Recent developments in the IPO Markets

Podcast Duration: 6:44 [Sassy_Social_Share]
ಐಪಿಒ ಮಾರ್ಕೆಟ್ ನಲ್ಲಿನ ಇತ್ತೀಚಿನ ಬೆಳವಣಿಗೆಗಳು ಹಲೋ ಫ್ರೆಂಡ್ಸ್ ಏಂಜಲ್ ಒನ್ ನ ಮತ್ತೊಂದು ಐಪಿಒ ಸ್ಪೆಷಲ್ ಪಾಡ್ಕ್ಯಾಸ್ಟ್ ಗೆ ಸ್ವಾಗತ! ಸ್ನೇಹಿತರೇ, ಕಳೆದ 1 ವರ್ಷದಲ್ಲಿ ನೀವು ಐಪಿಒ ಮಾರುಕಟ್ಟೆಯಲ್ಲಿನ ಭರಾಟೆಯನ್ನ ನೋಡಿದ್ದೀರಿ. ಬಿಸಿನೆಸ್ ನ್ಯೂಸ್ ಪೇಪರ್ ನ ವರದಿಯ ಪ್ರಕಾರ, ಹೊಸ ಕಂಪನಿಗಳು 2020 ರಲ್ಲಿ 43 ಐಪಿಒಗಳೊಂದಿಗೆ .0 4.09 ಬಿಲಿಯನ್ ಹಣವನ್ನು ಸಂಗ್ರಹಿಸಿವೆ. ಡಿಸೆಂಬರ್ 2020 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ, 19 ಐಪಿಒಗಳ ಮೌಲ್ಯ 38 1.836 ಬಿಲಿಯನ್ . ಮತ್ತು 2021 ಹೆಚ್ಚು ರೋಮಾಂಚನಕಾರಿಯಾಗಿದ್ದು ಹೆಚ್ಚಿನ ಭರವಸೆಯನ್ನ ನೀಡಿದೆ. 2021 ರ ಮೊದಲ ಆರು ತಿಂಗಳಲ್ಲಿ 22 ಕಂಪನಿಗಳು 26,000 ಕೋಟಿ ರೂ ಸಂಗ್ರಹಿಸಿವೆ. ಸ್ಮಾಲ್ ಮತ್ತು ಮಿಡ್-ಕ್ಯಾಪ್ ಶೇರ್ ನ ಬುಲ್ಲಿಶ್ ರ್ಯಾಲಿ - ಐಪಿಒ ಗಳ ವ್ಯಾಲ್ಯೂ ವನ್ನ ಆಕಾಶಕ್ಕೆ ಮುಟ್ಟಿಸಿವೆ ಮತ್ತು ಇನ್ವೆಸ್ಟರ್ಸ್ ಗೆ ಒಳ್ಳೆಯ ರಿಟರ್ನ್ಸ್ ಅನ್ನ ಕೂಡ ನೀಡಿದೆ. ಬಿಸಿನೆಸ್ ರಿಪೋರ್ಟ್ ಪ್ರಕಾರ ,2021 ರಲ್ಲಿ ಲಾಂಚ್ ಆದ 22 ಐಪಿಒ ದಲ್ಲಿ , 7 ಕಂಪನಿಗಳು ಆಫರ್ ಪ್ರೈಸ್ ಮೇಲೆ 50-113% ರಿಟರ್ನ್ಸ್ ನೀಡಿವೆ ,ಮತ್ತು 10 ಕಂಪನಿಗಳು 10-40% ರಿಟರ್ನ್ಸ್ ನೀಡಿವೆ . ಕೇವಲ ನಾಲ್ಕು ಕಂಪನಿಗಳ ಶೇರ್ ಗಳು ಮಾತ್ರ ಆಫರ್ ಪ್ರೈಸ್ ಗಿಂತ ಕಡಿಮೆ ಬೆಲೆಗೆ ಟ್ರೇಡ್ ಆಗುತ್ತಿವೆ. ಈಗ ,30 ಕಂಪನಿಗಳು ಹೆಚ್ಚಿನ ಹಣವನ್ನು ಸಂಗ್ರಹಿಸಲು ಮುಂದಾಗಿವೆ. ಜುಲೈನಲ್ಲಿ, ಹೆಚ್ಚಿನ ಜನರು ಜೊಮಾಟೊದ ಐಪಿಒ ಬಗ್ಗೆ ಮಾತನಾಡುತ್ತಿದ್ದಾರೆ. ಬಿಸಿನೆಸ್ ರಿಪೋರ್ಟ್ ಪ್ರಕಾರ ಜೊಮಾಟೊ ದ 8,250 ಕೋಟಿ ರೂ ಐಪಿಒ ಈ ತಿಂಗಳು ಮಾರುಕಟ್ಟೆಗೆ ಬರಲಿದೆ. ಜೊಮಾಟೊ ದ ಮೂಲ ಕಂಪನಿ ನೌಕ್ರಿ ಡಾಟ್ ಕಾಮ್(Naukri.com) ಕಂಪನಿಯಲ್ಲಿ 18.5% ಪಾಲನ್ನು ಹೊಂದಿದೆ ಮತ್ತು $ 100 ಮಿಲಿಯನ್ ಮೌಲ್ಯದ ಷೇರುಗಳನ್ನು ಮಾರಾಟ ಮಾಡಲು ನೋಡುತ್ತಿದೆ. ಜಿಆರ್ ಇನ್ಫ್ರಾಪ್ರೋಜೆಕ್ಟ್ಸ್ ನ ಐಪಿಒ ಈ ತಿಂಗಳು ಹೊರಬರುವ ನಿರೀಕ್ಷೆಯಿದೆ. ಜಿಆರ್ ಇನ್ಫ್ರಾಪ್ರೋಜೆಕ್ಟ್ಸ್ ಒಂದು ಇಂಟಿಗ್ರೇಟೆಡ್ ಎಂಜಿನಿಯರಿಂಗ್(integrated engineering,), ಪ್ರೊಕ್ಯೂರೇಮೆಂಟ್(procurement) ಮತ್ತು ನಿರ್ಮಾಣ ಕಂಪನಿಯಾಗಿದ್ದು(construction company), ಇದು 1,000 ಕೋಟಿ ರೂಗಳ ಐಪಿಒ ಲಾಂಚ್ ಮಾಡುತ್ತಿದೆ. ಕಂಪನಿಯ ಐಪಿಒ ಜುಲೈ 7 ರೊಳಗೆ ಸಬ್ಸ್ಕ್ರಿಪ್ಷನ್(subscriptions ) ಗೆ ಓಪನ್ ಆಗುವ ನಿರೀಕ್ಷೆಯಿದೆ. ಇದು ಜುಲೈ 9 ರವರೆಗೆ ಓಪನ್ ಇರುವ ನಿರೀಕ್ಷೆ ಇದ್ದು , ಸೊ ಸ್ಟೇ ಟ್ಯೂನ್ಡ್. ಜುಲೈನಲ್ಲಿ ಲಾಂಚ್ ಆಗಲಿರುವ ಮತ್ತೊಂದು ಕಂಪನಿ ಕ್ಲೀನ್ ಸೈನ್ಸ್ ಅಂಡ್ ಟೆಕ್ನಾಲಜಿ. ಕ್ಲೀನ್ ಸೈನ್ಸ್ ಒಂದು ಸ್ಪೆಷಲ್ ಕೆಮಿಕಲ್ ಕಂಪನಿಯಾಗಿದ್ದು, ಈ ತಿಂಗಳು ತನ್ನ 1,500 ಕೋಟಿ ರೂ ಇಶ್ಯೂ ಮಾಡುವ ನಿರೀಕ್ಷೆ ಇದೆ. ಕ್ಲೀನ್ ಸೈನ್ಸ್ ಪುಣೆ ಮೂಲದ ಕಂಪನಿಯಾಗಿದ್ದು, ಇದು ಪ್ರಾಡಕ್ಟ್ ಸಬ್-ಸೆಗ್ಮೆಂಟ್ ವಿಭಾಗದಲ್ಲಿ ಜಾಗತಿಕ ಮಟ್ಟದ ಪ್ರಮುಖ ಕಂಪೆನಿಗಳಲ್ಲಿ ಒಂದು. ಇದರ ಪ್ರಮುಖ ಗಮನ ಗ್ರೀನ್ ಕೆಮಿಸ್ಟ್ರಿ. ಗ್ರೀನ್ ಕೆಮಿಸ್ಟ್ರಿ ಸೆಗ್ಮೆಂಟ್ ಅಲ್ಲಿ ಕ್ಲೀನ್ ಸೈನ್ಸ್ ಇಂಡಸ್ಟ್ರೀಸ್ ಮತ್ತು ಮ್ಯಾನುಫ್ಯಾಕ್ಚರಿಂಗ್ ಯೂನಿಟ್ಸ್ ಪೊಲ್ಯೂಷನ್ ರೆಡ್ಯೂಸ್ ಮಾಡೋದಕ್ಕೆ ಸಹಕಾರಿಯಾಗಿದೆ. ಗ್ಲೆನ್ಮಾರ್ಕ್ ಲೈಫ್ ಸೈನ್ಸ್ ನ ಐಪಿಒ ಈ ತಿಂಗಳಲ್ಲಿ ಲಾಂಚ್ ಆಗುವ ನಿರೀಕ್ಷೆ ಇದೆ. ಗ್ಲೆನ್ಮಾರ್ಕ್ ಲೈಫ್ ಸೈನ್ಸಸ್ ಎನ್ನುವುದು ಗ್ಲೆನ್ಮಾರ್ಕ್ ಫಾರ್ಮಾಸ್ಯುಟಿಕಲ್ಸ್ನ ಎಪಿಐ ವಿಂಗ್ ಯಾನೆ ಆಕ್ಟಿವ್ ಫಾರ್ಮಾಸ್ಯುಟಿಕಲ್ ಭಾಗವಾಗಿದೆ. ಗ್ಲೆನ್‌ಮಾರ್ಕ್ ಲೈಫ್ ಸೈನ್ಸಸ್ ನ ಐಪಿಒ 1,800 ಕೋಟಿ ಮತ್ತು ಐಪಿಒ ಅಡಿಯಲ್ಲಿ 1,160 ಕೋಟಿ ರೂ.ಗಳ ಹೊಸ ಇಶ್ಯೂ ಮಾರಾಟವಾಗಲಿದೆ. ಮತ್ತೊಂದು ಆಫರ್ ಫಾರ್ ಸೇಲ್ 73 ಲಕ್ಷ ಗ್ಲೆನ್ಮಾರ್ಕ್ ಫಾರ್ಮಾ ಅವರಿಂದ ಮಾರಾಟವಾಗಲಿದೆ. ವಾರಣಾಸಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಉತ್ಕರ್ಶ್ ಸ್ಮಾಲ್ ಫೈನಾನ್ಸ್ ಬ್ಯಾಂಕಿನ 1,350 ಕೋಟಿ ರೂ. ಐಪಿಒ ಜುಲೈನಲ್ಲಿಯೂ ಪ್ರಾರಂಭವಾಗಲಿದೆ. ಉತ್ಕರ್ಶ್ ಎಸ್‌ಎಫ್‌ಬಿ 750 ಕೋಟಿ ರೂ.ಗಳ ಹೊಸ ಷೇರುಗಳನ್ನು ಮತ್ತು 600 ಕೋಟಿ ರೂ.ವರೆಗೆ ಮಾರಾಟ ಮಾಡಲು ಪ್ರಸ್ತಾಪಿಸಿದೆ. ಸಿಆರ್‍ಎಸ್‍ಎಲ್ ವರದಿಯ ಪ್ರಕಾರ, 2017 ರಲ್ಲಿ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ಉತ್ಕರ್ಶ್ ಎಸ್‌ಎಫ್‌ಬಿ ಇಂದು ಭಾರತದ ಅತ್ಯಂತ ಲಾಭದಾಯಕ ಸಣ್ಣ ಹಣಕಾಸು ಬ್ಯಾಂಕುಗಳಲ್ಲಿ ಒಂದಾಗಿದೆ. ಸ್ನೇಹಿತರೇ, ನಮ್ಮಲ್ಲಿ ಹಲವರು ಐಪಿಒಗೆ ಅರ್ಜಿ ಸಲ್ಲಿಸುತ್ತಾರೆ ಮತ್ತು ಷೇರುಗಳು ಹಂಚಿಕೆಯಾಗುವುದು ಬಹಳ ಕಡಿಮೆ ಜನಕ್ಕೆ. ಈ ಕಾರಣದಿಂದಾಗಿ ಬಹಳಸ್ಟು ಮಂದಿಗೆ ಬೇಜಾರಾಗೋದು ನಿಜ. ಒಂದು ವಿಷಯ ನೆನಪಿಡಿ ಸ್ನೇಹಿತರೆ, ಐಪಿಒದಲ್ಲಿ ಷೇರು ಹಂಚಿಕೆಯಾದರೆ ಮಾತ್ರ ನೀವು ಲಾಭದಲ್ಲಿ ಇರುತ್ತೀರಿ ಅಂತ ಅರ್ಥ ಅಲ್ಲ . ಈ ಹಿಂದೆ ಸಾಕಷ್ಟು ಐಪಿಒಗಳು ಕ್ರ್ಯಾಶ್ ಆಗಿವೆ ಮತ್ತು ಕಂಪನಿಯ ಷೇರುಗಳು ಮಾರುಕಟ್ಟೆಯಲ್ಲಿ ಅವುಗಳ ಲಿಸ್ಟಿಂಗ್ ಪ್ರೈಸ್ಗಿಂತ ಕಡಿಮೆ ಬೆಲೆಗೆ ಖರೀದಿ ಆಗಿವೆ. ಐಪಿಒ ಗಲ್ಲಿ ಅಪ್ಲೈ ಮಾಡೋದಕ್ಕೂ ಮುಂಚೆ ಕಂಪನಿಯ ಕುರಿತಾಗಿ ಸಾಕಷ್ಟು ರಿಸರ್ಚ್ ಮಾಡೋದು ಉತ್ತಮ. ನಿಮಗೆ ಕಂಪನಿಯ ಫಂಡಮೆಂಟಲ್ಸ್ ಮತ್ತು ಫ್ಯೂಚರ್ ಪ್ರೋಸ್ಪೆಕ್ಟ್ಸ್ ಮಾತ್ರ ಅಪ್ಲೈ ಮಾಡಿ. ಕೆಲವೊಮ್ಮೆ ಒಳ್ಳೆಯ ಕಂಪನಿಯ ಐಪಿಒ ಗಳು ಕೂಡ ಚಿಂತೆಗೀಡು ಮಾಡುತ್ತವೆ. ಉದಾಹರಣೆಗೆ ಎಸ್ ಬಿ ಐ ಕಾರ್ಡ್ಸ್. ಎಸ್ ಬಿ ಐ ಕಾರ್ಡ್ಸ್ ನ ಐಪಿಒ ಲಾಕ್ಡೌನ್ ನ ಕೆಲವೇ ದಿನ ಮುಂಚೆ ಲಾಂಚ್ ಆಗಿತ್ತು ಮತ್ತು ಆ ಸಮಯದಲ್ಲಿ ಮಾರ್ಕೆಟ್ ಸೆಂಟಿಮೆಂಟ್ ನೆಗೆಟಿವ್ ಆಗಿತ್ತು. ಎಸ್ ಬಿ ಐ ಕಾರ್ಡ್ಸ್ ಆಫರ್ ಪ್ರೈಸ್ 755 ರೂಪಾಯಿ ಇಟ್ಟಿತ್ತು. ಆದರೆ ಷೇರುಗಳು 675 ರೂಪಾಯಿಗಳಿಗೆ ಓಪನ್ ಆಗಿತ್ತು . ಜುಲೈ 2 ರ ಹೊತ್ತಿಗೆ ಈ ಷೇರು 963 ರೂ ಗಳು. ಆದ್ದರಿಂದ ಯಾವಾಗಲು ಐಪಿಒ ಗಳಲ್ಲಿ ಇನ್ವೆಸ್ಟ್ ಮಾಡೋದಕ್ಕೂ ಮುನ್ನ ಕಂಪನಿಯ ಫಂಡಮೆಂಟಲ್ಸ್ ಮತ್ತು ಫ್ಯೂಚರ್ ಪ್ರೋಸ್ಪೆಕ್ಟ್ಸ್ ಅನ್ನ ಸರಿಯಾಗಿ ಓದಿ. ಬನ್ನಿ ಈಗ ಮತ್ತೆ ಹೊಸದಾಗಿ ಲಾಂಚ್ ಆಗ್ತಾ ಇರೋ ಐಪಿಒ ಗಳ ಕುರಿತು ನೋಡೋಣ, Krsnaa Diagnostics ಇದು ಪುಣೆ ಮೂಲದ ಡಯಗ್ನೊಸ್ಟಿಕ್ ಕಂಪನಿ ಇದು SEBI ಗೆ ತನ್ನ ಐಪಿಒ ಫೈಲ್ ಸಲ್ಲಿಸಿದೆ. ಜುಲೈನಲ್ಲಿ ತನ್ನ ಐಪಿಒ ಮೂಲಕ 1,200 ಕೋಟಿ ರೂ ಸಂಗ್ರಹಿಸಲು ಮುಂದಾಗಿದೆ. ಐಪಿಒ ದಲ್ಲಿ ಸಿಗುವ ಹಣದಿಂದ 150.8 ಕೋಟಿ ಹಣವನ್ನ ಕಂಪನಿಯು ತನ್ನ ಕ್ಯಾಪಿಟಲ್ expenditure purposes ಗೆ ಬಳಸಲು ಮುಂದಾಗಿದೆ. Krsnaa diagnostics ಈಗ ಪಂಜಾಬ್ , ಕರ್ನಾಟಕ, ಹಿಮಾಚಲ ಪ್ರದೇಶ, ಮತ್ತು ಮಹಾರಾಷ್ಟ್ರದಲ್ಲಿ ತನ್ನ ಕೇಂದ್ರಗಳನ್ನ ಸ್ಥಾಪಿಸಲು ಮುಂದಾಗಿದೆ. ಇದು ನಿಮ್ಮ ಮಾಹಿತಿಗಾಗಿ, FY20 ನಲ್ಲಿ ಕಂಪನಿಯ ಒಟ್ಟು ನಷ್ಟ 112 ಕೋಟಿ ರೂ ಗಳು. ಶ್ರೀರಾಮ್ ಪ್ರಾಪರ್ಟೀಸ್, ಇದು ಮತ್ತೊಂದು ಕಂಪನಿ - ಇದು ಕೂಡ ಜುಲೈ ನಲ್ಲಿ ತನ್ನ ಐಪಿಒ ಲಾಂಚ್ ಮಾಡುವ ಆಲೋಚನೆಯಲ್ಲಿದೆ. ಶ್ರೀರಾಮ್ ಪ್ರಾಪರ್ಟೀಸ್‌ನ ಐಪಿಒ ಮೌಲ್ಯ 800 ಕೋಟಿ ರೂ. ಇದರಲ್ಲಿ 550 ಕೋಟಿಯಾ ಷೇರುಗಳನ್ನ ಪ್ರಮೋಟರ್ಸ್ ಸೆಲ್ ಮಾಡ್ತಾರೆ ಮತ್ತು 250 ಕೋಟಿಗಳಷ್ಟು ಪ್ರೆಶ್ ಇಶ್ಯೂ ಇರಲಿದೆ. ದಕ್ಷಿಣ ಭಾರತದಲ್ಲಿ ಶ್ರೀರಾಮ್ ಪ್ರಾಪರ್ಟೀಸ್ ಮಿಡ್ಧ್ -ಮಾರ್ಕೆಟ್ ಮತ್ತು ಕೈಗೆಟುಕುವ ವಸತಿ ವಿಭಾಗಗಳ ಮೇಲೆ ವಿಶೇಷ ಗಮನವನ್ನು ಹೊಂದಿರುವ ಪ್ರಮುಖ ರಿಯಲ್ ಎಸ್ಟೇಟ್ ಕಂಪನಿ ಎಂದು ಪರಿಗಣಿಸಲಾಗಿದೆ. ಸರಿ ಸ್ನೇಹಿತರೆ, ಇವತ್ತಿನ ಪಾಡ್ಕ್ಯಾಸ್ಟ್ ನಲ್ಲಿ ಇದಿಷ್ಟೆ. ಹೋಗುವುದಕ್ಕಿಂತಲೂ ಮೊದಲು, ಒಂದು ವಿಷಯ ನೆನಪಿಡಿ ಸ್ಟಾಕ್ ಮಾರ್ಕೆಟ್ನಲ್ಲಿ ಇನ್ವೆಸ್ಟ್ ಮಾಡುವುದು ಯಾವತ್ತು ರಿಸ್ಕ್ ನಿಂದ ಕೂಡಿರುತ್ತೆ . ಈ ಪಾಡ್ಕ್ಯಾಸ್ಟ್ ಅನ್ನ ಶೈಕ್ಷಣಿಕ ಉದ್ದೇಶದಿಂದ ಮಾಡಲಾಗಿದೆ ಆದ್ದರಿಂದ ಹೂಡಿಕೆದಾರರು ತಮ್ಮ ಸ್ವಂತ ರಿಸರ್ಚ್ ಅನ್ನ ಮಾಡಲೇಬೇಕು. ಇಂತಹ ಇನ್ನಷ್ಟು ಕುತೂಹಲಕಾರಿ ಪಾಡ್ಕ್ಯಾಸ್ಟ್ ಕೇಳುವುದಕ್ಕಾಗಿ- ನಮ್ಮ ಯೌಟ್ಯೂಬ್ ಮತ್ತು ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಅನ್ನ ಫಾಲೋ ಮಾಡಿ. ಅಲ್ಲಿವರೆಗೆ ಗುಡ್ ಬೈ ಮತ್ತು ಹ್ಯಾಪಿ ಇನ್ವೆಸ್ಟಿಂಗ್! ಸೆಕ್ಯುರಿಟೀಸ್ ಮಾರುಕಟ್ಟೆಯಲ್ಲಿನ ಹೂಡಿಕೆಗಳು ಮಾರುಕಟ್ಟೆಯ ಅಪಾಯಗಳಿಗೆ ಒಳಪಟ್ಟಿರುತ್ತವೆ. ಹೂಡಿಕೆ ಮಾಡುವ ಮೊದಲು ಎಲ್ಲಾ ಸಂಬಂಧಿತ ದಾಖಲೆಗಳನ್ನು ಎಚ್ಚರಿಕೆಯಿಂದ ಓದಿ.