ನಿಮ್ಮ ಡಿಮ್ಯಾಟ್ ಕೋರಿಕೆಯನ್ನು ತಿರಸ್ಕರಿಸಿದರೆ ನೀವು ಏನು ಮಾಡಬೇಕು

1 min read

1996ರಲ್ಲಿ ಭಾರತದಲ್ಲಿ ಆನ್ಲೈನ್ ಡಿಮ್ಯಾಟ್ ಅಕೌಂಟ್‌ಗಳನ್ನು ಪರಿಚಯಿಸಲಾಯಿತು. ಈ ಮೊದಲು ಹೆಚ್ಚಿನ ಟ್ರೇಡಿಂಗ್ ಕಾಗದ-ಆಧಾರಿತವಾಗಿತ್ತು. ಹೂಡಿಕೆದಾರರು ಷೇರುಗಳನ್ನು ಖರೀದಿಸಿದರು ಮತ್ತು ಅವುಗಳನ್ನು ಭೌತಿಕ ರೂಪದಲ್ಲಿ ಹಿಡಿದಿದ್ದರು. ಇದರರ್ಥ ಭೌತಿಕ ಪ್ರಮಾಣಪತ್ರಕ್ಕೆ ನಷ್ಟ ಅಥವಾ ಹಾನಿ, ಹೆಸರು ಅಥವಾ ಸಹಿಯಲ್ಲಿನ ವ್ಯತ್ಯಾಸ ಮತ್ತು ಇತರ ಕಾಗದ-ಕೆಲಸ ಸಂಬಂಧಿತ ಸಮಸ್ಯೆಗಳಂತಹ ಹಲವಾರು ಸಮಸ್ಯೆಗಳು ಇದ್ದವು. ಡಿಮ್ಯಾಟ್ ಖಾತೆಗಳ ಆಗಮನವು ಅಂತಹ ನಿಸ್ಸಂದಿಗ್ಧ ಸಮಸ್ಯೆಗಳನ್ನು ನಿರ್ಮೂಲನೆ ಮಾಡಿದೆ. ಆದಾಗ್ಯೂ ಅನೇಕ ಹೂಡಿಕೆದಾರರು ತಮ್ಮ ಇಕ್ವಿಟಿಗಳನ್ನು ಭೌತಿಕ ರೂಪದಲ್ಲಿ ಹೊಂದಿದ್ದಾರೆ. ಡಿಮ್ಯಾಟ್-ಪೂರ್ವ ಖಾತೆಯ ಯುಗದಲ್ಲಿ ತಮ್ಮ ಷೇರುಗಳನ್ನು ಖರೀದಿಸಿದ ಮತ್ತು ಅವುಗಳನ್ನು ಡಿಮೆಟಿರಿಯಲೈಸ್ ಮಾಡಲು ಮರೆತಿರುವ ಅಥವಾ ಷೇರು ಮಾರುಕಟ್ಟೆಗಳಲ್ಲಿ ಸಕ್ರಿಯವಾಗಿ ಭಾಗವಹಿಸದ ಹೂಡಿಕೆದಾರರ ವಿಷಯದಲ್ಲಿ ಇದು ವಿಶೇಷವಾಗಿ ನಿಜವಾಗಿದೆ. ಅಂತಹ ಹೂಡಿಕೆದಾರರು ಇಂದು ತಮ್ಮ ಹೋಲ್ಡಿಂಗ್‌ಗಳನ್ನು ಮಾರಾಟ ಮಾಡಲು ಬಯಸಿದರೆ, ಅವರು ಮೊದಲು ತಮ್ಮ ಷೇರುಗಳನ್ನು ಡಿಮ್ಯಾಟ್ ಅಥವಾ ಡಿಮೆಟಿರಿಯಲೈಸ್ಡ್ ರೂಪದಲ್ಲಿ ಪರಿವರ್ತಿಸಬೇಕು. ಇದನ್ನು ಡಿಮ್ಯಾಟ್ ಕೋರಿಕೆ ಫಾರ್ಮ್ ಅಥವಾ DRF ಬಳಸಿಕೊಂಡು ಮಾಡಲಾಗುತ್ತದೆ, ಅದನ್ನು ನಿಮ್ಮ ಡೆಪಾಸಿಟರಿ ಪಾರ್ಟಿಸಿಪಂಟ್ಸ್ ರಿಗೆ ಅಥವಾ DP ಗೆ ಸಲ್ಲಿಸಬೇಕು. ಆದಾಗ್ಯೂ, ಕೆಲವೊಮ್ಮೆ ಡಿಮ್ಯಾಟ್ ಕೋರಿಕೆಯು ತಿರಸ್ಕಾರಗೊಳ್ಳಬಹುದು. ಅಂತಹ ಸಂದರ್ಭದಲ್ಲಿ ಏನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳಲು ಓದಿ.

ಡಿಮ್ಯಾಟ್ ಕೋರಿಕೆ ಫಾರ್ಮ್ ಎಂದರೇನು ಮತ್ತು ಸಲ್ಲಿಕೆ ಪ್ರಕ್ರಿಯೆ ಎಂದರೇನು?

ಡಿಮ್ಯಾಟ್ ಕೋರಿಕೆ ಫಾರಂ ಅಥವಾ DRF ಎನ್ನುವುದು ಸೆಕ್ಯೂರಿಟಿ ಗಳನ್ನು ಹೊಂದಿರುವವರು ತಮ್ಮ ಹೋಲ್ಡಿಂಗ್ ಗಳನ್ನು ಡಿಮೆಟೀರಿಯಲೈಸ್ ಮಾಡಿದ ರೂಪಕ್ಕೆ ಪರಿವರ್ತಿಸಲು ಬಯಸಿದಾಗ ಭರ್ತಿ ಮಾಡುವ ಒಂದು ಫಾರ್ಮ್ ಆಗಿದೆ. ನೀವು ನಿಮ್ಮ ಇಕ್ವಿಟಿಯನ್ನು ಮಾರಾಟ ಮಾಡಲು ಬಯಸಿದರೆ ಡಿಮಟೀರಿಯಲೈಸೇಶನ್ ಮಾಡುವ ಅಗತ್ಯವಿದೆ. ನೀವು DRF ಅನ್ನು ಭರ್ತಿ ಮಾಡಿದ ನಂತರ, ಅದನ್ನು ಹೋಲ್ಡಿಂಗ್‌ಗಳ ಮಾಲೀಕತ್ವದ ಭೌತಿಕ ಪ್ರಮಾಣಪತ್ರಗಳೊಂದಿಗೆ ನಿಮ್ಮ DP ಗೆ ಸಲ್ಲಿಸಬೇಕು. DP ನೀವು ಭರ್ತಿ ಮಾಡಿದ ಎಲ್ಲಾ ವಿವರಗಳನ್ನು ಪರಿಶೀಲಿಸುತ್ತಾರೆ ಮತ್ತು ಸಂಬಂಧಪಟ್ಟ ಕಂಪನಿ ಅಥವಾ ಅದರ ರಿಜಿಸ್ಟ್ರಾರ್ ಮತ್ತು ಟ್ರಾನ್ಸ್‌ಫರ್ (R&T) ಏಜೆಂಟ್‌ಗೆ ಡಿಮ್ಯಾಟ್ ಕೋರಿಕೆಯನ್ನು ಫಾರ್ವರ್ಡ್ ಮಾಡುತ್ತಾರೆ. ರಿಜಿಸ್ಟ್ರಾರ್ ಮತ್ತು ಟ್ರಾನ್ಸ್‌ಫರ್ (R&T) ಏಜೆಂಟ್ ಕಂಪನಿಯು ಎಲ್ಲಾ ಷೇರು ಮಾಲೀಕರನ್ನು ಟ್ರ್ಯಾಕ್ ಮಾಡಲು ಮತ್ತು ಕಂಪನಿಯ ಷೇರುದಾರರ ವರ್ಗಾವಣೆಯನ್ನು ನಿಗದಿಪಡಿಸಲು ನಿರ್ದಿಷ್ಟವಾಗಿ ನೇಮಿಸಿದ ಅಧಿಕಾರಿಯಾಗಿದ್ದಾರೆ. ಒಮ್ಮೆ ವಿತರಕ ಕಂಪನಿಯ ಆರ್&ಟಿ (R&T) ಪ್ರತಿನಿಧಿಯಿಂದ ಡಿಮ್ಯಾಟ್ ಕೋರಿಕೆ ಫಾರ್ಮ್ ಪಡೆದ ನಂತರ, ಅವರು ಫಾರಂ ಅನ್ನು ಮತ್ತೊಮ್ಮೆ ಪರಿಶೀಲಿಸುತ್ತಾರೆ ಮತ್ತು ಅದನ್ನು ಸಂಬಂಧಪಟ್ಟ ಡೆಪಾಸಿಟರಿಯಾದ CDSL ಅಥವಾ NSDL ಗೆ ಕಳುಹಿಸುತ್ತಾರೆ. ಆದ್ದರಿಂದ ಈ ಸಂಪೂರ್ಣ ಚೈನ್‌ನಲ್ಲಿ, ನಿಮ್ಮ ಡಿಆರ್‌ಎಫ್ (DRF) ಅನ್ನು ಎರಡು ಹಂತಗಳಲ್ಲಿ ಪರಿಶೀಲಿಸಲಾಗುತ್ತದೆ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ – ಮೊದಲು ಡಿಪಿ (DP) ಯಿಂದ ಮತ್ತು ಎರಡನೆಯದು ರಿಜಿಸ್ಟ್ರಾರ್ ರಿಂದ. ಆದ್ದರಿಂದ ಈ ಎರಡು ಹಂತಗಳಲ್ಲಿ ಯಾವುದಾದರೂ ಒಂದರಲ್ಲಿ ಅದನ್ನು ತಿರಸ್ಕರಿಸಬಹುದು. ಪ್ರತಿ ಹಂತದಲ್ಲಿ ತಿರಸ್ಕಾರದ ಕಾರಣಗಳನ್ನು ನಾವು ಈ ಕೆಳಗೆ ನೋಡೋಣ ಮತ್ತು ಪ್ರತಿ ಸಂದರ್ಭದಲ್ಲಿ ನೀವು ಯಾವ ಪರಿಹಾರದ ಕ್ರಮವನ್ನು ಕೈಗೊಳ್ಳಬಹುದು ಎಂಬುದನ್ನು ಓದೋಣ.

ಡಿಮೆಟೀರಿಯಲೈಸೇಶನ್ ಕೋರಿಕೆ ಫಾರಂ ಡಿಪಿ (DP) ಯಿಂದ ತಿರಸ್ಕರಿಸಲ್ಪಟ್ಟಾಗ

ನಿಮ್ಮ DP ಗಾಗಿ DP ಪರಿಶೀಲನೆಯ ಮೊದಲ ಹಂತವಾಗಿದೆ. ಈ ಕೆಳಗಿನ ಕಾರಣಗಳಿಗಾಗಿ ಇವರು ನಿಮ್ಮ ಡಿಮ್ಯಾಟ್ ಕೋರಿಕೆ ಫಾರ್ಮ್ ಅನ್ನು ತಿರಸ್ಕರಿಸಬಹುದು

ಪ್ರತಿ ಪ್ರಮಾಣಪತ್ರಕ್ಕೆ ಡಿಮ್ಯಾಟ್ ಕೋರಿಕೆ ಫಾರ್ಮ್ ನಂಬರ್ ಅನನ್ಯವಾಗಿಲ್ಲ

ನೀವು ಹೊಂದಿರುವ ಪ್ರತಿಯೊಂದು ಭೌತಿಕ ಪ್ರಮಾಣಪತ್ರಕ್ಕಾಗಿ, ನೀವು ತಾಜಾ ಪ್ರಮಾಣಪತ್ರವನ್ನು ಭರ್ತಿ ಮಾಡಬೇಕಾಗುತ್ತದೆ ಮತ್ತು ಹೊಸ ಡಿಮ್ಯಾಟ್ ಕೋರಿಕೆ ಫಾರ್ಮ್ ಸಂಖ್ಯೆಯನ್ನು ರಚಿಸಬೇಕು. ಒಂದು ವೇಳೆ ನಿಮ್ಮ DP ಈ ಕಾರಣಕ್ಕಾಗಿ ನಿಮ್ಮ ಫಾರಂ ಅನ್ನು ತಿರಸ್ಕರಿಸಿದರೆ, ನಿಮ್ಮ ಪ್ರತಿಯೊಂದು ಹೋಲ್ಡಿಂಗ್ ಗೆ ನೀವು ಹೊಸ ಫಾರಂ ಅನ್ನು ಭರ್ತಿ ಮಾಡಬಹುದು.

ಸರ್ಟಿಫಿಕೇಟ್ ಮತ್ತು ಡಿಮ್ಯಾಟ್ ಅಕೌಂಟ್‌ನಲ್ಲಿ ಹೆಸರು ಹೊಂದಾಣಿಕೆಯಾಗುತ್ತಿಲ್ಲ

ನಿಮ್ಮ ಹೋಲ್ಡಿಂಗ್ ಸರ್ಟಿಫಿಕೇಟ್‌ನಲ್ಲಿರುವ ಹೆಸರು ಡಿಪಿ (DP) ಯೊಂದಿಗೆ ನಿಮ್ಮ ಡಿಮ್ಯಾಟ್ ಅಕೌಂಟಿನಲ್ಲಿರುವ ಹೆಸರಿನಂತೆಯೇ ಇರಬೇಕು. ಈ ಸಂದರ್ಭದಲ್ಲಿ, ನೀವು ಎರಡು ಆಯ್ಕೆಗಳನ್ನು ಹೊಂದಿದ್ದೀರಿ. ನೀವು ಹೆಸರಿನ ಸಮಸ್ಯೆಗಳನ್ನು ಸರಿಪಡಿಸುವ ಕಾನೂನು ಅಫಿಡವಿಟ್ ಅನ್ನು ಸಲ್ಲಿಸಬಹುದು ಅಥವಾ ನಿಮ್ಮ ಹೋಲ್ಡಿಂಗ್ ಪ್ರಮಾಣಪತ್ರದಲ್ಲಿನ ಹೆಸರಿಗೆ ಹೊಂದಿಕೆಯಾಗುವ ಹೊಸ ಡಿಮ್ಯಾಟ್ ಖಾತೆಯನ್ನು ನೀವು ತೆರೆಯಬಹುದು.

ಷೇರುಗಳ ಸಂಖ್ಯೆಯಲ್ಲಿ ಹೊಂದಾಣಿಕೆಯಾಗುತ್ತಿಲ್ಲ

ನಿಮ್ಮ ಡಿಮ್ಯಾಟ್ ಕೋರಿಕೆ ಫಾರ್ಮ್‌ನಲ್ಲಿ ನಮೂದಿಸಲಾದ ಷೇರುಗಳ ಸಂಖ್ಯೆಯು ನಿಮ್ಮ ಹೋಲ್ಡಿಂಗ್ ಪ್ರಮಾಣಪತ್ರದಲ್ಲಿ ನಮೂದಿಸಲಾದ ಸಂಖ್ಯೆಯ ಜೊತೆಗೆ ಹೊಂದಾಣಿಕೆಯಾಗಬೇಕು. ಒಂದು ವೇಳೆ ಹೊಂದಾಣಿಕೆಯಾಗದಿದ್ದರೆ, DP ನಿಮ್ಮ ಫಾರಂ ಅನ್ನು ತಿರಸ್ಕರಿಸುತ್ತಾರೆ. ಇದನ್ನು ಸರಿಪಡಿಸಲು, ನೀವು ಸರಿಯಾದ ವಿವರಗಳೊಂದಿಗೆ ಡಿಮ್ಯಾಟ್ ಕೋರಿಕೆ ಫಾರ್ಮ್ ಅನ್ನು ಮತ್ತೊಮ್ಮೆ ಭರ್ತಿ ಮಾಡಬಹುದು.

ನಿಮ್ಮ DP ನಿಮ್ಮ ಫಾರಂ ಅನ್ನು ಪರಿಶೀಲಿಸಿದ ನಂತರ, ಅವರು ನಿಮಗೆ ಡಿಮ್ಯಾಟ್ ಕೋರಿಕೆ ನಂಬರ್ ಅಥವಾ DRN ಅನ್ನು ನೀಡುತ್ತಾರೆ. ಈ ವಿಷಯದಲ್ಲಿ ಮುಂದಿನ ಎಲ್ಲಾ ಸಂವಹನಕ್ಕಾಗಿ ಈ DRN ಅಗತ್ಯವಿದೆ ಮತ್ತು ಇದನ್ನು ಎಚ್ಚರಿಕೆಯಿಂದ ಇರಿಸಿಕೊಳ್ಳಬೇಕು

ರಿಜಿಸ್ಟ್ರಾರ್ ಡಿಮ್ಯಾಟ್ ಕೋರಿಕೆ ಫಾರಂ ಅನ್ನು ತಿರಸ್ಕರಿಸಿದಾಗ

ನಮ್ಮ DP ತಮ್ಮ ಕಡೆಯಿಂದ ನಿಮ್ಮ DRF ಅನ್ನು ಪರಿಶೀಲಿಸಿದ ನಂತರ, ನೀವು ಹೊಂದಿರುವ ಕಂಪನಿಯ ರಿಜಿಸ್ಟ್ರಾರ್ ಮತ್ತು ಟ್ರಾನ್ಸ್‌ಫರ್ ಏಜೆಂಟ್‌ಗೆ ಫಾರ್ಮ್ ಅನ್ನು ಕಳುಹಿಸುತ್ತಾರೆ. ನಂತರ ರಿಜಿಸ್ಟ್ರಾರ್ ತಮ್ಮ ಕಡೆಯಿಂದ ವಿವರಗಳನ್ನು ಪರಿಶೀಲಿಸುತ್ತಾರೆ. ರಿಜಿಸ್ಟ್ರಾರ್ ಈ ಕೆಳಗಿನ ಕಾರಣಗಳಿಂದಾಗಿ ನಿಮ್ಮ ಫಾರಂ ಅನ್ನು ತಿರಸ್ಕರಿಸಬಹುದು.

ಷೇರುಗಳ ಸಂಖ್ಯೆಯಲ್ಲಿ ಹೊಂದಾಣಿಕೆಯಾಗುತ್ತಿಲ್ಲ

ಡಿಮ್ಯಾಟ್ ಕೋರಿಕೆ ಫಾರಂನಲ್ಲಿ ನಮೂದಿಸಿದ ಷೇರುಗಳ ಸಂಖ್ಯೆಯು ರಿಜಿಸ್ಟ್ರಾರ್ ದಾಖಲೆಗಳಲ್ಲಿ ನಿರ್ದಿಷ್ಟಪಡಿಸಿದ ಸಂಖ್ಯೆಗಿಂತ ಹೆಚ್ಚಾಗಿದ್ದರೆ, ನಿಮ್ಮ ಡಿಆರ್‌ಎಫ್ (DRF) ಅನ್ನು ತಿರಸ್ಕರಿಸಬಹುದು. ಅಂತಹ ಸಂದರ್ಭದಲ್ಲಿ ನೀವು ಡಿಆರ್‌ಎಫ್ (DRF) ಅನ್ನು ಮತ್ತೊಮ್ಮೆ ಭರ್ತಿ ಮಾಡಿ ಅದನ್ನು ರಿಜಿಸ್ಟ್ರಾರ್ ಗೆ ಕಳುಹಿಸಬೇಕು.

ನಕಲಿ ಅಥವಾ ಹುಸಿ ಪ್ರಮಾಣಪತ್ರಗಳು

ಭೌತಿಕ ಪ್ರಮಾಣಪತ್ರಗಳೊಂದಿಗೆ ಇದು ಒಂದು ಸಾಮಾನ್ಯ ಸಮಸ್ಯೆಯಾಗಿದೆ ಏಕೆಂದರೆ ಅವುಗಳು ಸುಲಭವಾಗಿ ನಕಲು ಮಾಡಬಹುದು ಅಥವಾ ಮ್ಯಾನಿಪ್ಯುಲೇಟ್ ಮಾಡಬಹುದು. ನಕಲಿ ಅಥವಾ ಹುಸಿ ಷೇರುಗಳ ಕಾರಣದಿಂದಾಗಿ ರಿಜಿಸ್ಟ್ರಾರ್ ನಿಮ್ಮ ಫಾರಂ ಅನ್ನು ತಿರಸ್ಕರಿಸಿದರೆ, ನೀವು ಷೇರುಗಳ ಮಾರಾಟಗಾರರನ್ನು ಸಂಪರ್ಕಿಸಬೇಕು ಮತ್ತು ಅವರೊಂದಿಗೆ ಷೇರುಗಳ ದೃಢೀಕರಣದ ಸಮಸ್ಯೆಯನ್ನು ಪರಿಹರಿಸಬೇಕು.

ಸಹಿಯು ಹೊಂದಾಣಿಕೆಯಾಗುತ್ತಿಲ್ಲ

ಇದು ಭೌತಿಕ ಪ್ರಮಾಣಪತ್ರಗಳೊಂದಿಗೆ ಇರುವ ಇನ್ನೊಂದು ಸಾಮಾನ್ಯ ಸಮಸ್ಯೆಯಾಗಿದೆ. ಒಂದು ವೇಳೆ ಡಿಮೆಟಿರಿಯಲೈಸೇಶನ್ ಕೋರಿಕೆ ಫಾರಂ ನಲ್ಲಿನ ಸಹಿಯು ರಿಜಿಸ್ಟ್ರಾರ್‌ನ ದಾಖಲೆಗಳೊಂದಿಗೆ ಹೊಂದಾಣಿಕೆಯಾಗದಿದ್ದರೆ, ನಿಮ್ಮ ಡಿಆರ್‌ಎಫ್ (DRF) ತಿರಸ್ಕರಿಸಲ್ಪಡುವ ಸಾಧ್ಯತೆಯಿದೆ. ಸಹಿಗಳು ವಿವಿಧ ಕಾರಣಗಳಿಗಾಗಿ ಬದಲಾಗಬಹುದು. ಅತ್ಯಂತ ಸಾಮಾನ್ಯವಾಗಿ ವಯಸ್ಸು ಸಂಬಂಧಿತವಾಗಿದೆ. ಜನರಿಗೆ ವಯಸ್ಸಾದಂತೆ, ಅವರು ಸಹಿಗಳನ್ನು ಬದಲಾಯಿಸುವುದು ಸಾಮಾನ್ಯವಾಗಿದೆ. ಒಂದು ವೇಳೆ ಸಹಿಗಳಲ್ಲಿನ ವ್ಯತ್ಯಾಸವು ಕಾಳಜಿಯನ್ನು ಉಂಟುಮಾಡುವಷ್ಟು ಗಮನಾರ್ಹವಾಗಿದ್ದರೆ, ನೀವು ಮ್ಯಾಜಿಸ್ಟ್ರೇಟ್ ಉಪಸ್ಥಿತಿಯಲ್ಲಿ ನಿಮ್ಮ ಸಹಿಯನ್ನು ಪರಿಶೀಲಿಸಬಹುದು ಮತ್ತು ನಿಮ್ಮ ಡಿಮ್ಯಾಟ್ ಕೋರಿಕೆ ಫಾರ್ಮ್ ಅನ್ನು ದೃಢೀಕರಿಸಲು ಅದನ್ನು ರಿಜಿಸ್ಟ್ರಾರ್‌ಗೆ ಕಳುಹಿಸಬಹುದು

ISIN ಹೊಂದಾಣಿಕೆಯಾಗುತ್ತಿಲ್ಲ

ISIN ಅಥವಾ ಅಂತಾರಾಷ್ಟ್ರೀಯ ಸೆಕ್ಯೂರಿಟಿಗಳ ಗುರುತಿನ ಸಂಖ್ಯೆಯು ಪ್ರತಿ ಸೆಕ್ಯೂರಿಟಿ ಅನ್ನ ವಿಶೇಷವಾಗಿ ಗುರುತಿಸುವ 12-ಅಂಕಿಯ ಕೋಡ್ ಆಗಿದೆ. ಕೆಲವೊಮ್ಮೆ ಕಂಪನಿಗಳು ಸಂಪೂರ್ಣವಾಗಿ ಪಾವತಿಸಿದ ಅಥವಾ ಭಾಗಶಃ ಪಾವತಿಸಿದ ಷೇರುಗಳಂತಹ ವಿವಿಧ ರೀತಿಯ ಸ್ಟಾಕ್‌ಗಳಿಗೆ ಅನೇಕ ಐಸಿನ್‌ (ISIN) ಗಳನ್ನು ನೀಡುತ್ತವೆ. ಅಂತಹ ಸಂದರ್ಭದಲ್ಲಿ ಸ್ಟಾಕ್ ಮಾಲೀಕರು ತಪ್ಪಾಗಿ ಡಿಮ್ಯಾಟ್ ಕೋರಿಕೆ ಫಾರ್ಮ್‌ನಲ್ಲಿ ತಪ್ಪಾದ ISIN ಅನ್ನು ಭರ್ತಿ ಮಾಡುವುದು ಸಾಮಾನ್ಯವಾಗಿದೆ. ಇಂತಹ ಸಂದರ್ಭದಲ್ಲಿ, ಸರಿಯಾದ ISIN ನೊಂದಿಗೆ ಫಾರ್ಮ್ ಅನ್ನು ಮತ್ತೆ ಭರ್ತಿ ಮಾಡಿ.

ಕಂಪನಿಯ ಷೇರುಗಳ ಮೇಲೆ ನೀಡಲಾದ ಸ್ಟಾಪ್ ಆರ್ಡರ್

ಕೆಲವೊಮ್ಮೆ SEBI ಅಥವಾ ನ್ಯಾಯಾಲಯದಿಂದ ಕಂಪನಿಯ ಸ್ಟಾಕ್ ಮಾರಾಟದ ಮೇಲೆ ಸ್ಟಾಪ್ ಆರ್ಡರನ್ನು ನೀಡಬಹುದು. ಅಂತಹ ಸಂದರ್ಭದಲ್ಲಿ ಅಂತಹ ಸಮಸ್ಯೆಗಳನ್ನು ಪರಿಹರಿಸುವವರೆಗೆ ಕಂಪನಿಯ ಷೇರುಗಳನ್ನು ಮಾರಾಟ ಮಾಡಲಾಗುವುದಿಲ್ಲ.

ಮುಕ್ತಾಯ

ನಿಮ್ಮ ಭೌತಿಕ ಷೇರುಗಳನ್ನು ಡಿಮೆಟಿರಿಯಲೈಸ್ ಮಾಡುವುದು ಅವುಗಳನ್ನು ಮಾರಾಟ ಮಾಡಲು ಪೂರ್ವಾಪೇಕ್ಷಿತವಾಗಿದೆ. ಈ ಪ್ರಕ್ರಿಯೆಯು ತುಂಬಾ ಸರಳವಾಗಿದೆ ಮತ್ತು ಡಿಮ್ಯಾಟ್ ಕೋರಿಕೆ ಫಾರ್ಮ್ ಭರ್ತಿ ಮಾಡುವುದನ್ನು ಮತ್ತು ಅದನ್ನು ನಿಮ್ಮ ಡಿಪಿ (DP) ಗೆ ಸಲ್ಲಿಸುವುದನ್ನು ಒಳಗೊಂಡಿರುತ್ತದೆ, ಇವರು ಸರಿಯಾದ ಪರಿಶೀಲನೆಯ ನಂತರ ಅದನ್ನು ವಿತರಕರಿಗೆ ಸಲ್ಲಿಸುತ್ತಾರೆ. ಫಾರಂ ಭರ್ತಿ ಮಾಡುವಾಗ ಅಥವಾ ಹೆಸರು ಅಥವಾ ಸಹಿ ಗೆ ಸಂಬಂಧಿಸಿದೆ ದೋಷಗಳು ಅತ್ಯಂತ ಸಾಮಾನ್ಯ ಸಮಸ್ಯೆಗಳು. ಇವುಗಳನ್ನು ಪರಿಷ್ಕರಿಸಿದ ನಂತರ, ನೀವು ನಿಮ್ಮ ಫಾರಂ ಅನ್ನು ಮತ್ತೊಮ್ಮೆ ಸಲ್ಲಿಸಬಹುದು