Upcoming IPOs in July | Kannada

Podcast Duration: 8:13
ಜುಲೈನಲ್ಲಿ ಬರುವ ಐಪಿಒಗಳು ನಮಸ್ತೆ ಸ್ನೇಹಿತರೆ, ಏಂಜಲ್ ಒನ್ ನ ಐಪಿಒ ಕುರಿತಾದ ಮತ್ತೊಂದು ಪಾಡ್ಕ್ಯಾಸ್ಟ್ ಗೆ ಸ್ವಾಗತ! ನಾವಿವತ್ತು ಜುಲೈ ತಿಂಗಳಲ್ಲಿ ಬರುವ ಐಪಿಒ ಗಳ ಕುರಿತು ಚರ್ಚೆ ಮಾಡೋಣ . ಕ್ರಿಕೆಟ್ ಪ್ರಿಯರಿಗೆ ವರ್ಲ್ಡ್ ಕಪ್ ಹೇಗೆ ಸಂತೋಷದ ವಿಷಯವೋ ........... ಹಾಗೆ ಇನ್ವೆಸ್ಟರ್ಸ್ಗೆ ಐಪಿಒ ಕೂಡ . ಐಪಿಒ ಗಳಲ್ಲಿ ಹೂಡಿಕೆ ಮಾಡುವುದರಿಂದ ತ್ವರಿತವಾಗಿ ಹೂಡಿಕೆಯನ್ನ ರಿಟರ್ನ್ ಪಡೀಬಹುದು, ಅನ್ನುವ ಒಂದು ನಂಬಿಕೆಯಿದೆ, ಆದ್ದರಿಂದ ಅನೇಕ ಇನ್ವೆಸ್ಟರ್ಸ್ ಐಪಿಒನಲ್ಲಿ ಹೂಡಿಕೆ ಮಾಡುವ ನಿರೀಕ್ಷೆಯಲ್ಲಿ ಇರ್ತಾರೆ. ಇನ್ವೆಸ್ಟರ್ಗಳ ಪ್ರಕಾರ ಐಪಿಒ ಸಮಯದಲ್ಲಿ ನಾವು ಶೇರ್ ಗಳನ್ನ ಕಡಿಮೆ ಬೆಲೆಗೆ ಖರೀದಿಸಬಹುದು ...... ಪಟ್ಟಿ ಮಾಡಿದ ನಂತರ ಶೇರ್ ಗಳ ಪ್ರೈಸ್ ಜಾಸ್ತಿ ಆಗುತ್ತೆ....... ಆಗ ಹೆಚ್ಚಿನ ಬೆಲೆಗೆ ಅದನ್ನ ಮಾರಬಹುದು....... ಇದರಿಂದ ಉತ್ತಮ ರಿಟರ್ನ್ಸ್ ಗಳಿಸಬಹುದು ಅನ್ನೋದು ಅವರ ನಂಬಿಕೆ. ನಿಜ ಹೇಳ್ಬೇಕಂದ್ರೆ , ಇದೆಲ್ಲವೂ ನೀವು ಯಾವ ಕಂಪನಿಯ ಮೇಲೆ ಇನ್ವೆಸ್ಟ್ ಮಾಡ್ತೀರಾ ಅದ್ರ ಮೇಲೆ ಡಿಪೆಂಡ್, ಆದ್ರೂ ಐಪಿಒ ಇನ್ವೆಸ್ಟರ್ಗಳಲ್ಲಿ ಕುತೂಹಲ ಮತ್ತು ಉತ್ಸಾಹವನ್ನ ಹುಟ್ಟು ಹಾಕೋದಂತೂ ನಿಜ ............ ಅದೇ ಅಲ್ವ ನಿಮ್ಮನ್ನ ಕೂಡ ಇಲ್ಲಿಗೆ ಕರೆತಂದಿರೋದು . ಆದ್ದರಿಂದ ಸ್ವಲ್ಪ ಎಚ್ಚರಿಕೆಯಿಂದ, ಅದರ ಕುರಿತಾಗಿ ಆಳವಾಗಿ ತಿಳಿಯೋಣ : ಜುಲೈ ತಿಂಗಳು ಮತ್ತು ಮುಂಬರುವ ವಾರಗಳಲ್ಲಿ ನೀವು ತಿಳಿಯಲು ಬಯಸುವ 8 ಐಪಿಒ ಗಳು ಇಲ್ಲಿವೆ . ನೆನಪಿಡಿ - ಈ ಹೆಸರುಗಳು ಬದಲಾವಣೆ ಆಗುವ ಸಾಧ್ಯತೆಗಳೂ ಇವೆ. ಇವುಗಳು ಜುಲೈ ಅಲ್ಲಿ ಬಾರ್ದೆನು ಇರಬಹುದು- ಆದ್ರೆ ಮುಂಬರುವ ತಿಂಗಳುಗಳಲ್ಲಿ ಖಂಡಿತ ಬರಲಿವೆ. ಆದ್ದರಿಂದ ನೀವು ಅದ್ರ ಬಗ್ಗೆ ತಿಳಿದುಕೊಳ್ಳೋದು ಒಳ್ಳೇದು. ಜಿ.ಆರ್ ಇನ್ಫ್ರಾ ಪ್ರಾಜೆಕ್ಟ್ಸ್ (GR Infra Projects)- ಈ ಐಪಿಒ ಆಫರ್ ಫಾರ್ ಸೇಲ್ ಆಗಿದೆ. ಐಪಿಒ ದ ಮೊತ್ತ 1.15 ಕೋಟಿ. ಇದರಲ್ಲಿ 2.25 ಲಕ್ಷದ ಷೇರುಗಳು GR Infra Projects ನ ಉದ್ಯೋಗಿಗಳಿಗೆ ಕಾಯ್ದಿರಿಸಲಾಗಿದೆ. ಕಂಪನಿಯ 4 ಪ್ರಮೋಟರ್ಸ್ ಮತ್ತು ಶೇರ್ ಹೋಲ್ಡರ್ ಗಳು OFS ಅಲ್ಲಿ ತಮ್ಮ ಷೇರುಗಳನ್ನ ಅಫ್ಲೋಡ್(offload) ಮಾಡುತ್ತಾರೆ. ಜಿ. ಆರ್ ಇನ್ಫ್ರಾ ಪ್ರಾಜೆಕ್ಟ್ಸ್ ನ ಬ್ಯುಸಿನೆಸ್ ರಸ್ತೆಗಳು ಮತ್ತು ಹೆದ್ದಾರಿಗಳ ಕುರಿತಾಗಿದೆ. ಅವರ ಯೋಜನೆಗಳು ಪ್ರಸ್ತುತ ಭಾರತದ ಸುಮಾರು 15 ರಾಜ್ಯಗಳನ್ನು ಒಳಗೊಂಡಿವೆ. ಮತ್ತುಕಂಪನಿಯ ವಾರ್ಷಿಕ ಲಾಭವು ಈಗ ಹೆಚ್ಚಾಗಿದೆ. FY 2018 ರಲ್ಲಿ ಅದರ ಲಾಭ 716 ಕೋಟಿ, ಮತ್ತು 2019 ರಲ್ಲಿ 800 ಕೋಟಿ, ಇಷ್ಟು ಮಾತ್ರವಲ್ಲ 2020 ರಲ್ಲಿ ಕೋವಿಡ್ -19 ರ ನಡುವೆಯೂ ಜಿ. ಆರ್ ಇನ್ಫ್ರಾ ಪ್ರಾಜೆಕ್ಟ್ಸ್ನ ಲಾಭ 953 ಕೋಟಿ ಎಂದು ಸ್ವತಃ ಕಂಪನಿಯೇ ಹೇಳಿದೆ . ಸ್ನೇಹಿತರೆ ಈ ಐಪಿಒ ಜುಲೈ 7ಕ್ಕೆ ಬರಲಿದ್ದು 9 ರ ವರೆಗೆ ಓಪನ್ ಇರುತ್ತೆ . ಆದ್ದರಿಂದ ಕಂಪನಿಯ ಕುರಿತಾಗಿ ನಿಮ್ಮ ರಿಸರ್ಚ್ ಅನ್ನ ಕೂಡಲೇ ಮಾಡಿ. ಆಧಾರ್ ಹೌಸಿಂಗ್ ಫೈನಾನ್ಸ್ ------------- ಈ ಕಂಪನಿ ಹಣಕಾಸು ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಮನೆಗಳಿಗೆ , ನಿರ್ಮಾಣ ಹಂತದಲ್ಲಿರುವ ವಾಣಿಜ್ಯ ಸ್ಥಳಗಳಿಗೆ, improvements ಮತ್ತು acquisition ಗೆ ಸಂಬಂಧಿತ ಸಾಲಗಳನ್ನು ಪೂರೈಸುತ್ತದೆ. ಕೈಗೆಟುಕುವ ಹೌಸಿಂಗ್ ಫೈನಾನ್ಸ್ ಕಂಪನಿಗಳ ಗುಂಪಿನಲ್ಲಿ, ಇದು ಅತಿದೊಡ್ಡ ಕಂಪನಿಯಾಗಿದೆ. ಕಂಪನಿಯ ಆದಾಯ ಅಂಕಿಅಂಶಗಳನ್ನ ನೋಡೋಣ: 2018 ರಲ್ಲಿ ಆಧಾರ್ ಹೌಸಿಂಗ್ ಫೈನಾನ್ಸ್ ನ ಆದಾಯ 815 ಕೋಟಿ ರೂ ​2019 ರಲ್ಲಿ 1265 ಕೋಟಿ ರೂ ​2020 ರಲ್ಲಿ 1388 ಕೋಟಿ ರೂ ಕಂಪನಿಯ ನಿವ್ವಳ ಲಾಭವು 2018 ರಲ್ಲಿ 114 ಕೋಟಿಯಿಂದ 2020 ರಲ್ಲಿ 189 ಕೋಟಿ ರೂ.ಗೆ ಹೆಚ್ಚಿದೆ. ಐಪಿಒ ದಲ್ಲಿ ಫ್ರೆಶ್ ಇಶ್ಯೂ ಶೇರ್ ಗಳ ಜೊತೆಗೆ ಆಫರ್ ಫಾರ್ ಸೇಲ್ ಕೂಡ ಇರುತ್ತೆ. ಫ್ರೆಶ್ ಇಶ್ಯೂ ಶೇರ್ ಗಳ ಆದಾಯವನ್ನು "ಭವಿಷ್ಯದ ಬಂಡವಾಳದ ಅವಶ್ಯಕತೆಗಳನ್ನು ಪೂರೈಸಲು ಕಂಪನಿಯ ಬಂಡವಾಳದ ಮೂಲವನ್ನು ವಿಸ್ತರಿಸಲು ಬಳಸಲಾಗುತ್ತದೆ. ಈ ಕಂಪನಿಯು ಐಪಿಒನಲ್ಲಿ 7,300 ಕೋಟಿಗಳನ್ನ ಸಂಗ್ರಹಿಸಲು ಯೋಜಿಸಿದೆ! ​ದೇವಯಾನಿ ಇಂಟರ್ನ್ಯಾಷನಲ್ ------ ಈ ಕಂಪನಿಯು ಭಾರತದ ಪಿಜ್ಜಾ ಹಟ್, ಕೆಎಫ್‌ಸಿ ಮತ್ತು ಕೋಸ್ಟಾ ಕಾಫಿಯ ಅತಿದೊಡ್ಡ ಫ್ರಾಂಚೈಸಿ ಆಗಿದೆ. ಜುಲೈನಲ್ಲಿ ಅವರ ಐಪಿಒ ಹೋಸ್ಟ್ ಮಾಡುವ ಯೋಜನೆಗಳಿವೆ. ಐಪಿಒನಿಂದ ಬರುವ ಆದಾಯವು ಕಂಪನಿಯ ಸಾಲಗಳನ್ನು ತೀರಿಸಲು ಮತ್ತು ಅದರ ಸಾಂಸ್ಥಿಕ ವೆಚ್ಚಕ್ಕೆ ಹೋಗುತ್ತದೆ. ಕಂಪನಿಯ ಆದಾಯವು 2018 ರಲ್ಲಿ 1326 ಕೋಟಿ ರೂ.ಗಳಿಂದ 2019 ರಲ್ಲಿ 1535 ಕೋಟಿ ರೂ.ಗೆ ಏರಿದೆ. ಆದಾಗ್ಯೂ, ಮಾರ್ಚ್ 2021 ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಆದಾಯವು 1198 ಕೋಟಿ ರೂ.ಗೆ ಇಳಿದಿದೆ. ಈ ಬ್ರ್ಯಾಂಡ್ ಏಕಕಾಲದಲ್ಲಿ ತನ್ನ ನಷ್ಟವನ್ನು ಕಡಿಮೆಗೊಳಿಸಿದೆ. ಗ್ಲೆನ್ಮಾರ್ಕ್ ಲೈಫ್ ಸೈನ್ಸಸ್------------ ಇದು ಫಾರ್ಮಾ ವಲಯದಿಂದ ಜನಪ್ರಿಯವಾಗಿ ಗುರುತಿಸಲ್ಪಟ್ಟ ಹೆಸರು, ಇದು 1160 ಕೋಟಿ ರೂ ಐಪಿಒ ಗೆ ಪ್ಲಾನ್ ಮಾಡಿದೆ . ಗ್ಲೆನ್ಮಾರ್ಕ್ ಲೈಫ್ ಸೈನ್ಸಸ್- ಗ್ಲೆನ್ಮಾರ್ಕ್ ಫಾರ್ಮಾಸ್ಯುಟಿಕಲ್ಸ್ನ ಒಂದು ಭಾಗವಾಗಿದೆ. ಆಕ್ಟಿವ್ ಫಾರ್ಮಾಸ್ಯುಟಿಕಲ್ ಇನ್ಗ್ರೇಡಿಯೆಂಟ್ಸ್(ingredients) ಇದರ ಬ್ಯುಸಿನೆಸ್ ಆಗಿದೆ. ಗ್ಲೆನ್‌ಮಾರ್ಕ್ ಫಾರ್ಮಾಸ್ಯುಟಿಕಲ್ಸ್ --- ಗ್ಲೆನ್‌ಮಾರ್ಕ್ ಲೈಫ್ ಸೈನ್ಸಸ್ ಐಪಿಒನ ಭಾಗವಾಗಿ, ಕಂಪನಿಯ ತನ್ನ ಪಾಲಿನ 7.31 ಮಿಲಿಯನ್ ಷೇರುಗಳನ್ನು OFS ಅಡಿಯಲ್ಲಿ ಮಾರಾಟ ಮಾಡಲಿದೆ. ಗೋ ಏರ್ -------------------------- ಗೋ ಏರ್ಲೈನ್ಸ್ ಭಾರತದ 5 ನೇ ಅತಿದೊಡ್ಡ ವಿಮಾನಯಾನ ಸಂಸ್ಥೆಯಾಗಿದ್ದು, ಮುಂಬರುವ ಐಪಿಒನಲ್ಲಿ 3,600 ಕೋಟಿಗಳನ್ನು ಸಂಗ್ರಹಿಸಲು ಕಂಪನಿ ಯೋಜಿಸಿದೆ! ಸಾಲ ಮರುಪಾವತಿಗೆ ಪ್ರಾಥಮಿಕ ಹಣವನ್ನು ಬಳಸಲು ಅವರು ಉದ್ದೇಶಿಸಿದ್ದಾರೆ, ಅವರು ಮೇ ತಿಂಗಳಲ್ಲಿ DRHP SEBI ಅರ್ಜಿ ಸಲ್ಲಿಸಿದ್ದು. ಜುಲೈ ಅಂತ್ಯದ ವೇಳೆಗೆ ಅಪ್ರೂವಲ್ ಬರಲಿದೆ ಎಂದು ನಿರೀಕ್ಷಿಸುತ್ತಿದ್ದಾರೆ. ಪರಾಸ್ ಡಿಫೆನ್ಸ್ ಮತ್ತು ಸ್ಪೇಸ್ ಟೆಕ್ನಾಲಜೀಸ್-------------- ಈ ಕಂಪನಿಯ ರಕ್ಷಣಾ ಕ್ಷೇತ್ರ ಮತ್ತು ಬಾಹ್ಯಾಕಾಶ ಉತ್ಪನ್ನಗಳಿಗೆ ಸೊಲ್ಯೂಷನ್ಸ್ ಅನ್ನ ಒದಗಿಸುತ್ತದೆ . ಇದು ವಿನ್ಯಾಸದಿಂದ ಅಭಿವೃದ್ಧಿ ಮತ್ತು ಉತ್ಪಾದನೆಯವರೆಗಿನ ಕ್ಯಾಪೆಬಿಲಿಟಿಸ್(capabilities ) ಅನ್ನ ನೀಡುತ್ತದೆ. ಕಂಪನಿಯು ಟೆಸ್ಟಿಂಗ್ ಸರ್ವಿಸ್ ನ ಪೂರೈಕೆದಾರ ಕೂಡ ಹೌದು. ಪ್ಯಾರಾಸ್ ಡಿಫೆನ್ಸ್ ಮತ್ತು ಸ್ಪೇಸ್ ಟೆಕ್ನಾಲಜೀಸ್ , ಭಾರತದಲ್ಲಿ space application ಗಾಗಿ ದೊಡ್ಡ ಗಾತ್ರದ ಓಪ್ಟಿಕ್ಸ್ ಹೊಂದುವ monopoly ಹೊಂದಿದೆ, ಐಪಿಒ OFS ಮತ್ತು ಹೊಸ ಇಶ್ಯೂ ಒಳಗೊಂಡಿರುತ್ತದೆ. ಹೊಸ ಇಶ್ಯೂ ಇಂದ ಬರುವ ಆದಾಯವನ್ನು ಸಾಲಗಳ ಮರುಪಾವತಿ ಮತ್ತು ಸಾಮಾನ್ಯ ಕಾರ್ಪೊರೇಟ್ ವೆಚ್ಚಗಳಿಗೆ ಮತ್ತು ಯಂತ್ರೋಪಕರಣಗಳು ಮತ್ತು ಉಪಕರಣಗಳನ್ನು ಖರೀದಿಸಲು ಬಳಸಲಾಗುತ್ತದೆ. ಸೆವೆನ್ ಐಲ್ಯಾಂಡ್ಸ್ ಶಿಪ್ಪಿಂಗ್--------------------------- ಈ ಲಾಜಿಸ್ಟಿಕ್ಸ್ ಕಂಪನಿ ಕಚ್ಚಾ ತೈಲವನ್ನು ಸಾಗಿಸುತ್ತದೆ. ಹೌದು, ನೀವು ಮಾತ್ರವಲ್ಲ… ಇದನ್ನು ಕೇಳಿದ ನಂತರ ..... ಇತರ ಜನರು ಸಹ ಡಾಲರ್ ಚಿಹ್ನೆಗಳನ್ನು ನೋಡುತ್ತಾರೆ, .. ಆದರೆ ನೀವು ಅದನ್ನು ನಿರೀಕ್ಷಿಸಿದ್ದೀರಾ? ಕಂಪನಿಯ ಲಾಭವು 2018 ರಲ್ಲಿ 88 ಕೋಟಿ ರೂ.ಗಳಿಂದ 2019 ರಲ್ಲಿಬಹುತೇಕ - 38 ಕೋಟಿ ರೂ.ಗೆ ಇಳಿದಿತ್ತು, ಆದರೆ - 2020 ರ ಹಣಕಾಸು ವರ್ಷದಲ್ಲಿ 80 ಕೋಟಿ ರೂ ಲಾಭ ಗಳಿಸಿತ್ತು. ಆದಾಯವು 2018 ರ ಹಣಕಾಸು ವರ್ಷದಲ್ಲಿ 415 ಕೋಟಿ ರೂ.ಗಳಿಂದ 2019 ರಲ್ಲಿ 470 ಕೋಟಿ ರೂ.ಗೆ ತಲುಪಿದೆ ಮತ್ತು 2020 ರ ಹಣಕಾಸು ವರ್ಷದಲ್ಲಿ 727 ಕೋಟಿ ರೂ.ಆಗಿತ್ತು. ಆದ್ದರಿಂದ ಯಾವುದೇ ಕಂಪನಿಯಲ್ಲಿ ಹೂಡಿಕೆ ಮಾಡುವ ಮೊದಲು ಆ ಕಂಪನಿಯ ಫೈನಾನ್ಸಿಯಲ್ಸ್ ಅನ್ನ ಅಧ್ಯಯನ ಮಾಡುವ ಅವಶ್ಯಕತೆ ಏನು ಅನ್ನೋದು ಈಗ ನಿಮಗೆ ತಿಳಿದಿದೆ. ರೆವೆನ್ಯೂ ಹೆಚ್ಚಾಗಿದ್ದರೆ ಪ್ರಾಫಿಟ್ ಕಡಿಮೆ ಆಗೋದಕ್ಕೆ ಹೇಗ್ ಸಾಧ್ಯ? ಈ ದೃಷ್ಟಿಯಿಂದ ಮಾತ್ರವಲ್ಲ ಬದಲಾಗಿ ಯಾವುದೇ ಐಪಿಒನಲ್ಲಿ ಹೂಡಿಕೆ ಮಾಡುವ ಮೊದಲು ನೀವು ಕಂಪನಿಯ ಹಣಕಾಸು ವಿಷಯವನ್ನ ಗಮನಿಸಬೇಕು. ESAF ಸ್ಮಾಲ್ ಫೈನಾನ್ಸ್ ಬ್ಯಾಂಕ್ --------- ಈ ಬ್ಯಾಂಕ್ ಒಮ್ಮೆ ಏನ್.ಜಿ.ಓ ಆಗಿತ್ತು. ಈ ಬ್ಯಾಂಕಿನ ಪ್ರಧಾನ ಕಚೇರಿ ಕೇರಳದ ತ್ರಿಶೂರ್‌ನಲ್ಲಿದೆ. ಮತ್ತು ಈ ಕಂಪನಿಯು ಬಹಳ ವೇಗವಾಗಿ ಬೆಳೆದಿದೆ.ಇದರ ಆದಾಯವು 2017 ರಲ್ಲಿ 48 ಕೋಟಿ ರೂ.ಗಳಿಂದ 2019 ರಲ್ಲಿ 728 ಕೋಟಿಗೆ ಏರಿದೆ! ಸ್ನೇಹಿತರೇ, ಈ ಕಂಪನಿಯ ಐಪಿಒ ಆಗಸ್ಟ್‌ನಲ್ಲಿ ಬರುವ ಸಾಧ್ಯತೆಗಳು ಹೆಚ್ಚಾಗಿವೆ. ಆದ್ದರಿಂದ ಇದರ ಕುರಿತು ಆಮೇಲೆ ನೋಡೋಣ. ಸ್ನೇಹಿತರೆ , ನಾವೀಗ ಇಂದಿನ ಪಾಡ್‌ಕ್ಯಾಸ್ಟ್‌ನ ಕೊನೆಯಲ್ಲಿದ್ದೇವೆ. ಷೇರು ಮಾರುಕಟ್ಟೆ ಹೂಡಿಕೆ ಮಾಡುವಾಗ ನೀವು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳನ್ನು ಮರೆಯಬೇಡಿ: ನಿಮಗೆ ಎದುರಾಗುವ ಅಪಾಯದ ಬಗ್ಗೆ ಯಾವಾಗಲೂ ಜಾಗೃತರಾಗಿರಿ. ​ಮತ್ತು ಯಾವಾಗಲೂ ಹೂಡಿಕೆ ಮಾಡುವ ಮೊದಲು ಸರಿಯಾದ ರೀತಿಯಲ್ಲಿ ರಿಸರ್ಚ್ ಮಾಡಿ. ಇನ್ನೊಬ್ಬ ವ್ಯಕ್ತಿಯ ಸಲಹೆಯ ಮೇರೆಗೆ ಇನ್ವೆಸ್ಟ್ ಮಾಡೋದಕ್ಕೆ ಹೋಗಬೇಡಿ. ಈ ಪಾಡ್ಕ್ಯಾಸ್ಟ್ ಅನ್ನು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ ಮಾಡಲಾಗಿದೆ ಎಂದು ನೆನಪಿಡಿ ಮತ್ತು ಹೂಡಿಕೆದಾರರು ತಮ್ಮದೇ ಆದ ಸಂಶೋಧನೆ ಮಾಡಬೇಕು. ಅಂತಹ ಇನ್ನಷ್ಟು ಆಸಕ್ತಿದಾಯಕ ಪಾಡ್‌ಕಾಸ್ಟ್‌ಗಳಿಗಾಗಿ ನಮ್ಮನ್ನು ನಮ್ಮ ಯೂಟ್ಯೂಬ್ ಚಾನೆಲ್ ಮತ್ತು ಇತರ ಸಾಮಾಜಿಕ ಮಾಧ್ಯಮ ಚಾನಲ್‌ಗಳ ಮೂಲಕ ಫಾಲೋ ಮಾಡಿ. ಅಲ್ಲಿಯವರೆಗೂ, ಗುಡ್ ಬೈ ಆಂಡ್ ಹ್ಯಾಪಿ ಇನ್ವೆಸ್ಟಿಂಗ್! ಸೆಕ್ಯುರಿಟೀಸ್ ಮಾರುಕಟ್ಟೆಯಲ್ಲಿನ ಹೂಡಿಕೆಗಳು ಮಾರುಕಟ್ಟೆಯ ಅಪಾಯಗಳಿಗೆ ಒಳಪಟ್ಟಿರುತ್ತವೆ. ಹೂಡಿಕೆ ಮಾಡುವ ಮೊದಲು ಎಲ್ಲಾ ಸಂಬಂಧಿತ ದಾಖಲೆಗಳನ್ನು ಎಚ್ಚರಿಕೆಯಿಂದ ಓದಿ.