Investing in SGBs Vs Other Options | Kannada

Podcast Duration: 7:48
ಎಸ್‌ಜಿಬಿಗಳಲ್ಲಿ ಮತ್ತು ಇತರ ಒಪ್ಶನ್ ಗಳಲ್ಲಿ ಹೂಡಿಕೆ ಮಾಡುವುದರ ಕುರಿತಾಗಿ ಒಂದಷ್ಟು ಮಾಹಿತಿಗಳನ್ನ ನೋಡೋಣ . ನಮಸ್ಕಾರ ಸ್ನೇಹಿತರೆ, ಏಂಜಲ್ ಒನ್ ಅವರ ಈ ಪಾಡ್‌ಕ್ಯಾಸ್ಟ್‌ಗೆ ಸ್ವಾಗತ. ಈ ಪಾಡ್ಕ್ಯಾಸ್ಟ್ನಲ್ಲಿ ನಾವು ಎಸ್.ಜಿ.ಬಿ ಮತ್ತು ಇತರ ಇನ್ವೆಸ್ಟ್ಮೆಂಟ್ ಒಪ್ಶನ್ ಗಳ ಕುರಿತಾಗಿ ನೋಡೋಣ . ಸಾವರಿನ್ ಗೋಲ್ಡ್ ಬಾಂಡ್ - ಇದು ಎಸ್.ಜಿ.ಬಿ ಯ ಅಬ್ರಿವೇಷನ್, ಇದನ್ನ ಆರ್.ಬಿ.ಐ ಇಶ್ಯೂ ಮಾಡುತ್ತಿದ್ದು ಇದು ಚಿನ್ನದ ಮೇಲೆ ಹೂಡಿಕೆ ಮಾಡುವ ಡಿಜಿಟಲ್ ವಿಧಾನವಾಗಿದೆ. ಭಾರತದಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡುವುದು ಒಂದು ಜನಪ್ರಿಯ ವಿಧಾನ. ಜನರು ಚಿನ್ನದ ಮೇಲೆ ಹೆಚ್ಚಾಗಿ ಹೂಡಿಕೆ ಮಾಡುತ್ತಾರೆ. ಇದು ತಲ ತಲಾಂತರ ದಿಂದ ನಡೆದುಕೊಂಡು ಬಂದಿದೆ . ಹಿಂದೂ ಕ್ಯಾಲೆಂಡರ್ ನಲ್ಲಿ ವಾರ್ಷಿಕವಾಗಿ ಚಿನ್ನವನ್ನು ಖರೀದಿಸಲು ಒಂದು ದಿನವನ್ನು ಮೀಸಲಿಡುತ್ತಾರೆ: ಅದನ್ನ ಧಂತೇರಸ್ ಅಂತ ಆಚರಿಸ್ತಾರೆ. ಹಾಗಾದರೆ, ಇನ್ವೆಸ್ಟ್ ಮಾಡುವುದಕ್ಕೆ ಬೆಸ್ಟ್ ಒಪ್ಶನ್ ಯಾವುದು ? ಎಸ್ .ಜಿ.ಬಿ? ಅಥವಾ ಫಿಸಿಕಲ್ ಗೋಲ್ಡ್? ವಾಸ್ತವವಾಗಿ, ಎಸ್‌ಜಿಬಿ ಯನ್ನ ಇತರ ಜನಪ್ರಿಯ ಹೂಡಿಕೆ ಆಯ್ಕೆಗಳಾದ ಫಿಕ್ಸೆಡ್ ಡೆಪಾಸಿಟ್ ಮತ್ತು ರಿಯಲ್ ಎಸ್ಟೇಟ್ ಮತ್ತು ಫಿಸಿಕಲ್ ಗೋಲ್ಡ್ ಮತ್ತು ಚಿನ್ನದ ಇಟಿಎಫ್‌ಗಳಂತಹ ಇತರ ಚಿನ್ನದ ಹೂಡಿಕೆ ಆಯ್ಕೆಗಳೊಂದಿಗೆ ಹೇಗೆ ಹೋಲಿಕೆ ಮಾಡುವುದು? ಫಸ್ಟ್ , ಫಿಕ್ಸೆಡ್ ಡೆಪಾಸಿಟ್ ಮತ್ತು ರಿಯಲ್ ಎಸ್ಟೇಟ್ ಜೊತೆ ಚಿನ್ನವನ್ನ ಹೂಡಿಕೆಯನ್ನಾಗಿ ಕಂಪೇರ್ ಮಾಡೋದಾದ್ರೆ. ಎಸ್.ಜಿ.ಬಿ ವರ್ಸ್ಸ್ ಎಫ್ಡಿ - ಇವೆರಡನ್ನ ತಗೆದುಕೊಂಡ್ರೆ ಎಫ್ ಡಿ ಗೆ ಎಸ್.ಜಿ.ಬಿ ಗೆ ಹೆಚ್ಚಿನ ಸ್ಕೋರ್ ಕೊಡಬಹುದು. ಇನ್ವೆಸ್ಟ್ಮೆಂಟಿನ ವಿಷಯಕ್ಕೆ ಬಂದಾಗ ಎಫ್.ಡಿ ಯಾ ಕಾಲಾವಧಿ 11 ತಿಂಗಳಿಂದ 5 ವರ್ಷಗಳಿರುತ್ತದೆ , ಆದರೆ ಯಸ್.ಜಿ.ಬಿ ಯ ಮೇಲಿನ ಇನ್ವೆಸ್ಟ್ಮೆಂಟಿನ ಕಾಲಾವಧಿ 8 ವರ್ಷಗಳು . ಆದರೆ ಎಸ್.ಜಿ.ಬಿ ಯನ್ನ ಇನ್ವೆಸ್ಟರ್ಸ್ ಸ್ಟಾಕ್ ಮಾರ್ಕೆಟ್ನಲ್ಲಿ ಮಾರಾಟ ಮಾಡಬಹುದು ಹಾಗೆ ಗಿಫ್ಟ್ ರೂಪದಲ್ಲಿ ಬೇರೆಯವರಿಗೆ ಕೊಡಬಹುದು . ರಿಟರ್ನ್ ರೂಪದಲ್ಲೂ ಎಸ್.ಜಿ.ಬಿ ಯಿಂದ ಹೆಚ್ಚಿನ ರಿಟರ್ನ್ ಅನ್ನ ನಿರೀಕ್ಷಿಸಬಹುದು. 2012 ರಲ್ಲಿ ಚಿನ್ನದ ಬೆಲೆ 3100 ಇತ್ತು ಮತ್ತು 2020 ರಲ್ಲಿ ಚಿನ್ನದ ಬೆಲೆ ಅಪ್ರಾಕ್ಸಿಮೇಟ್ಲಿ 4800. ಹಾಗಾಗಿ ಯಾರು 2012 ರಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಿ 2020 ರಲ್ಲಿ ಮಾರಾಟ ಮಾಡಿರುತ್ತಾರೋ ಅವ್ರ ಅರ್ನಿಂಗ್ಸ್ ತುಂಬಾ ಚನ್ನಾಗೇ ಆಗಿರುತ್ತೆ - ಅಂತ ಹೇಳಲಾಗುತ್ತಿದೆ, ಇನ್ನೊಂದು ವಿಷಯ ಹೇಳಲೇ ಬೇಕು ಮಧ್ಯಂತರ ವರ್ಷಗಳಲ್ಲಿ ಚಿನ್ನದ ಬೆಲೆ 2600 ರೂ.ಗೆ ಇಳಿದಿದೆ. ಫಿಕ್ಸೆಡ್ ಡೆಪಾಸಿಟ್ ನಂತೆಯೇ ಎಸ್.ಜಿ.ಬಿ ಯಲ್ಲಿ ಕೂಡ ಇಂಟ್ರೆಸ್ಟ್ ಕೂಡ ಪೇ ಮಾಡ್ತಾರೆ, ಅದು 2.5 % ನಂತೆ ವರ್ಷದಲ್ಲಿ 2 ಸಲ ಪೇ ಮಾಡಲಾಗುತ್ತೆ. ಎಫ್‌ಡಿ ಬಡ್ಡಿದರಗಳಿಗೆ ಸಂಬಂಧಿಸಿದಂತೆ ಇದು ಸಾಕಷ್ಟು ಕಾಂಪಿಟೇಟಿವ್ ಅಂತ ಪರಿಗಣಿಸಬಹುದು. ​ಎಸ್‌ಜಿಬಿ ವರ್ಸಸ್ ರಿಯಲ್ ಎಸ್ಟೇಟ್ - ಹೆಚ್ಚಿನ ಕೇಸ್ ಗಳನ್ನ ಗಮನಿಸಿದಾಗ ರಿಯಲ್ ಎಸ್ಟೇಟ್ ಅಲ್ಲಿ ಇನ್ವೆಸ್ಟ್ಮೆಂಟ್ ಕ್ಯಾಪಿಟಲ್ ತುಂಬಾ ಹೆಚ್ಚಾಗಿರುತ್ತದೆ ಆದರೆ ಎಸ್.ಜಿ.ಬಿ ಯಲ್ಲಿ ನೀವು ಕಡಿಮೆ ಅಂದರೆ ಒಂದು ಗ್ರಾಂ ಚಿನ್ನದ ಮೇಲು ಇನ್ವೆಸ್ಟ್ ಮಾಡಬಹುದು . ಆದರೆ ರಿಯಲ್ ಎಸ್ಟೇಟ್ ಅಲ್ಲಿ ನಿಮಗೆ ಲಕ್ಷಾಂತರ ರೂಪಾಯಿ ಇನ್ವೆಸ್ಟ್ಮೆಂಟ್ ಮಾಡಬೇಕಾಗುತ್ತದೆ. ಎಸ್.ಜಿ.ಬಿ ಯ ವ್ಯಾಲ್ಯೂ ನಾನ್ ನೆಗೋಷಿಯೇಬಲ್ ಇರುತ್ತದೆ. ಯಾಕಂದ್ರೆ ಇನ್ವೆಸ್ಟರ್ಸ್ ಸಾಮಾನ್ಯವಾಗಿ ಮಾರ್ಕೆಟ್ ರೇಟ್ ಗೆ ಖರೀದಿ ಮಾಡಿ ಮಾರ್ಕೆಟ್ ರೇಟ್ ಗೆ ಮಾರಾಟ ಮಾಡುತ್ತಾರೆ . ಆದರೆ ರಿಯಲ್ ಎಸ್ಟೇಟ್ ಅಲ್ಲಿ ಯಾವಾಗಲು ಸ್ವಲ್ಪ್ ನೆಗೋಷಿಯೇಷನ್ ಇದ್ದೆ ಇರುತ್ತದೆ ..................... ನಾಟ್ ಟು ಮೆನ್ಶೇನ್ ದೇರ್ ಇಸ್ ದಿ ಪ್ರಾಬ್ಲಮ್ ಆಫ್ ಜಿರೋಯಿಂಗ್ ಇನ್ ಆನ್ ಲೊಕೇಷನ್ಸ್ ರಿಪ್ ಫಾರ್ ಗ್ರೋಥ್. ಕೆಲವೊಮ್ಮೆ ಹೂಡಿಕೆದಾರರು ಬಂಡವಾಳವನ್ನು "ಅಪ್ ಕಮಿಂಗ್ ಲೊಕೇಷನ್ಸ್" ಗೆ ಹಣವನ್ನ ಪಂಪ್ ಮಾಡುವ ಮೂಲಕ ಪಿಆರ್ ಗಿಮಿಕ್‌ಗಳಿಗೆ ಬಲಿಯಾಗುತ್ತಾರೆ, ಅದು ಸ್ಥಳದ ಬೆಲೆಯನ್ನ ಅತಿಯಾಗಿ ಹೆಚ್ಚಿಸುತ್ತದೆ ಅಥವಾ ಅಕಾಲಿಕ ಭರವಸೆಗಳನ್ನು ನೀಡುತ್ತದೆ, ಆ ಸ್ಥಳವು ಅಭಿವೃದ್ಧಿ ಹೊಂದಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ, ಹೀಗಾಗಿ ಹೂಡಿಕೆ ಅವಧಿ ಹೆಚ್ಚುತ್ತದೆ . ವಾಸ್ತವವಾಗಿ ನೋಡಿದ್ರೆ - ಸಾಮಾನ್ಯವಾಗಿ ರಿಯಲ್ ಎಸ್ಟೇಟ್ನ ಹೂಡಿಕೆಯ ಅವಧಿ 10 + ವರ್ಷಗಳು . ಈಗ ಅಸೆಟ್ ರೂಪದಲ್ಲಿ ಚಿನ್ನದಲ್ಲಿ ಹೂಡಿಕೆ ಮಾಡುವ ವಿವಿಧ ವಿಧಾನಗಳನ್ನು ನೋಡೋಣ - ಫಿಸಿಕಲ್ ಗೋಲ್ಡ್ ಮತ್ತು ಚಿನ್ನದ ಇಟಿಎಫ್‌ಗಳಿಗೆ ಹೋಲಿಸಿದರೆ ಸಾವರಿನ್ ಗೋಲ್ಡ್ ಹೇಗೆ ಸ್ಕೋರ್ ಮಾಡುತ್ತವೆ ನೋಡೋಣ? ಸಾವೇರಿಯನ್ ಗೋಲ್ಡ್ ಬಾಂಡ್ ವರ್ಸ್ಸ್ ಫಿಸಿಕಲ್ ಗೋಲ್ಡ್ ಎಸ್.ಜಿ.ಬಿ ಯಂತೂ ಫಿಸಿಕಲ್ ಗೋಲ್ಡ್ ಅನ್ನ ತುಂಬಾ ಸುಲಭವಾಗಿ ಡಿಫೀಟ್ ಮಾಡುತ್ತೆ - ಅದು ಕೆಳಕಂಡವುಗಳ ಆಧಾರದ ಮೇಲೆ - ಫಿಸಿಕಲ್ ಗೋಲ್ಡ್ ಅನ್ನ ಕದಿಯಬಹುದು ಅಥವಾ ನೀವು ಅದನ್ನು ಕಳೆದುಕೊಳ್ಳಬಹುದು - ಸಾವೇರಿಯನ್ ಗೋಲ್ಡ್ ಬಾಂಡ್ಸ್ ಡಿಜಿಟಲ್ ರೂಪದಲ್ಲಿರುತ್ತದೆ ಮತ್ತು ಅದನ್ನ ನಿಮ್ಮ ಹೆಸರಲ್ಲೇ ಇಶ್ಯೂ ಆಗಿರುತ್ತದೆ ಹಾಗಾಗಿ ಅದನ್ನ ಕಳೆದುಕೊಳ್ಳುವ ಮತ್ತು ಯಾರಾದರೂ ಕಳ್ಳತನ ಮಾಡುವ ಸಂಭವ ತುಂಬಾ ಕಡಿಮೆ ಇರುತ್ತದೇ . ಒಂದು ವೇಳೆ ನೀವು ನಿಮ್ಮ ಬಾಂಡ್ ಅನ್ನ ಕಳೆದುಕೊಂಡರು ಸಹ ಆರ್.ಬಿ.ಐ ಅಲ್ಲಿ ಅದು ಜೋಪಾನವಾಗಿರುತ್ತೆ ಹೇಗಂದ್ರೆ ಆರ್. ಬಿ. ಐ ಅದನ್ನ ತನ್ನ ರೆಕಾರ್ಡ್ ಅಲ್ಲಿ ಅದನ್ನ ಜೋಪಾನವಾಗಿಡುತ್ತೆ ! ಫಿಸಿಕಲ್ ಗೋಲ್ಡ್ ನಲ್ಲಿ ಮೇಕಿಂಗ್ ಚಾರ್ಜ್ ನ ಕಾರಣದಿಂದಾಗಿ ಇನ್ವೆಸ್ಟ್ಮೆಂಟ್ ಕಾಸ್ಟ್ ಜಾಸ್ತಿ ಆಗುತ್ತೆ . 999 ಶುದ್ಧತೆಯ ಚಿನ್ನಕ್ಕೆ ಎಸ್‌ಜಿಬಿ ನೀಡಲಾಗುತ್ತದೆ ಹಾಗಾಗಿ ಇಲ್ಲಿ ಶುದ್ಧತೆಯ ಸಮಸ್ಯೆಯೇ ಬರುವುದಿಲ್ಲ ಆದರೆ ಫಿಸಿಕಲ್ ಗೋಲ್ಡ್ನಲ್ಲಿ ಹಾಗಲ್ಲ ಕೆಲವೊಮ್ಮೆ ಶುದ್ಧತೆಯ ಸಮಸ್ಯೆಯು ಬರಬಹುದು. ಮತ್ತು ಹೆಚ್ಚಿನ ಪ್ರಮಾಣದಲ್ಲಿ ಇನ್ವೆಸ್ಟ್ ಮಾಡಿದ್ರೆ ಲಾಕರ್ ಕೂಡ ತೆಗೆದುಕೊಳ್ಳಬೇಕಾಗುತ್ತೆ ............... ಇದು ಖರ್ಚನ್ನ ಹೆಚ್ಚಿಸುತ್ತೆ. ಆದರೆ ಯೇಟ್ ದಿ ಎಂಡ್ ಅಪ್ ದಿ ಡೇ ನೀವ್ ನಿಮ್ಮ ಹೂಡಿಕೆ ವೆಚ್ಚವನ್ನು ಸಾಧ್ಯವಾದಷ್ಟು ಕಡಿಮೆ ಇರಿಸಲು ನೀವು ಬಯಸುತ್ತೀರಿ. ಆದಾಗ್ಯೂ, 8 ವರ್ಷಗಳ ಹೂಡಿಕೆಯ ಅವಧಿಯನ್ನು ಹೊಂದಿರುವ ಎಸ್‌ಜಿಬಿಗಳಿಗೆ ಹೋಲಿಸಿದರೆ ನಿಮ್ಮ ಫಿಸಿಕಲ್ ಗೋಲ್ಡ್ ಹೆಚ್ಚು ಲಿಕ್ವಿಡ್ ಆಗಿರಬಹುದು . ​ಸಾವೇರಿಯನ್ ಗೋಲ್ಡ್ ಬಾಂಡ್‌ಗಳು ಮತ್ತು ಗೋಲ್ಡ್ ಇಟಿಎಫ್‌ಗಳು - ಇವೆರಡೂ ಚಿನ್ನವನ್ನು ಹಿಡಿದಿಟ್ಟುಕೊಳ್ಳುವ ಡಿಜಿಟಲ್ ರೂಪಗಳು ಆದರೆ ಕೆಲವು ರೀತಿಯಲ್ಲಿ ವಿಭಿನ್ನವಾಗಿವೆ.- ಗೋಲ್ಡ್ ಇಟಿಎಫ್‌ಗಳು ಅಂದ್ರೆ ( ಎಕ್ಸ್ಚೇಂಜ್ ಟ್ರೇಡೆಡ್ ಫಂಡ್) ಇದು ಒಂದು ರೀತಿಯ ಮ್ಯೂಚುಯಲ್ ಫಂಡ್ ಹೂಡಿಕೆಯಾಗಿದ್ದು, ಇದನ್ನು ಷೇರು ಮಾರುಕಟ್ಟೆಯಲ್ಲಿ ಪ್ರತಿದಿನವೂ ವ್ಯಾಪಾರ ಮಾಡಲಾಗುತ್ತದೆ. ಈ ಡೈರೆಕ್ಟ್ ಮಾರ್ಕೆಟ್ ಎಕ್ಷಪೋಸರ್ ಗೋಲ್ಡ್ ಇಟಿಎಫ್‌ಗಳನ್ನು ಎಸ್‌ಜಿಬಿಗಳಿಗಿಂತ ತುಲನಾತ್ಮಕವಾಗಿ ಅಪಾಯಕಾರಿಯಾಗಿಸುತ್ತದೆ. ಆದರೆ ಈ ಡೈರೆಕ್ಟ್ ಮಾರ್ಕೆಟ್ ಎಕ್ಷಪೋಸರ್ ಹೈ ಯೀಲ್ಡ ನೀಡುವ ಸಾಮರ್ಥ್ಯವನ್ನು ಹೊಂದಿದೆ ಎಂಬುದನ್ನು ನೆನಪಿಡಿ. ಹೆಚ್ಚುವರಿಯಾಗಿ ಮ್ಯೂಚುವಲ್ ಫಂಡ್‌ಗಳಾಗಿರುವುದರಿಂದ, ಮ್ಯೂಚುವಲ್ ಫಂಡ್ ಹೌಸ್‌ಗೆ ಪಾವತಿಸಬೇಕಾದ ಕೆಲವು ಶುಲ್ಕವಿದೆ - ಅದು ಮ್ಯೂಚುಯಲ್ ಫಂಡ್ ಹೌಸ್ಗೆ ಪಾವತಿಸಿದ ವೆಚ್ಚ ಅನುಪಾತದ ಮೂಲಕ.. ಹೂಡಿಕೆ ಅವಧಿಯ ಗೋಲ್ಡ್ ಇಟಿಎಫ್‌ಗಳು ಖಂಡಿತವಾಗಿಯೂ ಎಸ್‌ಜಿಬಿಗಳಿಗಿಂತ ಹೆಚ್ಚು ಸ್ಕೋರ್ ಮಾಡುತ್ತವೆ ಏಕೆಂದರೆ ಚಿನ್ನದ ಇಟಿಎಫ್‌ಗಳನ್ನು ಯಾವುದೇ ಸಮಯದಲ್ಲಿ ಹಿಂಪಡೆಯಬಹುದು ಅಥವಾ ಪುನಃ ಪಡೆದುಕೊಳ್ಳಬಹುದು. ಇದಲ್ಲದೆ ಎಸ್‌ಜಿಬಿಯ ರಿಡೆಂಪ್ಶನ್ ಡೇ ಬಂದಾಗ ಹೂಡಿಕೆದಾರರು ಮುಂದೆ ಹೋಗಿ ಚಿನ್ನದ ಬೆಲೆ ಏನೇ ಇರಲಿ ಅದನ್ನು ಪುನಃ ಪಡೆದುಕೊಳ್ಳಬೇಕು - ಅದು ಕೂಡ (ನಾವು ಮೊದಲೇ ಚರ್ಚಿಸಿದಂತೆ) ಚಿನ್ನದ ಬೆಲೆ ಕುಸಿತ ಕಂಡಾಗಲೂ. ಗೋಲ್ಡ್ ಈಟಿಎಫ್ ಗಳಲ್ಲಿ ಇನ್ವೆಸ್ಟರ್ಸ್ ರಿಡೆಂಪ್ಶನ್ ದಿನವನ್ನ ಚೂಸ್ ಮಾಡಬಹುದು ಮತ್ತು ಮಾರ್ಕೆಟ್ ಹೈ ಇದ್ದಾಗ ಅದನ್ನ ಮಾರಾಟ ಮಾಡಬಹುದು. ಇದಾಗಿತ್ತು ಎಸ್‌ಜಿಬಿಗಳ ಪ್ರಾಮಾಣಿಕ ಹೋಲಿಕೆ ಮತ್ತು ಇತರ ಹೂಡಿಕೆ ಆಯ್ಕೆಗಳು. ಈಗ ನೀವು ಒಬ್ಬ ಯುನಿಕ್ ಇನ್ವೆಸ್ಟರ್ಸ್ ಪ್ರಕಾರ, ನಿಮಗೆ ಯಾವ ಆಯ್ಕೆ ಬೇಕು ನಿರ್ಧರಿಸಿ… ಅಥವಾ ಯಾವ ಆಯ್ಕೆಗಳು… ನಿಮಗೆ ಯೋಗ್ಯವಾಗಿದೆ ಎಂದು ಯೋಚಿಸಿ. ಇನ್ವೆಸ್ಟರ್ಸ್ ಪೋರ್ಟ್ಪೋಲಿಯೋ ಡೈವರ್ಸಿಫ್ಯ್ ಮಾಡುವುದು ಬಹಳ ಮುಖ್ಯ. ಆದ್ದರಿಂದ ನೀವು ಮಲ್ಟಿಪಲ್ ಅಸೆಟ್ ಗಳಲ್ಲಿ ಹೂಡಿಕೆ ಮಾಡುವುದನ್ನು ಪರಿಗಣಿಸಬೇಕು. ಸ್ನೇಹಿತರೆ ಮಾರುಕಟ್ಟೆ-ಸಂಬಂಧಿತ ಹೂಡಿಕೆಗಳಲ್ಲಿ ಯಾವಾಗಲೂ ಅಪಾಯವಿರುತ್ತದೆ. ಆದರೂಎಸ್ ಜಿ ಬಿ ಗಳ ಕುರಿತಾಗಿ ಒಂದು ವಿಷಯ ನೋಡುವುದಾದರೆ ಅದು ಏನೇ ಇರಲಿ, ನೀವು ಹೊಂದಿರುವ ಗೋಲ್ಡ್ ಯೂನಿಟ್ ಯಾವತ್ತೂ ಬದಲಾಗುವುದಿಲ್ಲ ಅದೆಷ್ಟೇ ಅವುಗಳ ಬೆಲೆಗಳಲ್ಲಿ ಬದಲಾವಣೆ ಆದರೂ ಮತ್ತು ಪ್ರೈಸ್ ಚೇಂಜ್ ಆಗುವ ರಿಸ್ಕ್ ಇದ್ದರು ಸಹ . ಯಾವಾಗಲು ಒಂದು ವಿಷಯವನ್ನ' ಗಮನದಲ್ಲಿರಿಸಿ - ಇಲ್ಲಿ ಇನ್ವೆಸ್ಟ್ಮೆಂಟ್ ರಿಸ್ಕ್ ಇರೋದ್ರಿಂದ - ಯಾವಾಗಲು ನಿಮ್ಮ ಹೆಚ್ಚುವರಿ ಆದಾಯವನ್ನ ಮಾತ್ರ ಹೂಡಿಕೆ ಮಾಡಿ . ಅಂದ್ರೆ ಆಹಾರ, ಮನೆ ಬಾಡಿಗೆ, ಉಪಯುಕ್ತತೆಗಳು, ಟ್ರಾನ್ಸ್ಪೋರ್ಟ್ ಚಾರ್ಜ್, ಮಕ್ಕಳ ಶುಲ್ಕ, ಯಾವುದೇ ಆಸ್ಪತ್ರೆ ಖರ್ಚು ಇತ್ಯಾದಿಗಳನ್ನು ದಿನನಿತ್ಯದ ಜೀವನ ಮತ್ತು ಜೀವನಶೈಲಿ ವೆಚ್ಚಗಳಿಗಾಗಿ ಸಾಕಷ್ಟು ಮೀಸಲಿಟ್ಟ ನಂತರ . ಸ್ನೇಹಿತರೇ, ಇದಿಷ್ಟು ಇಂದಿನ ಪಾಡ್‌ಕ್ಯಾಸ್ಟ್‌ನಲ್ಲಿ ತಿಳಿದು ಕೊಂಡಿದ್ದೀರಿ . ಎಸ್‌ಜಿಬಿಯ ಕುರಿತಾದ ಹೆಚ್ಚಿನ ಮಾಹಿತಿಗಾಗಿ , ಸಾಮಾನ್ಯ ಪ್ರಶ್ನೆಗಳಿಗೆ ಉತ್ತರಗಳನ್ನ ಮತ್ತು ಸಾವೇರಿಯನ್ ಗೋಲ್ಡ್ ಬಾಂಡ್‌ಗಳ ಕುರಿತಾದ ಹೆಚ್ಚಿನ ಮಾಹಿತಿಗಾಗಿ, ನಮ್ಮ ನೆಕ್ಸ್ಟ್ ಪಾಡ್‌ಕಾಸ್ಟ್‌ಗಳನ್ನು ಪರಿಶೀಲಿಸಿ. ​ಈ ಪಾಡ್‌ಕ್ಯಾಸ್ಟ್ ಕೇಳುವ ಮೂಲಕ ನೀವು ತಿಳಿದುಕೊಳ್ಳುತ್ತಿರುವಂತೆ ನಿಮ್ಮ ಸ್ವಂತ ರಿಸರ್ಚ್ ಮಾಡಲು ಯಾವಾಗಲೂ ಮರೆಯದಿರಿ. ಶೀಘ್ರದಲ್ಲೇ ನಿಮ್ಮನ್ನು ಮತ್ತೆ ಭೇಟಿ ಮಾಡುತ್ತೇವೆ, ಅಲ್ಲಿಯವರೆಗೆ ವಿದಾಯ ಮತ್ತು ಹ್ಯಾಪಿ ಇನ್ವೆಸ್ಟಿಂಗ್! ಇನ್ವೆಸ್ಟ್ಮೆಂಟ್ಸ್ ಮತ್ತು ಸೆಕ್ಯುರಿಟೀಸ್ ಮಾರ್ಕೆಟ್ಸ್ ಮಾರುಕಟ್ಟೆಯ ಅಪಾಯಗಳಿಗೆ ಒಳಪಟ್ಟಿರುತ್ತವೆ. ಹೂಡಿಕೆ ಮಾಡುವ ಮೊದಲು ಎಲ್ಲಾ ಸಂಬಂಧಿತ ದಾಖಲೆಗಳನ್ನು ಎಚ್ಚರಿಕೆಯಿಂದ ಓದಿ.