Fundamental analysis of Mindtree

Podcast Duration: 8:05
ಫಂಡಮೆಂಟಲ್ ಅನಾಲಿಸಿಸ್ - ಮೈಂಡ್ ಟ್ರೀ ಹಲೋ ಸ್ನೇಹಿತರೆ, ಏಂಜಲ್ ಒನ್ ನ ಫಂಡಮೆಂಟಲ್ ಅನಾಲಿಸಿಸ್ ಸ್ಪೆಷಲ್ ಪೋಡ್ಕ್ಯಾಸ್ಟ್ ಗೆ ನಿಮಗೆ ಸ್ವಾಗತ. ನೀವು ನಮ್ಮ ಪಾಡ್ಕ್ಯಾಸ್ಟ್ ಅನ್ನ ಕೇಳ್ತಾ ಇದ್ರೆ, ನೀವು ಒಂದು ವಿಷಯವನ್ನ ನೋಟೀಸ್ ಮಾಡಿರಬಹುದು, ಹೂಡಿಕೆ ಮಾಡುವ ಮೊದಲು ಷೇರುಗಳನ್ನು ಎಚ್ಚರಿಕೆಯಿಂದ ವಿಶ್ಲೇಷಿಸಲು ನಾವು ಯಾವಾಗಲೂ ಶಿಫಾರಸು ಮಾಡುತ್ತೇವೆ. ನೀವು ಯಾವುದೇ ವ್ಯಕಿಯನ್ನ ನೇಮಕ ಮಾಡುವ ಮೊದಲು ಅಥವಾ ಅವರನ್ನು ಮದುವೆಯಾಗುವ ಮೊದಲು ಅವರ ಬಗ್ಗೆ ತಿಳಿದುಕೊಳ್ಳುವಷ್ಟೇ, ಹೂಡಿಕೆ ಮಾಡುವ ಮೊದಲು ವಿಶ್ಲೇಷಣೆ ಮುಖ್ಯವಾಗಿರುತ್ತದೆ. ಹೌದಲ್ವಾ? ಈಗನೀವು ಸ್ವಲ್ಪ ಸಂಶೋಧನೆ ಮಾಡಿರಬೇಕು, ಅಲ್ವಾ? ಆಮ್ ಶ್ಯೂರ್ ನೀವು ಮಾಡಿರ್ತಿರಾ ಏಕೆಂದರೆ ಪ್ರತಿಯೊಂದು ಆಯ್ಕೆಯು ಅದರ ಪರಿಣಾಮಗಳನ್ನು ಹೊಂದಿರುತ್ತದೆ. ನೀವು ಒಬ್ಬರ ಮೇಲೆ ನಿಮ್ಮ ಸಮಯವನ್ನ ಇನ್ವೆಸ್ಟ್ ಮಾಡೋದಕ್ಕೂ ಮುಂಚೆ ಅವರ ಹಿನ್ನೆಲೆಯನ್ನ ತಿಳಿತಿರಿ ಅಲ್ವ . ಹಾಗೆ ನೀವು ಷೇರುಗಳಲ್ಲಿ ಹಣವನ್ನು ಹೂಡಿಕೆ ಮಾಡುವ ಮೊದಲು, ಅದರ ಕುರಿತಾದ ವಿವರಗಳ ಪಟ್ಟಿಯನ್ನು ಹೊಂದಿರಬೇಕು . ಇವತ್ತು ನಾವು ನಿಮಗೆ ಹೂಡಿಕೆ ಮಾಡುವ ಮೊದಲು ಷೇರುಗಳ ಫಂಡಮೆಂಟಲ್ ಅನಾಲಿಸಿಸ್ ನಡೆಸುವುದು ಹೇಗೆ ಎಂದು ಹೇಳ್ತೇವೆ. ಇಂದು ನಾವು ಮೈಂಡ್ ಟ್ರೀ ಕಂಪನಿಯ ಫಂಡಮೆಂಟಲ್ ಅನಾಲಿಸಿಸ್ ಮಾಡೋಣ. ನೀವು ಈ ಪ್ರಕ್ರಿಯೆಯನ್ನು ಇತರ ಕಂಪನಿಗಳಿಗೂ ಪುನರಾವರ್ತಿಸಬಹುದು. ನೀವು ಫಂಡಮೆಂಟಲ್ ಅನಾಲಿಸಿಸ್ ಮಾಡುತ್ತಿರುವಾಗ ಮೊದಲ ಹೆಜ್ಜೆ ಕಂಪನಿಯು ಏನು ಮಾಡುತ್ತದೆ ಮತ್ತು ಅದು ಹೇಗ್ ಪರ್ಫಾರಂ ಮಾಡುತ್ತದೆ ಎಂಬುದನ್ನು ಕಂಡುಹಿಡಿಯುವುದು. ಮೈಂಡ್‌ಟ್ರೀ ಎಂದರೇನು? ಮೈಂಡ್ ಟ್ರೀ ಪ್ರಮುಖ ಮಿಡ್ ಕ್ಯಾಪ್ ಐಟಿ ಸರ್ವಿಸ್ ಪ್ರೊವೈಡರ್ ಗಳಲ್ಲಿಒಂದು ಇದು ಎಲ್ & ಟಿ ಗುಂಪಿನ ಭಾಗವಾಗಿದೆ. ಇದರ ಆದಾಯವು ಎಫ್‌ವೈ 20 ರಲ್ಲಿ ಯುಎಸ್‌ಡಿ 1 ಬಿಲಿಯನ್ ದಾಟಿದೆ. ಕಂಪನಿಯು ಬಿಎಫ್‌ಎಸ್‌ಐ - ಬ್ಯಾಂಕಿಂಗ್ ಮತ್ತು ಫೈನಾಸಿಯಲ್ ಸರ್ವಿಸಸ್, ಕಮ್ಯುನಿಕೇಷನ್, ಮೀಡಿಯಾ ಅಂಡ್ ಟೆಕ್ನಾಲಾಜಿ , ರಿಟೇಲ್, ಸಿಪಿಜಿ ಮತ್ತು ಮ್ಯಾನುಫ್ಯಾಕ್ಚರಿಂಗ್, ಮತ್ತು ಟ್ರಾವೆಲ್ ಮತ್ತು ಹಾಸ್ಪಿಟಾಲಿಟಿ ವಿಭಾಗಗಳಲ್ಲಿ ಬಲವಾದ ಅಸ್ತಿತ್ವವನ್ನು ಹೊಂದಿದೆ. ಮೈಂಡ್‌ಟ್ರೀ ಯಾವ ಸಾಮರ್ಥ್ಯವನ್ನು ತೋರಿಸುತ್ತದೆ? ​ ಮೈಂಡ್ ಟ್ರೀ ಯಾ ಟಾಪ್ ಕ್ವಾರ್ಟರ್ಲಿ ಗ್ರೋಥ್ 50% ಗು ಅಧಿಕ ಆಗಲಿದೆ ಯಾಕಂದ್ರೆ ಮೈಂಡ್ ಟ್ರೀ ಗೆ ಇತರ ಸೆಕ್ಟರ್ ಅಲ್ಲಿ ಉತ್ತಮ ಲಾಭ ಬರುವ ನಿರೀಕ್ಷೆ ಇದೆ. ಮೈಂಟ್ರಿಯ ಉನ್ನತ ಗ್ರಾಹಕರು ಬೆಳವಣಿಗೆಯ ನಿರೀಕ್ಷೆಯನ್ನು ಹೊಂದಿದ್ದಾರೆ. Q1FY22 ರಲ್ಲಿ ಟಾಪ್ ಬ್ರೋಕರೇಜ್ ಮತ್ತು ಪರಿಣಿತ ಹೂಡಿಕೆದಾರರಿಂದಾಗಿ ಮೈಂಡ್‌ಟ್ರೀಯ ಡೀಲ್ಗಳು ಗೆಲುವು ಕಾಣುವ ಚಾನ್ಸ್ ಪ್ರಬಲವಾಗಿವೆ, ಮುಂಬರುವ ತ್ರೈಮಾಸಿಕಗಳಲ್ಲಿ ಆವೇಗವನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ. ಕಂಪನಿಯು ಹೊಸ ಒಪ್ಪಂದಗಳ ರಾಂಪ್ ಅಪ್‌ನಿಂದಾಗಿ FY 21-FY 23 ರ ನಡುವೆ ಆದಾಯ / ಪಿಎಟಿ ಬೆಳವಣಿಗೆಯಿಂದ 11.7% / 35.2% ರಷ್ಟು ಆದಾಯವನ್ನು ನಿರೀಕ್ಷಿಸುತ್ತಿದೆ. ಮ್ಯಾನೆಜ್ಮೆಂಟ್ ಗೈಡೆನ್ಸ್ ಗೆ ಅನುಗುಣವಾಗಿ ಮಾರ್ಜಿನ್ 20% ಕ್ಕಿಂತ ಹೆಚ್ಚು ಮುಂದುವರಿಯುತ್ತದೆ ಅನ್ನುವುದು ನಮ್ಮ ನಿರೀಕ್ಷೆ. ಫಂಡಮೆಂಟಲ್ ಅನಾಲಿಸಿಸ್ 4 ಭಾಗಗಳನ್ನು ಹೊಂದಿದೆ - ಅಂದರೆ: ಮ್ಯಾಕ್ರೋ ಎಕನಾಮಿಕ್ಸ್ ಅನಾಲಿಸಿಸ್, ಅದು ಎಕಾನಮಿ ಮೇಲೆ ಗಮನ ಹರಿಸುತ್ತದೆ ಮತ್ತು ಕಂಪನಿಯ ಮೇಲೆ ಪರಿಣಾಮ ಬೀರುವ ಅಂಶಗಳ ಮೇಲೆ ಕೇಂದ್ರೀಕರಿಸಿದೆ. ಸಿಚುಯೇಷನ್ ಅನಾಲಿಸಿಸ್ ಇದು ​ ಸಂಬಂಧಿತ ವಲಯದ ಮೌಲ್ಯಮಾಪನ ಮಾಡುತ್ತದೆ . ಫೈನಾಸಿಯಲ್ ಅನಾಲಿಸಿಸ್. ಮ್ಯಾಕ್ರೋ ಎಕನಾಮಿಕ್ಸ್ ಅನಾಲಿಸಿಸ್ಗಾಗಿ ನೀವು ಸರಕಾರಿ ವೆಬ್ ಸೈಟ್ ಗಳು ಹಾಗು ಫೈನಾನ್ಸಿಯಲ್ ನ್ಯೂಸ್ ಪೇಪರ್ ಗಳಲ್ಲಿ ಇದರ ಕುರಿತಾಗಿ ತಿಳಿದು ಕೊಳ್ಳಬಹುದು. ಐಬಿಇಎಫ್ ಪ್ರಕಾರ, 2020-21ರ ಅಧಿಕೃತ ಅಂದಾಜಿನ ಪ್ರಕಾರ, "ಪ್ರಸ್ತುತ ಬೆಲೆಯಲ್ಲಿ ಭಾರತದ ನೈಜ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) FY 21 ರಲ್ಲಿ 195.86 ಲಕ್ಷ ಕೋಟಿ ರೂ." FY2021 ರಲ್ಲಿ ಮೂರನೇ ಕ್ವಾರ್ಟರ್ನಲ್ಲಿ ಜಿಡಿಪಿ ಬಹುತೇಕ ನೆಗ್ಲಿಜಿಬಲ್ ಆಗಿದೆ, ಆದರೆ ಸ್ವಲ್ಪ ಗ್ರೋಥ್ ಇದ್ದೆ ಇದೆ, ಅದು 0.4% ಇರಬಹುದು ಎಂದು ನ್ಯಾಷನಲ್ ಸ್ಟಾಟಿಕಲ್ ಆಫೀಸ್ ಎಸ್ಟಿಮೇಟ್ ಮಾಡಿದೆ. 2020-2021ರ ಆರ್ಥಿಕ ಸಮೀಕ್ಷೆಯ ಪ್ರಕಾರ FY 2022 ಯಲ್ಲಿ ಜಿಡಿಪಿ ಬೆಳವಣಿಗೆಯನ್ನು 11% ನಿರೀಕ್ಷಿಸಲಾಗಿದೆ. ಹಾಗಾದ್ರೆ ಉತ್ತಮವಾಗಿರುತ್ತೆ,ಅದು ಸಂಭವಿಸುತ್ತದೆ ಎಂದು ಭಾವಿಸೋಣ. ಸರ್ಕಾರ ನವೆಂಬರ್ 2020 ರಲ್ಲಿ ರೂ. 2.65 ಲಕ್ಷ ಕೋಟಿಯ ಪ್ಯಾಕೇಜ್ ಘೋಷಿಸಿದೆ. ಇದರ ಗೋಲ್ ಉದ್ಯೋಗಾವಕಾಶಗಳ ಸೃಷ್ಟಿ ಮತ್ತು ಲಿಕ್ವಿಡಿಟಿ ಒದಗಿಸುವುದು ಪ್ರವಾಸೋದ್ಯಮ, ಏವಿಯೇಷನ್, ನಿರ್ಮಾಣ ಮತ್ತು ರಿಯಲ್ ಎಸ್ಟೇಟ್ಗಳಂತಹ ಅನೇಕ ಕ್ಷೇತ್ರಗಳಲ್ಲಿ ಈಗ ಇದು ಅಗತ್ಯವಾಗಿದೆ. ಈ ಕೆಲವೊಂದು ಪಾಯಿಂಟ್ಗಳನ್ನ ನಾವು ರಿಸರ್ಚ್ ಮಾಡಿ ನೀಡಿದ್ದೇವೆ. ನೀವು ಕೂಡ ಈ ರೀತಿಯ ಅನಾಲಿಸಿಸ್ ಅನ್ನ ಮಾಡಬಹುದಾಗಿದೆ. ನಾವು ಕೇವಲ ನಿಮಗೆ ಮಾರ್ಗದರ್ಶನ ನೀಡ್ತಿದ್ದೇವೆ ಅಷ್ಟೇ. ಮುಂದಿನ ಸ್ಟೆಪ್ ತೆಗೆದುಕೊಳ್ಳುವುದು ನಿಮ್ಮ ಜವಾಬ್ದಾರಿ...... ನೆಕ್ಸ್ಟ್ ಡೆಸ್ಟಿನೇಷನ್ ಇಂಡಸ್ಟ್ರಿ ಅನಾಲಿಸಿಸ್, ಇದನ್ನ ನೀವು ಸೆಕ್ಟರ್ ಅನಾಲಿಸಿಸ್ ಅಂತಾನೂ ಹೇಳ್ಬಹುದು. ಸೆಕ್ಟರ್ ಅನಾಲಿಸಿಸ್ಗೆ ನೀವು ಕಂಪನಿಯ ಕಾರ್ಯಾಚರಣೆಯ ವಲಯಕ್ಕೆ ಸಂಬಂಧಿಸಿದ ಸುದ್ದಿಗಳ ಮೇಲೆ ನಿಗಾ ಇಡಬೇಕಾಗಬಹುದು. ಯಾವುದೇ ಸುದ್ದಿಗಳನ್ನು ತಪ್ಪಿಸದಂತೆ ಗೂಗಲ್ ಅಲರ್ಟ್ ಅನ್ನ ಕೂಡ ಸೆಟ್ ಮಾಡ ಬಹುದು. ಇದಿಷ್ಟು ಮೈಂಡ್ ಟ್ರೀ ಗೆ ಸಂಬಂದಿಸಿದ ಕೆಲವು ವಿಷಯಾಗಳು: ಐಟಿ ವಲಯದಿಂದ ದೇಶದ ಜಿಡಿಪಿಗೆ 8% ನ ಕೊಡುಗೆ ಇದೆ ​2021 ರ ಹಣಕಾಸು ವರ್ಷದಲ್ಲಿ ಐಟಿ ವಲಯದ ದೇಶೀಯ ಆದಾಯ 45 ಬಿಲಿಯನ್ ಡಾಲರ್ ಈ ಎರಡು ಪಾಯಿಂಟ್ಸ್ ನಿಂದ ಐಟಿ ಸೆಕ್ಟರ್ನ ಪ್ರಸ್ತುತ ಪೊಟೆಂಟಿಯಾಲ್ ಸ್ಪಷ್ಟವಾಗಿದೆ. ನಿಮಗೆ ನೆನಪಿದ್ಯಾ, ನಾವು ಕೆಲವೊಂದು ಮುಖ್ಯ ಇಂಡಸ್ಟ್ರೀಸ್ ಬಗ್ಗೆ ಚರ್ಚೆ ಮಾಡಿದ್ವಿ ಅದರಲ್ಲಿ ಮೈಂಡ್ ಟ್ರೀ ಸರ್ವಿಸಸ್ ಅಂಡ್ ಮ್ಯಾನುಫ್ಯಾಕ್ಚರಿಂಗ್ ಕೂಡ ಒಂದು. ಈ ವರ್ಷದ ಆರಂಭದಲ್ಲಿ ಸರ್ಕಾರ ದ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ (ಮೀಟಿವೈ) ದೊಡ್ಡ ಪ್ರಮಾಣದ ಎಲೆಕ್ಟ್ರಾನಿಕ್ಸ್ ಉತ್ಪಾದನೆ ಗೆ ಎರಡನೇ ರೌಂಡ್ ಗೆ ಕ ಅಪ್ಲಿಕೇಶನ್‌ಗಳನ್ನ ಉತ್ಪಾದನೆಗೆ-ಸಂಬಂಧಿತ ಪ್ರೋತ್ಸಾಹಕ (ಪಿಎಲ್‌ಐ) ಯೋಜನೆಯಡಿ ಆಹ್ವಾನಿಸಿದೆ. ಡಿಸ್ಪ್ಲೇ ಫ್ಯಾಬ್ರಿಕೇಶನ್ ಮತ್ತು ಮೊಬೈಲ್ ಹಾರ್ಡ್‌ವೇರ್ ತಯಾರಿಕೆಗಾಗಿ ಸರ್ಕಾರವು ಪ್ರೋತ್ಸಾಹಕ ಯೋಜನೆಯನ್ನು ಪ್ರಾರಂಭಿಸಿದೆ. ಯೆ 2 ಬೆಳವಣಿಗೆಗಳಿಂದಾಗಿ - ಮೈಂಡ್‌ಟ್ರೀ ಯ ಒಂದು-ಎರಡು ಫೀಡರ್ ವಲಯವು ಸಕ್ರಿಯಗೊಳ್ಳುತ್ತದೆ, ಅವುಗಳೆಂದರೆ ಉತ್ಪಾದನೆ ಮತ್ತು ಟೆಕ್ ಮತ್ತು ಮೇಕ್ ಇನ್ ಇಂಡಿಯಾದಿಂದಾಗಿ ಉತ್ಪಾದನಾ ವಲಯದಲ್ಲಿ ಬೆಳವಣಿಗೆ ಆಗಬಹುದು. ಮೈಂಡ್‌ಟ್ರೀ ಬಿಎಫ್‌ಎಸ್‌ಐ ವಲಯದಲ್ಲಿ ಸಹ ಐಟಿ ಸೇವೆಗಳನ್ನು ಒದಗಿಸುತ್ತದೆ ಅಲ್ಲಿಂದ ಭಾರಿ ಬದಲಾವಣೆಗಳು ಆಗ್ತಿವೆ - ಫಿನ್ಟೆಕ್ ಜನರು ಹೂಡಿಕೆ ಮಾಡುವ, ಸಾಲ ಪಡೆಯುವ, ಪಾವತಿಸುವ, ವರ್ಗಾವಣೆ ಮಾಡುವ ವಿಧಾನದಲ್ಲಿ ಕ್ರಾಂತಿಯುಂಟು ಮಾಡಿದೆ ಮತ್ತು ಬಿಎಫ್‌ಎಸ್‌ಐ ಸ್ಟ್ರೀಮ್ ಲೈನ್ ಅಥವಾ ಐಟಿ ಇನ್ಫ್ರಾಸ್ಟ್ರಕ್ಚರ್ ಅನ್ನ ಅಪ್ಡೇಟ್ ಮಾಡುವಾಗ ಐಟಿ ಸರ್ವಿಸ್ ಪ್ರೊವೈಡರ್ಗಳು ಸಾಕಷ್ಟು ಪ್ರಾಜೆಕ್ಟ್ ಗಳನ್ನ ನೋಡಬಹುದು. ಮೈಂಡ್ ಟ್ರೀ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನ ಪ್ರೊವೈಡರ್ ಆಗಿದೆ ಮತ್ತು ಈ ವರ್ಷ ಬಿಎಫ್‌ಎಸ್‌ಐ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನ ಕ್ರಾಂತಿ ಶುರು ಆಗಿದೆ. ಸಿಚುಯೇಶನ್ ಅನಲೈಜ್ ಮಾಡಬೇಕು ಆದ್ರೆ ನಿಮ್ಮದೇ ಆದದನ್ನು ತೆಗೆದುಕೊಳ್ಳಿ - ಅಥವಾ ಬೇರೆಯವರ ವಿಶ್ಲೇಷಣೆಗೆ ಒಂದು ಸ್ವಲ್ಪ ಉಪ್ಪನ್ನ ಬೆರೆಸಿ ಯಾಕಂದ್ರೆ ಪರಿಸ್ಥಿತಿ ಅನಿಶ್ಚಿತತೆಯಿಂದ ಕೂಡಿದೆ. ಇಷ್ಟಾನ್ನಂತೂ ಹೇಳಬಹುದು: ಕಂಪನಿಗಳು ತಮ್ಮ ವ್ಯವಹಾರವನ್ನು ಕೈಗೊಳ್ಳಲು ಮಾರ್ಗಗಳನ್ನು ಕಂಡುಕೊಳ್ಳುತ್ತಿವೆ ಮತ್ತು ಜನರು ಕೆಲಸ ಮಾಡಲು, ಪ್ರಯಾಣಿಸಲು, ವಾಸಿಸಲು ಮತ್ತು ಜೀವನವನ್ನು ಸಮಂಜಸವಾದ ಮುನ್ನೆಚ್ಚರಿಕೆಗಳೊಂದಿಗೆ ಆನಂದಿಸಲು ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಜೊತೆಗೆ ಜನರು ಕೂಡ ಎಂಜಾಯ್ ಮಾಡಲು ಬಯಸ್ತಾ ಇದಾರೆ ಹಾಗಾಗಿ ಖರ್ಚು ಕೂಡ ಆಗುತ್ತಿದೆ. ಮತ್ತೆ ಇದೀಗ ನಮ್ಮ ದೇಶದಲ್ಲಿ ಅನ್ಲಾಕ್ ಪ್ರಾರಂಭವಾಗಿದೆ ಇದರಿಂದಾಗಿ ಈ ಸಮಯದಲ್ಲಿ ಪರಿಸ್ಥಿತಿ ಸ್ವಲ್ಪ ಉತ್ತಮವಾಗಿದೆ. ಇನ್ನೊಂದು ವಿಷಯವೆಂದರೆ ಪ್ರಸ್ತುತ ಕಾಲದಲ್ಲಿ ಐಟಿ ಸೇವೆಗಳ ಬೇಡಿಕೆ ಹೆಚ್ಚಾಗಿದೆ -ಸಾಂಕ್ರಾಮಿಕವು ಸ್ವಲ್ಪ ವ್ಯತ್ಯಾಸವನ್ನುಂಟು ಮಾಡಿತು, ಹಾಗಾಗಿ ಈ ಸೇವೆಗಳಿಗೆ ಬೇಡಿಕೆ ಹೆಚ್ಚಿದೆ. ಫೈನಾನ್ಶಿಯಲ್ ಅನಲೈಸಿಸ್ ಗೆ ನೀವು ಕಂಪನಿಯ ಮೂರರಿಂದ ಐದು ವರ್ಷಗಳ ಬ್ಯಾಲೆನ್ಸ್ ಶೀಟ್ ಅನ್ನ ನೋಡಬೇಕಾಗುತ್ತದೆ. ಅದರ ಅಸೆಟ್ ವರ್ಸೆಸ್ ಲೈಯಬಿಲಿಟಿಸ್ ಮತ್ತು ರೆವೆನ್ಯೂ ವರ್ಸೆಸ್ ಎಕ್ಸ್ಪೆಂಡಿಚರ್ ಅನ್ನ ಚೆಕ್ ಮಾಡಿ. ಮೈಂಡ್‌ಟ್ರೀ ಹೇಳಿಕೆಯ ಪ್ರಕಾರ, ಇದು ಎಫ್‌ವೈ 21 ರ ಕೊನೆಯ ತ್ರೈಮಾಸಿಕದಲ್ಲಿ 5.2% ನಷ್ಟು ಆದಾಯದ ಬೆಳವಣಿಗೆಯನ್ನು ಕಂಡಿದೆ.ಇತರರ ಹೇಳಿಕೆಯ ಪ್ರಕಾರ ಫೈನಾಸಿಯಲ್ ಸರ್ವಿಸ್ಗಳು ನಡೆಯುವುದಿಲ್ಲ ಹೋಗುವುದಿಲ್ಲ - ಪ್ರಶ್ನಾರ್ಹ ಸಂಖ್ಯೆಗಳ ಮೇಲೆ ವಿವರಿಸುವುದು ಸುಲಭ. ಹೂಡಿಕೆಗೂ ಮುನ್ನನೀವೂ ರಿಸೆರ್ಚ್ ಮಾಡಿ. ಸ್ನೇಹಿತರೆ , ಫಂಡಮೆಂಟಲ್ ಅನಲೈಸಿಸ್ ಹೀಗೆ ಮಾಡಲಾಗುತ್ತದೆ. ಅದನ್ನು ನೀವೂ ಅಭ್ಯಾಸವನ್ನಾಗಿ ಮಾಡಿ ಕೊಳ್ಳಿ. ನಿಮಗೆ ಇದು ಇಷ್ಟ ಆಗಿದ್ರೆ ನಿಮ್ಮಂತಹ ಇತರ ಹೂಡಿಕೆದಾರರಾದ ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಇದನ್ನ ಶೇರ್ ಮಾಡಿ. ನಾವು ಇನ್ನೂ ಇಂತಹದೇ ಇನ್ನಷ್ಟು ಫಂಡಮೆಂಟಲ್ ಅನಲೈಸಿಸ್ ಪಾಡ್‌ಕಾಸ್ಟ್‌ಗಳನ್ನು ಮಾಡುತ್ತೇವೆ . ಸರಿ ಸ್ನೇಹಿತರೆ, ಇವತ್ತಿನ ಪಾಡ್ಕ್ಯಾಸ್ಟ್ ನಲ್ಲಿ ಇದಿಷ್ಟೇ. ಹೊರಡುವ ಮೊದಲು, ಷೇರು ಮಾರುಕಟ್ಟೆ ಹೂಡಿಕೆಯಲ್ಲಿ ಯಾವಾಗಲೂ ಅಪಾಯವಿರುತ್ತದೆ ಮತ್ತು ಒಂದು ವಿಷಯವನ್ನು ನೆನಪಿಡಿ. ಈ ಪಾಡ್ಕ್ಯಾಸ್ಟ್ ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ ಮಾಡಲಾಗಿದೆ. ಇಂತಹ ಇನ್ನಷ್ಟು ಆಸಕ್ತಿದಾಯಕ ಪಾಡ್ಕಾಸ್ಟ್ಗಳಿಗಾಗಿ ಯೂಟ್ಯೂಬ್ ಮತ್ತು ಇತರ ಸಾಮಾಜಿಕ ಮಾಧ್ಯಮ ಚಾನೆಲ್ಗಳ ಮೂಲಕ ನಮ್ಮನ್ನು ಫಾಲೋ ಮಾಡಿ. ಮಾರುಕಟ್ಟೆಯಲ್ಲಿನ ಹೂಡಿಕೆಗಳು ಮಾರುಕಟ್ಟೆಯ ಅಪಾಯಗಳಿಗೆ ಒಳಪಟ್ಟಿರುತ್ತವೆ. ಹೂಡಿಕೆ ಮಾಡುವ ಮೊದಲು ಎಲ್ಲಾ ಸಂಬಂಧಿತ ದಾಖಲೆಗಳನ್ನು ಎಚ್ಚರಿಕೆಯಿಂದ ಓದಿ.