Why Vodafone Idea is in the news and what it means for shareholders
ವೊಡಾಫೋನ್ ಐಡಿಯಾ ಏಕೆ ಸುದ್ದಿಯಲ್ಲಿದೆ ಮತ್ತು ಷೇರುದಾರರಿಗೆ ಇದರ ಅರ್ಥವೇನು? ನಮಸ್ಕಾರ ಸ್ನೇಹಿತರೆ ಏಂಜಲ್ ಒನ್ ನ ಪಾಡ್ಕ್ಯಾಸ್ಟ್ ಗೆ ನಿಮಗೆ ಸ್ವಾಗತ . ನೀವೆಲ್ಲರೂ ಆರಾಮವಾಗಿದ್ದಿರಿ ಮತ್ತು ನೀವು ನಮ್ಮ ಐಪಿಒ ಕಂಟೆಂಟ್ಗಳ ಲಾಭ ಪಡೀತಿದ್ದಿರಿ ಅಂದ್ಕೊಂಡಿದೀನಿ. ಬನ್ನಿ ಇವತ್ತಿನ ವಿಚಾರದ ಕುರಿತಾಗಿ ಚರ್ಚೆ ಮಾಡೋಣ. ನೀವು ಇಲ್ಲಿಗೆ ಮೊದಲ ಬಾರಿ ಬಂದಿದ್ದರೆ, ಇಲ್ಲಿ ನಾವು ಸ್ಟಾಕ್ ಮಾರ್ಕೆಟ್ ಪರಿಕಲ್ಪನೆಗಳು, ಸುದ್ದಿಗಳು ಮತ್ತು ಇದರ ... ನಡುವೆ ಇರುವ ಎಲ್ಲವನ್ನೂ ... ಮೋಜಿನ ಮತ್ತು ನೇರ ರೀತಿಯಲ್ಲಿ ಚರ್ಚಿಸುತ್ತೇವೆ. ಇದರಿಂದ ನಿಮ್ಮಂತಹ ಇನ್ವೆಸ್ಟರ್ಸ್ ನಿಮ್ಮಇನ್ವೆಸ್ಟ್ಮೆಂಟ್ ಜರ್ನಿ ಶುರು ಮಾಡೊದಕ್ಕೆ ಸಾಧ್ಯ ಆಗೋ ತರಹ. ಸ್ನೇಹಿತರೆ ಇವತ್ತಿನ ಪಾಡ್ಕ್ಯಾಸ್ಟ್ ಟಾಪಿಕ್ ಬಹಳ ಇಂಟೆರೆಸ್ಟಿಂಗ್ ಆಗಿದೆ- ಯಾಕಂದ್ರೆ ಇದು ಹೆಡ್ಲೈನ್ಸ್ ಮೇಕಿಂಗ್ ನ್ಯೂಸ್ ಕುರಿತಾಗಿದೆ. ಈ ಪಾಡ್ಕ್ಯಾಸ್ಟ್ 5 ವಿಭಾಗಗಲ್ಲಿದೆ - ಮೊದಲಿಗೆ ನಾವು ವೊಡಾಫೋನ್ ಐಡಿಯಾ ದ ಡೆಬ್ಟ್ ಪ್ರಾಬ್ಲಮ್ ಕುರಿತಾಗಿ ನೋಡೋಣ ಮತ್ತೆ ನಾವು ಹೆಡ್ಲೈನ್ ಮೇಕಿಂಗ್ ರೆಸಿಗ್ನೇಷನ್ ಮತ್ತು ಅದು ಹೇಗೆ ಷೇರಿನ ಬೆಲೆಯನ್ನು ತಗ್ಗಿಸಿತು ಈ ಕುರಿತಾಗಿ ನೋಡೋಣ. ಇದಾದ ಮೇಲೆ ಷೇರುಗಳ ಸೇವಿಯರ್ ಮೂವ್ಗಳ ಕುರಿತು ನೋಡೋಣ. ಇದೆಲ್ಲ ನೋಡಿದ ಮೇಲೆ, ಶೇರ್ ಹೋಲ್ಡರ್ ಆಗಿ ನಿಮಗಿರುವ ಒಪ್ಶನ್ ಗಳ ಕುರಿತಾಗಿ ನೋಡೋಣ. ಕೊನೆಯದಾಗಿ ಟೆಲಿಕಾಂ ಸೆಕ್ಟರ್ನಲ್ಲಿನ ಇನ್ವೆಸ್ಟ್ಮೆಂಟ್ ಅವಕಾಶಗಳ ಕುರಿತಾಗಿ ನೋಡೋಣ. ಇದು ವೋಡಾಫೋನ್ ನ ಪ್ರಾಬ್ಲಮ್ ಮಾತ್ರಾನಾ ಅಥವಾ sector ಪ್ರಾಬ್ಲಮ್ ಕೂಡ ಹೌದ? ಅಥವಾ ವೊಡಾಫೋನ್ ನ ಡೆಬ್ಟ್ ಪ್ರಾಬ್ಲಮ್? ಇದೆಲ್ಲವೂ ಕೂಡ ವಡಾಫೊನ್ ಆನ್ ಪೇಯ್ಡ್ ಡ್ಯೂ ನ ಕಾರಣದಿಂದ ಆಗ್ತಾ ಇದೆ . ಯಾವ ಆನ್ ಪೇಯ್ಡ್ ಡ್ಯೂ ಅಂತ ಯೋಚಿಸ್ತಾ ಇದ್ದೀರಾ? ನಾವೇನಾದ್ರು ಟ್ಯಾಕ್ಸ್ ಕುರಿತು ಮಾತಾಡ್ತಾ ಇದೀವಾ? ಇಲ್ಲ. ನಾವು ಮಾತಾಡ್ತಾ ಇದೊಂದು AGR ಅಂದ್ರೆ ಅಡ್ಜಸ್ಟ್ ಗ್ರೋಸ್ ರೆವೆನ್ಯೂ. ಎಜಿಆರ್ ಒಂದು ಆದಾಯ ಹಂಚಿಕೆಯ ಮಾದರಿಯಾಗಿದ್ದು, ಇದರಲ್ಲಿ ಟೆಲಿಕಾಂ ಕಂಪನಿಗಳು ತಮ್ಮ ಆದಾಯದ ಶೇಕಡಾವನ್ನು ಸರ್ಕಾರದೊಂದಿಗೆ ಹಂಚಿಕೊಳ್ಳಬೇಕು. ಈಗ ನಿಮಗೆ AGR ಅಂದ್ರೆ ಏನು ಅಂತ ಅರ್ಥ ಆಗಿರ್ಬೇಕು ಅಲ್ವಾ. ಸರಿ ಈಗ ಮುಂದಕ್ಕೆ ಹೋಗೋಣ - ವೊಡಾಫೋನ್ ಐಡಿಯಾದ AGR ಡ್ಯೂ 58,254 ಕೋಟಿ! ಆದ್ರೆ ಅವ್ರು ಈಗಾಗ್ಲೇ ಸ್ವಲ್ಪ ಮೊತ್ತವನ್ನ ಸರಕಾರಕ್ಕೆ ಪೆ ಮಾಡಿದ್ದಾರೆ ಅಂದ್ರೆ ಸುಮಾರು 7,854.37 ಕೋಟಿಗಳಷ್ಟು ಇನ್ನೂ 51000 ಕೋಟಿಗಳಷ್ಟು ಪಾವತಿಸಲು ಬಾಕಿ ಇದೆ. ಇದು ಸ್ವಲ್ಪ ಆಳವಾದ ಡೆಬ್ಟ್ ಆಗಿದೆ; ಇದರಿಂದ ದೊಡ್ಡ ಪ್ರಾಬ್ಲಮ್ ಆಗಬಹುದು. ಸರಕಾರ ಇದರ ಕುರಿತಾಗಿ ಟೆಲಿಕಾಂ ಕಂಪನಿಗಳಿಗೆ ಈಗಾಗಲೇ ಹೇಳಿದೆ - ಅದೇನೆಂದ್ರೆ ಮುಂದಿನ ಹತ್ತು ವರ್ಷಗಳಲ್ಲಿ ನಿದಾನವಾಗಿ ಅವರ ಡ್ಯೂ ಗಳನ್ನ ಸೆಟಲ್ ಮಾಡೋದಕ್ಕೆ ಅವಕಾಶ ಇದೆ. ಅಂದ್ರೆ ಟೆಲಿಕಾಂ ಕಂಪನಿಗಳು ೧೦ ಕಂತುಗಳಲ್ಲಿ ಅವರ ಬಾಕಿಯನ್ನ ಪಾವತಿಸಬೇಕಾಗುತ್ತದೆ. ಅಂದ್ರೆ ಮುಂದಿನ ಮಾರ್ಚ್ 31, 2031 ರ ವರೆಗೆ ಕಾಲಾವಕಾಶ ಇದೆ. ಬಾಕಿ ಪಾವತಿಗೆ ಸಂಬಂಧಿಸಿದಂತೆ ವೊಡಾಫೋನ್ ಐಡಿಯಾ ಪಿಒಎ ಹೊಂದಿಲ್ಲ. ಇದರ ಕುರಿತಾಗಿ ಕಂಪನಿಯು ಬಾಕಿ ಹಣವನ್ನು ಮರು ಲೆಕ್ಕಾಚಾರ ಮಾಡುವಂತೆ ಸರ್ಕಾರವನ್ನು ಕೋರಿ ಸುಪ್ರೀಂ ಕೋರ್ಟ್‌ಗೆ ಮೊರೆಹೋಗಿತ್ತು. ಆದ್ರೆ ಸುಪ್ರೀಂ ಕೋರ್ಟ್ ಅದನ್ನ ನಿರಾಕರಿಸಿತ್ತು. ಇದರೊಂದಿಗೆ ಕಂಪನಿ 25,000 ಕೋಟಿಗಳ ಫಂಡ್ ರೈಸ್ ಮಾಡೋದಕ್ಕೆ ಪ್ಲಾನ್ ಮಾಡಿತ್ತು ಆದ್ರೆ ಅದು ಕೂಡ ಸಕ್ಸಸ್ ಆಗಿಲ್ಲ. ಈಗ ವೊಡಾಫೋನ್ ನ ಪೇರೆಂಟ್ ಕಂಪನಿ ಕೂಡ ಹಣ ಕೊಡೋದಕ್ಕೆ ತಯಾರಿಲ್ಲ. ಅವರು ಹೇಳ್ತಾರೆ ನಾವು ಯಾವುದೇ ಫ್ರೆಶ್ ಇನ್ವೆಸ್ಟ್ಮೆಂಟ್ಮಾಡೋದಕ್ಕೆ ತಯಾರಿಲ್ಲ ಅಂತ. ರಾಜೀನಾಮೆ ನೀಡುವ ಶೀರ್ಷಿಕೆ ಮತ್ತು ಅನುಗುಣವಾದ ಷೇರಿನ ಬೆಲೆ ಕುಸಿತ- ಇದೆಲ್ಲದರ ಜೊತೆಗೆ , ಕಂಪನಿಯು ಶತಕೋಟ್ಯಾಧಿಪತಿ ಕುಮಾರ್ ಮಂಗಳಂ ಬಿರ್ಲಾ ಅವರು ಕೆಳಗಿಳಿದಾಗ ಎಲ್ಲಾ ತಪ್ಪು ಕಾರಣಗಳಿಗಾಗಿ ಸುದ್ದಿಯಲ್ಲಿತ್ತು. ಪಬ್ಲಿಕ್ ಗೆ ಇದು ವೊಡಾಫೋನ್ ಐಡಿಯಾ ದ ಎಲ್ಲದಿಕ್ಕಿಂತ ಹೆಚ್ಚಾದ ನೋ ಕಾನ್ಫಿಡೆನ್ಸ್ ವೋಟ್ ಆಗಿದೆ. ಇದರೊಂದಿಗೆ ಕುಮಾರ ಮಂಗಲ ಬಿರ್ಲಾ ಅವರ ಪ್ರಕಾರ ವೊಡಾಫೋನ್ ಒಂದು ಹಾಟ್ ವಾಟರ್ ಆಗಿದೆ ಮತ್ತು ಇನ್ನಷ್ಟು ಬೀಳುವ ಸಾಧ್ಯತೆಗಳಿವೆ. ಮತ್ತು ಅವರು ಒಂದು ನ್ಯೂಸ್ ಪೇಪರ್ ಗೆ ಕೊಟ್ಟಿರುವ ಹೇಳಿಕೆಯ ಪ್ರಕಾರ ಈಗ ಯಾವುದೇ ಇನ್ವೆಸ್ಟೊರ್ಸ್ಗಳು ಇನ್ವೆಸ್ಟ್ ಮಾಡೋದಕ್ಕೆ ತಯಾರಿಲ್ಲ. ಇದಕ್ಕೆ ಕರಣ ಇನ್ಸ್ಟಾರ್ಸ್ ಮೇಲೆ ಬೀಳುವ AGR liability ಮತ್ತು moratorium on spectrum ಪೇಮೆಂಟ್. ಸ್ಪೆಕ್ಟ್ರಮ್ ಎಂದರೆ ಎಲ್ಲ ... ಏಕೆಂದರೆ ಈ 58,000 ಕೋಟಿಗಳು ವೊಡಾಫೋನ್ ಐಡಿಯಾದ ಸಾಲದ ಪೂರ್ಣ ಪ್ರಮಾಣವಲ್ಲ. ಬ್ಯಾಂಕುಗಳಿಗೆ ರೂ. 20,000 ಕ್ಕಿಂತ ಹೆಚ್ಚು ಬಾಕಿಯಿದೆ ಮತ್ತು ಇತರ ಹೊಣೆಗಾರಿಕೆಗಳು ರೂ. 96,000 ಕೋಟಿಗಳಿಗಿಂತ ಹೆಚ್ಚು. ಇದರೊಂದಿಗೆ ಲೀಸ್ ಲಯಬಿಲಿಟಿ ಕೂಡ ಇದೆ ಆದರೆ ಅದರ ಕುರಿತು ಯಾರು ಈಗ ಮಾತಾಡ್ತಾ ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಕುಮಾರ ಮಂಗಳಂ ಬಿರ್ಲಾ ಅವರ ಮಾತುಗಳನ್ನ ಇನ್ವೆಸ್ಟೊರ್ಸ್ಗೆ ಡೈಜೆಸ್ಟ್ ಮಾಡಿಕೊಳ್ಳೋದಕ್ಕೆ ಆಗ್ತಾ ಇಲ್ಲ . ಅದೇನೆಂದ್ರೆ , ವೊಡಾಫೋನ್ ಸೇವೆಯ ವೆಚ್ಚಕ್ಕಿಂತ ಹೆಚ್ಚಿನ ಫ್ಲೋರ್ ಪ್ರೈಸಿಂಗ್ ಹೇಗೆ ಹೊಂದಲು ಯೋಜಿಸಿದೆ ಎಂಬುದರ ಕುರಿತು ಸ್ಪಷ್ಟತೆಯ ಕೊರತೆ. ಟೆಲಿಕಾಂ ಕ್ಷೇತ್ರದಲ್ಲಿ ಹೂಡಿಕೆ ಮಾಡುವವರಿಗೆ ಈ ಕೊನೆಯ ಬಿಟ್ ಅತ್ಯಂತ ಆತಂಕಕಾರಿಯಾಗಿದೆ. ನಾವು ಕೆಲವು ನಿಮಿಷಗಳಲ್ಲಿ ಇದರ ಬಗ್ಗೆ ಹೆಚ್ಚು ಚರ್ಚಿಸುತ್ತೇವೆ. ಇದೆಲ್ಲ ಆದಮೇಲೆ ವೊಡಾಫೋನ್ ಐಡಿಯಾ ಷೇರಿನ ಬೆಲೆ 2 ದಿನಗಳಲ್ಲಿ 26% ಕುಸಿದಿದೆ. ಅಂದಿನಿಂದ ಬೆಲೆ ಅತ್ಯಂತ ಅಲ್ಪ ಪ್ರಮಾಣದಲ್ಲಿ ಚೇತರಿಸಿಕೊಂಡಿದೆ. ಆದಾಗ್ಯೂ ಈ ವರ್ಷ ಫೆಬ್ರವರಿಯಲ್ಲಿ 11 ರೂ.ಗೆ ಹೋಲಿಸಿದರೆ ಇದೀಗ ಸುಮಾರು 6 ರೂ ಅಷ್ಟೇ. ಗವರ್ನಮೆಂಟ್ ಮೂವ್ಸ್ - ಪರಿಹಾರ ಏನು ? ಸರಕಾರದ ಬಳಿಯೂ ಕಡಿಮೆ ಒಪ್ಶನ್ ಇದೆ ಒಪ್ಶನ್ ೧- ಸಂಪೂರ್ಣ ವಲಯಕ್ಕೆ AGR Dues ರಿಯಾಯಿತಿ ನೀಡುವುದು ... ರಿಲಯನ್ಸ್ ಮತ್ತು ಏರ್‌ಟೆಲ್‌ಗೂ ಕೂಡ. ಆದರೆ ಇದು ಸರ್ಕಾರಕ್ಕೆ ದೊಡ್ಡ ಹೊಡೆತ ನೀಡುತ್ತದೆ. ಒಪ್ಶನ್ ೨- ವೊಡಾಫೋನ್ ಐಡಿಯಾ ಸರ್ಕಾರದ ವಶಕ್ಕೆ. ಆದರೆ ಇದು ವೊಡಾಫೋನ್ ಐಡಿಯಾದ ಸಂಪೂರ್ಣ ಸಾಲವನ್ನು ಸರ್ಕಾರದ ಹೆಗಲ ಮೇಲೆ ಹಾಕುತ್ತದೆ. ಒಪ್ಶನ್ ೩ - ಕಂಪನಿಗಳು ತಮ್ಮ ಬಾಕಿ ಪಾವತಿಸಲು 20 ವರ್ಷಗಳನ್ನು ನೀಡುವುದು. ಒಪ್ಶನ್ ೪- ವೊಡಾಫೋನ್ ಐಡಿಯಾ ಮುಳುಗುವುದಕ್ಕೆ ಬಿಡೋದು . ಆದರೆ ಇದರಿಂದ 27 ಲಕ್ಷ ಚಂದಾದಾರಿಗೆ ಸಮಸ್ಯೆ ಆಗುತ್ತದೆ ಮತ್ತು ಇದು ವ್ಯಾಪಾರದ ಮೇಲೆ ಪರಿಣಾಮ ಬೀರಬಹುದು. ಜೊತೆಗೆ ಕೇವಲ 2 ಪ್ರಮುಖ ಟೆಲಿಕಾಂ ಕಂಪನಿಗಳು ದೇಶದಲ್ಲಿ ಇರುತ್ತವೆ, ಇದು ಆರೋಗ್ಯಕರ ಪರಿಸ್ಥಿತಿಯಲ್ಲ. ಷೇರುದಾರರಾಗಿ ನಿಮ್ಮ ಆಯ್ಕೆಗಳೇನು? ನಿಮ್ಮ ಗುರಿ ಗಳಿಕೆಯನ್ನು ನೀವು ಬುಕ್ ಮಾಡಿದ್ದರೆ ನೀವು ನಿರ್ಗಮಿಸಲು ಖಂಡಿತವಾಗಿಯೂ ಪರಿಗಣಿಸಬಹುದು. ಆದರೆ ಎಂಟ್ರಿ ಆಗೋದಕ್ಕೆ ಯೋಚಿಸ್ತಾ ಇದ್ರೆ ಇದು ಸರಿಯಾದ ಸಂದರ್ಭ ಅಲ್ಲ. ಅದು ಕೂಡ ಆರಂಭಿಕ ಹೂಡಿಕೆದಾರರಿಗೆ - ಯಾಕಂದ್ರೆ ಮುಂದೆ ಸಾಕಷ್ಟು ಅನಿಶ್ಚಿತತೆ ಇದೆ. ನಿಮ್ಮ ಬಳಿ ಷೇರು ಇದ್ದು ಟಾರ್ಗೆಟ್ ಅರ್ನಿಂಗ್ಸ್ ಆಗದೆ ಇದ್ದರೇ ಅದರ ಅನಿಶ್ಚಿತತೆ ಎಷ್ಟಿರಬಹುದು ಯೋಚಿಸಿ- ಈಗ ನೀವು ಆಟದಲ್ಲಿ ಉಳಿಯಲು ಬಯಸುವಿರಾ? ದಿ ಟೆಲಿಕಾಂ ಸೆಕ್ಟರ್ - ವೊಡಾಫೋನ್ ಅಂತೂ ಹೆಡ್ಲೈನ್ಸ್ ಮಾಡ್ತ್ ಇದೆ. ಹಾಗಾದ್ರೆ ಉಳಿದ ಕಂಪನಿಗಳ ಕಥೆ ಏನು ? ಭಾರ್ತಿ ಏರ್ಟೆಲ್ ನ ಬಾಕಿ ಸುಮಾರು 43,000 ಕೋಟಿಗಳಷ್ಟು ಆದರೆ ಕಂಪನಿ ಈಗಾಗಲೇ 25,000 ಕೋಟಿ ಪಾವತಿಸಿದೆ. ವೋಡಾಫೊನ್ ಗೆ ಹೋಲಿಸಿದರೆ ಬೆಟರ್, ಆದರೆ ಹೇಚ್ಛೆನು ಅಲ್ಲ ಏನಂತೀರಿ ? ಟಾಟಾ ಟೆಲಿಸರ್ವೀಸಸ್ ಬಾಕಿ ಸುಮಾರು 17,000 ಕೋಟಿ ರೂ. ಇದರಲ್ಲಿ ಕಂಪನಿಯು 4000 ಕೋಟಿ ರೂ.ಗಳಿಗಿಂತ ಹೆಚ್ಚು ಹೊರಗಡೆ ಕೊಟ್ಟಿದೆ, ಅದನ್ನ ಬಿಟ್ಟು ಅವರ ಬಾಕಿ ಸುಮಾರು 13,000 ಕೋಟಿ ರೂ. ರಿಲಯನ್ಸ್ ಜಿಯೋ ದ ಬಾಕಿ ರೂ 194.7 ಕೋಟಿ ಇದನ್ನ ಕಂಪನಿ ಪೇ ಮಾಡಿದೆ. ವೊಡಾಫೋನ್ ಐಡಿಯಾ ಒಂದನ್ನ ಸಾಬೀತು ಮಾಡಿದೆ ಅದೇನೆಂದ್ರೆ ಟೆಲಿಕಾಂ ಕಂಪನಿಗಳು ತಮ್ಮ ಸೇವಾ ವೆಚ್ಚವನ್ನು ಮೀರದ ಫ್ಲೋರ್ ಪ್ರೈಸಿಂಗ್ ಹೊಂದಿವೆ ಎಂದು - ದೀರ್ಘಾವಧಿಯಲ್ಲಿ ಅವು ಹೇಗೆ ಲಾಭದಾಯಕವಾಗುತ್ತವೆ? ವೊಡಾಫೋನ್ ಷೇರುಗಳನ್ನು ಖರೀದಿಸುವ ಮೊದಲು, ಹೂಡಿಕೆದಾರರು ಫೋರ್ಕ್ಸ್ ಹೊಣೆಗಾರಿಕೆಗಳು ಮತ್ತು ಅದರ ಆದಾಯದ ನಡುವಿನ ಅಂತರವನ್ನು ಗಮನಿಸಬೇಕು. ಆದರೆ ಇದರಲ್ಲಿ ಒಂದು ಪಾಠವಿದೆ - ಬ್ಯಾಲೆನ್ಸ್ ಶೀಟ್ ಅನ್ನು ಯಾವಾಗಲೂ ಸರಿಯಾಗಿ ನೋಡುವ ಮೂಲಕ ಹೂಡಿಕೆ ಮಾಡುವುದು ಮುಖ್ಯ. ಇದು ವೊಡಾಫೋನ್ ಐಡಿಯಾ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲದರ ಸಾರಾಂಶವಾಗಿದೆ. ಹೆಚ್ಚಿನ ಸುದ್ದಿ ಆಧಾರಿತ ಚರ್ಚೆಗಳು ಮತ್ತು ಪರಿಕಲ್ಪನೆ ಪರಿಚಯಗಳಿಗಾಗಿ(concept introductions)ಗೆ ಸ್ಟೇ ಟ್ಯೂನ್ಡ್. ಸೀ ಯು ಸೂನ್! ಹೋಗುವುದಕ್ಕೂ ಮೊದಲು ಇನ್ನೊಂದು ಮುಖ್ಯವಾದ ವಿಷಯ ಅಂದ್ರೆ ಈ ಪಾಡ್‌ಕ್ಯಾಸ್ಟ್ ಅನ್ನು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ ಮಾಡಲಾಗಿದೆ ಮತ್ತು ಹೂಡಿಕೆದಾರರು ತಮ್ಮದೇ ಸಂಶೋಧನೆಯನ್ನು ಸಹ ಮಾಡಬೇಕು. YouTube ಮತ್ತು ಇತರ ಸಾಮಾಜಿಕ ಮಾಧ್ಯಮ ಚಾನಲ್‌ಗಳ ಮೂಲಕ ಇಂತಹ ಆಸಕ್ತಿದಾಯಕ ಪಾಡ್‌ಕಾಸ್ಟ್‌ಗಳಿಗಾಗಿ ನಮ್ಮನ್ನು ಫಾಲೋ ಮಾಡಿ. ಶೀಘ್ರದಲ್ಲೇ ಮತ್ತೆ ಸಿಗೋಣ! ಗುಡ್ ಬೈ ಅಂಡ್ ಹ್ಯಾಪಿ ಇನ್ವೆಸ್ಟಿಂಗ್! ಸೆಕ್ಯುರಿಟೀಸ್ ಮಾರುಕಟ್ಟೆಗಳಲ್ಲಿನ ಹೂಡಿಕೆಗಳು ಮಾರುಕಟ್ಟೆಯ ಅಪಾಯಗಳಿಗೆ ಒಳಪಟ್ಟಿರುತ್ತವೆ, ಹೂಡಿಕೆ ಮಾಡುವ ಮೊದಲು ಎಲ್ಲಾ ಸಂಬಂಧಿತ ದಾಖಲೆಗಳನ್ನು ಎಚ್ಚರಿಕೆಯಿಂದ ಓದಿ.
Investments in the securities markets are subject to market risks. Read all the related documents carefully before investing.