ಫಂಡಮೆಂಟಲ್ ಅನಾಲಿಸಿಸ್ ಆಫ್ ಸುಪ್ರಜಿತ್ ಇಂಜಿನಿಯರಿಂಗ್ ಲಿಮಿಟೆಡ್ ಹಲೋ ಸ್ನೇಹಿತರೆ, ಏಂಜಲ್ ಒನ್ ನ ಫಂಡಮೆಂಟಲ್ ಅನಾಲಿಸಿಸ್ ಸ್ಪೆಷಲ್ ಪೋಡ್ಕ್ಯಾಸ್ಟ್ ಗೆ ನಿಮಗೆ ಸ್ವಾಗತ. ಸ್ನೇಹಿತರೆ, ನಿಮಗೆ ತಿಳಿದಿರುವ ಹಾಗೆ ನಾವು ಏಂಜಲ್ ಬ್ರೋಕಿಂಗ್ ನಲ್ಲಿ ಒಂದು ಸೀರೀಸ್ ಅನ್ನ ನಡೆಸ್ತಾ ಇದೀವಿ ಮತ್ತು ಅಲ್ಲಿ ನಾವು ಕೆಲವೊಂದು ಇಂಪ್ರೆಸ್ಸಿವ್ ಸ್ಟಾಕ್ ಬಗ್ಗೆ ಮಾತಾಡ್ತ ಅದರ ಫಂಡಮೆಂಟಲ್ ಬಗ್ಗೆ ಸೂಕ್ಷ್ಮವಾಗಿ ಗಮನಿಸ್ತಾ ಇದೀವಿ. ಇವತ್ತಿನ ಪೋಡ್ಕ್ಯಾಸ್ಟ್ ಅಲ್ಲಿ ನಾವು ಒಂದು ಉತ್ತಮವಾದ ರಿಸೋರ್ಸ್ಫುಲ್ ಕಂಪನಿಯ ಕುರಿತಾಗಿ ನೋಡೋಣ ಅದು ತಾನು ಕಾರ್ಯನಿರ್ವಹಿಸುತ್ತಿರುವ ವಿಭಾಗದಲ್ಲಿ ತನ್ನದೇ ಒಂದು ಸ್ಥಾನವನ್ನು ನಿರ್ಮಾಣ ಮಾಡಿದೆ. ನಾವು ಸುಪ್ರಾಜಿತ್ ಎಂಜಿನಿಯರಿಂಗ್ ಲಿಮಿಟೆಡ್ ಬಗ್ಗೆ ಮಾತನಾಡುತ್ತಿದ್ದೇವೆ. ಈ ಕಂಪನಿಯು ಆಟೋಮೋಟಿವ್ ಕೇಬಲ್‌ಗಳು ಮತ್ತು ಹ್ಯಾಲೊಜೆನ್ ಬಲ್ಬ್‌ಗಳನ್ನು ತಯಾರಿಸುತ್ತಿದೆ. ನೀವು ಯಾವ ರೀತಿಯ ಆಟೋಮೋಟಿವ್ ಕೇಬಲ್‌ಗಳನ್ನು ಕೇಳಿದ್ದೀರಿ? ವೆಲ್, ಇಷ್ಟು ತಿಳಿದುಕೊಳ್ಳಿ ಈ ಕೇಬಲ್ ಇಲ್ಲದೆ ಮೋಟಾರ್ ಸೈಕಲ್ ಗಳಿಗೆ ಜೀವ ಇರೋದಿಲ್ಲ. ಬ್ರೇಕ್ ಕೇಬಲ್‌ಗಳು, ಕ್ಲಚ್ ಕೇಬಲ್‌ಗಳು, ಥ್ರೊಟಲ್ ಕೇಬಲ್‌ಗಳು, ಟ್ರಾನ್ಸ್ಮಿಷನ್ ಕೇಬಲ್‌ಗಳು, ಸ್ಟಾರ್ಟಿಂಗ್ ಕೇಬಲ್‌ಗಳು, ಗೇರ್ ಶಿಫ್ಟ್ ಕೇಬಲ್‌ಗಳು- ಈ ಎಲ್ಲಾ ಕೇಬಲ್ ಗಳನ್ನ ಈ ಕಂಪನಿ ಮ್ಯಾನುಫ್ಯಾಕ್ಟ್ರ್ ಮಾಡುತ್ತದೆ. ಇದರ ಜೊತೆಗೆ ಹ್ಯಾಲೊಜೆನ್ ಮತ್ತು ಆಕ್ಸಿಲರಿ ಲ್ಯಾಂಪ್ಗಳನ್ನ ಕೂಡ ತಯಾರು ಮಾಡುತ್ತದೆ. ಬೆಂಗಳೂರು ಮೂಲದ ಈ ಕಂಪನಿಯು ಸ್ಪೀಡೋಮೀಟರ್, ಟ್ಯಾಕೋಮೀಟರ್, ಫ್ಯುಯೆಲ್ ಗೆಜಸ್ ಮತ್ತು ವಿವಿಧ ಉಪಕರಣಗಳನ್ನು ಸಹ ತಯಾರಿಸುತ್ತದೆ. ಅವರ ಫೋರ್ ವೀಲರ್ ಆಟೋಮೋಟಿವ್ ಕ್ಲೈಂಟ್‌ಗಳಲ್ಲಿ ವೋಕ್ಸ್‌ವ್ಯಾಗನ್, ಬಿಎಂಡಬ್ಲ್ಯು, ಮಹೀಂದ್ರಾ, ಟಾಟಾ ಮೋಟಾರ್ಸ್, ಪಿಯಾಜಿಯೊ, ಮಾರುತಿ ಸುಜುಕಿ ಸೇರಿವೆ. ಅವರ ದ್ವಿಚಕ್ರ ವಾಹನ ಗ್ರಾಹಕರಲ್ಲಿ ಟಿವಿಎಸ್ ಮೋಟಾರ್ಸ್, ಹೀರೋ ಮೋಟಾರ್ಸ್, ಬಜಾಜ್ ಮೋಟಾರ್ಸ್, ಹೋಂಡಾ, ರಾಯಲ್ ಎನ್‌ಫೀಲ್ಡ್ ಮತ್ತು ಮಹೀಂದ್ರಾ 2-ವೀಲರ್ಸ್ ವಿಭಾಗ ಸೇರಿವೆ. ಜುಲೈ 13 ರ ಹೊತ್ತಿಗೆ ಸುಪ್ರಾಜಿತ್ ಎಂಜಿನಿಯರಿಂಗ್ 293 ರೂ. ಗೆ ಟ್ರೇಡ್ ಮಾಡ್ತಾ ಇತ್ತು. Q2FY21 ರಲ್ಲಿ ಎಸ್ ಸಿ ಎಲ್, ಒಳ್ಳೆಯ ಪರ್ಫಾರ್ಮೆನ್ಸ್ ಕೊಟ್ಟಿತ್ತು. ಆದಾಯ ವರ್ಷದಿಂದ ವರ್ಷಕ್ಕೆ 11% ನಂತೆ ಹೆಚ್ಚಾಗಿ 440 ಕೋಟಿಗಿಂತನೂ ಹೆಚ್ಚಾಗಿದೆ.ಇದರಲ್ಲಿ ಅತಿ ಹೆಚ್ಚಿನ ಕೊಡುಗೆ ಫೀನಿಕ್ಸ್ ಲೈಟಿಂಗ್ ಸೆಕ್ಟರ್ನದ್ದಾಗಿದೆ ಅದು ಸುಮಾರು 14% ರಷ್ಟು. ಎರಡನೆಯ ಪ್ರಬಲ ಕೊಡುಗೆ, ಆಟೋಮೋಟಿವ್ ಕೇಬಲ್ ವಿಭಾಗದ್ದಾಗಿದೆ. ಇದು ವರ್ಷದಿಂದ ವರ್ಷಕ್ಕೆ 12% ರಷ್ಟು ಹೆಚ್ಚಾಗಿದೆ. ಇಬಿಐಟಿಡಿಎ ಅಂದ್ರೆ ಅರ್ನಿಂಗ್ಸ್ ಬಿಫೋರ್ ಇಂಟ್ರೆಸ್ಟ್ , ಟ್ಯಾಕ್ಸ್, depreciation and amortization ಗು ಮುಂಚಿನ ಗಳಿಕೆಗಳು ವರ್ಷದಿಂದ ವರ್ಷಕ್ಕೆ 31% ರಷ್ಟು ಏರಿ 73.5 ಕೋಟಿ ರೂ. ಆಗಿದೆ. ಇದರೊಂದಿಗೆ ಕಂಪನಿಯು ಸಾಕಷ್ಟು ಕಾಸ್ಟ್(cost)-ಕಂಟ್ರೋಲ್ ಕ್ರಮಗಳನ್ನ ಕೈಗೊಂಡಿದ್ದು ಇದರಿಂದ ಎಕ್ಸ್ಪೋರ್ಟ್ ರೆವೆನ್ಯೂ ಕೂಡ ಹೆಚ್ಚಾಗಿರುವುದನ್ನ ಕಾಣಬಹುದಾಗಿದೆ. ಈಗ ಕಂಪನಿಯ ರೆವೆನ್ಯೂ ಬಗ್ಗೆ ಸ್ವಲ್ಪ ಆಳವಾಗಿ ನೋಡೋಣ. ಫಿಯೋನಿಕ್ಸ್ ಲೈಟಿಂಗ್ ನ ಆದಾಯವು ವರ್ಷದಿಂದ ವರ್ಷಕ್ಕೆ 14% ಏರಿಕೆ ಕಂಡು 92.2 ಕೋಟಿ ಆಗಿದೆ. ಜೊತೆ - ಜೊತೆಗೆ, ಈ ಕಂಪನಿಯ ಆಟೋಮೋಟಿವ್ ಅಲ್ಲದ ಕೇಬಲ್ ವಿಭಾಗದಲ್ಲಿ ಸಹ ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿ ಇದರ ಆದಾಯ 7% ರಷ್ಟು ಏರಿಕೆಯಾಗಿದೆ , ಅಂದರೆ 78.6 ಕೋಟಿ ರೂ.ಗಳಷ್ಟು. ಮ್ಯಾನೇಜ್ಮೆಂಟ್ ನ ಪ್ರಕಾರ ಮುಂದಿನ ದಿನಗಳಲ್ಲಿ ಭಾರತೀಯ ಮೂಲದ ಇಕ್ವಿಪ್ಮೆಂಟ್ ಮ್ಯಾನುಫ್ಯಾಕ್ಟ್ರ್ಸ್ ಗಳಿಂದ ಉತ್ತಮ ಬಿಸಿನೆಸ್ ಅನ್ನ ನಿರೀಕ್ಷಿಸಬಹುದಾಗಿದೆ .
ಆಟೊಮೇಟಿವ್ ಮತ್ತು ನಾನ್-ಆಟೋಮೋಟಿವ್ ಸೆಕ್ಟರ್ ನ ಗ್ರೋಥ್ ಪ್ರಾಸ್ಪೆಕ್ಟ್ಸ್ ಸ್ಟ್ರಾಂಗ್ ಆಗಿದೆ.
ಕಂಪನಿ ತನ್ನ ಕಾನ್ಕಾಲ್ ನಲ್ಲಿ ಮಾರುಕಟ್ಟೆ ಮತ್ತು ಎಕ್ಸ್ಪೋರ್ಟ್ ವಿಭಾಗಗಳ ಹೆಚ್ಚಿನ ಆದಾಯದಿಂದ ಮಾರ್ಜಿನ್ ಎಕ್ಸ್ಪ್ಯಾಂಡ್ ಆಗಿದೆ ಅಂತ ಹೇಳಿದೆ. ಹೆಚ್ಚುವರಿಯಾಗಿ, ಹಲವಾರು ಗ್ರೂಪ್ ಆಫ್ ಕಂಪನಿಗಳಲ್ಲಿ ಆಪೆರೇಷನಲ್ ಎಫಿಷಿಯನ್ಸಿಅಲ್ಲಿ ಸುಧಾರಣೆಯೂ ಕಂಡುಬಂದಿದೆ. ಆಫ್ಟರ್ ಮಾರ್ಕೆಟ್ ಅಂದ್ರೆ ಕಾರು ಅಥವಾ ಟೂ ವೀಲರ್ ಮಾರಾಟ ಮಾಡಿದ ನಂತರ ಅದರ ಬಿಡಿ ಭಾಗಗಳನ್ನ ಖರೀದಿಸುವ ಮಾರುಕಟ್ಟೆ. ಚೀನಾದಿಂದ ಬರುವ ಸರಕುಗಳ ಮೇಲೆ ಹೆಚ್ಚಿನ ಆಮದು ಸುಂಕವನ್ನ ವಿಧಿಸುವುದರಿಂದ ಆಫ್ಟರ್ ಮಾರ್ಕೆಟ್ ಆದಾಯವು ಹೆಚ್ಚಾಗಿದೆ ಎಂದು ಎಸ್‌ಇಎಲ್‌ನ ನಿರ್ವಹಣೆ ಹೇಳಿದೆ, ಭಾರತೀಯ ಮಾರುಕಟ್ಟೆಗಳಲ್ಲಿ ಲಾಜಿಸ್ಟಿಕ್ಸ್ ಅನ್ನು ಸುವ್ಯವಸ್ಥಿತಗೊಳಿಸುವುದಕ್ಕೆ ಮತ್ತು ಆನ್-ಆರ್ಗನೈಜ್ಡ್ ಪ್ಲೇಯರ್ಸ್ ನಿಂದ ಆರ್ಗನೈಜ್ಡ್ ಪ್ಲೇಯರ್ಸ್ಗೆ ವರ್ಕ್ ಆರ್ಡರ್ ಅನ್ನ ನೀಡಲು ಬಹಳಷ್ಟು ಕಂಪನಿಗಳು ಮುಂದಾಗುತ್ತಿವೆ. ಕಂಪನಿಯ ಪ್ರಕಾರ, ಮಾರ್ಜಿನ್ ಅಥವಾ ಆದಾಯ ಮತ್ತು ಖರ್ಚುಗಳ ನಡುವಿನ ವ್ಯತ್ಯಾಸವು 13-15% ನಷ್ಟು ಇದೆ ಎಂದು ನಿರೀಕ್ಷಿಸಲಾಗಿದೆ, ಇದು ಹೆಚ್ಚಾಗಿ ಬರುವ ವ್ಯವಹಾರದ ಪ್ರಮಾಣದಿಂದ ನಿರ್ಧರಿಸಲ್ಪಡುತ್ತದೆ. ಆದಾಗ್ಯೂ, ಕಂಪನಿಯು ಹೂಡಿಕೆದಾರರಿಗೆ ಎಚ್ಚರಿಕೆಯನ್ನ ಸಹ ನೀಡಿದೆ ಅದೇನೆಂದ್ರೆ ಮುಂದಿನ ದಿನಗಳಲ್ಲಿ ಕಮಾಡಿಟಿ ಪ್ರೈಸ್ ಜಾಸ್ತಿ ಅಗೋದ್ರಿಂದ ಮತ್ತು ಸೆಪ್ಟೆಂಬರ್ ನಿಂದ ಸ್ಯಾಲರಿ ಕಟ್ ರೋಲ್ ಬ್ಯಾಕ್ ಅಗೋದ್ರಿಂದ ಮಾರ್ಜಿನ್ ಕಮ್ಮಿ ಆಗುವ ಸಾಧ್ಯತೆ ಇದೆ ಅಂತಾನೂ ಹೇಳಿದೆ. ಅಂತರರಾಷ್ಟ್ರೀಯ ಗ್ರಾಹಕರಿಗೆ ಕಚ್ಚಾ ವಸ್ತುಗಳ ವೆಚ್ಚದಲ್ಲಿ ಯಾವುದೇ ಪಾಸ್-ಥ್ರೂ ಇರುವುದಿಲ್ಲ ಎಂದು ಕಂಪನಿ ಹೇಳಿದೆ ಆದರೆ ಭಾರತೀಯ ಒಇಎಂಗಳಿಗೆ, ಈ ಕಂಪನಿಗಳೊಂದಿಗಿನ ಮಾತುಕತೆಯ ಆಧಾರದ ಮೇಲೆ ಕಚ್ಚಾ ವಸ್ತುಗಳ ವೆಚ್ಚವನ್ನು ವಿದಿಸಲಾಗುತ್ತದೆ. ಎಕ್ಸ್ಪೋರ್ಟ್ ಪ್ರಮಾಣದಲ್ಲಿ ಹೆಚ್ಚಾಗಿರುವ ಕಾರಣದಿಂದ ಫೋರ್ ವೀಲರ್ನಿಂದ ಬರುವ ಆದಾಯ ಕೂಡ ಈ ಕ್ವಾರ್ಟರ್ ನಲ್ಲಿ ಹೆಚ್ಚಾಗಿದೆ. ಬನ್ನಿ ಈಗ ಕಂಪನಿಯ ಶೇರ್ ಹೋಲ್ಡಿಂಗ್ನ ಕುರಿತು ನೋಡೋಣ. ಮಾರ್ಚ್ 2021 ರಲ್ಲಿ ಪ್ರಮೋಟರ್ಸ್ ಶೇರ್ ಹೋಲ್ಡಿಂಗ್ ಚೇಂಜ್ ಆಗದೆ 44.57% ದಾಖಲಾಗಿದೆ. ಮತ್ತು ಅದೇ ಕ್ವಾರ್ಟರ್ಸ್ ಅಲ್ಲಿ ಎಫ್‌ಪಿಐಗಳು ಮತ್ತು ಎಫ್‌ಐಐಗಳು ಕಂಪನಿಯಲ್ಲಿ ಹೆಚ್ಚಿನ ಮಾನ್ಯತೆ ಪಡೆದಿವೆ ಮತ್ತು ಕಂಪನಿಯಲ್ಲಿ ತಮ್ಮ ಹೋಲ್ಡಿಂಗ್ ಅನ್ನ 3.45% ರಿಂದ 4.33% ಕ್ಕೆ ಹೆಚ್ಚಿಸಿವೆ. ಆದಾಗ್ಯೂ, ಅದೇ ಸಮಯದಲ್ಲಿ, ಅದೇ ತ್ರೈಮಾಸಿಕದಲ್ಲಿ ಒಟ್ಟು ಎಫ್‌ಪಿಐ / ಎಫ್‌ಐಐ ಹೂಡಿಕೆದಾರರ ಸಂಖ್ಯೆ 170 ರಿಂದ 65 ಕ್ಕೆ ಇಳಿದಿದೆ. ಮ್ಯೂಚುವಲ್ ಫಂಡ್ ಹೋಲ್ಡಿಂಗ್ ಅಲ್ಲಿ ಹೆಚ್ಚಿನ ವ್ಯತ್ಯಾಸ ಆಗಿಲ್ಲ. ಮ್ಯೂಚುಯಲ್ ಫಂಡ್ ಹೂಡಿಕೆದಾರರ ಸಂಖ್ಯೆ 16 ರಿಂದ 18 ವರೆಗೆ ಇದೆ, ಮತ್ತು ಅವರ ಓವರ್ ಆಲ್ ಹೋಲ್ಡಿಂಗ್ ಮಾರ್ಚ್ 2021 ತ್ರೈಮಾಸಿಕದಲ್ಲಿ 10.76% ರಿಂದ 10.84% ಕ್ಕೆ ಏರಿದೆ. ಕೋವಿಡ್ ನ ಕಾರಣದಿಂದ ಕಂಪನಿಯ ವ್ಯವಹಾರದಲ್ಲಿ ನಿಸ್ಸಂಶಯವಾಗಿ ನಷ್ಟದ ಪ್ರಮಾಣ ಹೆಚ್ಚಾಗಿದೆ. ಕಳೆದ ವರ್ಷ ಜುಲೈನಲ್ಲಿ, ಲಾಕ್ಡೌನ್ ನ ಇಂಪ್ಯಾಕ್ಟ್ ನಿಂದಾಗಿ ಕಂಪನಿಯ ಷೇರು 151 ರೂ. ಗಳಿಗೆ ಟ್ರೇಡ್ ಆಗಿತ್ತು. ಕ್ವಾರ್ಟರ್ ನ ಕೊನೆಯಲ್ಲಿ ಕಂಪನಿಯ ರಿಜಿಸ್ಟರ್ಡ್ ರೆವೆನ್ಯೂ 393.2 ಕೋಟಿ ಆಗಿತ್ತು. ಆದರೆ ನಂತರದ ಕ್ವಾರ್ಟರ್, ಜೂನ್ ನಲ್ಲಿ ಕೊನೆಗೊಳ್ಳುವ ತ್ರೈಮಾಸಿಕದಲ್ಲಿ, ಒಟ್ಟು ಆದಾಯವು 183.2 ಕೋಟಿ ರೂ.ಗೆ ಇಳಿದಾಗ ನಿಜವಾದ ಬಲವಾದ ಪರಿಣಾಮ ಎದುರಿಸಬೇಕಾಗಿದ್ದು ನಿಜ. ಆದರೆ ಅದಾದ ನಂತರ ಕಂಪನಿಯು ಉತ್ತಮ ಚೇತರಿಕೆಯನ್ನ ಕಂಡಿದೆ ಮತ್ತೆಂದೂ ಹಿಂದಿರುಗಿ ನೋಡಿದ್ದೇ ಇಲ್ಲ. ಸತತ ತ್ರೈಮಾಸಿಕದಲ್ಲಿ, ಅಂದ್ರೆ ಕಂಪನಿಯು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 451.7 ಕೋಟಿ ರೂ. ಗಳಿಸಿ ಮಾರ್ಚ್ 2021 ತ್ರೈಮಾಸಿಕದಲ್ಲಿ 525 ಕೋಟಿ ರೂ. ಗಳಿಸಿದೆ. ನಿವ್ವಳ ಲಾಭದ ವಿಷಯವೂ ಇದೇ ಆಗಿದೆ- ಸೆಪ್ಟೆಂಬರ್ 2020 ಅಲ್ಲಿ ಕಂಪನಿಯ ನಿವ್ವಳ ಲಾಭ ಕೇವಲ 67.7 ಕೋಟಿ ರೂ. ಮತ್ತು ಮಾರ್ಚ್ 2021 ತ್ರೈಮಾಸಿಕದಲ್ಲಿ ನಿವ್ವಳ ಲಾಭ 142.7 ಕೋಟಿ ರೂ. ಗಳಿಸಿ ದಾಖಲೆ ಬರೆದಿದೆ. ಸ್ನೇಹಿತರೆ ಸುಪ್ರಾಜಿತ್ ಎಂಜಿನಿಯರಿಂಗ್ ಲಿಮಿಟೆಡ್ ಖಂಡಿತವಾಗಿಯೂ ಬೆಳವಣಿಗೆಯ ಹಾದಿಯಲ್ಲಿದೆ, ಇದು ಷೇರುಗಳ ಹೆಚ್ಚುತ್ತಿರುವ ಬೇಡಿಕೆಯಿಂದ ತಿಳಿತಿದೆ. ಆದಾಗ್ಯೂ, ಮೂರನೇ ಕೋವಿಡ್ ಅಲೆ ಹಠಾತ್ ಮರಳುವಿಕೆಯ ದೃಷ್ಟಿಯಿಂದ ಅಪಾಯ ಅಂತೂ ಇದೆ.ಮತ್ತು ಮುಂದಿನ ದಿನಗಳಲ್ಲಿ ಚೀನೀ ಉತ್ಪನ್ನಗಳನ್ನು ಸುಲಭವಾಗಿ ಆಮದು ಮಾಡಿಕೊಳ್ಳಲು ಅನುಮತಿ ನೀಡಿದರೆ ಕಂಪನಿಯ ಭವಿಷ್ಯಕ್ಕೂ ತೊಂದರೆಯಾಗುತ್ತದೆ. ಸರಿ ಸ್ನೇಹಿತರೆ, ಇವತ್ತಿನ ಪಾಡ್ಕ್ಯಾಸ್ಟ್ ನಲ್ಲಿ ಇದಿಷ್ಟೇ. ಹೊರಡುವ ಮೊದಲು, ಷೇರು ಮಾರುಕಟ್ಟೆ ಹೂಡಿಕೆಯಲ್ಲಿ ಯಾವಾಗಲೂ ಅಪಾಯವಿರುತ್ತದೆ ಮತ್ತು ಒಂದು ವಿಷಯವನ್ನು ನೆನಪಿಡಿ. ಈ ಪಾಡ್ಕ್ಯಾಸ್ಟ್ ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ ಮಾಡಲಾಗಿದೆ. ಇಂತಹ ಇನ್ನಷ್ಟು ಆಸಕ್ತಿದಾಯಕ ಪಾಡ್ಕಾಸ್ಟ್ಗಳಿಗಾಗಿ ಯೂಟ್ಯೂಬ್ ಮತ್ತು ಇತರ ಸಾಮಾಜಿಕ ಮಾಧ್ಯಮ ಚಾನೆಲ್ಗಳ ಮೂಲಕ ನಮ್ಮನ್ನು ಫಾಲೋ ಮಾಡಿ. ಅಲ್ಲಿವರೆಗೆ ಗುಡ್ ಬೈ ಮತ್ತು ಹ್ಯಾಪಿ ಇನ್ವೆಸ್ಟಿಂಗ್! ಸೆಕ್ಯುರಿಟೀಸ್ ಮಾರುಕಟ್ಟೆಯಲ್ಲಿನ ಹೂಡಿಕೆಗಳು ಮಾರುಕಟ್ಟೆಯ ಅಪಾಯಗಳಿಗೆ ಒಳಪಟ್ಟಿರುತ್ತವೆ. ಹೂಡಿಕೆ ಮಾಡುವ ಮೊದಲು ಎಲ್ಲಾ ಸಂಬಂಧಿತ ದಾಖಲೆಗಳನ್ನು ಎಚ್ಚರಿಕೆಯಿಂದ ಓದಿ.