Fundamental analysis of Somany Ceramics

Podcast Duration: 7:19
ಫಂಡಮೆಂಟಲ್ ಅನಾಲಿಸಿಸ್ ಆಫ್ ಸೊಮಾನಿ ಸಿರಾಮಿಕ್ಸ್ ಹಲೋ ಸ್ನೇಹಿತರೆ, ಏಂಜಲ್ ಒನ್ ನ ಫಂಡಮೆಂಟಲ್ ಅನಾಲಿಸಿಸ್ ಸ್ಪೆಷಲ್ ಪೋಡ್ಕ್ಯಾಸ್ಟ್ ಗೆ ನಿಮಗೆ ಸ್ವಾಗತ. ಸ್ನೇಹಿತರೆ, ನಿಮಗೆ ತಿಳಿದಿರುವ ಹಾಗೆ ನಾವು ಏಂಜಲ್ ಬ್ರೋಕಿಂಗ್ ನಲ್ಲಿ ಒಂದು ಸೀರೀಸ್ ಅನ್ನ ನಡೆಸ್ತಾ ಇದೀವಿ ಮತ್ತು ಅಲ್ಲಿ ನಾವು ಕೆಲವೊಂದು ಇಂಪ್ರೆಸ್ಸಿವ್ ಸ್ಟಾಕ್ ಬಗ್ಗೆ ಮಾತಾಡ್ತ ಅದರ ಫಂಡಮೆಂಟಲ್ ಬಗ್ಗೆ ಸೂಕ್ಷ್ಮವಾಗಿ ಗಮನಿಸ್ತಾ ಮಾಹಿತಿಯನ್ನ ಕೊಡ್ತಿದ್ದೇವೆ. ಇದೆ ಸೀರೀಸ್ ಅಲ್ಲಿ ನಾವು ಸೊಮಾನಿ ಸಿರಾಮಿಕ್ಸ್ ಲಿಮಿಟೆಡ್ ಕೋ. ಬಗ್ಗೆ ಅನಲೈಸ್ ಮಾಡೋಣ. ಬನ್ನಿ ಆ ಕಂಪನಿಯ ಬಗ್ಗೆ ಮತ್ತು ಅವರ ವ್ಯವಹಾರದ ಬಗ್ಗೆ ತಿಳಿದು ಕೊಳ್ಳೋಣ - ಸೊಮಾನಿ ಸೆರಾಮಿಕ್ಸ್ ಲಿಮಿಟೆಡ್ 49 ವರ್ಷದ ಹಳೆಯ ಕಂಪನಿಯಾಗಿದ್ದು, ಪ್ರಸ್ತುತ ಇಂಡಿಯನ್ ಇಂಟೀರಿಯರ್ ಡೆಕೊರ್ (decor) ಇಂಟೀರಿಯರ್ ಡೆಕೊರ್ ಮತ್ತು ಟೈಲ್ಸ್ ಉದ್ಯಮದಲ್ಲಿ ಪ್ರಾಬಲ್ಯ ಹೊಂದಿದೆ. ಎಸ್.ಸಿ.ಎಲ್ ಬಳಿ ಒಂದು ಅತ್ಯುತ್ತಮ ಪೋರ್ಟ್ ಪೋಲಿಯೋ ಇದೆ ಅದರಲ್ಲಿ ಸಿರಾಮಿಕ್ ಟೈಲ್ಸ್, ಫ್ಲೋರ್ ಟೈಲ್ಸ್, ಪೊಲಿಷ್ಡ್ ವಿಟ್ರಿಫೈಡ್ ಟೈಲ್ಸ್, ಡಿಜಿಟಲ್ ಟೈಲ್ಸ್, ವಾಲ್ ಟೈಲ್ಸ್, ವಾಲ್ ಕ್ಲಾಡ್ಡಿಂಗ್ಸ್, ಸ್ಯಾನಿಟರಿ ವೆರ್, ಬಾತ್ರೂಮ್ ಫಿಟ್ಟಿಂಗ್ಸ್ ಮತ್ತು ಇಂತಹ ಅನೇಕ ಉತ್ಪನ್ನಗಳು ಇವೆ. ಸೊಮಾನಿ ಸಿರಾಮಿಕ್ಸ್ ಲಿಮಿಟೆಡ್ ನ FY21 ರ ಫೋರ್ಥ್ ಕ್ವಾರ್ಟರ್ ನ ಗಳಿಕೆ ಉತ್ತಮವಾಗಿತ್ತು. Q4FY21 ರಲ್ಲಿ ಎಸ್.ಸಿ.ಎಲ್ 564 ಕೋಟಿಯ ಟರ್ನ್ ಓವರ್ ಅನ್ನ ರಿಜಿಸ್ಟರ್ ಮಾಡಿದೆ ಇದು Q4FY20 ರ ಟರ್ನ್ ಓವರ್ ಗಮನಿಸಿದರೆ 58% ಹೆಚ್ಚು. ತ್ರೈಮಾಸಿಕ ಆಧಾರದ ಮೇಲೆ ಕ್ವಾರ್ಟರ್ ಅನ್ನು ನೋಡಿದರೆ, ಅಂದರೆ Q4F21 ಅನ್ನು Q3FY21 ಗೆ ಹೋಲಿಸಿದರೆ, ಒಟ್ಟು ಮಾರಾಟವು 15% ಹೆಚ್ಚಾಗಿದೆ. ನಾವು ಸಂಪೂರ್ಣ ಹಣಕಾಸು ವರ್ಷವನ್ನು ಅಂದರೆ FY 21 ರ ಮಾರಾಟವನ್ನುFY 20 ರ ಮಾರಾಟಕ್ಕೆ ಹೋಲಿಸಿದರೆ, ಮಾರಾಟದಲ್ಲಿ ಕೇವಲ 2.5% ರಷ್ಟು ಮಾತ್ರ ಹೆಚ್ಚಳ ಕಂಡು ಬಂದಿದೆ. ಈ ಏರಿಕೆ ಸಣ್ಣದಾಗಿರಬಹುದು, ಆದರೆ ಲೊಕ್ಡೌನ್ ಕಾರಣದಿಂದಾಗಿ FY 21 ರ ಸೇಲ್ಸ್ ಹಾಳಾಗಿತ್ತು. ಲಾಕ್ ಡೌನ್ ಹೊರತಾಗಿಯೂ, ಕಂಪನಿಯು ಮಾರಾಟದಲ್ಲಿ ಸಣ್ಣ ಏರಿಕೆ ತೋರಿಸಿದೆ. ಲಾಕ್ಡೌನ್ ಇಲ್ಲದಿದ್ದರೆ, ಮಾರಾಟವು ಇನ್ನೂ ಹೆಚ್ಚಾಗಬಹುದಿತ್ತು. ಎಕ್ಸ್ಪರ್ಟ್ ಗಳ ಪ್ರಕಾರ ಗ್ರಾಹಕರು ಅಸಂಘಟಿತ ವಲಯದಿಂದ ಸಂಘಟಿತ ವಲಯಕ್ಕೆ ಗಮನ ಹರಿಸ್ತಾ ಇರೋದ್ರಿಂದ ಎಸ್‌ಸಿಎಲ್ ಇದರ ಪ್ರಯೋಜನ ಪಡೆಯುತ್ತದೆ. ಇದರರ್ಥ ಇಂದಿನ ದಿನದಲ್ಲಿ ಯಾರಾದರೂ ಟೈಲ್ಸ್ ಅಥವಾ ಬಾತ್ರೂಮ್ ಫಿಟ್ಟಿಂಗ್‌ಗಳನ್ನು ಖರೀದಿಸುವ ಬಗ್ಗೆ ಯೋಚಿಸಿದ್ರೆ, ಅವರು ಈಗ ಸ್ಥಳೀಯ ಮಾರುಕಟ್ಟೆಗಳಿಂದ ಖರೀದಿಸುವ ಬದಲು, ಬ್ರಾಂಡೆಡ್ ಉತ್ಪನ್ನಗಳತ್ತ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಪ್ರಸ್ತುತ, ಡೆಕೊರ್ ಮಾರ್ಕೆಟ್ ಅನ್ನ 60-40 ಅನುಪಾತದಲ್ಲಿ ವಿಭಜಿಸಲಾಗಿದೆ. ಇದರಲ್ಲಿ60% ಅನ್-ಆರ್ಗನೈಜ್ಡ್ ವಲಯದವರು ಪ್ರಾಬಲ್ಯ ಹೊಂದಿದ್ದರೆ 40% ಆರ್ಗನೈಜ್ಡ್ ವಲಯದವರು ಪ್ರಾಬಲ್ಯ ಹೊಂದಿದ್ದಾರೆ. ಮ್ಯಾನೇಜ್ಮೆಂಟ್ ಪ್ರಕಾರ FY 22 ರ ಮೊದಲ ತ್ರೈಮಾಸಿಕ ಅಂದ್ರೆ ಏಪ್ರಿಲ್ ನಿಂದ ಜೂನ್ ನ ತ್ರೈಮಾಸಿಕ ಮಾರಾಟ ಸ್ವಲ್ಪ ನೀರಸ ಇರಲಿದೆ ಆದರೆ ಒಟ್ಟಾರೆ FY 22 ರಲ್ಲಿ ಲಾಕ್ಡೌನ್ ಮುಗಿತಿದ್ದಂತೆ ಟೈಲ್ಸ್ಗಳ ಮಾರಾಟದಲ್ಲಿ ಚೇತರಿಕೆ ಕಾಣಿಸಿ ಕೊಳ್ಳಲಿದ್ದು 13 ರಿಂದ 15% ಹೆಚ್ಚಾಗುವ ಸಾಧ್ಯತೆ ಇದೆ. ಇದರೊಂದಿಗೆ ಮೂರು ಟೈಲ್ ಪ್ಲಾಂಟ್‌ಗಳಲ್ಲಿ ಕಂಪನಿಯು ಕೈಗೊಳ್ಳುತ್ತಿರುವ ಕೆಪ್ಯಾಸಿಟಿ ಎಕ್ಸ್ ಪ್ಯಾಂಷನ್ ನಿಂದಾಗಿ FY 23 ಉತ್ತಮ ವರ್ಷವಾಗಿ ಹೊರಹೊಮ್ಮಲಿದೆ. ಮತ್ತು ಈ ಕೆಪ್ಯಾಸಿಟಿ ಎಕ್ಸ್ ಪ್ಯಾಂಷನ್ FY22 ರ ಅಂತ್ಯದ ವೇಳೆಗೆ ಸಂಪೂರ್ಣಗೊಳ್ಳಲಿದೆ. ಬನ್ನಿ ಸ್ನೇಹಿತರೆ ಈಗ ಮಾರ್ಜಿನ್ ನ ಕುರಿತು ಸ್ವಲ್ಪ ಗಮನ ಹರಿಸೋಣ! ಜೂನ್ ಅಂತ್ಯದ ತ್ರೈಮಾಸಿಕದಲ್ಲಿ, ಕಂಪನಿಯ ಆಪರೇಟಿಂಗ್ ಮಾರ್ಜಿನ್ 12 ಶೇಕಡಾ ಪಾಯಿಂಟ್ಗಳಿಂದ 15.9% ಕ್ಕೆ ಏರಿದೆ. ಆಪರೇಟಿಂಗ್ ಮಾರ್ಜಿನ್ ಎಂದರೆ ಕಂಪನಿಯು ವೇತನ ಮತ್ತು ಕಚ್ಚಾ ವಸ್ತುಗಳನ್ನು ಲೆಕ್ಕ ಹಾಕಿದ ನಂತರ ಆದರೆ ಬಡ್ಡಿ ಅಥವಾ ತೆರಿಗೆ ಪಾವತಿಸುವ ಮೊದಲು ಮಾಡುವ ಲಾಭ. ಬಡ್ಡಿ, ತೆರಿಗೆಗಳು, depreciation and amortisation ಗೆ ಮುಂಚಿತವಾಗಿ ಕಂಪನಿಯ ಇಬಿಐಟಿಡಿಎ ಯ ಗಳಿಕೆ 6.5 % ಹೆಚ್ಚಾಗುತ್ತದೆ. ಎಸ್‌ಸಿಎಲ್ ಯ ಪ್ರಿ-ಟ್ಯಾಕ್ಸ್ ಅರ್ನಿಂಗ್ 67.4 ಕೋಟಿ ರೂ. Q4FY21 ಕ್ಕೆ ಹೋಲಿಸಿದರೆ Q4FY20 ರಲ್ಲಿ ನಷ್ಟದ ಪ್ರಮಾಣ 10.8 ಕೋಟಿ ರೂ. ಕಂಪನಿಯ ನೆಟ್ ಡೆಬ್ಟ್ ರಿಡಕ್ಷನ್ ನಿಂದಾಗಿ ಇದರ ಬಗ್ಗೆ ಮಾರ್ಕೆಟ್ ಎಕ್ಸ್ಪರ್ಟ್ ಉತ್ಸುಕರಾಗಿದ್ದಾರೆ, ಇದು ಒಂದು ವರ್ಷದ ಹಿಂದೆ 242 ಕೋಟಿ ರೂ.ಗಳಿಂದ 56 ಕೋಟಿ ರೂ.ಗೆ ಇಳಿದಿದೆ ಮತ್ತು ಸ್ಟಾಂಡ್ಅಲೋನ್ ಬೇಸಿಸ್ ಮೇಲೆ ಒಂದು ವರ್ಷದ ಹಿಂದಿನ 444 ಕೋಟಿ ರೂ.ಗಳಿಂದ 172 ಕೋಟಿ ರೂ. ಗಳಿಗೆ. ಈಗ ಕಂಪನಿಯ ನೆಟ್ವರ್ಕ್ನ ಕುರಿತು ನೋಡೋಣ- FY21 ರಲ್ಲಿ ಕಂಪನಿ 400 ಹೊಸ ಡೀಲರ್ ಗಳನ್ನ ಹೊಂದುವ ಮೂಲಕ ತನ್ನ ನೆಟ್ವರ್ಕ್ ಅನ್ನ ಅಭಿವೃದ್ಧಿ ಪಡಿಸಿಕೊಂಡಿದೆ. ಬಲವಾದ ಬ್ರಾಂಡ್ ಲಾಯಲ್ಟಿ ಜೊತೆ ಹೈ ಬ್ರಾಂಡ್ ರಿಕಾಲ್ ವ್ಯಾಲ್ಯೂ ಹೊಂದಿದೆ. FY 21-23ರ ಅವಧಿಯಲ್ಲಿ ಸ್ಟ್ರಾಂಗ್ ಡಿಸ್ಟ್ರಿಬ್ಯುಶನ್ ನ ಕಾರಣದಿಂದಾಗಿ ಎಸ್‌ಸಿಎಲ್ ಉತ್ತಮ ನೆಟ್ ಪ್ರಾಫಿಟ್ ಅನ್ನ ಹೊಂದಲಿದೆ ಎಂದು ಮಾರ್ಕೆಟ್ ಎಕ್ಸ್ಪರ್ಟ್ ಅಭಿಪ್ರಾಯ ಪಡ್ತಿದಾರೆ. ಇದುವರೆಗೆ ಈ ಅಂಕಿ ಅಂಶಗಳ ಕುರಿತು ಸಾಕಷ್ಟು ಮಾಹಿತಿ ನೋಡಿದ್ವಿ, ಈಗ ಎಸ್‌ಸಿಎಲ್ ನ ಶೇರ್ ಹೋಲ್ಡಿಂಗ್ ನ ಕುರಿತಾಗಿ ನೋಡೋಣ. ಈ ವರ್ಷದ ಜೂನ್ ಅಂತ್ಯದ ತ್ರೈಮಾಸಿಕದಲ್ಲಿ, ಎಫ್‌ಐಐ / ಎಫ್‌ಪಿಐಗಳು ಕಂಪನಿಯಲ್ಲಿ ತಮ್ಮ ಹೋಲ್ಡಿಂಗ್ 2.65% ರಿಂದ 3.48% ಕ್ಕೆ ಹೆಚ್ಚಿಸಿವೆ ಮತ್ತು ಒಟ್ಟು ಎಫ್‌ಐಐ / ಎಫ್‌ಪಿಐ ಹೋಲ್ಡರ್ ಸಂಖ್ಯೆ 48 ರಿಂದ 68 ಕ್ಕೆ ಏರಿದೆ. ಜೂನ್ ತ್ರೈಮಾಸಿಕದಲ್ಲಿ ಪ್ರೊಮೋಟರ್ ಹೋಲ್ಡಿಂಗ್ ಬದಲಾಗದೆ 54.77% ಇದೆ ಮತ್ತು ಕಂಪನಿಯಲ್ಲಿ ಮ್ಯೂಚುವಲ್ ಫಂಡ್ ಹೋಲ್ಡಿಂಗ್ಸ್ ಪ್ರಸ್ತುತ 16.1% ರಷ್ಟಿದೆ. ಭಾರತದ ಬಾತ್, ಟೈಲ್ಸ್ ಮತ್ತು ಸ್ಯಾನಿಟರಿ ಮಾರ್ಕೆಟ್ FY 23 ರ ವೇಳೆಗೆ 10,000 ಮಿಲಿಯನ್ ತಲುಪುವ ನಿರೀಕ್ಷೆಯಿದೆ. ಇಲ್ಲಿ ಎಸ್‌ಸಿಎಲ್ ಆರ್ಗನೈಜ್ಡ್ ಸೆಕ್ಟರ್ ನಲ್ಲಿಸ್ಟ್ರಾಂಗ್ ಪ್ಲೇಯರ್ ಆಗಿ ತನ್ನ ಪ್ರೈಮ್ ಸ್ಥಾನದಿಂದ ಸಂಪೂರ್ಣವಾಗಿ ಲಾಭ ಪಡೆಯಲು ಸಿದ್ಧವಿದೆ. ಭಾರತೀಯ ಗ್ರಾಹಕರು ಬ್ರಾಂಡ್ ಪ್ರಜ್ಞೆ ಹೊಂದುತ್ತಿರುವ ರೀತಿ ನೋಡಿದ್ರೆ, ಮಾರುಕಟ್ಟೆ ತಜ್ಞರ ಪ್ರಕಾರ ಅಸಂಘಟಿತ ಮಾರುಕಟ್ಟೆಗಳು ತಮ್ಮ ಮಾರುಕಟ್ಟೆ ನಿಯಂತ್ರಣದ ಕಳೆದುಕೊಳ್ಳುತ್ತವೆ ಮತ್ತು ಸೋಮನಿ ಸೆರಾಮಿಕ್ಸ್ ಆ ಮಾರುಕಟ್ಟೆ ಅವಕಾಶವನ್ನು ಬಳಸಿಕೊಳ್ಳಬಹುದು. ಇದರೊಂದಿಗೆ ಎಸ್‌ಸಿಎಲ್ ನ ವಿಸ್ತರಿತ ಸಾಮರ್ಥ್ಯ ಮತ್ತು ಬಲವಾದ ವಿತರಣಾ ಜಾಲವು ಭಾರತದ ಟೈರ್ 2 ಮತ್ತು ಟೈರ್ 3 ಪ್ರದೇಶಗಳಿಗೆ ಆಳವಾಗಿ ತಲುಪಲು ಸಹಾಯ ಮಾಡುತ್ತದೆ. ಸ್ನೇಹಿತರೆ, ಪ್ರಸ್ತುತ ಎಸ್‌ಸಿಎಲ್ ನ ಪ್ರತಿ ಷೇರಿಗೆ 663 ರೂ. ಇದೆ. ಲಾಕ್ಡೌನ್ ನ ಕಾರಣ, ಕಂಪನಿಗೆ ಮತ್ತು ಅದರ ಷೇರುಗಳಿಗೆ ಸ್ವಲ್ಪ ನಷ್ಟವಾಯಿತು ಆದರೆ ಕಂಪನಿಯು ಬಲವಾದ ಬೆಳವಣಿಗೆಯ ಸಾಮರ್ಥ್ಯವನ್ನು ಹೊಂದಿದೆ. ಅದರ ಶೇರ್ ಮಾರ್ಚ್ 2020 ರಲ್ಲಿ 87 ರೂ.ಗೆ ವಹಿವಾಟು ನಡೆಸುತ್ತಿತ್ತು ಆದರೆ ಕಂಪನಿಯ ಷೇರುಗಳು ಅಂದಿನಿಂದ ಇದುವರೆಗೆ ಬಹಳ ಗ್ರೋಥ್ ಕಂಡಿದೆ. ಇದರಿಂದಾಗಿ ಇನ್ವೆಸ್ಟರ್ಸ್ ಗಳು ಈ ಷೇರುಗಳ ಮೇಲೆ ಇಟ್ಟಿರುವ ಉತ್ಸಾಹವು ಈಗ ಸಾಕಷ್ಟು ಸ್ಪಷ್ಟವಾಗಿದೆ. ಮಾರ್ಚ್ 2020 ರಲ್ಲಿ ಅದರ ಬೆಲೆ ಕುಸಿತದ ನಂತರ, ಕಂಪನಿಯ ಪಾಲು ತಕ್ಷಣವೇ ಚೇತರಿಸಿಕೊಂಡಿತು ಮತ್ತು ಅಕ್ಟೋಬರ್ ಮೊದಲ ವಾರದಲ್ಲಿ 200 ರೂ. ಕಂಡಿತ್ತು . 2021 ರ ಫೆಬ್ರವರಿ ಆರಂಭದ ವೇಳೆಗೆ ಅದು ಈಗಾಗಲೇ 400 ರೂ.ಗೆ ವಹಿವಾಟು ನಡೆಸುತ್ತಿದೆ. ಅನೇಕ ಹೂಡಿಕೆದಾರರು ಈ ಶೇರ್ ನಿಂದ ಉತ್ತಮ ಲಾಭವನ್ನು ಗಳಿಸಿದ್ದರೂ, ಹೂಡಿಕೆದಾರರು ತಮ್ಮ ಓನ್ ರಿಸರ್ಚ್ ಮಾಡುವುದು ಉತ್ತಮ. ಸರಿ ಸ್ನೇಹಿತರೆ, ಇವತ್ತಿನ ಪಾಡ್ಕ್ಯಾಸ್ಟ್ ನಲ್ಲಿ ಇದಿಷ್ಟೇ. ಹೊರಡುವ ಮೊದಲು, ಷೇರು ಮಾರುಕಟ್ಟೆ ಹೂಡಿಕೆಯಲ್ಲಿ ಯಾವಾಗಲೂ ಅಪಾಯವಿರುತ್ತದೆ ಮತ್ತು ಒಂದು ವಿಷಯವನ್ನು ನೆನಪಿಡಿ. ಈ ಪಾಡ್‌ಕ್ಯಾಸ್ಟ್ ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ ಮಾಡಲಾಗಿದೆ. ಇಂತಹ ಇನ್ನಷ್ಟು ಆಸಕ್ತಿದಾಯಕ ಪಾಡ್‌ಕಾಸ್ಟ್‌ಗಳಿಗಾಗಿ ಯೂಟ್ಯೂಬ್ ಮತ್ತು ಇತರ ಸಾಮಾಜಿಕ ಮಾಧ್ಯಮ ಚಾನೆಲ್‌ಗಳ ಮೂಲಕ ನಮ್ಮನ್ನು ಫಾಲೋ ಮಾಡಿ. ಅಲ್ಲಿವರೆಗೆ ಗುಡ್ ಬೈ ಮತ್ತು ಹ್ಯಾಪಿ ಇನ್ವೆಸ್ಟಿಂಗ್! ಸೆಕ್ಯುರಿಟೀಸ್ ಮಾರುಕಟ್ಟೆಯಲ್ಲಿನ ಹೂಡಿಕೆಗಳು ಮಾರುಕಟ್ಟೆಯ ಅಪಾಯಗಳಿಗೆ ಒಳಪಟ್ಟಿರುತ್ತವೆ. ಹೂಡಿಕೆ ಮಾಡುವ ಮೊದಲು ಎಲ್ಲಾ ಸಂಬಂಧಿತ ದಾಖಲೆಗಳನ್ನು ಎಚ್ಚರಿಕೆಯಿಂದ ಓದಿ.