Fundamental Analysis of Automotive Industry
ಫಂಡಮೆಂಟಲ್ ಅನಾಲಿಸಿಸ್ ಆಫ್ ಸೆಕ್ಟರ್ಸ್: ಆಟೋಮೋಟಿವ್ ಇಂಡಸ್ಟ್ರಿ ನಮಸ್ತೆ ಸ್ನೇಹಿತರೆ, ಏಂಜಲ್ ಒನ್ ನ ಮತ್ತೊಂದು ಇನ್ಸೈಟ್ಫುಲ್ ಪೋಡ್ಕ್ಯಾಸ್ಟ್ಗೆ ಸ್ವಾಗತ.ನಾವಿವತ್ತು ಆಟೋ ಸೆಕ್ಟರ್ ನ ಫಂಡಮೆಂಟಲ್ ಅನಾಲಿಸಿಸ್ ಮಾಡೋಣ. ನಿಮಗೆ ಈಗಾಗಲೇ ತಿಳಿದಿರಬೇಕು ಫಂಡಮೆಂಟಲ್ ಅನಾಲಿಸಿಸ್ ಅಲ್ಲಿ ಕಂಪನಿಯ ಕಳೆದ ಕೆಲವು ವರ್ಷಗಳ ರೆವೆನ್ಯೂ ಮತ್ತು ಲಾಸ್ ಅನ್ನ ನೋಡ್ತಿವಿ. ಹಾಗಾದ್ರೆ ಬನ್ನಿ ಈಗ ನಮ್ಮ ವಿಶೇಷ ಷೇರು ಮಾರುಕಟ್ಟೆ ಸ್ಟೆತೊಸ್ಕೋಪ್ ಮೊಲಕ ಆಟೋಮೋಟಿವ್ ಇಂಡಸ್ಟ್ರಿಯ ಫೈನಾಸಿಯಲ್ ಹೆಲ್ತ್ ಅನ್ನ ಪರಿಶೀಲಿಸೋಣ. ಪ್ರಸ್ತುತ ಈ ಸೆಕ್ಟರ್ನ್ ಬೆಳವಣಿಗೆ: ಆಟೋಮೋಟಿವ್ ವಿತರಕರ ಸಂಘಗಳ ಒಕ್ಕೂಟವಾದ ಎಫ್‌ಎಡಿಎ ಜೂನ್ 2021 ರ ವರದಿಯ ಪ್ರಕಾರ, ಆಟೋಮೋಟಿವ್ ಉದ್ಯಮವು 22.6% ಬೆಳವಣಿಗೆಯನ್ನ ಕಂಡಿದೆ. ಇದಂತೂ ಉತ್ತಮವಾಗಿದೆ! ಅಲ್ವಾ? ಆದರೆ ನಿರೀಕ್ಷಿಸಿ, ಈ ಬೆಳವಣಿಗೆಯು 2019 ರ ಜೂನ್ ತಿಂಗಳುಗಿಂತ 28% ಕಡಿಮೆಯಾಗಿದೆ. ಆದರೆ , ಲಾಕ್ ಡೌನ್ ನಡುವೆಯೂ, ಈ ಗ್ರೋಥ್ ಒಂದು ದೊಡ್ಡ ವಿಷಯ. ಬಹುಶಃ ಈ ಬೆಳವಣಿಗೆಯನ್ನು ನಾವು ಮತ್ತಷ್ಟು ಎಕ್ಸ್ಪ್ಲೋರ್(explore) ಮಾಡೋದು ಒಳ್ಳೆಯದು .ಈ ಬೆಳವಣಿಗೆಗೆ ಯಾವ ಆಟೋಮೋಟಿವ್ ವಿಭಾಗಗಳು ಹೆಚ್ಚು ಕೊಡುಗೆ ನೀಡಿವೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.ಇದರಿಂದಾಗಿ ಯಾವ ಕಂಪನಿಗಳ ಮೇಲೆ ಉತ್ತಮ ಹೂಡಿಕೆ ಮಾಡಬಹು ಅಂತ ನಾವು ಅಂತಿಮವಾಗಿ ತಿಳಿಯಬಹುದು. ಟ್ರಕ್ಗಳು ಮತ್ತು ಬಸ್ಸುಗಳು 236% ರಷ್ಟು ಗ್ರೋಥ್ ಆಗಿದೆ. ಕಾರು ಮತ್ತು SUV ಗಳಲ್ಲಿ 43% ಗ್ರೋಥ್ ಆಗಿದೆ. ಥ್ರೀ ವೀಲರ್...... ರಿಕ್ಷಾಗಳ ರೆಜಿಸ್ಟ್ರೇಷನ್ಗಳಲ್ಲಿ 22% ಗ್ರೋಥ್ ಆಗಿದೆ. ದ್ವಿಚಕ್ರ ವಾಹನಗಳು ಮತ್ತು ಟ್ರ್ಯಾಕ್ಟರ್‌ಗಳು ಕ್ರಮವಾಗಿ ಕೇವಲ 17% ಮತ್ತು 14% ರಷ್ಟು ಬೆಳವಣಿಗೆಯನ್ನು ಕಂಡಿವೆ. ಪ್ರಯಾಣಿಕರ ವಾಹನಗಳ ಮಾರಾಟವು ಮೇ ತಿಂಗಳಲ್ಲಿ 85,733 ಯುನಿಟ್‌ಗಳಿಂದ ಜೂನ್‌ನಲ್ಲಿ 1,84,134 ಕ್ಕೆ ಏರಿದೆ.
ವಾಣಿಜ್ಯ ವಾಹನಗಳು 103% ರಷ್ಟು ಹೆಚ್ಚಾಗಿದೆ. ವಾಣಿಜ್ಯ ವಾಹನಗಳಲ್ಲಿ ಬೆಳವಣಿಗೆ ಅತಿ ಹೆಚ್ಚು ಎಂಬುದು ಸ್ಪಷ್ಟವಾಗಿದೆ, ಆದರೆ ಈ ಬೇಡಿಕೆಯು "ಸಾಮಾನ್ಯ ಸಮಯ" ಗಿಂತ 70% ಕಡಿಮೆ ಎಂದು ಒಪ್ಪಿಕೊಳ್ಳುವುದು ಸಹ ಮುಖ್ಯವಾಗಿದೆ ... ಇನ್ಸಿಡೆಂಟ್ ಲಿ(incidentally), ಮೇ 2021 ರ ಅವಧಿಯಲ್ಲಿ ಮಾರಾಟದ ಪ್ರಮಾಣದಲ್ಲಿ ಮಾರುತಿ, ಮಾರ್ಕೆಟ್ ಲೀಡರ್ ಆಗಿದೆ. ಅಲ್ಪ ಮತ್ತು ದೀರ್ಘಾವಧಿಯ ಪ್ರೊಜೆಕ್ಷನ್ ಗಳು : ಲಾಕ್ ಡೌನ್ ಮುಗಿತಿರೊದ್ರಿಂದ ಮತ್ತು ಡೀಲರ್ ಗಳು ತಮ್ಮ ಶಟರ್ಸ್ ಅನ್ನ ಓಪನ್ ಮಾಡೋದ್ರಿಂದ ಈ ಗ್ರೋಥ್ ಮುಂದಿನ ಕೆಲ ತಿಂಗಳುಗಳು ಮುಂದುವರಿಬಹುದು .
FADA ಅಧ್ಯಕ್ಷರ ಪ್ರಕಾರ ಕಾರುಗಳ ಬೇಡಿಕೆ ಹೆಚ್ಚಾಗಿದೆ, ಏಕೆಂದರೆ ಇದೀಗ ಸಾರ್ವಜನಿಕ ಸಾರಿಗೆಯನ್ನು ಪಡೆಯುವುದು ಕಷ್ಟ ಮತ್ತು ರಿಸ್ಕಿ ಕೂಡ ಹೌದು. ಮುಂದಿನ ಐದು ವರ್ಷಗಳಲ್ಲಿ ಭಾರತೀಯ ವಾಹನ ಉದ್ಯಮದ ಮೌಲ್ಯವು 16 ರಿಂದ 18 ಟ್ರಿಲಿಯನ್ ರೂಪಾಯಿಗಳನ್ನು ಮುಟ್ಟುವ ನಿರೀಕ್ಷೆಯಿದೆ, ಅಂದರೆ 2026 ರ ವೇಳೆಗೆ. Catalysts for growth: ಲಾಕ್‌ಡೌನ್ ಮುಗಿದು ಜನ ಜೀವನ ಯಥಾಸ್ಥಿತಿಗೆ ಬರುವುದರಿಂದ ಇದು ವಾಹನ ವಲಯದ ಸುಧಾರಿತ ಕಾರ್ಯಕ್ಷಮತೆಗೆ ಸಹಕಾರಿಯಾಗುತ್ತದೆ, ವಾಹನ ವಲಯದ ಆರ್ಥಿಕ ಸ್ಥಿತಿಗತಿಗಳಿಗೆ ಸಹಾಯ ಮಾಡುವಂತಹ ಅನೇಕ ಇತರ ಬೆಳವಣಿಗೆಗಳು ಇವೆ. ಇದಕ್ಕಾಗಿ ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ: ಈಗ ಆಟೋಮೋಟಿವ್ ರೂಟ್ ಗೆ 100% FDI ಗೆ ಅನುಮತಿ ಇದೆ. ಇದನ್ನ ಬಾರ್ ಅನ್ನು ಹೆಚ್ಚಿಸುವ ಮತ್ತು ಆಟೋ ವಲಯದಲ್ಲಿ ಸ್ಪರ್ಧೆಯನ್ನು ಹೆಚ್ಚಿಸುವ ಗುರಿಯೊಂದಿಗೆ ಸರ್ಕಾರವು ಇದಕ್ಕೆ ಅವಕಾಶ ನೀಡಿದೆ. ವಿಶೇಷವಾಗಿ ಸಣ್ಣ ಕಾರುಗಳು, ದ್ವಿಚಕ್ರ ವಾಹನಗಳು ಮತ್ತು ಟ್ರಾಕ್ಟರುಗಳಿಗೆ ಭಾರತವು ಗ್ಲೋಬಲ್ ಹಬ್ ಆಗ್ಲಿ ಅಂತ ಸರಕಾರ ಬಯಸ್ತಿದೆ. ಮಿನಿಸ್ಟ್ರಿ ಆಫ್ ರೋಡ್ ಅಂಡ್ ಹೈವೇಸ್ ಕಳೆದ ಮಾರ್ಚ್ ನಲ್ಲಿ ವೆಹಿಕಲ್ scrapping policy ಅನ್ನ ತೆಗೆದುಕೊಂಡು ಬಂದಿತು. ಈದರ ಉದ್ದೇಶ ಪೊಲ್ಯೂಷನ್ ಅನ್ನ ಕಡಿಮೆ ಮಾಡಿವುದು ಆದ್ರೂ ಇದರ ಜೊತೆಗೆ ಹೊಸ ವಾಹನಗಳಿಗೆ ಡಿಮ್ಯಾಂಡ್ ಕೂಡ ಹೆಚ್ಚಾಗ್ತಾ ಇತ್ತು. ಮುಂದಿನ ದಿನಗಳಲ್ಲಿ 10000 ಕೋಟಿ ಇನ್ವೆಸ್ಟ್ಮೆಂಟ್ ಅನ್ನ ಆಟೋ ಸೆಕ್ಟರ್ ಮೇಲೆ ಮಾಡುವ ಉದ್ದೇಶ ಇದೆ ಅಂತ ಸರಕಾರದ ಪ್ರೆಸ್ ಸ್ಟೇಟ್ಮೆಂಟ್ ಅಲ್ಲಿ ಹೇಳಿದೆ , ನಾಟ್ ಟು ಮೆನ್ಷನ್ 35000 ನ್ಯೂ ಜಾಬ್ಸ್. ಕೆಲವು ಹೂಡಿಕೆದಾರರು ಉದ್ಯೋಗ ಉತ್ಪಾದನೆಯಂತಹ ಅಂಶಗಳನ್ನ ಕೂಡ ಹೂಡಿಕೆ ಮಾಡುವಾಗ ಗಣನೆಗೆ ತೆಗದುಕೊಳ್ತಾರೆ, ಅದಕ್ಕಾಗಿಯೇ ನಾನು ಈ ಅಂಕಿ ಅಂಶವನ್ನ ಕೂಡ ಇಲ್ಲಿ ಹೇಳಿದ್ದೇನೆ. ಆಟೋಮೋಟಿವ್ ರಿಟೇಲ್ ಅನ್ನ ಮಧ್ಯಮ ಮತ್ತು ಸಣ್ಣ ಉದ್ಯಮಗಳ ಪಟ್ಟಿಗೆ ಸೇರಿಸಲಾಗಿದೆ . ಇದರಿಂದಾಗಿ ಓವರ್- ಹೆಡ್ ಆಗುವ ಸಾಧ್ಯತೆ ಇದೆ.... ಮೊರ್ ಡೀಲರ್ಸ್ ಕುಡ್ ಮೀನ್ ಮೊರ್ ಬಯೆರ್ಸ್(more dealers could mean more buyers. ). ಇದೀಗ 57,000 ಕೋಟಿ ರೂ.ಗಳ ಬಜೆಟ್‌ನೊಂದಿಗೆ ಪ್ರೊಡಕ್ಷನ್ ಲಿಂಕ್ಡ್ ಪ್ರೋತ್ಸಾಹಕ ಯೋಜನೆ ಸಹ ವಾಹನ ವಲಯಕ್ಕೆ ಬಂದಿದೆ. ಇದೇನು ಹೊಸ ವಿಷಯ ಅಲ್ಲ ಆದರೆ ತಿಳಿಯುವು ಮುಖ್ಯ. ಆಟೋಮೋಟಿವ್ ಸೆಕ್ಟರ್ ಗಾಗಿ ಸರಕಾರ ಎರಡನೇ ಹಂತದ FAME ಯೋಜನೆಗೆ ಚಾಲನೆ ನೀಡಿದೆ. 2019 ರಿಂದ 2022 ರವರೆಗೆ ಭಾರತದಲ್ಲಿ ವಾಹನಗಳ ಬೇಡಿಕೆ ಸೃಷ್ಟಿಸಲು ಸುಮಾರು 10,000 ಕೋಟಿ ರೂ. ಇನ್ವೆಸ್ಟ್ ಮಾಡುವ ಉದ್ದೇಶ ಹೊಂದಿತ್ತು. ಇತರ ಅಂಶಗಳು growth catalystಗಳಾಗಿ ಪರಿಣಮಿಸಬಹುದು : ಹೊಸ ನೀತಿಯ ಪ್ರಕಾರ ಯಾರಿಗೆ ಖರ್ಚನ್ನ ಭರಿಸುವ ಶಕ್ತಿ ಇದೆಯೋ ಅವ್ರು ಹೊಂದಬಹುದು ಮತ್ತು ಪಬ್ಲಿಕ್ ಟ್ರಾನ್ಸ್ಪೋರ್ಟ್ ಬಳಸುವ ಅವಶ್ಯಕತೆ ಇಲ್ಲ. ಇದು ಫ್ಯಾಮಿಲಿ ಕಾರ್ ಗಳ ಬೇಡಿಕೆಯನ್ನ ಹೆಚ್ಚಿಸುತ್ತೆ. ಜನರು ತಮ್ಮ ಕಾರ್ಬನ್ ಫುಟ್ ಪ್ರಿಂಟ್ ನ್ನು ಹೆಚ್ಚು ಅರಿತುಕೊಂಡಂತೆ ಮತ್ತು ಹೆಚ್ಚಿನ ಆಯ್ಕೆಗಳು ಲಭ್ಯವಾಗುತ್ತಿದ್ದಂತೆ ಜನರು ತಮ್ಮ ಸ್ವಂತ ಕಾರುಗಳಿಗೆ ಎಲೆಕ್ಟ್ರಿಕ್ ವಾಹನಗಳನ್ನು ಸೇರಿಸಬಹುದು. ಕಮರ್ಷಿಯಲ್ ವಾಹನಗಳಿಗೆ ಬೇಡಿಕೆ ಹೆಚ್ಚ ಬಹುದು. ವಿಚ್ ಆಟೋ ಸ್ಟಾಕ್ ರಿಪ್ ಫಾರ್ ಇನ್ವೆಸ್ಟ್ಮೆಂಟ್? ಯಾವ ಸ್ಟಾಕ್‌ಗಳು ನಿಮಗೆ ಒಳ್ಳೆಯದು ಎಂದು ಏಂಜಲ್ ಬ್ರೋಕಿಂಗ್ ನಿಮಗೆ ಹೇಳಲು ಸಾಧ್ಯವಿಲ್ಲ. ಮತ್ತು ಯಾವುದೇ ಮೂರನೇ ವ್ಯಕ್ತಿಯು ನಿಮಗೆ ಅಂತಹ ಮಾಹಿತಿಯನ್ನು ನೀಡಲು ಸಾಧ್ಯವಿಲ್ಲ. ನಿಮ್ಮ ಹಣಕಾಸು ಸಲಹೆಗಾರರು ಸರಿಯಾದ ಆಯ್ಕೆ ಮಾಡಲು ನಿಮಗೆ ಸಹಾಯ ಮಾಡಬಹುದು, ಆದರೆ ಅಂತಿಮ ತೀರ್ಮಾನ ನಿಮ್ಮದೇ ಆಗಿದೆ. ಹೌದು ನಾನು ಹೇಳಲಿದ್ದೇನೆ ಆದರೆ ಇದು ನಮ್ಮ ಉನ್ನತ ಆಯ್ಕೆಗಳು. ಸ್ಟಾಕ್ ಬೆಲೆ ಬೆಳವಣಿಗೆಯನ್ನು ಯಾರೂ ನಿಮಗೆ ಖಾತರಿಪಡಿಸುವುದಿಲ್ಲ ಮತ್ತು ಯಾರಾದರೂ ಈ ಗ್ಯಾರಂಟಿ ನೀಡಿದರೆ ದಯವಿಟ್ಟು suspicious ಆಗಿರಿ. ಯಾಕಂದ್ರೆ ಸ್ಟಾಕ್ ಮಾರ್ಕೆಟ್ unpredictable ಆಗಿದೆ. ಏಂಜಲ್ ಬ್ರೋಕಿಂಗ್ ನ ಕೆಲವು ಟಾಪ್ ಆಯ್ಕೆಗಳು ಹೀಗಿವೆ: ಅಶೋಕ್ ಲೇಲ್ಯಾಂಡ್ ಎಸ್ಕಾರ್ಟ್ಸ್ ಜಿಎನ್ಎ ಆಕ್ಸಲ್ಸ್ ಎನ್ಆರ್ಬಿ ಬೇರಿಂಗ್ಗಸ್.
ಇದಾಗಿತ್ತು ಆಟೋಮೋಟಿವ್ ಕ್ಷೇತ್ರದ ಸಂಪೂರ್ಣ ಚಿತ್ರ. ನೀವು ಹೂಡಿಕೆ ಮಾಡಲು ಉತ್ಸುಕರಾಗಿದ್ದರೆ, ಮುಂದೆ ಹೋಗುವ ಮೊದಲು ನಿಮ್ಮ ರಿಸ್ಕ್ ಟೇಕಿಂಗ್ ಕೆಪ್ಯಾಸಿಟಿ, ಫೈನಾನ್ಸಿಯಲ್ ಗೋಲ್ ಮತ್ತು ಇನ್ವೆಸ್ಟ್ಮೆಂಟ್ ಹಾರಿಜಾನ್ ಅನ್ನು ಪರಿಗಣಿಸಿ. ಸರಿ ಸ್ನೇಹಿತರೆ, ಇವತ್ತಿನ ಪಾಡ್ಕ್ಯಾಸ್ಟ್ ನಲ್ಲಿ ಇದಿಷ್ಟೇ. ಹೊರಡುವ ಮೊದಲು, ಷೇರು ಮಾರುಕಟ್ಟೆ ಹೂಡಿಕೆಯಲ್ಲಿ ಯಾವಾಗಲೂ ಅಪಾಯವಿರುತ್ತದೆ ಮತ್ತು ಒಂದು ವಿಷಯವನ್ನು ನೆನಪಿಡಿ. ಈ ಪಾಡ್ಕ್ಯಾಸ್ಟ್ ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ ಮಾಡಲಾಗಿದೆ. ಇಂತಹ ಇನ್ನಷ್ಟು ಆಸಕ್ತಿದಾಯಕ ಪಾಡ್ಕಾಸ್ಟ್ಗಳಿಗಾಗಿ ಯೂಟ್ಯೂಬ್ ಮತ್ತು ಇತರ ಸಾಮಾಜಿಕ ಮಾಧ್ಯಮ ಚಾನೆಲ್ಗಳ ಮೂಲಕ ನಮ್ಮನ್ನು ಫಾಲೋ ಮಾಡಿ. ಅಲ್ಲಿವರೆಗೆ ಗುಡ್ ಬೈ ಮತ್ತು ಹ್ಯಾಪಿ ಇನ್ವೆಸ್ಟಿಂಗ್! ಸೆಕ್ಯುರಿಟೀಸ್ ಮಾರುಕಟ್ಟೆಯಲ್ಲಿನ ಹೂಡಿಕೆಗಳು ಮಾರುಕಟ್ಟೆಯ ಅಪಾಯಗಳಿಗೆ ಒಳಪಟ್ಟಿರುತ್ತವೆ. ಹೂಡಿಕೆ ಮಾಡುವ ಮೊದಲು ಎಲ್ಲಾ ಸಂಬಂಧಿತ ದಾಖಲೆಗಳನ್ನು ಎಚ್ಚರಿಕೆಯಿಂದ ಓದಿ.