ಪರ್ಮನೆಂಟ್ ಅಕೌಂಟ್ ನಂಬರ್ (ಪ್ಯಾನ್ (PAN)) ಕಾರ್ಡ್ ಒಂದು ವಿಶಿಷ್ಟ ಗುರುತಿನ ಡಾಕ್ಯುಮೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ, ಇದು ಹಣಕಾಸಿನ ಟ್ರಾನ್ಸಾಕ್ಷನ್‌ಗಳನ್ನು ಟ್ರ್ಯಾಕ್ ಮಾಡಲು ಮಾತ್ರವಲ್ಲದೆ ತೆರಿಗೆ ಅನುಸರಣೆ ಮತ್ತು ವಿವಿಧ ಹಣಕಾಸಿನ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪ್ಯಾನ್ ಕಾರ್ಡಿನ ಪ್ರಾಮುಖ್ಯತೆಯನ್ನು ಪರಿಗಣಿಸಿ, ಆದಾಯ ತೆರಿಗೆ ಇಲಾಖೆಯ ಮೂಲಕ ಭಾರತದ ಹಣಕಾಸು ಸಚಿವಾಲಯವು ನಿಮ್ಮ ಆಧಾರ್ ಕಾರ್ಡ್ ಮೂಲಕ ತ್ವರಿತ ಪ್ಯಾನ್ (PAN) ಕಾರ್ಡಿನ ಹೊಸ ಸೌಲಭ್ಯವನ್ನು ಪ್ರಾರಂಭಿಸಿದೆ. ಈ ಲೇಖನದಲ್ಲಿ, ಆಧಾರ್ ಮೂಲಕ ತ್ವರಿತ ಪ್ಯಾನ್ (PAN) ಕಾರ್ಡ್ ಪಡೆಯುವುದು ಹೇಗೆ ಎಂಬುದನ್ನು ತಿಳಿಯಿರಿ.
ಆಧಾರ್ ಕಾರ್ಡ್ ಮೂಲಕ ತ್ವರಿತ ಪ್ಯಾನ್ (PAN) ಕಾರ್ಡ್
ಮಾನ್ಯ ಆಧಾರ್ ನಂಬರ್ ಹೊಂದಿರುವ ಮತ್ತು ಪ್ಯಾನ್ (PAN) ಕಾರ್ಡ್ ಪಡೆಯಲು ಬಯಸುವ ವ್ಯಕ್ತಿಗಳಿಗೆ ಆಧಾರ್ ಕಾರ್ಡ್ ಮೂಲಕ ತ್ವರಿತ ಪ್ಯಾನ್ (PAN) ಕಾರ್ಡ್ ಉಪಯುಕ್ತವಾಗಿದೆ.
ನಿಮ್ಮ ಎಲ್ಲಾ ಬ್ಯಾಂಕ್ ಅಕೌಂಟ್‌ಗಳು, ಕ್ರೆಡಿಟ್ ಕಾರ್ಡ್‌ಗಳು ಮತ್ತು ಹಣಕಾಸಿನ ಟ್ರಾನ್ಸಾಕ್ಷನ್‌ಗಳಿಗೆ ಪ್ಯಾನ್ (PAN) ಕಾರ್ಡ್ ವಿಶಿಷ್ಟ ಗುರುತಿನ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ. ತೆರಿಗೆ ಪಾರದರ್ಶಕತೆಯನ್ನು ಉತ್ತೇಜಿಸುವಲ್ಲಿ ಮತ್ತು ತೆರಿಗೆ ತಪ್ಪಿಸುವಿಕೆಯನ್ನು ತಡೆಯುವಲ್ಲಿ ಇದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಮತ್ತು ನಿಮ್ಮ ಆಧಾರ್ ನಂಬರ್ ಮತ್ತು ಬ್ಯಾಂಕ್ ಅಕೌಂಟ್‌ಗಳೊಂದಿಗೆ ನಿಮ್ಮ ಪ್ಯಾನ್ (PAN) ಕಾರ್ಡ್ ಅನ್ನು ಲಿಂಕ್ ಮಾಡುವುದರಿಂದ ನಿಮ್ಮ ಎಲ್ಲಾ ಹಣಕಾಸಿನ ವಿವರಗಳನ್ನು ಒಂದೇ ಸ್ಥಳದಲ್ಲಿ ಇಟ್ಟುಕೊಳ್ಳಬಹುದು ಮತ್ತು ಅಪರಾಧಗಳ ವಿರುದ್ಧ ಹೋರಾಡಬಹುದು. ಸರ್ಕಾರವು ಯಾವುದೇ ವೆಚ್ಚವಿಲ್ಲದೆ ವ್ಯಕ್ತಿಗಳಿಗೆ ತ್ವರಿತ ಪ್ಯಾನ್ (PAN) ಕಾರ್ಡ್‌ಗಳ ಈ ಸೇವೆಯನ್ನು ಲಭ್ಯವಾಗಿಸಿದೆ.
ಯಾವುದೇ ಹೆಚ್ಚುವರಿ ವೆಚ್ಚಗಳಿಲ್ಲದೆ ನೀವು ಪಿಡಿಎಫ್ (PDF) ಫಾರ್ಮ್ಯಾಟ್‌ನಲ್ಲಿ ತ್ವರಿತ ಪ್ಯಾನ್ (PAN) ಕಾರ್ಡ್ ಪಡೆಯಬಹುದು. ಇ-ಪ್ಯಾನ್ (e-PAN) ಕಾರ್ಡ್ ಅರ್ಜಿದಾರರ ಹೆಸರು, ಹುಟ್ಟಿದ ದಿನಾಂಕ ಮತ್ತು ಫೋಟೋ ಮುಂತಾದ ವಿವರಗಳನ್ನು ಒಳಗೊಂಡಿರುವ ಕ್ಯೂಆರ್ (QR) ಕೋಡ್ ಅನ್ನು ಒಳಗೊಂಡಿದೆ. 15-ಅಂಕಿಯ ಸ್ವೀಕೃತಿ ಸಂಖ್ಯೆಯನ್ನು ಬಳಸಿಕೊಂಡು ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್‌ನಿಂದ ಇ-ಪ್ಯಾನ್ (e-PAN) ಅನ್ನು ಡೌನ್ಲೋಡ್ ಮಾಡಬಹುದು ಮತ್ತು ಸಾಫ್ಟ್ ಕಾಪಿಯನ್ನು ನೋಂದಾಯಿತ ಇಮೇಲ್ ವಿಳಾಸಕ್ಕೆ ಕೂಡ ಕಳುಹಿಸಲಾಗುತ್ತದೆ.
ಯುಟಿಐಟಿಎಸ್ಎಲ್ (UIITSL) ಮತ್ತು ಎನ್ಎಸ್‌ಡಿಎಲ್ (NSDL) ವೆಬ್‌ಸೈಟ್‌ಗಳಲ್ಲಿ ಇ-ಪ್ಯಾನ್‌ಗೆ ಅಪ್ಲೈ ಮಾಡುವಾಗ, ಕೆಲವು ವೆಚ್ಚಗಳನ್ನು ಪಾವತಿಸಬೇಕಾಗಬಹುದು, ಆದರೆ ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ ಉಚಿತವಾಗಿ ಇ-ಪ್ಯಾನ್ ಅನ್ನು ಒದಗಿಸುತ್ತದೆ. ಪ್ಯಾನ್ (PAN) ಗೆ ಅಪ್ಲೈ ಮಾಡಲು ಈ ವಿಧಾನವನ್ನು ಬಳಸುವಾಗ, ನಿಮ್ಮ ಆಧಾರ್ ನಂಬರನ್ನು ನಿಮ್ಮ ಪ್ಯಾನ್ (PAN) ಗೆ ಆಟೋಮ್ಯಾಟಿಕ್ ಆಗಿ ಲಿಂಕ್ ಮಾಡಲಾಗುತ್ತದೆ.
ಆಧಾರ್ ಮೂಲಕ ತ್ವರಿತ ಪ್ಯಾನ್ (PAN) ಕಾರ್ಡ್ ಪಡೆಯಲು ಹಂತಗಳು
- ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್‌ನ ಅಧಿಕೃತ ವೆಬ್‌ಸೈಟ್‌ಗೆ ಹೋಗಿ (https://www.incometaxindiaefiling.gov.in/home)
- 'ತ್ವರಿತ ಲಿಂಕ್‌ಗಳು' ವಿಭಾಗಕ್ಕೆ ಹೋಗಿ
- ‘ಆಧಾರ್ ಮೂಲಕ ತ್ವರಿತ ಪ್ಯಾನ್ (PAN)' ಮೇಲೆ ಕ್ಲಿಕ್ ಮಾಡಿ
- 'ಹೊಸ ಪ್ಯಾನ್ (PAN) ಪಡೆಯಿರಿ' ಆಯ್ಕೆಮಾಡಿ’
- ನಿಮ್ಮ ಆಧಾರ್ ಕಾರ್ಡ್ ನಂಬರ್ ನಮೂದಿಸಿ
- ಕ್ಯಾಪ್ಚಾ ಭರ್ತಿ ಮಾಡಿ
- ನಿಯಮಗಳನ್ನು ಓದಿ ಮತ್ತು 'ನಾನು ಇದನ್ನು ಖಚಿತಪಡಿಸುತ್ತೇನೆ' ಚೆಕ್‌ಬಾಕ್ಸನ್ನು ಪರಿಶೀಲಿಸಿ’
- 'ಆಧಾರ್ ಒಟಿಪಿ (OTP) ಜನರೇಟ್ ಮಾಡಿ' ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಆಧಾರ್ ಕಾರ್ಡಿನಲ್ಲಿ ನೋಂದಣಿಯಾದ ಮೊಬೈಲ್ ನಂಬರಿಗೆ ಒಟಿಪಿ (OTP) ಯನ್ನು ಕಳುಹಿಸಲಾಗುತ್ತದೆ
- ಒಟಿಪಿ (OTP) ನಮೂದಿಸಿ
- ನಿಮ್ಮ ಆಧಾರ್ ವಿವರಗಳನ್ನು ಪರಿಶೀಲಿಸಿ
ವಿವರಗಳನ್ನು ಒದಗಿಸಿದ ನಂತರ, ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ಮತ್ತು ಇಮೇಲ್ ವಿಳಾಸಕ್ಕೆ ಸ್ವೀಕೃತಿ ನಂಬರನ್ನು ಕಳುಹಿಸಲಾಗುತ್ತದೆ.
ಆಧಾರ್ ಮೂಲಕ ತ್ವರಿತ ಪ್ಯಾನ್ (PAN) ಕಾರ್ಡಿಗೆ ಅರ್ಹತೆ
ಆಧಾರ್ ಕಾರ್ಡ್ ಹೊಂದಿರುವ ಆದರೆ ಪ್ಯಾನ್ (PAN) ಕಾರ್ಡ್ ಇಲ್ಲದಿರುವ ಭಾರತದ ಎಲ್ಲಾ ವ್ಯಕ್ತಿಗಳು ಆಧಾರ್ ಮೂಲಕ ತ್ವರಿತ ಪ್ಯಾನ್ (PAN) ಕಾರ್ಡ್ ಪಡೆಯಲು ಅರ್ಹರಾಗಿರುತ್ತಾರೆ. ನಿಮ್ಮ ಆಧಾರ್ ಕಾರ್ಡಿನೊಂದಿಗೆ ನೋಂದಣಿಯಾಗಿರುವ ನಿಮ್ಮ ಪ್ರಸ್ತುತ ಮೊಬೈಲ್ ನಂಬರನ್ನು ನೀವು ಹೊಂದಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಆಧಾರ್ ಮೂಲಕ ಇ-ಪ್ಯಾನ್ (e-PAN) ಡೌನ್ಲೋಡ್ ಮಾಡಿ
ಒಮ್ಮೆ ನಿಮಗೆ ಪ್ಯಾನ್ (PAN) ನಂಬರ್ ನಿಯೋಜಿಸಿದ ನಂತರ, ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ನೀವು ಇ-ಪ್ಯಾನ್ (e-PAN) ಡೌನ್ಲೋಡ್ ಮಾಡಬಹುದು:
- ಆದಾಯ-ತೆರಿಗೆ ಇಲಾಖೆಯ ಇ-ಫೈಲಿಂಗ್ ಪೋರ್ಟಲ್ ತೆರೆಯಿರಿ
- 'ಆಧಾರ್ ಬಳಸಿ ತ್ವರಿತ ಪ್ಯಾನ್ (PAN)' ಪೇಜಿಗೆ ಹೋಗಿ
- 'ಪ್ಯಾನ್ (PAN) ಸ್ಟೇಟಸ್ ಪರಿಶೀಲಿಸಿ' ಆಯ್ಕೆಯ ಮೇಲೆ ಕ್ಲಿಕ್ ಮಾಡಿ
- ನಿಮ್ಮ ಆಧಾರ್ ನಂಬರ್ ನಮೂದಿಸಿ. ನಿಮ್ಮ ನೋಂದಾಯಿತ ಮೊಬೈಲ್ ನಂಬರಿಗೆ ಒಟಿಪಿ (OTP) ಯನ್ನು ಕಳುಹಿಸಲಾಗುತ್ತದೆ
- ಪ್ಯಾನ್ (PAN) ನಂಬರ್ ನಿಯೋಜಿಸಲಾಗಿದೆಯೇ ಎಂದು ಪರಿಶೀಲಿಸಿ. ಅದನ್ನು ನಿಯೋಜಿಸಲಾಗಿದ್ದರೆ, ಇ-ಪ್ಯಾನ್ (e-PAN) ಪಿಡಿಎಫ್ (PDF) ಡೌನ್ಲೋಡ್ ಮಾಡುವ ಆಯ್ಕೆಯನ್ನು ನೀವು ಪಡೆಯುತ್ತೀರಿ.
ಮುಕ್ತಾಯ
ಈಗ ಆಧಾರ್ ಕಾರ್ಡ್ ಫೀಚರ್ ಮೂಲಕ ಈ ಹೊಸ ತ್ವರಿತ ಪ್ಯಾನ್ (PAN) ಕಾರ್ಡ್‌ನೊಂದಿಗೆ, ನಿಮ್ಮ ದೊಡ್ಡ ಹಣಕಾಸಿನ ಪ್ರಯಾಣವನ್ನು ಪ್ರಾರಂಭಿಸಲು ನೀವು ತ್ವರಿತವಾಗಿ ಪ್ಯಾನ್ (PAN) ಕಾರ್ಡ್ ಪಡೆಯಬಹುದು. ಆಧಾರ್ ಕಾರ್ಡಿನ ಎಲ್ಲಾ ವಿವರಗಳು ನೈಜವಾಗಿವೆ ಮತ್ತು ಅಪ್ಡೇಟ್ ಆಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಈ ವಿವರಗಳನ್ನು ಇ-ಪ್ಯಾನ್ (e-PAN) ಕಾರ್ಡಿನಲ್ಲಿಯೂ ನೀಡಲಾಗುತ್ತದೆ. ಇ-ಪ್ಯಾನ್ (e-PAN) ಫಿಸಿಕಲ್ ಪ್ಯಾನ್ (PAN) ಕಾರ್ಡಿಗೆ ಸಮನಾಗಿರುತ್ತದೆ. ಆಧಾರ್ ಡೌನ್ಲೋಡ್ ಪಿಡಿಎಫ್ (PDF) ಮೂಲಕ ತ್ವರಿತ ಪ್ಯಾನ್ (PAN) ಕಾರ್ಡ್ ಪಡೆದ ನಂತರ, ಫಿಸಿಕಲ್ ಪ್ಯಾನ್ (PAN) ಕಾರ್ಡ್ ಪಡೆಯಲು ನೀವು ಎನ್ಎಸ್‌ಡಿಎಲ್ (NSDL) ಅಥವಾ ಯುಟಿಐಟಿಎಸ್ಎಲ್ (UTIITSL) ವೆಬ್‌ಸೈಟ್‌ಗಳಿಗೆ ಭೇಟಿ ನೀಡಬಹುದು.