How to invest in shares in 2021? | Kannada

Podcast Duration: 06:30

ನಮಸ್ಕಾರ ಸ್ನೇಹಿತರೆ! ​ಏಂಜಲ್ ಬ್ರೋಕಿಂಗ್ನ ಫೊಡ್ಕ್ಯಾಸ್ಟ್ಗೆ ನಿಮಗೆ ಸ್ವಾಗತ! ಸ್ನೇಹಿತರೆ COVID 19 ಈ ಜಾಗತಿಕ ಪಿಡುಗಿನ ಈ ಸಮಯದಲ್ಲಿ ಷೇರುಮಾರುಕಟ್ಟೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೀತಾ ಇವೆ. ​ಸಾಮಾನ್ಯವಾಗಿ ನಾನು ಎಲ್ಲಾದರೂ ಸ್ನೇಹಿತರೊಂದಿಗೆ ಚಹಾ ಕುಡಿಯಲು ಹೋದಾಗ ಅಥವಾ ಹೀಗೆ ಹೊರಗಡೆ ಸಿಕ್ಕಾಗ ಸಾಮಾನ್ಯವಾಗಿ ಷೇರು ಮಾರುಕಟ್ಟೆಯ ಬಗ್ಗೆ ಚರ್ಚೆ ಮಾಡ್ತಾ ಇರ್ತೇನೆ. ನಾನು ನಿನ್ನೆ ಅಕ್ಷಯ್ ಜೊತೆ ಫೇಸ್ ಟೈಮ್ ಅಲ್ಲಿ ಮಾತಾಡ್ತಾ ಇದ್ದೆ ಆಗ ಅವನು ಹೇಳ್ತಿದ್ದ ಈಗ ಷೇರು ಮಾರುಕಟ್ಟೆಯ ವಿಷಯಗಳನ್ನ ಸುದ್ದಿಗಳನ್ನ ಓದುತ್ತ ಓದುತ್ತ ನನಗು ಷೇರುಗಳ ಮೇಲೆ ಹೂಡಿಕೆ ಮಾಡುವ ಮನಸಾಗುತ್ತಿದೆ ಅಂತಾ. ಆಗ ನಾನು ಅಕ್ಷಯ್ ಗೆ ಹೇಳಿದೆ ಇದಂತೂ ಒಂದು ಒಳ್ಳೆಯ ನಿರ್ಧಾರ. ಆದರೆ ಅವನು ಇದುವರೆಗೂ ಇದನ್ನ ಯಾಕೆ ಮಾಡಿಲ್ಲ ? ಆಮೇಲೆ ನನಗೆ ಅನ್ನಿಸ್ತು ನಾವು ಯಾವಾಗ ಒಂದು ವಿಷಯದ ಬಗ್ಗೆ ಅತಿಯಾಗಿ ಚಿಂತಿಸುತ್ತೇವೋ ಅದನ್ನ ನಾವು ಮಾಡಲ್ಲ. ಈಗ ನೀವು ಈ ಪೋಡ್ ಕ್ಯಾಸ್ಟ್ ನ ಕೇಳ್ತಾ ಇದ್ದೀರಾ ಅಂದ್ರೆ ಈ ವರ್ಷ ಷೇರು ಮಾರುಕಟ್ಟೆಯಲ್ಲಿ ಹೇಗೆ ಹೂಡಿಕೆ ಮಾಡಬೇಕೆಂದು ನೀವು ತಿಳಿದುಕೊಳ್ಳಬೇಕೆಂದು ಬಯಸ್ತಾ ಇದ್ದೀರಾ ಅಂತಾ ನಾನು ಭಾವಿಸುತ್ತೇನೆ. ಮತ್ತು ನಾನು ಈಗ ನಿಮಗೆ ಅಭಿನಂದನೆ ಹೇಳೋದಕ್ಕೆ ಇಚ್ಚಿಸ್ತೇನೆ ! ಯಾಕೆ ಅಂತೀರಾ !? ಈ ವರ್ಷದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ನೀವು ಈಗಾಗಲೇ ಒಂದು ಹೆಜ್ಜೆ ಹತ್ತಿರದಲ್ಲಿದ್ದೀರಿ. ​ಏನನ್ನಾದರೂ ಮಾಡಲು ಮುಖ್ಯವಾದುದು ಮೊದಲಿಗೆ ಅದನ್ನು ಮಾಡಲು ಪ್ರಾರಂಭಿಸುವುದು. ಹಾಗಾದರೆ ನೀವು ಸಿದ್ಧ ಸ್ನೇಹಿತರೇ? ಯಾಕಂದ್ರೆ ನಾನು ಈ ಪೋಡ್ ಕ್ಯಾಸ್ಟ್ ನಲ್ಲಿ ಒಂದು ಮಹತ್ವದ ವಿಷಯವನ್ನ ಹೇಳೋದಕ್ಕೆ ಹೊರಟಿದ್ದೀನಿ . ಹೌದು ಅದೇ ವಿಷಯ ಯಾವುದನ್ನ ನಾನು ಅಕ್ಷಯ್ ಗೆ ಕಾಲ್ ನಲ್ಲಿ ಹೇಳಿದ್ದೀನೋ ಅದನ್ನೇ. ಅಕ್ಷಯ್ ಅವತ್ತು ನನ್ನ ಹತ್ರ ಕೇಳ್ತಾ ಇದ್ದ " ನಾನು ಹೇಗೆ ಇನ್ವೆಸ್ಟ್ಮೆಂಟ್ ಶುರು ಮಾಡಲಿ ಅಂತ." ನನಗೆ ಅನ್ನಿಸ್ತಾ ಇದೆ ನಿಮಗೂ ಕೇಳುವ ಕುತೂಹಲ ಇದೆ ಅಂತ . ಹಾಗಾದ್ರೆ ತಡ ಯಾಕೆ ! ಬನ್ನಿ ೨೦೨೧ ರಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಹೇಗೆ ಅಂತ ?. ಸ್ನೇಹಿತರೆ ನಿಮಗೆ ತಿಳಿದಿರೋ ಹಾಗೆ ಕೋವಿಡ್ ಈಗ ದೇಶದ ಪರಿಸ್ಥಿತಿಯನ್ನ ಬದಲಾಯಿಸಿದೆ ಕೇವಲ ಆರ್ಥಿಕತೆಯ ದೃಷ್ಟಿಯಿಂದ ಮಾತ್ರ ಅಲ್ಲ ಎಲ್ಲ ತರದಲ್ಲು ದೇಶದಲ್ಲಿ ಬಿಗುವಿನ ಪರಿಸ್ಥಿತಿ ಇದೆ. ಹಾಗೆ ಈಗಾಗಾಗ್ಲೇ ಹಲವು ರಾಜ್ಯಗಳಲ್ಲಿ ಲೊಕ್ಡೌನ್ ಕೂಡ ವಿಸ್ತರಿಸಲಾಗಿದೆ. ಈಗ ನೀವು ಗಮನದಲ್ಲಿ ಇಟ್ಟುಕೊಳ್ಳ ಬೇಕಾದ ಇನ್ನೊಂದು ಅಂಶ ಅಂದ್ರೆ ಹೂಡಿಕೆಯು ಕೂಡ ಸಂಪರ್ಕವಿಲ್ಲದೆ ಅಂದರೆ contactless ಎಲ್ಲಾ ವ್ಯವಹಾರಗಳು ಆನ್ಲೈನ್ ಮೂಲಕವೇ ಆಗಬೇಕು. ಹಾಗಾಗಿ ನಾವು ಇವತ್ತು ಮನೆಯಲ್ಲೇ ಕುಳಿತುಕೊಂಡು ಷೇರು ಮಾರುಕಟ್ಟೆಯಲ್ಲಿ ಆನ್ಲೈನ್ ಮೂಲಕ ಹೂಡಿಕೆ ಮಾಡೋದು ಹೇಗೆ ಅಂತ ನೋಡೋಣ. ಸ್ನೇಹಿತರೆ ಆನ್ಲೈನ್ ನಲ್ಲಿ ಷೇರುಗಳ ಮೇಲೆ ಹೂಡಿಕೆ ಮಾಡಲು ನಿಮಗ್ ಮೊದಲಿಗೆ ಬೇಕಾಗಿರೋದು ನಿಮಗೊಂದು ಡಿಮ್ಯಾಟ್ ಅಕೌಂಟ್. ಡಿಮ್ಯಾಟ್ ಅಕೌಂಟ್ ಹೆಸರು ಕೇಳಿದ ತಕ್ಷಣ ಪೋಡ್ ಕ್ಯಾಸ್ಟ್ ಕ್ಲೋಸ್ ಮಾಡ್ಬೇಡಿ !. ಯಾಕಂದ್ರೆ ಅಕ್ಷಯ್ ಗೆ ಈ ವಿಷಯ ಹೇಳಿದಾಗ ಅವನು ಕೂಡ ಡಿಮ್ಯಾಟ್ ಅಕೌಂಟ್ ಓಪನ್ ಮಾಡೋದಕ್ಕೂ ಮುನ್ನ ಷೇರು ಮಾರುಕಟ್ಟೆಯ ಟ್ರೇಡಿಂಗ್ ನ ಟೆಕ್ನಿಕ್ಸ್ ನ ತಿಳ್ಕೊಬೇಕು ಮತ್ತು ಬಹಳಷ್ಟು ಫಾರಂ ಗಳನ್ನ ಭರ್ತಿಮಾಡಬೇಕು ಅಂದುಕೊಂಡಿದ್ದ. ಆದರೆ ಇದಾವುದು ನಿಜ ಅಲ್ಲ. ಯಾಕಂದ್ರೆ ಈಗ ಡಿಮ್ಯಾಟ್ ಅಕೌಂಟ್ ಓಪನ್ ಮಾಡೋದು ನೀವು ಅಡುಗೆ ಮನೆಯಲ್ಲಿ ಕುಳಿತು ಕಾಫಿ ಕುಡಿದ್ ಸುಲಭ ಯಾಕಂದ್ರೆ ಡಿಮ್ಯಾಟ್ ಅಕೌಂಟ್ ಓಪನ್ ಮಾಡೋದಕ್ಕೆ ಕೇವಲ ಎರಡೇ ದಾಖಲೆಗಳು ಸಾಕು ಒಂದು ಪಾನ್ ಕಾರ್ಡ್ ಇನ್ನೊಂದು ನಿಮ್ಮ ಆದಾರ್ ಕಾರ್ಡ್ . ಈಗಿನ ದಿನಗಳಲ್ಲಿ ಎಲ್ಲರೂ ತಮ್ಮ ಈ ದಾಖಲೆಗಳನ್ನ ತಮ್ಮ ಮೊಬೈಲ್ ಫೋನ್ ನಲ್ಲೇ ಇಟ್ಟುಕೊಂಡಿರ್ತಾರೆ. ಮತ್ತು ಇದು ನಿಮ್ಮ ಡಿಜಿಟಲ್ ಜೀವನವನ್ನ ಸುಲಭಗೊಳಿಸಲು ಸಹಾಯ ಮಾಡುತ್ತದೆ. ಅಂದಹಾಗೆ ನಾವು ಡಿಮ್ಯಾಟ್ ಅಕೌಂಟ್ ಓಪನ್ ಮಾಡೋದರ ಬಗ್ಗೆ ಮಾತನಾಡ್ತಾ ಇದ್ವಿ.ಡಿಮ್ಯಾಟ್ ಖಾತೆಗೆ ಸೈನ್ ಅಪ್ ಮಾಡುವುದು ಹೊಸ ಇಮೇಲ್ ಖಾತೆಗೆ ಸೈನ್ ಅಪ್ ಮಾಡಿದಂತೆಯೇ. ಇದು ಸರಳವಾಗಿದೆ, ಇದು ಸಂಪೂರ್ಣವಾಗಿ ಡಿಜಿಟಲ್ ಆಗಿದೆ, ಮತ್ತು ಇದು ತುಂಬಾ ಸುಲಭ. ​ನನ್ನ ನಂಬಿ - ಒಮ್ಮೆ ನೀವು ಡಿಮ್ಯಾಟ್ ಅಕೌಂಟ್ ಅನ್ನ ಓಪನ್ ಮಾಡಿ ನೋಡಿ ನಂತರ ನೀವು ನಿಮ್ಮ ಸ್ನೇಹಿತರು ಹಾಗು ಮನೆಯವರ ಡಿಮ್ಯಾಟ್ ಅಕೌಂಟ್ ನ ಕುರಿತಾದ ಸಂದೇಹವನ್ನ ನಿವಾರಿಸುವಷ್ಟು ಪರಿಣಿತಿಯನ್ನ ಹೊಂದಿರ್ತೀರ. ಈಗ ನೀವು ನಿಮ್ಮ ಮೊದಲ ಹಂತವನ್ನ ಮಾಡಿ ಮುಗಿಸಿದ್ದೀರ. ಸೈನ್ ಅಪ್ ಆದ ಮೇಲೆ ಒಂದೆರಡು ದಿನಗಳಲ್ಲಿ ನಿಮ್ಮ ಡಿಮ್ಯಾಟ್ ಅಕೌಂಟ್ ಓಪನ್ ಆಗುತ್ತದೆ. ಹಾಗಾದ್ರೆ ನಿಮ್ಮ ಮುಂದಿನ ಸ್ಟೆಪ್ ಯಾವುದು ಇರಬಹುದು !? ನಿಮ್ಮ ಮುಂದಿನ ಸ್ಟೆಪ್ ಆನ್ಲೈನ್ ಅಲ್ಲಿ ಷೇರುಗಳನ್ನ ಖರೀದಿಸುವುದು.ಇದಕ್ಕಾಗಿ ನೀವು ನಿಮ್ಮ ಇಷ್ಟದ ಬ್ರೋಕರ್ ಹತ್ತಿರ ರಿಜಿಸ್ಟರ್ ಮಾಡಿಕೊಳ್ಳಬೇಕು. - ಮತ್ತು ನೀವು ಡಿಮ್ಯಾಟ್ ಖಾತೆಯನ್ನು ತೆರೆಯುವಾಗ, ನೀವು ಈಗಾಗಲೇ ಬ್ರೋಕರ್ ಮೂಲಕ ಸೈನ್ ಅಪ್ ಮಾಡಿರಬಹುದು. ಮತ್ತು ನೀವು ಆರಂಭದಲ್ಲಿ ಬಯಸಿದಲ್ಲಿ ಏಂಜಲ್ ಬ್ರೋಕಿಂಗ್ ಸಹ ನಿಮಗೆ ಕೆಲವೊಂದು ಪ್ರೊಪಿಸಿಷನ್ಸ್ ನೊಂದಿಗೆ ಡಿಮ್ಯಾಟ್ ಅಕೌಂಟ್ ಅನ್ನ ಕೂಡ ನೀಡುತ್ತದೆ. ಮತ್ತು ಏಂಜಲ್ ಬ್ರೋಕಿಂಗ್ ಷೇರುಗಳ ಡೆಲಿವರಿಗೆ ಯಾವುದೇ ಶುಲ್ಕವನ್ನ ವಿಧಿಸುವುದಿಲ್ಲ. ಮತ್ತು ಅದು ಅವರ ಜೀವಮಾನದ (lifetime) ಭರವಸೆಯಾಗಿದೆ. ಮತ್ತು ಏಂಜಲ್ ಬ್ರೋಕಿಂಗ್ ಪ್ರತಿ ಷೇರುಗಳ ವ್ಯವಹಾರದ ಮೇಲೆ ಕೇವಲ ೨೦ ರೂಪಾಯಿಗಳ ವ್ಯವಹಾರ ಶುಲ್ಕವನ್ನ ವಿಧಿಸುತ್ತದೆ. ಒಮ್ಮೆ ನೀವು ಬ್ರೋಕರ್‌ನೊಂದಿಗೆ ಖಾತೆಯನ್ನು ಸಿದ್ಧಪಡಿಸಿದ ನಂತರ , ಈಗ ನೀವು ಮಾಡಬೇಕಾಗಿರುವುದು ಆನ್‌ಲೈನ್‌ನಲ್ಲಿ ಅಥವಾ ನಿಮ್ಮ ಬ್ರೋಕರ್‌ನ ಅಪ್ಲಿಕೇಶನ್‌ ಮೂಲಕ ನಿಮ್ಮ ಖಾತೆಗೆ ಲಾಗ್ ಇನ್ ಆಗುವುದು. ಒಮ್ಮೆ ಲಾಗ್ ಇನ್ ಆದ ಮೇಲೆ ನೀವು Google ಮೂಲಕ ವಸ್ತುಗಳನ್ನು ಹುಡುಕುವಂತೆಯೇ ನೀವು ಷೇರು ಮಾರುಕಟ್ಟೆ ಚಿಹ್ನೆ ಅಥವಾ ಗುರುತಿನೊಂದಿಗೆ ಷೇರುಗಳನ್ನು ಹುಡುಕಲು ಸಾಧ್ಯವಾಗುತ್ತದೆ! ಮತ್ತು ಷೇರು ಮಾರುಕಟ್ಟೆಯ ಗುರುತುಗಳಂತೂ ನಿಮಗೆ ತಿಳಿದೇ ಇರುತ್ತದೆ. ಉದಾಹರಣೆಗೆ ಮಹಿಂದ್ರಾದ ಗುರುತು M & M ಆದರೆ ರಿಲಯನ್ಸ ಇಂಡಸ್ಟ್ರೀಸ್ ಯದ್ದು ರಿಲಯನ್ಸ. ಈಗ ನೀವು ಮಾಡಬೇಕಾಗಿರೋದು ನೀವು ಯಾವ ಕಂಪನಿಯ ಷೇರುಗಳನ್ನ ಖರೀದಿಸಬೇಕೆಂದು ನಿರ್ಧರಿಸುವುದು. ಒಮ್ಮೆ ನಿರ್ಧರಿಸಿ ಮೇಲೆ BUY ಎಂದು ಬರೆದಿರುವ ಬಟನ್ ಅನ್ನ ಒತ್ತುವುದರ ಮೂಲಕ ಷೇರುಗಳನ್ನ ಖರೀದಿಸಬಹುದು. ಈಗ ಸ್ಟಾಕ್ ಮಾರ್ಕೆಟ್ನಲ್ಲಿ ಷೇರುಗಳನ ಖರೀದಿಸಲು ಹಲವು ಮಾರ್ಗಗಳಿವೆ. ಒಂದು market buy order place ಮಾಡುವುದರ ಮುಖಾಂತರ ಇನ್ನೊಂದು limit order place ಮಾಡುವುದರ ಮುಖಾಂತರ. ನಿಮಗೆ ಇದರ ಕುರಿತಾಗಿ ಏನಾದ್ರು ಸಂದೇಹ ಇದ್ದಲ್ಲಿ ಅದರ ಕುರಿತಾಗಿ ಇರುವ ನಮ್ಮ ಇತರೆ ಪೋಡ್ ಕ್ಯಾಸ್ಟ್ ಅನ್ನ ಕೇಳಿ ಮತ್ತು ನಿಮಗೆ ವಿಶುಯಲ್ ಅಸಿಸ್ಟನ್ಸ ಬೇಕಾದಲ್ಲಿ ಇದರ ಕುರಿತಾದ ನಮ್ಮ ವಿಡಿಯೋಗಳು ಕ್ಷಣ ಮಾತ್ರದಲ್ಲಿ ನಿಮ್ಮ್ ಸಂದೇಹವನ್ನ ನಿವಾರಣೆ ಮಾಡುತ್ತವೆ. ಈಗ ಮುಂದಿನ ಸ್ಟೆಪ್ ಬಗ್ಗೆ ನೋಡೋಣ - ಈಗ ನಿಮ್ಮ ಆರ್ಡರ್ ನ್ನ ತೆಗೆದುಕೊಂಡು ಕೆಲವು ಸೆಕೆಂಡುಗಳಲ್ಲಿ ನಿಮ್ಮ ಷೇರುಗಳನ್ನು ನಿಮ್ಮ ಖಾತೆಗೆ ತಲುಪಿಸಲಾಗುತ್ತದೆ. ನೀವು ಅಮೆಜಾನ್ ನಲ್ಲಿ ವಸ್ತುಗಳನ್ನ ಖರೀದಿಸ್ತೀರಾ ಅಲ್ವಾ? ಇಲ್ಲಿ ನಿಮಗೆ ಷೇರುಗಳನ್ನ ಖರೀದಿಸಲು ಅಷ್ಟು ಸಮಯವೂ ಬೇಕಾಗಿಲ್ಲ ಅದಕ್ಕಿಂತಲೂ ಕಡಿಮೆ ಸಮಯ ತಗಲುತ್ತೆ. ನಾನು ಉತ್ಪ್ರೇಕ್ಷೆ ಮಾಡುತ್ತಿಲ್ಲ ಈಗ ನನ್ನನ್ನೇ ತೆಗೆದುಕೊಳ್ಳಿ , ನಾನು ಅದನ್ನು ಸದಾ ಮಾಡುತ್ತೇನೆ! ಇದನ್ನು ಕಲಿಯುವುದು ಇಂಟ್ರೆಸ್ಟಿಂಗ್ ಆಗಿತ್ತು , ಅಲ್ಲವೇ?. ಒಂದು ವಿಷಯವನ್ನ ಅಗತ್ಯವಾ ನೆನಪಲ್ಲಿಇಟ್ಟುಕೊಳ್ಳಿ- ನಿಮ್ಮಿಂದ ಅವಕಾಶವನ್ನು ಜಾರಿಕೊಳ್ಳಲು ಬಿಡಬೇಡಿ. ಮುಂದಿನ ದೊಡ್ಡ ಹೆಜ್ಜೆ ಇರಿಸಿ - ಅಂದರೆ, ಡಿಮ್ಯಾಟ್ ಖಾತೆಯನ್ನು ತೆರೆಯಲು. ಆದರೆ ಷೇರುಗಳನ್ನು ಖರೀದಿಸುವ ಮೊದಲು, ಸರಿಯಾದ ಕಾರ್ಯತಂತ್ರವನ್ನು ಹೊಂದಲು ಮರೆಯಬೇಡಿ!.. ಸರಿ ನಾನೀಗ ಕೆಲವು ಷೇರುಗಳನ್ನ ಖರೀದಿ ಮಾಡಲು ಹೋಗ್ತಿದೀನಿ. ಮುಂದಿನ ಪೋಡ್ ಕ್ಯಾಸ್ಟ್ ನಲ್ಲಿ ಇನ್ನಷ್ಟು ವಿಷಯಗಳನ್ನ ತಿಳಿಸ್ತೀನಿ ಅಲ್ಲಿವರೆಗೆ ಏಂಜಲ್ ಬ್ರೋಕಿಂಗ್ ನ ಕಡೆಯಿಂದ ಶುಭವಿದಾಯ. ಹ್ಯಾಪಿ ಇನ್ವೆಸ್ಟಿಂಗ್!. ಹೂಡಿಕೆಗೂ ಮುನ್ನ ಸಂಬಂಧ ಪಟ್ಟ ದಾಖಲೆಗಳನ್ನ ಸರಿಯಾಗಿ ಓದಿ . ಮಾರುಕಟ್ಟೆಯ ಅಪಾಯಗಳಿಂದ ಪಾರಾಗಿ.