Trading – things to keep in mind | Kannada

Podcast Duration: 7:05
ಟ್ರೇಡಿಂಗ್ - ನೆನಪಿನಲ್ಲಿಡಬೇಕಾದ ವಿಷಯಗಳು. ನಮಸ್ತೆ ಕೇಳುಗರೇ, ಏಂಜಲ್ ಒನ್ ಅವರ ಈ ಪಾಡ್‌ಕ್ಯಾಸ್ಟ್‌ಗೆ ನಿಮಗೆ ಸುಸ್ವಾಗತ. ನೀವು ನಮ್ಮ ರೆಗ್ಯುಲರ್ ಲೀಸ್ನರ್ ಆಗಿದ್ದರೆ ನಿಮಗೆ ಮತ್ತೊಮ್ಮೆ ಸ್ವಾಗತ .ಹಾಗೆ ನಮ್ಮ ಪಾಡ್‌ಕಾಸ್ಟ್‌ಗಳು ನಿಮಗೆ ಉಪಯುಕ್ತವೆಂದು ಸಾಬೀತಾಗಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ ಮತ್ತು ಇದರಿಂದಾಗಿಯೇ ನೀವು ಮತ್ತೆ ಮತ್ತೆ ನಮ್ಮ ಪಾಡ್ಕ್ಯಾಸ್ಟ್ ಅನ್ನಕೇಳ್ತಾ ಇದ್ದೀರಿ. ಇದು ನಿಮಗೆ ಹೆಚ್ಚು ಹೆಚ್ಚು ಇಂಟ್ರೆಸ್ಟಿಂಗ್ ವಿಷಯವನ್ನು ತಿಳಿಸಲು ನಮ್ಮನ್ನು ಪ್ರೇರೇಪಿಸುತ್ತದೆ. ನೀವು ಮೊದಲ ಬಾರಿಗೆ ಕೇಳುತ್ತಿದ್ದರೆ, ಬೋರ್ಡ್ ಗೆ ನಿಮಗೆ ಸ್ವಾಗತ. ಇಂತಹ ಪಾಡ್ಕ್ಯಾಸ್ಟ್ ಗಳಲ್ಲಿ, ಏಂಜಲ್ ಒನ್ ಬಿಗಿನರ್ ಟ್ರೇಡರ್ಸ್ ಗೆ ಟ್ರೇಡ್ ಆರಂಭಿಸಲು ಬೇಕಾದ ಮೂಲಭೂತ ಶಿಕ್ಷಣವನ್ನು ನೀಡುತ್ತದೆ. ಇವತ್ತಿನ ಪಾಡ್ಕ್ಯಾಸ್ಟ್ನಲ್ಲಿ ನೀವು ಟ್ರೇಡ್ ಮಾಡುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ ಚೆಕ್ ಲಿಸ್ಟ್ ಅನ್ನ ನಿಮಗೆ ನೀಡಲಿದ್ದೇವೆ: ನಿಮ್ಮ ಸಂಶೋಧನೆ ಮಾಡಿ- ಇದೆ ವರ್ಷದಲ್ಲಿ ಕೆಲವು IPOಗಳು ಓವರ್ ಸಬ್ಸ್ಕ್ರೈಬ್ ಆಗಿವೆ ಆದರೆ ನೀವು ಆ ಕಂಪನಿಗಳ ಫೈನಾಸಿಯಲ್ ಅನ್ನ ನೋಡಿದ್ರೆ, ನಷ್ಟದಲ್ಲಿರುವ ಕಂಪನಿಯ ಷೇರುಗಳನ್ನು ಖರೀದಿಸಲು ಎಲ್ಲರೂ ಏಕೆ ಇಷ್ಟಪಟ್ಟಿದ್ದಾರೆ ಎಂದು ನೀವು ಆಶ್ಚರ್ಯ ಪಡುತ್ತೀರಿ. ನೀವೇನಾದ್ರು "ಗಾಳಿ ಸುದ್ದಿ" ಅಥವಾ ಪತ್ರಿಕೆ ಪ್ರಚಾರ ಅಥವಾ "ಪ್ರಸಿದ್ಧ ಕಂಪನಿ" ಇವುಗಳನ್ನ ನೋಡಿ ಹೂಡಿಕೆ ಮಾಡಿದ್ದರೆ ಈ ಮೂಲಕ ನೀವು ನಿಮ್ಮ ಹಣವನ್ನು ಅಪಾಯಕ್ಕೆ ತಳ್ಳುತ್ತಿದ್ದೀರಿ. ಯಾವಾಗಲೂ ನೆನಪಿನಲ್ಲಿಡಿ ಪ್ರಚಾರ, ಸೋಶಿಯಲ್ ಮೀಡಿಯಾ BUZ ಅನ್ನು ಕಂಪನಿಯು ಹೊಂದಿದ ಕಾರಣಕ್ಕೆ ಮತ್ತು ಕಂಪನಿಯು ಖ್ಯಾತಿ ಪಡೆದಿರುವ ಕಾರಣಕ್ಕೆ ಅದು ಲಾಭವನ್ನು ಗಳಿಸುತ್ತಿದೆ ಎಂದರ್ಥವಲ್ಲ. ಯಾವುದೇ ಕಂಪನಿಯ ಮೇಲೆ ಹೂಡಿಕೆ ಮಾಡುವುದಕ್ಕೆ ಮೊದಲು ನೀವು ಕಂಪನಿಯ ಹಣಕಾಸು ದಾಖಲೆಯನ್ನು ಪರಿಶೀಲಿಸಬೇಕು, ಇದು ಸಂಭಾವ್ಯ ಮತ್ತು ಭವಿಷ್ಯದ ಯೋಜನೆಗಳು ಮತ್ತು ಐತಿಹಾಸಿಕ ಸ್ಟಾಕ್ ಬೆಲೆಗಳ ಕುರಿತು ತಿಳಿಸುತ್ತದೆ. ತಜ್ಞರ ಸಲಹೆಗಳನ್ನು ಮತ್ತು ಕಾಪಿಕ್ಯಾಟ್ ಟ್ರೇಡಿಂಗ್ ಅನ್ನ ತಿರಸ್ಕರಿಸಿ . ತಜ್ಞರ ಸಲಹೆಗಳು ಹೆಚ್ಚಾಗಿ ಈ ರೀತಿ ಕೆಲಸ ಮಾಡುತ್ತವೆ. ಉದಾಹರಣೆಗೆ "EXPERTS" 1000 ಜನರನ್ನು ಸಂಪರ್ಕಿಸುತ್ತಾರೆ ಅಂದುಕೊಳ್ಳಿ ಅದರಲ್ಲಿ 500 ಜನರಿಗೆ ಮಾರಾಟದ ಸಲಹೆಯನ್ನು ನೀಡುತ್ತಾರೆ ಮತ್ತು 500 ಜನರಿಗೆ ಖರೀದಿಸಲು ಹೇಳುತ್ತಾರೆ. ಸ್ಟಾಕ್ ಬೆಲೆ ಹೆಚ್ಚಾದರೆ, ಖರೀದಿಸಿದ 500 ವ್ಯಾಪಾರಿಗಳು ಸಂತೋಷವಾಗಿರುತ್ತಾರೆ ಮತ್ತು ಸ್ಟಾಕ್ ಬೆಲೆ ಬಿದ್ದು ಹೋದರೆ ಮಾರಾಟ ಮಾಡಿದ ವ್ಯಾಪಾರಿಗಳು ಖುಷಿ ಪಡುತ್ತಾರೆ. ಆದ್ದರಿಂದ ನಿಮ್ಮ ಸ್ವಂತ ಸಂಶೋಧನೆಯ ಮೇಲೆ ಅವಲಂಬಿತವಾಗಿ ಯಾವಾಗಲೂ ಹೂಡಿಕೆ ಮಾಡಿ. ಹಾಗೆ ನಿಮ್ಮ ಯಾವುದೇ ಸ್ನೇಹಿತರು ಸ್ಟಾಕ್ ಮೇಲೆ ಇನ್ವೆಸ್ಟ್ ಮಾಡಿ ತುಂಬಾ ಗಳಿಸ್ತಾ ಇದ್ರೆ ಆಗ ನಿಮಗೂ ಸಹ ಅದರಲ್ಲಿ ಇನ್ವೆಸ್ಟ್ ಮಾಡಿ ಗಳಿಸುವ ಮನಸ್ಸಾಗುತ್ತೆ ಅಲ್ವ. ಆದರೆ ಗಳಿಕೆಗಳು ನೀವು ಯಾವ ಬೆಲೆಯಲ್ಲಿ ಖರೀದಿಸುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.ಬೆಲೆ ಕಡಿಮೆಯಿದ್ದಾಗ ಬಹುಶಃ ನಿಮ್ಮ ಸ್ನೇಹಿತ ಸ್ಟಾಕ್ ಅನ್ನು ಖರೀದಿಸಿರಬಹುದು. ಬೆಲೆ ಇದೇ ರೀತಿ ಹೆಚ್ಚಾಗುತ್ತದೆ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ -ಬದಲಾಗಿ, ಸ್ಟಾಕ್‌ಗಳನ್ನು ಆಯ್ಕೆ ಮಾಡಲು ಮುಂದಿನ ಎರಡು ಅಂಶಗಳು ನಿಮಗೆ ಸಹಾಯ ಮಾಡುತ್ತವೆ (ನಾವು ಪಾಯಿಂಟ್ 1 ರಲ್ಲಿ ವಿವರಿಸಿದಂತೆ ಸಹಜವಾಗಿ ನಿಮ್ಮ ಸ್ವಂತ ಸಂಶೋಧನೆಯನ್ನ ಮುಂದುವರಿಸಿ). technical indicators(ತಾಂತ್ರಿಕ ಸೂಚಕಗಳನ್ನು) ಬಳಸಿ - ಆದರೆ ಅದನ್ನು ಸುರಕ್ಷಿತವಾಗಿ ಪ್ಲೇ ಮಾಡಿ . moving averages, ವಾಲ್ಯೂಮ್(volume ) ಮತ್ತು relative strength index ನಂತಹ Technical indicators ನಿಮಗೆ ಮತ್ತಷ್ಟು ಸ್ಟಾಕ್ ಬೆಲೆ ಚಲನೆಯನ್ನು ಊಹಿಸಲು ನಿಮಗೆ ಸಹಾಯ ಮಾಡುತ್ತವೆ. ನೀವು ಸುರಕ್ಷಿತವಾಗಿ ಆಡುವುದನ್ನ ಪ್ರೆಡಿಕ್ಟ್ ಮಾಡಿ, ಆದರೆ ಸ್ಟಾಕ್ ಬೆಲೆಯು ನೀವು ಮೊದಲೇ ಪ್ರೆಡಿಕ್ಟ್ ಮಾಡಿದಂತೆ ಮೂವ್(move) ಮಾಡುವವರೆಗೆ WAIT ಮಾಡಿ. ಟೆಕ್ನಿಕಲ್ ಇಂಡಿಕೇಟರ್ಸ್ ಬೆಲೆ ಏರಿಕೆಯಾಗುತ್ತದೆಯೇ ಅಥವಾ ಇಳಿಯುತ್ತದೆಯೇ ಎಂದು ನಿಮಗೆ ಐಡಿಯಾ ನೀಡುತ್ತದೆ ಇದರ ಆದಾರದ ಮೇಲೆ ನೀವು ಶೇರ್ ಅನ್ನ ಖರೀದಿಸಬೇಕೆ ಎಂದು ನಿರ್ಧರಿಸಿ, ಇಲ್ಲವಾದಲ್ಲಿ(ನೀವು ಈಗಾಗಲೇ ಸ್ಟಾಕ್ ಅನ್ನು ಹೊಂದಿದ್ದರೆ) ಸೆಲ್ ಮಾಡಿ. ಷೇರುಗಳನ್ನು ಮೌಲ್ಯಮಾಪನ ಮಾಡಲು ಅನುಪಾತಗಳನ್ನು(retios) ಬಳಸಿ ಕೆಲವು ಪ್ರಸಿದ್ಧ ವ್ಯಾಪಾರಿಗಳು ಮತ್ತು ಹೂಡಿಕೆದಾರರ ಹೇಳಿಕೆ ಏನಂದ್ರೆ- ಯಾವಾಗಲೂ ಉತ್ತಮ ಪಿ/ಇ ರೇಶಿಯೋ ವನ್ನ ಹೊಂದಿರುವ ಸ್ಟಾಕ್‌ಗಳನ್ನು ಟ್ರೇಡ್ ಮಾಡಿ. ನಂತರ ಸ್ಟಾಕ್ ಬೆಲೆ ಮತ್ತು ಕಂಪನಿಯ ಗಳಿಕೆಯ ಅನುಪಾತದಲ್ಲಿ ಬೆಲೆಯನ್ನು ಹೋಲಿಸಿ. ಆದರೆ ಕಂಪನಿಯ ಆದಾಯವು ಸ್ಟಾಕ್ ಬೆಲೆಗಿಂತ ಹೆಚ್ಚಿದ್ದರೆ, ಅವರ ಪ್ರಕಾರ ಅವರು "ರಿಯಾಯಿತಿಯಲ್ಲಿ" ಷೇರು ವ್ಯಾಪಾರ ಮಾಡುತ್ತಿದ್ದಾರೆ ಎಂದು . ಹೆಚ್ಚಾಗಿ ಅಪ್ವಾರ್ಡ್ ಪ್ರೈಸ್ ಕರೆಕ್ಷನ್(upward price correction ) ಸಾಧ್ಯತೆ ಇರುತ್ತದೆ ಹಾಗಾಗಿ ರಿಯಾಯಿತಿಯಲ್ಲಿ ಖರೀದಿಸಿ ಮತ್ತು ಬೆಲೆ ತಿದ್ದುಪಡಿ ಆದ ಮೇಲೆ ಅರ್ನಿಂಗ್ಸ್ ಆಗುವ ಸಾಧ್ಯತೆ ಇದೆ. ಸ್ಟಾಪ್ ಲಾಸ್ ಅನ್ನ ಸೆಟ್ ಮಾಡಿ ಸ್ಟಾಕ್ ಬೆಲೆ ಏರಿಕೆಯಾಗುತ್ತಿರುವಂತೆ ಯಾವಾಗಲೂ ನೆನಪಿನಲ್ಲಿಡಿ, ಅದು ಯಾವಾಗ ಬೇಕಾದರೂ ರಿವರ್ಸ್ ಮಾಡಬಹುದು,ಅದು ಬೀಳಬಹುದು. ನಿಮ್ಮ ಹೂಡಿಕೆಯನ್ನು ರಕ್ಷಿಸಲು ಯಾವಾಗಲೂ ಸ್ಟಾಪ್ ಲಾಸ್ ಅನ್ನ ಸೆಟ್ ಮಾಡಿ. ಇನ್ನೊಂದು ವಿಷಯ: ಸ್ಟಾಪ್ ಲಾಸ್ ಅನ್ನ ಸೆಟ್ ಮಾಡುವಾಗ ಯೋಚಿಸಿ ಸೆಟ್ ಮಾಡಿ ಯಾಕಂದ್ರೆ ಸ್ಟಾಕ್ ಬೆಲೆಯು ಸಾಕಷ್ಟು ಏರಿಕೆಯಾಗುವ ಮೊದಲು ನಿಮ್ಮ ಪೊಸಿಷನ್ಸ್ ಮಾರಾಟವಾಗುತ್ತವೆ. ​Avoid knee jerk reactions( ಅವಾಯ್ಡ್ ನೀ ಜೆರ್ಕ್ ರಿಯಾಕ್ಷನ್) ಸ್ನೇಹಿತರೆ ಇದನ್ನು ಯಾವಾಗಲೂ ಅರ್ಥಮಾಡಿಕೊಳ್ಳಿ: ಸ್ಟಾಕ್ ಮಾರ್ಕೆಟ್ ಯಾವಾಗಲು ಎಮೋಷನಲ್ ಆಗಿರುತ್ತದೆ. ಉದಾಹರಣೆಗೆ: ಬಜೆಟ್ ಘೋಷಣೆಯು ಇದ್ದಕ್ಕಿದ್ದಂತೆ ಎಲ್ಲಾ ಸ್ಟಾಕ್ ಬೆಲೆಯನ್ನು ಹೆಚ್ಚಿಸುತ್ತದೆ ಇದರಿಂದ ಕಂಪನಿಗಳ ಮೇಲೆ ಯಾವುದೇ ಅನಔನ್ಸ್ಮೆಂಟ್(announcement) ಪರಿಣಾಮ ಬೀರುವುದಿಲ್ಲ. ನೀವು ಈ ಪ್ರತಿಕ್ರಿಯೆಗಳಿಗೆ ರಿಯಾಕ್ಟ್ ಮಾಡಬೇಡಿ - ಬದಲಾಗಿ ನಿಮ್ಮ ಷೇರುಗಳು ಮತ್ತು ಅವುಗಳಿಗೆ ಸಂಬಂಧಿಸಿದ ಕಂಪನಿಗಳು ಮತ್ತು ವಲಯಗಳ ಮೇಲೆ ಗಮನಹರಿಸಿ. ಮತ್ತುಒಂದು ನಿರ್ದಿಷ್ಟ ಘಟನೆ ಅಥವಾ ಪ್ರಕಟಣೆಯು ನಿಮ್ಮ ಸ್ಟಾಕ್‌ಗಳ ಮೇಲೆ ಅಥವಾ ಅದರ ವಲಯಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯಿರಿ. ಮತ್ತು ಹೌದು, ಹೆಚ್ಚಿನ ಏರಿಳಿತದ ಸಮಯದಲ್ಲಿ ಶಾಂತವಾಗಿರಿ. ಸಾಮಾನ್ಯವಾಗಿ ವಿಷಯಗಳು ಇತ್ಯರ್ಥವಾಗುವವರೆಗೆ ಕಾಯುವುದು ಉತ್ತಮ. risk appetite ಮತ್ತು risk mitigation ಅರ್ಥಮಾಡಿಕೊಳ್ಳಿ ಯಾವಾಗಲು ಕೆಲವೊಂದುಸಂದರ್ಭಗಳಲ್ಲಿ ನೀವು ಕಳೆದುಕೊಳ್ಳುವ ಬಂಡವಾಳದ ಪ್ರಮಾಣವನ್ನು ಲೆಕ್ಕಾಚಾರ ಮಾಡಿ. ಮತ್ತು ಅದೇ ಪ್ರಮಾಣದಲ್ಲೇ ಟ್ರೇಡ್ ಮಾಡಿ. ಬಾಡಿಗೆ, ದಿನಸಿ, ದೈನಂದಿನ ಉಪಯುಕ್ತತೆಗಳು ಅಥವಾ ಮೂಲಭೂತ ಜೀವನಶೈಲಿ ವೆಚ್ಚಗಳು, ಅಂದರೆ ಮೂಲ ಜೀವನ ವೆಚ್ಚಗಳು ಇದಕ್ಕೆ ಹಣವನ್ನ ಹೊಂದಿಸಿ ಇಟ್ಟು ಉಳಿದ ಹಣದಲ್ಲಿ ಟ್ರೇಡ್ ಮಾಡಿ. ನೀವು ಕೈಯಲ್ಲಿರುವ ಬಂಡವಾಳವನ್ನುಇನ್ವೆಸ್ಟ್ ಮಾಡಿ ಅಪಾಯ ತೆಗೆದುಕೊಳ್ಳುವ ಮೊದಲು ಯಾವಾಗಲೂ ಸ್ಥಿರ ಆದಾಯದ ಮೂಲವನ್ನು ಖಚಿತಪಡಿಸಿಕೊಳ್ಳಿ. ​ಮತ್ತೆ, risk mitigation...ಅಥವಾ management ಅಥವಾ risk minimization… ಮಾಡುವುದು ಅನಿವಾರ್ಯ. ಇದಕ್ಕಾಗಿ ನಿಮಗೆ ಯಾವಾಗಲು ಸ್ಟಾಪ್ ಲಾಸ್ ಸೆಟ್ ಮಾಡಬೇಕಾಗುತ್ತದೆ. ಮತ್ತು ಇದು ನಮಗೆ ಪಾಯಿಂಟ್ ನಂಬರ್ 8 ಅನ್ನ ನೆನಪಿಸುತ್ತದೆ , ಅದು ಯಾವಾಗಲು ನಿಮ್ಮ ಪೋರ್ಟ್ಪೋಲಿಯೋವನ್ನ ವೈವಿಧ್ಯಮಯಗೊಳಿಸಲು ಸಹಾಯ ಮಾಡುತ್ತದೆ. ಯಾವುದೇ ಷೇರು ಮಾರುಕಟ್ಟೆಯ ಹೂಡಿಕೆಯು ಅಪಾಯಕಾರಿಯಾಗಿ ಉಳಿಯುತ್ತದೆ ಎಂಬುದನ್ನು ಎಂದಿಗೂ ಮರೆಯಬೇಡಿ. ನೀವು ಈ ಅಪಾಯವನ್ನು ನಿರ್ವಹಿಸಬೇಕು. ನಿಮ್ಮ ಪೋರ್ಟ್‌ಫೋಲಿಯೊವನ್ನು ವೈವಿಧ್ಯಗೊಳಿಸಿ ಬಂಡವಾಳ ವೈವಿಧ್ಯೀಕರಣವು, ಹೆಚ್ಚಿನ ವ್ಯಾಪಾರಿಗಳು ಆಯ್ಕೆ ಮಾಡಿದ ಅತ್ಯಂತ ಜನಪ್ರಿಯ ಅಪಾಯ ತಗ್ಗಿಸುವಿಕೆಯ ತಂತ್ರವಾಗಿದೆ. ಅಂದರೆ ಒಂದು ವಲಯ ಅಥವಾ ಒಂದು ಕಂಪನಿಯ ನಷ್ಟದಿಂದಾಗಿ ನಿಮ್ಮ ಎಲ್ಲಾ ಹಣವು ನಷ್ಟವಾಗದಂತೆ ನೀವು ವಿವಿಧ ಕಂಪನಿಗಳು ಮತ್ತು ವಿವಿಧ ವಲಯಗಳಲ್ಲಿ ಹೂಡಿಕೆ ಮಾಡುತ್ತೀರಿ.ಮತ್ತು ಒಂದು ಕಂಪನಿ ಅಥವಾ ಒಂದು ವಲಯದ ನಷ್ಟವನ್ನು ಇನ್ನೊಂದು ಕಂಪನಿಯ ಗಳಿಕೆಯಿಂದ ಸರಿದೂಗಿಸಬಹುದು.ಇದು ಸ್ಮಾರ್ಟ್ ಮತ್ತು ಸುರಕ್ಷಿತ ಟ್ರೇಡಿಂಗ್ ಆಗಿದೆ. ಫೀಸ್ ಮತ್ತು ಚಾರ್ಜ್ಗಳ ಬಗ್ಗೆ ಮರೆಯಬೇಡಿ -Brokerage fees( ದಲ್ಲಾಳಿ ಶುಲ್ಕಗಳು) ಅಥವಾ ಇತರೆ ಫೀಸ್ ಗಳ ಕುರಿತು ಗಮನ ಹರಿಸುವುದು ಸಹ ಮುಖ್ಯವಾಗಿದೆ. ಎಲ್ಲ ಟ್ರೇಡ್‌ಗಳಿಗೂ ಒಂದು ಪರ್ಸಂಟೇಜ್ ಬದಲು ಫ್ಲಾಟ್ ರೇಟ್ ನೀಡುವ ಕೆಲವು ಬ್ರೋಕರ್‌ಗಳನ್ನು ಹುಡುಕುವುದು ಮುಂದುವರೆಯಲು ಉತ್ತಮ ಆಯ್ಕೆಯಾಗಿದೆ. ಇಲ್ಲಿ ಕಲಿಯಲು ಬಹಳಷ್ಟು ವಿಚಾರಗಳಿವೆ. ನೀವು ಟ್ರೇಡ್ ಮಾಡುತ್ತಿದ್ದರೆ ಮತ್ತು ಅದರಿಂದ ನೀವು ಗಳಿಸುತ್ತಿದ್ದರೆ ನೀವು ಈಗ ಆತ್ಮವಿಶ್ವಾಸದಿಂದ ಇರಬೇಕು ಆದರೆ ಅತಿಯಾದ ಆತ್ಮ ವಿಶ್ವಾಸ ಬೇಡ. ಇನ್ನೂ ಬಹಳಷ್ಟು ಕಲಿಯುವುದು ಬಾಕಿ ಇದೆ. ತಾಂತ್ರಿಕ ಸೂಚಕಗಳ ಬಗ್ಗೆ ತಿಳಿಯಿರಿ, ನಿಯಮ ಆಧಾರಿತ ವಹಿವಾಟಿನ ಬಗ್ಗೆ ತಿಳಿಯಿರಿ, ವಿವಿಧ ಆಸ್ತಿ ವರ್ಗಗಳ ಬಗ್ಗೆ ತಿಳಿಯಿರಿ ... ನಿಮ್ಮ ಜ್ಞಾನವನ್ನಹೆಚ್ಚಿಸುತ್ತೀರಿ. ಸ್ನೇಹಿತರೇ ಈಗ ನಾವು ನಮ್ಮ ಪಾಡ್‌ಕಾಸ್ಟ್‌ನ ಕೊನೆಯಲಿಲಿದ್ದೇವೆ. ಕೇಳುತ್ತಲೇ ಇರಿ ಮತ್ತು ಕಲಿಯುತ್ತಾ ಇರಿ. ಈ ಚೆಕ್‌ಲಿಸ್ಟ್‌ನಲ್ಲಿ ನೀವು ಅದನ್ನು ಕಂಡುಕೊಳ್ಳುತ್ತೀರಿ ಎಂದು ನಾನು ಭಾವಿಸುತ್ತೇನೆ. ಹೋಗುವುದಕ್ಕೂ ಮೊದಲು ನೆನಪಿಡಿ ಈ ಪಾಡ್‌ಕ್ಯಾಸ್ಟ್ ಅನ್ನು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ ಮಾಡಲಾಗಿದೆ ಮತ್ತು ವ್ಯಾಪಾರಿಗಳು ಮತ್ತು ಹೂಡಿಕೆದಾರರು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ತಮ್ಮದೇ ಸಂಶೋಧನೆಯನ್ನು ಮಾಡಬೇಕು. ಸೆಕ್ಯುರಿಟೀಸ್ ಮಾರುಕಟ್ಟೆಗಳಲ್ಲಿನ ಹೂಡಿಕೆಗಳು ಮಾರುಕಟ್ಟೆಯ ಅಪಾಯಗಳಿಗೆ ಒಳಪಟ್ಟಿರುತ್ತವೆ. ಹೂಡಿಕೆ ಮಾಡುವ ಮೊದಲು ಎಲ್ಲಾ ಸಂಬಂಧಿತ ದಾಖಲೆಗಳನ್ನು ಎಚ್ಚರಿಕೆಯಿಂದ ಓದಿ. ​ ​ ​ ​