How to choose Multibagger stocks in 2022 | Kannada

Podcast Duration: 06:57

ನಮಸ್ಕಾರ ಸ್ನೇಹಿತರೆ! ಏಂಜಲ್ ಬ್ರೋಕಿಂಗ್ ನ ಪೋಡ್ ಕ್ಯಾಸ್ಟ್ ಗೆ ಸ್ವಾಗತ. ಸ್ಟಾಕ್ ಮಾರ್ಕೆಟ್ನಲ್ಲಿ ರಾತ್ರೋ ರಾತ್ರಿ ಹಣ ಗಳಿಸಲು ಸಾಧ್ಯವಿಲ್ಲ - ಇದು ಸಾಮಾನ್ಯವಾಗಿ ಸ್ಟಾಕ್ ಮಾರ್ಕೆಟ್ನ ಬಗ್ಗೆ ಮಾತನಾಡುವಾಗ ಎಲ್ಲಅನುಭವಿ ಹೂಡಿಕೆದಾರರು ಹಾಗು ಹೊಸ ಹೂಡಿಕೆದಾರರು ಹೇಳುವ ಮಾತು. ಸ್ಟಾಕ್ ಮಾರ್ಕೆಟ್ ಅಲ್ಲಿ ಹಣ ಮಾಡೋದಕ್ಕೆ ತಾಳ್ಮೆ, ಕಠಿಣ ಪರಿಶ್ರಮ , ಹಾಗು ಒಂದೇತರನಾದ ಮನಸ್ಥಿತಿ ಬಹು ಮುಖ್ಯ. ಇದರ ಜೊತೆಗೆ ಕೆಲವೊಂದು ಸ್ಟಾಕ್ ಗಳು ಕೇವಲ ಕೆಲವೇ ವರ್ಷಗಳಲ್ಲಿ ನೂರಾರು ಪಾಯಿಂಟ್ ಗಳ ಏರಿಕೆ ಕಂಡಿರುತ್ತವೆ ಅಂತಃ ಸ್ಟಾಕ್ ಗಳ ಬಗ್ಗೆ ನೀವು ಸ್ಟಾಕ್ ಮಾರ್ಕೆಟ್ನ ಕುರಿತಾದ ಸುದ್ದಿಯನ್ನ ನೋಡುವಾಗ ವಿಶೇಷವಾಗಿ ಗಮನ ಹರಿಸಬೇಕು. ಅಂತಹ ಸ್ಟಾಕ್ ಗಳ ಬಗ್ಗೆ ಇನ್ನೊಂದು ದಿನ ನೋಡೋಣ - ಇವತ್ತು ಮಲ್ಟಿ ಬ್ಯಾಗ್ಗೆರ್(multibagger stocks!) ಸ್ಟಾಕ್ ಬಗ್ಗೆ ನೋಡೋಣ ! ಯಾಕಂದ್ರೆ ನಿನ್ನೆಯುಕೂಡ ನಾವು ಇದರ ಬಗ್ಗೆಯೇ ಮಾತಾಡ್ತಾ ಇದ್ವಿ. ನಿನ್ನೆ ನಾನು ನನ್ನ ಗೆಳೆಯ ನಿತಿನ್ ಮನೆ ಹತ್ರ ಹೋಗಿದ್ದೆ, ಆದ್ರೆ ಮನೆ ಒಳಗಡೆ ಹೋಗಿಲ್ಲ, ಕೋವಿಡ್ ಮತ್ತುಲೊಕ್ಡೌನ್ ಇರೋ ಸಮಯದಲ್ಲಿ ಇನ್ಫೆಕ್ಷನ್ ಆಗುವ ರಿಸ್ಕ್ ಜಾಸ್ತಿ ಇರುತ್ತಲ್ಲ ಅದಕ್ಕೆ ಹೊರಗಡೆಯೇ ನಿಂತು ಮಾತಾಡ್ತಾ ಇದ್ವಿ. ಮಾತಿನ ನಡುವೆ ನೀತಿನ್ ಈ ಮಲ್ಟಿ ಬ್ಯಾಗಾರ್ ಸ್ಟಾಕ್ ಬಗ್ಗೆ ಕೇಳಿದ . ಗೂಗಲ್ ಮಾಡಿ ನೋಡುವಷ್ಟು ಸಮಯ ಅವನಲ್ಲಿರಲಿಲ್ಲ ಹಾಗಾಗಿ ನನ್ನ ಬಳಿ ಕೇಳಿದ. ಮಾತಾಡ್ತಾ ಅಡ್ತ ಅದರ ಬಗ್ಗೆ ಬಹಳ ವಿಸ್ತಾರವಾಗಿ ವಿಷಯಗಳನ್ನ ಹಂಚಿಕೊಂಡ್ವಿ. ಮಾತಾಡ್ತಾ ಈಗ ನಮ್ಮ ಟಾಪಿಕ್ (topic) ಬೇರೆಲ್ಲೋ ಹೋಗ್ತಿದೆ ಅನ್ನಿಸ್ತಾ? ನಾವು Multibagger stocks ಬಗ್ಗೆ ಮಾತಾಡ್ತಾ ಇದ್ವಿ- Multibagger stocks ಅಂತ ಯಾವುದನ್ನ ಕರೀತಾರೆ? ಕೆಲವು ಸ್ಟಾಕ್ ಗಳ ರಿಟರ್ನ್ಸ್ ಹೂಡಿಕೆಗಿಂತಲು ಕೆಲವು ಪಟ್ಟು ಜಾಸ್ತಿ ಇರುತ್ತದೆ ಅಂತಹ ಸ್ಟಾಕ್ ಅನ್ನ Multibagger stocks ಅಂತ ಕರೀತಾರೆ. ನಿತಿನ್ ಗೆ ಇದು ಸುಲಭವಾಗಿ ಶ್ರೀಮಂತರಾಗಲು ಉತ್ತಮ ಉಪಾಯ ಅನ್ನಿಸ್ತು . ಈಗ ಅವನಿಗೆ ಈ ಸ್ಟಾಕ್ ಮೇಲೆ ಹೂಡಿಕೆ ಮಾಡುವುದು ಹೇಗೆ ಮತ್ತು ಅಂತಹ ಸ್ಟಾಕ್ ಅನ್ನ ಗುರುತಿಸುವುದು ಹೇಗೆ ಅನ್ನುವ ಪ್ರಶ್ನೆ ಕಾಡತೊಡಗಿತ್ತು ಈ ಪ್ರಶ್ನೆಯನ್ನ ನನ್ನಲ್ಲಿ ಕೇಳಿದ. ಮತ್ತು ನಾವು ಇಂದು ಮಾತನಾಡುತ್ತಿರುವುದು ಇದನ್ನೇ - 2021 ರಲ್ಲಿ ನೀವು ಮಲ್ಟಿಬ್ಯಾಗರ್ ಸ್ಟಾಕ್‌ಗಳನ್ನು ಹೇಗೆ ಆಯ್ಕೆ ಮಾಡಬಹುದು? ​ ಬನ್ನಿ ಹಾಗಾದ್ರೆ ಶುರು ಮಾಡೋಣ- ಸ್ನೇಹಿತರೇ, ಮಲ್ಟಿಬ್ಯಾಗರ್ ಸ್ಟಾಕ್‌ಗಳನ್ನು ತೆಗೆದುಕೊಳ್ಳುವಾಗ ಎದುರಾಗುವ ದೊಡ್ಡ ಸಮಸ್ಯೆ ಇದು, ಯಾವುದೇ ಸ್ಟಾಕ್ ಈಗಾಗಲೇ ನೂರಾರು ಪರ್ಸಂಟೇಜ್ ನಷ್ಟು ಆದಾಯವನ್ನ ರಿಟರ್ನ್ ಕೊಟ್ಟಿದ್ದರೆ ಮಾತ್ರ ಅಂತಹ ಸ್ಟಾಕ್ ಮಲ್ಟಿ ಬ್ಯಾಗಾರ್ ಸ್ಟಾಕ್ ಅಂತ ಕರೆಸಿಕೊಳ್ಳುತ್ತದೆ. ಆದರೆ ಅಲ್ಲಿವರೆಗೆ ಅವು ಉತ್ತಮ ಮಾರ್ಜಿನ್ ಅನ್ನ ಹೊಂದಿರುತ್ತವೆ. ಹಾಗಾಗಿ ಮಲ್ಟಿ ಬ್ಯಾಗಾರ್ ಸ್ಟಾಕ್ ಒಂದು retrospective term. ಉದಾಹರಣೆಗೆ : ನೀವು ಯಾವುದೇ ಒಂದು ಘಟನೆಯನ್ನ ಅದು ಅಪಘಾತ ಅಂದು ಗೊತ್ತಾಗುವವರೆಗೂ ಅಪಘಾತ ಎಂದು ಕರೆಯಲು ಸಾಧ್ಯವಿಲ್ಲ ಅಲ್ಲವೇ ಹಾಗೆ. ಇದನ್ನ ಕೇಳಿ ನಿರಾಶರಾಗಬೇಡಿ - ಯಾಕಂದ್ರೆ ಮಲ್ಟಿಬ್ಯಾಗರ್ ಸ್ಟಾಕ್‌ಗಳು ಅಪಘಾತಗಳಲ್ಲ - ಮತ್ತು ಒಬ್ಬ ವಿವೇಕಯುತ ಹೂಡಿಕೆದಾರ ಅವುಗಳನ್ನ ಗುರುತಿಸಬಲ್ಲ. ಹಾಗಾದ್ರೆ ೨೦೨೧ರಲ್ಲಿ multibagger stock ಮೇಲೆ ಹೂಡಿಕೆ ಮಾಡುವುದು ಹೇಗೆ ನೋಡೋಣ ಬನ್ನಿ - ಮೊದಲನೇ ರಹಸ್ಯ - ಹೆಚ್ಚಿನ ಲಾಭ ತರುವ ವ್ಯವಹಾರಗಳನ್ನ ನೋಡಿ. ಹೆಚ್ಚಾಗಿ ಎಲ್ಲ ಮಲ್ಟಿ ಬ್ಯಾಗಾರ್ ಸ್ಟಾಕುಗಳು ಯಾವ ಕಂಪನಿ ಬೇರೆಲ್ಲ ಕಂಪೆನಿಗಳಿಗಿಂತ ಹಾಗು ಕೈಗಾರಿಕೆಗಳಿಗಿಂತ ಹೆಚ್ಚಿನ ಲಾಭದಲ್ಲಿರುತ್ತದೋ ಅಂತಹ ಕಂಪನಿಗೆ ಸೇರಿರುತ್ತವೆ. ಉದಾಹರಣೆಗೆ:ಭಾರತದಲ್ಲಿ ಟೆಲಿಕಾಂ ಕಂಪನಿಗಳು ಅತಿ ಕಡಿಮೆ ಮಾರ್ಜಿನ್ ಅಲ್ಲಿ ನಡಿಯುತ್ತಿರುತ್ತವೆ. ಆದರೆ ಕೆಲವು ಪಾಲಿಮರ್ ಕೈಗಾರಿಕೆಗಳು, ತಂತ್ರಜ್ಞಾನ ವ್ಯವಹಾರಗಳು ಮತ್ತು ಇತ್ತೀಚೆಗೆ, ಕೆಲವು ಔಷಧಿಯ ವ್ಯವಹಾರಗಳು ಭಾರತದಲ್ಲಿ ಕೆಲವು ಹೆಚ್ಚಿನ ಲಾಭವನ್ನ ಹೊಂದಿದ ವ್ಯವಹಾರಗಳಾಗಿ ಹೊರಹೊಮ್ಮಿವೆ. ಎರಡನೆಯ ರಹಸ್ಯ - ವ್ಯವಹಾರವನ್ನು ಅರ್ಥಮಾಡಿಕೊಳ್ಳಿ ಮತ್ತು ಅದರ ಸ್ಪರ್ಧಾತ್ಮಕ ಲಾಭ ಎಲ್ಲಿಂದ ಬರುತ್ತದೆ ಎಂದು ತಿಳಿಯಿರಿ. ಸ್ನೇಹಿತರೆ ಈಗ ಯಾವುದೇ ಒಂದು ಕೈಗಾರಿಕೆ ಒಂದು ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದಾದಲ್ಲಿ ಅಂತಹ ಒಂದು ಅಥವಾ ಎರಡು ಕೈಗಾರಿಕೆಗಳು ಅಲ್ಲಿ ಕಾರ್ಯನಿರ್ವಹಿಸುತ್ತಿರುತ್ತವೆ. ಇಲ್ಲವಾದಲ್ಲಿ ಅಲ್ಲಿ ಸ್ಪರ್ಧೆಗೆ ಅವಕಾಶವೇ ಇರುವುದಿಲ್ಲ. ಒಂದು ಅಥವಾ ಎರಡು ಕಂಪನಿ ಇದ್ದಲ್ಲಿ ಮಾತ್ರ ಅವುಗಳ ನಡುವೆ ಸ್ಪರ್ಧೆ ಇರಲು ಸಾಧ್ಯ. ಸಾಮಾನ್ಯವಾಗಿ ಹೆಚ್ಚು ಹೆಚ್ಚು ಗ್ರಾಹಕರನ್ನು ಪಡೆಯಲು ಸ್ಪರ್ಧೆ, ಹೆಚ್ಚಿನ ಆದಾಯಕ್ಕಾಗಿ ಸ್ಪರ್ಧೆಯನ್ನ ಕಾಣಬಹುದು. ಮಲ್ಟಿಬ್ಯಾಗರ್ ಸ್ಟಾಕ್‌ಗಳ ಆಧಾರವಾಗಿರುವ ಬ್ಯುಸಿನೆಸ್‌ಗಳು ಸ್ಪರ್ಧಾತ್ಮಕ ಲಾಭದೊಂದಿಗೆ ಕಾರ್ಯನಿರ್ವಹಿಸುತ್ತವೆ. ಉದಾಹರಣೆಗೆ : ಒಂದು ಮ್ಯೂಚುಯಲ್ ಫಂಡ್ ಕಂಪನಿ ರಿಟೈನ್ ಬಸ್ಸಿನೆಸ್ಸ್ ಚೈನ್ ನ ಟ್ರಾಫಿಕ್ ನ ಸ್ಯಾಟಲೈಟ್ ಇಮೇಜ್ ಅನ್ನ ಬಳಸಿಕೊಂಡು ಅವರ ಸ್ಟಾಕ್ ನ ಬೆಲೆಯನ್ನ ಊಹೆ ಮಾಡಿತ್ತು . ತಂತ್ರಜ್ಞಾನದ ಹೊಸ ರೀತಿಯ ಬಳಕೆ ಇಲ್ಲಿ ಗಮನಾರ್ಹ ಮತ್ತು ಅದು ಇಲ್ಲಿ ಸ್ಪರ್ಧಾತ್ಮಕವಾಗಿ ಪ್ರಯೋಜನವಾಗಿದೆ. ಆದ್ದರಿಂದ ಯಾವುದೇ ವ್ಯವಹಾರ ಅದರ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ತಂತ್ರಜ್ಞಾನ, ನಿರ್ವಹಣೆ ಅಥವಾ ಸಂಪನ್ಮೂಲಗಳ ವಿಷಯದಲ್ಲಿ ಗಮನಾರ್ಹ ಲಾಭವನ್ನ ಹೊಂದಿರುವ ವ್ಯವಹಾರಗಳಿಗಾಗಿ ನೋಡಿ. ಮೂರನೆಯದಾಗಿ - senior management ಮತ್ತು promoter ಗಳನ್ನ ನೋಡಿ . ಸ್ನೇಹಿತರೇ, ಮಲ್ಟಿಬ್ಯಾಗರ್ ಸ್ಟಾಕ್‌ಗಳ ವ್ಯವಹಾರದ ಹಿಂದೆ ಪ್ರಭಾವಶಾಲಿ ವ್ಯಕ್ತಿಗಳು ಇರುತ್ತಾರೆ.ಈ ಕಂಪನಿಗಳು ಹೆಚ್ಚಿನ ಮಾರ್ಜಿನ್ ನಲ್ಲಿ ಕೆಲಸ ಮಾಡುವುದರಿಂದ, ಕಂಪನಿಯನ್ನು ಉತ್ತಮವಾಗಿ ನಡೆಸುವ ಸಾಮರ್ಥ್ಯವನ್ನು ಹೊಂದಿರುತ್ತವೆ ಮತ್ತು ಗಮನಾರ್ಹ ಸ್ಪರ್ಧಾತ್ಮಕ ಲಾಭವನ್ನು ಹೊಂದಿರುತ್ತವೆ. ಅವುಗಳ ಷೇರುಗಳು ಸಾಮಾನ್ಯವಾಗಿ ಪ್ರೊಮೋಟರ್ ಷೇರುದಾರರನ್ನು ಹೊಂದಿರುತ್ತವೆ. ಇದರೊಂದಿಗೆ ಸಮರ್ಥ ಮ್ಯಾನೇಜ್ಮೆಂಟ್ ಗೆ ಇನ್ನಷ್ಟು ಲಕ್ಷಣಗಳಿವೆ - ಅವೆಂದರೆ ಇಂಡಸ್ಟ್ರಿ ಕಾನೂನು ಮತ್ತು ನಿಯಮಗಳೊಂದಿಗೆ ಅವುಗಳ ಸಮಯೋಚಿತ ಅನುಸರಣೆ ಮತ್ತು ಕಟ್ಟುಪಾಡುಗಳ ನೆರವೇರಿಕೆ ಇವು ಕೂಡ ಮಹತ್ವದ್ದು . ನೆನಪಿಡಿ ಯಾವತ್ತೂ ಪ್ರಾಮಿಸಿಂಗ್ ರಿಟರ್ನ್ ಹೊಂದಿದ್ದರು ಗ್ರೇ ಮ್ಯಾನೇಜ್ಮೆಂಟ್ ಹೊಂದಿರುವ ಕಂಪನಿಯ ಷೇರುಗಳನ್ನ ಖರೀದಿಸಬೇಡಿ. ಕೊನೆಯದಾಗಿ- ನಾಲ್ಕನೆಯದು - ಹಣದ ಹರಿಯುವಿಕೆಯನ್ನ ಗಮನಿಸಿ. ಮಲ್ಟಿಬ್ಯಾಗರ್ ಸ್ಟಾಕ್‌ಗಳ ಷೇರ್ ರೇಶಿಯೋ ಹೆಚ್ಚಾಗಿರುತ್ತದೆ - ಇದಕ್ಕೆ ಕಾರಣ - ಅಂತಹ ವ್ಯವಹಾರಗಳು ಸಾಮಾನ್ಯವಾಗಿ ತಮ್ಮ ಗಳಿಕೆಯ ಗಮನಾರ್ಹ ಭಾಗವನ್ನು ಉಪಯೋಗಿಸದೆ ವ್ಯವಹಾರವನ್ನ ವಿಸ್ತರಿಸಲು ಅನುವು ಮಾಡಿಕೊಡುವ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಉದಾಹರಣೆಗೆ : ಇಮ್ಯಾಜಿನ್ ಒಂದು ಕಂಪನಿಯ ಹೆಚ್ಚಿನ ವೆಚ್ಚ operational expenditures ಆಗಿದ್ದು capital expenditures ಕಡಿಮೆ ಆಗಿದ್ದಲ್ಲಿ ಅಂತಹ ಕಂಪೆನಿಯನ್ನ ವಿಸ್ತರಿಸಲು ಕಡಿಮೆ ಬಂಡವಾಳ ಸಾಕಾಗುತ್ತದೆ . ಮತ್ತು ಆದಾಯವು ತುಲನಾತ್ಮಕವಾಗಿ ಮತ್ತು ಸಂಭಾವ್ಯವಾಗಿ ದೊಡ್ಡದಾಗಿರುತ್ತದೆ. ಹಾಗಾದರೆ ಸ್ನೇಹಿತರೆ - ಇವಿಷ್ಟು 2021 ರಲ್ಲಿ ನೀವು ಮಲ್ಟಿಬ್ಯಾಗರ್ ಸ್ಟಾಕ್‌ಗಳನ್ನು ಗುರುತಿಸುವ ಕೆಲವು ವಿಧಾನಗಳು .ಇಂತಹ ಯಾವುದೇ ಷೇರುಗಳ ಬಗ್ಗೆ ನಿಮಗೆ ತಿಳಿದಿದೆಯೇ, ಅವು ಈ ಗುಣಲಕ್ಷಣಗಳನ್ನು ಹೊಂದಿದೆಯೇ? ಹಾಗಾದರೇ ಅವುಗಳನ್ನು ಹೊಸ ದೃಷ್ಟಿಕೋನದಿಂದ ಪುನಃ ನೋಡುವ ಸಮಯ ಇದಾಗಿದೆ! ನೆನಪಿರಲಿ - ಕೆಲವೊಮ್ಮೆ ಈ ಗುಣಲಕ್ಷಣಗಳನ್ನ ಹೊಂದಿರುವ ಎಲ್ಲಾ ವ್ಯವಹಾರಗಳ ಸ್ಟಾಕುಗಳು ಮಲ್ಟಿಬ್ಯಾಗರ್ ಸ್ಟಾಕ್‌ಗಳಾಗಿರುವುದಿಲ್ಲ. ಮಲ್ಟಿಬ್ಯಾಗರ್ ಸ್ಟಾಕ್‌ ಅನ್ನು ಗುರುತಿಸಲು ನಿಮಗೆ ಕೆಲವು ಉದ್ಯಮದ ಅನುಭವ ಮತ್ತು ಕೆಲವು ಘನ ಮೂಲಭೂತ ವಿಶ್ಲೇಷಣಾ ಕೌಶಲ್ಯಗಳು ಅಂದರೆ (solid fundamental analysis skills )ಬೇಕಾಗಬಹುದು. ಈಗ ಹೇಳಿ ನಿಮಗೆ ಈ ಪೋಡ್ ಕ್ಯಾಸ್ಟ್ ಇಷ್ಟ ಆಗಿದ್ಯಾ ? ಹಾಗಾದ್ರೆ ಸ್ಟಾಕ್ ಮಾರ್ಕೆಟ್ನ ಕುರಿತಾದ ನಮ್ಮ ಇತರೆ ಪೋಡ್ ಕ್ಯಾಸ್ಟ್ ಅನ್ನ ನೀವು ಖಂಡಿತ ಇಷ್ಟ ಪಡ್ತೀರ. ಮತ್ತು ಅವುಗಳು ನಿಮಗೆ ಸ್ಟಾಕ್ ಮಾರ್ಕೆಟ್ ಅಲ್ಲಿ ಹೂಡಿಕೆ ಮಾಡುವ ಸರಿಯಾದ ಮಾರ್ಗ ಹಾಗು ಸಮಯದ ಬಗ್ಗೆ ತಿಳಿಸುತ್ತವೆ. ನಿಮಗೆ ಇದರ ಕುರಿತಾದ ಇನ್ನಷ್ಟು ಮಾಹಿತಿ ಬೇಕಾಗಿದ್ದಲ್ಲಿ ನಮ್ಮ ವೆಬ್ ಸೈಟ್ ಗೆ ಭೇಟಿ ನೀಡಿ . ನಮ್ಮ ವೆಬ್ ಸೈಟ್ ನ ವಿಳಾಸ www.angelone.in. ಮುಂದಿನ ಪಾಡ್‌ಕ್ಯಾಸ್ಟ್‌ನಲ್ಲಿ ನಿಮ್ಮನ್ನು ಮತ್ತೆ ಬರ್ತೀವಿ ! ಅಲ್ಲಿಯವರೆಗೆ, ಏಂಜಲ್ ಬ್ರೋಕಿಂಗ್ನ ಕಡೆಯಿಂದ ಶುಭ ವಿದಾಯ. ಮತ್ತು happy investing!. ಹೂಡಿಕೆ ಮಾಡುವ ಮೊದಲು ಎಲ್ಲಾ ಸಂಬಂಧಿತ ದಾಖಲೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಮಾರುಕಟ್ಟೆ ಅಪಾಯದಿಂದ ಪಾರಾಗಿ .