Investing in stocks with less money explained | Kannada

Podcast Duration: 07:48

ನಮಸ್ಕಾರ ಸ್ನೇಹಿತರೆ! ​ಏಂಜಲ್ ಬ್ರೋಕಿಂಗ್ ನ ಪೋಡ್ ಕ್ಯಾಸ್ಟ್ ಗೆ ನಿಮಗೆ ಸ್ವಾಗತ! ​ಸ್ನೇಹಿತರೆ ನೀವು ಆಗಷ್ಟೇ ಕಾಲೇಜು ವಿದ್ಯಾಭ್ಯಾಸ ಮುಗಿಸಿ ಕೆಲಸ ಹುಡುಕುತ್ತಿದ್ದ ಸಮಯ ನೆನಪಿದೆಯಾ ? ಆಗ ನೀವು ಫ್ರೆಷೆರ್ ಆಗಿದ್ರಿ ಆದ್ರೆ ಯಾರಿಗೂ ಹೊಸಬರನ್ನ ಅನುಭವ ಇಲ್ಲದವರನ್ನ ಕೆಲಸಕ್ಕೆ ತೆಗೆದು ಕೊಳ್ಳುವ ಮನಸ್ಸು ಇರೋದಿಲ್ಲ. ಮತ್ತು ನಮ್ಮ ಹತ್ರ ಹೊಸಬರಿಗೆ ಕೆಲಸ ಖಾಲಿ ಇಲ್ಲ ಅಂತ ಇದ್ರು . ಆದರೆ ಹೊಸಬರಿಗೆ ಕೆಲಸ ಕೊಡದಿದ್ದರೆ ಅನುಭವಿ ಕೆಲಸಗಾರರು ಹೇಗೆ ಸಿಗ್ತಾ ಇದ್ರು ಅಲ್ವಾ? ಫ್ರೆಷೆರ್ - ಫ್ರೆಷೆರ್ ಆಗೇ ಇರ್ತಾನೆ!. ಇದನ್ನೇ catch-22 situation ಅಂತಾರೆ. ಕೆಲವೊಮ್ಮೆ ಜನರು ಸ್ಟಾಕ್ ಮಾರ್ಕೆಟ್ ಬಗ್ಗೆ ಸಲಹೆಗಳನ್ನ ನೀಡುವಾಗ ನೀಡುವಾಗಲೂ catch-22 situation ನೆನಪಾಗುತ್ತದೆ. ಯಾಕಂದ್ರೆ ಜನ ಹೇಳೋದು ಹೆಚ್ಚುವರಿ ಅಥವಾ ಹೆಚ್ಚುವರಿ ಆದಾಯದೊಂದಿಗೆ ಮಾತ್ರ ಹೂಡಿಕೆ ಮಾಡಿ. ಆದ್ರೆ ಈ ಹೆಚ್ಚುವರಿ ಆದಾಯ ಬರೋದಾದ್ರೂ ಎಲ್ಲಿಂದ ? ಹೆಚ್ಚುವರಿ ಹಣವನ್ನ ಸಂಪಾದಿಸಲು ಮಾರ್ಗ ಬೇಕಲ್ವಾ? ಇಂದಿನ ಸಂಬಳ ಪಡೆಯು ಯುವ ಜನತೆಯ ಬಳಿ ಹೆಚ್ಚುವರಿ ಉಳಿತಾಯದ ಹಣ ತುಂಬಾ ಕಮ್ಮಿ ಇರುತ್ತೆ- ಯಾಕಂದ್ರೆ ಮನೆ ಬಾಡಿಗೆ, ಸಾಮಾನ್ಯವಾಗಿ ಚಂದಾದಾರಿಕೆಗಳು ಮತ್ತು ಇತರ ಮಾಸಿಕ ಪಾವತಿಗಳು ಇರುತ್ತವೆ ಮತ್ತು ಅವಶ್ಯಕತೆಗೆ ಅನುಗುಣವಾಗಿ ಬಟ್ಟೆ, ಬೂಟುಗಳು ಮತ್ತು ಪರಿಕರಗಳಂತಹ ಇತರ ಖರೀದಿಗಳು ಹೆಚ್ಚಾಗಿ ನಡೆಯುತ್ತಲೇ ಇರುತ್ತವೆ. ಉಡುಗೊರೆಗಳು, ಮತ್ತು ಇತರ ಖರ್ಚುಗಳನ್ನು ಬಿಟ್ಟು ನಾನು ಹೇಳ್ತಾ ಇರೋದು. ಈಗಂತೂ ನಾವು ಬಳಸುವ ಮತ್ತು ಫೇಸ್ ಮಾಸ್ಕ್ ಕೂಡ ದುಬಾರಿಯಾಗಿದೆ.ನಾವು ಅಷ್ಟು ಬಳಸುತ್ತಿದ್ದೇವೆ. ಈ ಹೆಚ್ಚುವರಿ ನಿಧಿಗಳು ಎಲ್ಲಿಂದ ಬರುತ್ತವೆ? ಗರಿಷ್ಠದಿಂದ ಗರಿಷ್ಠ, ಯುವ ಸಂಬಳ ಪಡೆಯುವ ಜನರು ಬಹಳ ಕಡಿಮೆ ಮೊತ್ತವನ್ನು ಹೆಚ್ಚುವರಿಯಾಗಿ ಖರ್ಚು ಮಾಡಲು ಸಾಧ್ಯವಾಗುವುದಿಲ್ಲ ಹಾಗಿದ್ದ ಮೇಲೆ ಷೇರುಗಳಲ್ಲಿ ಹೂಡಿಕೆ ಮಾಡುವುದು ಹೇಗೆ ?. ಹಾಗಾದ್ರೆ ನಮ್ಮ ಹತ್ತಿರ ಇರೋ ಸ್ವಲ್ಪ ಹಣವನ್ನ ಷೇರುಗಳಲ್ಲಿ ಹೂಡಿಕೆ ಮಾಡಬಹುದಾ ? ಅದಕ್ಕೆ ಉತ್ತರ .... ಎಸ್ - ಮಾಡಬಹುದು. ಹಾಗಾದ್ರೆ ಬನ್ನಿ ಹೇಗೆ ಮಾಡಬಹುದು ಅಂತ ನೋಡೋಣ . ಮೊದಲಿಗೆ- ಹೆಚ್ಚುವರಿ ಬಂಡವಾಳದೊಂದಿಗೆ ಮಾತ್ರ ಹೂಡಿಕೆ ಮಾಡಲು ಜನರು ಏಕೆ ಹೇಳುತ್ತಾರೆ? ನೀವು ಹೆಚ್ಚು ಹಣಕಾಸಿನ ಬದ್ಧತೆಗಳನ್ನು(commitments) ಹೊಂದಿಲ್ಲದಿದ್ದರೆ, ನಿಮ್ಮ ಮುಂದೆ ಇಡೀ ವೃತ್ತಿಜೀವನ ಮತ್ತು ಸ್ಥಿರವಾದ ಆದಾಯವಿದ್ದರೆ, ಅದು ನಿಮಗೆ ಅನ್ವಯವಾಗದಿರಬಹುದು. ಆದರೆ ಯಾವ ವ್ಯಕ್ತಿ ಪ್ರತಿ ತಿಂಗಳು EMI ಪಾವತಿಸಿ ಜೊತೆಗೆ ಮಕ್ಕಳ ಫೀಸ್ ಮತ್ತು ಮನೆಯ ಖರ್ಚನ್ನು ಸಂಭಾಳಿಸುತ್ತಾನೋ ಅಂತವರಿಗೆ ಮತ್ತು ಅಸ್ಥಿರ ಉದ್ಯೋಗದ ಪರಿಸ್ಥಿತಿಯಲ್ಲಿ ಇರುತ್ತರೋ ಅಂತವರು ಷೇರುಗಳಲ್ಲಿ ಹೂಡಿಕೆ ಮಾಡಲು ಸಾಧ್ಯವಿಲ್ಲ ಯಾಕಂದ್ರೆ ಅವರಿಗೆ ಅವರ ಎಲ್ಲ ಹೂಡಿಕೆಯನ್ನ ಕಳೆದುಕೊಂಡರೆ ಆ ನಷ್ಟವನ್ನ ಬಾರಿಸಲು ಸಾಧ್ಯ ಆಗೋದಿಲ್ಲ. ಯಾಕಂದ್ರೆ ಸ್ಟಾಕ್ ಮಾರ್ಕೆಟ್ ಅಲ್ಲಿ ನಷ್ಟವನ್ನ ತಡೆಯಲು ಸಾಧ್ಯವಿಲ್ಲ ಅದರ ಕಡಿಮೆ ಮಾಡಬಹುದು ಅಷ್ಟೇ. ಹಾಗಾಗಿ ಹೆಚ್ಚುವರಿ ಆದಾಯ ಅವಶ್ಯಕ. ಹಾಗಿದ್ದಲ್ಲಿ ಮಾತ್ರ ನಷ್ಟದ ಸಂದರ್ಭದಲ್ಲಿ ನಿಮ್ಮ ಮುಂದಿನ ಸಂಬಳ ಬರುವವರೆಗೆ ನಿಮ್ಮ ದಿನ ನಿತ್ಯದ ಖರ್ಚನ್ನ ನಿಭಾಯಿಸ ಬಹುದು. ನಿಮ್ಮ ಹತ್ತಿರ ಒಂದು ಒಳ್ಳೆಯ ಉದ್ಯೋಗ ಇದ್ದು ನೀವು ಪ್ರತಿ ತಿಂಗಳು ೫೦೦೦ ದಿಂದ ೧೫೦೦೦ ಅಥವಾ ಒಂದು ನಿರ್ದಿಷ್ಟ ಮೊತ್ತವನ್ನ ಅದಕ್ಕಾಗಿ ಮೀಸಲಿಟ್ಟರೆ ಅದು ಉತ್ತಮ. ಅದು ನಿಮಗೆ ಉತ್ತಮ ಆದಾಯವನ್ನ ತಂದುಕೊಡಬಹುದು. ಸಣ್ಣ ಪ್ರಮಾಣದ ಹಣದಿಂದ ಹೂಡಿಕೆ ಪ್ರಾರಂಭಿಸಲು ಕೆಲವು ಮಾರ್ಗಗಳು ಇಲ್ಲಿವೆ. ಸ್ನೇಹಿತರೆ ಹೂಡಿಕೆಯ ಗಾತ್ರಕ್ಕಿಂತ ಹೂಡಿಕೆಯ ತಂತ್ರ ಮುಖ್ಯ. ಕೆಲವು ತಂತ್ರಗಾರಿಕೆಯಿಂದ ನೀವ್ ೫೦೦ ರೂಪಾಯಿಯಿಂದ ೫೦೦೦೦ ರೂಪಾಯಿಯನ್ನ ಗಳಿಸಬಹುದು ಹಾಗೆ ೫೦೦೦೦ ದಿಂದ ೫೦೦ ರೂಪಾಯಿ ಅಥವಾ ಅದಕ್ಕಿಂತ ಕಡಿಮೆ ಹಣವನ್ನ ಕೊಡ ಗಳಿಸಬಹುದು . ಇದು ಕೇವಲ ಉದಾಹರಣೆ ಅಷ್ಟೇ. ಹಾಗಾಗಿ ಸರಿಯಾಗಿ ಷೇರು ಮಾರುಕಟ್ಟೆ ನಡೆಗಳನ್ನು ನೋಡಿಕೊಳ್ಳಿ. ನೀವು ಹೂಡಿಕೆ ಮಾಡಲು ದೊಡ್ಡ ಬಂಡವಾಳವನ್ನು ಹೊಂದಿರುವಾಗ ಈ ಹಲವು ನಿಯಮಗಳು ಸಹ ಅನ್ವಯಿಸುತ್ತವೆ. ೧ . ಮೊದಲಿಗೆ ನಿಮಗೆ ಸ್ಪರ್ಧಾತ್ಮಕ ಶುಲ್ಕವನ್ನು ನೀಡುವ ಆನ್‌ಲೈನ್ ಸ್ಟಾಕ್ ಬ್ರೋಕರ್ ಅನ್ನು ಆರಿಸಿ. ನೀವು ಸಣ್ಣ ಪ್ರಮಾಣದಲ್ಲಿ ಹೂಡಿಕೆ ಮಾಡುವಾಗ ನಿಮಗೆ 24 x 7 ಲಭ್ಯವಿರುವ ತಜ್ಞರ ಅಗತ್ಯವಿಲ್ಲ. ಆದರೆ ಈಗ ನಿಮಗೆ ಸ್ಟಾಕ್-ಮಾರ್ಕೆಟ್, ಹೂಡಿಕೆದಾರರ ಶಿಕ್ಷಣ ಮತ್ತು ಸ್ಟಾಕ್ ಗ್ರಾಫ್ ಮತ್ತು ಐತಿಹಾಸಿಕ ಡೇಟಾಗೆ ಪ್ರವೇಶವನ್ನು ನೀಡುವ cost-effective , ಸುಲಭವಾಗಿ ಲಭ್ಯವಿರುವ ಒಂದು ಪ್ಲಾಟ್‌ಫಾರ್ಮ್ ನ ಅಗತ್ಯವಿದೆ. ಇವತ್ತಿನ ದಿನಗಳಲ್ಲಿ ಆನ್ಲೈನ್ ಟ್ರೇಡಿಂಗ್ ಮಾಡುವ ಹೂಡಿಕೆದಾರರಿಗೆ ಹಲವು ಆಯ್ಕೆಗಳಿವೆ. ಉದಾಹರಣೆಗೆ ಏಂಜಲ್ ಬ್ರೋಕಿಂಗ್ ನಿಮಗೆ 20 ರೂ.ಗಳ ಫ್ಲಾಟ್ ಶುಲ್ಕಕ್ಕೆ ಟ್ರೇಡ್ ಮಾಡಲು ಅವಕಾಶ ನೀಡುತ್ತದೆ ಮತ್ತು ನೀವು ಅಪ್ಲಿಕೇಶನ್ ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಬಹುದು, ಗಂಟೆಗಳಲ್ಲಿ ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಯನ್ನು ಪಡೆಯಬಹುದು ಮತ್ತು ಪ್ರಯಾಣದಲ್ಲಿರುವಾಗ ವ್ಯಾಪಾರವನ್ನು ಪ್ರಾರಂಭಿಸಬಹುದು. 2. ದೀರ್ಘ ಕಾಲದ ಬೆಳವಣಿಗೆಗೆ ಆಯ್ಕೆಗಳು- ಅನೇಕ ಕಂಪನಿಗಳ ಷೇರುಗಳ ಮೌಲ್ಯವು ದೀರ್ಘಾವಧಿಯಲ್ಲಿ ಏರುತ್ತದೆ. ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ಅಥವಾ ಅಗತ್ಯ ಸೇವೆಗಳನ್ನು ನಡೆಸುವ ಕಂಪನಿಗಳು ಕೆಲವು ಉದಾಹರಣೆಗಳಾಗಿವೆ - ಇಂತಹ ಕಂಪನಿಗಳ ಷೇರುಗಳ ಮೌಲ್ಯವು ಕೆಲವು ವರ್ಷಗಳ ನಂತರ ಎರುವ ಸಾದ್ಯತೆಗಳಿವೆ. 3.Diversify your investment - ಅಂದರೆ ವಿವಿದ ರೀತಿಯಲ್ಲಿ ಹೂಡಿಕೆಯನ್ನು ಮಾಡುವುದು. ನಿಮ್ಮ ಕೈಯಲ್ಲಿ ಕಡಿಮ ಹಣ ಇರುವಾಗ ಒಂದೇಕಡೆ ಹೂಡಿಕೆ ಮಾಡುವ ಮನಸ್ಸಾಗುತ್ತದೆ. ಆದರೆ ಅಂತಹ ಆಲೋಚನೆಗಳು ನಿಮಗ್ ಬಂದರೆ ತಡೆಹಿಡಿಯಿರಿ. ಯಾಕಂದ್ರೆ ಬೇರೆಬೇರೆ ಕಂಪನಿಯ ಮತ್ತು ಬೇರೆ ಬೇರೆ ಕ್ಷೇತ್ರದ ಸ್ವಲ್ಪ ಸ್ವಲ್ಪ ಷೇರುಗಳನ್ನ ಖರೀದಿಸಿ. ಇದರಿಂದ ಯಾವುದೇ ಒಂದು ಹೂಡಿಕೆಯ ನಷ್ಟವನ್ನು ಇತರ ಹೂಡಿಕೆಗಳಲ್ಲಿನ ಗಳಿಕೆಯಿಂದ ಸರಿ ಮಾಡಬಹುದು. ಇದರಿಂದ ನೀವು ನಿಮ್ಮ ಗಳಿಕೆಯ ಅವಕಾಶವನ್ನ ಉತ್ತಮ ಗೊಳಿಸಬಹುದು. ನಿಮ್ಮ ಪೋರ್ಟ್ಫೋಲಿಯೊವನ್ನು ಉತ್ತಮಗೊಳಿಸಲು ಇನ್ನೂ ಹಲವು ಮಾರ್ಗಗಳಿವೆ, ಆದ್ದರಿಂದ ನಿರ್ಧಾರ ತೆಗೆದುಕೊಳ್ಳುವ ಮೊದಲು ಅದರ ಬಗ್ಗೆ ತಿಳಿದುಕೊಳ್ಳಿ. 4. . ನೀವು ಅರ್ಥಮಾಡಿಕೊಳ್ಳುವ ಕ್ಷೇತ್ರಗಳಿಂದ ಒಂದಷ್ಟು ಸ್ಟಾಕ್‌ಗಳನ್ನು ಹುಡುಕಿ- ಕೇವಲ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವುದು ಮಾತ್ರವಲ್ಲ. ನಿಮಗೆ ಗೊತ್ತಿರುವ ಕ್ಷೇತ್ರಗಳಲ್ಲಿನ ಷೇರುಗಳಲ್ಲಿ ಹೂಡಿಕೆ ಮಾಡುವುದರಿಂದ ಆ ಕಂಪನಿಯ ಆರ್ಥಿಕ ಸ್ಥಿತಿಯ ಬಗ್ಗೆ ತಿಳಿದುಕೊಳ್ಳುವುದು ಸುಲಭವಾಗುತ್ತದೆ. ನೀವು ಷೇರು ಖರೀದಿಸುತ್ತಿರುವ ಕಂಪನಿಯು ಲಾಭದಿಂದ ನಡೆಯುತ್ತಿದೆಯೋ ಇಲ್ಲವೋ ಎಂದು ನೀವು ತಿಳಿದುಕೊಳ್ಳಬೇಕಾಗುತ್ತದೆ. ಈ ಕಂಪನಿಯ ಷೇರುಗಳಿಂದ ನಿಮಗೆ ಮುಂದೆ ಲಾಭವಾಗಲಿದೆಯೋ ಇಲ್ಲವೋ ? ಇಂತಹ ಪ್ರಶ್ನೆಗಳಿಗೆ ಮೊದಲೇ ನೀವು ಉತ್ತರ ಕಂಡುಕೊ ಬೇಕಾಗುತ್ತದೆ. 5. ನಿಮ್ಮ ಗುರಿಗಳನ್ನು ಮೊದಲೇ ನಿರ್ಧರಿಸಿ - ನೀವು ಖರೀದಿಸಲು ಬಯಸುತ್ತಿರುವ ಷೇರುಗಳಿಗೆ ಲಾಭದ ಮೊತ್ತವನ್ನ ನಿಗದಿಪಡಿಸಿ. ಉದಾಹರಣೆಗೆ : ನೀವು ಈಗ ಒಂದು ಷೇರನ್ನ ೧೦೦ ರುಪಾಯಿಗೆ ಖರೀದಿಸುತ್ತಿದ್ದೀರಿ ಅಂತ ಭಾವಿಸಿ ಮತ್ತು ನೀವು ಅದರಿಂದ್ ೭೫ ರೂಪಾಯಿ ಲಾಭ ಬಯಸುತ್ತಿದ್ದರೆ ಆ ಷೇರಿನ ಮೊತ್ತ ೧೭೫ ರೂಪಾಯಿ ಆದಾಗ ಅದನ್ನ ಮಾರಿ ಬಿಡಿ . ದುರಾಸೆ ಷೇರು ವ್ಯವಹಾರದಲ್ಲಿ ಒಳ್ಳೆಯದಲ್ಲ. ಇದರಿಂದಾಗಿ ಕೆಲವೊಮ್ಮೆ ನಷ್ಟ ಸಂಭವಿಸಬಹುದು ಇದರಿಂದಾಗ ನಿಮ್ಮ ಗುರಿಯ್ ಮೊತ್ತವನ್ನ ತಲುಪಿದಾಗ ಷೇರುಗಳನ್ನ ಮಾರಿಬಿಡಿ. ೬. ನಷ್ಟದ ಮೊತ್ತವನ್ನ ಕೂಡ ಮೊದಲೇ ನಿರ್ಧರಿಸಿ - ನಿಮ್ಮ ಬಳಿಕಡಿಮೆ ಹಣ ಇದ್ದರೆ ನಷ್ಟದ ಬಗ್ಗೆ ಮೊದಲೇ ಚಿಂತಿಸಿದ್ದರೆ ಖರೀದಿಸಿದ ಬೆಲೆಯ ಸಮೀಪದ ಬೆಲೆಗೆ ಷೇರುಗಳನ್ನ ಮಾರಿ ಹೆಚ್ಚಿನ ನಷ್ಟವನ್ನ ತಪ್ಪಿಸಬಹುದು. ಮತ್ತು ಮಾರುಕಟ್ಟೆಯ ಅನಿಶ್ಚಿತತೆಯಿಂದ ತಪ್ಪಿಸಿಕೊಳ್ಳಬಹುದು. ಇದರಿಂದಾಗಿ ನಷ್ಟದ ಮೊತ್ತವನ್ನ ಕೂಡ ಮೊದಲೇ ನಿರ್ಧರಿಸುವುದು ಉತ್ತಮ. 7.ಯಾವಾಗಲು ಮರು ಹೂಡಿಕೆ ಮಾಡಿ - ಎಲ್ಲಿಯವರೆಗೂ ನೀವು ಹೂಡಿರುವ ಬಂಡವಾಳವು ಕಡಿಮೆ ಇರುತ್ತೋ ಅಲ್ಲಿವರೆಗೆ ನೀವು ಗಳಿಸಿದ ಹಣವನ್ನ ವ್ಯರ್ಥಮಾಡಬೇಡಿ ಬದಲಾಗಿ ಮತ್ತೆ ಮರು ಹೂಡಿಕೆ ಮಾಡಿ. ಇನ್ನಷ್ಟು ಷೇರುಗಳನ್ನ ಖರೀದಿಸಿ. ಉದಾಹರಣೆಗೆ ನಿಮ್ಮ ಸಣ್ಣ ಮೊತ್ತವು 5000 ರೂ.ಗಳಿಂದ 7500 ರೂ.ಗೆ ಏರಿರಬಹುದು. ಆ 7500 ರೂ. ಗಳಿಂದ ವಿವಿಧ ಕ್ಷೇತ್ರದ ಹೆಚ್ಚಿನ ಷೇರುಗಳನ್ನು ಖರೀದಿಸಿ. 8.Avoid extremes - ಅಂದರೆ Penny stocks ಮತ್ತು overpriced stocks ಅನ್ನಖರೀದಿಸುವುದನ್ನ ತಪ್ಪಿಸಿ. ತುಂಬಾ ದುಬಾರಿ ಷೇರುಗಳಲ್ಲಿ ಹೂಡಿಕೆ ಮಾಡಲು ನಿಮಗೆ ಬಂಡವಾಳ ಇಲ್ಲದಿದ್ದರೆ ಕಡಿಮೆ ಬೇಡಿಕೆ ಇರುವ ಷೇರುಗಳನ್ನ ಖರೀದಿಸಲು ಹೋಗಬೇಡಿ ಇದರಿಂದ ಮುಂದೆ ನಷ್ಟ ಆಗಬಹುದು. ಈ ೮ ಅಂಶಗಳನ್ನ ಸದಾ ನೆನಪಲ್ಲಿ ಇಟ್ಟುಕೊಳ್ಳಿ ಮತ್ತು ಇದರ ಕುರಿತಾಗಿ ಇನ್ನಷ್ಟು ಮಾಹಿತಿಯನ್ನ ಕಲೆಹಾಕಿ. ಹೆಚ್ಚಿನ ಮಾಹಿತಿಗಾಗಿ ನಮ್ಮ ಯೌಟ್ಯೂಬ್ ಚಾನೆಲ್ ಹಾಗು ವೆಬ್ ಸೈಟ್ ಅನ್ನ ಭೇಟಿಮಾಡಲು ಮರೆಯದಿರಿ. ಇವತ್ತಿನ ಪೋಡ್ ಕ್ಯಾಸ್ಟ್ ನಲ್ಲಿ ಸಾಕಷ್ಟು ಮಾಹಿತಿಯನ್ನ ತಿಳಿದುಕೊಂಡಿದ್ದೀರಿ. ಮುಂದಿನ ಪೋಡ್ ಕ್ಯಾಸ್ಟ್ ನಲ್ಲಿ ಇನ್ನಷ್ಟು ಹೊಸ ವಿಷಯಗಳನ್ನ ನಿಮಗೆ ತಿಳಿಸ್ತೀವಿ. ಅಲ್ಲಿವರೆಗೆ ಏಂಜಲ್ ಬ್ರೋಕಿಂಗ್ ಕಡೆಯಿಂದ ಶುಭ ವಿದಾಯ. ಮತ್ತು happy investing!ಹೂಡಿಕೆ ಮಾಡುವ ಮೊದಲು ಎಲ್ಲಾ ಸಂಬಂಧಿತ ದಾಖಲೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಮಾರುಕಟ್ಟೆಯ ಅಪಾಯದಿಂದ ಪಾರಾಗಿ .