Exploring the Differences between futures and option trading | Kannada

Podcast Duration: 06:08

ಹಾಯ್ ಸ್ನೇಹಿತರೆ, ಏಂಜೆಲ್ ಬ್ರೋಕಿಂಗ್‍ನ ಈ ಪಾಡ್ಕಾಸ್ಟ್‍ಗೆ ನಿಮಗೆ ಸುಸ್ವಾಗತ. ​ಸ್ನೇಹಿತರೇ, ಸ್ಟಾಕ್ ಮಾರ್ಕೆಟ್ನಲ್ಲಿ ಎಷ್ಟೋ ಜನ ಸ್ಟಾಕ್ಗಳನ್ನ ಬಯ್ ಮತ್ತು ಸೆಲ್ ಮಾಡ್ತಾರೆ. ನೀವು ಯಾವುದೇ ಸ್ಟಾಕ್ ಅನ್ನು ಬಯ್ ಅಥ್ವಾ ಸೆಲ್ ಮಾಡ್ದಾಗ, ಈ ಶೇರ್ಗಳು ಬೇಸಿಕಲ್ಲಿ ನಿಮ್ಮ ಡಿಮ್ಯಾಟ್ ಅಕೌಂಟ್ನಲ್ಲಿ ಕ್ರೆಡಿಟ್ ಆಗುತ್ತೆ – ಇಲ್ಲಾಂದ್ರೇ ಸೆಲ್ ಆದ್ಮೇಲೆ ನಿಮ್ಮ ಡಿಮ್ಯಾಟ್ ಅಕೌಂಟ್ನಲ್ಲಿ ದುಡ್ಡು ಕ್ರೆಡಿಟ್ ಆಗತ್ತೆ. ಆದ್ರೇ ಸ್ಟಾಕ್ ಮಾರ್ಕೆಟ್ನಲ್ಲಿ ನಡ್ಯೋದು ಇವಿಷ್ಟೇ ಅಲ್ಲ. ಸ್ಟಾಕ್ ಮಾರ್ಕೆಟ್ನಲ್ಲಿ ಒಂದು ಜಗತ್ತಿದೆ. ಅದು ಸ್ಟಾಕ್ ಅಥವಾ ಕಮಾಡಿಟೀಸ್ನ ಪ್ರೈಸ್ಗಳ ಮೂವ್ಮೆಂಟ್ಗಳನ್ನ ಗುರುತಿಸೋದು ಮತ್ತು ಪ್ಲೇಸ್ ಮಾಡೊದ್ರ ಮೇಲೆ ಕೆಲಸ ಮಾಡ್ತಿದೆ. ಈ ಹೊತ್ಗಲ್ಲ, ಆದ್ರೆ ಮುಂದಿನ ದಿನಗಳ ಮೇಲೆ. ಮತ್ತು ಈ ಎಲ್ಲ ಕೆಲಸಗಳು ಫ್ಯೂಚರ್ಸ್ ಮತ್ತು ಆಪ್ಷನ್ ಮಾರ್ಕೆಟ್ಸ್‍ನಲ್ಲಿ ನಡ್ಯುತ್ತೆ. ಚೆನ್ನಾಗ್ (ಕೂಲ್) ಅನ್ನಿಸ್ತಿದೆ ಅಲ್ವಾ? ​ನನ್ ಫ್ರೆಂಡ್ ಅಕ್ಷಯ್ ಜೊತೆಗೆ ನಾನು ಫ್ಯೂಚರ್ಸ್ ಮತ್ತು ಆಪ್ಷನ್ ಟ್ರೇಡಿಂಗ್‍ನ ಕೆಲವು ವ್ಯತ್ಯಾಸಗಳ ಬಗ್ಗೆ ಚರ್ಚಿಸ್ತಿದ್ದೆ. (ಡಿಸ್ಕಸ್ ಮಾಡ್ತಿದ್ದೆ), ಆದ್ರೇ ಹಿಮಾಂಶುಗೆ ಈ ವಿಷ್ಯಗಳು ಸರ್ಯಾಗಿ ಅರ್ಥ ಆಗ್ತಿರ್ತಿಲ್ಲ. ಯಾಕಂದ್ರೆ ಅವ್ನು ಫ್ಯೂಚರ್ಸ್ ಮತ್ತು ಆಪ್ಷನ್ ಟ್ರೇಡಿಂಗ್ ಕಾನ್ಸೆಪ್ಟ್‍ಗಳ್ ಬಗ್ಗೆ ಕನ್ಫ್ಯೂಸ್ ಆಗಿದ್ದ. ​ನೀವೂನೂ ಹಿಮಾಂಶು ಥರಾನೇ ಕನ್‍ಫ್ಯೂಸ್ ಆಗಿಲ್ಲ ತಾನೇ? ಸರಿ ಬನ್ನಿ. ಒಂದ್ಸರಿ ಇದ್ನ ರಿವ್ಯೂ ಮಾಡ್ಬಿಡಣ. ​ಬೇಸಿಕಲಿ - ಫ್ಯೂಚರ್ಸ್ ಮತ್ತು ಆಪ್ಷನ್ಸ್ ಎರಡೂನೂ ಕಾಂಟ್ರಾಕ್ಸ್ಟ್ಗಳಾಗಿವೆ. ಆದ್ರೆ ಒಂದು ಫ್ಯೂಚರ್ ಕಾಂಟ್ರಾಕ್ಟ್‍ನ ಮೂಲಕ ನೀವು ಯಾವುದೇ ಸ್ಟಾಕ್ ಅಥ್ವಾ ಕಮಾಡಿಟಿ – ಅಂದ್ರೇ ಘಿಙZ ಕಾರ್ಪೋರೇಷನ್ ಅಥ್ವಾ ಗೋಲ್ಡ್ ಇಲ್ಲಾ ಕ್ರೂಡ್ ಆಯಿಲ್‍ನ ಬಯ್ ಅಥ್ವಾ ಸೆಲ್ ಮಾಡ್ಬೋದು, ಅದೂನೂ ಫ್ಯೂಚರ್ನಲ್ಲಿ ಫಿಕ್ಸ್‍ಡ್ ಪ್ರೈಸ್ನಲ್ಲಿ. ನಾನೇನಾದ್ರೂ ಘಿಙZ ಸ್ಟಾಕ್‍ನ ಪ್ರೈಸ್ 30 ದಿನದಲ್ಲಿ ಇಳಿಯುತ್ತೆ ಅಂತ ಪ್ರಿಡಿಕ್ಟ್ ಮಾಡಿದ್ರೇ, ಆಗ ನಾನು ಈ ಫೋರ್ಕಾಸ್ಟ್ (ಭವಿಷ್ಯವಾಣಿ)ಯಿಂದ ನಾನು ಪ್ರಾಫಿಟ್ ಮಾಡ್ಕೋಳೋಕೆ ಒಂದು ಫ್ಯೂಟ್ಯೂರ್ಸ್ ಕಾಂಟ್ರಾಕ್ಟ್ನ ಬಯ್ ಮಾಡ್ತೀನಿ, ಅದ್ರಿಂದಾಗಿ ನಾನು ಮಾರ್ಕೆಟ್ನಿಂದ 30ದಿನದಲ್ಲಿ ಲೋವರ್ ಪ್ರೈಸ್ನಲ್ಲಿ ಸ್ಟಾಕ್ನ ಬಯ್ ಮಾಡೋಕ್ ಆಗತ್ತೆ, ಮತ್ತು ಅದನ್ನ ನನ್ನ ಫ್ಯೂಚರ್ ಕಾಂಟ್ರಾಕ್ಟ್ನ ಬಳಸಿ, ಹೈಯರ್ ಪ್ರೈಸ್ಗೆ ಸೆಲ್ ಮಾಡ್ಬೊದು. ನೋಟ್ ಮಾಡ್ಕೊಳಿ, ಫ್ಯೂಚರ್ ಕಾಂಟ್ರಾಕ್ಟ್ಸ್‍ನಿಂದ ನೀವು ಹೊರಗ್ ಬರಕ್ಕಾಗಲ್ಲ- ನಿಮ್ಮ ಅಂಡರ್ಲೈಯಿಂಗ್ ಸೆಕ್ಯುರಿಟಿ ಅದ್ರ ಎಲ್ಲ ವ್ಯಾಲ್ಯೂನೂ ಕಳ್ಕೊಂಡ್ರೇ, ಆಗ್ ನಿಮಗೆ 100% ಲಾಸ್ ಕೂಡ ಆಗ್ಬೋದು. ಅದಕ್ಕೋಸ್ಕರ್, ಫ್ಯೂಚರ್ ಕಾಂಟ್ರಾಕ್ಟ್ಸ್ ಜೊತೆ ಡೀಲ್ ಮಾಡ್ಬೇಕಾದ್ರೇ ತುಂಬಾ ಕೇರ್ಫುಲ್ ಆಗಿರ್ಬೇಕಾಗತ್ತೆ. ​ ​ಆದ್ರೇ ಆಪ್ಷನ್ಸ್ ಬೇರೆ ತರಾನೇ ಕೆಲ್ಸ ಮಾಡತ್ತೆ. ಬೇಸಿಕಲ್ಲಿ, ಆಪ್ಷನ್ಸ್ ಏನಂದ್ರೇ – ಲೇಟರ್ ಡೇಟ್ (ಮುಂದಿನ್ ದಿನಗಳಲ್ಲಿ) ಬಯ್ ಅಥ್ವಾ ಸೆಲ್ ಮಾಡೋಂತ ಆಪ್ಷನ್ (ಆಯ್ಕೆ). ಆಪ್ಷನ್ ಕಾಂಟ್ರಾಕ್ಟ್ ಜೊತೆಗೂ ಒಂದು ಸ್ಟ್ರೈಕ್ ಪ್ರೈಸ್ ಇಂಡಿಕೇಟ್ ಮಾಡ್ಲಾಗಿರತ್ತೆ. ನೀವೇನಾದ್ರೂ ಕಾಲ್ ಆಪ್ಷನ್‍ನ ತಗೊಂಡಿದ್ರೇ, ಆಗ ನಿಮ್ಗೆ ಬೇಸಿಕಲ್ಲಿ ಒಂದು ಫಿಕ್ಸ್ಡ್ ಪ್ರೈಸ್ನಲ್ಲಿ ಫ್ಯೂಚರ್ನಲ್ಲಿ ಸ್ಟಾಕ್ನ ಬಯ್ ಮಾಡ್ಬೋದು. ಮತ್ತು ಪುಟ್ ಆಪ್ಷನ್ ಒಂದು ಕಮಾಡಿಟಿಯನ್ನ ಫ್ಯೂಚರ್ನಲ್ಲಿ ಫಿಕ್ಸ್ಡ್ ಪ್ರೈಸ್ನಲ್ಲಿ ಸೆಲ್ ಮಾಡೋಕೆ ಅಲೋ ಮಾಡುತ್ತೆ. ಸಿಂಪಲ್ ಅನ್ನಿಸ್ತಿದೆ ಅಲ್ವಾ? ​ಈಗ ನಿಮಗೆ ಆಪ್ಷನ್ ಮತ್ತು ಫ್ಯೂಚರ್ ಕಾಂಟ್ರಾಕ್ಟ್ಸ್‍ಗಳು, ಎರಡನ್ನೂ ಖರೀದಿಸ್ಬೇಕಾದ್ರೇ ನಿಮಗೆ ಪ್ರೀಮಿಯಮ್ಸ್ ಪೇ ಮಾಡ್ಬೇಕು ಅನ್ನೋದಂತೂ ಗೊತ್ತಾಗಿದೆ. ನಿಮ್ಮ ಕಾಂಟ್ರ್ಯಾಕ್ಟ್ನ ಅಂಡರ್ಲೈಯಿಂಗ್ ಸೆಕ್ಯುರಿಟಿ ನಿಮ್ಮ ಎಕ್ಸ್‍ಪೆಕ್ಟೆಡ್ ಡೈರೆಕ್ಷನ್‍ನಲ್ಲಿ ಮೂವ್ ಮಾಡಿ, ಆದ್ರೇ ನಿಮ್ಮ ಪ್ರಿಮಿಯಮ್ ವ್ಯಾಲ್ಯೂಗಿಂತ ಕಡ್ಮೆಯಾಗಿ ಮೂವ್ ಮಾಡಿದ್ರೇ, ಆಗ ನೀವು ಯಾವುದೇ ದುಡ್ ಮಾಡ್ದೇ ಅಥ್ವಾ ಸಣ್ ಲಾಸ್ ಕೂಡ ಇಲ್ದೇ ಎಂಡ್ ಮಾಡ್ ಮಾಡ್ಬೋದು. ​ ​ಹಾಗಾಗಿ, ಆಪ್ಷನ್ಸ್ ಮತ್ತು ಫ್ಯೂಚರ್ಸ್ ಟ್ರೇಡಿಂಗ್ – ಎರಡೂನೂ ಹಾಂಚ್ ಅಥ್ವಾ ಸ್ಪೆಕ್ಯುಲೇಷನ್ಸ್ (ಊಹಾಪೋಹ)ಗಳಿಗಿಂತ ಸಾಲಿಡ್ ಟೆಕ್ನಿಕಲ್ ಅನಾಲಿಸಿಸ್ ಮತ್ತು ಫ್ಯಾಕ್ಟ್ಸ್‍ಗಳ ಮೇಲೆ ಬೇಸ್ ಆಗಿರ್ಬೇಕು. ಇನ್ ಫ್ಯಾಕ್ಟ್, ನನ್ನ ಸ್ನೇಹಿತ ಅಕ್ಷಯ್ ಫ್ಯೂಚರ್ಸ್ ಮತ್ತು ಆಪ್ಷನ್ ಟ್ರೇಡಿಂಗ್ನಲ್ಲಿ ಎಂಟರ್ ಆಗ್ಬೇಕಂತಾನೇ ನನ್ ಹತ್ರ ಅಡ್ವೈಸ್ ಕೇಳಿದ್ದ – ಮತ್ ಇದನ್ನೇ ಎಕ್ಸ್ಯಾಕ್ಟ್ಲಿ ನಾನ್ ಅವನಿಗ್ ಹೇಳಿದ್ದು. ​ಹಾಗಾದ್ರೇ ಈಗ ಫ್ಯೂಚರ್ಸ್ ಮತ್ತು ಆಪ್ಷನ್ ಮಧ್ಯೆ ಇರೋ ಮುಖ್ಯವಾದ ವ್ಯತ್ಯಾಸಗಳನ್ನ ತಿಳ್ಕೊಳೋಣ. ​ನಂಬರ್ 1 - ಫ್ಯೂಚರ್ಸ್ ಮತ್ತು ಆಪ್ಷನ್ಸ್ನಲ್ಲಿ ಕಾರ್ಯನಿರ್ವಹಿಸೋ ಜವಾಬ್ದಾರಿನೇ (ಒಬ್ಲಿಕೇಷನ್ ಟು ಆ್ಯಕ್ಟ್) ಕೀ ಡಿಫೆರೆನ್ಸ್ (ಮುಖ್ಯ ವ್ಯತ್ಯಾಸ). ಫ್ಯೂಚರ್ ಕಾಂಟ್ರಾಕ್ಟ್ಸ್‍ನ ಕೇಸ್ನಲ್ಲಿ ಒಂದು ಸರ್ಟನ್ ಡೇಟ್ನಲ್ಲಿ (ನಿರ್ದಿಷ್ಟ ದಿನಾಂಕದಲ್ಲಿ) ನಿವೂ ಆ ಕಾಂಟ್ರಾಕ್ಟ್ನ ಟಮ್ರ್ಸ್‍ನ ಎಕ್ಸಿಕ್ಯೂಟ್ ಮಾಡ್ಲೇಬೇಕು, ಆ ಟ್ರೇಡ್ ಪ್ರಾಫಿಟೆಬಲ್ ಆಗಿದ್ರೂ ಇಲ್ಲ ದೊಡ್ ಲಾಸ್ ಆದ್ರೂ ಮಾಡ್ಲೇಬೇಕು. ಇನ್ನೊಂದ್ ಕಡೆ, ಆಪ್ಷನ್ಸ್‍ನಲ್ಲಿ ನಿಮಗೆ ಟ್ರೇಡ್ ಎಕ್ಸಿಕ್ಯೂಟ್ ಮಾಡೋದಕ್ಕೆ ಯಾವದೇ ಆಬ್ಲಿಗೇಷನ್ಸ್ ಇರೋದಿಲ್ಲ. ​ ​ನಂಬರ್ 2- ಫ್ಯೂಚರ್ಸ್ ಮತ್ತು ಆಪ್ಷನ್ಸ್ ನಿಮ್ಮ ಪೊರ್ಟ್‍ಫೋಲಿಯೋ ಅಥ್ವಾ ಪೊಸಿಷನ್ಸ್‍ಗೆ ತುಂಬಾ ಬೇರೆ ತರದ್ ರಿಸ್ಕ್‍ನ್ನೆ ಉಂಟ್ ಮಾಡತ್ತೆ. ಮೊದ್ಲೇ ಹೇಳಿದ್ ಹಾಗೆ, ಫ್ಯೂಚರ್ಸ್‍ನಲ್ಲಿ ಡೌನ್‍ಸೈಡ್ ರಿಸ್ಕ್ ಅನ್ನೊದು ಖಂಡಿತವಾಗ್ಲೂ ನಿಮ್ಮ ಟ್ರೇಡ್ ಅಮೌಂಟ್‍ನ 100 ಶೇಕಡದಷ್ಟಾದ್ರೂ ಆಗಿರ್ಬೋದು. ಇದರರ್ಥ ಏನಂದ್ರೇ, ಫ್ಯೂಚರ್ ಟ್ರೇಡಿಂಗ್ನಲ್ಲಿ ಸ್ಟಾಪ್ ಲಾಸ್‍ನ ಬಿಟ್ಟು ಟ್ರೇಡ್ ಮಾಡೋದ್ರಿಂದ ನೀವು ಎಷ್ಟು ದುಡ್ಡನ್ನಾದ್ರೂ ಕಳ್ಕೋಬೇದು. ಆಪ್ಷನ್ಸ್‍ನ ಕೇಸ್‍ನಲ್ಲಿ ಮೋಸ್ಟ್ ಅಂದ್ರೂ ಆ ಆಪ್ಷನ್‍ನ ಬಯ್ ಮಾಡೋಕ್ ಪೇ ಮಾಡಿದ್ದ ಪ್ರೀಮಿಯಮ್‍ನ ಕಳ್ಕೋತೀರಾ. ​ಸ್ನೇಹಿತರೇ, ನಿಮಗ್ ಈ ಪಾಯಿಂಟ್ ಕ್ಲಿಯರ್ ಆಯ್ತಲ್ವಾ? ಯಾಕಂದ್ರೇ ರಿಸ್ಕ್‍ನ ಕಾನ್ಸೆಪ್ಟ್ ಈ&ಔ ಟ್ರೇಡಿಂಗ್‍ನಲ್ಲಿ ತುಂಬಾನೇ ಇಂಪಾರ್ಟೆಂಟ್. ಹಾಗಾದ್ರೇ ಬನ್ನಿ ಮುಂದಿನ ವ್ಯತ್ಯಾಸ ಏನಂತ ನೋಡಣ. ​ನಂಬರ್ 3 - ಫ್ಯೂಚರ್ ಕಾಂಟ್ರಾಕ್ಸ್‍ನ ವ್ಯಾಲ್ಯೂ ಎಕ್ಸ್ಪೈರಿ ಡೇಟ್ ಹತ್ರ ಆಗ್ತಿದ್ ಹಾಗೇ ಡಿಕೇ ಆಗೋದಿಲ್ಲ. ಅಂದ್ರೇ ಇವತ್ತಿಂದ ಎರಡ್ ವಾರ ದೂರದಲ್ಲಿರೋ ಒಂದು ಫ್ಯೂಚರ್ಸ್ ಕಾಂಟ್ರ್ಯಾಕ್ಟ್ರ್ ಅದ್ರ ಎಕ್ಸ್ಪೈರಿ ಡೇಟ್ ಹತ್ರ ಆಗ್ತಿದ್ ಹಾಗೇ ಅದ್ರ ವ್ಯಾಲ್ಯೂನ ಕಳ್ಕೋಳಲ್ಲ. ಆದ್ರೆ ಆಪ್ಷನ್‍ನ ವ್ಯಾಲ್ಯೂ ಎಕ್ಸ್ಪೈರಿ ಹತ್ರ ಆಗ್ತಿದ್ ಹಾಗೆ ರೆಡ್ಯೂಸ್ ಆಗ್ತಾ ಹೋಗತ್ತೆ. ಹಾಗಾಗಿ, ಪ್ರೆಸೆಂಟ್ ಟೈಂ ಮತ್ತು ಎಕ್ಸ್ಪೈರಿ ಡೇಟ್ನ ಮಧ್ಯದಲ್ಲಿ ಅಂಡರ್‍ಲೈಯಿಂಗ್ ಸೆಕ್ಯುರಿಟಿಯ ಮೌಲ್ಯ ಮೂವ್ ಆಗೋದಕ್ಕೆ ಉಳ್ದಿರೋ ಟೈಮ್ ಫ್ರೇಮ್ ಕಡ್ಮೆ ಆಗ್ತಾ ಹೋಗತ್ತೆ. ​ನಂಬರ್ 4 - ಫ್ಯೂಚರ್ ಕಾಂಟ್ರಾಕ್ಟ್ಸ್ ಬೇಸಿಕಲ್ಲಿ ಮಾರ್ಜಿನ್ ಟ್ರೇಡ್‍ಗಳನ್ನ ರಿಸೆಂಬಲ್ ಮಾಡತ್ತೆ. ಯಾಕಂದ್ರೇ ಅಂಡರ್‍ಲೈಯಿಂಗ್ ಸೆಕ್ಯುರಿಟಿಯ ಪ್ರೈಸ್ ನೀವು ಎಕ್ಸ್ಪೆಕ್ಟ್ ಮಾಡಿರೋ ಡೈರೆಕ್ಷನ್‍ನ ಆಪೋಸಿಟ್ ಮೂವ್ ಆಗೋಕ್ ಶುರು ಆದ್ರೇ, ಆಗ ನಿಮಗೆ ದಿನದ ಕೊನೆಗೆ (ಎಂಡ್ ಆಫ್ ದ ಡೇ) ಆ ಮಾರ್ಜಿನ್‍ನ ನಿಮ್ಮ ಬ್ರೋಕರ್‍ಗೆ ಕೊಡ್ಬೇಕಾಗತ್ತೆ. ಆದ್ರೇ ಏನಾದ್ರೂ ನಿಮ್ಮ ಅನಾಲಿಸಿಸ್ ಸರಿಯಾಗಿದ್ರೇ ಮತ್ತು ಸೈಕ್ಯುರಿಟಿಯ ಪ್ರೈಸ್ ನೀವು ಎಕ್ಸ್ಪೆಕ್ಟ್ ಮಾಡಿದ್ ಡೈರೆಕ್ಷನ್‍ನಲ್ಲಿ ಮೂವ್ ಆದ್ರೇ, ಆಗ ಆ ದುಡ್ಡು ನಿಮ್ಮ ಅಕೌಂಟ್‍ನಲ್ಲಿ ಕ್ರೆಡಿಟ್ ಆಗುತ್ತೆ. ಆದ್ರೆ ಆಪ್ಷನ್ಸ್‍ನ ಯೂಸ್ ಮಾಡಿ, ನೀವು ಒಂದು ಚೀಪ್ ಪ್ರೈಸ್‍ಗೋಸ್ಕರ ಸ್ಪೆಕ್ಯುಲೇಷನ್ ಮಾಡ್ಬೋದು. ಇದರ ಅರ್ಥ ಏನಂದ್ರೇ, ರಿಸ್ಕ್ ಮತ್ತು ರಿವಾಡ್ರ್ಸ್ ಆಪ್ಷನ್ಸ್ ಕಾಂಟ್ರಾಕ್ಸ್‍ನಲ್ಲಿ ಸಿಮಿಟ್ರಿಕ್ ಆಗಿರಲ್ಲ ಅನ್ನೋದು. ​ಹಾಗಾದ್ರೇ ಸ್ನೇಹಿತರೇ, ಇದು ಫ್ಯೂಚರ್ಸ್ ಮತ್ತು ಆಪ್ಷನ್ಸ್ ಟ್ರೇಡಿಂಗ್‍ನ ನಡುವೆ ಇರೋ ಕೆಲವು ಕೀ ಡಿಫರೆನ್ಸ್‍ನ. ನಿಮಗ್ ಇದೂನೂ ಗೊತ್ತಿರ್ಬೇಕು. ಏನಂದ್ರೇ ಆಪ್ಷನ್ಸ್ ಕಾಂಟ್ರಾಕ್ಟ್ಸ್‍ನ್ನ ಕೆಲವ್ರು ಹೆಡ್ಜ್ (ಬೇಲಿ) ತರಾನೂ ಯೂಸ್ ಮಾಡ್ತಾರೆ. ​ನಿಮಗೆ ಫ್ಯೂಚರ್ಸ್ ಮತ್ತು ಆಪ್ಷನ್ಸ್ ಮಾರ್ಕೆಟ್ ಹೇಗೆ ವರ್ಕ್ ಆಗತ್ತೆ ಅನ್ನೋದ್ನ ಇನ್ನೂ ಕಲಿಯೋಕೆ ಇಂಟರೆಸ್ಟ್ ಇದ್ಯಾ? ಹಾಗಾದ್ರೆ ಈ ಟಾಪಿಕ್ ಬಗ್ಗೆ ನಮ್ಮ ಮತ್ತಷ್ಟು ಪಾಡ್‍ಕಾಸ್ಟ್‍ನ ಚೆಕ್ ಮಾಡಿ, ಅಥ್ವಾ ಮತ್ತಷ್ಟು ಕಲಿಯೋಕೆ www.angelone.in ಗೆ ವಿಸಿಟ್ ಮಾಡಿ. ​ಮುಂದಿನ ಪಾಡ್‍ಕಾಸ್ಟ್‍ನಲ್ಲಿ ಮತ್ತೆ ಸಿಗೋಣ. ಅಲ್ಲಿ ತನ್ಕ ಏಂಜೆಲ್ ಬ್ರೋಕಿಂಗ್ ಕಡೆಯಿಂದ ಗುಡ್‍ಬೈ. ಮತ್ತು ಹ್ಯಾಪಿ ಇನ್ವೆಸ್ಟಿಂಗ್! ​ ​ಹೂಡಿಕೆಗಳು ಮತ್ತು ಭದ್ರತಾ ಮಾರುಕಟ್ಟೆಗಳು ಮಾರುಕಟ್ಟೆಯ ಅಪಾಯಗಳಿಗೆ ಒಳಪಟ್ಟಿರುತ್ತವೆ. ಹೂಡಿಕೆಗೂ ಮುನ್ನ ಎಲ್ಲ ಸಂಬಂಧಿತ ದಾಖಲಾತಿಗಳನ್ನು ಎಚ್ಚರಿಕೆಯಿಂದ ಓದಿ. ​ ​