What is HFT? And Risks to consider before trading. | Kannada
ಎಚ್‌ಎಫ್‌ಟಿ ಎಂದರೇನು? ಮತ್ತು ಟ್ರೇಡಿಂಗ್ ಗು ಮುನ್ನ ಪರಿಗಣಿಸಬೇಕಾದ ಅಂಶಗಳು. ಹಾಯ್ ಸ್ನೇಹಿತರೆ, ಏಂಜಲ್ ಒನ್ ನ ಈ ಪಾಡ್ಕ್ಯಾಸ್ಟ್ಗೆ ನಿಮಗೆ ಸ್ವಾಗತ .ಇವತ್ತು , ನಾವು ಹೈ ಫ್ರೀಕ್ವೆನ್ಸಿ ಟ್ರೇಡಿಂಗ್ನ ಕುರಿತಾಗಿ ನೋಡೋಣ. ಸರಳವಾಗಿ ಹೇಳೋದಾದ್ರೆ, ಹೈ-ಫ್ರೀಕ್ವೆನ್ಸಿ ಟ್ರೇಡಿಂಗ್ ಅಂದ್ರೆ ಕಂಪ್ಯೂಟರ್ ಪ್ರೋಗ್ರಾಮ್ ಅನ್ನ ಬಳಸಿ ಟ್ರೇಡಿಂಗ್ ಮಾಡೋದಾಗಿದೆ. ಯಾಕಂದ್ರೆ ಹೈ-ಫ್ರೀಕ್ವೆನ್ಸಿ ಟ್ರೇಡಿಂಗ್ ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆರ್ಡರ್ ಪ್ರೋಸೆಸ್ ಮಾಡಲಾಗುತ್ತದೆ. ಹೆಚ್ಚಿನ ಸಂಖ್ಯೆಯ ಆರ್ಡರ್ ಹಾಗು ರಿಫಿಟಿಂಗ್ (repeating) ಆರ್ಡರ್ಗಳನ್ನ ಪ್ರೋಸೆಸ್ ಮಾಡೋದಕ್ಕೆ ಸ್ಟ್ರಾಂಗ್ ಆದ ಕಂಪ್ಯೂಟರ್ ಪ್ರೋಗ್ರಾಮ್ ನ ಅಗತ್ಯತೆ ಇದೆ . ಈ ಪ್ರೋಗ್ರಾಮ್ಗಳು ಕಾಂಪ್ಲೆಕ್ಸ್ ಅಲ್ಗೊರಿಥಮ್(complex algorithms) ಅನ್ನ ಬಳಸಿ ಆರ್ಡರ್ ಅನ್ನ ಫುಲ್ ಫಿಲ್ ಮಾಡುತ್ತವೆ . ಹೈ-ಫ್ರೀಕ್ವೆನ್ಸಿ ಟ್ರೇಡಿಂಗ್ ಅನ್ನ ಹೆಡ್ಜ್ ಫಂಡ್ಸ್(hedge funds), ಇನ್ವೆಸ್ಟ್ಮೆಂಟ್ ಬ್ಯಾಂಕ್ಸ್, ಇನ್ಸ್ಟಿಟ್ಯೂಷನಲ್ ಇನ್ವೆಸ್ಟರ್ಸ ಬಳಸುತ್ತಾರೆ. ಹೈ-ಫ್ರೀಕ್ವೆನ್ಸಿ ಟ್ರೇಡಿಂಗ್ ಅಲ್ಲಿ ಸಕ್ಸಸ್ ಆಗೋದಕ್ಕೆ ಟೈಮಿಂಗ್ ಮತ್ತು ಸ್ಪೀಡ್ ಇವೆರಡು ಬಹಳ ಮುಖ್ಯವಾಗಿದೆ. ಯಾವ ಟ್ರೇಡ್ ನ ಎಕ್ಸಿಕ್ಯುಷನ್ ಸ್ಪೀಡ್ ಹೆಚ್ಚಾಗಿದೆಯೋ ಅದು ಸಕ್ಸಸ್ ಆಗುವ ಚಾನ್ಸ್ ಹೆಚ್ಚಿರುತ್ತದೆ . ಹೈ-ಫ್ರೀಕ್ವೆನ್ಸಿ ಟ್ರೇಡಿಂಗ್ ಅಲ್ಲಿ ಟರ್ನ್ ಓವರ್ ರೇಟ್ಸ ಮತ್ತು ಆರ್ಡರ್ - ಟು- ಟ್ರೇಡ್ ರೇಶಿಯೋ ಬಹಳ ಹೆಚ್ಚಾಗಿರುತ್ತದೆ. ಬೆನಿಫಿಟ್ಸ್ - ಹೈ-ಫ್ರೀಕ್ವೆನ್ಸಿ ಟ್ರೇಡಿಂಗ್ ಅಲ್ಲಿ ಬಹಳಷ್ಟು ಬೆನಿಫಿಟ್ಸ್ ಇದೆ .ಹೈ-ಫ್ರೀಕ್ವೆನ್ಸಿ ಟ್ರೇಡಿಂಗ್ ಬಳಸಿ ಸಣ್ಣ - ಸಣ್ಣ ಪ್ರೈಸ್ ಪ್ಲೇಕ್ಟುಯೇಷನ್(price fluctuations) ನಿಂದ ಪ್ರಾಫಿಟ್ ಗಳಿಸ ಬಹುದಾಗಿದೆ. ಎಚ್ ಎಫ್ ಟಿ ಇಂದ ಮಾರ್ಕೆಟ್ ಲಿಕ್ವಿಡಿಟಿ ಹೆಚ್ಚಾಗುತ್ತದೆ. ಏಕೆಂದರೆ ಟ್ರೇಡ್ ಅನ್ನ ವೇಗವಾಗಿ ನಡೆಸಲಾಗುತ್ತದೆ ಮತ್ತು ಇದರ ವಾಲ್ಯೂಮ್ ಕೂಡ ಹೆಚ್ಚಿರುತ್ತದೆ. ಹೆಚ್ ಎಫ್ ಟಿ ಇಂದ ಮಾರ್ಕೆಟ್ ಅಲ್ಲಿ ಕಾಂಪಿಟಿಶನ್ ಕೂಡ ಹೆಚ್ಚಾಗುತ್ತದೆ. ಆದಾಗ್ಯೂ, ಹೆಚ್ಚು ಲಿಕ್ವಿಡಿಟಿ ಇರುವ ಮಾರುಕಟ್ಟೆಗಳು ಕಡಿಮೆ ಅಪಾಯವನ್ನು ಹೊಂದಿರುತ್ತವೆ ಏಕೆಂದರೆ ಅಂತಹ ಮಾರುಕಟ್ಟೆಯಲ್ಲಿ ಯಾವುದೇ ಪೊಸಿಷನ್ ನ ಎರಡೂ ಕಡೆಗಳಲ್ಲಿ ಬಹಳಷ್ಟು ಟ್ರೇಡರ್ಸ್ ಇರುತ್ತಾರೆ. ಇಂತಹ ಟ್ರೇಡಿಂಗ್ ಗಳಿಂದ ಇನ್ಸ್ಟಿಟ್ಯೂಷನ್ ಬಿಡ್- ಆಸ್ಕ್ಸ್ಪ್ರೆಡ್ಸ್ (institutions bid-ask spreads) ಅಲ್ಲಿ ಹೆಚ್ಚಿನ ರಿಟರ್ನ್ ಅನ್ನ ನಿರೀಕ್ಷಿಸ ಬಹುದು. HFT ನಲ್ಲಿ ಬಳಸುವ ಅಲ್ಗಾರಿದಮ್‌ಗಳು ಹಲವಾರು ಮಾರುಕಟ್ಟೆಗಳು ಮತ್ತು ಅವುಗಳ ವಿನಿಮಯಗಳನ್ನು ಸ್ಕ್ಯಾನ್ ಮಾಡುತ್ತವೆ.ಇದನ್ನು ಮಾಡುವುದರಿಂದ, ವ್ಯಾಪಾರಿಗಳು ಹೆಚ್ಚಿನ ಅವಕಾಶಗಳನ್ನು ಪಡೆಯಬಹುದು. ರಿಸ್ಕ್ಸ್ - ಹೈ-ಫ್ರೀಕ್ವೆನ್ಸಿ ಟ್ರೇಡಿಂಗ್ - ಈ ವಿಷಯ ತಜ್ಞರು( experts), ಹಣಕಾಸು ವೃತ್ತಿಪರರು(finance professionals) ಮತ್ತು ನಿಯಂತ್ರಕರಿಂದ (regulators)ಸಾಕಷ್ಟು ಚರ್ಚೆಗೆ ಒಳಗಾಗಿದೆ. ಇದಕ್ಕೆ ಕಾರಣವೆಂದರೆ ಹೈ-ಫ್ರೀಕ್ವೆನ್ಸಿ ಟ್ರೇಡಿಂಗ್ ಅನೇಕ ಅಪಾಯಗಳನ್ನು ಹೊಂದಿದೆ. ಹೈ-ಫ್ರೀಕ್ವೆನ್ಸಿ ಟ್ರೇಡಿಂಗ್ ಅಲ್ಲಿ ಟ್ರೇಡರ್ಸ್ ಬಹಳ ಕಡಿಮೆ ಸಮಯಕ್ಕೆ ತಮ್ಮ ಸ್ಥಾನವನ್ನ ಹಿಡಿದಿಟ್ಟು ಕೊಳ್ಳುತ್ತಾರೆ. ಲಾಂಗ್ ಟರ್ಮ್ ಸ್ಟ್ರಾಟೆಜಿ ಬಳಸುವ ಇನ್ವೆಸ್ಟೊರ್ಸ್ಗೆ(investors) ಹೋಲಿಸಿದರೆ ಹೈ-ಫ್ರೀಕ್ವೆನ್ಸಿ ಟ್ರೇಡಿಂಗ್ ನಿಂದ ರಿಸ್ಕ್ - ರಿವಾರ್ಡ್ ರೇಶಿಯೋ ತುಂಬಾ ಹೆಚ್ಚಾಗಿದೆ. ಹೀಗೆ ಮಾಡುವುದರಿಂದ ಹೈ-ಫ್ರೀಕ್ವೆನ್ಸಿ ಟ್ರೇಡರ್ಸ್ ಬಹಳಷ್ಟು ಸಣ್ಣ - ಸಣ್ಣ ಪ್ರಾಫಿಟ್ ಅನ್ನ ಮಾಡಿಕೊಳ್ಳುತ್ತಿದ್ದಾರೆ. ಆದರೆ ಇದರಿಂಗಾಗಿ ಲಾಸ್ ಆಗುವ ರಿಸ್ಕ್ ಕೂಡ ಹೇಚ್ಛೆ ಇದೆ. ಹೈ-ಫ್ರೀಕ್ವೆನ್ಸಿ ಟ್ರೇಡಿಂಗ್ ನ ಒಂದು ಡೌನ್ ಸೈಡ್ ಇದೆ. ಅದೇನಂದ್ರೆ ಹೀಗೆ ಮಾಡುವುದರಿಂದ ಮಾರ್ಕೆಟ್ ಅಲ್ಲಿ" ಗೋಸ್ಟ್ ಲಿಕ್ವಿಡಿಟಿ" ಕ್ರಿಯೇಟ್ ಆಗುತ್ತದೆ. ವಿಮರ್ಶಕರ ಪ್ರಕಾರ ಹೈ-ಫ್ರೀಕ್ವೆನ್ಸಿ ಟ್ರೇಡಿಂಗ್ ಲಿಕ್ವಿಡಿಟಿ ಯನ್ನ ಸ್ರಷ್ಟಿಸುತ್ತದೆ ಎಂದು, ಆದರೆ ಅದು ನಿಜವಲ್ಲ. ಏಕೆಂದರೆ ಸೆಕ್ಯುರಿಟಿಗಳು ಹೆಚ್ಚಿನ ಸಂಖ್ಯೆಯ ಟ್ರೇಡರ್ಗಳ ಬಳಿ ಕೆಲವೇ ಸೆಕೆಂಡುಗಳ ಕಾಲ ಇರುತ್ತವೆ. ಮತ್ತು ಯಾವಾಗ ದೀರ್ಘಾವಧಿಯ ಹೂಡಿಕೆದಾರು ಈ ಸೆಕ್ಯೂರಿಟಿಯನ್ನ ಖರೀದಿಸುವ ಹೊತ್ತಿಗೆ, ಎಲ್ಲಾ ಅಗತ್ಯ ಲಿಕ್ವಿಡಿಟಿ ಖಾಲಿಯಾಗುತ್ತದೆ. ರೆಗ್ಯುಲೇಟರ್ಸ್ ಪ್ರಕಾರ ಮಾರ್ಕೆಟ್ ವೊಲಾಟಲಿಟಿ ಜೊತೆ ಹೈ-ಫ್ರೀಕ್ವೆನ್ಸಿ ಟ್ರೇಡಿಂಗ್ ಗೆ ಸಂಬಂಧ ಇದೆ. ಕೆಲವು ರೆಗ್ಯುಲೇಟರ್ಸ್ ಹೈ-ಫ್ರೀಕ್ವೆನ್ಸಿ ಟ್ರೇಡಿಂಗ್ ಮಾರ್ಕೆಟ್ ಅನ್ನ ಇಲ್ ಲೀಗಲ್ ಆಗಿ ಮ್ಯಾನ್ಯೂಪ್ಯುಲೇಟ್ ಮಾಡುವುದನ್ನ ನೋಡಿದ್ದಾರೆ. ಇನ್ಸ್ಟಿಟ್ಯೂಷನಲ್ ಹೈ ಫ್ರೀಕ್ವೆನ್ಸಿ ಟ್ರೇಡರ್ಸ್ ಚಿಕ್ಕ ಟ್ರೇಡರ್ಸ್ಗಳ ಎಕ್ಸ್ಪೆನ್ಸ್ನಿಂದ ಕೂಡ ಲಾಭ ಗಳಿಸುತ್ತಿರುವುದನ್ನ ನೋಡಬಹುದಾಗಿದೆ. ಹೈ ಫ್ರೀಕ್ವೆನ್ಸಿ ಟ್ರೇಡಿಂಗ್ ನಿಂದಾಗಿ ದೊಡ್ಡ ಇನ್ವೆಸ್ಟ್ಮೆಂಟ್ ಫರ್ಮ್ ಗಳಿಗೆ ಅಡ್ವಾಂಟೇಜ್ ಸಿಗುತ್ತಿದೆ ಮತ್ತು ಲಾಂಗ್ ಟರ್ಮ್ ಇನ್ವೆಸ್ಟರ್ಸ್ ತೊಂದರೆಗೊಳಗಾಗುತ್ತಿದ್ದಾರೆ. ಹೊಸ ಹೊಸ ಟೆಕ್ನಾಲಜಿಗಳ ಕಾರಣದಿಂದಾಗಿಯೂ ಮಾರ್ಕೆಟ್ ವೊಲಾಟಲಿಟಿ ಹೆಚ್ಚಾಗುತ್ತಿದೆ. ಈ ತಂತ್ರಜ್ಞಾನಗಳು ಹೆಚ್ಚಾಗುತ್ತಿದ್ದಂತೆ, ಮಾರ್ಕೆಟ್ ಕ್ರ್ಯಾಶ್ ಮೇಲೆ ಕೂಡ ಇವುಗಳು ಪ್ರಭಾವ ಬೀರುತ್ತವೆ. ಯೂರೋಪ್ ನ ಹೆಚ್ಚಿನ ದೇಶಗಳು ಹೈ ಫ್ರೀಕ್ವೆನ್ಸಿ ಟ್ರೇಡಿಂಗ್ ಅನ್ನ ಬ್ಯಾನ್ ಮಾಡಿವೆ. ಮತ್ತು ಇದರ ಕೆಲವೊಂದು ಆಸ್ಪೆಕ್ಟಗಳನ್ನ ಇಲ್ ಲೀಗಲ್ ಎಂದು ಹೇಳಲಾಗುತ್ತಿವೆ. ಉದಾಹರಣೆಗೆ, ಕಂಪ್ಯೂಟರ್ ಪ್ರೋಗ್ರಾಂಗಳು ಅಲ್ಗಾರಿದಮ್‌ಗಳ ಮೂಲಕ ಆರ್ಡರ್ ಪ್ಲೇಸ್ ಹಾಗು ಕ್ಯಾನ್ಸಲ್ ಮಾಡುವುದಕ್ಕೆ ಬಳಸಲಾಗುತ್ತವೆಯೋ ಅವು ಸೆಕ್ಯುರಿಟಿ ಯ ಬೆಲೆಯ ಮೇಲೆ ಮೋಮೆಂಟರಿ ಸ್ಪೈಕ್ ಅನ್ನ ಮಾಡುತ್ತವೆ. ಇದನ್ನು ಡಿಸೆಪ್ಟಿವ್(deceptive) ಮತ್ತು ಇಲ್ ಲೀಗಲ್ ಅಭ್ಯಾಸವೆಂದು ಪರಿಗಣಿಸಲಾಗಿದೆ. ಅಪಾಯಗಳನ್ನು ತಪ್ಪಿಸಲು ಕ್ರಮಗಳು - ಸ್ನೇಹಿತರೆ ೨೦೧೬ರಲ್ಲಿ, ಸೆಬಿ(sebi) ಹೈ ಫ್ರೀಕ್ವೆನ್ಸಿ ಟ್ರೇಡಿಂಗ್ ಅನ್ನ ಅಥವಾ ಅಲ್ಗಾರಿದಮ್ ಅನ್ನ ರೇಗುಲೇಟ್ ಮಾಡುವುದಕ್ಕೆ ಏಳು ವಿದಾನಗಳನ್ನ ಪ್ರೊಪೋಸ್ ಮಾಡಿತ್ತು. ಇದು ನಾರ್ಮಲ್ ಮಾರ್ಕೆಟ್ ಟ್ರೇಡರ್ಸ್ ಮತ್ತು ಇನ್ಸ್ಟಿಟ್ಯೂಷನಲ್ ಪ್ಲೇಯರ್ಸ್ ಮದ್ಯೆ ಇರುವ ಗ್ಯಾಪ್ ಅನ್ನ ಕಡಿಮೆ ಮಾಡುವ ಗೋಲ್ ಅನ್ನ ಹೊಂದಿದೆ. sebi ತನ್ನ ಡಿಸ್ಕ್ಷನ್(discussion) ಪೇಪರ್ ಪ್ರೊಪೊಸಿಷನ್ ನಲ್ಲಿ HFT ಆರ್ಡರ್ ನಲ್ಲಿ ಒಂದು ರೆಸ್ಟಿಂಗ್ ಟೈಮ್ ಇರಬೇಕು ಇದು fleeting ಆರ್ಡರ್ ಅನ್ನ ಎಲಿಮಿನೇಟ್ ಮಾಡೋದಕ್ಕೆ ಸಹಕಾರಿ ಆಗುತ್ತದೆ ಎಂದು ಹೇಳಿದೆ. ಎರಡನೇಯದಾಗಿ , ಆರ್ಡರ್ ಗಳನ್ನ ಮಾರುವುದಕ್ಕೆ ಮತ್ತು ಖರೀದಿಸುವುದಕ್ಕೆ ಮೊದಲು ಅದನ್ನ ಮ್ಯಾಚ್ ಮಾಡಿ, ಮ್ಯಾಚಿಂಗ್ ಆರ್ಡರ್‌ಗಳನ್ನ ಬ್ಯಾಚ್ ಸಿಸ್ಟಂ ಅಲ್ಲಿ ಸಂಗ್ರಹಿಸಿ. ಮೂರನೆಯದಾಗಿ, ಆರ್ಡರ್ ಪ್ರೊಸೆಸಿಂಗ್ ನಲ್ಲಿ ಕೆಲವು ಮಿಲಿಸೆಕೆಂಡುಗಳ ವಿಳಂಬವಿರುತ್ತದೆ, ಇದು ಟೈಮ್ ಸೆನ್ಸಿಟಿವ್ ಟ್ರೇಡಿಂಗ್ ಸ್ಟ್ರಾಟೆಜಿ ಯನ್ನ ಡಿಸ್ಕರೇಜ್ ಮಾಡುತ್ತದೆ. ನೆಕ್ಸ್ಟ್ , ಆರ್ಡರ್ ಕ್ಯೂ ಅನ್ನ ಪ್ರತಿ 1 - 2 ಸೆಕೆಂಡ್ಗಳಿಗೊಮ್ಮೆರೆಡಿ ಮಾಡಲಾಗುತ್ತೆ ಯಾಕಂದ್ರೆ ಟ್ರೇಡಿಂಗ್ ಸ್ಪೀಡ್ ಒಂದೇ ಸ್ಟ್ರಾಟೆಜಿ ಆಗದಿರಲಿ ಅಂತ. ಆರ್ಡರ್-ಟು-ಟ್ರೇಡ್ ಅನುಪಾತವು ಹೆಚ್ಚಿನ ಮಿತಿಯನ್ನು ವಿಧಿಸುತ್ತದೆ ಏಕೆಂದರೆ ಹೆಚ್.ಎಫ್.ಟಿ ಯಲ್ಲಿ ದೊಡ್ಡ ಆದೇಶಗಳನ್ನು ರದ್ದುಗೊಳಿಸುವ ಹೆಚ್ಚಿನ ಅವಕಾಶಗಳಿವೆ. ಕೋ-ಲೋಕೇಟೆಡ್ ಸರ್ವರ್ ಮತ್ತು ಇತರ ಸರ್ವರ್‌ಗಳಿಂದ ಬರುವ ಆರ್ಡರ್‌ಗಳಿಗೆ ಪ್ರತ್ಯೇಕ ಕ್ಯೂ ಇರಬೇಕು ಎಂದು ಸೆಬಿ ತನ್ನ ಪ್ರಸ್ತಾವನೆಯಲ್ಲಿ ತಿಳಿಸಿದೆ. ಮತ್ತು ಟಿಕ್-ಬೈ-ಟಿಕ್ ಡೇಟಾ ಫೀಡ್ ಅನ್ನು ಪರಿಶೀಲಿಸಬೇಕು ಎಂದು ಸೆಬಿ ಅಭಿಪ್ರಾಯಪಟ್ಟಿದೆ. ಈ ಫೀಡ್ ಅನ್ನು HFT ಬಳಕೆದಾರರು ಶುಲ್ಕ ಪಾವತಿಸಿ ಬಳಸಬಹುದಾಗಿದೆ, ಆದರೆ ಸೆಬಿ ಎಲ್ಲಾ ಮಾರ್ಕೆಟ್ ಪಾರ್ಟಿಸಿಪೆಂಟ್ಸ್ ಆಕ್ಸೆಸ್ ಮಾಡ ಬಹುದಾದ ರಚನೆಯನ್ನು ನೀಡಲು ಬಯಸುತ್ತದೆ. ಸ್ನೇಹಿತರೆ ಹೈ ಫ್ರೀಕ್ವೆನ್ಸಿ ಟ್ರೇಡಿಂಗ್ ತುಂಬಾ ಜನಪ್ರಿಯ ಆಗಿದೆ, ಆದರೆ ಅದರಿಂದ ಆಗುವ ಅಪಾಯಗಳಿಂದಾಗಿ, ಬಹಳಷ್ಟು ನಿಯಮಗಳನ್ನು ಇದಕ್ಕೆ ಅನ್ವಯಿಸಬೇಕಾಗುತ್ತದೆ. ಈ ಪಾಡ್‌ಕ್ಯಾಸ್ಟ್‌ನಲ್ಲಿ ನಾವು ಕಲಿತಂತೆ, HFT ಅನ್ನು ಅನೈತಿಕ ಮಾತ್ರವಲ್ಲ, ಕೆಲವು ಸಂದರ್ಭಗಳಲ್ಲಿ ಕಾನೂನುಬಾಹಿರವಾಗಿಯೂ ಪರಿಗಣಿಸಬಹುದು. ಇಂದಿನ ಪಾಡ್‌ಕಾಸ್ಟ್‌ನಲ್ಲಿ ಇಷ್ಟೆ! ಹೊರಡುವ ಮೊದಲು, ಒಂದು ವಿಷಯವನ್ನು ನೆನಪಿಡಿ, ಷೇರು ಮಾರುಕಟ್ಟೆಯ ಹೂಡಿಕೆಯಲ್ಲಿ ಯಾವಾಗಲೂ ಅಪಾಯವಿರುತ್ತದೆ.ಈ ಪಾಡ್‌ಕ್ಯಾಸ್ಟ್ ಅನ್ನು ಶೈಕ್ಷಣಿಕ ಉದ್ದೇಶಗಳಿಗಾಗಿ ಮತ್ತು ಹೂಡಿಕೆದಾರರಾಗಿ ಮಾತ್ರ ಮಾಡಲಾಗಿದೆ ಮತ್ತು ಹೂಡಿಕೆದಾರು ನೀವು ನಿಮ್ಮ ಸ್ವಂತ ಸಂಶೋಧನೆಯನ್ನೂ ಮಾಡುವುದು ಅಗತ್ಯವಾಗಿದೆ. ಇಂತಹ ಇನ್ನಷ್ಟು ಇಂಟ್ರೆಸ್ಟಿಂಗ್ ಪಾಡ್ಕ್ಯಾಸ್ಟ್ ಕೇಳುವುದಕ್ಕಾಗಿ ನಮ್ಮ ಯೌಟ್ಯೂಬ್ ಮತ್ತು ಸೋಶಿಯಲ್ ಮೀಡಿಯಾ ಲಿಂಕ್ ಗಳನ್ನ ಫಾಲೋ ಮಾಡಿ. ಗುಡ್ ಬೈ ಆಂಡ್ ಹ್ಯಾಪಿ ಇನ್ವೆಸ್ಟಿಂಗ್! ಸೆಕ್ಯುರಿಟೀಸ್ ಮಾರುಕಟ್ಟೆಗಳಲ್ಲಿನ ಹೂಡಿಕೆಗಳು ಮಾರುಕಟ್ಟೆಯ ಅಪಾಯಗಳಿಗೆ ಒಳಪಟ್ಟಿರುತ್ತವೆ. ಹೂಡಿಕೆ ಮಾಡುವ ಮೊದಲು ಎಲ್ಲಾ ಸಂಬಂಧಿತ ದಾಖಲೆಗಳನ್ನು ಎಚ್ಚರಿಕೆಯಿಂದ ಓದಿ.