ನಿಮ್ಮ ಟ್ರೇಡಿಂಗ್ ಲಾಭ ಮತ್ತು ನಷ್ಟದ ವರದಿಯನ್ನು ವಿಶ್ಲೇಷಿಸಿ

ನೀವು ಯಾವುದೇ ಹಣಕಾಸು ಸಾಧನಗಳಲ್ಲಿ ನಿಮ್ಮ ಉಳಿತಾಯವನ್ನು ಹೂಡಿಕೆ ಮಾಡಿದಾಗ, ನೀವು ಗಳಿಸುವ ಆದಾಯವನ್ನು ತಿಳಿದುಕೊಳ್ಳಲು ಬಯಸುತ್ತೀರಿ. ಲಾಭ ಮತ್ತು ನಷ್ಟ (P&L) (ಪಿ&ಎಲ್) ಸಾರಾಂಶವು ನಿಮಗೆ ಅಗತ್ಯವಾದುದನ್ನು ನೀಡುತ್ತದೆ. ಇದು ನಿಮ್ಮ ಟ್ರೇಡಿಂಗ್ ಬಗ್ಗೆ ಒಳನೋಟವನ್ನು ನೀಡುತ್ತದೆ ಮತ್ತು ನಿಮ್ಮ ಹೂಡಿಕೆಯು ಲಾಭದಾಯಕವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ತೋರಿಸುತ್ತದೆ. ನಿಮ್ಮ ಟ್ರೇಡಿಂಗ್  ನಿರ್ಧಾರಗಳು ಎಷ್ಟು ಮೌಲ್ಯಯುತವಾಗಿವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಮಾಹಿತಿಯು ನಿಮಗೆ ಸಹಾಯ ಮಾಡುತ್ತದೆ. ಈ ವರದಿಯು ಏನು ಮತ್ತು ಅದು ನಿಮಗೆ ಹೇಗೆ ಸಹಾಯ ಮಾಡುತ್ತದೆ ಎಂಬುದರ ಕುರಿತು ಆಳವಾಗಿ ನೋಡೋಣ.

ಲಾಭ ಮತ್ತು ನಷ್ಟದ ಸಾರಾಂಶ ವರದಿ ಎಂದರೇನು?

ಈ ವರದಿಯು ಹಣಕಾಸು ವರ್ಷದಲ್ಲಿ (FY)(ಎಫ್ ವೈ) ನಿಮ್ಮ ಟ್ರೇಡ್ ಗಳಲ್ಲಿ ಉಂಟಾದ ಲಾಭ ಅಥವಾ ನಷ್ಟದ ಬಗ್ಗೆ ವಿವರವಾದ ಮಾಹಿತಿಯನ್ನು ಒದಗಿಸುತ್ತದೆ. ವರದಿಯು ಸ್ಕ್ರಿಪ್ ಹೆಸರು, ಖರೀದಿ ಮೌಲ್ಯ, ಮಾರಾಟ ಮೌಲ್ಯ, ವಾಸ್ತವಿಕ ಲಾಭ/ನಷ್ಟ ಮತ್ತು ವಾಸ್ತವಿಕವಲ್ಲದ ಲಾಭ/ನಷ್ಟದಂತಹ ವಿಭಾಗವಾರು ಟ್ರೇಡಿಂಗ್ ವಿವರಗಳನ್ನು ಒಳಗೊಂಡಿದೆ. ಈ ವರದಿಯಲ್ಲಿ ಪರಿಗಣಿಸಲಾದ ಕೆಲವು ಆದಾಯಗಳ ಪಟ್ಟಿ ಕೆಳ ಗೆ ನೀಡಲಾಗಿದೆ.

  • ಆದಾಯಗಳು
  • ನಿಮ್ಮ ನಿಮ್ಮ ಷೇರುಗಳ ಮಾರಾಟ ಮೌಲ್ಯಗಳ ಅರಿಯುವಿಕೆ
  • F&O(ಎಫ್&ಓ), ಇಂಟ್ರಾಡೇ, ಅಥವಾ ಸರಕು ಟ್ರೇಡ್  ಲಾಭಗಳು
  • ಪ್ರತಿ ಭದ್ರತೆಯ ಮೇಲೆ ವರ್ಷದಲ್ಲಿ ಪಡೆದ ಲಾಭಾಂಶ

ಈ ವರದಿಯು ನಿಮಗೆ ಹೇಗೆ ಪ್ರಯೋಜನವನ್ನು ನೀಡುತ್ತದೆ?

ನಿಮ್ಮ ಲಾಭ/ನಷ್ಟಗಳನ್ನು ಪ್ರದರ್ಶಿಸುವುದರಿಂದ P&L(ಪಿ&ಎಲ್) ಸಾರಾಂಶ ವರದಿ ತುಂಬಾ ಮುಖ್ಯವಾಗಿದೆ ಎಂದು ನಿಮಗೆ ತಿಳಿದಿದೆ. ಈಗ, ಈ ವರದಿಯು ಹೊಂದಿರುವ ಎಲ್ಲಾ ಪ್ರಯೋಜನಗಳನ್ನು ನೋಡೋಣ.

  • ಪ್ರತಿ ವಹಿವಾಟಿಗೆ  ನಿಮ್ಮ ಲಾಭ/ನಷ್ಟವನ್ನು ಮೇಲ್ವಿಚಾರಣೆ ಮಾಡಿ
  • ನಿರ್ದಿಷ್ಟ ಅವಧಿಗೆ ನಿಮಗೆ ಅಲ್ಪಾವಧಿಯ, ದೀರ್ಘಾವಧಿಯ, ಡೆಲಿವರಿ ಮತ್ತು ಇಂಟ್ರಾಡೇ ಲಾಭ/ನಷ್ಟವನ್ನು ನೀಡುತ್ತದೆ
  • ತೆರಿಗೆ ಲೆಕ್ಕಾಚಾರದಲ್ಲಿ ಸಹಾಯ ಮಾಡುತ್ತದೆ

ಈ ವರದಿಯನ್ನು ನೀವು ಹೇಗೆ ಡೌನ್ಲೋಡ್ ಮಾಡಬಹುದು?

ನಮ್ಮ ಏಂಜಲ್ ಒನ್ ಆ್ಯಪ್‌ ಬಳಸಿ ವರದಿ ಡೌನ್ಲೋಡ್ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.

  1. ನಿಮ್ಮ ಮೊಬೈಲ್ ಆ್ಯಪ್‌ನಲ್ಲಿ ‘ವರದಿಗಳು’ ವಿಭಾಗಕ್ಕೆ ಹೋಗಿ
  2. ವಹಿವಾಟು ವರದಿಗಳು’ ವಿಭಾಗಕ್ಕೆ ಹೋಗಿ
  3. P&L(ಪಿ&ಎಲ್) ಸಾರಾಂಶವನ್ನು ಆಯ್ಕೆಮಾಡಿ’
  4. ನೀವು ವರದಿಯನ್ನು ಬಯಸುವ ವಿಭಾಗವನ್ನು ಆಯ್ಕೆಮಾಡಿ ಅಥವಾ ಸಂಯೋಜಿತ ವರದಿಯನ್ನು ನೋಡಲು ‘ಎಲ್ಲ’ ಮೇಲೆ ಕ್ಲಿಕ್ ಮಾಡಿ
  5. ನೀವು ಆ್ಯಪನ್ನು ಬಳಸುತ್ತಿದ್ದರೆ, ಹಣಕಾಸು ವರ್ಷವನ್ನು ಆಯ್ಕೆಮಾಡಿ ಮತ್ತು ನಿಮ್ಮ ನೋಂದಾಯಿತ ಇಮೇಲ್ ವಿಳಾಸದಲ್ಲಿ ವರದಿಯನ್ನು ಪಡೆಯಲು ‘ಇಮೇಲ್’ ಮೇಲೆ ಕ್ಲಿಕ್ ಮಾಡಿ

ಅಥವಾ

ನೀವು ನಮ್ಮ ವೆಬ್ ವೇದಿಕೆಯಿಂದ ವರದಿಯನ್ನು ಡೌನ್ಲೋಡ್ ಮಾಡುತ್ತಿದ್ದರೆ, ಹಣಕಾಸು ವರ್ಷ ಮತ್ತು ವಿಭಾಗವನ್ನು ಆಯ್ಕೆಮಾಡಿ ಮತ್ತು

  1. ವರದಿಯನ್ನು ನೋಡಲು ‘ಗೋ’ ಮೇಲೆ ಕ್ಲಿಕ್ ಮಾಡಿ
  2. ಮೇಲಿನ ಐಕಾನ್‌ಗಳನ್ನು ಕ್ಲಿಕ್ ಮಾಡುವ ಮೂಲಕ ಎಕ್ಸೆಲ್ ಅಥವಾ pdf(ಪಿಡಿಎಫ್) ರೂಪದಲ್ಲಿ ವರದಿಯನ್ನು  ಡೌನ್ಲೋಡ್ ಮಾಡಿ

ನಮ್ಮ ವೇದಿಕೆಯಿಂದ ನಿಮ್ಮ P&L(ಪಿ&ಎಲ್) ವರದಿಯನ್ನು ಡೌನ್ಲೋಡ್ ಮಾಡಲು ಈ ಸೂಚನೆಗಳನ್ನು ಅನುಸರಿಸಿ.

ವಿಭಾಗಗಳ P&L(ಪಿ&ಎಲ್) ಸಾರಾಂಶ ವರದಿಗಳು

ಈ ಕೆಳಗೆ ನಮೂದಿಸಿದ ವಿಭಾಗಗಳಿಗೆ ನಿರ್ದಿಷ್ಟ ಹಣಕಾಸು ವರ್ಷದ ಪಿ&ಎಲ್ ಸಾರಾಂಶ ವರದಿಗಳನ್ನು ನೀವು ನೋಡಬಹುದು.

  • ಇಕ್ವಿಟಿ
  • ಫ್ಯೂಚರ್ ಮತ್ತು ಆಯ್ಕೆಗಳು (F&O)(ಎಫ್&ಓ)
  • ಕರೆನ್ಸಿ
  • ಎಲ್ಲಾ – ಎಲ್ಲಾ ವಿಭಾಗಗಳ ಏಕೀಕೃತ  ವರದಿ

ವರದಿಯ ಪ್ರಮುಖ ವಿವರಗಳನ್ನು ನೋಡೋಣ

ಏಂಜಲ್ ಒನ್ ಆ್ಯಪ್‌ನಿಂದ ನೀವು ಡೌನ್ಲೋಡ್ ಮಾಡಬಹುದಾದ ಇಕ್ವಿಟಿ P&L(ಪಿ&ಎಲ್) ವರದಿಯ  ಛಾಯಾಚಿತ್ರ ಈ ಕೆಳಗಿನಂತಿದೆ.

ಎಲ್ಲಾ P&L(ಪಿ&ಎಲ್) ಸಾರಾಂಶ ವರದಿಯಲ್ಲಿ ನೀವು ನೋಡಬಹುದಾದ ಪ್ರಮುಖ ವಿವರಗಳ ಬಗ್ಗೆ ಈಗ ಎಲ್ಲವನ್ನೂ ತಿಳಿದುಕೊಳ್ಳೋಣ.

  1. ಕಂಪನಿಯ ಹೆಸರು/ಸ್ಕ್ರಿಪ್ ಹೆಸರು

ನೀವು ಭದ್ರತೆಗಳನ್ನು ಖರೀದಿಸಿದ ಕಂಪನಿಯ ಹೆಸರು ಅಥವಾ ನೀವು ಟ್ರೇಡಿಂಗ್  ಮಾಡುತ್ತಿರುವ ಷೇರುಗಳ ಸ್ಕ್ರಿಪ್ ಹೆಸರು

  1. ಪ್ರಮಾಣ

ಆಯ್ದ ಹಣಕಾಸು ವರ್ಷಕ್ಕೆ ಒಂದು ನಿರ್ದಿಷ್ಟ ಭದ್ರತೆಗಾಗಿ ನೀವು ಖರೀದಿಸುತ್ತಿರುವ/ಮಾರಾಟ ಮಾಡುತ್ತಿರುವ  ಭದ್ರತೆಗಳ ಸಂಖ್ಯೆ.

  1.  ಖರೀದಿ/ಮಾರಾಟದ ಸರಾಸರಿ ದರ

ಇದು ನಿರ್ದಿಷ್ಟ ಭದ್ರತೆಯನ್ನು ಖರೀದಿಸಿದ/ಮಾರಾಟ ಮಾಡಿದ ಶುಲ್ಕಗಳನ್ನು ಒಳಗೊಂಡಂತೆ ಸರಾಸರಿ ದರ (ಪ್ರತಿ ಷೇರಿಗೆ) ಆಗಿದೆ.

  1. GR(ಜಿಅರ್) ದರ ಅಥವಾ ಅಜ್ಜನ ದರ

ನೀವು 31ನೇ ಜನವರಿ 2018 ಕ್ಕಿಂತ ಮೊದಲು ಸ್ಕ್ರಿಪ್ ಖರೀದಿಸಿದ್ದರೆ, ನಿಮ್ಮ ದೀರ್ಘಾವಧಿಯ ಬಂಡವಾಳ ಲಾಭಗಳನ್ನು ಸರಿಹೊಂದಿಸಲು ನಿಮ್ಮ ಖರೀದಿ ದರವನ್ನು ಅಜ್ಜಗೊಳಿಸಲಾಗುತ್ತದೆ. ಇಲ್ಲಿ, GR(ಜಿಅರ್) ದರವು ಪ್ರಮಾಣಿತ ದರವಾಗಿದ್ದು, ನಿಮ್ಮ ಖರೀದಿ ಮೌಲ್ಯವನ್ನು ಸರಿಹೊಂದಿಸಲಾಗುವ ಮೂಲವಾಗಿರುತ್ತದೆ.

  1.  ಖರೀದಿ/ಮಾರಾಟಮೊತ್ತ

ಇದು ನೀವು ಭದ್ರತೆ ಗಳನ್ನು ಖರೀದಿಸಿದ ಅಥವಾ ಮಾರಾಟ ಮಾಡಿದ ಒಟ್ಟು ಮೊತ್ತ ಆಗಿದೆ (ಶುಲ್ಕಗಳು ಸೇರಿದಂತೆ).

  1. P/L(ಪಿ&ಎಲ್)ಇಂಟ್ರಾಡೇ

ನಿರ್ದಿಷ್ಟ ಅವಧಿಯಲ್ಲಿ ನೀವು ನಮೂದಿಸಿದ ಎಲ್ಲಾ ಇಂಟ್ರಾಡೇ  ವಹಿವಾಟುಗಳ ಲಾಭ/ನಷ್ಟವನ್ನು ನೀವು ನೋಡಬಹುದು.

  1. P/L(ಪಿ&ಎಲ್)ಅಲ್ಪಾವಧಿ

ನೀವು ಅಲ್ಪಾವಧಿಗೆ ಹೊಂದಿರುವ ಭದ್ರತೆಗಳ ಮೇಲೆ ನೀವು ಗಳಿಸಿದ ಲಾಭ/ನಷ್ಟವನ್ನು ಇಲ್ಲಿ ನಮೂದಿಸಲಾಗಿದೆ. ಇಲ್ಲಿ, ಅಲ್ಪಾವಧಿಯು ಒಂದು ವರ್ಷಕ್ಕಿಂತ ಕಡಿಮೆ ಅವಧಿಯನ್ನು ಸೂಚಿಸುತ್ತದೆ.

  1. P/L(ಪಿ&ಎಲ್)ದೀರ್ಘಾವಧಿ

ಇದು ದೀರ್ಘಾವಧಿಯ ಭದ್ರತೆಗಳ ಮೇಲಿನ ಲಾಭ/ನಷ್ಟವಾಗಿದೆ. ಇದರಲ್ಲಿ, ನೀವು ಒಂದು ವರ್ಷಕ್ಕಿಂತ ಹೆಚ್ಚು ಕಾಲ ಹೊಂದಿರುವ ದೀರ್ಘಾವಧಿಯ ಭದ್ರತೆಗಳು.

  1. P/L(ಪಿ&ಎಲ್)ಕಾಲ್ಪನಿಕ

ನೀವು ಹೊಂದಿರುವ ಪ್ರಮಾಣದ ಆಧಾರದ ಮೇಲೆ ಮುಚ್ಚುವ ದರವನ್ನು ಇರಿಸುವ ಮೂಲಕ ಲಾಭ/ನಷ್ಟದ ಮೊತ್ತವು ಕಾಲ್ಪನಿಕ ಲಾಭ/ನಷ್ಟವಾಗಿದೆ.

  1. ಮುಚ್ಚುವ ದರ

ಮುಚ್ಚುವ ದರವು ನಿಮ್ಮ ಭದ್ರತೆಗಳ ಮುಕ್ತಾಯ ದಿನಾಂಕದ ಪ್ರಕಾರ ದರವಾಗಿದೆ. ಇಲ್ಲಿ ಮುಚ್ಚುವ ದಿನಾಂಕವು ನೀವು ಆಯ್ಕೆ ಮಾಡಿದ ಅವಧಿಯ ಅಂತಿಮ ದಿನಾಂಕದ ಹಿಂದಿನ ದಿನವನ್ನು ಸೂಚಿಸುತ್ತದೆ.

  1. ಆಯ್ಕೆಯ ಪ್ರಕಾರ / ಸ್ಟ್ರೈಕ್ ಬೆಲೆ

ಆಯ್ಕೆಯ ಪ್ರಕಾರವು ಒಪ್ಪಂದದಲ್ಲಿ ಪ್ರವೇಶಿಸುವಾಗ ನೀವು ಆಯ್ಕೆ ಮಾಡಿದ ಆಯ್ಕೆಯ ಪ್ರಕಾರವನ್ನು ಪ್ರತಿನಿಧಿಸುತ್ತದೆ. ಸ್ಟ್ರೈಕ್ ಬೆಲೆಯುನಿಮ್ಮ ಉತ್ಪನ್ನಗಳ ಒಪ್ಪಂದವನ್ನು ಮುಕ್ತಾಯದ ಸಮಯದಲ್ಲಿ ಖರೀದಿಸುವ/ಮಾರಾಟ ಮಾಡುವ ಪೂರ್ವನಿರ್ಧರಿತ ಬೆಲೆಯಾಗಿದೆ.

  1. ಮುಕ್ತಾಯ ದಿನಾಂಕ

ಟ್ರೇಡಿಂಗ್ ಸ್ಥಾನವು ಸ್ವಯಂಚಾಲಿತವಾಗಿ ಮುಚ್ಚುವ ದಿನಾಂಕವಾಗಿದೆ.

  1. ಒಟ್ಟು ಶುಲ್ಕಗಳು

ಇದು ದಲ್ಲಾಳಿಗಳು, GST(ಜಿಎಸ್‌ಟಿ), STT/CTT(ಎಸ್‌ಟಿಟಿ/ಸಿಟಿಟಿ) ಮತ್ತು ಇತರ ಅನ್ವಯವಾಗುವ ಶುಲ್ಕಗಳಂತಹ ವಹಿವಾಟು ನಡೆಸಲು ಉಂಟಾದ ಮೊತ್ತವಾಗಿದೆ.

ಮುಕ್ತಾಯ

P&L(ಪಿ&ಎಲ್) ಸಾರಾಂಶ ವರದಿಯು ನಿಮ್ಮ ಹೂಡಿಕೆ ಅಥವಾ ಟ್ರೇಡಿಂಗ್  ನಿರ್ಧಾರಗಳ ಅಡಿಪಾಯವನ್ನು ಹೇಗೆ ರೂಪಿಸುತ್ತದೆ ಎಂಬುದನ್ನು ಈಗ ನೀವು ಅರ್ಥಮಾಡಿಕೊಂಡಿರಬೇಕು. ಈ ವರದಿಯು ತುಲನಾತ್ಮಕವಾಗಿ ಅರ್ಥಮಾಡಿಕೊಳ್ಳಲು ಸುಲಭವಾಗಿದೆ ಮತ್ತು ನಿಮ್ಮ ಲಾಭಗಳು, ನಷ್ಟಗಳು ಮತ್ತು ತೆರಿಗೆಗಳನ್ನು ನಿರ್ಣಯಿಸಲು ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಹೂಡಿಕೆ ದ್ವಾರವನ್ನು ವಿಶ್ಲೇಷಿಸಲು ನಮ್ಮ ವೆಬ್‌ನಿಂದ ವರದಿಯನ್ನು ಇಲ್ಲಿ ಡೌನ್ಲೋಡ್ ಮಾಡಿ.