ಫಂಡ್ಸ್ ಪಾವತಿಯನ್ನು ವಿವರಿಸಲಾಗಿದೆ!

ನೀವು ಎಷ್ಟು ಹೂಡಿಕೆ ಮಾಡಿದರೂ ಮತ್ತು ಯಾವ ಸಾಧನಗಳಲ್ಲಿ ಹೂಡಿಕೆ ಮಾಡಿದರೂ, ನಿಮ್ಮ ಟ್ರೇಡಿಂಗ್ ಅಕೌಂಟಿನಿಂದ ಹಣವನ್ನು ವಿತ್‌ಡ್ರಾ ಮಾಡಲು ಬಯಸುವ ಸಮಯ ಬರುತ್ತದೆ. ನಿಮ್ಮ ಟ್ರೇಡಿಂಗ್ ಅಕೌಂಟಿನಿಂದ ನೋಂದಾಯಿತ ಬ್ಯಾಂಕ್ ಅಕೌಂಟಿಗೆ ಹಣವನ್ನು ಹಾಕುವ ಈ ಪ್ರಕ್ರಿಯೆಯನ್ನು ಹಣದ ಪಾವತಿ ಎಂದು ಕರೆಯಲಾಗುತ್ತದೆ.

ಈ ಲೇಖನದಲ್ಲಿ ಬಳಕೆದಾರರು ತಮ್ಮ ಏಂಜಲ್ ಒನ್ ಅಕೌಂಟ್‌ಗಳಿಂದ ಹಣವನ್ನು ವಿತ್‌ಡ್ರಾ ಮಾಡುವುದಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ಪ್ರಶ್ನೆಗಳಿಗೆ ನಾವು ಉತ್ತರಿಸುತ್ತೇವೆ.

ನನ್ನ ವಿತ್‌ಡ್ರಾ ಮಾಡಬಹುದಾದ ಬ್ಯಾಲೆನ್ಸ್ ಏಕೆ ಶೂನ್ಯವಾಗಿದೆ ಅಥವಾ ನನ್ನ ಟ್ರೇಡಿಂಗ್ ಅಕೌಂಟ್ ಬ್ಯಾಲೆನ್ಸ್‌ನೊಂದಿಗೆ ಯಾಕೆ ಹೊಂದಿಕೆಯಾಗುತ್ತಿಲ್ಲ?

ನಿಮ್ಮ ಅಕೌಂಟಿನಲ್ಲಿ ನೀವು ಸೆಟಲ್ ಮಾಡದ ಬ್ಯಾಲೆನ್ಸ್‌ಗಳನ್ನು ಹೊಂದಿದ್ದೀರಿ. ಈ ಕೆಳಗಿನ ಕಾರಣಗಳಿಂದಾಗಿ ಇದು ಸಂಭವಿಸಬಹುದು:

 • ಡೆಲಿವರಿ ಮಾರಾಟದ ಟ್ರಾನ್ಸಾಕ್ಷನ್‌ಗಳಿಗಾಗಿ
  • ನೀವು T+2 ದಿನದಂದು ಮೊತ್ತವನ್ನು ವಿತ್‌ಡ್ರಾ ಮಾಡಬಹುದು.
  • ಉದಾಹರಣೆಗೆ – ನೀವು ಸೋಮವಾರದಂದು ₹1000 ಡೆಲಿವರಿ ಮಾರಾಟ ಟ್ರಾನ್ಸಾಕ್ಷನ್ ಹೊಂದಿದ್ದೀರಿ. ನೀವು ಇವುಗಳನ್ನು ಬುಧವಾರದಂದು ವಿತ್‌ಡ್ರಾ ಮಾಡಬಹುದು. ಆದ್ದರಿಂದ ಸೋಮವಾರ ಮತ್ತು ಮಂಗಳವಾರದಂದು, ನೀವು ವಿತ್‌ಡ್ರಾ ಮಾಡಬಹುದಾದ ಬ್ಯಾಲೆನ್ಸ್ ಶೂನ್ಯ ಮತ್ತು ಸೆಟಲ್ ಮಾಡದ ಬ್ಯಾಲೆನ್ಸ್ ₹1000 ಆಗಿರುತ್ತದೆ .
 • ನಿರ್ಗಮನಕಾರಿ F&O ಸ್ಥಾನದಿಂದ ಪಡೆದ ಹಣವನ್ನು ಮುಂದಿನ ಕೆಲಸದ ದಿನದಂದು ವಿತ್‌ಡ್ರಾ ಮಾಡಬಹುದು
  • ಉದಾಹರಣೆಗೆ – ನೀವು ಸೋಮವಾರದಂದು ₹1000 F&O ಮಾರಾಟ ಟ್ರಾನ್ಸಾಕ್ಷನ್ ಹೊಂದಿದ್ದೀರಿ. ನೀವು ಮಂಗಳವಾರದಂದು ಇವುಗಳನ್ನು ವಿತ್‌ಡ್ರಾ ಮಾಡಬಹುದು. ಆದ್ದರಿಂದ ಸೋಮವಾರ, ನೀವು ವಿತ್‌ಡ್ರಾ ಮಾಡಬಹುದಾದ ಬ್ಯಾಲೆನ್ಸ್ ಶೂನ್ಯ ಮತ್ತು ಸೆಟಲ್ ಮಾಡದ ಬ್ಯಾಲೆನ್ಸ್ ₹1000 ಆಗಿರುತ್ತದೆ.
 • ದಿನದಲ್ಲಿ ನೀವು ಸೇರಿಸಿದ ಹಣವನ್ನು ಈ ಕೆಳಗಿನ ದಿನದಂದು ವಿತ್‌ಡ್ರಾ ಮಾಡಬಹುದು
  • ಉದಾಹರಣೆಗೆ – ನೀವು ಸೋಮವಾರದಂದು ₹1000 ಸೇರಿಸಿದ್ದೀರಿ, ಆದರೂ ನೀವು ಸೋಮವಾರದಂದು ವಿತ್‌ಡ್ರಾ ಮಾಡಬಹುದಾದ ಬ್ಯಾಲೆನ್ಸ್ ಶೂನ್ಯವಾಗಿ ಕಾಣುತ್ತದೆ. ಮುಂದಿನ ದಿನ ಅಂದರೆ ಮಂಗಳವಾರ, ನೀವು ₹500 ಸೇರಿಸುತ್ತೀರಿ ಎಂದು ಅಂದುಕೊಳ್ಳಿ. ನಿಮ್ಮ ವಿತ್‌ಡ್ರಾ ಮಾಡಬಹುದಾದ ಬ್ಯಾಲೆನ್ಸ್ ₹1000 ಆಗಿರುತ್ತದೆ (ನೀವು ಈ ದಿನದ ಮೊದಲು ಸೇರಿಸಿದ್ದು. ಇಂದಿನ ₹500 ವಿತ್‌ಡ್ರಾ ಮಾಡಬಹುದಾದ ಬ್ಯಾಲೆನ್ಸಿನಲ್ಲಿ ಕಾಣಿಸುವುದಿಲ್ಲ).

ನಾನು ಹಣದ ಪಾವತಿ ಕೋರಿಕೆಯನ್ನು ಸಲ್ಲಿಸಿದ ನಂತರ ಹಣವನ್ನು ನನ್ನ ಅಕೌಂಟಿಗೆ ಯಾವಾಗ ಕ್ರೆಡಿಟ್ ಮಾಡಲಾಗುತ್ತದೆ?

ಉದಾಹರಣೆಗೆ – ಸೋಮವಾರದಂದು ನಿಮ್ಮ ವಿತ್‌ಡ್ರಾ ಮಾಡಬಹುದಾದ ಬ್ಯಾಲೆನ್ಸ್‌ನಲ್ಲಿ ನೀವು ₹1000 ಹೊಂದಿದ್ದೀರಿ.

 • ನೀವು ಸೋಮವಾರ 11 am ರಂದು ₹500 ವಿತ್‌ಡ್ರಾವಲ್ ಕೋರಿಕೆಯನ್ನು ಸಲ್ಲಿಸುತ್ತೀರಿ. ನಿಮ್ಮ ಕೋರಿಕೆಯನ್ನು 5:30 pm ಗೆ ಪ್ರಕ್ರಿಯೆಗೊಳಿಸಲಾಗುತ್ತದೆ ಮತ್ತು ನೀವು 9:30 PM ಒಳಗೆ ಕ್ರೆಡಿಟ್ ಪಡೆಯುತ್ತೀರಿ.
 • ನೀವು ಸೋಮವಾರ 6 pm ರಂದು ವಿತ್‌ಡ್ರಾವಲ್ ಕೋರಿಕೆಯನ್ನು ಸಲ್ಲಿಸುತ್ತೀರಿ. ಮಂಗಳವಾರ 7:00 am ಗೆ ನಿಮ್ಮ ಕೋರಿಕೆಯನ್ನು ಪ್ರಕ್ರಿಯೆಗೊಳಿಸಲಾಗುತ್ತದೆ ಮತ್ತು ಮಂಗಳವಾರ 9:30 AM ಒಳಗೆ ನೀವು ಕ್ರೆಡಿಟ್ ಪಡೆಯುತ್ತೀರಿ.

ನಾನು ಇಂದು ನನ್ನ ಅಕೌಂಟಿನಲ್ಲಿ ಹಣವನ್ನು ಸೇರಿಸಿದ್ದೇನೆ ಆದರೆ ಅವುಗಳನ್ನು ಇಂದೇ ವಿತ್‌ಡ್ರಾ ಮಾಡಲು ಸಾಧ್ಯವಾಗುತ್ತಿಲ್ಲ. ಏಕೆ?

ಸೇರಿಸಲಾದ ಹಣವನ್ನು ಅದೇ ದಿನವೇ ವಿತ್‌ಡ್ರಾಮಾಡಲು ಸಾಧ್ಯವಿಲ್ಲ. ಅವುಗಳನ್ನು ಮುಂದಿನ ದಿನ (t+1) ದಿಂದ ಮಾತ್ರ ವಿತ್‌ಡ್ರಾ ಮಾಡಬಹುದು. ಉದಾಹರಣೆಗೆ, ನೀವು ನವೆಂಬರ್ 22, 2022 ರಂದು ₹10,000 ಸೇರಿಸಿದ್ದರೆ, ನೀವು ಅದನ್ನು ನವೆಂಬರ್ 23, 2022 ರಂದು ಮಾತ್ರ ವಿತ್‌ಡ್ರಾ ಮಾಡಬಹುದು.

ನಾನು ವಿತ್‌ಡ್ರಾವಲ್ ಕೋರಿಕೆಯನ್ನು ಸಲ್ಲಿಸಿದ್ದೇನೆ, ಆದರೆ ನನ್ನ ಟ್ರೇಡಿಂಗ್ ಬ್ಯಾಲೆನ್ಸ್ ಏಕೆ ಕಡಿಮೆಯಾಗಿದೆ?

ಮುಂದಿನ ಪಾವತಿ ಸೈಕಲ್ ಇನ್ನೂ ಆರಂಭವಾಗಿದೆಯೇ ಎಂದು ದಯವಿಟ್ಟು ಪರಿಶೀಲಿಸಿ. ಇಲ್ಲದಿದ್ದರೆ, ಪಾವತಿ ಸೈಕಲ್ ಆರಂಭವಾದ ನಂತರ ಮಾತ್ರ ವಿತ್‌ಡ್ರಾವಲ್ ಕೋರಿಕೆಯನ್ನು ಪ್ರಕ್ರಿಯೆಗೊಳಿಸಲಾಗುತ್ತದೆ ಎಂದರ್ಥ. ಒಟ್ಟಾರೆಯಾಗಿ, ವಿತ್‌ಡ್ರಾವಲ್ ಪ್ರಕ್ರಿಯೆಯ ಕಾರ್ಯಗತಗೊಳಿಸುವಿಕೆಯು ಕನಿಷ್ಠ ಪ್ರಕ್ರಿಯೆಯ ಸಮಯವನ್ನು ತೆಗೆದುಕೊಳ್ಳುತ್ತದೆ.

ಪಾವತಿ ಸೈಕಲ್ ಆರಂಭವಾಗುವವರೆಗೆ, ನೀವು ವಿತ್‌ಡ್ರಾವಲ್ ಕೋರಿಕೆಯನ್ನು ಸಲ್ಲಿಸಿದ್ದರೂ ಸಹ, ಲಭ್ಯವಿರುವ ಸಂಪೂರ್ಣ ಬ್ಯಾಲೆನ್ಸ್ ಬಳಸಿಕೊಂಡು ನೀವು ಇನ್ನೂ ಆಸ್ತಿಗಳನ್ನು ಟ್ರೇಡ್ ಮಾಡಬಹುದು. ಉದಾಹರಣೆಗೆ ನೀವು ನಿಮ್ಮ ಅಕೌಂಟಿನಲ್ಲಿ ₹1000 ಹೊಂದಿದ್ದೀರಿ ಮತ್ತು ಸಂಪೂರ್ಣ ಮೊತ್ತಕ್ಕೆ ವಿತ್‌ಡ್ರಾವಲ್ ಕೋರಿಕೆಯನ್ನು ಸಲ್ಲಿಸಿದ್ದೀರಿ. ಆದರೆ ಮೊತ್ತವನ್ನು ಇನ್ನೂ ವಿತ್‌ಡ್ರಾ ಮಾಡಲಾಗಿಲ್ಲ, ಆದರೆ ಸ್ಟಾಕ್ ಮಾರುಕಟ್ಟೆ ಈಗಾಗಲೇ ತೆರೆದಿದೆ. ಈ ಹಂತದಲ್ಲಿ, ನೀವು ₹200 ಮೌಲ್ಯದ ಸ್ಟಾಕ್ ಅನ್ನು ಖರೀದಿಸಿ ಎಂದುಕೊಳ್ಳಿ – ಆದ್ದರಿಂದ ₹800 ಉಳಿದಿರುತ್ತದೆ ₹200 ಬಳಕೆಯಾಗುತ್ತದೆ.  ಆದ್ದರಿಂದ, ವಿತ್‌ಡ್ರಾವಲ್ ಆದಾಗ, ಕೇವಲ ₹800 ಮಾತ್ರ ವಿತ್‌ಡ್ರಾ ಮಾಡಲಾಗುತ್ತದೆ. ಖಾತೆಯು ಮತ್ತೊಮ್ಮೆ ₹200 ಅಥವಾ ಹೆಚ್ಚಿನದನ್ನು ಪಡೆದಾಗ ಉಳಿದ ₹200 ವಿತ್‌ಡ್ರಾವಲ್ ಅನ್ನು  ಕಾರ್ಯಗತಗೊಳಿಸಲಾಗುತ್ತದೆ.

ನನ್ನ ಫಂಡ್‌ಗಳ ಪಾವತಿ ಕೋರಿಕೆಯ ಮೇಲೆ ನಾನು ಭಾಗಶಃ ಮೊತ್ತವನ್ನು ಮಾತ್ರ ಏಕೆ ಪಡೆದಿದ್ದೇನೆ?

ಈ ಕೆಳಗಿನ ಯಾವುದಾದರೂ ಕಾರಣಗಳಿಂದಾಗಿ ನಿಮ್ಮ ವಿತ್‌ಡ್ರಾವಲ್ ಮೇಲೆ ನೀವು ಭಾಗಶಃ ಹಣವನ್ನು ಪಡೆದಿದ್ದೀರಿ:

 1. ಮಾರ್ಜಿನ್ ಅವಶ್ಯಕತೆಗಳು
 2. ಹೊಸ ಟ್ರೇಡ್ ಅನ್ನು ಆರಂಭಿಸಲಾಗಿದೆ
 3. ಸಂಗ್ರಹ ಶುಲ್ಕಗಳು

ಉದಾಹರಣೆಗೆ: ದಿನದ ಆರಂಭದಲ್ಲಿ ಅಂದರೆ ಬೆಳಿಗ್ಗೆ 9:00 ಗಂಟೆಗೆ ವಿತ್‌ಡ್ರಾ ಮಾಡಬಹುದಾದ ಬ್ಯಾಲೆನ್ಸ್‌ನಂತೆ ನಿಮ್ಮ ಬಳಿ ರೂ. 1000 ಇದೆ ಎಂದು ಭಾವಿಸಿ  ಮತ್ತು ನೀವು ₹ 1000 ರ ಹಣಕಾಸಿನ ಪಾವತಿ ಕೋರಿಕೆಯನ್ನು ಸಲ್ಲಿಸಿದ್ದೀರಿ. ಕೋರಿಕೆಯನ್ನು ಸಲ್ಲಿಸಿದ ನಂತರ, ನೀವು ಇಂಟ್ರಾಡೇ ಟ್ರೇಡ್‌ಗೆ ಪ್ರವೇಶಿಸಿದ್ದೀರಿ ಮತ್ತು ರೂ. 100 (ಬ್ರೋಕರೇಜ್, ತೆರಿಗೆಗಳು ಮತ್ತು ಇತರ ಶಾಸನಬದ್ಧ ಶುಲ್ಕಗಳನ್ನು ಒಳಗೊಂಡಂತೆ) ನಷ್ಟವನ್ನು ಅನುಭವಿಸಿದ್ದೀರಿ, ಇದರಿಂದ ನಿಮ್ಮ ಸ್ಪಷ್ಟ ಲೆಡ್ಜರ್ ಬ್ಯಾಲೆನ್ಸ್ ರೂ. 900 ಆಗಿರುತ್ತದೆ. ಆದ್ದರಿಂದ, ನಿಮ್ಮ ವಿತ್‌ಡ್ರಾವಲ್ ಕೋರಿಕೆಯನ್ನು ಪ್ರಕ್ರಿಯೆಗೊಳಿಸಿದಾಗ, ನೀವು ನಿಮ್ಮ ಅಕೌಂಟಿನಲ್ಲಿ ನೀವು ರೂ. 900 ಸ್ವೀಕರಿಸುತ್ತೀರಿ ಮತ್ತು ರೂ. 1000 ಅಲ್ಲ. ಈ ಸಂದರ್ಭದಲ್ಲಿ, ಇಂಟ್ರಾಡೇ ಟ್ರಾನ್ಸಾಕ್ಷನ್ ಕಾರಣದಿಂದಾಗಿ ರೂ. 100 ನಷ್ಟವು ನೀವು ಪಡೆದ ಮೊತ್ತವನ್ನು ಮಾರ್ಪಡಿಸಿದೆ. ಅದೇ ರೀತಿ, ಮಾರ್ಜಿನ್ ಅವಶ್ಯಕತೆಗಳು ಅಥವಾ ಪಾವತಿಯ ಅಗತ್ಯವಿರುವ ಯಾವುದೇ ಸಂಗ್ರಹ ಶುಲ್ಕಗಳಲ್ಲಿ ಯಾವುದೇ ಬದಲಾವಣೆ ಇದ್ದರೆ, ನೀವು ಭಾಗಶಃ ಮೊತ್ತವನ್ನು ಮಾತ್ರ ಪಡೆಯುತ್ತೀರಿ.

ನನ್ನ ಫಂಡ್‌ಗಳ ಪಾವತಿ ಕೋರಿಕೆಯನ್ನು ಏಕೆ ತಿರಸ್ಕರಿಸಲಾಗಿದೆ?

ಈ ಕೆಳಗಿನ ಕಾರಣಗಳಿಗಾಗಿ ನಿಮ್ಮ ವಿತ್‌ಡ್ರಾವಲ್ ಕೋರಿಕೆಯನ್ನು ತಿರಸ್ಕರಿಸಬಹುದು:

 • ನೀವು ಹೊಸ ಟ್ರೇಡ್ ಅನ್ನು ಮಾಡಿದ್ದೀರಿ
 • ಮಾರ್ಜಿನ್ ಅವಶ್ಯಕತೆ ಬದಲಾಗಿದೆ
 • ನಿಮ್ಮ ಅಕೌಂಟಿನಲ್ಲಿ ಅಸಮರ್ಪಕ ಬ್ಯಾಲೆನ್ಸ್ ಇದೆ

ನಾನು ನನ್ನ ಡಿಮ್ಯಾಟ್ ಅಕೌಂಟಿನಿಂದ ಷೇರುಗಳನ್ನು ಮಾರಾಟ ಮಾಡಿದ್ದೇನೆ. ನನ್ನ ಬ್ಯಾಂಕ್ ಅಕೌಂಟಿಗೆ ನಾನು ಹಣವನ್ನು ಯಾವಾಗ ಟ್ರಾನ್ಸ್‌ಫರ್ ಮಾಡಬಹುದು?

ಸೆಟಲ್ಮೆಂಟ್ ಸೈಕಲ್ ಪ್ರಕಾರ, ನೀವು ಈ ಕೆಳಗಿನ ದಿನಗಳಲ್ಲಿ ಹಣವನ್ನು ವಿತ್‌ಡ್ರಾವಲ್ ಕೋರಿಕೆಗಳನ್ನು ಮಾಡಬಹುದು. ಡೆಲಿವರಿ ಮಾರಾಟ ಟ್ರಾನ್ಸಾಕ್ಷನ್‌ಗಳಿಗಾಗಿ, T+2 ದಿನದಂದು ಫಂಡ್‌ಗಳ ಪಾವತಿ ಕೋರಿಕೆಗಳನ್ನು ಮಾಡಬಹುದು. F&O ಟ್ರಾನ್ಸಾಕ್ಷನ್‌ಗಳಿಗಾಗಿ, T+1 ದಿನದಂದು ಫಂಡ್‌ಗಳ ಪಾವತಿ ಕೋರಿಕೆಗಳನ್ನು ಮಾಡಬಹುದು.

ನಾನು BTST (ಇಂದು ಖರೀದಿಸಿ, ನಾಳೆ ಮಾರಾಟ ಮಾಡಿ) ಟ್ರೇಡ್ ಮಾಡಿದ್ದೇನೆ. ನಾನು ಹಣಕಾಸಿನ ಪಾವತಿ ಕೋರಿಕೆಯನ್ನು ಯಾವಾಗ ಸಲ್ಲಿಸಬಹುದು?

BTST ಟ್ರಾನ್ಸಾಕ್ಷನ್‌ಗಳಲ್ಲಿ, ಮಾರಾಟದ ಟ್ರಾನ್ಸಾಕ್ಷನ್ ಕಾರ್ಯಗತಗೊಳಿಸಿದ ನಂತರ T+2 ದಿನಗಳಲ್ಲಿ ವಿತ್‌ಡ್ರಾವಲ್ ಕೋರಿಕೆಗಳನ್ನು ಮಾಡಬಹುದು.

ನನ್ನ ಬಳಿ 2 ಬ್ಯಾಂಕ್ ಅಕೌಂಟ್‌ಗಳಿವೆ. ನಾನು ನನ್ನ ಸೆಕೆಂಡರಿ ಬ್ಯಾಂಕ್ ಅಕೌಂಟ್ ನಲ್ಲಿ ಹಣವನ್ನು ಪಡೆಯಲು ಬಯಸುತ್ತೇನೆ. ನಾನು ಏನು ಮಾಡಬೇಕು?

ವಿತ್‌ಡ್ರಾ ಮಾಡುವಾಗ, ನೀವು ಹಣವನ್ನು ಪಡೆಯಲು ಬಯಸುವ ಬ್ಯಾಂಕ್ ಅಕೌಂಟನ್ನು ಆಯ್ಕೆ ಮಾಡುವ ಆಯ್ಕೆಯನ್ನು ಏಂಜಲ್ ಒನ್ ನಿಮಗೆ ನೀಡುತ್ತದೆ. ನೀವು ಆಯ್ಕೆ ಮಾಡಿದ ಬ್ಯಾಂಕ್ ಅಕೌಂಟಿಗೆ ಮೊತ್ತವು ಕ್ರೆಡಿಟ್ ಆಗುತ್ತದೆ.

ನೀವು ಮುಗಿಸುವ ಮೊದಲು, ಫಂಡ್‌ಗಳ ಸಂಪೂರ್ಣ ಪಾವತಿ ಪ್ರಕ್ರಿಯೆಯನ್ನು ನೋಡೋಣ.

ನಿಮ್ಮ ಏಂಜಲ್ ಒನ್ ಅಕೌಂಟಿನಿಂದ ಹಣವನ್ನು ವಿತ್‌ಡ್ರಾ ಮಾಡುವುದು

ಏಂಜಲ್ ಒನ್‌ನೊಂದಿಗೆ, ನೀವು ಸುಲಭವಾಗಿ ನಮ್ಮ ವೇದಿಕೆಯಲ್ಲಿ ಹಣಕಾಸಿನ ಪಾವತಿ (ವಿತ್‌ಡ್ರಾವಲ್) ಕೋರಿಕೆಯನ್ನು ಸಲ್ಲಿಸಬಹುದು ಮತ್ತು ನಿಮ್ಮ ಟ್ರೇಡಿಂಗ್ ಅಕೌಂಟಿಗೆ ಲಿಂಕ್ ಆದ ಬ್ಯಾಂಕ್ ಅಕೌಂಟಿನಲ್ಲಿ ನೇರವಾಗಿ ಅದನ್ನು ಪಡೆಯಬಹುದು. ಏಂಜಲ್ ಒನ್‌ ಟ್ರೇಡಿಂಗ್ ಅಕೌಂಟ್ ಬಳಸುವ ಪ್ರಯೋಜನಗಳು:

 1. ಸರಿಯಾದ ಬ್ಯಾಂಕ್ ವಿವರಗಳೊಂದಿಗೆ ನೀವು ಅನೇಕ ಬ್ಯಾಂಕ್ ಅಕೌಂಟ್‌ಗಳನ್ನು ಅಟ್ಯಾಚ್ ಮಾಡಬಹುದು.
 2. ನಿಮ್ಮ ಪ್ರಾಥಮಿಕ ಬ್ಯಾಂಕ್ ಅಕೌಂಟ್ ನಲ್ಲಿ ಮಾತ್ರ ಹಣವನ್ನು ಸ್ವೀಕರಿಸುವ ಯಾವುದೇ ನಿರ್ಬಂಧವಿಲ್ಲ. ನಿಮ್ಮ ಆಯ್ದ ಬ್ಯಾಂಕ್ ಖಾತೆಯಲ್ಲಿ ನೀವು ಹಣವನ್ನು ಪಡೆಯಬಹುದು.

ಹಣವನ್ನು ವಿತ್‌ಡ್ರಾ ಮಾಡುವ ಮೊದಲು, ನಿಮ್ಮ ಅಕೌಂಟಿನಲ್ಲಿ “ವಿತ್‌ಡ್ರಾ ಮಾಡಬಹುದಾದ ಬ್ಯಾಲೆನ್ಸ್” ಅನ್ನು ನೀವು ಪರಿಶೀಲಿಸಬೇಕು. “ವಿತ್‌ಡ್ರಾ ಮಾಡಬಹುದಾದ ಬ್ಯಾಲೆನ್ಸ್” ಲಭ್ಯವಿರುವ “ಫಂಡ್‌ಗಳಿಗಿಂತ ಕಡಿಮೆ ಇರಬಹುದು ಎಂದು ಕೂಡ ನೀವು ತಿಳಿದುಕೊಳ್ಳಬೇಕು, ಏಕೆಂದರೆ ಇದರ ಭಾಗವನ್ನು ಈ ಕೆಳಗಿನವುಗಳಿಗಾಗಿ ತಡೆಹಿಡಿಯಬಹುದು

 1. ಮಾರ್ಜಿನ್ ಅವಶ್ಯಕತೆಗಳು
 2. ಬ್ರೋಕರೇಜ್ ಶುಲ್ಕಗಳು
 3. ಇತರ ಶಾಸನಬದ್ಧ ಶುಲ್ಕಗಳು, ಇತ್ಯಾದಿ.

ಏಂಜಲ್‌ ಒನ್ ನೊಂದಿಗೆ ಹಣಕಾಸಿನ ಪಾವತಿ ಪ್ರಕ್ರಿಯೆಯು ಸಂಪೂರ್ಣವಾಗಿ ಡಿಜಿಟಲ್ ಮತ್ತು ಸರಳವಾಗಿದೆ.

ಹಣವನ್ನು ವಿತ್‌ಡ್ರಾ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.

 1. ಲಾಗಿನ್ ಮಾಡಿದ ನಂತರ ‘ಅಕೌಂಟ್’ ವಿಭಾಗಕ್ಕೆ ಹೋಗಿ
 2. ‘ವಿತ್‌ಡ್ರಾ’ ಬಟನ್ ಕ್ಲಿಕ್ ಮಾಡಿ
 3. ವಿತ್‌ಡ್ರಾ ಮಾಡಬಹುದಾದ ಬ್ಯಾಲೆನ್ಸ್ ಮೊತ್ತದಿಂದ ನೀವು ವಿತ್‌ಡ್ರಾ ಮಾಡಲು ಬಯಸುವ ಮೊತ್ತವನ್ನು ನಮೂದಿಸಿ ಮತ್ತು ನೀವು ಹಣವನ್ನು ವಿತ್‌ಡ್ರಾ ಮಾಡಲು ಬಯಸುವ ಬ್ಯಾಂಕ್ ಅನ್ನು ಕ್ಲಿಕ್ ಮಾಡಿ.
 4. ಕೋರಿಕೆಯನ್ನು ಸಲ್ಲಿಸಲು ‘ಮುಂದುವರೆಯಿರಿ’ ಮೇಲೆ ಕ್ಲಿಕ್ ಮಾಡಿ

ಅಂಕಿಅಂಶ 1: ಹಣವನ್ನು ವಿತ್‌ಡ್ರಾ ಮಾಡುವ ಪ್ರಕ್ರಿಯೆ

ಮಾರಾಟದ ಟ್ರಾನ್ಸಾಕ್ಷನ್‌ಗಳ ಸಂದರ್ಭದಲ್ಲಿ ನಾನು ಯಾವಾಗ ವಿತ್‌ಡ್ರಾವಲ್ ಕೋರಿಕೆಯನ್ನು ಸಲ್ಲಿಸಬಹುದು?

ಸೆಟಲ್ಮೆಂಟ್ ಸೈಕಲ್ ಪ್ರಕಾರ, ನೀವು ಈ ಕೆಳಗೆ ನಮೂದಿಸಿದ ದಿನಗಳಲ್ಲಿ ಹಣಕಾಸಿನ ಪಾವತಿ ಕೋರಿಕೆಯನ್ನು ಸಲ್ಲಿಸಬಹುದು.

 • ಡೆಲಿವರಿ ಮಾರಾಟದ ಟ್ರಾನ್ಸಾಕ್ಷನ್‌ಗಳಿಗಾಗಿ, T+2 ದಿನದಂದು ಪಾವತಿ ಕೋರಿಕೆಯನ್ನು ಮಾಡಬಹುದು
 • F&O ಟ್ರಾನ್ಸಾಕ್ಷನ್‌ಗಳಿಗಾಗಿ, T+1 ದಿನದಂದು ಫಂಡ್ ಪಾವತಿ ಕೋರಿಕೆಗಳನ್ನು ಮಾಡಬಹುದು

ಉದಾಹರಣೆಗೆ, ನೀವು ಸೋಮವಾರದಂದು ಎಬಿಸಿ ಲಿಮಿಟೆಡ್‌ನ ಇಕ್ವಿಟಿ ಷೇರುಗಳನ್ನು ಮಾರಾಟ ಮಾಡಿದ್ದೀರಿ. ಆ ಸಂದರ್ಭದಲ್ಲಿ, ನಿಮ್ಮ ಹಣವನ್ನು T+2 ದಿನದಂದು ಬಿಡುಗಡೆ ಮಾಡಲಾಗುತ್ತದೆ, ಅಂದರೆ ಬುಧವಾರ, ಇದರಲ್ಲಿ ಸೋಮವಾರದಿಂದ ಬುಧವಾರದವರೆಗೆ ಯಾವುದೇ ಟ್ರೇಡಿಂಗ್ ರಜಾದಿನಗಳಿಲ್ಲ ಎಂದು ಊಹಿಸಲಾಗುತ್ತಿದೆ. ಆದ್ದರಿಂದ, ನೀವು ಬುಧವಾರದಂದು ಹಣಕಾಸಿನ ಪಾವತಿ ಕೋರಿಕೆಯನ್ನು ಸಲ್ಲಿಸಲು ಸಾಧ್ಯವಾಗುತ್ತದೆ.

ನೀವು ನೋಡಬೇಕಾದ ವಿವಿಧ ರೀತಿಯ ಬ್ಯಾಲೆನ್ಸ್‌ಗಳು ಯಾವುವು

ವಿತ್‌ಡ್ರಾ ಮಾಡಬಹುದಾದ ಬ್ಯಾಲೆನ್ಸ್ – ನಿಮ್ಮ ಬ್ಯಾಂಕ್ ಅಕೌಂಟಿಗೆ ವಿತ್‌ಡ್ರಾ ಮಾಡಬಹುದಾದ ನಿಮ್ಮ ಅಕೌಂಟಿನಲ್ಲಿ ಲಭ್ಯವಿರುವ ಒಟ್ಟು ಬ್ಯಾಲೆನ್ಸ್ ವಿತ್‌ಡ್ರಾ ಮಾಡಬಹುದಾದ ಬ್ಯಾಲೆನ್ಸ್ ಆಗಿದೆ. ವಿತ್‌ಡ್ರಾ ಮಾಡಬಹುದಾದ ಮೊತ್ತವು ನಿಮ್ಮ ಟ್ರೇಡಿಂಗ್ ಅಕೌಂಟಿನಲ್ಲಿ ತೋರಿಸಲಾದ ಒಟ್ಟು ಟ್ರೇಡಿಂಗ್ ಬ್ಯಾಲೆನ್ಸಿನಿಂದ ಬೇರೆಯಾಗಿರುತ್ತದೆ.

ಸೆಟಲ್ ಮಾಡದ ಬ್ಯಾಲೆನ್ಸ್ – ಬಳಕೆದಾರರು ಇಂದು ಲಾಭವನ್ನು ಗಳಿಸಿದರೆ ಮತ್ತು ಇಂದೇ ಮೊತ್ತವನ್ನು ವಿತ್‌ಡ್ರಾ ಮಾಡಲು ಪ್ರಯತ್ನಿಸಿದರೆ, ಎಲ್ಲಾ ಟ್ರಾನ್ಸಾಕ್ಷನ್‌ ಗಳ ಮೊತ್ತವನ್ನು ಇನ್ನೂ ಇತ್ಯರ್ಥಪಡಿಸದಿದ್ದರೂ, ಈ ಮೊತ್ತವನ್ನು ಸೆಟಲ್ ಮಾಡದ ಬಾಕಿ ಎಂದು ಪರಿಗಣಿಸಲಾಗುತ್ತದೆ.

ಒಟ್ಟು ಬ್ಯಾಲೆನ್ಸ್ – ವಿತ್‌ಡ್ರಾ ಮಾಡಬಹುದಾದ ಬ್ಯಾಲೆನ್ಸ್ ಮತ್ತು ಸೆಟಲ್ ಆಗದ ಬ್ಯಾಲೆನ್ಸ್ ಸೇರಿಸುವ ಮೂಲಕ ಒಟ್ಟು ಬ್ಯಾಲೆನ್ಸ್ ಅನ್ನು ಕಂಡುಕೊಳ್ಳಬಹುದು – ಇದು ಆ ಸಮಯದಲ್ಲಿ ಬಳಕೆದಾರರಿಗೆ ಅರ್ಹವಾಗಿರುವ ಒಟ್ಟು ಮೊತ್ತವಾಗಿದೆ.

ನಿಮ್ಮ ಬ್ಯಾಂಕ್ ಅಕೌಂಟ್ ವಿವರಗಳನ್ನು ಅಪ್ಡೇಟ್ ಮಾಡುವುದು

ಇತ್ತೀಚಿನ ವಿಲೀನಗಳಿಂದಾಗಿ ಹಲವಾರು ಬ್ಯಾಂಕುಗಳಿಗೆ IFSC ಕೋಡ್‌ಗಳು ಮತ್ತು ಅಕೌಂಟ್ ನಂಬರ್‌ಗಳನ್ನು ಬದಲಾಯಿಸಲಾಗಿದೆ. ಉದಾಹರಣೆಗೆ, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ & ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಇನ್ನೂ ಹೆಚ್ಚಿನವುಗಳೊಂದಿಗೆ ವಿಲೀನಗೊಂಡಿದೆ. ಆದ್ದರಿಂದ, ನಿಮ್ಮ ಬ್ಯಾಂಕ್ ಇತ್ತೀಚೆಗೆ ವಿಲೀನಗೊಂಡಿದ್ದರೆ, ದಯವಿಟ್ಟು ನಿಮ್ಮ ಖಾತೆ ಸಂಖ್ಯೆ ಮತ್ತು IFSC ಕೋಡ್ ಅನ್ನು ನಮ್ಮ ಅಪ್ಲಿಕೇಶನ್‌ನಲ್ಲಿ ನವೀಕರಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಹಳೆಯ IFSC ಕೋಡ್ ಯಾವುದೇ ಆನ್ಲೈನ್ ಟ್ರಾನ್ಸಾಕ್ಷನ್‌ಗಳಿಗೆ ಮಾನ್ಯವಾಗಿರುವುದಿಲ್ಲ. ಕೆಲವು ಬಳಕೆದಾರರ ಅಕೌಂಟ್ ನಂಬರ್‌ಗಳು ಕೂಡ ಬದಲಾಗಿರಬಹುದು. ಆದ್ದರಿಂದ, ಏಂಜಲ್ ಒನ್‌ನೊಂದಿಗೆ ತೊಂದರೆ ರಹಿತ ಪಾವತಿಗಳನ್ನು ಮುಂದುವರೆಸಲು, ನಿಮ್ಮ ಬ್ಯಾಂಕ್ ವಿವರಗಳಾದ ಐಎಫ್‌ಎಸ್‌ಸಿ ಕೋಡ್, ಅಕೌಂಟ್ ನಂಬರ್ ಇತ್ಯಾದಿಗಳು ಸರಿಯಾಗಿವೆ ಎಂಬುದನ್ನು ನೀವು ಖಚಿತಪಡಿಸಿಕೊಳ್ಳಬೇಕು. ನಮ್ಮ ಆ್ಯಪ್‌ನ ಪ್ರೊಫೈಲ್ ವಿಭಾಗಕ್ಕೆ ಭೇಟಿ ನೀಡುವ ಮೂಲಕ ನೀವು ಇದನ್ನು ಆನ್ಲೈನಿನಲ್ಲಿ ಮಾಡಬಹುದು.

ನಿಮ್ಮ ಬ್ಯಾಂಕ್ ವಿಲೀನಗೊಂಡ ಬ್ಯಾಂಕುಗಳ ಪಟ್ಟಿಯಲ್ಲಿದೆಯೇ ಎಂದು ತಿಳಿಯಲು ಈ ಕೆಳಗಿನ ಪಟ್ಟಿಯನ್ನು ಪರಿಶೀಲಿಸಿ.

ಏಂಜಲ್ ಒನ್ ಫಂಡ್‌ಗಳ ಪಾವತಿ ಸೈಕಲ್ ಎಂದರೇನು?

ಏಂಜಲ್ ಒನ್‌ನಲ್ಲಿ, ಟ್ರೇಡರ್ ಗಳ ಅನುಕೂಲಕ್ಕಾಗಿ ಹಣಕಾಸಿನ ಪಾವತಿ ಕೋರಿಕೆಗಳನ್ನು ದಿನಕ್ಕೆ ಮೂರು ಬಾರಿ ಪ್ರಕ್ರಿಯೆಗೊಳಿಸಲಾಗುತ್ತದೆ. ಕೆಳಗೆ ನೀಡಲಾದ ಕಾಲಾವಧಿಯ ಪ್ರಕಾರ ನಾವು ನಿಮ್ಮ ಹಣದ ಪಾವತಿ ಕೋರಿಕೆಯನ್ನು ಪ್ರಕ್ರಿಯೆಗೊಳಿಸುತ್ತೇವೆ.

ದಿನದ ಕಟ್-ಆಫ್ ಸಮಯದ ನಂತರ ಪಾವತಿ ಮಾರ್ಕಿಂಗ್ ಅನ್ನು ಪಾವತಿ ಸೈಕಲ್ ಪ್ರಕಾರ ಮುಂದಿನ ಕೆಲಸದ ದಿನದಂದು ಪ್ರಕ್ರಿಯೆಗೊಳಿಸಲಾಗುತ್ತದೆ.

ನನ್ನ ವಿತ್‌ಡ್ರಾವಲ್ ಕೋರಿಕೆಯ ಸ್ಥಿತಿಯನ್ನು ನಾನು ಹೇಗೆ ಪರಿಶೀಲಿಸಬಹುದು?

ವಿತ್‌ಡ್ರಾವಲ್‌ಗಳು ಮತ್ತು ಇತರ ಟ್ರಾನ್ಸಾಕ್ಷನ್‌ಗಳಿಗಾಗಿನ ನಿಮ್ಮ ಕೋರಿಕೆಗಳ ಸ್ಟೇಟಸ್ ಮತ್ತು ಇತರ ವಿವರಗಳನ್ನು ನೀವು ಸುಲಭವಾಗಿ ಪರಿಶೀಲಿಸಬಹುದು. ಇದನ್ನು ಮಾಡಲು, ಆ್ಯಪ್‌ನ “ಅಕೌಂಟ್” ವಿಭಾಗಕ್ಕೆ ಭೇಟಿ ನೀಡಿ, “ಫಂಡ್ಸ್ ಟ್ರಾನ್ಸಾಕ್ಷನ್ ವಿವರಗಳನ್ನು ನೋಡಿ” ಎಂಬ ವಿಭಾಗಕ್ಕೆ ಹೋಗಿ ಮತ್ತು ನಂತರ “ವಿತ್‌ಡ್ರಾ ಮಾಡಿದ ಫಂಡ್‌ಗಳು” ನೋಡಿ. ಹಣವನ್ನು ವಿತ್‌ಡ್ರಾ ಮಾಡಿದ ವಿಭಾಗದ ಅಡಿಯಲ್ಲಿ, ನೀವು ನಿಮ್ಮ ಯಾವುದೇ ವಿತ್‌ಡ್ರಾವಲ್ ಕೋರಿಕೆಗಳ ಮೇಲೆ ಕ್ಲಿಕ್ ಮಾಡಬಹುದು ಮತ್ತು ಕೋರಿಕೆಯ ಸ್ಟೇಟಸ್ ಮತ್ತು ನಿಮ್ಮ ಬ್ಯಾಂಕ್ ಅಕೌಂಟಿನಲ್ಲಿ ಕೋರಲಾದ ಮೊತ್ತದ ನಿರೀಕ್ಷಿತ ಕ್ರೆಡಿಟ್ ಸಮಯದಂತಹ ವಿವರಗಳನ್ನು ನೋಡಬಹುದು.

ಅಂಕಿಅಂಶ 2: ವಿತ್‌ಡ್ರಾವಲ್ ರದ್ದು ಕೋರಿಕೆ ವಿಭಾಗ (ಎಡಗಡೆ) ಮತ್ತು ವಹಿವಾಟು ವಿವರಗಳ ವಿಭಾಗ (ಬಲಗಡೆ)

ನಾನು ನನ್ನ ವಿತ್‌ಡ್ರಾವಲ್ ಕೋರಿಕೆಯನ್ನು ರದ್ದು ಮಾಡಬಹುದೇ?

ಹೌದು, ಪಾವತಿ ಸೈಕಲ್ ಇನ್ನೂ ಪ್ರಾರಂಭವಾಗದಿದ್ದರೆ, ನೀವು ನಿಮ್ಮ ವಿತ್‌ಡ್ರಾವಲ್ ಕೋರಿಕೆಯನ್ನು ರದ್ದು ಮಾಡಬಹುದು. ಉದಾಹರಣೆಗೆ, ನೀವು ಸೋಮವಾರ ಬೆಳಿಗ್ಗೆ 6:30 am ಗೆ ವಿತ್‌ಡ್ರಾವಲ್ ಕೋರಿಕೆಯನ್ನು ಮಾಡಿದ್ದರೆ ನೀವು 6:50 AM ಗೆ ವಿತ್‌ಡ್ರಾವಲ್ ಕೋರಿಕೆಯನ್ನು ಸುಲಭವಾಗಿ ರದ್ದುಗೊಳಿಸಬಹುದು, ಏಕೆಂದರೆ ಪಾವತಿ ಸೈಕಲ್ ಸೋಮವಾರದಂದು 7:00am ವರೆಗೆ ಪ್ರಾರಂಭವಾಗುವುದಿಲ್ಲ. ಏಂಜಲ್‌ ಒನ್ ನ ಪಾವತಿ ಸೈಕಲ್‌ಗಳು ಯಾವಾಗ ಪ್ರಾರಂಭವಾಗುತ್ತವೆ ಎಂಬುದನ್ನು ಮೇಲಿನ ಟೇಬಲ್‌ನಿಂದ ನೀವು ಪರಿಶೀಲಿಸಬಹುದು.

ಟ್ರೇಡ್ ಮಾಡದ ಬಳಕೆದಾರರಿಗೆ, ಫಂಡ್‌ಗಳ ವಿತ್‌ಡ್ರಾವಲ್ ಕೋರಿಕೆಯ ಪ್ರಕ್ರಿಯೆಯು ಕೋರಿಕೆಯನ್ನು ಮಾಡಿದ ಕೆಲವು ನಿಮಿಷಗಳ ಒಳಗೆ ಆರಂಭವಾಗುತ್ತದೆ. ಆದಾಗ್ಯೂ, ಆ ಸಮಯದಲ್ಲಿರದ್ದತಿಗಾಗಿ ನಿಮ್ಮ ಕೋರಿಕೆಯನ್ನು ನೀವು ಕಳುಹಿಸಬಹುದಾದರೆ ನೀವು ಇನ್ನೂ ಕೋರಿಕೆಯನ್ನು ರದ್ದುಗೊಳಿಸಬಹುದು.

ಮುಕ್ತಾಯ

ನಿಮ್ಮ ಟ್ರೇಡಿಂಗ್ ಅಕೌಂಟಿನಿಂದ ಬ್ಯಾಂಕ್ ಅಕೌಂಟಿಗೆ ಹಣವನ್ನು ಟ್ರಾನ್ಸ್‌ಫರ್ ಮಾಡುವುದು ಏಂಜೆಲ್ ಒನ್‌ನೊಂದಿಗೆ ತೊಂದರೆ ರಹಿತ ಮತ್ತು ಅನುಕೂಲಕರವಾಗಿದೆ. ಆದಾಗ್ಯೂ, ತಿರಸ್ಕಾರವನ್ನು ತಪ್ಪಿಸಲು ವಿತ್‌ಡ್ರಾವಲ್ ಕೋರಿಕೆಯನ್ನು ಸಲ್ಲಿಸುವ ಮೊದಲು ವಿತ್‌ಡ್ರಾ ಮಾಡಬಹುದಾದ ಬ್ಯಾಲೆನ್ಸ್ ಅನ್ನು ಪರಿಶೀಲಿಸಿ ಮತ್ತು ಮೇಲೆ ನೀಡಿದ ಕಾಲಾವಧಿಯನ್ನು ಅನುಸರಿಸಿ. ನಮ್ಮ ಆ್ಯಪ್ ಅಥವಾ ವೆಬ್ ಪ್ಲಾಟ್‌ಫಾರ್ಮ್ ಮೂಲಕ ತಕ್ಷಣವೇ ಹಣವನ್ನು ವಿತ್‌ಡ್ರಾ ಮಾಡಲು ಇಲ್ಲಿ ಕ್ಲಿಕ್ ಮಾಡಿ.