ಇತ್ತೀಚಿನ ಸಮಯದಲ್ಲಿ, ಸ್ಟಾಕ್ಗಳ ಮೇಲಿನ ಟ್ರೇಡಿಂಗ್ ಆನ್ಲೈನಿನಲ್ಲಿ ಶಾಪಿಂಗ್ ಮಾಡುವುದು ಸರಳವಾಗಿದೆ. ಸ್ಮಾರ್ಟ್ ಫೋನ್ ಬಳಸಿ ಕಾಫಿ ಅಂಗಡಿಯಲ್ಲಿ ಇರುವ ಹೂಡಿಕೆದಾರರು ಅದನ್ನು ಮಾಡಬಹುದು. ಅದಕ್ಕೆ ಅಗತ್ಯವಿರುವ ಎಲ್ಲವೂ ಉತ್ತಮ ಅಂತರ್ಜಾಲ ಸಂಪರ್ಕ, 3-in-1 ಖಾತೆಗೆ ಚ್ನ್ದಾ ಚಂದಾದಾರಿಕೆ, ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ಮತ್ತು ಬ್ಯಾಂಕ್ ಖಾತೆಯಲ್ಲಿ ಸಾಕಷ್ಟು ಬಂಡವಾಳ ಇರಬೇಕು.

ಅದೃಷ್ಟವಶಾತ್, ಎಲ್ಲಾ ತೀ ತೀವ್ರ ಕಾಗದದ ಕೆಲಸ ಒಂದೇ ಕ್ಲಿಕ್ಗೆ ಕೆಳಗೆ ಬಂದಿದೆ ಅಥವಾ ಮೊಬೈಲ್ ಸ್ಕ್ರೀನಿಗೆ ಸ್ಪರ್ಶಿಸಿದೆ. ಟ್ರೇಡಿಂಗ್ಗಾಗಿ ಅನೇಕ ಉಚಿತ ಮತ್ತು ಪಾವತಿಸಿದ ಮೊಬೈಲ್ ಮತ್ತು ವೆಬ್ ಅಪ್ಲಿಕೇಶನ್ಗಳು ಮತ್ತು ಪೋರ್ಟಲ್ಗಳು ಅಂತರ್ಜಾಲದಲ್ಲಿ ಲಭ್ಯವಿವೆ.

ಸರಿಯಾದ ರೀತಿಯಲ್ಲಿ ಮಾಡಿದರೆ ಸ್ಟಾಕ್ ಟ್ರೇಡಿಂಗ್ ಹಣಕಾಸಿನ ಪುರಸ್ಕಾರವಾಗಿರಬಹುದು. ಸ್ಟಾಕ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದರಲ್ಲಿ ಮಾರುಕಟ್ಟೆಯ ವಿವಿಧ ಏರಿಳಿತದ  ಸವಾರಿ ಮಾಡುವುದನ್ನು  ಒಳಗೊಂಡಿರುತ್ತದೆ. ಭಾರತದಲ್ಲಿ ಆನ್ಲೈನ್ ವ್ಯಾಪಾರದ ಪರಿಚಯದಿಂದಾಗಿ, ಹೂಡಿಕೆಯು ಅನುಕೂಲಕರವಾಗಿದೆ. ದೀರ್ಘಾವಧಿಯ ಸಂಪತ್ತು ಸೃಷ್ಟಿಗೆ ಬಂದಾಗ ಸ್ಟಾಕ್ ಮಾರುಕಟ್ಟೆ ವ್ಯಾಪಾರ ಒಂದು ಉತ್ತಮ ಪರ್ಯಾಯವಾಗಿದೆ. ಆದಾಗ್ಯೂ, ನಿಮ್ಮ ಕೌಶಲ್ಯಗಳನ್ನು ವೃದ್ದಿಸಲು ಇದು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು.

ಕೆಳಗಿನ ಆನ್ಲೈನ್ ಟ್ರೇಡಿಂಗ್ ಬಗ್ಗೆ  ಸುಲಭವಾಗಿ ಮಾಹಿತಿಯನ್ನು ಪಡೆಯಿರಿ:

  • ಆನ್ಲೈನ್ ಟ್ರೇಡಿಂಗ್ ಎಂದರೇನು.
  • ಆನ್ಲೈನಿನಲ್ಲಿ ಟ್ರೇಡ್ ಮಾಡುವುದು ಹೇಗೆ.

ಆನ್ಲೈನ್ ಟ್ರೇಡಿಂಗ್ ಎಂದರೇನು

ಆನ್ಲೈನ್ ಟ್ರೇಡಿಂಗ್ ಆನ್ಲೈನ್ ಪ್ಲಾಟ್ಫಾರ್ಮ್ ಮೂಲಕ ಸೆಕ್ಯೂರಿಟಿಗಳ ಟ್ರೇಡಿಂಗ್ ಅನ್ನು ಒಳಗೊಂಡಿರುತ್ತದೆ. ಆನ್ಲೈನ್ ಟ್ರೇಡಿಂಗ್ ಪೋರ್ಟಲ್ಗಳು ಇಕ್ವಿಟಿಗಳು, ಮ್ಯೂಚುಯಲ್ ಫಂಡ್ಗಳು ಮತ್ತು ಕಮಾಡಿಟಿಗಳಂತಹ ವಿವಿಧ ಹಣಕಾಸಿನ ಸಾಧನಗಳ ಟ್ರೇಡಿಂಗನ್ನು ಸುಗಮಗೊಳಿಸುತ್ತವೆ. ಏಂಜೆಲ್ ಒನ್  ಏಂಜಲ್ ಸ್ಪೀಡ್ ಪ್ರೊಹೂಡಿಕೆದಾರರು ಮತ್ತು ವ್ಯಾಪಾರಿಗಳಿಗೆ ಸ್ಟಾಕ್ಗಳು ಮತ್ತು ಇತರ ಹಣಕಾಸಿನ ಸಾಧನಗಳನ್ನು ಖರೀದಿಸಲು/ಮಾರಾಟ ಮಾಡಲು ಸಹಾಯ ಮಾಡುವ ಆನ್ಲೈನ್ ಟ್ರೇಡಿಂಗ್ ವೇದಿಕೆಯನ್ನು ಒದಗಿಸುತ್ತದೆ.

ಆನ್ಲೈನಿನಲ್ಲಿ ಟ್ರೇಡ್ ಮಾಡುವುದು ಹೇಗೆ

  • ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಯನ್ನು ತೆರೆಯಿರಿ:

ಆನ್ಲೈನ್ ಟ್ರೇಡಿಂಗ್ ಆರಂಭಿಸಲು ನೀವು ಆನ್ಲೈನ್ ಬ್ರೋಕಿಂಗ್ ಸಂಸ್ಥೆಯೊಂದಿಗೆ ಆನ್ಲೈನ್ ಟ್ರೇಡಿಂಗ್ ಖಾತೆಯನ್ನು ತೆರೆಯಬೇಕು. ಏಂಜಲ್ ಒನ್ ವಿಶ್ವಾಸಾರ್ಹ ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಯಸೇವೆಗಳನ್ನು ಕಡಿಮೆ ನಿರ್ವಹಣಾ ವೆಚ್ಚ ಮತ್ತು ಕೈಗೆಟಕುವ ದಲ್ಲಾಳಿಯೊಂದಿಗೆ ಒದಗಿಸುತ್ತದೆ. ಎಲ್ಲಾ ಸ್ಟಾಕ್ ಎಕ್ಸ್ಚೇಂಜ್ಗಳ ನೋಂದಾಯಿತ ಸದಸ್ಯರಾಗಿರುವ ದಲ್ಲಾಳಿಯನ್ನು ಆಯ್ಕೆ ಮಾಡುವುದು ಅಗತ್ಯವಾಗಿದೆ ಮತ್ತು ಇದನ್ನು ಸೆಬಿ (SEBI) ಯಿಂದ ಪ್ರಮಾಣೀಕರಿಸಲಾಗಿದೆ.

  • ಎಲ್ಲಾ ಸ್ಟಾಕ್ ಮಾರುಕಟ್ಟೆಯ ಮೂಲಭೂತ ವಿಷಯಗಳನ್ನು ಕಲಿಯಿರಿ:

ಸ್ಟಾಕ್ ಮಾರುಕಟ್ಟೆಯು ಪೂರೈಕೆ ಮತ್ತು ಬೇಡಿಕೆಯ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತದೆ. ಷೇರು ಮಾರುಕಟ್ಟೆ ಹೂಡಿಕೆಯ ಬಗ್ಗೆ ಹೆಚ್ಚಿನ ತಿಳುವಳಿಕೆಯೊಂದಿಗೆ ಟ್ರೇಡಿಂಗ್  ಕಲಿಯುವುದು ಆರಂಭವಾಗುತ್ತದೆ. ಹಣಕಾಸಿನ ಸುದ್ದಿಗಳು ಮತ್ತು ವೆಬ್‌ಸೈಟ್‌ಗಳ ಮೇಲೆ ಟ್ಯಾಬ್‌ಗಳನ್ನು ಇಟ್ಟುಕೊಳ್ಳುವುದು, ಪಾಡ್-ಕಾಸ್ಟ್‌ಗಳನ್ನು ಕೇಳುವುದು ಮತ್ತು ಹೂಡಿಕೆ ಕೋರ್ಸ್‌ಗಳನ್ನು ತೆಗೆದುಕೊಳ್ಳುವುದು ಸಮರ್ಥ ಹೂಡಿಕೆದಾರರಾಗಲು ಅತ್ಯುತ್ತಮ ಮಾರ್ಗಗಳಾಗಿವೆ.

  • ಆನ್ಲೈನ್ ಸ್ಟಾಕ್ ಸಿಮುಲೇಟರ್‌ನೊಂದಿಗೆ ಅಭ್ಯಾಸ ಮಾಡಿ:

ಆನ್ಲೈನ್ ಟ್ರೇಡಿಂಗ್ ಸಿಮ್ಯುಲೇಟರ್ಗಳು ಆನ್ಲೈನ್ ಟ್ರೇಡಿಂಗ್ ಕಲಿಯಲು ಉತ್ತಮ ಮಾರ್ಗವಾಗಿವೆ. ಇದು ಸಿಮ್ಯುಲೇಟರ್ ಆಗಿರುವುದರಿಂದ, ನೀವು ಮಾಡುವ ನಷ್ಟಗಳು ನಿಮ್ಮ ಮೇಲೆ ಪರಿಣಾಮ ಬೀರುವುದಿಲ್ಲ, ಆದ್ದರಿಂದ ನೀವು ಯಾವುದೇ ಭಯವಿಲ್ಲದೆ ವ್ಯಾಪಾರವನ್ನು ಕಲಿಯಬಹುದು.

  • ಯೋಜನೆಯನ್ನು ಡ್ರಾಫ್ಟ್ ಮಾಡಿ:

ನೀವು ವ್ಯಾಪಾರ ಮಾಡುವಾಗ, ನಿಮ್ಮ ಹೂಡಿಕೆ ತಂತ್ರಗಳ ಮೂಲಕ ಯೋಚಿಸುವುದು ತುಂಬಾ ಮುಖ್ಯವಾಗಿದೆ. ನೀವು ಒಂದು ನಿರ್ದಿಷ್ಟ ಕಂಪನಿಯಲ್ಲಿ ಎಷ್ಟು ಹೂಡಿಕೆ ಮಾಡಲು ಸಿದ್ಧರಾಗಿದ್ದೀರಿ ಎಂಬುದನ್ನು ಮುಂಚಿತವಾಗಿ ನಿರ್ಧರಿಸಿ ಮತ್ತು ನೀವು ಭರಿಸಲು ಬಯಸುವ ನಷ್ಟದ ಮೊತ್ತದ ಮೇಲೆ ಮಿತಿಗಳನ್ನು ಹೊಂದಿಸಿ.

ನೀವು ಈ ಎಲ್ಲಾ ಅಂಶಗಳನ್ನು ಮನಸ್ಸಿನಲ್ಲಿ ಭರಿಸಿದರೆ, ಆನ್ಲೈನ್ ಷೇರ್ ಟ್ರೇಡಿಂಗ್ ನಿಮಗಾಗಿ ಸುಲಭ ಮತ್ತು ಲಾಭದಾಯಕ ಕಾರ್ಯವಾಗಿರುತ್ತದೆ. ಯಶಸ್ವಿ ಆನ್ಲೈನ್ ಟ್ರೇಡಿಂಗ್ಗೆ ಅಭ್ಯಾಸದ ಕೀಲಿಯಾಗಿದೆ. ಸ್ಟಾಕ್ ಟ್ರೇಡಿಂಗ್ ಎಂಬುದು ದೀರ್ಘಾವಧಿಯ ಹೂಡಿಕೆಯಾಗಿದೆ ಮತ್ತು ತಾಳ್ಮೆ ಮತ್ತು ಪರಿಶ್ರಮದ ಅಗತ್ಯವಿದೆ.

ಇದು ಸ್ಟಾಕ್ಗಳು, ಬಾಂಡ್ಗಳು ಮತ್ತು ಇತರ ಸಂಬಂಧಿತ ಹಣಕಾಸಿನ ಸಾಧನಗಳಂತಹ ಸೆಕ್ಯೂರಿಟಿಗಳನ್ನು ಖರೀದಿಸುವುದು ಮತ್ತು ಮಾರಾಟ ಮಾಡುವುದನ್ನು ಒಳಗೊಂಡಿದೆ. ಈ ಉದ್ದೇಶಕ್ಕಾಗಿ, ನಿಮಗೆ ಡಿಮ್ಯಾಟ್ ಖಾತೆ ಮತ್ತು ಟ್ರೇಡಿಂಗ್ ಖಾತೆ ಬೇಕಾಗುತ್ತದೆ. ಡಿಮ್ಯಾಟ್ ಖಾತೆ ಸ್ಟಾಕ್ಗಳ ಖರೀದಿಸಿದ ಘಟಕಗಳನ್ನು ಸಂಗ್ರಹಿಸಲು ಸಾಮಾನ್ಯ ರಿಪಾಸಿಟರಿಯಾಗಿ ಕಾರ್ಯನಿರ್ವಹಿಸುತ್ತದೆ, ಆದರೆ ಟ್ರೇಡಿಂಗ್ ಖಾತೆ ಷೇರು ಖರೀದಿಸಲು ಮತ್ತು ಮಾರಾಟ ಮಾಡಲು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ವ್ಯಾಪಾರದ ಹಣಕಾಸನ್ನು ಸುಲಭಗೊಳಿಸಲು ಟ್ರೇಡಿಂಗ್ ಖಾತೆಗೆ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಲಾಗಿದೆ.

ಆನ್ಲೈನ್ ಟ್ರೇಡಿಂಗ್ನ ಪ್ರಮುಖ ಪ್ರಯೋಜನವೆಂದರೆ ಯಾವುದೇ ಸ್ಪಷ್ಟನೆಗಳು ಅಥವಾ ಪ್ರಶ್ನೆಗಳ ಸಂದರ್ಭದಲ್ಲಿ ಹೂಡಿಕೆದಾರರು ಮೀಸಲಾದ ಗ್ರಾಹಕ ಸೇವೆಯ ಸಹಾಯವನ್ನು ಪಡೆಯಬಹುದು.