ಯುಎಎನ್ ಲಾಗಿನ್, ನೋಂದಣಿ ಮತ್ತು ಆ್ಯಕ್ಟಿವೇಶನ್ – ಹಂತವಾರು ಮಾರ್ಗದರ್ಶನ

1 min read
by Angel One
EN
ನಿಮ್ಮ ಇಪಿಎಫ್ಒ (EPFO) ಅಕೌಂಟನ್ನು ನಿರ್ವಹಿಸಲು ಮತ್ತು ಟ್ರ್ಯಾಕ್ ಮಾಡಲು ನಿಮ್ಮ ಯುಎಎನ್ (UAN) ಅನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ. ಯುಎಎನ್ (UAN) ನೋಂದಣಿ ಮಾಡುವುದು ಮತ್ತು ಯುಎಎನ್ (UAN) ಸದಸ್ಯತ್ವದ ಲಾಗಿನ್ ರಚಿಸುವುದು ಹೇಗೆ ಎಂಬುದನ್ನು ತಿಳಿಯಿರಿ.

ಯುಎಎನ್ (UAN) ಎಂದರೇನು?

ಯುಎಎನ್ (UAN) ಎಂದರೆ ಯುನಿಫೈಡ್ ಅಕೌಂಟ್ ನಂಬರ್. ಇದನ್ನು ಪಿಎಫ್ (PF) ಅಕೌಂಟ್ ಹೊಂದಿರುವ ಎಲ್ಲಾ ಉದ್ಯೋಗಿಗಳಿಗೆ ಉದ್ಯೋಗಿಗಳ ಪ್ರಾವಿಡೆಂಟ್ ಫಂಡ್ ಆರ್ಗನೈಸೇಶನ್ (ಇಪಿಎಫ್ಒ (EPFO)) ಆಫೀಸ್ ನೀಡುತ್ತದೆ. ಎಲ್ಲಾ ಹಿಂದಿನ ಮತ್ತು ಪ್ರಸ್ತುತ ಪಿಎಫ್ (PF) ಅಕೌಂಟ್‌ಗಳನ್ನು ಟ್ರ್ಯಾಕ್ ಮಾಡಲು ಮತ್ತು ಅಕ್ಸೆಸ್ ಮಾಡಲು ಯುಎಎನ್ (UAN) ಅನ್ನು ಬಳಸಬಹುದು. ಯುಎಎನ್ (UAN) ಎಂಬುದು ಉದ್ಯೋಗಿ ಪ್ರಾವಿಡೆಂಟ್ ಫಂಡ್ ಕಚೇರಿಯಿಂದ ನೀಡಲಾದ 12-ಅಂಕಿಯ ವಿಶಿಷ್ಟ ಸಂಖ್ಯೆಯಾಗಿದೆ ಮತ್ತು ಇದನ್ನು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ದೃಢೀಕರಿಸಿದೆ. ಉದ್ಯೋಗಿಗಳು ಎಷ್ಟು ಬಾರಿ ಸಂಸ್ಥೆಗಳನ್ನು ತೊರೆದರು ಅಥವಾ ಸೇರುತ್ತಾರೆ ಎಂಬುದನ್ನು ಲೆಕ್ಕ ಹಾಕದೇ ಯುಎಎನ್ (UAN) ಜೀವನದುದ್ದಕ್ಕೂ ಸ್ಥಿರವಾಗಿರುತ್ತದೆ. ಈ ಲೇಖನದಲ್ಲಿ, ಯುಎಎನ್ (UAN) ಲಾಗಿನ್, ನೋಂದಣಿ ಮತ್ತು ಸಕ್ರಿಯಗೊಳಿಸುವಿಕೆಯಲ್ಲಿ ಒಳಗೊಂಡಿರುವ ಹಂತಗಳನ್ನು ನಾವು ವಿವರಿಸುತ್ತೇವೆ, ಆದ್ದರಿಂದ ನೀವು ಅದನ್ನು ಹೆಚ್ಚು ಸಮರ್ಥವಾಗಿ ಬಳಸಬಹುದು.

ಯುಎಎನ್ (UAN) ಜನರೇಟ್ ಮಾಡುವುದು ಹೇಗೆ?

ಯುಎಎನ್ (UAN) ನಂಬರ್ ಜನರೇಟ್ ಮಾಡಲು ಎರಡು ಮಾರ್ಗಗಳಿವೆ: ಉದ್ಯೋಗದಾತರು ಮತ್ತು ಯುಎಎನ್ (UAN) ಪೋರ್ಟಲ್ ಮೂಲಕ. ಸಾಮಾನ್ಯವಾಗಿ, ಉದ್ಯೋಗದಾತರು ಸಂಸ್ಥೆಗೆ ಸೇರಿದಾಗ ಇಪಿಎಫ್ಒ (EPFO) ಅಡಿಯಲ್ಲಿ ಯುಎಎನ್ (UAN) ನಂಬರನ್ನು ನೀಡಲಾಗುತ್ತದೆ.

ಯುಎಎನ್ (UAN) ಪೋರ್ಟಲ್ ಮೂಲಕ ಯುಎಎನ್ (UAN) ನಂಬರನ್ನು ಜನರೇಟ್ ಮಾಡುವುದು ಇತರ ಆಯ್ಕೆಯಾಗಿದೆ. ಪೋರ್ಟಲ್ ಮೂಲಕ ಯುಎಎನ್ (UAN) ನಂಬರ್ ರಚಿಸಲು ಅನುಸರಿಸಬೇಕಾದ ಹಂತಗಳು ಇವು:

 • ಯುಎಎನ್ ಪೋರ್ಟಲ್‌ಗೆ ಭೇಟಿ ನೀಡಿ
 • ‘ನಿಮ್ಮ ಯುಎಎನ್ ಸ್ಟೇಟಸ್ ತಿಳಿಯಿರಿ’ ಗೆ ನ್ಯಾವಿಗೇಟ್ ಮಾಡಿ ಮತ್ತು ಅದರ ಮೇಲೆ ಕ್ಲಿಕ್ ಮಾಡಿ
 • ಡ್ರಾಪ್‌ಡೌನ್ ಮೆನುವಿನಿಂದ, ನಿಮ್ಮ ರಾಜ್ಯ ಮತ್ತು ಆಯಾ ಇಪಿಎಫ್‌ಒ (EPFO) ಕಚೇರಿಯನ್ನು ಆಯ್ಕೆಮಾಡಿ
 • ಹೆಸರು, ಹುಟ್ಟಿದ ದಿನಾಂಕ ಮತ್ತು ಮೊಬೈಲ್ ನಂಬರ್‌ನಂತಹ ಇತರ ವಿವರಗಳೊಂದಿಗೆ ಪಿಎಫ್ (PF) ನಂಬರ್ ಅಥವಾ ಸದಸ್ಯತ್ವ ಐಡಿ (ID)ಯನ್ನು ನಮೂದಿಸಿ
 • ಕ್ಯಾಪ್ಚಾ ಕೋಡ್ ನಮೂದಿಸಿ
 • ದೃಢೀಕರಣದ ಪಿನ್ ಅನ್ನು ನಿಮ್ಮ ನೋಂದಾಯಿತ ಮೊಬೈಲ್ ನಂಬರಿಗೆ ಕಳುಹಿಸಲಾಗುತ್ತದೆ
 • ಪಿನ್ ನಮೂದಿಸಿ ಮತ್ತು ಒಟಿಪಿ (OTP) ಮೌಲ್ಯೀಕರಿಸಿ ಮೇಲೆ ಕ್ಲಿಕ್ ಮಾಡಿ
 • ಯುಎಎನ್ (UAN) ನಂಬರನ್ನು ನಿಮ್ಮ ಮೊಬೈಲ್ ನಂಬರಿಗೆ ಕಳುಹಿಸಲಾಗುತ್ತದೆ

ಯುಎಎನ್ (UAN) ಆ್ಯಕ್ಟಿವೇಶನ್‌ಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳು

ಯುಎಎನ್ (UAN) ಸಕ್ರಿಯಗೊಳಿಸಲು ಈ ಕೆಳಗಿನ ಡಾಕ್ಯುಮೆಂಟ್‌ಗಳು ಬೇಕಾಗುತ್ತವೆ:

 • ಆಧಾರ್ ಕಾರ್ಡ್
 • ಪ್ಯಾನ್ ಕಾರ್ಡ್
 • ಐ ಎಫ್ ಎಸ್ ಸಿ (IFSC) ಜೊತೆಗೆ ಬ್ಯಾಂಕ್ ಅಕೌಂಟ್ ವಿವರಗಳು
 • ಅಗತ್ಯವಿದ್ದರೆ, ಇತರ ಯಾವುದೇ ಗುರುತಿನ ಪುರಾವೆ ಅಥವಾ ವಿಳಾಸದ ಪುರಾವೆ

ಯುಎಎನ್ (UAN) ಅನ್ನು ಆನ್ಲೈನಿನಲ್ಲಿ ಸಕ್ರಿಯಗೊಳಿಸುವುದು ಹೇಗೆ?

ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಯುಎಎನ್ (UAN) ಆ್ಯಕ್ಟಿವೇಶನ್ ಪ್ರಕ್ರಿಯೆಯನ್ನು ಈಗ ಆನ್ಲೈನಿನಲ್ಲಿ ಪೂರ್ಣಗೊಳಿಸಬಹುದು. ನಿಮ್ಮ ಯುಎಎನ್ (UAN) ನಂಬರ್ ಆ್ಯಕ್ಟಿವೇಟ್ ಮಾಡಲು, ನಿಮಗೆ ನಿಮ್ಮ ಯುಎಎನ್ (UAN) ನಂಬರ್, ಪ್ಯಾನ್ (PAN) ಮತ್ತು ಆಧಾರ್ ನಂಬರ್‌ಗಳು ಮತ್ತು ಸದಸ್ಯ ಐಡಿ (ID) ಅಗತ್ಯವಿರುತ್ತದೆ:

 • ಇಪಿಎಫ್‌ಒ (EPFO) ವೆಬ್ ಪೋರ್ಟಲ್‌ಗೆ ಭೇಟಿ ನೀಡಿ ಮತ್ತು ನಮ್ಮ ಸೇವೆಗಳ ಮೇಲೆ ಕ್ಲಿಕ್ ಮಾಡಿ
 • ನಮ್ಮ ಸೇವೆಗಳ ಅಡಿಯಲ್ಲಿ, ಉದ್ಯೋಗಿಗಳನ್ನು ಆಯ್ಕೆಮಾಡಿ
 • ಇಪಿಎಫ್‌ಒ(EPFO) ಪೋರ್ಟಲ್‌ಗೆ ಲಾಗಿನ್ ಮಾಡಲು ಸದಸ್ಯರ ಯುಎಎನ್ (UAN)/ಆನ್ಲೈನ್ ಸೇವೆಗಳನ್ನು ಆಯ್ಕೆಮಾಡಿ
 • ಯುಎಎನ್ (UAN), ಪಿಎಫ್ (PF) ಸದಸ್ಯ ಐಡಿ (ID) ಮತ್ತು ನಿಮ್ಮ ಮೊಬೈಲ್ ನಂಬರ್‌ನಂತಹ ಸರಿಯಾದ ವಿವರಗಳನ್ನು ನಮೂದಿಸಿ ಮತ್ತು ಕ್ಯಾಪ್ಚಾದಲ್ಲಿ ಟೈಪ್ ಮಾಡಿ
 • ಅಧಿಕೃತ ಪಿನ್ ಪಡೆಯಿರಿ ಮೇಲೆ ಕ್ಲಿಕ್ ಮಾಡಿ, ಮತ್ತು ನಿಮ್ಮ ನೋಂದಾಯಿತ ಮೊಬೈಲ್ ನಂಬರಿನಲ್ಲಿ ನೀವು ದೃಢೀಕರಣ ಒಟಿಪಿ (OTP)ಯನ್ನು ಪಡೆಯುತ್ತೀರಿ
 • ಹಕ್ಕುತ್ಯಾಗ ಪರಿಶೀಲನಾ ಬಾಕ್ಸ್ ಮೇಲೆ ಕ್ಲಿಕ್ ಮಾಡಿ ಮತ್ತು ನೀವು ಪಡೆದ ಒಟಿಪಿ (OTP) ಯನ್ನು ನಮೂದಿಸಿ
 • ಒಟಿಪಿ (OTP) ಯನ್ನು ಮೌಲ್ಯೀಕರಿಸಿದ ನಂತರ, ಯುಎಎನ್ (UAN) ಆ್ಯಕ್ಟಿವೇಶನ್ ಮೇಲೆ ಕ್ಲಿಕ್ ಮಾಡಿ
 • ಒಮ್ಮೆ ನಿಮ್ಮ ಯುಎಎನ್ (UAN) ಆ್ಯಕ್ಟಿವೇಟ್ ಆದ ನಂತರ, ಪಾಸ್ವರ್ಡನ್ನು ನಿಮ್ಮ ನೋಂದಾಯಿತ ಮೊಬೈಲ್ ನಂಬರಿಗೆ ಕಳುಹಿಸಲಾಗುತ್ತದೆ. ಇಪಿಎಫ್ಒ (EPFO) ಅಕೌಂಟನ್ನು ಅಕ್ಸೆಸ್ ಮಾಡಲು ನೀವು ಪಾಸ್ವರ್ಡನ್ನು ಬಳಸಬೇಕು

ಯುಎಎನ್ (UAN) ಲಾಗಿನ್ ಮಾಡುವ ಹಂತಗಳು

ಒಮ್ಮೆ ನಿಮ್ಮ ಯುಎಎನ್ (UAN) ಸಕ್ರಿಯಗೊಂಡ ನಂತರ, ಯುಎಎನ್ (UAN) ಪೋರ್ಟಲ್‌ಗೆ ಲಾಗಿನ್ ಆಗಲು ನೀವು ಹಂಚಿಕೊಂಡ ಯುಎಎನ್ (UAN) ನಂಬರ್ ಮತ್ತು ಪಾಸ್ವರ್ಡನ್ನು ಬಳಸಬಹುದು:

 • ಬ್ರೌಸರ್‌ನಲ್ಲಿ, ಇಪಿಎಫ್‌ಒ (EPFO) ಪೋರ್ಟಲ್‌ನ ವಿಳಾಸವನ್ನು ಟೈಪ್ ಮಾಡಿ
 • ಸೇವೆಗಳ ವಿಭಾಗಕ್ಕೆ ಹೋಗಿ ಮತ್ತು ಉದ್ಯೋಗಿಗಳಿಗೆ ಕ್ಲಿಕ್ ಮಾಡಿ
 • ಯುಎಎನ್ (UAN)/ಆನ್ಲೈನ್ ಸೇವೆಗಳ ಸದಸ್ಯರಿಗೆ ನ್ಯಾವಿಗೇಟ್ ಮಾಡಿ
 • ನಿಮ್ಮ ಯುಎಎನ್ (UAN), ಪಾಸ್ವರ್ಡ್ ಮತ್ತು ಕ್ಯಾಪ್ಚಾ ಕೋಡ್ ನಮೂದಿಸಬೇಕಾದ ಪೇಜಿಗೆ ನಿಮ್ಮನ್ನು ಮರುನಿರ್ದೇಶಿಸಲಾಗುತ್ತದೆ
 • ಇಪಿಎಫ್ಒ (EPFO) ಅಕೌಂಟಿಗೆ ಲಾಗಿನ್ ಮಾಡಲು ಸೈನ್ ಇನ್ ಮೇಲೆ ಕ್ಲಿಕ್ ಮಾಡಿ

ನಿಮ್ಮ ಯುಎಎನ್ (UAN) ಕಾರ್ಡ್ ಡೌನ್ಲೋಡ್ ಮಾಡುವುದು ಹೇಗೆ?

ಇಪಿಎಫ್ಒ (EPFO) ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನೀವು ಇಪಿಎಫ್ (EPF) ಕಾರ್ಡ್ ಡೌನ್ಲೋಡ್ ಮಾಡಬಹುದು. ಡೌನ್ಲೋಡ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು, ನಿಮಗೆ ಸಕ್ರಿಯ ಇಪಿಎಫ್ (EPF) ಸದಸ್ಯತ್ವ, ಯುಎಎನ್ (UAN) ಮತ್ತು ಪಾಸ್ವರ್ಡ್ ಅಗತ್ಯವಿರುತ್ತದೆ:

 • ಇಪಿಎಫ್ಒ (EPFO) ಪೋರ್ಟಲ್‌ಗೆ ಭೇಟಿ ನೀಡಿ
 • ಇ-ಸೇವಾ ಪುಟಕ್ಕೆ ಹೋಗಿ ಮತ್ತು ಯುಎಎನ್ (UAN) ನಂಬರ್ ಬಳಸಿ ಲಾಗಿನ್ ಮಾಡಿ
 • ಇಪಿಎಫ್ (EPFO) ಅಕೌಂಟ್ ಪುಟವನ್ನು ನೋಡಲು ‘ಸೈನ್ ಇನ್’ ಮೇಲೆ ಕ್ಲಿಕ್ ಮಾಡಿ
 • ‘ನೋಡಿ’ ವಿಭಾಗದ ಅಡಿಯಲ್ಲಿ, ‘ಯುಎಎನ್ (UAN) ಕಾರ್ಡ್’ ಆಯ್ಕೆಮಾಡಿ
 • ಇದು ನಿಮ್ಮ ಅಕೌಂಟಿಗೆ ಲಿಂಕ್ ಆದ ಕಾರ್ಡನ್ನು ತೋರಿಸುತ್ತದೆ
 • ಡೌನ್ಲೋಡ್ ಮೇಲೆ ಕ್ಲಿಕ್ ಮಾಡಿ

ಯುಎಎನ್ ಬಳಸಿಕೊಂಡು ಅಕೌಂಟ್‌ಗಳನ್ನು ಟ್ರಾನ್ಸ್‌ಫರ್ ಮಾಡಲು ಹಂತವಾರು ಪ್ರಕ್ರಿಯೆ

ಈ ಕೆಳಗಿನ ಹಂತಗಳನ್ನು ಅನುಸರಿಸಿ, ನೀವು ಪಿಎಫ್ (PF) ಯುಎಎನ್ (UAN) ನಂಬರ್ ಮತ್ತು ಅಕೌಂಟನ್ನು ಟ್ರಾನ್ಸ್‌ಫರ್ ಮಾಡಬಹುದು:

 • ನಿಮ್ಮ ಪಿಎಫ್‌ (PF) ಯುಎಎನ್ (UAN) ಅಕೌಂಟನ್ನು ಟ್ರಾನ್ಸ್‌ಫರ್ ಮಾಡಲು ಯುಎಎನ್ (UAN) ಇಪಿಎಫ್‌ಒ (EPFO) ಪೋರ್ಟಲ್‌ನಲ್ಲಿ ನೋಂದಣಿ ಮಾಡಿ.
 • ನಿಮ್ಮ ಎಲ್ಲಾ ಪ್ರಸ್ತುತ ಮತ್ತು ಹಿಂದಿನ ಉದ್ಯೋಗದಾತರ ವಿವರಗಳು ಪೋರ್ಟಲ್‌ನಲ್ಲಿವೆಯೇ ಎಂದು ಪರಿಶೀಲಿಸಿ
 • ಪೋರ್ಟಲ್‌ಗೆ ಡಿಜಿಟಲ್ ಸಹಿಯನ್ನು ಅಪ್ಲೋಡ್ ಮಾಡಿ
 • ಯುಎಎನ್ (UAN) ಸದಸ್ಯರ ಲಾಗಿನ್ ಬಳಸಿ ಪೋರ್ಟಲ್‌ಗೆ ಲಾಗಿನ್ ಮಾಡಿ ಮತ್ತು ಪೋರ್ಟಲ್‌ಗೆ ಲಾಗಿನ್ ಮಾಡಿದ ನಂತರ ಟ್ರಾನ್ಸ್‌ಫರ್ ಆಯ್ಕೆಯನ್ನು ಆರಿಸಿ
 • ಫಾರ್ಮಿನ ಎಲ್ಲಾ ಮೂರು ವಿಭಾಗಗಳನ್ನು ಭರ್ತಿ ಮಾಡಿ
 • ಅಟೆಸ್ಟಿಂಗ್ ಅಥಾರಿಟಿ ಮತ್ತು ಸದಸ್ಯ ಐಡಿ (ID)/ ಯುಎ (UA) ಆಯ್ಕೆಮಾಡಿ ಮತ್ತು ‘ಒ ಟಿ ಪಿ (OTP) ಪಡೆಯಿರಿ’ ಮೇಲೆ ಕ್ಲಿಕ್ ಮಾಡಿ’
 • ಮಾನ್ಯಗೊಳಿಸಲು ನಿಮ್ಮ ನೋಂದಾಯಿತ ಮೊಬೈಲ್ ನಂಬರಿನಲ್ಲಿ ನೀವು ಪಡೆದ ಒ ಟಿ ಪಿ (OTP) ಯನ್ನು ನಮೂದಿಸಿ
 • ನಿಮ್ಮ ಫಾರಂ ಅನ್ನು ಸಲ್ಲಿಸಲಾಗುತ್ತದೆ, ಮತ್ತು ನೀವು ಟ್ರ್ಯಾಕಿಂಗ್ ನಂಬರನ್ನು ಪಡೆಯುತ್ತೀರಿ
 • ಫಾರಂನ ಪ್ರಿಂಟ್ ಔಟ್ ತೆಗೆದುಕೊಳ್ಳಿ ಮತ್ತು ಅದನ್ನು ನಿಮ್ಮ ಪ್ರಸ್ತುತ ಉದ್ಯೋಗದಾತರಿಗೆ ಸಲ್ಲಿಸಿ

ನಿಮ್ಮ ಯುಎಎನ್ (UAN) ಪಾಸ್ವರ್ಡನ್ನು ನೀವು ಹೇಗೆ ರಿಸೆಟ್ ಮಾಡಬಹುದು

ಒಂದು ವೇಳೆ ನೀವು ನಿಮ್ಮ ಇಪಿಎಫ್‌ಒ (EPFO) ಲಾಗಿನ್‌ನ ಪಾಸ್ವರ್ಡ್ ರಿಸೆಟ್ ಮಾಡಬೇಕಾದರೆ, ಕೆಳಗೆ ನಮೂದಿಸಿದ ಹಂತಗಳನ್ನು ಅನುಸರಿಸಿ:

 • ಇಪಿಎಫ್ (EPF) ಇಂಡಿಯಾದ ಆನ್ಲೈನ್ ಪೋರ್ಟಲ್‌ಗೆ ಹೋಗಿ
 • ಪಾಸ್ವರ್ಡ್ ಮರೆತುಹೋಗಿದೆ’ ಮೇಲೆ ಕ್ಲಿಕ್ ಮಾಡಿ’
 • ನಿಮ್ಮ ಯುಎಎನ್ (UAN) ನಮೂದಿಸಿ
 • ನೀಡಲಾದ ಬಾರಿನಲ್ಲಿ ಕ್ಯಾಪ್ಚಾ ನಮೂದಿಸಿ ಮತ್ತು ಪರಿಶೀಲನೆಯ ಮೇಲೆ ಕ್ಲಿಕ್ ಮಾಡಿ
 • ನಿಮ್ಮ ನೋಂದಾಯಿತ ಮೊಬೈಲ್ ನಂಬರಿಗೆ ಪರಿಶೀಲನಾ ಒ ಟಿ ಪಿ (OTP) ಯನ್ನು ಕಳುಹಿಸಲಾಗುತ್ತದೆ
 • ಒ ಟಿ ಪಿ (OTP) ನಮೂದಿಸಿ ಮತ್ತು ಸಲ್ಲಿಸಿ ಮೇಲೆ ಕ್ಲಿಕ್ ಮಾಡಿ
 • ನಿಮ್ಮ ಪಾಸ್ವರ್ಡನ್ನು ರಿಸೆಟ್ ಮಾಡಿ

ನಿಮ್ಮ ಯುಎಎನ್ (UAN) ಅಕೌಂಟನ್ನು ಅಕ್ಸೆಸ್ ಮಾಡುವ ಮಾರ್ಗಗಳು

ನಿಮ್ಮ ಯುಎಎನ್ (UAN) ಅಕೌಂಟನ್ನು ಅಕ್ಸೆಸ್ ಮಾಡಲು ಅನೇಕ ಮಾರ್ಗಗಳಿವೆ. ಅವುಗಳು ಈ ಕೆಳಗಿನಂತಿವೆ:

 1. ಆನ್ಲೈನ್: ನಿಮ್ಮ ಯುಎಎನ್ (UAN) ಅಕೌಂಟನ್ನು ಆನ್ಲೈನಿನಲ್ಲಿ ಅಕ್ಸೆಸ್ ಮಾಡುವುದು ಸುಲಭ ಮಾರ್ಗವಾಗಿದೆ. ಇಪಿಎಫ್‌ಒ (EPFO) ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ನಿಮ್ಮ ಯುಎಎನ್ (UAN) ನಂಬರ್ ಮತ್ತು ಪಾಸ್ವರ್ಡ್ ಬಳಸಿ ಪೋರ್ಟಲ್‌ಗೆ ಲಾಗಿನ್ ಮಾಡಿ. ಲಾಗಿನ್ ಮಾಡಿದ ನಂತರ, ನೀವು ನಿಮ್ಮ ಪಾಸ್‌ಬುಕ್ ಅನ್ನು ಅಕ್ಸೆಸ್ ಮಾಡಬಹುದು, ನಿಮ್ಮ ಅಕೌಂಟ್ ಬ್ಯಾಲೆನ್ಸ್ ಪರಿಶೀಲಿಸಬಹುದು, ನಿಮ್ಮ ವಿವರಗಳನ್ನು ಅಪ್ಡೇಟ್ ಮಾಡಬಹುದು ಮತ್ತು ಯುಎಎನ್ (UAN) ಟ್ರಾನ್ಸ್‌ಫರ್‌ಗಾಗಿ ಕೋರಿಕೆ ಸಲ್ಲಿಸಬಹುದು.
 2. ಉಮಂಗ್ (UMANG) ಆ್ಯಪ್‌: ಈಗ ನೀವು ಉಮಂಗ್ (UMANG) (ಯುನಿಫೈಡ್ ಮೊಬೈಲ್ ಅಪ್ಲಿಕೇಶನ್ ಫಾರ್ ನ್ಯೂ ಗವರ್ನನ್ಸ್) ಆ್ಯಪನ್ನು ಡೌನ್ಲೋಡ್ ಮಾಡುವ ಮೂಲಕ ಕೂಡ ನಿಮ್ಮ ಅಕೌಂಟನ್ನು ಅಕ್ಸೆಸ್ ಮಾಡಬಹುದು. ಆ್ಯಪ್‌ ಆಂಡ್ರಾಯ್ಡ್ ಮತ್ತು ಐ ಓ ಎಸ್ (iOS) ಡಿವೈಸ್‌ಗಳಲ್ಲಿ ಲಭ್ಯವಿದೆ. ಮೊಬೈಲ್ ಆ್ಯಪ್‌ನಲ್ಲಿ ಪೋರ್ಟಲ್ ಒದಗಿಸಿದ ಎಲ್ಲಾ ಸೌಲಭ್ಯಗಳನ್ನು ನೀವು ಅಕ್ಸೆಸ್ ಮಾಡಬಹುದು.
 3. ಮಿಸ್ಡ್ ಕಾಲ್: 01122901406 ಗೆ ಮಿಸ್ ಕಾಲ್ ನೀಡುವ ಮೂಲಕ ನಿಮ್ಮ ಅಕೌಂಟಿನಲ್ಲಿರುವ ಇಪಿಎಫ್ಒ (EPFO) ಬ್ಯಾಲೆನ್ಸ್ ಅನ್ನು ನೀವು ಪರಿಶೀಲಿಸಬಹುದು.
 4. ಎಸ್ ಎಂ ಎಸ್ (SMS): 7738299899 ಗೆ ” EPFOHO UAN” ಎಂದು ಎಸ್ ಎಂ ಎಸ್ (SMS) ಕಳುಹಿಸುವ ಮೂಲಕ ನಿಮ್ಮ ಇಪಿಎಫ್ಒ (EPFO) ಅಕೌಂಟ್‌ನಲ್ಲಿನ ಬ್ಯಾಲೆನ್ಸ್ ಅನ್ನು ನೀವು ಪರಿಶೀಲಿಸಬಹುದು.
 5. ಇಪಿಎಫ್ಒ (EPFO) ಕಚೇರಿ: ನೀವು ಹತ್ತಿರದ ಇಪಿಎಫ್ಒ (EPFO) ಕಚೇರಿಗೆ ಭೇಟಿ ನೀಡಬಹುದು ಮತ್ತು ನಿಮ್ಮ ಪಿಎಫ್ (PF) ನ ಪಾಸ್‌ಬುಕ್, ವರ್ಗಾವಣೆ ಅಥವಾ ವಿತ್‌ಡ್ರಾವಲ್‌ಗಾಗಿ ಕೋರಿಕೆ ಸಲ್ಲಿಸಬಹುದು.

ಅಂತಿಮ ಪದಗಳು

ಲೇಖನದಲ್ಲಿ ನಮೂದಿಸಿದ ಹಂತಗಳನ್ನು ಅನುಸರಿಸುವ ಮೂಲಕ, ನೀವು ಹೆಚ್ಚು ಪರಿಣಾಮಕಾರಿಯಾಗಿ ಯುಎಎನ್ (UAN) ಅನ್ನು ಬಳಸಬಹುದು. ನಿಮ್ಮ ಅಕೌಂಟನ್ನು ಅಕ್ಸೆಸ್ ಮಾಡಲು ಮತ್ತು ನಿರ್ವಹಿಸಲು ಮತ್ತು ಅದರಲ್ಲಿ ಡೆಪಾಸಿಟ್ ಮಾಡಲಾದ ಹಣವನ್ನು ಟ್ರ್ಯಾಕ್ ಮಾಡಲು ನೀವು ಇಪಿಎಫ್‌ಒ (EPFO) ಯುಎಎನ್ (UAN) ಲಾಗಿನ್ ವಿವರಗಳನ್ನು ಬಳಸಬಹುದು.

FAQs

UAN(ಯುಎಎನ್‌) ಅನ್ನು ಹೇಗೆ ಜನರೇಟ್ ಮಾಡಲಾಗುತ್ತದೆ?

UAN(ಯುಎಎನ್‌) ಅನ್ನು ಉದ್ಯೋಗಿ ಪ್ರಾವಿಡೆಂಟ್ ಫಂಡ್ ಕಚೇರಿಯಿಂದ ಜನರೇಟ್ ಮಾಡಲಾಗುತ್ತದೆ ಮತ್ತು ಆನ್ಲೈನ್ ಟ್ರಾನ್ಸ್ಫರ್ ಕ್ಲೈಮ್ ಪೋರ್ಟಲ್ (ಒಟಿಸಿಪಿ)(OTCP) ನಲ್ಲಿ ಉದ್ಯೋಗದಾತರಿಗೆ ಲಭ್ಯವಾಗುತ್ತದೆ.

ಉದ್ಯೋಗಿಗಳು ಅವರಿಗೆ ನಿಯೋಜಿಸಲಾದ ಅನೇಕ UAN(ಯುಎಎನ್) ನಂಬರ್‌ಗಳನ್ನು ಹೊಂದಬಹುದೇ?

ಇಲ್ಲ, ಉದ್ಯೋಗಿಯು ಅನೇಕ UAN(ಯುಎಎನ್‌) ನಂಬರ್ಗಳನ್ನು ಹೊಂದಿರುವುದಿಲ್ಲ. UAN(ಯುಎಎನ್‌) ಒಂದು ವಿಶಿಷ್ಟ ಗುರುತಿನ ಸಂಖ್ಯೆಯಾಗಿದೆ, ಮತ್ತು ಇದು  ಪ್ರತಿ ಉದ್ಯೋಗಿಗೆ ಬದುಕಿನೂದ್ದಕ್ಕೂ ಇರುವ ಒಂದೇ ಸಂಖ್ಯೆ ಆಗಿರುತ್ತದೆ.

ನನ್ನ PF(ಪಿಎಫ್‌) ಅಕೌಂಟಿನಲ್ಲಿ ವೈಯಕ್ತಿಕ ವಿವರಗಳನ್ನು ಅಪ್ಡೇಟ್ ಮಾಡುವುದು ಹೇಗೆ?

ನೀವು ನಿಮ್ಮ ಅಪ್ಡೇಟ್ ಆದ ಮಾಹಿತಿಯನ್ನು ನಿಮ್ಮ ಉದ್ಯೋಗದಾತರಿಗೆ ಸಲ್ಲಿಸಬೇಕು. ಉದ್ಯೋಗದಾತರು ವಿವರಗಳನ್ನು ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗೆ ಕಳುಹಿಸುತ್ತಾರೆ. ಯಶಸ್ವಿ ಪರಿಶೀಲನೆಯ ನಂತರ, ಪೋರ್ಟಲ್ನಲ್ಲಿ ವಿವರಗಳನ್ನು ಅಪ್ಡೇಟ್ ಮಾಡಲಾಗುತ್ತದೆ.

UAN(ಯುಎಎನ್‌) ಅನ್ನು ಉದ್ಯೋಗಿಯ PAN(ಪಿಎಎನ್‌) ಗೆ ಲಿಂಕ್ ಮಾಡಲಾಗಿದೆಯೇ?

ಹೌದು, UAN(ಯುಎಎನ್‌) ಅನ್ನು ಉದ್ಯೋಗಿಯ PAN(ಪಿಎಎನ್‌)ಗೆ ಲಿಂಕ್ ಮಾಡಲಾಗಿದೆ.