How can you be a part-owner of KFC & Pizza Hut? Devyani International IPO/ Everything you need to know about the Devyani International IPO! | Kannada

Podcast Duration: 7:48
ನೀವು ಕೆಎಫ್‌ಸಿ ಮತ್ತು ಪಿಜ್ಜಾ ಹಟ್‌ನ ಪಾರ್ಟ್- ಓನರ್ ಆಗುವುದು ಹೇಗೆ? ದೇವಯಾನಿ ಇಂಟರ್ನ್ಯಾಷನಲ್ ಐಪಿಒ. ಹಲೋ ಸ್ನೇಹಿತರೆ, ಏಂಜಲ್ ಒನ್ ನ ಮತ್ತೊಂದು ಪೋಡ್ ಕ್ಯಾಸ್ಟ್ ಗೆ ನಿಮಗೆ ಸ್ವಾಗತ. ಸ್ನೇಹಿತರೆ, ಇವತ್ತು ನಾವು ಬರ್ಗರ್, ಪಿಜ್ಜಾ, ಮತ್ತು ಕಾಫಿ ಕುರಿತಾಗಿ ಮಾತಾಡೋಣ. ಇಲ್ಲ, ಇಲ್ಲ, ನೀವು ಯಾವುದೇ ಕುಕಿಂಗ್ ಅಥವಾ ಫುಡ್ ಪಾಡ್ಕ್ಯಾಸ್ಟ್ ನ್ನ ಕ್ಲಿಕ್ ಮಾಡಿಲ್ಲ, ನೀವು ಏಂಜಲ್ ಒನ್ ಪಾಡ್ಕ್ಯಾಸ್ಟ್ ನ್ನೇ ಕೇಳ್ತಾ ಇದ್ದೀರಾ. ಯಾಕ್ಚುವಲಿ(actually), ನಾನಿವತ್ತು ದೇವಯಾನಿ ಇಂಟರ್ನ್ಯಾಷನಲ್ ಐ.ಪಿ.ಓ ಕುರಿತಾಗಿ ಮಾತಾಡ್ತೀನಿ .ದೇವಯಾನಿ ಇಂಟರ್ನ್ಯಾಷನಲ್ ಭಾರತದಲ್ಲಿ ಪಿಜ್ಜಾ ಹಟ್, ಕೆ.ಎಫ್.ಸಿ ಮತ್ತು ಕೋಸ್ಟಾ ಕಾಫಿಯ 655 ಔಟ್ಲೆಟ್ಸ್ ಅನ್ನ ಆಪರೇಟ್ ಮಾಡುತ್ತೆ ಮತ್ತು ಇದು ಯು.ಯಸ್ ಮೂಲದ ಯುಂ! ಬ್ರಾಂಡ್ ನ ಅತಿದೊಡ್ಡ ಪ್ರಾಂಚೈಸಿ ಆಗಿದೆ. ಕೆಲವು ದಿನಗಳ ಹಿಂದೆ ಭಾರತೀಯ ಮಾರುಕಟ್ಟೆಯಲ್ಲಿ ಕ್ಯೂ.ಎಸ್.ಆರ್ ಅಥವಾ ಕ್ವಿಕ್ ಸರ್ವಿಸ್ ರೆಸ್ಟೋರೆಂಟ್ ನ ಐ.ಪಿ.ಓ ಸಾಕಷ್ಟು ಪ್ರಸಿದ್ಧಿಯನ್ನ ಪಡೆದಿತ್ತು . ಇದಕ್ಕೂ ಮೊದಲು ಬರ್ಗರ್ ಕಿಂಗ್ ಮತ್ತು ಬಾರ್ಬಿಕ್ಯೂ ನೇಶನ್ ನ ಐ.ಪಿ.ಓ ಮಾರ್ಕೆಟ್ ಗೆ ಲಗ್ಗೆ ಇಟ್ಟಿತ್ತು . ಈಗ ದೇವಯಾನಿ ಇಂಟರ್‌ನ್ಯಾಷನಲ್ 1,400 ಕೋಟಿ ರೂ.ಗಳ ಐಪಿಒ ಪ್ರಾರಂಭಿಸಲು ಎಸ್.ಈ.ಬಿ.ಐ ಯನ್ನು ಸಂಪರ್ಕಿಸಿದೆ. ಈಗ ನಿಮ್ಮ ಬಳಿ ಕೆಎಫ್‌ಸಿ ಮತ್ತು ಪಿಜ್ಜಾ ಹಟ್‌ ಮತ್ತು ಕೋಸ್ಟಾ ಕಾಫೀ ಯನ್ನಹೊಂದಿರುವ ಬ್ಯುಸಿನೆಸ್ನ ಪಾರ್ಟ್- ಓನರ್ ಆಗುವ ಅವಕಾಶವಿದೆ. ಎಕ್ಸಾಯಿಟಿಂಗ್ ಆಗಿ ಏನೋ ಇದೆ ಆದ್ರೆ,ಮೊದಲು ದೇವಯಾನಿ ಇಂಟರ್‌ನ್ಯಾಷನಲ್ ಕಂಪನಿಯ ಕುರಿತು ನೋಡೋಣ. ಕ್ವೆಶ್ಚನ್ ನಂಬರ್ 1: ದೇವಯಾನಿ ಇಂಟರ್ನ್ಯಾಷನಲ್ ಐಪಿಒ ಅನ್ನು ಏಕೆ ಸಲ್ಲಿಸುತ್ತಿದೆ? ಎಲ್ಲಕ್ಕೂ ಮೊದಲು, ಟೆಕ್ನಿಕಲ್ ಡೀಟೇಲ್ಸ್ ಅನ್ನ ನೋಡೋಣ , ದೇವಯಾನಿ ಇಂಟರ್‌ನ್ಯಾಷನಲ್‌ನ ಐಪಿಒ 400 ಕೋಟಿ ರೂ.ಗಳ ಮೌಲ್ಯದ ಈಕ್ವಿಟಿ ಷೇರುಗಳ ಹೊಸ ವಿತರಣೆ ಮತ್ತು 12.5 ಕೋಟಿ ಷೇರುಗಳ ಮಾರಾಟದ ಪ್ರಸ್ತಾಪವನ್ನು ಒಳಗೊಂಡಿದೆ. ಈ 12.5 ಕೋಟಿ ಶೇರ್ ಗಳನ್ನ, ಎರಡು ಕಂಪನಿಗಳು ಮಾರಾಟ ಮಾಡುತ್ತವೆ, ಮೂಲತಃ, ಡುನೆರ್ನ್ ಇನ್ವೆಸ್ಟ್ಮೆಂಟ್ಸ್ ಮಾರಿಷಸ್ ಪ್ರೈವೇಟ್ ಲಿಮಿಟೆಡ್ , ಇದು ತೆಮಾಸೆಕ್ ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್ (Temasek Holdings Private Limited) ನ ಒಂದು ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆ ಆಗಿದೆ. ಇನ್ನೊಂದು ಕಂಪನಿ ಆರ್.ಜೆ ಕಾರ್ಪ್ ಲಿಮಿಟೆಡ್ ,ಅದೊಂದು ಪ್ರಮೋಟರ್ ಕಂಪನಿ. ಸರಿ , ಕಂಪನಿಯ ಶೇರ್ ಅನ್ನ ಪಟ್ಟಿ ಮಾಡಿದ ನಂತರ ಮುಂದಿನ ಪ್ಲಾನ್ ಏನು? ವೆಲ್, ದೇವಯಾನಿ ಇಂಟರ್ನ್ಯಾಷನಲ್ ಐಪಿಒದಿಂದ ಬಂದ ಹಣವನ್ನ ಕಂಪನಿಯ 357.8 ಕೋಟಿ ರೂ ಸಾಲವನ್ನು ಮರುಪಾವತಿಸಲು ಹಾಗು ಸ್ವಲ್ಪ ಹಣವನ್ನ ಜನರಲ್ ಕಾರ್ಪೊರೇಟ್ ಪರ್ಪಸ್ ಗೆ ಬಳಸುತ್ತದೆ. ಓಕೆ, ಸೊ ಫಾರ್ ಸೊ ಗುಡ್. ಮುಂದೆ ಹೋಗೋಣ. ಕ್ವೆಶ್ಚನ್ ನಂಬರ್ 2: ಈ ಕಂಪನಿಯ ಹಿನ್ನೆಲೆ ಏನು? ದೇವಯಾನಿ ಇಂಟರ್ನ್ಯಾಷನಲ್ ಅನ್ನು 1991 ರಲ್ಲಿ ಸ್ಥಾಪಿಸಲಾಯಿತು ಮತ್ತು ಇದು ಭಾರತೀಯ ಬಿಲಿಯನೇರ್ ರವಿ ಜೈಪುರಿಯಾ ಅವರ ಆರ್.ಜೆ ಗ್ರೂಪ್ ನ ಒಡೆತನದಲ್ಲಿದೆ. ರವಿ ಜೈಪುರಿಯಾ ಅವರ ನೆಟ್ ವರ್ಥ್ 3.5 ಬಿಲಿಯನ್ ಡಾಲರ್ ಮತ್ತು ಅವರು ಪ್ರಸ್ತುತ ವಿಶ್ವದ 925 ನೇ ಶ್ರೀಮಂತ ವ್ಯಕ್ತಿ ಮತ್ತು ಫೋರ್ಬ್ಸ್ ಪ್ರಕಾರ ಭಾರತದ 61 ನೇ ಶ್ರೀಮಂತ ವ್ಯಕ್ತಿ. ದೇವಯಾನಿ ಇಂಟರ್ನ್ಯಾಷನಲ್ ಕಂಪನಿಗೆ ಅವರ ಮಗಳ ಹೆಸರನ್ನು ಇಡಲಾಗಿದೆ. ಮತ್ತೊಂದು ಕುತೂಹಲಕಾರಿ ಸಂಗತಿಯೆಂದರೆ, ದೇವಯಾನಿ ಇಂಟರ್‌ನ್ಯಾಷನಲ್‌ನ ಮಾಲೀಕತ್ವ ಹೊಂದಿರುವ ಆರ್.ಜೆ ಕಾರ್ಪ್ - ಭಾರತದ ಪೆಪ್ಸಿಕೋಗೆ ಅತಿದೊಡ್ಡ ಬಾಟ್ಲರ್ ಆಗಿದೆ. ರವಿ ಅವರು ಮತ್ತೊಂದು ಕಂಪನಿ ವರುಣ್ ಬೆವೆರೇಜಸ್ ನ ಮಾಲೀಕರು ಹೌದು. ಇದು ಜಾಗತಿಕವಾಗಿ ಪೆಪ್ಸಿಕೋ ದ ಎರಡನೇ ಅತಿದೊಡ್ಡ ಬಾಟ್ಲರ್ ಆಗಿದೆ. ಕ್ವೆಶ್ಚನ್ ನಂಬರ್ 3: ದೇವಯಾನಿ ಇಂಟರ್‌ನ್ಯಾಷನಲ್‌ನ ಇತಿಹಾಸ ಏನು? 1997 ರಲ್ಲಿ ದೇವಯಾನಿ ಇಂಟರ್‌ನ್ಯಾಷನಲ್ ಮೊದಲ ಬಾರಿಗೆ ಯಮ್‌! ಬ್ರಾಂಡ್ಸ್ ನೊಂದಿಗೆ ಒಪ್ಪಂದ ಮಾಡಿಕೊಂಡಿತು. ಮತ್ತು ಜೈಪುರದಲ್ಲಿ ಭಾರತದ ಮೊದಲ ಪಿಜ್ಜಾ ಹಟ್ ಔಟ್ಟ್ಲೆಟ್(OUTLET) ಅನ್ನು ತೆರೆಯಿತು. ಅದರ ನಂತರ, ಹಿಂತಿರುಗಿ ನೋಡಿದ್ದೆ ಇಲ್ಲ. ಪ್ರಸ್ತುತ ಕಂಪನಿಯು ಭಾರತದಾದ್ಯಂತ 297 ಪಿಜ್ಜಾ ಹಟ್ಸ್, 264 ಕೆಎಫ್ ಸಿ ಮತ್ತು 44 ಕೋಸ್ಟಾ ಕಾಫೀ ಶಾಪ್ಸ್ ಅನ್ನ ಹೊಂದಿದೆ . ಇದನ್ನ ಹೊರತುಪಡಿಸಿ ಕಂಪನಿಯು ಇತರೇ ಬ್ರಾಂಡ್ ಗಳಾದ ವಾಂಗೊ, ಫುಡ್ ಸ್ಟ್ರೀಟ್, ಮಸಾಲಾ ಟ್ವಿಸ್ಟ್, ಐಲೆ ಬಾರ್, ಅಮ್ರೆಲಿ ಮತ್ತು ಸಿಕ್ರುಶ್ ಜ್ಯೂಸ್ ಬಾರ್ ನ್ನ ಸಹ ನಿರ್ವಹಿಸುತ್ತದೆ . ದೇವಯಾನಿ ಇಂಟರ್‌ನ್ಯಾಷನಲ್‌ನಲ್ಲಿ ಇಂದು 9,000 ಕ್ಕೂ ಹೆಚ್ಚು ಉದ್ಯೋಗಿಗಳಿದ್ದಾರೆ. ಕ್ವೆಶ್ಚನ್ ನಂಬರ್ 4 : ದೇವಯಾನಿ ಇಂಟರ್‌ನ್ಯಾಷನಲ್‌ನ ಫೈನಾನ್ಸಿಯಲ್ಸ್ ಏನು ಹೇಳುತ್ತೆ? ದೇವಯಾನಿ ಇಂಟರ್ನ್ಯಾಷನಲ್ ನ ಪ್ರಮುಖ ಆದಾಯ ಕೆಎಫ್‌ಸಿ ಮತ್ತು ಪಿಜ್ಜಾ ಹಟ್ ಸ್ಟೋರ್ ಗಳಿಂದ ಬರುತ್ತದೆ. ಹಣಕಾಸಿನ ವರ್ಷ 19,20 ಮತ್ತು 21 ರಲ್ಲಿ ಕೆಎಫ್‌ಸಿ ಮತ್ತು ಪಿಜ್ಜಾ ಹಟ್ 76%, 77.49% ಮತ್ತು ಇದು 92.28% ನಷ್ಟು ದೇವಯಾನಿ ಇಂಟರ್‌ನ್ಯಾಷನಲ್‌ನ ಒಟ್ಟು ಆದಾಯವಾಗಿದೆ. ಆದಾಗ್ಯೂ, ಈ ಮೂರು ವರ್ಷಗಳಲ್ಲಿ ಕಂಪನಿಯು ದೊಡ್ಡ ನಷ್ಟವನ್ನು ಕೂಡ ಅನುಭವಿಸಿದೆ. 19,20 ಮತ್ತು 21 ರ ಆರ್ಥಿಕ ವರ್ಷಗಳಲ್ಲಿ ಕಂಪನಿಯು ಕ್ರಮವಾಗಿ 94 ಕೋಟಿ ರೂ., 121.4 ಕೋಟಿ ಮತ್ತು 63 ಕೋಟಿ ರೂ ನಷ್ಟವನ್ನ ಅನುಭವಿಸಿದೆ. ಹ್ಮ್.......... ನಷ್ಟ ಕಂಪನಿಯಲ್ಲಿ ಇದ್ದೆ ಇರುತ್ತದೆ . ಆದರೆ ಈ ನಷ್ಟ ಏಕೆ? ಕಂಪನಿ ಹೇಳುತ್ತೆ ಇದಕ್ಕೆ ಪ್ರಮುಖವಾಗಿ 2 ಕಾರಣಗಳಿವೆ- ಫಸ್ಟ್ ರೀಸನ್- ಸ್ಟೋರ್ ನೆಟ್‌ವರ್ಕ್ ವಿಸ್ತರಣೆಯಿಂದಾಗಿ ಹೆಚ್ಚಿನ ನಿರ್ವಹಣಾ ವೆಚ್ಚಗಳು ಉಂಟಾಗಿದೆ. ಸೆಕೆಂಡ್ ರೀಸನ್ ----- ಈ ಸ್ಟೋರ್ ಗಳಿಂದ ವೆಚ್ಚಗಳನ್ನು ಮರುಪಡೆಯುವಲ್ಲಿ ವಿಫಲವಾಗಿದ್ದು. ಕಂಪನಿಯು ತನ್ನ ಡಿ.ಹೆಚ್.ಆರ್.ಪಿ ಯಲ್ಲಿ ಮಾಡಿದ ಮತ್ತೊಂದು ಪ್ರಮುಖ ಹೇಳಿಕೆಯೆಂದರೆ- ಸ್ನೇಹಿತರೆ ಇದನ್ನ ಎಚ್ಚರಿಕೆಯಿಂದ ಆಲಿಸಿ… .. ಭವಿಷ್ಯದ ದೃಷ್ಟಿಯಿಂದ, ಕಂಪನಿಯು ಪ್ರತಿ ವರ್ಷ ಹೊಸ ಮಳಿಗೆಗಳನ್ನು ತೆರೆಯಲು ಪ್ಲಾನ್ ಮಾಡಿದೆ ಮತ್ತು ಈ ಸ್ಟೋರ್ ಗಳು ಮೆಚೂರ್ ಆಗುವರೆಗೂ ನಷ್ಟವನ್ನು ವರದಿ ಮಾಡಲು ಯೋಚಿಸಿದೆ ಎಂದು . ಸರಳವಾಗಿ ಹೇಳುವುದಾದರೆ, ಹೊಸ ಮಳಿಗೆಗಳನ್ನು ತೆರೆಯಲು ಯೋಜಿಸಿದೆ ಮತ್ತು ಮಳಿಗೆಗಳು ಆದಾಯ ಮತ್ತು ಲಾಭದಾಯಕವಾಗುವವರೆಗೆ ಅದರಿಂದ ನಷ್ಟವನ್ನು ನಿರೀಕ್ಷಿಸುವುದು ಸಾಮನ್ಯವಾಗಿದೆ ಎಂದು ಕಂಪನಿ ಹೇಳುತ್ತದೆ. ಐಪಿಒ ಫಿಲ್ಲಿಂಗ್ ಮಾಡುವಾಗ ಪ್ರತಿ ಕಂಪನಿಗೂ ಡಿ.ಹೆಚ್.ಆರ್.ಪಿ ಅಥವಾ ಡ್ರಾಫ್ಟ್ ರೆಡ್ ಹಿಯರಿಂಗ್ ಫೈಲ್ ಮಾಡಬೇಕಾಗುತ್ತದೆ. ಕಂಪನಿಯಲ್ಲಿ ಹೂಡಿಕೆ ಮಾಡುವ ಮೊದಲು ಹೂಡಿಕೆದಾರರು ತಿಳಿದುಕೊಳ್ಳಬೇಕಾದ ಅಪಾಯಕಾರಿ ಅಂಶಗಳ ಬಗ್ಗೆ ಈ ಡಾಕ್ಯುಮೆಂಟ್ ಮಾಹಿತಿಯನ್ನು ನೀಡುತ್ತದೆ. ಕೋವಿಡ್ ನ ಪರಿಣಾಮವನ್ನು ದೇವಯಾನಿ ಇಂಟರ್‌ನ್ಯಾಷನಲ್‌ನ ಡಿ.ಹೆಚ್.ಆರ್.ಪಿ ಯಲ್ಲಿ ರಿಸ್ಕ್ ಫ್ಯಾಕ್ಟರ್ ಎಂದು ವಿವರಿಸಲಾಗಿದೆ. ಫುಟ್‌ಫಾಲ್‌ಗಳಲ್ಲಿ ಗಮನಾರ್ಹ ಕುಸಿತದ ಕಾರಣದಿಂದಾಗಿ FY21 ನಲ್ಲಿ ತನ್ನ ಪ್ರಮುಖ ಬ್ರಾಂಡ್ನ ನ ವ್ಯವಹಾರದ ಅಡಿಯಲ್ಲಿ 61 ಮಳಿಗೆಗಳನ್ನು ಶಾಶ್ವತವಾಗಿ ಮುಚ್ಚಿರುವುದಾಗಿ ಕಂಪನಿ ಘೋಷಿಸಿದೆ. Declining footfalls ಕಂಪನಿಯ ಕೋರ್ ಬ್ರಾಂಡ್ನ in-store dining ರೆವೆನ್ಯೂ ಅನ್ನ ಕೂಡ ಹಾನಿಗೊಳಿಸಿದೆ. FY20 ರಲ್ಲಿ ಕೋರ್ ಬ್ರಾಂಡ್‌ಗಳಿಂದ ಕಂಪನಿಯ ಒಟ್ಟು ಆದಾಯ 48.85% ಇತ್ತು. ಆದರೆ FY21 ರಲ್ಲಿಕಂಪನಿಯ ಒಟ್ಟು ಆದಾಯ 29.80% ಕ್ಕೆ ಕುಸಿಯಿತು ಇದು ಕೇವಲ in-store dining ಗೆ ಮಾತ್ರವಲ್ಲ ಇದು ಆದಾಯದಲ್ಲಿ ಒಟ್ಟಾರೆ ಕುಸಿತವನ್ನು ದಾಖಲಿಸಿದೆ. ಆಪರೇಷನಲ್ ರೆವೆನ್ಯೂ FY21 ರಲ್ಲಿ 25% ಕ್ಕಿಂತಲೂ ಕಡಿಮೆಯಾಗಿ 1,134 ಕೋಟಿ ರೂ.ಗೆ ತಲುಪಿದೆ. ಮತ್ತು FY20 ರಲ್ಲಿ 1,516 ಕೋಟಿ ರೂ. ದೇವಯಾನಿ ಇಂಟರ್ನ್ಯಾಷನಲ್ ತನ್ನ ಡಿ.ಎಚ್.ಆರ್.ಪಿ ಯಲ್ಲಿ ಕೋವಿಡ್ -19 ನ ನೆಗೆಟಿವ್ ಪರಿಣಾಮ FY 22 ರಲ್ಲಿಯೂ ಮುಂದುವರಿಯುತ್ತದೆ ಎಂದು ಹೇಳಿದೆ. ಇದಾಗಿತ್ತು ದೇವಯಾನಿ ಇಂಟರ್ನ್ಯಾಷನಲ್ ಕುರಿತಾದ ಪ್ರಮುಖ ಸಂಗತಿಗಳು. ಸ್ನೇಹಿತರೇ, ಷೇರು ಮಾರುಕಟ್ಟೆ ಹೂಡಿಕೆ ಮಾಡುವ ಮೊದಲು, ಅದರ ಕುರಿತಾಗಿ ಸ್ವತಹ ರಿಸರ್ಚ್ ಮಾಡುವುದು ಬಹಳ ಮುಖ್ಯ, ಸ್ನೇಹಿತರು ಮತ್ತು ಕುಟುಂಬದವರ ಸಲಹೆಯ ಮೇರೆಗೆ ಎಲ್ಲೋ ಹೂಡಿಕೆ ಮಾಡುವುದು ಅಪಾಯಕಾರಿ.ಮತ್ತು ನಿಮ್ಮ ಬಹಳಷ್ಟು ಹಣವನ್ನು ನೀವು ಕಳೆದುಕೊಳ್ಳಬಹುದು. ನೀವು ದೇವಯಾನಿ ಇಂಟರ್ನ್ಯಾಷನಲ್ ಐಪಿಒ ದಲ್ಲಿ ಇನ್ವೆಸ್ಟ್ ಮಾಡೋದಕ್ಕೆ ಮನಸ್ಸು ಮಾಡಿದ್ದೆ ಆದಲ್ಲಿ ಒಮ್ಮೆ ಅದರ ಡ್ರಾಫ್ಟ್ ರೆಡ್ ಪ್ರಾಸ್ಪೆಕ್ಟಸ್ ಅನ್ನ ಡೀಪ್ ಆಗಿ ಸ್ಟಡಿ ಮಾಡೋದು ಉತ್ತಮ . ಮತ್ತು- ಎಸ್,- ಷೇರು ಮಾರುಕಟ್ಟೆ ಹೂಡಿಕೆಯಲ್ಲಿ ಯಾವಾಗಲೂ ಅಪಾಯವಿರುತ್ತದೆ ಎಂಬುದನ್ನು ನೆನಪಿಡಿ. ಈ ಪಾಡ್ಕ್ಯಾಸ್ಟ್ ಅನ್ನು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ ಮಾಡಲಾಗಿದೆ ಮತ್ತು ಹೂಡಿಕೆದಾರರು ತಮ್ಮದೇ ಆದ ಸಂಶೋಧನೆಯನ್ನ ಮಾಡುವುದು ಅತ್ಯಗತ್ಯ. ನಮ್ಮ ವೆಬ್‌ಸೈಟ್, ಯೂಟ್ಯೂಬ್ ಮತ್ತು ಇತರ ಸಾಮಾಜಿಕ ಮಾಧ್ಯಮ ಚಾನೆಲ್‌ಗಳ ಮೂಲಕ ಇಂತಹ ಇನ್ನಷ್ಟು ಆಸಕ್ತಿದಾಯಕ ಪಾಡ್‌ಕಾಸ್ಟ್‌ಗಳಿಗಾಗಿ ನಮ್ಮನ್ನು ಫಾಲೋ ಮಾಡಿ. ಅಲ್ಲಿವರೆಗೆ ಗುಡ್ ಬೈ ಮತ್ತು ಹ್ಯಾಪಿ ಇನ್ವೆಸ್ಟಿಂಗ್! ಸೆಕ್ಯುರಿಟೀಸ್ ಮಾರುಕಟ್ಟೆಯಲ್ಲಿನ ಹೂಡಿಕೆಗಳು ಮಾರುಕಟ್ಟೆಯ ಅಪಾಯಗಳಿಗೆ ಒಳಪಟ್ಟಿರುತ್ತವೆ. ಹೂಡಿಕೆ ಮಾಡುವ ಮೊದಲು ಎಲ್ಲಾ ಸಂಬಂಧಿತ ದಾಖಲೆಗಳನ್ನು ಎಚ್ಚರಿಕೆಯಿಂದ ಓದಿ.