. ಈ ಕಾರಣಕ್ಕೂ ಹಬ್ಬದ ಋತುವಿಗೂ ಯಾವುದೇ ಸಂಬಂಧವಿಲ್ಲ, ಆದರೆ ಆಟೋ ಕಂಪನಿಗಳಿಗೆ ಉತ್ತಮ ಗಳಿಕೆಯೊಂದಿಗೆ ಆಟೋ ಸ್ಟಾಕ್ ಬೆಲೆಗಳ ಏರಿಕೆಯ ಬಗ್ಗೆ ಆಶಾವಾದಿಯಾಗಿರಲು ಇದು ಒಂದು ಸರಿಯಾದ ಕಾರಣವಾಗಿದೆ. ಪಾರ್ಟ್ ೩: ಆಟೋ ಸ್ಟಾಕ್ ನಿರೀಕ್ಷೆಗಳನ್ನು ತರ್ಕಬದ್ಧಗೊಳಿಸುವುದು (Rationalising auto stock expectations) ಓಪ್ಟಿಮಿಸಮ್(optimism ) ಮತ್ತು ಬೇಡಿಕೆಗಳು ಒಂದಕ್ಕೊಂದು ಸಂಬಂಧ ಹೊಂದಿವೆ, ಆದರೆ ಪಾರ್ಟ್ ಒಂದಲ್ಲಿ ಹೇಳಿದಂತೆ ಸಪ್ಲೈ ಸೈಡ್ ನಲ್ಲೂ ಪ್ರಾಬ್ಲಮ್ ಇದೆ . ಪ್ರಪಂಚದಾದ್ಯಂತ, ಚಿಪ್ ಶಾರ್ಟ್ಜ್(shortage) ಇದ್ದು ಮತ್ತು ಇದರಿಂದ ಉತ್ಪಾದನೆಯು ಸ್ವಲ್ಪಮಟ್ಟಿಗೆ ಕುಂಠಿತಗೊಂಡಿದೆ. ಇದು ಮಾತ್ರವಲ್ಲ... ಇನ್ನೂ ಪ್ರಾಬ್ಲಮ್ ಗಳಿವೆ.... ಆಟೋ ಸೆಕ್ಟರ್ನಲ್ಲಿ ರಾ ಮೆಟಿರಿಯಲ್ ಗಳ ಬೆಲೆ ಕೂಡ ಜಾಸ್ತಿ ಆಗಿದೆ- ಇದು ನಿಸ್ಸಂಶಯವಾಗಿ ಲಾಭ ಮತ್ತು ಷೇರು ಮಾರುಕಟ್ಟೆಯ ಹೂಡಿಕೆದಾರರ ಮದ್ಯೆ ಹಸ್ತಕ್ಷೇಪ ಮಾಡುತ್ತದೆ, ನಿಮಗೆ ಕಂಪನಿಯ ಲಾಭದೊಂದಿಗೆ ಸಂಬಂಧ ಇದ್ದರೆ ಇದರಿಂದ ನೀವು ದೀರ್ಘಾವಧಿಯಲ್ಲಿ ಗಳಿಕೆಯನ್ನು ಪಡೆಯಬಹುದು. ಆಟೋ ಸೆಕ್ಟರ್ ಕೋವಿಡ್ -19 ವ್ಯಾಕ್ಸಿನೇಷನ್ ವೆಚ್ಚಗಳು ಅಥವಾ ವೇತನ ಪರಿಷ್ಕರಣೆ ಮುಂತಾದ ಕಾರಣಗಳಿಂದ, ಅನೇಕ ಕಂಪನಿಗಳು ಅಪೇಕ್ಷಿತ ಲಾಭಾಂಶಕ್ಕಿಂತ ಕಡಿಮೆ ಮಾರ್ಜಿನ್ ಅನ್ನ ನೋಡುತ್ತಿವೆ. ಇದರಲ್ಲಿ ಇಂಡಿವಿಶುಯಲ್ ವಿನ್ನರ್ಗಳನ್ನ ನೋಡಬಹುದಾಗಿದೆ.ಉದಾಹರಣೆಗೆ ಆಗಸ್ಟ್ ತಿಂಗಳಲ್ಲಿ, ಭಾರತ್ ಫೋರ್ಜ್ ಸ್ಟಾಕ್ ಬೆಲೆಯು 50% ಕ್ಕಿಂತ ಹೆಚ್ಚಿಗೆ ಕಾಣಿಸಿಕೊಂಡಿತ್ತು. ಈ ಹೆಸರನ್ನು ನೀವು ಎಲ್ಲೋ ಕೇಳಿರುವಂತೆ ಅನಿಸುತ್ತಿದೆಯೇ? ಕಂಪೋನೆಂಟ್ ಸೋರ್ಸಿಂಗ್‌ಗಾಗಿ ಟೆಸ್ಲಾ ಜೊತೆ ಮಾತುಕತೆ ನಡೆಸುತ್ತಿರುವ ಸುದ್ದಿಯಲ್ಲಿರುವ ಕಂಪನಿಗಳಲ್ಲಿ ಭಾರತ್ ಫೋರ್ಜ್ ಕೂಡ ಒಂದು. ಪಾರ್ಟ್ 1 ರಲ್ಲಿ,ಈ ಕಂಪನಿಯ ಕುರಿತು ಹೇಳಿದ್ವಿ, ಅದು ನಿಮಗೆ ನೆನಪಿದೆ ಅಲ್ವಾ. ಸಪ್ಲೈ ಬಾಟಲ್ ನೆಕ್ ಬಗೆಹರಿಯುವವರೆಗೆ ಕೆಲವು ತಜ್ಞರು ಹೂಡಿಕೆದಾರರಿಗೆ ಆಟೋ ಸ್ಟಾಕ್‌ಗಳಿಂದ ದೂರವಿರಲು ನಿರ್ದಿಷ್ಟವಾಗಿ ಸಲಹೆ ನೀಡಿದ್ದಾರೆ.ನೀವು ಆಟೋ ವಲಯದಲ್ಲಿ ಹೂಡಿಕೆ ಮಾಡಲು ಬಯಸಿದರೆ, ನೀವು ಇಂಡಿವಿಜುಯಲ್ ಕಂಪನಿಗಳತ್ತ ಗಮನ ಹರಿಸಿ ಹೂಡಿಕೆ ಮಾಡಬೇಕು. ಕಂಪನಿಯ ಗಳಿಕೆಯ ಜೊತೆಗೆ ಐತಿಹಾಸಿಕ ಸ್ಟಾಕ್ ಬೆಲೆ ಗ್ರಾಫ್ ಅನ್ನು ನೋಡಿ. P/E ರೇಶಿಯೋ ವನ್ನ ಒಮ್ಮೆ ತೆಗೆದು ನೋಡಿ. ಸಾಧ್ಯ ಆದ್ರೆ ಕಡಿಮೆ ದರದಲ್ಲಿ ಖರೀದಿಸಲು ಅವಕಾಶ ಸಿಕ್ಕಿದರೆ ಅದು ನಿಮಗೆ ದೀರ್ಘಾವಧಿಯಲ್ಲಿ ಉತ್ತಮ ಗಳಿಕೆಯನ್ನು ನೀಡುತ್ತದೆ, ಆದರೆ ..... ಹೂಡಿಕೆ ಮಾಡುವ ಮೊದಲು ಸಂಪೂರ್ಣ ಸಂಶೋಧನೆ ಮಾಡಲು ಮರೆಯದಿರಿ. ನಾವೀಗ ನಮ್ಮ ಡಿಸ್ಕಶನ್ ನ ಕೊನೆಗೆ ಬಂದಿದ್ದೇವೆ, ಆದರೆ ಮುಗಿಸುವುದಕ್ಕೂ ಮುನ್ನ, ಯಾವಾಗಲೂ ಒಂದು ಎಚ್ಚರಿಕೆಯನ್ನ ಕೊಡೋದಕ್ಕೆ ಇಷ್ಟ ಪಡ್ತೀನಿ: ಅದು ಆಟೋ ಸೆಕ್ಟರ್ ಆಗಿರಲಿ ಅಥವಾ ಬೇರೆ ಯಾವುದೇ ಸೆಕ್ಟರ್ ಆಗಿರಲಿ, ಸ್ಟಾಕ್‌ಗಳು ಅಥವಾ ಬಾಂಡ್‌ಗಳು ಅಥವಾ ಎಫ್ & ಎಫ್ ಆಗಿರಲಿ, ಸ್ಟಾಕ್ ಮಾರುಕಟ್ಟೆಯಲ್ಲಿ ಯಾವಾಗಲೂ ಅಪಾಯವಿರುತ್ತದೆ. ಹೂಡಿಕೆ ಮಾಡುವ ಮೊದಲು ನಿಮ್ಮ risk appetite ಅನ್ನ ಪರಿಗಣಿಸಿ. ನಿಮ್ಮ ದೈನಂದಿನ ಜೀವನ ಮತ್ತು ಜೀವನಶೈಲಿಯ ವೆಚ್ಚಗಳನ್ನು ನೋಡಿಕೊಂಡು, ಉಳಿದ ಹಣದೊಂದಿಗೆ ಹೂಡಿಕೆ ಮಾಡುವುದು ಯಾವಾಗಲು ಉತ್ತಮ. ಹೂಡಿಕೆ ಮಾಡುವ ಮೊದಲು, ಷೇರು ಮಾರುಕಟ್ಟೆಯ ಹೂಡಿಕೆಯಲ್ಲಿ ಯಾವಾಗಲೂ ಅಪಾಯವಿರುತ್ತದೆ ಎಂಬುದನ್ನು ನೆನಪಿಡಿ. ಈ ಪಾಡ್‌ಕ್ಯಾಸ್ಟ್ ಅನ್ನು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ ಮಾಡಲಾಗಿದೆ ಮತ್ತು ಹೂಡಿಕೆದಾರರು ತನ್ನದೇ ಆದ ಸಂಶೋಧನೆಯನ್ನು ಮಾಡಬೇಕು. ಯಾವುದನ್ನೇ ಆಯ್ಕೆ ಮಾಡಿದರು, ಎಲ್ಲಾ ಮೊಟ್ಟೆಗಳನ್ನು ಒಂದೇ ಬುಟ್ಟಿಯಲ್ಲಿ ಹಾಕಬೇಡಿ. ವಿವಿಧ ಕಂಪನಿಗಳು ಮತ್ತು ವಿವಿಧ ವಲಯಗಳಲ್ಲಿ ನಿಮ್ಮ ಹೂಡಿಕೆ ಮಾಡಿ ಇದರಿಂದ ಯಾವುದೇ ನಷ್ಟಗಳನ್ನ ಸರಿದೂಗಿಸ ಬಹುದು.ಸೆಕ್ಯುರಿಟೀಸ್ ಮಾರುಕಟ್ಟೆಗಳಲ್ಲಿನ ಹೂಡಿಕೆಗಳು ಮಾರುಕಟ್ಟೆಯ ಅಪಾಯಗಳಿಗೆ ಒಳಪಟ್ಟಿರುತ್ತವೆ. ಹೂಡಿಕೆ ಮಾಡುವ ಮೊದಲು ಎಲ್ಲಾ ಸಂಬಂಧಿತ ದಾಖಲೆಗಳನ್ನು ಎಚ್ಚರಿಕೆಯಿಂದ ಓದಿ. ​ ​