How are the IPOs of 2020 performing now? Find out here | Kannada

Podcast Duration: 7:30
2020 ರಲ್ಲಿ ಐಪಿಒಗಳು ಹೇಗ್ ಪರ್ಫಾರಂ ಮಾಡ್ತಾ ಇವೆ ? ವಾಯ್ಸ್ ಓವರ್ : ಹಲೋ ಸ್ನೇಹಿತರೆ ಏಂಜಲ್ ಒನ್ ನ ಇನ್ನೊಂದು ಎಕ್ಸಾಯ್ಟಿಂಗ್ ಪಾಡ್ಕ್ಯಾಸ್ಟ್ಗೆ ಸ್ವಾಗತ . ಸ್ನೇಹಿತರೆ ನಾವು ಇವತ್ತು 2020 ರ ಐಪಿಒ ಗಳ ಕುರಿತ ಚರ್ಚೆ ಮಾಡೋಣ . ಯಾವುದೇ ಹೊಸ ಐಪಿಒ ಮಾರ್ಕೆಟ್ಗೆ ಬರುವಾಗ ಅದರ ಕುರಿತಾಗಿ ಸಾಕಷ್ಟು ಚರ್ಚೆ ಆಗುತ್ತೆ. ಐಪಿಓ ಗಳ ಇಶ್ಯೂ ಪ್ರೈಸ್ ಏನಿರುತ್ತೆ ? ಈ ಐಪಿಒ ನಲ್ಲಿ ಇನ್ವೆಸ್ಟ್ ಮಾಡಬೇಕಾ ಬೇಡ್ವಾ ? ಬನ್ನಿ ಹಾಗಾದ್ರೆ 2020 ರಲ್ಲಿ ಯಾವ ಕಂಪನಿಯ ಐಪಿಒ ಆಗಿದೆ ಮತ್ತು ಅದರ ಈಗಿನ ಸ್ಥಿತಿ ಏನು ನೋಡೋಣ . ಇನ್ವೆಸ್ಟ್ ಮಾಡುವಾಗ ಲಾಂಗ್ ಟರ್ಮ್ ಗಾಗಿ ಮಾಡುವುದು ಅವಶ್ಯಕ. ಆದ್ದರಿಂದ ಕಳೆದ ವರ್ಷ ಯಾವ ಕಂಪನಿಯ ಐಪಿಒ ದೊಡ್ಡ ಹೆಡ್ಲೈನ್ ಮಾಡಿತ್ತೋ ಆ ಕಂಪನಿಗಳು ಹೇಗೆ ಪರ್ ಫಾರಂ ಮಾಡ್ತಿವೆ ಅಂತ ನೋಡೋದು ಈಗ ಮುಖ್ಯ - ಇಂದಿನ ಪಾಡ್ಕ್ಯಾಸ್ಟ್ನಲ್ಲಿ ನಾವು ಎಸ್‌ಬಿಐ ಕಾರ್ಡ್‌ಗಳು, ರೂಟ್ ಮೊಬೈಲ್, ಏಂಜಲ್ ಒನ್, ಹ್ಯಾಪ್ಪಿಎಸ್ಟ್ ಮೈಂಡ್ಸ್, ಮಜಾಗನ್ ಡಾಕ್ ಶಿಪ್ ಬಿಲ್ಡರ್ಸ್ , ಮತ್ತು ಇನ್ನು ಹಲವು ಕಂಪನಿಗಳ ಕುರಿತು ಚರ್ಚೆ ಮಾಡೋಣ . ಹಾಗಾದ್ರೆ ಬನ್ನಿ ಯಸ್.ಬಿ ಐ ಕಾರ್ಡ್ಸ್ ಇಂದ ಶುರು ಮಾಡೋಣ . ಯಸ್.ಬಿ ಐ ಕಾರ್ಡ್ಸ್ ಒಂದು ಪೇಮೆಂಟ್ ಸೊಲ್ಯೂಷನ್ ಪ್ರೊವೈಡರ್ . ಯಸ್.ಬಿ ಐ ಕಾರ್ಡ್ಸ್ 1998 ರಲ್ಲಿ ಶುರು ಆಗಿದ್ದು ಇದರ ಪೇರೆಂಟ್ ಆರ್ಗನೈಜೇಷನ್ ಯಸ್.ಬಿ ಐ . ಯಸ್.ಬಿ ಐ ಕಾರ್ಡ್ಸ್ ನ ಹೆಡ್ ಕ್ವಾರ್ಟ್ರ್ಸ್ ಗುರಂಗಾವ್ ನಲ್ಲಿದೆ ಮತ್ತು ಈ ಕಂಪನಿಯಲ್ಲಿ 3000ಕ್ಕೂ ಅಧಿಕ ಮಂದಿ ಕೆಲಸ ಮಾಡುತ್ತಿದ್ದಾರೆ . ಯಸ್.ಬಿ ಐ ಕಾರ್ಡ್ಸ್ ಒಂದು ದೊಡ್ಡ ಐಪಿಒ ಆಗಿತ್ತು ಮತ್ತು ಅದರ ಲಿಸ್ಟಿಂಗ್ 658 ರೂಪಾಯಿಗಳಾಗಿತ್ತು . ಆದರೆ ಅದರ ಐಪಿಒ ಕೊರೊನ ದ ಈ ಪ್ಯಾಂಡಮಿಕ್ ಸಮಯದಲ್ಲಿ ಆಗಿದ್ದರಿಂದ ಐಪಿಒ ಆದಮೇಲೆ ಶೇರ್ ಬಿದ್ದು ಹೋಗಿತ್ತು . ಲೊವೆಸ್ಟ್ ಪಾಯಿಂಟ್ ಯಸ್.ಬಿ ಐ ಕಾರ್ಡ್ಸ್ ಹಿಸ್ಟೋರಿಯಲ್ಲಿ 509 ರೂಪಾಯಿಗಳು . ಕಳೆದ ಒಂದು ವರ್ಷದಲ್ಲಿ ಕಂಪನಿಯಾ ಮಾರ್ಕೆಟ್ ವ್ಯಾಲ್ಯೂ ಹೆಚ್ಚಿದೆ - ನೀವು ಲೊವೆಸ್ಟ್ ಪಾಯಿಂಟ್ ಅಲ್ಲಿ ಶೇರ್ ಖರೀದಿಸಿದ್ದರೇ ಈಗ ನಿಮ್ಮ ಇನ್ವೆಸ್ಟ್ಮೆಂಟ್ ಡಬಲ್ ಆಗಿರುತ್ತೆ . ನಾವು ಈ ಪಾಡ್ಕ್ಯಾಸ್ಟ್ ಅನ್ನ ರೆಕಾರ್ಡ್ ಮಾಡುವಾಗ ಯಸ್.ಬಿ ಐ ಕಾರ್ಡ್ಸ್ ಶೇರ್ ಪ್ರೈಸ್ 933 ರೂಪಾಯಿಗಳು. ಇದು ಇದರ ಆಲ್ ಟೈಮ್ ಲೋ ಪ್ರೈಸ್ ನ ಡಬಲ್ ಪ್ರೈಸ್ ಆಗಿದೆ . ಬನ್ನಿ ರೂಟ್ ಮೊಬೈಲ್ ಐಪಿಒ ಆದ ನಂತರ ಕಂಪನಿಯ ಪರ್ಫಾರ್ಮೆನ್ಸ್ ನೋಡೋಣ - ರೂಟ್ ಮೊಬೈಲ್ ಒಂದು ಟೆಲಿಕಾ ಕಂಪನಿ ಮತ್ತು ಇದು ಒಂದು ಕ್ಲೌಡ್ ಪ್ಲಾಟ್ ಫಾರಂ ಕೂಡ ಹೌದು . ಇದು 2004 ರಲ್ಲಿ ಶುರುವಾಗಿತ್ತು. ಒಂದು ಕಾಲದಲ್ಲಿ ರೂಟ್ ಮೊಬೈಲ್ ಯು.ಕೆ ಯಲ್ಲಿ ಫಾಸ್ಟೆಸ್ಟ್ ಗ್ರೋಯಿಂಗ್ ಇಂಡಿಯನ್ ಕಂಪನಿ ಆಗಿತ್ತು. 2020 ರಲ್ಲಿ ರೂಟ್ ಮೊಬೈಲ್ ಫಾರ್ಚ್ಯೂನ್ 500 ರ ಕ್ಯಾಟಗರೀ ಯಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ಸಫಲವಾಯಿತು. ರೂಟ್ ಮೊಬೈಲ್ ಗೆ ಬೆಸ್ಟ್ ಗವೆರ್ನ್ಡ್ ಕಂಪನಿ ಎಂಬ ಪುರಸ್ಕಾರ ಕೂಡ ಲಬಿಸಿದೇ. 2020 ರಲ್ಲಿ ರೂಟ್ ಮೊಬೈಲ್ ಐಪಿಒ ಆದಾಗ ಅದರ ಲಿಸ್ಟಿಂಗ್ ಪ್ರೈಸ್ 717 ರೂಪಾಯಿ ಆಗಿತ್ತು . ಈಗ ರೂಟ್ ಮೊಬೈಲ್ ನ ಶೇರ್ ಪ್ರೈಸ್ 1700 ರೂಪಾಯಿಗಿಂತಲೂ ಹೆಚ್ಚು . ಐಪಿಒ ದ ಸಮಯದಲ್ಲಿ ಯಾರು ರೂಟ್ ಮೊಬೈಲ್ ಅಲ್ಲಿ ಇನ್ವೆಸ್ಟ್ ಮಾಡಿದ್ದರೋ ಅವರು ಈಗ ಒಳ್ಳೆಯ ಗಳಿಕೆಯನ್ನ ಕೂಡ ಕಂಡಿರ ಬಹುದು . ಭಾರತದಲ್ಲಿ ಟೆಲಿಕಾಂ ಸೆಕ್ಟರ್ ಬಹಳ ವೇಗವಾಗಿ ಬೆಳೆಯುತ್ತಿದೆ ಮತ್ತು ರೂಟ್ ಮೊಬೈಲ್ ಈ ಸೆಕ್ಟರ್ ನ ಹೊಳೆಯುವ ನಕ್ಷತ್ರಗಳಲ್ಲಿ ಒಂದಾಗಿದೆ. 2020 ರಲ್ಲಿ ಹ್ಯಾಪ್ಪಿಎಸ್ಟ್ ಮೈಂಡ್ ಟೆಕ್ನಾಲಜಿ ನ ಐಪಿಒ ಕೂಡ ಆಗಿತ್ತು. -ಹ್ಯಾಪ್ಪಿಎಸ್ಟ್ ಮೈಂಡ್ ಒಂದು ಐ ಟಿ ಕಂಪನಿ ಆಗಿದೆ ಮತ್ತು ಅದರ ಹೆಡ್ ಕ್ವಾಟ್ರಸ್ ಬೆಂಗಳೂರಿನಲ್ಲಿದೆ. ಹ್ಯಾಪ್ಪಿಎಸ್ಟ್ ಮೈಂಡ್ ನ ಬ್ಯುಸಿನೆಸ್ ಯು.ಕೆ , ಯು.ಯಸ್.ಏ , ಆಸ್ಟ್ರೇಲಿಯಾ ದಿಂದ ಹಿಡಿದು ಮಿಡಲ್ ಈಸ್ಟ್ ಒರೆಗೂ ಹಬ್ಬಿಕೊಂಡಿದೆ . " ಬಾರ್ನ್ ಡಿಜಿಟಲ್ ಬಾರ್ನ್ ಅಗಿಲೆ" ಹ್ಯಾಪ್ಪಿಎಸ್ಟ್ ಮೈಂಡ್ ನ ಸ್ಲೋಗನ್ ಆಗಿದೆ . ಹ್ಯಾಪ್ಪಿಎಸ್ಟ್ ಮೈಂಡ್ಸ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಬ್ಲಾಕ್ ಚೈನ್ , ಇಂಟರ್ನೆಟ್ ಆಫ್ ಥಿಂಗ್ಸ್ , ರೊಬೊಟಿಕ್ಸ್ ನಂತಹ ಟೆಕ್ನಾಲಾಜಿಯನ್ನ ಬಳಸಿಕೊಂಡು ಕಂಪನಿಗಳಿಗೆ ಮ್ಯಾನುಫ್ಯಾಕ್ಚರಿಂಗ್, ರಿಟೈಲ್, ಟ್ರಾನ್ಸ್ ಪೋರ್ಟ್, ಈ-ಕಾಮೆರ್ಸ್ , ಮತ್ತು ಆರ್ & ಡಿ ಯಂತ ವರ್ಟಿಕಲ್ ಅಲ್ಲಿ ಸಹಾಯ ಮಾಡುತ್ತೆ. ಹ್ಯಾಪ್ಪಿಎಸ್ಟ್ ಮೈಂಡ್ಸ್ ನ ಲಿಸ್ಟಿಂಗ್ ಪ್ರೈಸ್ 351 ರೂಪಾಯಿ ಇತ್ತು, ಈಗ ಹ್ಯಾಪ್ಪಿಎಸ್ಟ್ ಮೈಂಡ್ಸ್ ನ ಶೇರ್ ಪ್ರೈಸ್ 910 ರೂಪಾಯಿಗಳು. ಇದು ಹ್ಯಾಪ್ಪಿಎಸ್ಟ್ ಮೈಂಡ್ಸ್ ನ ಆಲ್ ಟೈಮ್ ಹೈ ಪ್ರೈಸ್ 954 ರುಪಾಯಿಗೆ ತುಂಬಾ ಹತ್ತಿರದ ಬೆಲೆಯಾಗಿದೆ. ನಾವೀಗ ಐ.ಟಿ ಬೂಮ್ ನ ಮದ್ಯದಲ್ಲಿದ್ದೀವಿ , ಮತ್ತು ಕೋವಿಡ್ -19 ಈ ಸೆಕ್ಟರ್ ಗೆ ಆಡಿಷನಲ್ ಬೂಸ್ಟ್ ನೀಡಿದೆ. ನೀವು ಐ.ಟಿ ಸೆಕ್ಟರ್ ಅಲ್ಲಿ ಇನ್ವೆಸ್ಟ್ ಮಾಡಲು ಬಯಸ್ತಾ ಇದ್ರೆ ಹಾಪಿಪಿಎಸ್ಟ್ ಮೈಂಡ್ಸ್ ಒಂದು ಉತ್ತಮ ಆಯ್ಕೆ . "ದಿ ಮೈಂಡ್ ಫುಲ್ ಐ.ಟಿ ಕಂಪನಿ " ಇದರ ಮೊಟೊ ಆಗಿದೆ ಮತ್ತು ಇದು ಚಿಂತನಶೀಲ ಮತ್ತು ತಾರ್ಕಿಕ ರೀತಿಯಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಹೆಸರುವಾಸಿಯಾಗಿದೆ. 2020 ರಲ್ಲಿ ಮಝಗೊನ್ ಡಾಕ್ ಶಿಪ್ ಬಿಲ್ದರ್ ದು ಕೂಡ ಐಪಿಒ ಆಗಿತ್ತು. ಇದು 1934 ರಲ್ಲಿ ಶುರುವಾಗಿತ್ತು ಮತ್ತು ಇದು ಇಂಡಿಯನ್ ನೇವಿ ಗೆ ವಾರ್ ಶಿಪ್ ಮತ್ತು ಸಬ್ ಮೆರೈನ್ ಅನ್ನು ಮಾಡುತ್ತದೆ. ಇದರಲ್ಲಿ 8000ಕ್ಕೂ ಅಧಿಕ ಮಂದಿ ಕೆಲಸ ಮಾಡುತ್ತಾರೆ ಮತ್ತು ಇದ್ರ ಟರ್ನ್ ಓವರ್ 5000 ಕೋಟಿಗಿಂತಲೂ ಅಧಿಕವಾಗಿದೆ. ಲಿಸ್ಟಿಂಗ್ ಮಾಡುವಾಗ ಕಂಪೆನಿಯ ಪ್ರೈಸ್ 168 ರೂಪಾಯಿ ಇತ್ತು. ಇವತ್ತು ಕಂಪನಿಯ ಶೇರ್ ನ ಮೊತ್ತ 255 ರೂಪಾಯಿಗಳು. ಮಝಗೊನ್ ಡಾಕ್ ಶಿಪ್ ಬಿಲ್ದರ್ ಇದೊಂದು ಪಬ್ಲಿಕ್ ಸೆಕ್ಟರ್ ಕಂಪನಿ ಮತ್ತು ಇದರ ಹೆಡ್ ಕ್ವಾರ್ಟರ್ಸ್ ಮುಂಬೈ ಅಲ್ಲಿ ಇದೆ. ಈ ಕಂಪನಿಯ ಆಪರೇಷನ್ ಇನ್ಕಮ್, ನೆಟ್ ಇನ್ಕಮ್, ಮತ್ತು ಟೋಟಲ್ ಅಸೆಟ್ ಕಳೆದ ಹಲವು ವರ್ಷಗಳಿಂದ ಹೆಚ್ಚಾಗುತ್ತಿದೆ . ವಾರ್ ಶಿಪ್ ಮತ್ತು ಸಬ್ಮೆರೈನ್ ಗಳಲ್ಲದೆ ಈ ಕಂಪನಿ ಟ್ಯಾಂಕರ್, ಪ್ಲಾಟ್ಫಾರ್ಮ್ ಸಪ್ಲೈ ವೆಸ್ಸೆಲ್ ಗಳನ್ನ ಮತ್ತು ಪಾಟ್ರೊಲ್ ಬೋಟ್ ಗಳನ್ನ ಸಹ ನಿರ್ಮಿಸುತ್ತದೆ. ಡಿಫೆನ್ಸ್ ಮತ್ತು ಟ್ರಾನ್ ಸ್ಪೋರ್ಟ್ ಅಲ್ಲಿ ಆಕ್ಟಿವ್ ಆಗಿರುವ ಕಂಪನಿಯಲ್ಲಿ ಇನ್ವೆಸ್ಟ್ ಮಾಡೋದಕ್ಕೆ ನೀವು ಬಯಸಿದ್ದೆ ಆದರೆ ಮಝಗೊನ್ ಡಾಕ್ ಶಿಪ್ ಬಿಲ್ದರ್ ಒಂದು ಇಂಟೆರೆಸ್ಟಿಂಗ್ ಆಯ್ಕೆಯಾಗಿದೆ. 2020 ರಲ್ಲಿ ಬರ್ಗರ್ ಕಿಂಗ್ ಕೂಡ ಐಪಿಒ ಆಗಿತ್ತು . ಕೋವಿಡ್-19 ಕಾರಣದಿಂದಾಗಿ ಪಾಸ್ಟ್ ಫುಡ್ ಕಂಪನಿಗಳು ಒಂದು ಚಾಲೆಂಜ್ ಮತ್ತು ಒಂದು ಆಪೊರ್ಚುನಿಟಿ ಎರಡನ್ನು ಪಡೆದುಕೊಂಡಿವೆ. ಚಾಲೆಂಜ್ ಅಂದ್ರೆ ಲಾಕ್ ಡೌನ್ ಕಾರಣದಿಂದಾಗಿ ಫಾಸ್ಟ್ ಫುಡ್ ಔಟ್ಲೆಟ್ ಗಳು ಕ್ಲೋಸ್ ಆಗಿದ್ದು. ಆಪೊರ್ಚುನಿಟಿ ಅಂದ್ರೆ ಜನರು ಮನೆಯಿಂದಲೇ ಆರ್ಡರ್ ಮಾಡ್ತಾ ಇರೋದು ಈ ಅವಕಾಶವನ್ನ ಸರಿಯಾಗಿ ಬಳಸಿದರೆ ಇದೊಂದು ಒಳ್ಳೆಯ ಆಪರ್ಚುನಿಟಿ ಆಗೋದ್ರಲ್ಲಿ ಸಂಶಯವಿಲ್ಲ. ದೇಶದಲ್ಲಿ ಬರ್ಗರ್ ಕಿಂಗ್ ಒಂದು ದೊಡ್ಡ ಫಾಸ್ಟ್ ಫುಡ್ ಚೈನ್ ಮತ್ತು ಇದು ವೇಗವಾಗಿ ಬೆಳೆಯುತ್ತಿದೆ. ಬರ್ಗರ್ ಕಿಂಗ್ ನ ಭಾರತದ ಇಂದಿನ ಶೇರ್ ಪ್ರೈಸ್ 155 ರೂಪಾಯಿಗಳು. ಇದು ಸ್ಟಾಕ್ ಮಾರುಕಟ್ಟೆಯಲ್ಲಿ ಮೊದಲ ದಿನ ಬರ್ಗರ್ ಕಿಂಗ್ಸ್ ಮುಕ್ತಾಯದ ಬೆಲೆ 138 ರೂಪಾಯಿಗಿಂತ ಸ್ವಲ್ಪ ಪ್ರೀಮಿಯಂ ಆಗಿದೆ. 2020 ರಲ್ಲಿ ಏಂಜಲ್ ಒನ್ ನ ಐಪಿಒ ಕೂಡ ಆಗಿತ್ತು . ಏಂಜಲ್ ಒನ್ ನ ಲಿಸ್ಟಿನ್ ಪ್ರೈಸ್ 275 ರೂಪಾಯಿಗಳ ಹತ್ತಿರದಲ್ಲಿತ್ತು ಆದರೆ ಈಗ ಏಂಜಲ್ ಒನ್ ನ ಶೇರ್ ಪ್ರೈಸ್ 800 ರೂಪಾಯಿಗಿಂತ ಹೆಚ್ಚು. ಹೌದು ಲಿಸ್ಟಿಂಗ್ ನ ನಂತರ ಏಂಜಲ್ ಒನ್ ನ ಶೇರ್ ಪ್ರೈಸ್ 3 ಪಟ್ಟು ಹೆಚ್ಚಾಗಿದೆ ಭಾರತದಲ್ಲಿ ಸ್ಟಾಕ್ ಮಾರ್ಕೆಟ್ ಇನ್ವೆಸ್ಟ್ಮೆಂಟ್ ತುಂಬಾ ಕಡಿಮೆ ಪೆನೆಟ್ರೇಷನ್ ಹೊಂದಿದೆ ಇದನ್ನ ಫ಼ಿನ್ ಟೆಕ್ ಕಂಪನಿಗಳಾದ ಏಂಜಲ್ ಒನ್ ಕಂಪನಿಗಳು ಚೇಂಜ್ ಮಾಡ್ತಿವೆ. ಏಂಜಲ್ ಒನ್ ಸ್ಟಾಕ್ಸ್, ಕಮೊಡಿಟಿಸ್, ಮ್ಯೂಚುಯಲ್ ಫಂಡ್ಸ್ , ಬಾಂಡ್ಸ್, ಡೇರಿವೆಟಿವ್ಸ್ ಮತ್ತು ಇತರ ಫೈನಾನ್ಸಿಯಲ್ ಅಸೆಟ್ಸ್ ಮೇಲೆ ಇನ್ವೆಸ್ಟ್ಮೆಂಟ್ ಮಾಡೋದು ಬಹಳ ಸರಳವಾಗಿಸಿದೆ. ನಿಮಗೀಗ ಅರ್ಥವಾಗಿರಬೇಕಲ್ವಾ ಐಪಿಒ ಗಳು ಎಷ್ಟು ಎಕ್ಸಾಯಿಟಿಂಗ್ ಆಗಿರುತ್ತವೆ ಎಂದು. ಮುಂಬರುವ ಐಪಿಒಗಳ ಬಗ್ಗೆ ನೀವು ಹೇಗೆ ಮಾಹಿತಿ ಪ ಬಹುದು ಮತ್ತು ಅವುಗಳಲ್ಲಿ ಹೂಡಿಕೆ ಮಾಡುವ ವಿಧಾನಗಳನ್ನು ಹೇಗೆ ಕಲಿಯಬಹುದು ಎಂದು ನೀವು ಯೋಚಿಸುತ್ತಿದ್ದೀರಾ? ಚಿಂತಿಸಬೇಡಿ. ಅಂತಹ ಹೆಚ್ಚು ಆಸಕ್ತಿದಾಯಕ ವಿಷಯಕ್ಕಾಗಿ, ನಮ್ಮ ಚಾನಲ್ ಅನ್ನು ಫಾಲೋ ಮತ್ತು ಸಬ್ಸ್ಕ್ರೈಬ್ ಆಗಿ. ನಿಮ್ಮನ್ನ ನೀವು ಅಪ್ ಸ್ಕಿಲ್ ಮಾಡೋದಕ್ಕೆ ಕೊನೆ ಅನ್ನೋದಿಲ್ಲ. ಫೈನ್ಯಾಸಿಯಾಲ್ ನಾಲೆಜ್ ನಿರಂತರವಾಗಿ ವಿಕಸನಗೊಳ್ಳುತ್ತದೆ ಮತ್ತು ಎಂದಿಗೂ ಕೊನೆಗೊಳ್ಳುವುದಿಲ್ಲ, ಇಂತಹ ಉಪಯುಕ್ತ ಮಾಹಿತಿಗಳಿಗಾಗಿ ಸ್ಟೇ ಟ್ಯೂನ್ಡ್! ನೆನಪಿಡಿ ನಿಮ್ಮ ಸ್ವಂತ ರಿಸರ್ಚ್ ಮಾಡೋದಕ್ಕೆ ಮರೀಬೇಡಿ! ಸರಿ ಹಾಗಾದರೆ ಮತ್ತೆ ಸಿಗೋಣ ಅಂಟಿಲ್ ಥೇನ್ ಗುಡ್ಬೈ ಅಂಡ್ ಹ್ಯಾಪಿ ಇನ್ವೆಸ್ಟಿಂಗ್!. ಇನ್ವೆಸ್ಟ್ಮೆಂಟ್ಸ್ ಮತ್ತು ಸೆಕ್ಯುರಿಟೀಸ್ ಮಾರ್ಕೆಟ್ಸ್ ರಿಸ್ಕ್ ನಿಂದ ಕೂಡಿರುತ್ತದೆ . ಹಾಗಾಗಿ ಇನ್ವೆಸ್ಟ್ ಮಾಡುವುದಕ್ಕೂ ಮುನ್ನ ಸಂಬಂಧ ಪಟ್ಟ ದಾಖಲೆಯನ್ನ ಸರಿಯಾಗಿ ಓದಿ .