Top 10 things to know before the market opens | Kannada

Podcast Duration: 07:00

ಸ್ನೇಹಿತರೇ, ಏಂಜೆಲ್ ಬ್ರೋಕಿಂಗ್‍ನ ಪಾಡ್‍ಕಾಸ್ಟ್‍ಗೆ ನಿಮಗೆ ಸ್ವಾಗತ. ​ ​ಸ್ನೇಹಿತರೇ, ಸ್ಟಾಕ್ ಮಾರ್ಕೆಟ್ ಟ್ರೇಡರ್ಸ್ ವೀಕ್‍ಡೇಸ್‍ನಲ್ಲಿ ಜೆನೆರಲ್ ಆಗಿ ಒಂದು ರೂಟಿನ್ ಫಾಲೋ ಮಾಡ್ತಾರೆ. ಬೆಲ್ ರಿಂಗ್ ಆಗೋಕ್ ಮೊದ್ಲೇ ಮಾರ್ಕೆಟ್‍ನ ತಿಳ್ಕೊಳೋಕೆ ಅವಶ್ಯವಿರುವ ಕಲಿಯುವಿಕೆಯನ್ನೂ ಈ ರೂಟಿನ್ ಒಳಗೊಂಡಿದೆ. ಯಾಕಂದ್ರೇ ಮಾರ್ಕೆಟ್ ಓಪನ್ ಆದಾಗ, ಟ್ರೇಡರ್‍ಗೆ ಈ ವಿಷ್ಯಗಳನ್ನ ರಿವ್ಯೂ ಮಾಡೋಕೆ ಸಮಯ ಇರೋ ಸಾಧ್ಯತೆ ಬಹಳ ಕಡಿಮೆ (/ಸಮಯ ಇರೋದಿಲ್ಲ). ಹಾಗಾಗಿ ಮಾರ್ಕೆಟ್ ಓಪನ್ ಆಗೋಕ್ ಮೊದ್ಲು ನಿಮಗ್ ತಿಳಿದಿರಬೇಕಾದ್ದು ಏನು? ​ ​ವೆಲ್, ಈ ಹತ್ ವಿಷ್ಯಗಳ್ ಗೊತ್ತಿರ್ಬೇಕು. ​ನಂಬರ್ 1 - ನ್ಯಾಷನಲ್ ನ್ಯೂಸ್ ಜೊತೆಗೆ ನೀವು ಅಪ್‍ಡೇಟ್ ಆಗ್ಬೇಕು. ​ಸ್ನೇಹಿತರೇ, ನ್ಯಾಷನಲ್ ನ್ಯೂಸ್‍ನೊಂದಿಗೆ ಸ್ಟಾಕ್ ಮಾರ್ಕೆಟ್‍ಗೆ ಸ್ಟ್ರಾಂಗ್ ಕೊ-ರಿಲೇಷನ್ (ಸಹಸಂಬಂಧ) ಇದೆ. ಇನ್‍ಫ್ಯಾಕ್ಟ್, ಕೆಲವು ರೂಲ್ ಟ್ರೇಡಿಂಗ್ ಸಾಫ್ಟ್‍ವೇರ್‍ಗಳು ನಿಮಗೆ ನ್ಯೂಸ್‍ನ ಅನಾಲಿಸಿಸ್ ಆಧಾರದ್ ಮೇಲೆ ಸ್ಟಾಕ್ ಮಾರ್ಕೆಟ್ ಫೋರ್‍ಕಾಸ್ಟ್‍ಗಳ್ನ ಪ್ರೊವೈಡ್ ಮಾಡುತ್ವೆ. ಯಾವಾಗ ಮಾರ್ಕೆಟ್ ಓಪನ್ ಆಗತ್ತೋ, ಆಗ ನೀವು ನ್ಯಾಷನಲ್ ನ್ಯೂಸ್‍ನ ಬಗ್ಗೆ ಗೊತ್ತಿಲ್ದೇ ಯಾವ್ದೇ ಟ್ರೇಡನ್ನ ಮಾಡಬಾರ್ದು. ಇಷ್ಟ್ ಗೊತ್ತಾದ್ ಮೇಲೆ, ರಾಷ್ಟ್ರದಾದ್ಯಂತ ಜಾರಿಲಿದ್ದ ಲಾಕ್‍ಡೌನ್ ಸ್ಟಾಕ್ ಮಾರ್ಕೆಟ್‍ಗಳಲ್ಲಿ ಭಾರತದ ಫಸ್ರ್ಟ್ ಡಿಪ್ ಜೊತೆಗೆ ಸ್ಟ್ರಾಂಗ್ ಆಗ್ ಕೋ-ರಿಲೇಟ್ ಆಗಿದೆ ಅನ್ನೋದು ನಿಮಗ್ ಸರ್ಪ್ರೈಸ್ ಮಾಡಲ್ಲ. ಹಾಗಾಗಿ, ನೀವು ಎಂಟರ್ ಆಗೋಕ್ ಮೊದ್ಲು ನಿಮ್ಮ ನ್ಯೂಸ್‍ನ ಪಿಕ್ ಮಾಡಿ, ಬ್ಯುಸಿನೆಸ್ ಪೇಜ್‍ಗಳು ಮತ್ತು ನ್ಯಾಷನಲ್ ಹೆಡ್‍ಲೈನ್ಸ್ ಮೂಲಕ ಸಿಕ್ಕನ್ನ ಬಿಡ್ಸಿ. ​ನಂಬರ್ 2 - ನಿಮ್ಮ ಇಂಟರ್‍ನ್ಯಾಷನಲ್ ನ್ಯೂಸ್‍ಗಳನ್ನೂ ಇಗ್ನೋರ್ ಮಾಡ್ಬೇಡಿ. ​ಸ್ನೇಹಿತರೇ, ಇಂಟರ್‍ನ್ಯಾಷನಲ್ ನ್ಯೂಸ್‍ನ ಮೂಲಕ ನೀವು ಕೆಲವು ನ್ಯಾಷನಲ್ ಕಂಪೆನಿಗಳ ಬಗ್ಗೆ ಇಂಪಾರ್ಟೆಂಟ್ ಪ್ರಿಡಿಕ್ಷನ್‍ಗಳನ್ನ ಮಾಡ್ಬಹುದು. ಫಾರ್ ಎಕ್ಸಾಂಪಲ್ (ಉದಾಹರಣೆಗೆ), ಇಂಟರ್‍ನ್ಯಾಷನಲ್ ಮಾರ್ಕೆಟ್‍ಗಳಲ್ಲಿ ರೆಗ್ಯುಲೇಟರ್ ಚೇಂಜ್‍ಗಳಿಂದ ಎಕ್ಸ್‍ಪೋರ್ಟಿಂಗ್ ಕಂಪೆನಿಗಳ ಬ್ಯುಸಿನೆಸ್ ಮೇಲೆ ಯಾವ ಪರಿಣಾಮ ಬೀರಲಿದೆ? ಅಥ್ವಾ ಇಂಟರ್‍ನ್ಯಾಷನಲ್ ಟ್ರೇಡ್ ಪ್ಯಾಟರ್ನ್‍ನಿಂದಾಗಿ, ನೀವು ಯಾವ್ದಾದ್ರೂ ಇಂಡಸ್ಟ್ರಿಯ ಸಪ್ಲೈ ಚೈನ್‍ನ ಬಗ್ಗೆ ಯಾವ ಪ್ರಿಡಿಕ್ಷನ್‍ಗಳನ್ನ ಮಾಡ್ತೀರಾ? ಈ ರೀತಿಯ ಕೆಲವು ಪ್ರಶ್ನೆಗಳು ನೀವು ಮಾರ್ಕೆಟ್ ರಿ-ಓಪನ್ ಆಗೋಕ್ ಮೊದ್ಲು ನಿಮ್ಮ ಇಂಟರ್‍ನ್ಯಾಷನಲ್ ನ್ಯೂಸ್‍ನ ಸೀರಿಯಸ್ ಆಗಿ ತಗೋಳೋ ಹಾಗೆ ನಿಮ್ನ ಪ್ರಾಮ್ಟ್ ಮಾಡ್ಬೇಕು. ​ನಂಬರ್ 3 – ಮೇಜರ್ ಇಂಡಿಸಿಸ್‍ಗಳ ಕೀ ರೆಸಿಸ್ಟೆನ್ಸ್ ಲೆವೆಲ್‍ಗಳನ್ನ ಅರ್ಥ ಮಾಡಿಕೊಳ್ಳುವುದು ​ಪ್ರತಿ ದಿನ, ಸ್ಟಾಕ್ ಮಾರ್ಕೆಟ್‍ಗಳು ವಿಭಿನ್ನ ಕತೆಗಳನ್ನ ಬರಿಯುತ್ವೆ. ಪ್ರತಿ ದಿನದ ಪ್ರೈಸ್ ಆಕ್ಷನ್‍ನಿಂದ ನೀವು ಒಂದಲ್ಲ ಒಂದು ಇನ್‍ಫಾರ್ಮೇಷನ್ ಅನ್ನು ಅಬ್ಸ್ಟ್ರಾಕ್ಟ್ ಮಾಡಿಕೊಳ್ತಿರಾ. - ಫಾರ್ ಎಕ್ಸಾಂಪಲ್, ದೇಶದ ಬ್ಯಾಂಕಿಂಗ್, ಕನ್‍ಸ್ಯೂಮರ್ ಡುರೇಬಲ್‍ಗಳು ಅಥ್ವಾ ಆಟೋಮೋಟಿವ್ ಇಂಡೆಕ್ಸ್ ಯಾವ ಸಮಯದಲ್ಲಿ ರೆಸಿಸ್ಟನ್ಸ್ ಮತ್ತು ಸಪೋರ್ಟ್ ಲೆವೆಲ್‍ಗಳ ಮಧ್ಯದಲ್ಲಿ ಟ್ರೇಡ್ ಆಗ್ತಾ ಇದೆ? ಈ ಜ್ಞಾನ ನಿಮಗೆ ಪ್ರತಿಯೊಂದು ಸೆಕ್ಟರ್‍ನ ಅದರ ಪ್ರೈಸಸ್‍ಗಳ ಮೂಲಕ ಅರ್ಥ ಮಾಡ್ಕೊಳೋಕೆ ಹೆಲ್ಪ್ ಮಾಡತ್ತೆ – ಯಾಕಂದ್ರೇ ಸಪೋರ್ಟ್ ಮತ್ತು ರೆಸಿಸ್ಟೆನ್ಸ್ ಲೆವೆಲ್‍ಗಳು ಇಂಡಿಸಿಸ್‍ನ ನಂಬರ್‍ಗಳ ಕಾಂಟೆಕ್ಸ್ಟ್‍ನ ತರಹ ಆ್ಯಕ್ಟ್ ಮಾಡುತ್ತೆ. ​ನಂಬರ್ 4 – ಮೇಜರ್ ಅನೌನ್ಸ್‍ಮೆಂಟ್‍ಗಳನ್ನ ಗಮನಿಸಿ. ​ ​ಈ ಅನೌನ್ಸ್‍ಮೆಂಟ್‍ಗಳು ನಿಮ್ಮ ಪೋರ್ಟ್‍ಫೋಲಿಯೋ, ಸೆಕ್ಟೋರಲ್ ನಾಲೆಡ್ಜ್, ಮತ್ತು ಸ್ಟಾಕ್ ಎಕ್ಸ್‍ಚೇಂಗಳ ಸುತ್ತಾ ಕೇಂದ್ರಿಕೃತವಾಗಿರ್ಬೇಕಾಗತ್ತೆ. ಉದಾಹರಣೆಗೆ (ಫಾರ್ ಎಕ್ಸಾಂಪಲ್), ಯಾವ್ದಾದ್ರೂ ಕಂಪೆನಿಯ ಪರ್ಫಾಮೆನ್ಸ್ ರಿಪೋರ್ಟ್‍ಗಳು ಮತ್ತು ಅರ್ನಿಂಗ್‍ಗಳ ಅನೌನ್ಸ್‍ಮೆಂಟ್‍ಗಳು ನಿಮಗೆ ಪೋರ್ಟ್‍ಫೋಲಿಯೋದಲ್ಲಿ ಯಾವುದಾದ್ರೂ ಇನ್ಕ್ಲೂಷನ್ಸ್‍ಗಳನ್ನ ಅಥ್ವಾ ಡಿವೆಸ್ಟ್‍ಮೆಂಟ್‍ಗಳ ವಾರೆಂಟ್‍ಗಳನ್ನ ಮಾಡುತ್ವಾ? ಬೆಲ್ ರಿಂಗ್ ಆಗೋಕು ಮೊದ್ಲು ನಿಮ್ಮ ಪೋರ್ಟ್‍ಪೋಲಿಯೋನ ಒಳಗೆ ಮತ್ತು ಹೊರಗೆ ಸಮಯಕ್ ಸರ್ಯಾಗಿ ಎಂಟ್ರೀಗಳನ್ನ ಮತ್ತು ಎಕ್ಸಿಟ್‍ಗಳನ್ನ ಮಾಡೋ ಆಕ್ಷನ್‍ಗಾಗಿ ಯಾವಾಗ್ಲೂ ಟ್ಯೂನ್ ಆಗಿರಿ. ​ನಂಬರ 5 - ಸ್ಟಾಕ್‍ಗಳ ಡೆಲಿವರಿ ಪರ್ಸೆಂಟೇಜ್ ಮೇಲೆ ಒಂದು ಕಣ್ಣಿಟ್ಟಿರಿ. ​ಅಕಸ್ಮಾತ್ ಯಾವ್ದಾದ್ರೂ ಸ್ಟಾಕ್‍ಗಳಲ್ಲಿ ಹೆಚ್ಚಿನ ಟ್ರೇಡ್ಸ್ ಡೆಲಿವರಿ ಕೇಳ್ತಿದ್ರೇ, ಆಗ ಅದರರ್ಥ ಏನಂದ್ರೇ ಈ ಸ್ಟಾಕ್‍ಗಳಲ್ಲಿ ಇನ್ವೆಸ್ಟರ್‍ಗಳು ಇಂಟರೆಸ್ಟ್ ತೋರಿಸ್ತಿದಾರೆ ಅಂತ. ಕೆಲವು ಫರ್ದರ್ ಫಂಡಮೆಂಟಲ್ ಮತ್ತು ಟೆಕ್ನಿಕಲ್ ಅನಾಲಿಸಿಸ್‍ನ ಜೊತೆಗೆ ನೀವು ಲಾಂಗ್ ಟರ್ಮ್ ಇನ್‍ವೆಸ್ಟ್‍ಮೆಂಟ್ ಅಪೋರ್ಟ್ಯುನಿಟಿಗಳನ್ನ ಐಡೆಂಟಿಫೈ ಮಾಡಬಹುದು. ​ನಂಬರ್ – 6 – ಮೇಜರ್ ಸೈಂಟಿಫಿಕ್ ಡೆವೆಲಪ್‍ಮೆಂಟ್‍ಗಳ (ಪ್ರಮುಖ ವೈಜ್ಞಾನಿಕ ಅಭಿವೃದ್ದಿಗಳ) ಟ್ರ್ಯಾಕ್‍ನ ಇಟ್ಟಿರಿ. ​ವಿಜ್ಞಾನ ಕ್ಷೇತ್ರದಲ್ಲಿನ ಮಹತ್ವದ ತಿರುವುಗಳು ಇಂಡಸ್ಟ್ರಿಗಳಲ್ಲಿ ಕೆಲವು ಮುಖ್ಯವಾದ ಬದಲಾವಣೆಗಳನ್ನ ಟ್ರಿಗರ್ ಮಾಡುತ್ವೆ. ಉದಾಹರಣೆಗೆ, ಸೌರಶಕ್ತಿಯ ಒಂದು ಎಫಿಷಿಯಂಟ್ ಮತ್ತು ಚೀಕ್ ಮೆಕ್ಯಾನಿಸಮ್ ಎನರ್ಜಿ ಇಂಡಸ್ಟ್ರಿಯಲ್ಲಿ ಕೆಲವು ದೀರ್ಘಕಾಲೀನ ಬದಲಾವಣೆಗಳನ್ನ ಟ್ರಿಗರ್ ಮಾಡೋಕ್ ಸಾಧ್ಯ ಇದೆ. ಇಂತಹ ಇನ್‍ಫಾರ್ಮೇಷನ್‍ಗಳು, ಮಾರ್ಕೆಟ್ ಇಲ್ಲಿಂದ ಹೇಗೆ ಮೂವ್ ಆಗತ್ತೆ ಅನ್ನೋದನ್ನ ಅರ್ಥಮಾಡ್ಕೋಳೋಕೆ ತುಂಬಾ ಕ್ರಿಟಿಕಲ್ ಆಗಿ ಬೇಕಾಗುತ್ವೆ. ​ನಂಬರ್ 7 - ನಿಮ್ಮ ಪೋರ್ಟ್‍ಫೋಲಿಯೋ ಒಳಗೆ ಪ್ರಮುಖ ಮೂವ್‍ಮೇಂಟ್ಸ್‍ಗಳ ಗಮನಿಸಿ. ​ಅಕಸ್ಮಾತ್ ನಿಮ್ಮ ಪೋರ್ಟ್‍ಫೋಲಿಯೋನಲ್ಲಿ ಯಾವ್ದಾದ್ರೂ ಸ್ಟಾಕ್ಸ್ ಮೇಜರ್ ಆಗಿ ಹೈ ಹಾಗೂ ಲೋ ತನ್ಕ ತಲುಪಿದ್ರೇ, ಆಗ ನಿಮ್ಮ ಪೋರ್ಟ್‍ಫೋಲಿಯೋನ ರಿಸ್ಕ್ ಕಾಂಪೋಸಿಷನ್ ಛೇಂಜ್ ಆಗ್ತಿರುತ್ವೆ – ಇದರರ್ಥ ಏನಂದ್ರೇ, ನಿಮ್ಮ ಪೋರ್ಟ್‍ಫೋಲಿಯೋ ಮತ್ತೆ ಬ್ಯಾಲೆನ್ಸ್ (ರಿಬ್ಯಾಲೆನ್ಸ್) ಮಾಡೋ ಅವಶ್ಯಕತೆ ಇದೆ ಅಂತ - ಸ್ಟಾಕ್ ಮಾರ್ಕೆಟ್ ಓಪನ್ ಆಗೋಕ್ ಮೊದ್ಲು ಲೆಕ್ಕಾಚಾರ ಮಾಡಿ, ಅದ್ರಿಂದ ನೀವು ನಿಮ್ಮ ರಿಸ್ಕ್‍ನ ಹಸಿವೆಯ ಬೌಂಡರಿ ಒಳಗೆ ಸ್ಟೇ ಮಾಡ್ಬೋದು. ​ನಂಬರ್ 8 – ಕರೆನ್ಸಿ ಮಾರ್ಕೆಟ್ ಮೂವ್‍ಮೆಂಟ್‍ಗಳನ್ನ ಅರ್ಥಮಾಡ್ಕೊಳಿ. ​ ​ಅಕಸ್ಮಾತ್ ನಿಮ್ಮ ನ್ಯಾಷನಲ್ ಕರೆನ್ಸಿ ಬೇರೆ ಫಾರಿನ್ ಮಾರ್ಕೆಟ್‍ನ ರಿಲೇಷನ್‍ನಲ್ಲಿ ಹೆಚ್ಚಿನ ಗೇನ್ಸ್ ಅಥ್ವಾ ಲಾಸ್‍ನ ಪ್ರದರ್ಶಿಸ್ತಿದ್ರೇ, ಆಗ ಪ್ರಸ್ತುತದಲ್ಲಿರುವ ಎಕನಾಮಿಕ್ ಈಕ್ವಿಲಿಬ್ರಿಯಮ್ ಇದ್ರಿಂದ ಅಫೆಕ್ಟ್ ಆಗತ್ತೆ - ಹಾಗಾಗಿ ನೀವು ಸ್ಟಾಕ್ ಮಾರ್ಕೆಟ್ ಪ್ಲೇಯರ್ ಆಗಿರೋದ್ರಿಂದ ಕರೆನ್ಸಿ ಮೂವ್‍ಮೆಂಟ್ಸ್ ನಿಮ್ಮ ಅಫೆಕ್ಟ್ ಮಾಡಲ್ಲ ಅಂತ ಅಂದ್ಕೊಬೇಡಿ. ​ನಂಬರ್ 9 – ಕಮಾಡಿಟಿ ಮಾರ್ಕೆಟ್‍ಗಳಿಗೂ ಇದೇ ಅನ್ವಯಿಸುತ್ತೆ ​ಕಮಾಡಿಟಿ ಮಾರ್ಕೆಟ್‍ಗಳಿಗೂ ಸ್ಟಾಕ್ ಮಾರ್ಕೆಟ್‍ಗಳಿಗೂ ಒಂದು ಇಂಟರೆಸ್ಟಿಂಗ್ ಸಂಬಂಧ ಇರುತ್ತೆ. ನಿಮ್ಮ ಪೋರ್ಟ್‍ಫೋಲಿಯೋಲಿರೋ ಯಾವ್ದಾದ್ರೂ ಕಂಪೆನಿಗಳು ಕಮಾಡಿಟಿ ಮಾರ್ಕೆಟ್‍ಗಳಿಂದ ಸ್ಟ್ರಾಂಗ್ ಆಗಿ ಇನ್‍ಫ್ಲ್ಯೂಯೆನ್ಸ್ ಆದ್ರೇ, ಆಗ ಅವುಗಳ ಸ್ಟಾಕ್ ಪ್ರೈಸಸ್‍ಗಳ ಮೇಲೂ ಕಮಾಡಿಟಿ ಮಾರ್ಕೆಟ್‍ಗಳಲ್ಲಿನ ಮೂವ್‍ಮೆಂಟ್ಸ್ ಖಂಡಿತವಾಗ್ಲೂ ಪ್ರಭಾವ ಬೀರುತ್ತೆ. ಜೊತೆಗೆ, ಚಿನ್ನ ಮತ್ತು ಬೆಳ್ಳಿ ತರಹದ ಪ್ರಿಶಿಯಸ್ ಮೆಟಲ್‍ಗಳೂ ಕೂಡ ನಿಮಗೆ ಸ್ಟಾಕ್ ಮಾರ್ಕೆಟ್ ಕರೆಂಟ್ ಇವೆಂಟ್‍ಗಳಿಗೆ ಹಿಟ್ ತಗೊಳುತ್ತಾ ಅಥ್ವಾ ಬೌನ್ಸ್ ಬ್ಯಾಕ್ ಆಗುತ್ತಾ ಅನ್ನೋದನ್ನ ಹೇಳುತ್ವೆ. ​ಮತ್ತೇ ಲಾಸ್ಟ್, ಆದ್ರೇ ಲೀಸ್ಟ್ ಅಲ್ಲ ನಂಬರ್ 10 - ನಿಮ್ಮ ಇನ್ವೆಸ್ಟ್‍ಮೆಂಟ್‍ಗಳಿಗೆ ರಾಜಕೀಯ ವಿದ್ಯಮಾನಗಳು ಹೇಗೆ ಪರಿಣಾಮ ಬೀರುತ್ತೆ ಅನ್ನೋದನ್ನ ಅರ್ಥ ಮಾಡ್ಕೊಳಿ ​ನ್ಯೂಸ್‍ಪೇಪರ್‍ನಲ್ಲಿ ರಾಜಕೀಯ ಮತ್ತು ಮಾರ್ಕೆಟ್‍ಗಳು ಸಪರೇಟ್ ಪೇಜ್‍ಗಳಲ್ಲಿ ಇರ್ಬಹುದು, ಆದ್ರೆ ನಿಜಜೀವನ್‍ದಲ್ಲಿ ಫಂಡಮೆಂಟಲ್ ವೇಗಳಲ್ಲಿ ಒಂದು ಮತ್ತೊಂದನ್ನ ಅಫೆಕ್ಟ್ ಮಾಡ್ಬಹದು. ಉದಾಹರಣೆಗೆ ಸರ್ಕಾರ ಏನಾದ್ರೂ ಕನ್ಸರ್ವೇಟಿವ್ ಅಥ್ವಾ ಲಿಬರಲ್ ಟ್ರೇಡ್ ಲಾ ಮತ್ತು ಮಾರ್ಕೆಟ್ ರೂಲ್‍ಗಳನ್ನ ಇಂಟ್ರೊಡ್ಯೂಸ್ ಮಾಡಿದ್ರೇ, ಆಗ ಸ್ಟಾಕ್ ಮಾರ್ಕೆಟ್‍ಗಳು ರೆಸ್ಪಾನ್ಸ್ ಆಗಿ ಕೆಲವು ಮೇಜರ್ ರಿಅಡ್ಜೆಸ್ಟ್‍ಮೆಂಟ್‍ಗಳನ್ನ ನೋಡುತ್ವೆ. ಹಾಗಾಗಿ ಅಂತಹ ಮೇಜರ್ ವಿಷ್ಯಗಳ ಮೇಲೆ ಕಣ್ಣಿಟ್ಟಿರಿ, ಮತ್ತು ಅವು ರಿಓಪನ್ ಆಗೋಕ್ ಮೊದ್ಲು ಆ ದಿನದಂದು ಮಾರ್ಕೆಟ್‍ಗಳು ಹೇಗೆ ರೆಸ್ಪಾಂಡ್ ಮಾಡುತ್ವೆ ಅನ್ನೋದನ್ನ ಫೋರ್‍ಕಾಸ್ಟ್ ಮಾಡಿರಿ. ​ಸೋ ನಿಮಗೀಗ್ ಡ್ರಿಲ್ ಗೊತ್ತಾಗಿದೆ. ಈ ಎಲ್ಲ ಸ್ಟೆಪ್‍ಗಳ ಮೂಲಕ ನೀವು ಮಾರ್ಕೆಟ್ ರೀ-ಓಪನ್ ಆಗೋಕ್ ಮೊದ್ಲು ಕಂಪೆನಿಗಳ ಬ್ಯುಸಿನೆಸ್ ಎಕೋಸಿಸ್ಟಮ್‍ಗಳು ಮತ್ತು ಅವುಗಳ ನಂಬರ್‍ಗಳ ಹಿಂದಿನ ಅರ್ಥವನ್ನ ಒಂದು ಇನ್‍ಫಾರ್ಮ್‍ಡ್ ದೃಷ್ಟಿಯಿಂದ ಅನಾಲಿಸಿಸ್ ಮಾಡೋಕಾಗುತ್ತೆ. ಪ್ರತಿಯೊಬ್ಬ ಯಶಸ್ವಿ ಇನ್‍ವೆಸ್ಟರ್‍ಗಳು ಸ್ಟಾಕ್ ಮಾರ್ಕೆಟ್‍ನಲ್ಲಿ ಒಂದು ಹೊಸ ಮೂವ್ ಮಾಡೋಕ್ ಮೊದ್ಲು ನೂರಾರು ವೇರಿಯೆಬಲ್‍ಗಳನ್ನ ಗಣನೆಗ್ ತಗೋತಾರೆ. ಇನ್‍ಫ್ಯಾಕ್ಟ್ ನಿಮಗೆ ಮಾರ್ಕೆಟ್‍ಗಳನ್ನ ಬೀಟ್ ಮಾಡೋಕೆ ಪೊಟೆನ್ಷಿಯಲ್ ಆಗಿ ಹೆಲ್ಪ್ ಮಾಡೋ ಸ್ಟ್ರ್ಯಾಟೆಜಿಗಳ ಹಿಂದಿರೋ ಸೀಕ್ರೆಟ್‍ಗಳನ್ನ ಅರ್ಥ ಮಾಡ್ಸೋದೇ ಈ ಸ್ಟೆಪ್‍ಗಳು. ​ಸೋ ನಾಳಿನ ಸ್ಟಾಕ್ ಮಾರ್ಕೆಟ್ ಆಕ್ಷನ್‍ಗೆ ನೀವು ರೆಡಿ ಅಲ್ವಾ? ಹಾಗಾದ್ರೇ ಗೇರ್ ಅಪ್ ಹಾಗೂ ಬೆಲ್ ರಿಂಗ್ ಆದ್ಮೇಲೆ ಬಲ್ ಅಥ್ವಾ ಸೆಲ್ ಬಟನ್‍ನ ಹಿಟ್ ಮಾಡೋಕ್ ಮೊದ್ಲು ಒಂದಷ್ಟು ವಿಷ್ಯ ಡಿಗ್ ಮಾಡೋಕೇ ಮತ್ತು ಗ್ರೌಂಡ್ ವರ್ಕ್ ಮಾಡೋಕೆ ಶುರು ಮಾಡಿ. ಸ್ಟಾಕ್ ಮಾರ್ಕೆಟ್ ಓಪನ್ ಆದ್ಮೇಲೆ ನೀವು ಎಂಟರ್ ಆದಾಗ ನಿಮಗೆ ಶುಭವಾಗಲಿ ಅಂತ ಏಂಜಲ್ ಬ್ರೋಕಿಂಗ್ ಹಾರೈಸುತ್ತದೆ. ಅಲ್ಲಿ ತನ್ಕ ಏಂಜೆಲ್ ಬ್ರೋಕಿಂಗ್ ಕಡೆಯಿಂದ ಗುಡ್‍ಬೈ. ಮತ್ತು ಹ್ಯಾಪಿ ಇನ್ವೆಸ್ಟಿಂಗ್! ​ ​ಹೂಡಿಕೆಗಳು ಮತ್ತು ಭದ್ರತಾ ಮಾರುಕಟ್ಟೆಗಳು ಮಾರುಕಟ್ಟೆಯ ಅಪಾಯಗಳಿಗೆ ಒಳಪಟ್ಟಿರುತ್ತವೆ. ಹೂಡಿಕೆಗೂ ಮುನ್ನ ಎಲ್ಲ ಸಂಬಂಧಿತ ದಾಖಲಾತಿಗಳನ್ನು ಎಚ್ಚರಿಕೆಯಿಂದ ಓದಿ. ​ ​