CALCULATE YOUR SIP RETURNS

ವ್ಯತ್ಯಾಸವನ್ನು ತಿಳಿಯಿರಿ: ಎಂಟಿಎಫ್ (MTF) ಪ್ಲೆಡ್ಜ್ ವರ್ಸಸ್ ಮಾರ್ಜಿನ್ ಪ್ಲೆಡ್ಜ್

2 min readby Angel One
Share

ನೀವು ಟ್ರೇಡರ್ ಆಗಿದ್ದರೆ ಮತ್ತು ಎಂಟಿಎಫ್ (MTF) ಪ್ಲೆಡ್ಜ್ ಮತ್ತು ಮಾರ್ಜಿನ್ ಪ್ಲೆಡ್ಜಿಂಗ್ ಪದಗಳು ನಿಮಗೆ ಗೊಂದಲ ಉಂಟು ಮಾಡಿದರೆ, ನೀವು ಸರಿಯಾದ ಸ್ಥಳದಲ್ಲಿದ್ದೀರಿ. ಕೆಳಗಿನ ಟೇಬಲ್ ಅವುಗಳು ಪರಸ್ಪರದಿಂದ ಹೇಗೆ ಭಿನ್ನವಾಗಿವೆ ಎಂಬುದನ್ನು ನಿಮಗೆ ತಿಳಿಸುತ್ತದೆ.

  ಎಂಟಿಎಫ್ (MTF) ಪ್ಲೆಡ್ಜ್ ಮಾರ್ಜಿನ್ ಪ್ಲೆಡ್ಜ್
ಇದರ ಅರ್ಥವೇನು? ಇದು SEBI ಪರಿಚಯಿಸಿದ ಕಡ್ಡಾಯ ಪ್ರಕ್ರಿಯೆಯಾಗಿದೆ. ಮಾರ್ಜಿನ್ ಟ್ರೇಡಿಂಗ್ ಸೌಲಭ್ಯ (MTF) ಅಡಿಯಲ್ಲಿ ನೀವು ಷೇರುಗಳನ್ನು ಖರೀದಿಸಿದಾಗ, ಸ್ಥಾನವನ್ನು ಹಿಡಿದುಕೊಳ್ಳುವುದನ್ನು ಮುಂದುವರೆಸಲು ನೀವು ಅದೇ ದಿನ 9 pm ಗಿಂತ ಮೊದಲು ಆ ಷೇರುಗಳನ್ನು ಪ್ಲೆಡ್ಜ್ ಮಾಡಬೇಕು. ಮಾರ್ಜಿನ್ ಪ್ಲೆಡ್ಜ್ ಎಂದರೆ ಹೆಚ್ಚುವರಿ ಮಾರ್ಜಿನ್ ಪಡೆಯಲು ನಿಮ್ಮ ಡಿಮ್ಯಾಟ್ ಅಕೌಂಟಿನಲ್ಲಿ ನಿಮ್ಮ ಅಸ್ತಿತ್ವದಲ್ಲಿರುವ ಸೆಕ್ಯೂರಿಟಿಗಳನ್ನು ಅಡಮಾನವಾಗಿ ಬಳಸುವುದು.

ಇದು ನೀವು ಆಸ್ತಿಯನ್ನು ಅಡಮಾನವಾಗಿ ಬಳಸುವ ಯಾವುದೇ ಇತರ ಅಡಮಾನ ಲೋನ್‌ನಂತೆ ಕಾರ್ಯನಿರ್ವಹಿಸುತ್ತದೆ.

ಪ್ರಾಡಕ್ಟ್ ಲಭ್ಯತೆ MTF ಅಡಿಯಲ್ಲಿ ಖರೀದಿಸಿದ ಷೇರುಗಳಿಗೆ ಮಾತ್ರ ಪ್ಲೆಡ್ಜ್ ಮಾಡಲಾದ ಷೇರುಗಳ ಮೇಲೆ ಲಭ್ಯವಿದೆ. ಡಿಮ್ಯಾಟ್ ಅಕೌಂಟಿನಿಂದ ಪ್ಲೆಡ್ಜ್ ಮಾಡಲಾದ ಸೆಕ್ಯೂರಿಟಿಗಳ ಮೇಲೆ ಲಭ್ಯವಿದೆ.
ಪ್ಲೆಡ್ಜ್ ಮಾಡುವುದು ಹೇಗೆ? ಒಮ್ಮೆ ಟ್ರೇಡಿಂಗ್ ಅನ್ನು MTF ಅಡಿಯಲ್ಲಿ ಯಶಸ್ವಿಯಾಗಿ ಕಾರ್ಯಗತಗೊಳಿಸಿದ ನಂತರ,

● MTF ಅಡವಿಡುವ ಕೋರಿಕೆ ಆರಂಭಕ್ಕೆ ಸಂಬಂಧಿಸಿದ ಸಂವಹನಗಳಿಗಾಗಿ ನಿಮ್ಮ ಇಮೇಲ್/SMS ಪರಿಶೀಲಿಸಿ

● CDSL ವೆಬ್‌ಸೈಟಿಗೆ ಮರುನಿರ್ದೇಶಿಸಲು ಇಮೇಲ್/SMS ನಲ್ಲಿ CDSL ಲಿಂಕ್ ಕ್ಲಿಕ್ ಮಾಡಿ

● ಪ್ಯಾನ್/ಡಿಮ್ಯಾಟ್ ಅಕೌಂಟ್ ವಿವರಗಳನ್ನು ನಮೂದಿಸಿ

● ಪ್ಲೆಡ್ಜ್ ಮಾಡಲು ಸ್ಟಾಕ್‌ಗಳನ್ನು ಆಯ್ಕೆಮಾಡಿ

● OTP ಜನರೇಟ್ ಮಾಡಿ

● ಪ್ರಕ್ರಿಯೆಯನ್ನು ಅಧಿಕೃತಗೊಳಿಸಲು ಮತ್ತು ಪೂರ್ಣಗೊಳಿಸಲು ಪಡೆದ OTP ಯನ್ನು ನಮೂದಿಸಿ

● ಏಂಜಲ್ ಒನ್ ಅಪ್ಲಿಕೇಶನ್‌ಗೆ ಲಾಗಿನ್ ಮಾಡಿ, ಪೇಜಿನ ಕೆಳಭಾಗದಲ್ಲಿರುವ 'ಫಂಡ್‌ಗಳು' ಕ್ಲಿಕ್ ಮಾಡಿ, 'ಪ್ಲೆಡ್ಜ್ ಹೋಲ್ಡಿಂಗ್‌ಗಳು' ಕ್ಲಿಕ್ ಮಾಡಿ’

● ' ಇನ್ಕ್ರೀಸ್ ಮಾರ್ಜಿನ್’ ಮೇಲೆ ಕ್ಲಿಕ್ ಮಾಡಿ ಮತ್ತು ಪ್ಲೆಡ್ಜ್ ಮಾಡಲು ಸೆಕ್ಯೂರಿಟಿಗಳು ಮತ್ತು ಪ್ರಮಾಣವನ್ನು ಆಯ್ಕೆಮಾಡಿ

● ಅನುಮೋದನೆ ಪ್ರಕ್ರಿಯೆಯನ್ನು ಆರಂಭಿಸಲು ' ಕ್ರಿಯೇಟ್ ಮಾರ್ಜಿನ್' ಮೇಲೆ ಕ್ಲಿಕ್ ಮಾಡಿ

● CDSL ನಿಂದ ಇಮೇಲ್/SMS ನೋಡಿ ಮತ್ತು ಮಾರ್ಜಿನ್ ಪ್ಲೆಡ್ಜ್ ಕೋರಿಕೆಯನ್ನು ಅನುಮೋದಿಸಲು ಪಡೆದ OTP ಯನ್ನು ನಮೂದಿಸಿ

 

 

ಪ್ಲೆಡ್ಜ್ ಮಾಡುವ ಕಾಲಾವಧಿ ಖರೀದಿಯ ದಿನದಂದು 9 pm ಗಿಂತ ಮೊದಲು MTF ಅಡಿಯಲ್ಲಿ ಖರೀದಿಸಿದ ಷೇರುಗಳನ್ನು ನೀವು ಪ್ಲೆಡ್ಜ್ ಮಾಡುವ ಅಗತ್ಯವಿದೆ. ನೀವು ನಿಮ್ಮ ಹೆಚ್ಚುವರಿ ಮಿತಿ/ಮಾರ್ಜಿನ್ ಅನ್ನು ಹೆಚ್ಚಿಸಲು ಬಯಸಿದಾಗ ನಿಮ್ಮ ಸೆಕ್ಯೂರಿಟಿಗಳನ್ನು ನೀವು ಪ್ಲೆಡ್ಜ್ ಮಾಡಬಹುದು.
ನೀವು ಸಮಯಕ್ಕೆ ಸರಿಯಾಗಿ ಪ್ಲೆಡ್ಜ್ ಮಾಡದಿದ್ದರೆ ಏನಾಗುತ್ತದೆ? ಒಂದು ವೇಳೆ ನೀವು ಅದೇ ದಿನ 9 pm ಗಿಂತ ಮೊದಲು ಪ್ಲೆಡ್ಜ್ ಮಾಡದಿದ್ದರೆ ಅಥವಾ ಮಾರ್ಜಿನ್ ಕೊರತೆಯನ್ನು ಹೊಂದಿದ್ದರೆ, ಅದು T+7 ದಿನದಂದು ಆಟೋಮ್ಯಾಟಿಕ್ ಸ್ಕ್ವೇರಿಂಗ್ ಅನ್ನು ಟ್ರಿಗರ್ ಮಾಡುತ್ತದೆ. ಹೆಚ್ಚುವರಿ ಮಿತಿ/ಮಾರ್ಜಿನ್ ಪಡೆಯಲು ನೀವು ಯಾವುದೇ ಸಮಯದಲ್ಲಿ ಸೆಕ್ಯೂರಿಟಿಗಳನ್ನು ಪ್ಲೆಡ್ಜ್ ಮಾಡಬಹುದು.
ಯಾವುದನ್ನು ಪ್ಲೆಡ್ಜ್ ಮಾಡಬಹುದು? ಅನುಮೋದಿತ ಇಕ್ವಿಟಿ ಷೇರುಗಳು. ಅನುಮೋದಿತ ಸೆಕ್ಯೂರಿಟಿಗಳು (ಸ್ಟಾಕ್‌ಗಳು, ಎಕ್ಸ್‌ಚೇಂಜ್ ಟ್ರೇಡೆಡ್ ಫಂಡ್‌ಗಳು, ಸಾವರೇನ್ ಗೋಲ್ಡ್ ಬಾಂಡ್‌ಗಳು, ಮ್ಯೂಚುಯಲ್ ಫಂಡ್‌ಗಳು).
ಏಂಜಲ್ ಒನ್ ಮೇಲೆ ಶುಲ್ಕಗಳು ಅನ್ವಯವಾಗುತ್ತವೆ ಪ್ರಮಾಣವನ್ನು ಹೊರತುಪಡಿಸಿ ಪ್ರತಿ ಸ್ಕ್ರಿಪ್‌ಗೆ MTF ಪ್ಲೆಡ್ಜ್ ಅಥವಾ ಅನ್-ಪ್ಲೆಡ್ಜ್ ವೆಚ್ಚ ರೂ. 20 + GST.

ಪ್ಲೆಡ್ಜ್ ಮಾಡದ ಸ್ಕ್ರಿಪ್‌ಗಳ ನೇರ ಮಾರಾಟದ ಮೇಲೆಯೂ ಅಡವಿಡದ ಶುಲ್ಕಗಳನ್ನು ವಿಧಿಸಲಾಗುತ್ತದೆ.

ಮಾರ್ಜಿನ್ ಪ್ಲೆಡ್ಜ್ ಮಾಡುವ ಅಥವಾ ಪ್ಲೆಡ್ಜ್ ಮಾಡುವ ವೆಚ್ಚವು ಪ್ರಮಾಣವನ್ನು ಹೊರತುಪಡಿಸಿ ಪ್ರತಿ ಸ್ಕ್ರಿಪ್‌ಗೆ ರೂ. 20 + GST ಆಗಿದೆ.

ಪ್ಲೆಡ್ಜ್ ಮಾಡದ ಸ್ಕ್ರಿಪ್‌ಗಳ ನೇರ ಮಾರಾಟದ ಮೇಲೆಯೂ ಅಡವಿಡದ ಶುಲ್ಕಗಳನ್ನು ವಿಧಿಸಲಾಗುತ್ತದೆ.

ಮಾರ್ಜಿನ್ ಅಡವಿಡುವುದರಿಂದ ಮಾರುಕಟ್ಟೆಯಲ್ಲಿ ದೊಡ್ಡ ಬೆಟ್ ಇರಿಸಲು ನಿಮ್ಮ ಖರೀದಿ ಸಾಮರ್ಥ್ಯವನ್ನು ಹೆಚ್ಚಿಸಲು ನಿಮಗೆ ಅನುವು ಮಾಡಿಕೊಡುತ್ತದೆ, MTF ಅಡವಿಡುವುದು SEBI ವಿಧಿಸುವ ಕಡ್ಡಾಯ ಅಭ್ಯಾಸವಾಗಿದೆ.

ಮೇಲಿನ ಟೇಬಲ್ ನಿಮಗೆ MTF ಪ್ಲೆಡ್ಜ್ ಮತ್ತು ಮಾರ್ಜಿನ್ ಪ್ಲೆಡ್ಜ್ ನಡುವೆ ಸ್ಪಷ್ಟ ವ್ಯಾಖ್ಯಾನವನ್ನು ನೀಡುತ್ತದೆ ಎಂದು ನಾವು ಭಾವಿಸುತ್ತೇವೆ. ಟ್ರೇಡಿಂಗ್ ಮಾಡುವಾಗ ಮಾಹಿತಿಯುಕ್ತ ಆಯ್ಕೆಗಳನ್ನು ಮಾಡಲು ಈ ಅಡಮಾನಗಳ ಬಗ್ಗೆ ನಿಮ್ಮ ತಿಳುವಳಿಕೆಯನ್ನು ವಿಸ್ತರಿಸಲು ನಾವು ಶಿಫಾರಸು ಮಾಡುತ್ತೇವೆ.

MTF ಪ್ಲೆಡ್ಜ್ ಬಗ್ಗೆ ಇನ್ನಷ್ಟು ತಿಳಿಯಲು, ಇಲ್ಲಿ ಕ್ಲಿಕ್ ಮಾಡಿ

ಮಾರ್ಜಿನ್ ಪ್ಲೆಡ್ಜ್ ಬಗ್ಗೆ ಇನ್ನಷ್ಟು ತಿಳಿಯಲು, ಇಲ್ಲಿ ಕ್ಲಿಕ್ ಮಾಡಿ

ಹಕ್ಕುತ್ಯಾಗ: ಸೆಕ್ಯೂರಿಟಿಗಳ ಮಾರುಕಟ್ಟೆಯಲ್ಲಿನ ಹೂಡಿಕೆಗಳು ಮಾರುಕಟ್ಟೆಯ ಅಪಾಯಕ್ಕೆ ಒಳಪಟ್ಟಿರುತ್ತವೆ, ಹೂಡಿಕೆ ಮಾಡುವ ಮೊದಲು ಎಲ್ಲಾ ಸಂಬಂಧಿತ ಡಾಕ್ಯುಮೆಂಟ್‌ಗಳನ್ನು ಎಚ್ಚರಿಕೆಯಿಂದ ಓದಿ.

Open Free Demat Account!
Join our 3 Cr+ happy customers