Frequently asked questions about SGBs| Kannada

Podcast Duration: 6:51
ಎಸ್ ಜಿ ಬಿ ಗಳ ಬಗ್ಗೆ ಆಗಾಗ್ಗೆ ಕೇಳಲಾಗುವ ಪ್ರಶ್ನೆಗಳು- ​ನಮಸ್ಕಾರ ಸ್ನೇಹಿತರೆ. ಈ ಪಾಡ್ಕ್ಯಾಸ್ಟ್ ನಲ್ಲಿ ನಾವು ಸವರಿನ್ ಚಿನ್ನದ ಬಾಂಡ್ ಗಳ ಬಗ್ಗೆ ಚರ್ಚೆ ಮಾಡುತ್ತೇವೆ ಮತ್ತು ಸವರಿನ್ ಚಿನ್ನದ ಬಾಂಡ್ ಗಳ ಬಗ್ಗೆ ಅತಿ ಹೆಚ್ಚಾಗಿ ಯಾವ ಪ್ರಶ್ನೆ ಕೇಳಲಾಗುತ್ತದೆ ಎಂದು ತಿಳಿದುಕೊಳ್ಳೋಣ. ನಾವು ಈ ಪ್ರಶ್ನೆಗಳ ಉತ್ತರವನ್ನು ಸಹ ನೀಡುತ್ತೇವೆ. ಸವರಿನ್ ಚಿನ್ನದ ಬಾಂಡ್ಗಳು ಒಂದು ಆಸಕ್ತಿದಾಯಕ ಹೂಡಿಕೆ ಆಯ್ಕೆ ಆಗಿದೆ ಆದರೆ ಇದರ ಬಗ್ಗೆ ಸಾರ್ವಜನಿಕರಿಗೆ ಇದರ ಬಗ್ಗೆ ತುಂಬಾ ಕಡಿಮೆ ತಿಳಿದಿದೆ.ಈ ಹೂಡಿಕೆ ಆಯ್ಕೆಯ ಬಗ್ಗೆ ನೀವು ನಮ್ಮ ಪಾಡ್ಕ್ಯಾಸ್ಟ್ ನಲ್ಲಿ ಮಾಹಿತಿ ಪಡೆಯಿರಿ ಮತ್ತು ಇದು ನಿಮ್ಮ ಹೂಡಿಕೆ ಪೋರ್ಟ್ಫೋಲಿಯೋ ದಲ್ಲಿ ಸೆಟ್ ಆಗುತ್ತದೆಯೇ ಇಲ್ಲವೇ ಎಂದು ನೋಡಿ. ಹೂಡಿಕೆಗೆ ಎರಡು ಅಂಶಗಳಿವೆ . ಒಂದು ಬೆಳವಣಿಗೆ ಮತ್ತು ಎರಡನೆಯದು ಸಂಪತ್ತು ರಕ್ಷಣೆ. ಸವರಿನ್ ಚಿನ್ನದ ಬಾಂಡ್ ಗಳಲ್ಲಿ ಸಂಪತ್ತು ರಚನೆಯ ಒಂದು ಸಣ್ಣ ಆಂಗಲ್ ಇದೆ ಆದರೆ ಇದರಲ್ಲಿ ದೊಡ್ಡ ಆಂಗಲ್ ಇರುವುದು ಸಂಪತ್ತು ಸಂರಕ್ಷಣೆಯದು. ಬನ್ನಿ ಸವರಿನ್ ಚಿನ್ನದ ಬಾಂಡ್ ಗಳ ಬಗ್ಗೆ ಅತಿ ಅಗತ್ಯವಾದ ಮತ್ತು ಮತ್ತೆ ಮತ್ತೆ ಕೇಳಲಾಗುವ ಹತ್ತು ಪ್ರಶ್ನೆಗಳು ಯಾವುವು ಮತ್ತು ಅವುಗಳ ಉತ್ತರ ಏನೆಂದು ನೋಡೋಣ. ​ಮೊದಲನೇ ಪ್ರಶ್ನೆ : ಪ್ರಶ್ನೆ 1: ಸವರಿನ್ ಚಿನ್ನದ ಬಾಂಡ್‌ಗಳು ಎಂದರೇನು ಮತ್ತು ಅವುಗಳನ್ನು ಯಾರು ನೀಡಬಹುದು? ಸವರಿನ್ ಚಿನ್ನದ ಬಾಂಡ್‌ಗಳು ಸರ್ಕಾರ ನೀಡಿದ ಸೆಕ್ಯೂರಿಟಿ ಗಳು. ಮಾರ್ಕೆಟ್ ನಿಂದ ಭೌತಿಕ ಚಿನ್ನ ಖರೀದಿಸಲು ಇದು ಒಂದು ಪರ್ಯಾಯ. ಈ ಬಾಂಡ್ ಆರ್ ಬಿ ಐ ಮೂಲಕ ಒದಗಿಸಲಾಗುತ್ತದೆ . ​ಎರಡನೇ ಪ್ರಶ್ನೆ : ಭೌತಿಕ ಚಿನ್ನದ ಬದಲು ಸವರಿನ್ ಚಿನ್ನದ ಬಾಂಡ್ ಗಳಲ್ಲಿ ಏಕೆ ಹೂಡಿಕೆ ಮಾಡಬೇಕು ? ​ಭೌತಿಕ ಚಿನ್ನವನ್ನು ಖರೀದಿದಾಳು, ಸಂಗ್ರಹಿಸಲು ಮತ್ತು ಮಾರಾಟ ಮಾಡಲು ಸಾಕಷ್ಟು ಸಮಯ ಮತ್ತು ಜಾಗ ಬೇಕಾಗುತ್ತದೆ. ಸವರಿನ್ ಚಿನ್ನದ ಬಾಂಡ್ ಗಳಿಗೆ ಭೌತಿಕ ಚಿನ್ನದಷ್ಟು ಸ್ಥಳ ಬೇಕಾಗುವುದಿಲ್ಲ. ಆದ್ದರಿಂದ ಸಂಗ್ರಹಣೆಯ ವೆಚ್ಚ ಮತ್ತು ಅಪಾಯದಿಂದ ನೀವು ಮುಕ್ತರಾಗಿರುವಿರಿ. ಚಿನ್ನ ಖರೀದಿಸುವಾಗ ಅಥವಾ ಚಿನ್ನದ ಆಭರಣ ಮಾಡಿಸುವಾಗ ಮೇಕಿಂಗ್ ಚಾರ್ಜ್, ಚಿನ್ನದ ಶುದ್ಧತೆ ಮತ್ತು ಇತರ ಹಲವು ಅಂಶಗಳ ಪ್ರಾಮುಖ್ಯತೆ ಇರುತ್ತದೆ . ಸವರಿನ್ ಚಿನ್ನದ ಬಾಂಡ್ ಗಳನ್ನು ಡಿಜಿತಳಾಗಿ ಸಂಗ್ರಹಿಸಲಾಗುತ್ತದೆ ಮತ್ತು ಇದರಿಂದ ನೀವು ಈ ಎಲ್ಲ ವಿಷ್ಯಗಳಿಂದ ಮುಕ್ತರಾಗಿರುವಿರಿ. ​ಮೂರನೇ ಪ್ರಶ್ನೆ : ಸವರಿನ್ ಚಿನ್ನದ ಬಾಂಡ್ ನಲ್ಲಿ ಯಾರೆಲ್ಲ ಹೂಡಿಕೆ ಮಾಡಬಹುದು? ಸವರಿನ್ ಚಿನ್ನದ ಬಾಂಡ್ಗಳಲ್ಲಿ ವ್ಯಕ್ತಿಗಳು, ಟ್ರಸ್ಟ್‌ಗಳು, ದತ್ತಿ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಹಿಂದೂ ಯುನೈಟೆಡ್ ಕುಟುಂಬಗಳು ಹೂಡಿಕೆ ಮಾಡಬಹುದು. ಒಂದು ಭಾರತೀಯ ಸವರಿನ್ ಚಿನ್ನದ ಬಾಂಡ್ ಖರೀದಿಸಿದ ನಂತರ ದೇಶವನ್ನು ಬಿಟ್ಟು ಮತ್ತೊಂದು ದೇಶದಕ್ಕೆ ಹೊರಟರು ಸಹ ಅವರ ಒಡೆತನ ಉಳಿಯುತ್ತದೆ. ​ನಾಲ್ಕನೇ ಪ್ರಶ್ನೆ : ಸವರಿನ್ ಚಿನ್ನದ ಬಾಂಡ್‌ಗಳಲ್ಲಿ ಹೂಡಿಕೆ ಮಾಡುವಾಗ ಕನಿಷ್ಠ ಮತ್ತು ಗರಿಷ್ಠ ಎಷ್ಟು ಹೂಡಿಕೆ ಅನುಮತಿಸಲಾಗುತ್ತದೆ?ನೀವುಸವರಿನ್ ಚಿನ್ನದ ನ್ನದ ಬಾಂಡ್‌ಗಳಲ್ಲಿ ಹೂಡಿಕೆ ಮಾಡುವಾಗ ನೀವು ಕನಿಷ್ಟ 1 ಗ್ರಾಂ ಹೂಡಿಕೆ ಮಾಡಬೇಕು ಮತ್ತು ಅದು ನಾಲ್ಕು ಕೆ ಜಿ ವರೆಗೂ ಹೋಗಬಹುದು . ಆದಾಗ್ಯೂ ನೀವು ಟ್ರಸ್ಟ್, ಅಥವಾ ಅಂತಹುದೇ ಸಂಸ್ಥೆಯಾಗಿದ್ದರೆ, ನಿಮ್ಮ ಹೂಡಿಕೆ 20 ಕಿ.ಗ್ರಾಂ ವರೆಗೆ ಹೋಗಬಹುದು. ಈ ಮೇಲಿನ ಮಿತಿಯನ್ನು ಪ್ರತಿ ವರ್ಷ ನಿಗದಿಪಡಿಸಲಾಗಿದೆ ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ. ಆದ್ದರಿಂದ ನೀವು ವೈಯಕ್ತಿಕ ಹೂಡಿಕೆದಾರರಾಗಿದ್ದರೆ ನೀವು ಪ್ರತಿವರ್ಷ 4 ಕೆಜಿ ಸವರಿನ್ ಚಿನ್ನದ ಬಾಂಡ್‌ಗಳನ್ನು ಖರೀದಿಸಬಹುದು. ನೀವು ಮತ್ತೊಂದೆಡೆ ಟ್ರಸ್ಟ್ ಆಗಿದ್ದರೆ ನೀವು ಪ್ರತಿವರ್ಷ 20 ಕೆಜಿ ಸವರಿನ್ ಚಿನ್ನದ ಬಾಂಡ್‌ಗಳನ್ನು ಖರೀದಿಸಬಹುದು. ಒಂದು ಕುಟುಂಬವು ಒಂದೇ ವರ್ಷದಲ್ಲಿ 4 ಕಿ.ಗ್ರಾಂ ಗಿಂತ ಹೆಚ್ಚು ಹೂಡಿಕೆ ಮಾಡಲು ಬಯಸಿದರೆ ಅವರು ಬಾಂಡ್‌ಗಳನ್ನು ವಿವಿಧ ಕುಟುಂಬ ಸದಸ್ಯರ ಹೆಸರಿನಲ್ಲಿ ಖರೀದಿಸಬಹುದು. ಆದ್ದರಿಂದ ಒಬ್ಬ ಕುಟುಂಬದಲ್ಲಿ 5 ಅರ್ಹ ವ್ಯಕ್ತಿಗಳು ಇದ್ದರೆ ಅವರು ಒಂದು ನಿರ್ದಿಷ್ಟ ವರ್ಷದಲ್ಲಿ 20 ಕೆಜಿ ವರೆಗೆ ಸವರಿನ್ ಚಿನ್ನದ ಬಾಂಡ್‌ಗಳನ್ನು ಖರೀದಿಸಬಹುದು. ಅಪ್ರಾಪ್ತ ವಯಸ್ಕರು ಪಾಲಕರ ಮೂಲಕ ಸವರಿನ್ ಚಿನ್ನದ ಬಾಂಡ್‌ಗಳಲ್ಲಿ ಹೂಡಿಕೆ ಮಾಡಬಹುದು ಎಂಬುದನ್ನು ಸಹ ಗಮನಿಸಬೇಕು. ಐದನೇ ಪ್ರಶ್ನೆ: ಸವರಿನ್ ಚಿನ್ನದ ಬಾಂಡ್‌ಗಳನ್ನು ನಾವು ಎಲ್ಲಿ ಖರೀದಿಸಬಹುದು? ಸವರಿನ್ ಚಿನ್ನದ ಬಾಂಡ್ ಗಳನ್ನು ನಾವು ಭಔತಿಕವಾಗಿ ಅಥವಾ ಡಿಜಿತಳಾಗಿ ಖರೀದಿಸಬಹುದು. ಯಾವುದೇ ಪ್ರದೇಶದಲ್ಲಿ ಬ್ಯಾಂಕ್ ನ ನುಗ್ಗುವಿಕೆ ಇಲ್ಲದಿದ್ದರೆ, ಒಬ್ಬ ಭಾರತೀಯ ಸವರಿನ್ ಚಿನ್ನದ ಬಾಂಡ್ ಗಳನ್ನು ಖರೀದಿಸಲು ಪೋಸ್ಟ್ ಆಫೀಸ್ ಗೆ ಸಹ ಹೋಗಬಹುದು. ಸವರಿನ್ ಚಿನ್ನದ ಬಾಂಡ್ ಗಳನ್ನು ಡಿಜಿತಳಾಗಿ ಖರೀದಿಸುವುದೇ ಅತ್ಯುತ್ತಮ ಆಯ್ಕೆ. ಇದು ಎಲ್ಲರ ಸಮಯ, ಪ್ರಯತ್ನ ಮತ್ತು ಶಕ್ತಿಯನ್ನು ಉಳಿಸುತ್ತದೆ. ಈ ದಿನಗಳಲ್ಲಿ ಎಸ್‌ಜಿಬಿಯ ಆನ್‌ಲೈನ್‌ನಲ್ಲಿ ಹೂಡಿಕೆ ಮಾಡುವುದು ಆಗಾಗ್ಗೆ ಬಳಸುವ ಆಯ್ಕೆಯಾಗಿದೆ. 6 ನೇ ಪ್ರಶ್ನೆ: ಸವರಿನ್ಚಿ ನ್ನದ ಬಾಂಡ್‌ಗಳನ್ನು ಹೇಗೆ ನೀಡಲಾಗುತ್ತದೆ?ಸವರಿನ್ ಚಿನ್ನದ ಬಾಂಡ್‌ಗಳನ್ನು ಟ್ರಾನ್ಚ್ ಗಳಲ್ಲಿ ನೀಡಲಾಗುತ್ತದೆ . ಸವರಿನ್ಚಿ ಚಿನ್ನದ ಬಾಂಡ್ನ್ನ ಹೂಡಿಕೆ ವಿಂಡೋ ತೆರೆಯಲು ಇರುವಾಗ ,ಅದರ ಎರಡು ದಿನಗಳ ಮೊದಲು ಆರ್ ಬಿ ಐ ಅವರ ವೆಬ್‌ಸೈಟ್ ನಲ್ಲಿ ಚಿನ್ನದಮತ್ತು ಸಂಬಂಧಿತ ಶುಲ್ಕವನ್ನು ಬಿಡುಗಡೆ ಮಾಡುತ್ತದೆ. 7 ನೇ ಪ್ರಶ್ನೆ: ಸವರಿನ್ ಚಿನ್ನದ ಬಾಂಡ್‌ಗಳ ಅಧಿಕಾರಾವಧಿ ಏನು? ಸವರಿನ್ ಚಿನ್ನದ ಬಾಂಡ್ಗಳ ಅಧಿಕಾರಾವಧಿ 8 ವರ್ಷಗಳ ಕಾಲ. ಸಾಲ್ ಕಾ ಹೋತಾ ಹೈ. 8 ವರ್ಷಗಳ ನಂತರ ನಿಮ್ಮ ಹೂಡಿಕೆ ಮತ್ತು ಮತ್ತು 2.5 %ಬಡ್ಡಿ ನಿಮ್ಮ ಬ್ಯಾಂಕ್ ಖಾತೆ ಗೆ ವರ್ಗಾಯಿಸಲಾಗುತ್ತದೆ . 8 ನೇ ಪ್ರಶ್ನೆ : ಒಂದು ವೇಳೆ ಸವರಿನ್ ಚಿನ್ನದ ಬಾಂಡ್ ಗಳಿಂದ 8 ವರ್ಷಗಳ ಮೊದಲೇ ನಾವು ತೆಗೆಯಬೇಕಾದರೆ ಏನು ಮಾಡಬೇಕು ? ಒಂದು ವೇಳೆ ನೀವು ಸವರಿನ್ ಚಿನ್ನದ ಬಾಂಡ್ ಗಳನ್ನು 8 ವರ್ಷಗಳ ಮೊದಲೇ ಮಾರಲು ಬಯಸಿದರೆ ನೀವು ೫ ವರ್ಷಗಳ ನಂತರ ನಿಮ್ಮ ಬಾಂಡ್ ಗಳನ್ನು ರಿಡೀಮ್ ಮಾಡಬಹುದು. ನೀವು ನಿಮ್ಮ ಬೂನ್ಡ್ ಗಳನ್ನು ಡಿಜಿತಳಾಗಿ ಖರೀದಿಸಿದ್ದರೆ, ನಿಮ್ಮ ಸವರಿನ್ ಚಿನ್ನ ಬಾಂಡ್ ಗಳು ಎಕ್ಸ್ಚೇಂಜ್ ನಲ್ಲಿ ಟ್ರೇಡಬೆಲ್ ಆಗಿರುತ್ತವೆ. ಇದರರ್ಥ ನೀವು ನಿಮ್ಮ ಸವರಿನ್ ಚಿನ್ನದ ಬಾಂಡ್‌ಗಳನ್ನು ಡಿಮ್ಯಾಟ್ ರೂಪದಲ್ಲಿ ಸಂಗ್ರಹಿಸಿದರೆ ನೀವು ಅದನ್ನು ಆಸಕ್ತಿ ಹೊಂದಿರುವ ಇತರ ಹೂಡಿಕೆದಾರರಿಗೆ ವರ್ಗಾಯಿಸಬಹುದು. ನಿಮ್ಮ ಬಾಂಡ್‌ಗಳನ್ನು ಸಂಬಂಧಿ ಅಥವಾ ಸ್ನೇಹಿತ ಅಥವಾ ಈ ಹೂಡಿಕೆ ವಾಹನಕ್ಕೆ ಅರ್ಹತಾ ಮಾನದಂಡಗಳನ್ನು ಪೂರೈಸುವ ಯಾರಿಗಾದರೂ ನೀವು ಉಡುಗೊರೆಯಾಗಿ ನೀಡಬಹುದು ಅಥವಾ ವರ್ಗಾಯಿಸಬಹುದು. 9 ನೇ ಪ್ರಶ್ನೆ : ಸವರಿನ್ ಚಿನ್ನದ ಬಾಂಡ್ ಗಳು ಸಾಲಗಳ್ಳಿ ನಮಗೆ ಸಹಕರಿಸುತ್ತದೆಯೇ? ಸವರಿನ್ ಚಿನ್ನದ ಬಾಂಡ್ ಗಳು ಖಂಡಿತವಾಗಿಯೂ ಸಾಲ ತೆಗೆದುಕೊಳ್ಳುವ ಸಂದರ್ಭದಲ್ಲಿ ಉಪಯೋಗವಾಗಿರುತ್ತದೆ. ಸವರಿನ್ ಚಿನ್ನದ ಬಾಂಡ್ ಗಳನ್ನು ಕೋಲಾಟರಲ್ ಅಂತೇ ಉಪಯೋಗಿಸಬಹುದು. ನೀವು ಯಾವುದೇ ಬ್ಯಾಂಕ್, ಹಣಕಾಸಿನ ಸಂಸ್ಥೆ, ಅಥವಾ ಯಾವುದೇ ಏನ್ ಬಿ ಎಫ್ ಸಿ ಇಂದ ಸಾಲ ತೆಗೆದುಕೊಳ್ಳುವಾಗ, ಸವರಿನ್ ಚಿನ್ನದ ಬಾಂಡ್ ಗಳನ್ನು ಸಾಧಾರಣ ಚಿನ್ನದಂತೆಯೇ ಉಪಯೋಗಿಸಬಹುದು. ​10 ನೇ ಮತ್ತು ಅಂತಿಮ ಪ್ರಶ್ನೆ : ಸವರಿನ್ ಚಿನ್ನದ ಬಾಂಡ್ ಗಳ ಗಳಿಸಿದ ಬಡ್ಡಿ ಮತ್ತು ಬಂಡವಾಳ ಲಾಭಗಳ ಮೇಲೆ ಎಷ್ಟು ತೆರಿಗೆ ಬೀಳುತ್ತದೆ? ಸವರಿನ್ ಚಿನ್ನದ ಬಾಂಡ್ ಗಳ ಗಳಿಸಿದ ಬಡ್ಡಿಯ ಮೇಲೆ ಆದಾಯ ತೆರಿಗೆಯ ಕಾಯ್ದೆಯ ಅಡಿಯಲ್ಲಿನ ತೆರಿಗೆಗಳು ಅನ್ವಯ್ಯ. ಆದರೆ ಸವರಿನ್ ಚಿನ್ನದ ಬಾಂಡ್ ಗಳ ಮೇಲೆ ಗಳಿಸಲಾದ ಬಂಡವಾಳ ಲಾಭಗಳ ಮೇಲೆ ಯಾವುದೇ ತೆರಿಗೆ ಇಲ್ಲ . ಸವರಿನ್ ಚಿನ್ನದ ಬಾಂಡ್ ಗಳ ಮೇಲೆ ಯಾವುದೇ ಟಿ ಡಿ ಎಸ್ ಸಹ ಇಲ್ಲ. ಆದ್ದರಿಂದ ಸವರಿನ್ ಚಿನ್ನದ ಬಾಂಡ್ ಗಳು ಒಂದು ಸುರಕ್ಷಿತ ಮತ್ತು ಆಸಕ್ತಿದಾಯಕ ಹೂಡಿಕೆ ವಾಹನವಾಗಿದೆ. ಅಂತಹ ಹೆಚ್ಚು ಆಸಕ್ತಿದಾಯಕ ವಿಷಯಕ್ಕಾಗಿ, ನಮ್ಮ ಚಾನಲ್ ಅನ್ನು ಫಾಲೋ ಮಾಡಿ ಮತ್ತು ಸಬ್ಸ್ಕ್ರೈಬ್ ಮಾಡಿ . ಗೆಳೆಯರೇ, ನಿಮ್ಮ ಕುಶಲತೆಯನ್ನು ಸುಧಾರಿಸಲು ಯಾವುದೇ ಅಂತ್ಯವಿಲ್ಲ. ಹಣಕಾಸಿನ ಜ್ಞಾನವು ನಿರಂತರವಾಗಿ ವಿಕಸನಗೊಳ್ಳುತ್ತದೆ ಮತ್ತು ಎಂದಿಗೂ ಕೊನೆಗೊಳ್ಳುವುದಿಲ್ಲ, ಆದ್ದರಿಂದ ಅಂತಹ ಹೆಚ್ಚಿನ ಮಾಹಿತಿಯುಕ್ತ ವಿಷಯಕ್ಕಾಗಿ ನಮ್ಮೊಂದಿಗಿರಿ!ನಿಮ್ಮ ಸ್ವಂತ ಸಂಶೋಧನೆ ಮಾಡಲು ಮರೆಯದಿರಿ. ಇಂತಹ ಹೆಚ್ಚಿನ ಶೈಕ್ಷಣಿಕ ವಿಷಯಕ್ಕಾಗಿ ಫಾಲೋ ಮಾಡಿ ಅಪ್ ಡೇಟೆಡ್ ಆಗಿರಿ. ಸರಿ, ನಾವು ಮತ್ತೊಮ್ಮೆ ಭೇಟಿಯಾಗೋಣ. ​ಅಲ್ಲಿಯ ವರೆಗೆ ಗುಡ್ ಬೈ ಮತ್ತು ಹ್ಯಾಪಿ ಇನ್ವೆಸ್ಟಿಂಗ್. ​ಸೆಕ್ಯುರಿಟೀಸ್ ಮಾರುಕಟ್ಟೆಯಲ್ಲಿನ ಹೂಡಿಕೆಗಳು ಮಾರುಕಟ್ಟೆಯ ಅಪಾಯಗಳಿಗೆ ಒಳಪಟ್ಟಿರುತ್ತವೆ. ಹೂಡಿಕೆ ಮಾಡುವ ಮೊದಲು ಎಲ್ಲಾ ಸಂಬಂಧಿತ ದಾಖಲೆಗಳನ್ನು ಎಚ್ಚರಿಕೆಯಿಂದ ಓದಿ.