7 key things to know about Zomato IPO | Kannada

Podcast Duration: 8:00
Zomato ಐಪಿಒ ಬಗ್ಗೆ ತಿಳಿದುಕೊಳ್ಳಬೇಕಾದ 7 ವಿಷಯಗಳು ​ವಾಯ್ಸ್ ಓವರ್- ​ನಮಸ್ತೆ ಸ್ನೇಹಿತರೇ, ಏಂಜಲ್ ಒನ್ ಅವರ ಮತ್ತೊಂದು ಎಕ್ಸಾಯಿಟಿಂಗ್ ಪಾಡ್ಕ್ಯಾಸ್ಟ್‌ಗೆ ಸ್ವಾಗತ. ಸ್ನೇಹಿತರೇ IPO ಗಳು ಜನರಿಗೆ ತುಂಬ ಅತ್ಯಾಕರ್ಷಕವಾಗಿರುತ್ತವೆ - ಐಪಿಒ ದ ಸಮಯದಲ್ಲಿ ಶೇರ್ ಗಳು ಕಡಿಮೆ ಬೆಲೆಗೆ ಸಿಗುತ್ತವೆ ಅಂತ ಯೋಚಿಸ್ತಾ ಇರ್ತಾರೆ . ಮತ್ತು ಇಲ್ಲಿಂದ, ಸ್ಟಾಕ್ ಬೆಲೆ ಏರಿಕೆಯಾಗುತ್ತದೆ. ಆದ್ದರಿಂದ, ಸಹಜವಾಗಿ , ಐಪಿಒಗಳು ಹೂಡಿಕೆದಾರರಿಗೆ ಉತ್ತೇಜನಕಾರಿಯಾಗಿಯೇ ಇರುತ್ತವೆ. ಮತ್ತು Zomato ದೇಶದಲ್ಲಿ ಜನಪ್ರಿಯತೆಯನ್ನ ಪಡೆದಿರುವ ಹೆಸರಾಗಿದೆ. ಈ ಎರಡು ಫ್ಯಾಕ್ಟ್ಸ್ ಗಳಿಂದ ನಮಗೆ ಝೋಮ್ಯಾಟೋ ಐಪಿಒ ಯಾಕಿಷ್ಟು ಜನಪ್ರಿಯತೆ ಪಡೆದಿದೆ ಅಂತಾ ಅರ್ಥ ಆಗುತ್ತೆ. ​ಮುಂಬರುವ Zomato ಐಪಿಒಗಾಗಿ ಉತ್ಸಾಹದಿಂದ ಕಾಯುತ್ತಿರುವವರಲ್ಲಿ ನೀವು ಇದ್ದರೆ, ನಿಮಗಾಗಿ ತಿಳಿದಿರಬೇಕಾದ 7 ಸಂಗತಿಗಳು ಇಲ್ಲಿವೆ: ​ನಂಬರ್ 1- Zomato ಈ ಐಪಿಒ ಅನ್ನು ಏಕೆ ಹೋಸ್ಟ್ ಮಾಡುತ್ತಿದೆ? ​Zomato ದ ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್ ಪ್ರಕಾರ- ಕಂಪನಿಗಳು ಐಪಿಒ ವನ್ನ ಹೋಸ್ಟ್ ಮಾಡಬೇಕಾದರೆ ಎಸ್‌ಇಬಿಐ ಗೆ ದಾಖಲೆ ಸಲ್ಲಿಸಬೇಕಾಗುತ್ತೆ - ಇದರ ಪ್ರಕಾರ ಈ ದೈತ್ಯ ಫುಡ್ ಡೆಲಿವರಿ ಸಂಸ್ಥೆ ಸಾರ್ವಜನಿಕರಿಂದ ಬಂಡವಾಳವನ್ನು ಸಂಗ್ರಹಿಸಲು ಈ ಕೆಳಗಿನ ಕಾರಣಗಳನ್ನು ಹೊಂದಿದೆ: ಗ್ರೋಥ್ ಮತ್ತು ಕಾರ್ಪೊರೇಟ್ ಉದ್ದೇಶಗಳು. ​ಬಂಡವಾಳದ ಹೆಚ್ಚಿನ ಭಾಗ, ಅಂದರೆ 75% ಐಪಿಒ ಆದಾಯವನ್ನು ಆರ್ಗಾನಿಕ್ ಮತ್ತು ಇನೊರ್ಗ್ಯಾನಿಕ್(inorganic) ಗ್ರೋಥ್ ಗೆ ಮೀಸಲಿಡಲಾಗಿದೆ. ಮತ್ತು 5,625 ಕೋಟಿ ರೂ- ಇದು ಹೊಸ ಬಳಕೆದಾರರನ್ನು ಹೊಂದಲು ಮತ್ತು ಅದರ ವಿತರಣಾ ಮತ್ತು ತಂತ್ರಜ್ಞಾನ ಮೂಲಸೌಕರ್ಯಗಳ ಅಭಿವೃದ್ಧಿಗೆ ಬಳಸಲಾಗುತ್ತದೆ. ​ ಸಾಮಾನ್ಯವಾಗಿ, ಸೆಕ್ಟರ್ ಅನ್ನ potentially disrupt ಮಾಡುವ ಸಾಮರ್ಥ್ಯವನ್ನು ಹೊಂದಿರುವ, ನ್ಯೂ ಪ್ಲೇಯರ್ ಗಳು ಬರುವಾಗ ಇದು ಸಂಭವಿಸುತ್ತದೆ. ಆಹಾರ ವಿತರಣಾ ಕ್ಷೇತ್ರದ ಬಗ್ಗೆ ಚರ್ಚಿಸುವಾಗ ನಾವು ಅದರ ಬಗ್ಗೆ ಹೇಳ್ತಿವಿ. ​ಏತನ್ಮಧ್ಯೆ, ಬಾಕಿ 25% ಅನ್ನು ಐಪಿಒ ಸಂಬಂಧಿತ ವೆಚ್ಚಗಳು ಮತ್ತು ಸಾಮಾನ್ಯ ಸಾಂಸ್ಥಿಕ ವೆಚ್ಚಗಳಿಗೆ ಬಳಸಲಾಗುತ್ತದೆ. ​ಜನಪ್ರಿಯ ಅಭಿಪ್ರಾಯ ಯಾವುದು ಎಂದರೆ- ಆದಾಯವನ್ನು ಹೆಚ್ಚಾಗಿ ಬೆಳವಣಿಗೆಗೆ ಬಳಸಬೇಕು ಮತ್ತು ಕಂಪನಿಯ ಚಾಲನೆಯನ್ನು ನಿರ್ವಹಿಸಲು ಅಥವಾ ಅದರ ಸಾಲಗಳನ್ನು ತೀರಿಸಲು ಅಲ್ಲ. ನಂಬರ್ 2- Zomato ಅವರ ಹಣಕಾಸು ದಾಖಲೆಗೆ ಸಂಬಂಧಿಸಿದ ಕೆಲವೊಂದು ಕೀ ಫೀಗರ್ಸ್. ಅದನ್ನ ನಾನ್ ನಿಮಗೆ ಹೇಳ್ತೇನೆ - ​Zomato ಈಗ ಎಲ್ಲೆಡೆ ಇದೆ ,ನೀವು ಮನೆಯಿಂದ ಹೊರನಡೆದಾಗಲೆಲ್ಲಾ ರಸ್ತೆಯಲ್ಲಿ ಸಾಗುವಾಗ ನೀವು Zomato ಡೆಲಿವರಿಮ್ಯಾನ್ ಅನ್ನು ನೋಡುತ್ತೀರಿ ಎಂದು ನಿಮ್ಮಗೆ ಅನಿಸುವುದಿಲ್ಲವೇ? ಇದು ಈಗ ಎಲ್ಲೆಡೆ ತನ್ನ ಚಾಪನ್ನು ಮೂಡಿಸಿದೆ.ಹೋಗಲಿ ಬಿಡಿ ಇದೀಗ ನಾವು ಅಂಕಿಅಂಶಗಳ ಬಗ್ಗೆ ಮಾತನಾಡೋಣ: ​. ಮಾರ್ಚ್ 31, 2018 ರಂದು ವರ್ಷದ ಕೊನೆಗೆ , Zomato 65 ಮಿಲಿಯನ್ ಯುಎಸ್ಡಿ(USD ) ಆದಾಯವನ್ನು ಗಳಿಸಿದೆ.ಇದು ಖುಷಿ ಪಡಿಸುವ ವಿಷಯ ಆದರೆ ಒಟ್ಟು ಖರ್ಚು 80 ಮಿಲಿಯನ್ ಯು.ಎಸ್. ಡಾಲರ್ ಆಗಿದೆ ​. ಡಿಸೆಂಬರ್ 2020 ರ ಹೊತ್ತಿಗೆ, ಮೊದಲ ಮೂರು ತ್ರೈಮಾಸಿಕಗಳ ಆದಾಯ 1,301 ಕೋಟಿ ರೂ ​ 31 ಮಾರ್ಚ್ 31, 2020 ಕ್ಕೆ ಅಂದ್ರೆ ವರ್ಷದ ಕೊನೆಗೆ Zomato 320 ಮಿಲಿಯನ್ ಯುಎಸ್ಡಿ ನಷ್ಟವನ್ನು ದಾಖಲಿಸಿದೆ. ಇದು ಕಳೆದ ಸಾಲಿನ ನಷ್ಟಕ್ಕಿಂತ ಹೆಚ್ಚಾಗಿದೆ . ಹಾಗಾದ್ರೆ ಪರಿಸ್ಥಿತಿ ಹದಗೆಡುತ್ತಿದೆಯೇ? ಸರಿ, ಈಗ ಆದಾಯವು 368 ಮಿಲಿಯನ್ ಡಾಲರ್‌ಗೆ ಏರಿತು, ಆದರೆ ಒಟ್ಟು ವೆಚ್ಚ ಸುಮಾರು ಆರು ಪಟ್ಟು ಹೆಚ್ಚಾಗಿದ್ದು, 672 ಮಿಲಿಯನ್ ಡಾಲರ್‌ಗಳನ್ನು ತಲುಪಿದೆ. ಮತ್ತು ​ 2021 ರಲ್ಲಿ ನಷ್ಟಗಳು ಸಾಕಷ್ಟು ಕಡಿಮೆ ಆಗಿದೆ ಆದರೆ ನಷ್ಟಗಳು ಇನ್ನೂ ಗಣನೀಯವಾಗಿವೆ. ​ಇದರ ಜೊತೆ ಜೊತೆಗೆ ಕಳೆದ ನಾಲ್ಕು ವರ್ಷಗಳಲ್ಲಿ Zomato ಕಂಪನಿ ಸೈಜ್‌ 3 ರಷ್ಟು ಹೆಚ್ಚಾಗಿದೆ. ​ನಂಬರ್ 3- ಐಪಿಒ ಎಷ್ಟು ಇರುತ್ತದೆ? ​Zomato ದ ಐಪಿಒ ಒಟ್ಟು ಮೊತ್ತ 1.1 ಬಿಲಿಯನ್ ಲಕ್ಷ. ಇದರಲ್ಲಿ 8250 ಶತಕೋಟಿ ರೂಪಾಯಿಯ ಷೇರುಗಳು ಸಾರ್ವಜನಿಕರಿಗೆ ಮೀಸಲು ಮತ್ತು 750 ಬಿಲಿಯನ್ ರೂಪಾಯಿಗಳ ಹೊಸದಾಗಿ ಬಿಡುಗಡೆಯಾದ ಷೇರುಗಳು ಆಫರ್ ಅಲ್ಲಿ ಮಾರಾಟಕ್ಕೆ. ಮತ್ತು ​ಹೆಚ್ಚುವರಿಯಾಗಿ, ಕಂಪನಿಯು ಉದ್ಯೋಗಿಗಳಿಗೆ 30 ಮಿಲಿಯನ್ ಷೇರು ಮಾರಾಟ ಮಾಡಲಿದೆ ಮತ್ತು 1500 ಕೋಟಿ ರೂ.ಗಳ ಪ್ರಿ ಐಪಿಒ ಪ್ಲೇಸ್ಮೆಂಟ್ ಆಗಿದೆ. ಆಫರ್ ಫಾರ್ ಸೇಲ್ ಅಂದ್ರೆ ಪ್ರಸ್ತುತ ಕಂಪೆನಿಯಲ್ಲಿರುವ ಶೇರ್ ಹೋಲ್ಡರ್ ಗಳು ತಮ್ಮ ಶೇರ್ ಅನ್ನ ಡಿವೆಸ್ಟ್ ಮಾಡಿದಾಗ ಅಥವಾ ತಮ್ಮ ನಿಗದಿತ ಸಮಯವನ್ನ ರೀಚ್ ಆದ ನಂತರ ತಮ್ಮ ಸ್ಟಾಕ್ ಅನ್ನು ಮಾರಾಟ ಮಾಡಿದಾಗ ಸಿಗುವ ಆಫರ್ ಆಗಿದೆ. ಕೆಲವೊಮ್ಮೆ ಮಾರುಕಟ್ಟೆ ಕ್ಯಾಪ್ ಮಾನದಂಡಗಳನ್ನು ಪೂರೈಸಲು OFS ಸಹ ನಡೆಯುತ್ತದೆ.Zomatoದ ಐಪಿಒನಲ್ಲಿ, ಕಂಪನಿಯ ಆಂಕರ್ ಹೂಡಿಕೆದಾರ, ಇನ್ಫೋ ಎಡ್ಜ್, ಕಂಪನಿಯಲ್ಲಿನ ತನ್ನ ಪಾಲನ್ನು ಮಾರಾಟ ಮಾಡಲು ಬಯಸಿದೆ. ಆಂಕರ್ ಹೂಡಿಕೆದಾರರು- ಸಾಂಸ್ಥಿಕ ಹೂಡಿಕೆದಾರರು ಮತ್ತು ಮ್ಯೂಚುವಲ್ ಫಂಡ್‌ಗಳು ಅಥವಾ ಪಿಂಚಣಿ ನಿಧಿಗಳಂತಹ ನಿಧಿಗಳಾಗಿರಬಹುದು. ಬನ್ನಿ ಮುಂದಿನ ಹಂತ ನೋಡೋಣ, ಅದು ನಂಬರ್ 4 - ಆಹಾರ ವಿತರಣಾ ಕ್ಷೇತ್ರ - ಅಥವಾ Zomato' ಕಾರ್ಯಾಚರಣೆಯ ಕ್ಷೇತ್ರ - ಇದೀಗ ಹೇಗಿದೆ? ಮತ್ತು ಅದರಲ್ಲಿ Zomato' ಪಾತ್ರ ಮತ್ತು ಸ್ಥಾನ ಏನು? ​ಇದೀಗ ಫುಡ್ ಡೆಲಿವರಿ ಸೆಕ್ಟರರ್‌ನಲ್ಲಿ 2 ಆಟಗಾರರಿದ್ದಾರೆ ಅವರು Zomato ಮತ್ತು Swiggy. Swiggy 47% ನಷ್ಟು ದೊಡ್ಡ ಪಾಲನ್ನು ಹೊಂದಿದ್ದರೆ, Zomato 45% ಪಾಲನ್ನು ಹೊಂದಿದೆ. ​Zomato ಮತ್ತು Swiggy ಗೆ Dominoes ಹಾಗೂ McDonald's ನಂತಹ ಕ್ಯೂಎಸ್ಆರ್ ಬ್ರಾಂಡ್‌ಗಳಿಂದನೂ ಸ್ಪರ್ಧೆ ಇದೆ. ನಾನು ಈಗಾಗಲೇ ಹೇಳ್ತಿನಿ ಅಂತ ಪ್ರಾಮಿಸ್ ಮಾಡಿರುವ ​ಸೆಕ್ಟರ್ disruption ಕುರಿತಾದ ಜ್ಯೂಸಿ ನ್ಯೂಸ್ ಎಂದರೆ - Amazon ಕೂಡ ಆಹಾರ ವಿತರಣಾ ಸೇವಾ ಕ್ಷೇತ್ರಕ್ಕೆ ಪ್ರವೇಶಿಸುವ ಯೋಜನೆಯನ್ನು ಹೊಂದಿದೆ. ಮರಿಬೇಡಿ - Amazon ಈಗಾಗಲೇ ತಂತ್ರಜ್ಞಾನ ಮತ್ತು ವಿತರಣಾ ಮೂಲಸೌಕರ್ಯಗಳನ್ನು ಹೊಂದಿದೆ ಏಕೆಂದರೆ ಅಮೆಜಾನ್ ಡೀಪ್ ಪಾಕೆಟ್ ಹೊಂದಿರುವ ದೈತ್ಯ ಸಂಸ್ಥೆ. ​ನಂಬರ್ 5 - Zomato ಕುರಿತಾದ ಅದ್ಭುತವಾದ ವಿಷಯ ಏನು? ​ಒಳ್ಳೆಯದು, ಇದನ್ನ ಯುನಿಕಾರ್ನ್ ಕಂಪನಿ ಅಥವಾ 1 ಬಿಲಿಯನ್ ಮೌಲ್ಯದ ಒಂದು ಕಂಪನಿ ಎಂದು ಕರೆಯುವುದರ ಜೊತೆಗೆ, ನಾವು ಈಗಾಗಲೇ ಚರ್ಚಿಸಿದಂತೆ, ಇದೀಗ ಆಹಾರ ವಿತರಣಾ ಸೇವಾ ವಲಯದಲ್ಲಿ 2 ಕಂಪನಿಗಳಿವೆ - Swiggy ಮತ್ತು Zomato. ಹೆಚ್ಚು ಜನಸಂದಣಿಯಿಲ್ಲದ ಸ್ಥಳದಲ್ಲಿ ಸ್ಪಷ್ಟವಾಗಿ ಈ ಎರಡೂ ಕಂಪನಿಗಳು ಹೆಚ್ಚು ಗಮನ ಸೆಳೆಯಲು ಇಚ್ಚಿಸುತ್ತವೆ. ​Uber Eats ಮಾರುಕಟ್ಟೆಯನ್ನ ಪ್ರವೇಶಿಸಲು ಪ್ರಯತ್ನಿಸಿದೆ Zomato ಇಲ್ಲದಿದ್ದರೆ Uber Eats ಎಲ್ಲಾವನ್ನು ಸ್ವಾಧೀನಪಡಿಸಿಕೊಳ್ಳುತ್ತಿತು. ಜನವರಿ 2020 ಮೇ Zomato - Uber Eats ಅನ್ನು ಸ್ವಾಧೀನ ಪಡಿಸಿಕೊಂಡಿತ್ತು. ​ನಂಬರ್ 6- ನಿರೀಕ್ಷಿತ ಷೇರು ಬೆಲೆ ಅಥವಾ ಮುಖಬೆಲೆ ​Zomato ಷೇರುಗಳ ಮುಖಬೆಲೆ 10 ರೂ. ​ಸಂಖ್ಯೆ 7- Zomato ಐಪಿಒನ ರಿಟೇಲ್ portion ​ನಾನು ಹೇಳ್ತಿರೋದು ಏನೆಂದರೆ 8250 ಕೋಟಿ ರೂ. ಸಾರ್ವಜನಿಕರಿಗೆ ಮುಕ್ತವಾಗಲಿದೆ ಆದರೆ ಅದು ನಿಮ್ಮ ಮತ್ತು ನನ್ನಂತಹ ಹೂಡಿಕೆದಾರರನ್ನು ಒಳಗೊಂಡಿಲ್ಲ, ಅಂದ್ರೆ ರಿಟೈಲ್ ಇನ್ವೆಸ್ಟರ್ಸ್ ಮತ್ತು ಇನ್ಸ್ಟಿಟ್ಯುಸ್ಷನಲ್ ಇನ್ವೆಸ್ಟರ್ಸ್(Institutional investors) ಅನ್ನ ಒಳಗೊಂಡಿದೆ . ವಿವಿಧ ವರ್ಗದ ಹೂಡಿಕೆದಾರರು ಐಪಿಒನ ನಿರ್ದಿಷ್ಟ ಹಂಚಿಕೆಯನ್ನು ಪಡೆಯುತ್ತಾರೆ. Zomato ಐಪಿಒ ನಲ್ಲಿ 35% retail portion ಇರುತ್ತೆ ಅಂದರೆ ನಿಮ್ಮ ಮತ್ತು ನನ್ನಂತಹ ವೈಯಕ್ತಿಕ ಹೂಡಿಕೆದಾರರು ಒಟ್ಟು ಐಪಿಒ ಮೊತ್ತದ ಮೂರನೇ ಒಂದು ಭಾಗದಷ್ಟು ಮಾತ್ರ ಪ್ರವೇಶಿಸಬಹುದು. ​ಇವುಗಳೇ ಜೊಮಾಟೊ ಐಪಿಒ ಸುತ್ತಲಿನ ಪ್ರಮುಖ ಸಂಗತಿಗಳು. ಸ್ನೇಹಿತರೆ , ಯಾವುದೇ ಸ್ಟಾಕ್ ಮಾರ್ಕೆಟ್ನಲ್ಲಿ ಹೂಡಿಕೆ ಮಾಡುವ ಮೊದಲು ಕಂಪನಿಗೆ ಸಂಬಂಧಿತ ಸುದ್ದಿ ಮತ್ತು ಹಣಕಾಸು ದಾಖಲೆಗಳ ಮೇಲೆ ಗಮನ ಇರಬೇಕು. ಬೇರೆ ಎಲ್ಲೂ ಜಾಸ್ತಿ ಗಮನ ಹರಿಸುವ ಅವಶ್ಯಕತೆ ಇಲ್ಲ. Zomatoದ ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್ ಅನ್ನು ನೀವೇ ಸ್ಟಡಿ ಮಾಡಿ . ಸ್ಟಾಕ್ ಮಾರುಕಟ್ಟೆ ಹೂಡಿಕೆಗಳು ಎಂದರೆ, ಅಪಾಯವು ಇದ್ದೆ ಇದೆ . ದೈನಂದಿನ ಖರ್ಚುಗಳನ್ನು ಲೆಕ್ಕಹಾಕಿದ ನಂತರ ನೀವು ಹೆಚ್ಚುವರಿಯಾಗಿ ಸಂಗ್ರಹಿಸಿದ ಬಂಡವಾಳವನ್ನ ಹೂಡಿಕೆ ಮಾಡಿ. ​ಈಗ ಅಪಾಯವನ್ನು ನಿವಾರಿಸಲಾಗುವುದಿಲ್ಲ ಆದರೆ ಎಚ್ಚರಿಕೆಯಿಂದ ಆಯ್ಕೆ ಮಾಡುವುದರ ಮೂಲಕ ಅದನ್ನು ಕಡಿಮೆ ಮಾಡಬಹುದು, ಹೂಡಿಕೆಗೂ ಮುನ್ನ ಸ್ವತಃ ರಿಸರ್ಚ್ ನಿಮ್ಮ ಹೂಡಿಕೆಯ ಬಗ್ಗೆ ಟ್ಯಾಬ್‌ಗಳನ್ನು ಇಡುವುದು ಅತ್ಯಗತ್ಯ, ಇಂತಹ ಎಜುಕೇಷನಲ್ ಪಾಡ್‌ಕಾಸ್ಟ್‌ಗಳನ್ನ ಕೇಳುವ ಮೂಲಕ ವಿಷ್ಯಗಳನ್ನ ತಿಳಿಯಿರಿ ಮತ್ತು ನಿಮ್ಮನ್ನ ನೀವು ಶಿಕ್ಷಿತರನ್ನಾಗಿರಿಸಿ . ನೆನಪಿಡಿ - ಈ ಪಾಡ್‌ಕ್ಯಾಸ್ಟ್ ನಿಮಗೆ ಮಾಹಿತಿ ನೀಡುವುದಕ್ಕಾಗಿಯೇ,ಆದರೆ ಇದರರ್ಥ ನೀವು ಸಂಶೋಧನೆ ಮಾಡುವುದು ಬೇಡ. ಎಂದಲ್ಲ - ನೀವು ಇದೆಲ್ಲವನ್ನ Angel Broking ಅಪ್ಲಿಕೇಶನ್ ಬಳಸುವುದರ ಮೂಲಕ ಪಡೀಬಹುದು . ಈ ರೀತಿಯ ಆಸಕ್ತಿದಾಯಕ ಪಾಡ್ಕ್ಯಾಸ್ಟ್ ಗಳಿಗಾಗಿ ನಮ್ಮ ವೆಬ್‌ಸೈಟ್, ಯೂಟ್ಯೂಬ್ ಮತ್ತು ಇತರ ಸೋಶಿಯಲ್ ಮೀಡಿಯಾ ಚಾನೆಲ್‌ಗಳನ್ನ ಫಾಲೋ ಮಾಡಿ. ಅಲ್ಲಿಯವರೆಗೆ ಗುಡ್ ಬೈ ಮತ್ತು ಹ್ಯಾಪಿ ಇನ್ವೆಸ್ಟಿಂಗ್! ​ಹೂಡಿಕೆಗಳು ಮತ್ತು ಸೆಕ್ಯುರಿಟೀಸ್ ಮಾರ್ಕೆಟ್ಗಳು ಮಾರುಕಟ್ಟೆಯ ಅಪಾಯಗಳಿಗೆ ಒಳಪಟ್ಟಿರುತ್ತವೆ. ಹೂಡಿಕೆ ಮಾಡುವ ಮೊದಲು ಎಲ್ಲಾ ಸಂಬಂಧಿತ ದಾಖಲೆಗಳನ್ನು ಎಚ್ಚರಿಕೆಯಿಂದ ಓದಿ.