How to Invest in Sovereign Gold Bonda via Angel One? | Kannada

Podcast Duration: 6:56
ಏಂಜಲ್ ಒನ್ (ಅಪ್ಲಿಕೇಶನ್ ಮತ್ತು ವೆಬ್) ಮೂಲಕ ಎಸ್‌ಜಿಬಿಯಲ್ಲಿ ಹೂಡಿಕೆ ಮಾಡುವುದು ಹೇಗೆ ನಮಸ್ಕಾರ ಸ್ನೇಹಿತರೆ. ಏಂಜಲ್ ಒನ್ ಪೋಡ್ ಕ್ಯಾಸ್ಟ್ಗೆ ನಿಮಗೆ ಸ್ವಾಗತ. ಈ ಪೋಡ್ ಕ್ಯಾಸ್ಟ್ ನಲ್ಲಿ ಸೊವೆರೈನ್ (sovereign) ಗೋಲ್ಡ್ ಬಾಂಡ್ಸ್ ಮೇಲೆ ಇನ್ವೆಸ್ಟ್ ಮಾಡೋದು ಹೇಗೆ . ಏಂಜಲ್ ಒನ್ ನ ಕಾನ್ವೆನಿಯೆಂಟ್(convenient ) ವೆಬ್ ಸೈಟ್ ಮತ್ತುಇನ್ ಟ್ಯೂಟಿವ್ (intuitive ) ಅಪ್ಲಿಕೇಶನ್ ಮೂಲಕ ಸೊವೆರೈನ್ (sovereign) ಗೋಲ್ಡ್ ಬಾಂಡ್ಸ್ ಅನ್ನ ಹೇಗೆ ಖರೀದಿಸ ಬಹುದು ಅನ್ನೋದನ್ನ ನಾವ್ ಈಗ ನೋಡೋಣ. ಈ ಪೋಡ್ ಕ್ಯಾಸ್ಟ್ನಲ್ಲಿ 3 ಪಾರ್ಟ್ ಇದೆ . ಪಾರ್ಟ್ 1 ರಲ್ಲಿ ನಾವು ಸೊವೆರೈನ್ (sovereign) ಗೋಲ್ಡ್ ಬಾಂಡ್ಸ್ ನ ಜೆನರಲ್ ಇಂಟ್ರೊಡಕ್ಷನ್ ಅನ್ನ ನೀಡ್ತೀವಿ. ಪಾರ್ಟ್ 2 ರಲ್ಲಿ ನಾವು ಸೊವೆರೈನ್ (sovereign) ಗೋಲ್ಡ್ ಬಾಂಡ್ಸ್ ನ ಟೆಕ್ನಿಕಲ್ ಡೀಟೇಲ್ಸ್ ನ ಕುರಿತಾಗಿ ಚರ್ಚೆ ಮಾಡೋಣ . ಮತ್ತು ಪಾರ್ಟ್ 3 ರಲ್ಲಿ ಏಂಜಲ್ ಒನ್ ನ ಅಪ್ಲಿಕೇಶನ್ ಮತ್ತು ವೆಬ್ ಸೈಟ್ ಮೂಲಕ ಸೊವೆರೈನ್ (sovereign) ಗೋಲ್ಡ್ ಬಾಂಡ್ಸ್ ನ ಮೇಲೆ ಹೇಗೆ ಇನ್ವೆಸ್ಟ್ ಮಾಡ್ ಬಹುದು ಅಂತ ನೋಡ್ತಿವಿ. ಹಾಗಾದ್ರೆ ಬನ್ನಿ ಶುರು ಮಾಡೋಣ! ಪಾರ್ಟ್ 1 ಸೊವೆರೈನ್ ಗೋಲ್ಡ್ ಬಾಂಡ್ಸ್ ಅಂದ್ರೇನು ? ಸೊವೆರೈನ್ (sovereign) ಗೋಲ್ಡ್ ಬಾಂಡ್ಸ್ ಸರ್ಕಾರ ನೀಡುವ ಸೆಕ್ಯೂರಿಟಿಗಳಾಗಿದೆ , ಜನರು ಮಾಡರೇಟ್ ವೆಲ್ತ್ ಕ್ರಿಯೇಷನ್ ಗೆ ಇಲ್ಲಿ ಹೂಡಿಕೆ ಮಾಡಬಹುದು. ಮತ್ತು ಅದು ಕೂಡ ತಮ್ಮ ವಿಶ್ವಾಸಾರ್ಹ ಸಂಪತ್ತಿನ ರಕ್ಷಣೆಗಾಗಿ. ಗೋಲ್ಡ್ ಬಾಂಡ್ ಅನ್ನ ಆರ್.ಬಿ.ಐ ಇಶ್ಯೂ ಮಾಡುತ್ತೆ ಮತ್ತು ಇದು ಫಿಸಿಕಲ್ ಗೋಲ್ಡ್ ನ ರಿಪ್ಲೇಸೆಮೆಂಟ್ (replacement ) ಆಗಿದೆ . ಫಿಸಿಕಲ್ ಗೋಲ್ಡ್ ಅನ್ನ ಖರೀದಿ ಮಾಡ್ಬೇಕಾದ್ರೆ ಪ್ಯೂರಿಟಿ ಚೆಕ್ ಮಾಡ್ಬೇಕಾಗುತ್ತೆ , ಮತ್ತು ಫಿಸಿಕಲ್ ಗೋಲ್ಡ್ ಅನ್ನ ಸ್ಟೋರ್ ಮಾಡೋದಕ್ಕೆ ಹಣ ಮತ್ತು ಎನರ್ಜಿ ಎರಡು ಬೇಕಾಗುತ್ತೆ. ಫಿಸಿಕಲ್ ಗೋಲ್ಡ್ ಅನ್ನ ರಕ್ಷಣೆ ಮಾಡೋದು ಕೂಡ ತುಂಬಾ ಮುಖ್ಯ. ಸೊವೆರೈನ್ (sovereign) ಗೋಲ್ಡ್ ಬಾಂಡ್ಸ್ ಅಲ್ಲಿ ಇದೆಲ್ಲ ಕಷ್ಟಗಳು ಇರೋದಿಲ್ಲ. ಸೊವೆರೈನ್ (sovereign) ಗೋಲ್ಡ್ ಬಾಂಡ್ಸ್ ನ ಮೌಲ್ಯವು ಫಿಸಿಕಲ್ ಗೋಲ್ಡ್ ನ ಮೌಲ್ಯದ ಜೊತೆ ಹೊಂದಿಕೊಂಡಿರುತ್ತೆ. ಹಾಗಾಗಿ ಫಿಸಿಕಲ್ ಗೋಲ್ಡ್ ನ ಮೌಲ್ಯ ಹೆಚ್ಚಾದಾಗೆಲ್ಲ ಸೊವೆರೈನ್ (sovereign) ಗೋಲ್ಡ್ ಬಾಂಡ್ಸ್ ಮೌಲ್ಯ ಕೂಡ ಹೆಚ್ಚಾಗುತ್ತೆ . ಇದರ ಮೇಲೆ, ಫಿಸಿಕಲ್ ಗೋಲ್ಡ್ ಮೇಲೆ ಹೂಡಿಕೆ ಮಾಡುವುದರಿಂದ ನಿಮಗೆ ಬಡ್ಡಿ ಗಳಿಸಲು ಸಾಧ್ಯ ಆಗೋದಿಲ್ಲ . ಆದ್ರೆ ಸೊವೆರೈನ್ (sovereign) ಗೋಲ್ಡ್ ಬಾಂಡ್‌ಗಳಲ್ಲಿ ಹೂಡಿಕೆ ಮಾಡುವುದರಿಂದ ನಿಮಗೆ 2.5% ಬಡ್ಡಿ ಸಿಗುತ್ತದೆ. ಹೀಗೆ ಬೇರೆ ಬೇರೆ ಅಂಶಗಳಲ್ಲಿ ನೋಡೋದಾದ್ರೆ ಸೊವೆರೈನ್ (sovereign) ಗೋಲ್ಡ್ ಬಾಂಡ್‌ಗಳಲ್ಲಿ ಹೂಡಿಕೆ ಮಾಡುವುದು ಫಿಸಿಕಲ್ ಗೋಲ್ಡ್ ಮೇಲೆ ಹೂಡಿಕೆ ಮಾಡುವುದಕ್ಕಿಂತ ಒಂದು ಉತ್ತಮ ಆಯ್ಕೆ ಎನ್ನಬಹುದು. ಈಗ ಬನ್ನಿ ಸೊವೆರೈನ್ (sovereign) ಗೋಲ್ಡ್ ಬಾಂಡ್‌ಗಳ ಕುರಿತಾದ 10 ಟೆಕ್ನಿಕಲ್ ಫ್ಯಾಕ್ಟ್ಸ್ಗಳನ್ನ (facts) ನೋಡೋಣ . ಪಾರ್ಟ್ 2: ನಂಬರ್ 1: ಸೊವೆರೈನ್ (sovereign) ಗೋಲ್ಡ್ ಬಾಂಡ್‌ಗಳನ್ನ offline ಮತ್ತು ಆನ್ಲೈನ್(online) ಎರಡು ವಿಧಾನಗಳಲ್ಲಿ ಖರೀದಿ ಮಾಡಬಹುದು . ನೀವು ಸೊವೆರೈನ್ (sovereign) ಗೋಲ್ಡ್ ಬಾಂಡ್‌ಗಳನ್ನ offline ಖರೀದಿ ಮಾಡೋದಾದ್ರೆ ಬ್ಯಾಂಕ್ ಗಳ ಶಾಖೆಗಳಲ್ಲಿ ಮತ್ತು ಪೋಸ್ಟ್ ಆಫೀಸ್ ಗಳಲ್ಲಿ ಖರೀದಿಸಬಹುದು. ಆದ್ರೆ ಸೊವೆರೈನ್ (sovereign) ಗೋಲ್ಡ್ ಬಾಂಡ್‌ ಗಳನ್ನ online ನಲ್ಲಿ ಖರೀದಿಸಿದ್ರೆ ನಿಮಗೆ ಪ್ರತಿ ಗ್ರಾಂ ಚಿನ್ನದ ಮೇಲೆ 50 ರೂಪಾಯಿಗಳ ಡಿಸ್ಕೌಂಟ್ ಸಿಗುತ್ತೆ. ನಂಬರ್ 2: ಸೊವೆರೈನ್ (sovereign) ಗೋಲ್ಡ್ ಬಾಂಡ್‌ ಅಲ್ಲಿ ಗ್ರಾಂ ಗಳ ಲೆಕ್ಕದಲ್ಲಿ ಇನ್ವೆಸ್ಟ್ ಮಾಡಬಹುದು . ನಂಬರ್ 3: ಸೊವೆರೈನ್ (sovereign) ಗೋಲ್ಡ್ ಬಾಂಡ್‌ಗಳಲ್ಲಿ ಮಿನಿಮಮ್ ಇನ್ವೆಸ್ಟ್ಮೆಂಟ್ 1 ಗ್ರಾಂ ಮತ್ತು ಮ್ಯಾಕ್ಸಿಮಮ್ 4kg. ಆದರೆ ಟ್ರಸ್ಟ್ ಗಳಿಗೆ 20kg ವೆರೆಗೆ ಸೊವೆರೈನ್ (sovereign) ಗೋಲ್ಡ್ ಬಾಂಡ್‌ ಮೇಲೆ ಇನ್ವೆಸ್ಟ್ ಮಾಡೋದಕ್ಕೆ ಅವಕಾಶ ಇದೆ. ನಂಬರ್ 4: ಸೊವೆರೈನ್ (sovereign) ಗೋಲ್ಡ್ ಬಾಂಡ್‌ ಮೇಲಿನ ಮ್ಯಾಕ್ಸಿಮಮ್ ಇನ್ವೆಸ್ಟ್ಮೆಂಟ್ ಲಿಮಿಟ್ ಅನ್ನ ಪ್ರತಿವರ್ಷಕ್ಕೊಮ್ಮೆ ನಿಗದಿ ಮಾಡಲಾಗುತ್ತದೆ. ಹಾಗಾಗಿ ಪ್ರತಿ ವರ್ಷ್, ಪ್ರತಿಯೊಬ್ಬರು 4kg ಯ ವೆರೆಗೆ ಸೊವೆರೈನ್ (sovereign) ಗೋಲ್ಡ್ ಬಾಂಡ್‌ ಮೇಲೆ ಇನ್ವೆಸ್ಟ್ ಮಾಡಬಹುದಾಗಿದೆ. ನಂಬರ್ 5: ಸೊವೆರೈನ್ (sovereign) ಗೋಲ್ಡ್ ಬಾಂಡ್‌ ಅನ್ನ ಲೋನ್ ಗಳಿಗೆ ಕೊಲ್ಯಾಟರಲ್(collateral ) ಆಗಿ ಬಳಸ ಬಹುದಾಗಿದೆ. ಆದ್ದರಿಂದ ಸೊವೆರೈನ್ (sovereign) ಗೋಲ್ಡ್ ಬಾಂಡ್‌ ಗಳು ಫಿಸಿಕಲ್ ಗೋಲ್ಡ್ ನ ಈ ವೈಶಿಷ್ಟ್ಯತೆಯನ್ನ ಕೂಡ ಅನುಸರಿಸುತ್ತದೆ. ಸೊವೆರೈನ್ (sovereign) ಗೋಲ್ಡ್ ಬಾಂಡ್‌ಗಳು ನಿಮ್ಮ ಸಂಪತ್ತನ್ನು ರಕ್ಷಿಸಲು ಮಾತ್ರವಲ್ಲ ನಿಮ್ಮ ಸಂಪತ್ತನ್ನ ಬೆಳೆಸಲು ಸಹಾಯ ಮಾಡುತ್ತದೆ, ಅಲ್ಲದೆ ಸಾಲಗಳನ್ನು ಪಡೆಯಲು ಸಹಾಯ ಮಾಡುವ ಮೂಲಕ ಮನೆ ನವೀಕರಣದಂತಹ ಇತರ ಕನಸುಗಳನ್ನು ಈಡೇರಿಸಲು ಸಹ ನಿಮಗೆ ಸಹಾಯ ಮಾಡುತ್ತದೆ. ನಂಬರ್ 6: ಸೊವೆರೈನ್ (sovereign) ಗೋಲ್ಡ್ ಬಾಂಡ್‌ ಗಳು ಲೋ ರಿಸ್ಕ್ ಅನ್ನ ಹೊಂದಿವೆ. ಯಾಕಂದ್ರೆ ಇದು ಭಾರತ ಸರ್ಕಾರದ ಮಾನ್ಯತೆ ಪಡೆದಿದೆ ಮತ್ತು ಆರ್.ಬಿ.ಐ ಇಶ್ಯೂ ಮಾಡುತ್ತದೆ ಅನ್ನೋದು ಇದಕ್ಕೆ ಕಾರಣ. ನಂಬರ್ 7 : ಸೊವೆರೈನ್ (sovereign) ಗೋಲ್ಡ್ ಬಾಂಡ್‌ ಗಳ ಮೇಲೆ ಟಿ.ಡಿ.ಎಸ್ ಮತ್ತು ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್ ಬೀಳುವುದಿಲ್ಲ. ನಂಬರ್ 8 : ಸೊವೆರೈನ್ (sovereign) ಗೋಲ್ಡ್ ಬಾಂಡ್‌ಗಳು 8 ವರ್ಷಳ ನಂತರ ಮೆಚೂರ್ ಆಗುತ್ತೆ ಮತ್ತು ಅಷ್ಟರಲ್ಲಿ ನೀವು ನಿಮ್ಮ ಬಾಂಡ್ ಅನ್ನ ರೀ-ಡೀಮ್ ಮಾಡಬಹುದು . ಆದ್ರೆ ನಿಮಗೆ ನಿಮ್ಮ ಬಾಂಡ್ ಅನ್ನ ಪ್ರಿ-ಮೆಚೂರ್ ಆಗಿ ರೀ-ಡೀಮ್ ಮಾಡ್ಬೇಕಾದ್ರೆ 5 ವರ್ಷಗಳ ನಂತರ ಮಾಡಬಹುದು. ನಂಬರ್ 9: ಯಾವುದೇ ಭಾರತೀಯ ನಾಗರೀಕ ಸೊವೆರೈನ್ (sovereign) ಗೋಲ್ಡ್ ಬಾಂಡ್‌ ಅನ್ನ ಖರೀದಿಸಿ ವಿದೇಶಗಳಿಗೆ ಶಿಫ್ಟ್ ಆದರು ಸಹ ಅವರು ಸೊವೆರೈನ್ (sovereign) ಗೋಲ್ಡ್ ಬಾಂಡ್‌ ನ ಓನರ್ ಆಗಿರ್ತಾರೆ. ಮೆಚುರಿಟಿ ಸಮಯದಲ್ಲಿ ಅವರಿಗೆ ಸೊವೆರೈನ್ (sovereign) ಗೋಲ್ಡ್ ಬಾಂಡ್‌ ನ ಬದಲಿಗೆ ಅವರಿಗೆ ಅವರ ಪ್ರಿನ್ಸಿಪಲ್ ಅಮೌಂಟ್, ಬಡ್ಡಿ, ಗೋಲ್ಡ್ ಅಪ್ಪ್ರೆಷಿಯೇಷನ್ ಕೂಡ ಸಿಗುತ್ತೆ. ನಂಬರ್ 10: ಸೊವೆರೈನ್ (sovereign) ಗೋಲ್ಡ್ ಬಾಂಡ್‌ ಅನ್ನ ಎಕ್ಸ್ಚೇಂಜ್( exchange) ಮಾಡಬಹುದು ಮತ್ತು ಸೊವೆರೈನ್ (sovereign) ಗೋಲ್ಡ್ ಬಾಂಡ್‌ ನ ಓನರ್ ಶಿಪ್ ಫ್ಯಾಮಿಲಿ ಮತ್ತು ಫ್ರೆಂಡ್ಸ್ ಗೆ ವರ್ಗಾಯಿಸಬಹುದು. ಇದಿಷ್ಟು ಸೊವೆರೈನ್ (sovereign) ಗೋಲ್ಡ್ ಬಾಂಡ್‌ ನ ಕುರಿತಾದ ಬಹು ಮುಖ್ಯವಾದ 10 ಟೆಕ್ನಿಕಲ್ ಫ್ಯಾಕ್ಟ್ಸ್ . ಈಗ ನೋಡೋಣ ಸೊವೆರೈನ್ (sovereign) ಗೋಲ್ಡ್ ಬಾಂಡ್‌ ಮೇಲೆ ಇನ್ವೆಸ್ಟ್ ಮಾಡೋದು ಹೇಗೆ ಅಂತ. ಈಗ ಪಾರ್ಟ್ 3 ಗೆ ಹೋಗೋಣ ! ಪಾರ್ಟ್ 3: ಬನ್ನಿ ಸ್ನೇಹಿತರೆ ಮೊದಲಿಗೆ ನಾವು ಏಂಜಲ್ ಒನ್ ಅಪ್ಲಿಕೇಶನ್ ಮೂಲಕ ಸೊವೆರೈನ್ (sovereign) ಗೋಲ್ಡ್ ಬಾಂಡ್‌ ನ ಮೇಲೆ ಇನ್ವೆಸ್ಟ್ ಮಾಡೋದು ಹೇಗೆ ಅಂತ ನೋಡೋಣ. ಸ್ಟೆಪ್ 1: ಅಪ್ಲಿಕೇಶನ್‌ಗೆ ಲಾಗಿನ್ ಮಾಡಿ. ​ಸ್ಟೆಪ್ 2: ಮೇಲಿನ ಎಡಭಾಗದಲ್ಲಿರುವ ಹ್ಯಾಂಬರ್ಗರ್ ಮೆನುವಿನ ಮೇಲೆ ಟ್ಯಾಪ್ ಮಾಡಿ. ​ಸ್ಟೆಪ್ 3: ಇನ್ವೆಸ್ಟ್ಮೆಂಟ್ opportunities ಮೇಲೆ ಟ್ಯಾಪ್ ಮಾಡಿ. ಸ್ಟೆಪ್ 4: ಸೊವೆರೈನ್ (sovereign) ಗೋಲ್ಡ್ ಬಾಂಡ್‌ಗಳನ್ನು ಟ್ಯಾಪ್ ಮಾಡಿ. ​ಹಂತ 5: ನೀವು ಹೂಡಿಕೆ ಮಾಡಲು ಬಯಸುವ ಸೊವೆರೈನ್ (sovereign) ಗೋಲ್ಡ್ ಬಾಂಡ್‌ಗಳ ಭಾಗವನ್ನು ಆಯ್ಕೆಮಾಡಿ. ​ಹಂತ 6: ಪಾವತಿಯನ್ನು ಸರಳವಾಗಿ ಪೂರ್ಣಗೊಳಿಸಿ ಮತ್ತು ಈಗ ನೀವು ಸೊವೆರೈನ್ (sovereign) ಗೋಲ್ಡ್ ಬಾಂಡ್‌ ಗಳ ಮಾಲೀಕರಾಗುತ್ತೀರಿ. ಈಗ ವೆಬ್ ಸೈಟ್ ಮುಖಾಂತರ ಸೊವೆರೈನ್ (sovereign) ಗೋಲ್ಡ್ ಬಾಂಡ್‌ಗಳ ಮೇಲೆ ಇನ್ವೆಸ್ಟ್ ಮಾಡೋದು ಹೇಗೆ ಅಂತ ನೋಡೋಣ . ಸ್ಟೆಪ್ 1: ವೆಬ್ ಸೈಟ್ ಗೆ ಲಾಗಿನ್ ಮಾಡಿ ಸ್ಟೆಪ್ 2 : ಮೋರ್ ಮೆನು ಮೇಲೆ ಕ್ಲಿಕ್ ಮಾಡಿ ಸ್ಟೆಪ್ 3: ಬಾಂಡ್ಸ್ ಮೇಲೆ ಟ್ಯಾಪ್ ಮಾಡಿ ​ಸ್ಟೆಪ್ 4: ಓಪನ್ ಇಶ್ಯೂ ಅಲ್ಲಿ , ಈ ಸಮಯದಲ್ಲಿ ಹೂಡಿಕೆಗೆ ಮುಕ್ತವಾಗಿರುವ ಸರ್ಕಾರಿ ಬಾಂಡ್‌ಗಳನ್ನು ನೀವು ನೋಡಬಹುದು. ಮುಂಬರುವ ಸಂಚಿಕೆ ವಿಭಾಗದಲ್ಲಿ ಮುಂಬರುವ ಸೊವೆರೈನ್ (sovereign) ಗೋಲ್ಡ್ ಬಾಂಡ್‌ ಗಳನ್ನು ಪರಿಶೀಲಿಸಿ ಮತ್ತು ಅದಕ್ಕೆ ಅನುಗುಣವಾಗಿ ಪ್ಲಾನ್ ಮಾಡಿ. ನೀವು ಬಾಂಡ್‌ಗಳನ್ನು ಖರೀದಿಸುವಾಗ ಸಬ್ ಸ್ಕ್ರಿಪ್ಟ್ಷನ್ ಡೇಟ್ ನ್ನ ಪರಿಶೀಲಿಸಿ; ಸ್ಟೆಪ್ 5: ನಿಮಗೆ ಬಾಂಡ್‌ಗಳನ್ನು ನೀಡುವಾಗ, ವಿತರಣಾ ದಿನಾಂಕವನ್ನು ಪರಿಶೀಲಿಸಿ; ಸಾಮಾನ್ಯವಾಗಿ ಸೊವೆರೈನ್ (sovereign) ಗೋಲ್ಡ್ ಬಾಂಡ್‌ ಗಳನ್ನು ಪ್ರತಿ ತಿಂಗಳು ನೀಡಲಾಗುತ್ತದೆ. ಆದ್ದರಿಂದ ನೀವು ಒಂದು ಸೈಕಲ್ ಅನ್ನ ಮಿಸ್ ಮಾಡಿಕೊಂಡ್ರೆ ಚಿಂತಿಸಬೇಡಿ ನೀವು ಅಪ್ ಕಮಿಂಗ್ ಸೈಕಲ್ ನಲ್ಲಿ ಹೂಡಿಕೆ ಮಾಡಬಹುದು. ಸೊವೆರೈನ್ (sovereign) ಗೋಲ್ಡ್ ಬಾಂಡ್‌ ಗಳಿಗೆ ಆರ್ಡರ್ ನೀಡಿದಾಗ, ನಿಮ್ಮ ಆರ್ಡರ್- ಆರ್ಡರ್ ಬುಕ್ ಅಲ್ಲಿ ಕಾಣಿಸುತ್ತದೆ. ಸರಿ ಸ್ನೇಹಿತರೆ, ಇಂದಿನ ಪೋಡ್ ಕ್ಯಾಸ್ಟ್ ಅನ್ನ ಇಲ್ಲಿಗೆ ಮುಗಿಸೋಣ. ಇವತ್ತು ನಾವು ಸೊವೆರೈನ್ (sovereign) ಗೋಲ್ಡ್ ಬಾಂಡ್‌ ಅಂದ್ರೆ ಏನು?, ಮತ್ತು ಅದರ ಕುರಿತಾದ 10 ಟೆಕ್ನಿಕಲ್ ಪಾಯಿಂಟ್ಸ್, ಮತ್ತು ಏಂಜಲ್ ಒನ್ ನ ವೆಬ್ ಸೈಟ್ ಮತ್ತು ಅಪ್ಲಿಕೇಶನ್ ಮುಖಾಂತರ ಸೊವೆರೈನ್ (sovereign) ಗೋಲ್ಡ್ ಬಾಂಡ್‌ ಮೇಲೆ ಹೇಗೆ ಇನ್ವೆಸ್ಟ್ ಮಾಡೋದು ಇದೆಲ್ಲವನ್ನ ತಿಳಿದುಕೊಂಡ್ವಿ. ನಿಮ್ಮ ಯಾವುದೇ ಫ್ಯಾಮಿಲಿ ಮೆಂಬರ್ ಅಥವಾ ಸ್ನೇಹಿತರು ವೆಲ್ತ್ ಪ್ರೊಟೆಕ್ಷನ್ ಮತ್ತು ವೆಲ್ತ್ ಕ್ರಿಯೇಷನ್ ಕುರಿತಾದ ಸೇಫ್ ಒಪ್ಶನ್ ಅನ್ನ ಹುಡುಕ್ತಾ ಇದ್ರೆ ಈ ಪೋಡ್ ಕ್ಯಾಸ್ಟ್ ಅನ್ನ ಫಾರ್ವರ್ಡ್ ಮಾಡಿ. ಜ್ಞಾನವನ್ನ ಹಂಚುವುದರಿಂದ ಕೂಡ ಜ್ಞಾನ ಹೆಚ್ಚಾಗುತ್ತದೆ. ಇಂತಹ ಅನೇಕ ಇಂಟೆರೆಸ್ಟಿಂಗ್ ವಿಷಯಗಳಿಗಾಗಿ,ನಮ್ಮ ಚಾನೆಲ್ ಅನ್ನ ಫಾಲೋ ಮಾಡಿ . ಸ್ನೇಹಿತರೆ ನಿಮ್ಮನ್ನ ನೀವು ಅಪ್ ಸ್ಕಿಲ್ ಮಾಡಿಕೊಳ್ಳುವುದಕ್ಕೆ ಕೊನೆ ಅನ್ನೋದಿಲ್ಲ, ಹಣಕಾಸಿನ ಜ್ಞಾನವು ನಿರಂತರವಾಗಿ ವಿಕಸನಗೊಳ್ಳುತ್ತದೆ ಮತ್ತು ಎಂದಿಗೂ ಕೊನೆಗೊಳ್ಳುವುದಿಲ್ಲ, ಆದ್ದರಿಂದ ಅಂತಹ ಹೆಚ್ಚಿನ ಮಾಹಿತಿಯುಕ್ತ ವಿಷಯಕ್ಕಾಗಿ ಟ್ಯೂನ್ ಮಾಡಿ! ನೆನಪಿರಲಿ - ನಿಮ್ಮ ಓನ್ ರಿಸರ್ಚ್ ಮಾಡೋದಕ್ಕೆ ಮರೀಬೇಡಿ. ಸರಿ ಹಾಗಾದ್ರೆ ಮತ್ತೆ ಸಿಗೋಣ . ಅಲ್ಲಿವರೆಗೆ ಗುಡ್ ಬೈ ಮತ್ತು ಹ್ಯಾಪಿ ಇನ್ವೆಸ್ಟಿಂಗ್. ​ ಸೆಕ್ಯುರಿಟೀಸ್ ಮಾರುಕಟ್ಟೆಯಲ್ಲಿನ ಹೂಡಿಕೆಗಳು ಮಾರುಕಟ್ಟೆಯ ಅಪಾಯಗಳಿಗೆ ಒಳಪಟ್ಟಿರುತ್ತವೆ. ಹೂಡಿಕೆ ಮಾಡುವ ಮೊದಲು ಎಲ್ಲಾ ಸಂಬಂಧಿತ ದಾಖಲೆಗಳನ್ನು ಎಚ್ಚರಿಕೆಯಿಂದ ಓದಿ.