CALCULATE YOUR SIP RETURNS

ಪೋಸ್ಟ್ ಆಫೀಸ್ ಸುಕನ್ಯ ಸಮೃದ್ಧಿ ಯೋಜನೆ: ಅರ್ಹತೆ ಮತ್ತು ತೆರಿಗೆ ಪ್ರಯೋಜನಗಳು

6 min readby Angel One
ಸುಕನ್ಯ ಸಮೃದ್ಧಿ ಯೋಜನೆಯು (ಎಸ್ಎಸ್‌ವೈ(SSY)) ಹೆಣ್ಣು ಮಕ್ಕಳಿಗೆ ಮೀಸಲಾದ ಉಳಿತಾಯ ಯೋಜನೆಯಾಗಿದೆ. 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವಿನ ಪೋಷಕರು ಅಥವಾ ಕಾನೂನು ಪಾಲಕರು ಎಸ್ಎಸ್‌ವೈ (SSY) ಅಕೌಂಟನ್ನು ತೆರೆಯಬಹುದು.
Share

ಸುಕನ್ಯಾ ಸಮೃದ್ಧಿ ಯೋಜನೆ ಹೆಣ್ಣುಮಕ್ಕಳ ಸಬಲೀಕರಣಕ್ಕೆ ಅನುಗುಣವಾಗಿ ರೂಪಿಸಲಾದ ಕೆಲವು ಸರ್ಕಾರಿ ಬೆಂಬಲಿತ ಯೋಜನೆಗಳಲ್ಲಿ ಒಂದಾಗಿದೆ. ನೀವು ಹೆಣ್ಣುಮಗು ಹೊಂದಿದ್ದರೆ, ಹತ್ತಿರದ ಪೋಸ್ಟ್ ಆಫೀಸಿಗೆ ಭೇಟಿ ನೀಡುವ ಮೂಲಕ ಎಸ್ಎಸ್‌ವೈ (SSY) ಅಕೌಂಟ್ ತೆರೆಯಬಹುದು. ಈ ಅನನ್ಯ ಉಳಿತಾಯ ಯೋಜನೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವೂ ಇಲ್ಲಿದೆ.

ಸುಕನ್ಯಾ ಸಮೃದ್ಧಿ ಯೋಜನೆ (ಎಸ್ಎಸ್‌ವೈ(SSY)) ಎಂದರೇನು?

ಸುಕನ್ಯ ಸಮೃದ್ಧಿ ಯೋಜನೆಯನ್ನು (ಎಸ್ಎಸ್‌ವೈ(SSY)) 22 ಜನವರಿ, 2015 ರಂದು ಭಾರತ ಸರ್ಕಾರವು ಬೇಟಿ ಬಚಾವ್ ಬೇಟಿ ಪಢಾವ್ (ಬಿಬಿಬಿಪಿ(BBBP)) ತೊಡಗುವಿಕೆಯ ಭಾಗವಾಗಿ ಘೋಷಿಸಿತು. ಎಸ್ಎಸ್‌ವೈ (SSY) ಯೋಜನೆಯ ಪ್ರಾಥಮಿಕ ಉದ್ದೇಶವೆಂದರೆ ಹೆಣ್ಣುಮಕ್ಕಳ ಪೋಷಕರನ್ನು ತಮ್ಮ ಭವಿಷ್ಯಕ್ಕಾಗಿ ಉಳಿತಾಯ ಮಾಡಲು ಪ್ರೋತ್ಸಾಹಿಸುವುದು. ಒಮ್ಮೆ ಅಕೌಂಟ್ ಮೆಚ್ಯೂರ್ ಆದ ನಂತರ, ಹೆಣ್ಣುಮಗು ತನ್ನ ಉನ್ನತ ಶಿಕ್ಷಣಕ್ಕೆ ಹಣಕಾಸು ಒದಗಿಸಲು ಅಥವಾ ತನ್ನ ಮದುವೆ ವೆಚ್ಚಗಳನ್ನು ನೋಡಿಕೊಳ್ಳಲು ಕಾರ್ಪಸ್ ಅನ್ನು ಬಳಸಬಹುದು. ಸುಕನ್ಯ ಸಮೃದ್ಧಿ ಯೋಜನೆಯು ಹೆಣ್ಣುಮಕ್ಕಳನ್ನು ಆರ್ಥಿಕವಾಗಿ ಸ್ವತಂತ್ರವಾಗಿಸುವ ಮೂಲಕ ಸಶಕ್ತಗೊಳಿಸುತ್ತದೆ.

ಸುಕನ್ಯ ಸಮೃದ್ಧಿ ಯೋಜನೆಯ ವಯಸ್ಸಿನ ಮಿತಿ ಮತ್ತು ಮೆಚ್ಯೂರಿಟಿ ಅವಧಿ

ಅಕೌಂಟ್ ತೆರೆಯಲು ಸುಕನ್ಯ ಸಮೃದ್ಧಿ ಯೋಜನೆಯು ವಯಸ್ಸಿನ ಮಿತಿಯನ್ನು ಸ್ಪಷ್ಟವಾಗಿ ನಿರ್ದಿಷ್ಟಪಡಿಸಿದೆ. ಹೆಣ್ಣುಮಕ್ಕಳ ಪೋಷಕರು 10 ವರ್ಷ ವಯಸ್ಸಿನವರಾಗುವ ಮೊದಲು ಪೋಸ್ಟ್ ಆಫೀಸ್ ಅಥವಾ ನೋಟಿಫೈಡ್ ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್ (ಎಸ್ ಸಿಬಿ (SCB)) ನೊಂದಿಗೆ ಎಸ್ಎಸ್‌ವೈ (SSY) ಅಕೌಂಟ್ ತೆರೆಯಬಹುದು.

ಹುಡುಗಿಯ ಮಗುವಿನ ವಯಸ್ಸು 21 ವರ್ಷಗಳನ್ನು ತಲುಪಿದಾಗ ಸುಕನ್ಯ ಸಮೃದ್ಧಿ ಅಕೌಂಟ್ ಮೆಚ್ಯೂರ್ ಆಗುತ್ತದೆ. ಮೆಚ್ಯೂರಿಟಿಯ ನಂತರ, ಕಾರ್ಪಸ್ ಬಡ್ಡಿಯನ್ನು ಗಳಿಸಲು ನಿಲ್ಲಿಸುತ್ತದೆ ಮತ್ತು ಅಕೌಂಟ್ ಹೋಲ್ಡರ್‌ ಅದನ್ನು  ವಿತ್‌ಡ್ರಾ ಮಾಡಬಹುದು. ಪರ್ಯಾಯವಾಗಿ, 18 ವರ್ಷ ವಯಸ್ಸಿನ ನಂತರ ಆಕೆ ಮದುವೆಯಾದರೆ ಅಕೌಂಟಿನಲ್ಲಿನ ಹಣವನ್ನು ಹುಡುಗಿಯಿಂದ ಅಕ್ಸೆಸ್ ಮಾಡಬಹುದು.

ಸುಕನ್ಯ ಸಮೃದ್ಧಿ ಯೋಜನೆಯ ಪ್ರಯೋಜನಗಳು

ಸುಕನ್ಯ ಸಮೃದ್ಧಿ ಯೋಜನೆಯು ಪೋಷಕರು ಮತ್ತು ಹೆಣ್ಣು ಮಗುವಿಗೆ ಅನೇಕ ಪ್ರಯೋಜನಗಳನ್ನು ಒದಗಿಸುತ್ತದೆ. ಈ ಯೋಜನೆಯ ಕೆಲವು ಪ್ರಮುಖ ಪ್ರಯೋಜನಗಳ ತ್ವರಿತ ಮೇಲ್ನೋಟ ಇಲ್ಲಿದೆ.

  • ಕಡಿಮೆ ಕನಿಷ್ಠ ಡೆಪಾಸಿಟ್

ಸುಕನ್ಯಾ ಸಮೃದ್ಧಿ ಅಕೌಂಟ್‌ಗಳಿಗೆ ಕನಿಷ್ಠ ಡೆಪಾಸಿಟ್ ಪ್ರತಿ ಹಣಕಾಸು ವರ್ಷಕ್ಕೆ ಕೇವಲ ₹250 ಆಗಿದೆ. ಒಂದು ಹಣಕಾಸು ವರ್ಷದಲ್ಲಿ ನೀವು ಕನಿಷ್ಠ ಡೆಪಾಸಿಟ್ ಮಾಡಲು ವಿಫಲವಾದರೆ ನಾಮಮಾತ್ರದ ₹50 ದಂಡವನ್ನು ವಿಧಿಸಲಾಗುತ್ತದೆ. ಯಾವುದೇ ನಿರ್ದಿಷ್ಟ ಹಣಕಾಸು ವರ್ಷದಲ್ಲಿ ನೀವು ಡೆಪಾಸಿಟ್ ಮಾಡಬಹುದಾದ ಗರಿಷ್ಠ ಮೊತ್ತ ₹1.5 ಲಕ್ಷ.

  • ಮೆಚ್ಯೂರ್ ಮುಂಚಿತ ವಿತ್‌ಡ್ರಾವಲ್ ಸೌಲಭ್ಯ

ಸುಕನ್ಯಾ ಸಮೃದ್ಧಿ ಯೋಜನೆಯು ಅಕಾಲಿಕ ವಿತ್‌ಡ್ರಾವಲ್ ಸೌಲಭ್ಯವನ್ನು ಹೊಂದಿದೆ, ಅಲ್ಲಿ ನಿಮ್ಮ ಹೆಣ್ಣುಮಗುವಿನ ಶೈಕ್ಷಣಿಕ ವೆಚ್ಚಗಳನ್ನು ಪೂರೈಸಲು ಹಿಂದಿನ ಹಣಕಾಸು ವರ್ಷದ ಬ್ಯಾಲೆನ್ಸ್‌ನ 50% ವರೆಗೆ ನೀವು ವಿತ್‌ಡ್ರಾ ಮಾಡಬಹುದು. ಈ ಸೌಲಭ್ಯವನ್ನು ಪಡೆಯಲು ಪ್ರವೇಶದ ಪುರಾವೆಯನ್ನು ನೀಡುವುದು ಕಡ್ಡಾಯವಾಗಿದೆ.

  • ಖಚಿತ ಸುರಕ್ಷತೆ ಮತ್ತು ರಿಟರ್ನ್ಸ್

ಸುಕನ್ಯಾ ಸಮೃದ್ಧಿ ಯೋಜನೆಯೊಂದಿಗೆ, ಆದಾಯವನ್ನು ಖಚಿತಪಡಿಸಲಾಗುತ್ತದೆ ಮತ್ತು ಭಾರತ ಸರ್ಕಾರವು ಈ ಯೋಜನೆಯನ್ನು ಬೆಂಬಲಿಸುವುದರಿಂದ ಯಾವುದೇ ಡೀಫಾಲ್ಟ್ ಅಪಾಯವಿಲ್ಲ.

  • ಅಕೌಂಟ್ ಟ್ರಾನ್ಸ್‌ಫರ್ ಸೌಲಭ್ಯ

ನೀವು ಪೋಸ್ಟ್ ಆಫೀಸ್ ಸುಕನ್ಯ ಸಮೃದ್ಧಿ ಯೋಜನೆಯ ಅಕೌಂಟನ್ನು ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕಿಗೆ ಟ್ರಾನ್ಸ್‌ಫರ್ ಮಾಡಬಹುದು ಮತ್ತು ಯಾವುದೇ ಸಮಯದಲ್ಲಿ ಇದಕ್ಕೆ ತದ್ವಿರುದ್ಧವಾಗಿ ಟ್ರಾನ್ಸ್‌ಫರ್ ಮಾಡಬಹುದು.

ಸುಕನ್ಯ ಸಮೃದ್ಧಿ ಯೋಜನೆಯ ತೆರಿಗೆ ಪ್ರಯೋಜನಗಳು

ಉಳಿತಾಯ ಯೋಜನೆಯನ್ನು ಹೆಚ್ಚು ಆಕರ್ಷಕವಾಗಿಸಲು, ಭಾರತ ಸರ್ಕಾರವು ಹಲವಾರು ತೆರಿಗೆ ಪ್ರಯೋಜನಗಳೊಂದಿಗೆ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಒದಗಿಸಿದೆ:

  • ಒಂದು ಹಣಕಾಸು ವರ್ಷದಲ್ಲಿ ನೀವು ಎಸ್‌ಎಸ್‌ವೈ(SSY) ಅಕೌಂಟ್‌ಗೆ ಮಾಡುವ ಯಾವುದೇ ಡೆಪಾಸಿಟ್ ಅನ್ನು ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 80C ಅಡಿಯಲ್ಲಿ ಕಡಿತವಾಗಿ ಕ್ಲೈಮ್ ಮಾಡಬಹುದು. ಆದಾಗ್ಯೂ, ನೀವು ಕ್ಲೈಮ್ ಮಾಡಬಹುದಾದ ಗರಿಷ್ಠ ಮೊತ್ತವನ್ನು ಪ್ರತಿ ಹಣಕಾಸು ವರ್ಷಕ್ಕೆ ₹1.5 ಲಕ್ಷಕ್ಕೆ ನಿರ್ಬಂಧಿಸಲಾಗಿದೆ.
  • ಸುಕನ್ಯಾ ಸಮೃದ್ಧಿ ಖಾತೆಯಲ್ಲಿನ ಹಣವು ಸಂಗ್ರಹಿಸುವ ಯಾವುದೇ ಬಡ್ಡಿಯು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 10 ಪ್ರಕಾರ ಸಂಪೂರ್ಣವಾಗಿ ತೆರಿಗೆ ವಿನಾಯಿತಿಯಾಗಿದೆ.
  • ಮೆಚ್ಯೂರಿಟಿಯ ಮೇಲೆ ಅಥವಾ ಬೇರೆ ರೀತಿಯಲ್ಲಿ  ಅಕೌಂಟಿನಿಂದ ವಿತ್‌ಡ್ರಾ ಮಾಡಲಾದ ಹಣಕ್ಕೂ  ಸಂಪೂರ್ಣವಾಗಿ ತೆರಿಗೆ ವಿನಾಯಿತಿಯಾಗಿದೆ.

ಸುಕನ್ಯ ಸಮೃದ್ಧಿ ಯೋಜನೆ ಬಡ್ಡಿ ದರ

ಭಾರತ ಸರ್ಕಾರವು ಯೋಜನೆಗೆ ತ್ರೈಮಾಸಿಕ ಆಧಾರದ ಮೇಲೆ ಬಡ್ಡಿ ದರವನ್ನು ಸೂಚಿಸುತ್ತದೆ. 2023-2024 ಹಣಕಾಸು ವರ್ಷದ 2ನೇ ತ್ರೈಮಾಸಿಕದ (ಜುಲೈಯಿಂದ ಸೆಪ್ಟೆಂಬರ್) ಪ್ರಕಾರ, ಬಡ್ಡಿ ದರವನ್ನು ವರ್ಷಕ್ಕೆ 8% ಎಂದು ಸೂಚಿಸಲಾಗಿದೆ, ಇದು ಅತ್ಯಂತ ಸಾಂಪ್ರದಾಯಿಕ ಉಳಿತಾಯ ಮತ್ತು ಡೆಪಾಸಿಟ್ ಯೋಜನೆಗಳಿಗಿಂತ ಹೆಚ್ಚಾಗಿದೆ.

ಸುಕನ್ಯ ಸಮೃದ್ಧಿ ಯೋಜನೆಯ ಬಡ್ಡಿಯ ಲೆಕ್ಕಾಚಾರ

ಒಂದು ತಿಂಗಳಲ್ಲಿ ಸುಕನ್ಯ ಸಮೃದ್ಧಿ ಅಕೌಂಟಿನಲ್ಲಿ ಅತಿ ಕಡಿಮೆ ಬ್ಯಾಲೆನ್ಸ್ ಮೇಲೆ ಬಡ್ಡಿಯನ್ನು ಲೆಕ್ಕ ಹಾಕಲಾಗುತ್ತದೆ. ಬಡ್ಡಿ ಲೆಕ್ಕಾಚಾರದ ಉದ್ದೇಶಕ್ಕಾಗಿ, ತಿಂಗಳ ಐದನೇ ಮತ್ತು ಕೊನೆಯ ದಿನಗಳ ನಡುವಿನ ಅಕೌಂಟಿನಲ್ಲಿನ ಬ್ಯಾಲೆನ್ಸ್ ಅನ್ನು ಪರಿಗಣಿಸಲಾಗುತ್ತದೆ.

ಬಡ್ಡಿಯನ್ನು ಪ್ರತಿ ತಿಂಗಳು ಲೆಕ್ಕ ಹಾಕಿದರೂ, ಇದನ್ನು ಪ್ರತಿ ಹಣಕಾಸು ವರ್ಷದ ಕೊನೆಯಲ್ಲಿ ಮಾತ್ರ ಕ್ರೆಡಿಟ್ ಮಾಡಲಾಗುತ್ತದೆ. ಹೆಚ್ಚುವರಿಯಾಗಿ, ಬಡ್ಡಿಯನ್ನು ವಾರ್ಷಿಕವಾಗಿಯೂ ಸಂಯೋಜಿಸಲಾಗುತ್ತದೆ. ಎಸ್ಎಸ್‌ವೈ(SSY) ಅಕೌಂಟ್‌ನಲ್ಲಿ ನಿಮ್ಮ ಹೂಡಿಕೆಯ ಮೊತ್ತವನ್ನು ನೀವು ನಿಖರವಾಗಿ ನಿರ್ಧರಿಸಲು ಬಯಸಿದರೆ, ಸುಕನ್ಯಾ ಸಮೃದ್ಧಿ ಯೋಜನೆ ಕ್ಯಾಲ್ಕುಲೇಟರ್ ಬಳಸಲು ಸಲಹೆ ನೀಡಲಾಗುತ್ತದೆ. ನೀವು ಮಾಡಬೇಕಾಗಿರುವುದು ಕೇವಲ ವಾರ್ಷಿಕ ಹೂಡಿಕೆಯ ಮೊತ್ತ, ಮಗುವಿನ ವಯಸ್ಸು ಮತ್ತು ಅಕೌಂಟ್ ತೆರೆಯುವ ವರ್ಷದಂತಹ ಕೆಲವು ವಿವರಗಳನ್ನು ನಮೂದಿಸಿ. ಈ ಟೂಲ್ ನಿಮಗೆ ತಕ್ಷಣವೇ ಆದಾಯದ ಅಂದಾಜು ನೀಡುತ್ತದೆ.

ಸುಕನ್ಯ ಸಮೃದ್ಧಿ ಯೋಜನೆಯ ಅರ್ಹತೆ

ಸುಕನ್ಯ ಸಮೃದ್ಧಿ ಯೋಜನೆ ಅಕೌಂಟ್ ತೆರೆಯಲು ಅರ್ಹರಾಗಲು ಕೆಲವು ಮಾನದಂಡಗಳನ್ನು ಪೂರೈಸಬೇಕು. ಅರ್ಹತಾ ಮಾನದಂಡಗಳ ತ್ವರಿತ ನೋಟ ಇಲ್ಲಿದೆ:

  • ನೀವು ಹೆಣ್ಣುಮಗುವಿನ ಪೋಷಕರು ಅಥವಾ ಕಾನೂನುಬದ್ಧ  ಪಾಲಕರಾಗಿರಬೇಕು.
  • ಹೆಣ್ಣು  ಮಗು ಭಾರತೀಯ ನಿವಾಸಿಯಾಗಿರಬೇಕು ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು.
  • ಪ್ರತಿ ಹೆಣ್ಣು  ಮಗುವಿಗೆ ನೀವು ಒಂದು ಅಕೌಂಟನ್ನು ಮಾತ್ರ ತೆರೆಯಬಹುದು.
  • ತ್ರಿವಳಿ  ಹುಡುಗಿಯ ಮಕ್ಕಳನ್ನು ಹೊರತುಪಡಿಸಿ, ಪ್ರತಿ ಕುಟುಂಬಕ್ಕೆ ಗರಿಷ್ಠ ಎರಡು ಎಸ್ಎಸ್‌ವೈ(SSY) ಅಕೌಂಟ್‌ಗಳನ್ನು ತೆರೆಯಬಹುದು, ಇಲ್ಲಿ ಮೂರನೇ ಅಕೌಂಟನ್ನು ತೆರೆಯಬಹುದು.

ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ (ಎಸ್ಎಸ್ವೈ (SSY)) ಹೂಡಿಕೆ ಮಾಡುವುದು ಹೇಗೆ?

ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡಲು, ನೀವು ಮೊದಲು ಪೋಸ್ಟ್ ಆಫೀಸ್ ಅಥವಾ ನೋಟಿಫೈಡ್ ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್ (ಎಸ್‌ಸಿಬಿ(SCB)) ನೊಂದಿಗೆ ಅಕೌಂಟನ್ನು ತೆರೆಯಬೇಕು. ಅಕೌಂಟ್ ತೆರೆಯಲು ನೀವು ಅನುಸರಿಸಬೇಕಾದ ಪ್ರಕ್ರಿಯೆಯನ್ನು ಕೆಳಗೆ ಪಟ್ಟಿ ಮಾಡಲಾಗಿದೆ:

  • ಹಂತ 1: ಪೋಸ್ಟ್ ಆಫೀಸ್ ಅಥವಾ ಅಧಿಸೂಚಿತ ಬ್ಯಾಂಕಿನ ಹತ್ತಿರದ ಶಾಖೆಗೆ ಭೇಟಿ ನೀಡಿ.
  • ಹಂತ 2: ಸುಕನ್ಯ ಸಮೃದ್ಧಿ ಅಕೌಂಟ್ ತೆರೆಯುವ ಫಾರಂಗಾಗಿ ಕೋರಿಕೆ ಸಲ್ಲಿಸಿ (ಫಾರಂ-1).
  • ಹಂತ 3: ಎಲ್ಲಾ ಅಗತ್ಯ ಡಾಕ್ಯುಮೆಂಟರಿ ಸಾಕ್ಷ್ಯದೊಂದಿಗೆ ಫಾರ್ಮ್ ಭರ್ತಿ ಮಾಡಿ ಮತ್ತು ಸಲ್ಲಿಸಿ.
  • ಹಂತ 4: ಮೊದಲ ಡೆಪಾಸಿಟ್ ಮಾಡಿ. ನಗದು, ಡಿಮ್ಯಾಂಡ್ ಡ್ರಾಫ್ಟ್ ಅಥವಾ ಚೆಕ್ ಮೂಲಕ ನೀವು ಪಾವತಿ ಮಾಡಲು ಆಯ್ಕೆ ಮಾಡಬಹುದು.

ಅಷ್ಟೇ. ಒಮ್ಮೆ ನೀವು ಮೊದಲ ಡೆಪಾಸಿಟ್ ಮಾಡಿದ ನಂತರ, ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ನಿಮ್ಮ ಅಕೌಂಟ್ ತೆರೆಯುವ ಕೋರಿಕೆಯನ್ನು ಪ್ರಕ್ರಿಯೆಗೊಳಿಸುತ್ತದೆ ಮತ್ತು ಹೊಸದಾಗಿ ತೆರೆದ ಅಕೌಂಟಿನ ವಿವರಗಳನ್ನು ಒಳಗೊಂಡಿರುವ ಪಾಸ್‌ಬುಕ್ ಅನ್ನು ನೀವು ಪಡೆಯುತ್ತೀರಿ.

ಸುಕನ್ಯ ಸಮೃದ್ಧಿ ಯೋಜನೆಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳು

ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‌ನೊಂದಿಗೆ ಸುಕನ್ಯ ಸಮೃದ್ಧಿ ಯೋಜನೆ ಅಕೌಂಟ್ ತೆರೆಯಲು ನೀವು ಸಲ್ಲಿಸಬೇಕಾದ ಡಾಕ್ಯುಮೆಂಟ್‌ಗಳ ಪಟ್ಟಿ ಈ ಕೆಳಗಿನಂತಿದೆ:

  • ಹುಡುಗಿಯ ಹುಟ್ಟಿದ ಜನ್ಮ ಪ್ರಮಾಣಪತ್ರದ ಪ್ರತಿ
  • ಪೋಷಕ ಅಥವಾ ಕಾನೂನುಬದ್ಧ  ಪಾಲಕರ ಗುರುತಿನ ಮತ್ತು ವಿಳಾಸದ ಪುರಾವೆಯ ಪ್ರತಿ
  • ಒಂದೇ ಗರ್ಭಧಾರಣೆಯ ಮೂಲಕ ಅನೇಕ ಹೆಣ್ಣು ಮಕ್ಕಳ  ಜನ್ಮದ ಸಂದರ್ಭದಲ್ಲಿ, ಅದನ್ನು ಪ್ರಮಾಣೀಕರಿಸುವ ಸಮರ್ಥ ವೈದ್ಯರಿಂದ ವೈದ್ಯಕೀಯ ಪ್ರಮಾಣಪತ್ರ

ಗಮನಿಸಿ: ಮೇಲೆ ತಿಳಿಸಲಾದ ಡಾಕ್ಯುಮೆಂಟ್‌ಗಳ ಜೊತೆಗೆ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಇನ್ನಷ್ಟು ಡಾಕ್ಯುಮೆಂಟರಿ ಸಾಕ್ಷ್ಯವನ್ನು ಸಲ್ಲಿಸುವಂತೆ ನಿಮ್ಮನ್ನು ಕೋರಬಹುದು.

ಸುಕನ್ಯ ಸಮೃದ್ಧಿ ಯೋಜನೆ ಮುಚ್ಚುವ ನಿಯಮಗಳು

ಸುಕನ್ಯ ಸಮೃದ್ಧಿ ಯೋಜನೆಯ ಅಕೌಂಟನ್ನು ಸಾಮಾನ್ಯವಾಗಿ ಮೆಚ್ಯೂರಿಟಿಯಲ್ಲಿ ಮುಚ್ಚಲಾಗುತ್ತದೆ. ಆದಾಗ್ಯೂ, ಕೆಲವು ಷರತ್ತುಗಳನ್ನು ಪೂರೈಸುವವರೆಗೆ ಇದನ್ನು ಮೆಚ್ಯೂರಿಟಿಗೆ ಮುಂಚಿತವಾಗಿ ಮುಚ್ಚಬಹುದು. ಅಕೌಂಟ್ ಮುಚ್ಚುವ ನಿಯಮಗಳನ್ನು ಇಲ್ಲಿ ನಿಕಟವಾಗಿ ನೋಡಿ.

ಮೆಚ್ಯೂರಿಟಿಯ ನಂತರ ಅಕೌಂಟ್ ಕ್ಲೋಸರ್

ಒಮ್ಮೆ ಮಗುವಿನ ವಯಸ್ಸು 21 ವರ್ಷಗಳನ್ನು ತಲುಪಿದ ನಂತರ ಸುಕನ್ಯ ಸಮೃದ್ಧಿ ಅಕೌಂಟ್ ಮೆಚ್ಯೂರ್ ಆಗುತ್ತದೆ. ಈ ಸಮಯದಲ್ಲಿ, ಅಕೌಂಟ್ ಹೋಲ್ಡರ್ ಕ್ಲೋಸರ್‌ಗಾಗಿ ಅಪ್ಲಿಕೇಶನ್ ಸಲ್ಲಿಸಬಹುದು ಮತ್ತು ಅಕೌಂಟಿನಲ್ಲಿ ಸಂಪೂರ್ಣ ಬ್ಯಾಲೆನ್ಸ್ ವಿತ್‌ಡ್ರಾ ಮಾಡಬಹುದು.

ಅಕಾಲಿಕ ಅಕೌಂಟ್ ಮುಚ್ಚುವಿಕೆ

ಈ ಕೆಳಗೆ ನಮೂದಿಸಿದ ಯಾವುದೇ ಷರತ್ತುಗಳನ್ನು ಪೂರೈಸಿದರೆ ಮಾತ್ರ ಅಕೌಂಟನ್ನು ಮೆಚ್ಯೂರಿಟಿಗೆ ಮುಂಚಿತವಾಗಿ ಕ್ಲೋಸ್ ಮಾಡಬಹುದು:

  • ಹೆಣ್ಣು ಮಗುವು  ಮಾರಣಾಂತಿಕ ಕಾಯಿಲೆಗೆ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದರೆ.
  • ಅಕೌಂಟ್ ಮೆಚ್ಯೂರ್ ಆಗುವ ಮೊದಲು ಹೆಣ್ಣು  ಮಗು ಯಾವುದೇ ಸಮಯದಲ್ಲಿ ಸಾವಿಗೀಡಾದರೆ.
  • ಹೆಣ್ಣು ಮಗುವಿನ ವಸತಿ ಸ್ಥಿತಿಯು ನಿವಾಸಿಯಿಂದ ಅನಿವಾಸಿಗೆ ಬದಲಾದರೆ.
  • 18 ವರ್ಷ ವಯಸ್ಸಿನ ನಂತರ ಹೆಣ್ಣು ಮಗು ಮದುವೆಯಾಗಲು ಉದ್ದೇಶಿಸಿದರೆ, ಪ್ರಸ್ತಾವಿತ ಮದುವೆಗೆ ಒಂದು ತಿಂಗಳ ಮೊದಲು ಮತ್ತು ಅವಳ ಮದುವೆಯ ನಂತರ 3 ತಿಂಗಳ ಒಳಗೆ ಒಂದು ಅಕೌಂಟ್ ಮುಚ್ಚುವ ಕೋರಿಕೆಯನ್ನು ಮಾಡಬಹುದು.
  • ಅಕೌಂಟ್ ನೀಡುವ ಪ್ರಾಧಿಕಾರವು ಅಕೌಂಟ್‌ನ ಮುಂದುವರಿಕೆಯು ಹೆಣ್ಣು ಮಗುವಿಗೆ ಕಷ್ಟವನ್ನು ಉಂಟುಮಾಡುತ್ತದೆ ಎಂಬ ದೃಷ್ಟಿಕೋನದಲ್ಲಿದ್ದರೆ.

ಗಮನಿಸಿ: ಮೇಲೆ ಪಟ್ಟಿ ಮಾಡಲಾದ ಯಾವುದೇ ಕಾರಣವನ್ನು ಹೊರತುಪಡಿಸಿ ಎಸ್ಎಸ್ ವೈ(SSY) ಅಕೌಂಟನ್ನು ಮೆಚ್ಯೂರಿಟಿಗೆ ಮುಂಚಿತವಾಗಿ ಮುಚ್ಚಿದರೆ, ಡೆಪಾಸಿಟ್ ನಿಯಮಿತ ಪೋಸ್ಟ್ ಆಫೀಸ್ ಸೇವಿಂಗ್ಸ್ ಅಕೌಂಟಿಗೆ ಅನ್ವಯವಾಗುವ ದರದಲ್ಲಿ ಬಡ್ಡಿಯನ್ನು ಗಳಿಸುತ್ತದೆ.

ಮುಕ್ತಾಯ

ಸುಕನ್ಯ ಸಮೃದ್ಧಿ ಯೋಜನೆಯು ಹೆಣ್ಣು ಮಕ್ಕಳ ಹಣಕಾಸಿನ ಸ್ವಾತಂತ್ರ್ಯವನ್ನು ಖಚಿತಪಡಿಸಿಕೊಳ್ಳುವ ಕಡೆಗೆ ಉತ್ತಮ ಹಂತವಾಗಿದೆ. ಅದು ನೀಡುವ ಅನೇಕ ಪ್ರಯೋಜನಗಳಿಗೆ ಧನ್ಯವಾದಗಳು, ಈ ಯೋಜನೆಯು ಈಗಾಗಲೇ ದೇಶದ ಅತ್ಯಂತ ಜನಪ್ರಿಯ ಉಳಿತಾಯ ಯೋಜನೆಗಳಲ್ಲಿ ಒಂದಾಗಿದೆ.

FAQs

ಎಸ್ಎಸ್ ವೈ(SSY) ಯೋಜನೆಯ ನಿಯಮಗಳ ಪ್ರಕಾರ, ನೀವು ಎಸ್ಎಸ್ ವೈ(SSY) ಅಕೌಂಟಿನಲ್ಲಿ ಬ್ಯಾಲೆನ್ಸ್ ಮೇಲೆ ಲೋನ್ ಪಡೆಯಲು ಸಾಧ್ಯವಿಲ್ಲ. ಎಸ್ಎಸ್ ವೈ(SSY) ಯೋಜನೆಯು ಲೋನ್ ಸೌಲಭ್ಯವನ್ನು ಒದಗಿಸುವುದಿಲ್ಲ.
ಅಕೌಂಟ್ ಕಾರ್ಪಸ್‌ನ 50% ವರೆಗೆ ಭಾಗಶಃ ವಿತ್‌ಡ್ರಾವಲ್ ಲಭ್ಯವಿದೆ. ಆದಾಗ್ಯೂ, ಈ ಸೌಲಭ್ಯವನ್ನು ಹೆಣ್ಣು ಮಗುವಿಗೆ 18 ವರ್ಷ ತುಂಬಿದ ನಂತರ ಮಾತ್ರ ಪಡೆದುಕೊಳ್ಳಬಹುದು.
ಒಂದು ಹಣಕಾಸು ವರ್ಷದಲ್ಲಿ ಸುಕನ್ಯ ಸಮೃದ್ಧಿ ಅಕೌಂಟಿನಲ್ಲಿ ನೀವು ಮಾಡಬಹುದಾದ ಡೆಪಾಸಿಟ್‌ಗಳ ಸಂಖ್ಯೆಗೆ ಯಾವುದೇ ಮಿತಿಯಿಲ್ಲ. ಆದಾಗ್ಯೂ, ಗರಿಷ್ಠ ಡೆಪಾಸಿಟ್ ಮೊತ್ತವು ಪ್ರತಿ ಹಣಕಾಸು ವರ್ಷಕ್ಕೆ ₹1.5 ಲಕ್ಷಕ್ಕೆ ಸೀಮಿತವಾಗಿದೆ.
ಪೋಸ್ಟ್ ಆಫೀಸ್ ಅಥವಾ ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್‌ಗಳು ಆನ್‌ಲೈನ್‌ನಲ್ಲಿ ಎಸ್ಎಸ್ ವೈ(SSY) ಅಕೌಂಟ್ ತೆರೆಯಲು ನಿಮಗೆ ಅನುಮತಿ ನೀಡುವುದಿಲ್ಲ. ಅಕೌಂಟ್ ತೆರೆಯಲು, ಪೋಸ್ಟ್ ಆಫೀಸ್ ಅಥವಾ ಅಧಿಸೂಚಿತ ಬ್ಯಾಂಕಿನ ಶಾಖೆಗೆ ನೀವು ಕಡ್ಡಾಯವಾಗಿ ಭೇಟಿ ನೀಡಬೇಕು.
Open Free Demat Account!
Join our 3 Cr+ happy customers