CALCULATE YOUR SIP RETURNS

ನನ್ನ ಡಿಮ್ಯಾಟ್ ಖಾತೆಗೆ ನಾಮಿನಿಯನ್ನು ಹೇಗೆ ಸೇರಿಸಬಹುದು?

5 min readby Angel One
Share

ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) (ಸೆಬಿ) ಇತ್ತೀಚೆಗೆ 23ನೇ ಜುಲೈ, 2021 ದಿನಾಂಕದ ಸುತ್ತೋಲೆ SEBI (ಸೆಬಿ)/HO(ಹೆಚ್ಓ)/MIRSD(ಎಂ ಐ ಆರ್ ಎಸ್ ಡಿ)/RTAMB(ಆರ್ ಟಿ ಎ ಎಂ ಬಿ)/CIR(ಸಿ ಐ ಆರ್)/P (ಪಿ)/2021/601 ಅಡಿಯಲ್ಲಿ ಘೋಷಿಸಿದ್ದರು, ಎಲ್ಲಾ ಅಸ್ತಿತ್ವದಲ್ಲಿರುವ ಅರ್ಹ ಟ್ರೇಡಿಂಗ್ ಮತ್ತು ಡಿಮ್ಯಾಟ್ ಖಾತೆದಾರರು ಮಾರ್ಚ್ 31, 2022 ರಂದು ಅಥವಾ ಅದಕ್ಕಿಂತ ಮೊದಲು ಮೇಲೆ ನೀಡಲಾದ ಪ್ಯಾರಾಗ್ರಾಫ್ 2 ರಲ್ಲಿ ನೀಡಲಾದ ಆಯ್ಕೆಯ ಪ್ರಕಾರ ನಾಮನಿರ್ದೇಶನದ ಆಯ್ಕೆಯನ್ನು ಒದಗಿಸಬೇಕು, ಇದರಲ್ಲಿ ವಿಫಲವಾದರೆ  ಟ್ರೇಡಿಂಗ್ ಖಾತೆಗಳನ್ನು ಟ್ರೇಡಿಂಗ್‌ಗಾಗಿ ಸ್ಥಗಿತ ಮಾಡಲಾಗುತ್ತದೆ ಮತ್ತು ಡಿಮ್ಯಾಟ್ ಖಾತೆಗಳನ್ನು ಡೆಬಿಟ್‌ಗಳಿಗಾಗಿ ಸ್ಥಗಿತಗೊಳಿಸಲಾಗುತ್ತದೆ.

ಆದಾಗ್ಯೂ, ಅವರು ನಂತರ ಗಡುವನ್ನು ವಿಸ್ತರಿಸಿದರು, ಅದರ ಮೂಲಕ ಫೆಬ್ರವರಿ 24, 2022 ರ ಹೊಸ ಸುತ್ತೋಲೆಯ ಅಡಿಯಲ್ಲಿ ಮಾರ್ಚ್ 31, 2023 ರ ನಂತರ ಮಾತ್ರ ಖಾತೆಗಳನ್ನು ಫ್ರೀಜ್ ಮಾಡುವ ನಿಬಂಧನೆಯು ಜಾರಿಗೆ ಬರುತ್ತದೆ.

ನಾಮಿನಿಯನ್ನು ಡಿಮ್ಯಾಟ್ ಖಾತೆಗೆ ಸೇರಿಸುವ ಪ್ರಕ್ರಿಯೆಯನ್ನು ನಾವು ವಿವರಿಸುತ್ತೇವೆ.

ಡಿಮ್ಯಾಟ್  ಖಾತೆ ಎಂದರೇನು?

ಡಿಮ್ಯಾಟ್ ಖಾತೆಯನ್ನು ಡಿಮೆಟೀರಿಯಲೈಸ್ ಮಾಡಲು ಅಥವಾ ಭೌತಿಕ ಷೇರುಗಳನ್ನು ವಿದ್ಯುನ್ಮಾನ ರೂಪಕ್ಕೆ ಪರಿವರ್ತಿಸಲು ಬಳಸಲಾಗುತ್ತದೆ. ಪ್ರತಿ ಡಿಮ್ಯಾಟ್ ಖಾತೆಗಳನ್ನು ನಿರ್ವಹಿಸಬೇಕಾದ ಎರಡು ಸಂಸ್ಥೆಗಳು:

  1. NSDL(ಎನ್ ಎಸ್ ಡಿ ಎಲ್) (ನ್ಯಾಷನಲ್ ಸೆಕ್ಯೂರಿಟಿ ಡೆಪಾಸಿಟರಿ ಲಿಮಿಟೆಡ್)
  2. CDS(ಸಿ ಡಿ ಎಸ್ ಎಲ್)L (ಸೆಂಟ್ರಲ್ ಡೆಪಾಸಿಟರಿ ಸರ್ವಿಸಸ್ ಲಿಮಿಟೆಡ್)

ಡಿಮ್ಯಾಟ್ ಖಾತೆಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

ಡಿಮ್ಯಾಟ್ ಖಾತೆಗೆ ನಾಮಿನಿಗಳನ್ನು ಸೇರಿಸುವುದು

ನಿಮ್ಮ ಬ್ಯಾಂಕಿನ ಉಳಿತಾಯ ಖಾತೆಯಂತೆ, ನೀವು ನಿಮ್ಮ ಡಿಮ್ಯಾಟ್ ಖಾತೆಗೆ ನಾಮಿನಿಯನ್ನು ಸೇರಿಸಬಹುದು. ಯಾವುದೇ ಅಹಿತಕರ  ಘಟನೆಯ ಸಂದರ್ಭದಲ್ಲಿ ನಿಮ್ಮ ಹೂಡಿಕೆಗಳ ಕಾನೂನು ಉತ್ತರಾಧಿಕಾರಿಯಾಗಿರುವ ವ್ಯಕ್ತಿಗೆ ನೀವು ಅಧಿಕೃತಗೊಳಿಸಬಹುದು. ಅಧಿಕೃತ ವ್ಯಕ್ತಿಯನ್ನು ನಾಮಿನಿ ಎಂದು ಕರೆಯಲಾಗುತ್ತದೆ. ನಾಮನಿರ್ದೇಶನವು ಕಡ್ಡಾಯವಲ್ಲ ಆದರೆ ಸಲಹೆಯಾಗಿದೆಎಂದು ನೀವು ನೋಡಬೇಕು.

ಎಷ್ಟು ನಾಮಿನಿಗಳನ್ನು ನೇಮಕ ಮಾಡಬಹುದು?

ನಿಮ್ಮ ಡಿಮ್ಯಾಟ್  ಖಾತೆಗೆ ನೀವು ಗರಿಷ್ಠ 3 ನಾಮಿನಿಗಳನ್ನು ನೇಮಕ ಮಾಡಬಹುದು. ಹೆಚ್ಚುವರಿಯಾಗಿ, ನಿಮ್ಮ ಖಾತೆಯಲ್ಲಿಪ್ರತಿ ನಾಮಿನಿಗೆ ನೀವು ಶೇಕಡಾವಾರುಗಳನ್ನು ಸಹನಿಯೋಜಿಸಬಹುದು. ಉದಾಹರಣೆಗೆ, ನೀವು ಮೂರು ನಾಮಿನಿಗಳನ್ನು ಸೇರಿಸಲು ಬಯಸಿದರೆ, ನಿಮ್ಮ ಆದ್ಯತೆಯ ಪ್ರಕಾರ ನಾಮಿನಿ 1 ಗೆ 50% ನಾಮಿನಿ 2 ಗೆ 30%, ಮತ್ತು ನಾಮಿನಿ 3ಗೆ  20% ಅನ್ನು ನೀವು ನೀಡಬಹುದು.

ನಾಮಿನಿ ಯಾರು ಆಗಬಹುದು?

ನಿಮ್ಮ ನಾಮಿನಿಯನ್ನು ಆಯ್ಕೆ ಮಾಡುವಾಗ ಈ ಕೆಳಗಿನ ಅಂಶಗಳನ್ನು ಪರಿಗಣಿಸಿ.

– ನಾಮಿನಿಯು ನಿಮ್ಮ ತಂದೆ, ತಾಯಿ, ಸಂಗಾತಿ, ಒಡಹುಟ್ಟಿದವರು, ಮಕ್ಕಳು ಅಥವಾ ಇತರ ಯಾವುದೇ ವ್ಯಕ್ತಿಯಾಗಿರಬಹುದು

– ಒಬ್ಬ ಅಪ್ರಾಪ್ತ ವಯಸ್ಕನನ್ನು ನಾಮಿನಿಯಾಗಿ ಸೇರಿಸಬಹುದು, ಆತನ /ಆಕೆಯ ಪಾಲಕರ ವಿವರಗಳನ್ನು ಕೂಡ ಸೇರಿಸಿರಬೇಕಾಗಿರುತ್ತದೆ

– ನೀವು ವೈಯಕ್ತಿಕವಲ್ಲದ, ಕಾರ್ಪೊರೇಶನ್, HUF(ಹೆಚ್ ಯು ಎಫ್) ಕರ್ತಾ ಅಥವಾ ಸೊಸೈಟಿಯಂತಹ ನಾಮಿನಿಯಲ್ನ್ನು ನೇಮಿಸಲು ಸಾಧ್ಯವಿಲ್ಲ

ನಿಮ್ಮ ಡಿಮ್ಯಾಟ್ ಖಾತೆಗೆ ನಾಮಿನಿಗಳನ್ನು ಸೇರಿಸುವ ಸಾಮಾನ್ಯ ಪ್ರಕ್ರಿಯೆ

ನೀವು ಆನ್ಲೈನ್ ಖಾತೆಯನ್ನು ತೆರೆದಿದ್ದರೂ, ನೀವು ನಿಮ್ಮ ಡಿಮ್ಯಾಟ್ ಖಾತೆ ನಾಮಿನಿಯನ್ನು ಸೇರಿಸಲು ಸಾಧ್ಯವಿಲ್ಲ. ನಂತರ ಡಿಮ್ಯಾಟ್  ಖಾತೆಯಲ್ಲಿ ನಾಮಿನಿಯನ್ನು ಹೇಗೆ ಸೇರಿಸುವುದು ಎಂದು ನೀವು ಯೋಚಿಸಸಬಹುದು. ಪ್ರಕ್ರಿಯೆಯು ಆಫ್‌ಲೈನ್ ಮತ್ತು ಆನ್‌ಲೈನ್ ಎರಡೂ ಆಗಿರಬಹುದು.

ಏಂಜಲ್ ಒನ್ ಮೂಲಕ ನಾಮಿನಿಗಳನ್ನು ಸೇರಿಸಲು ಆನ್ಲೈನ್ ಪ್ರಕ್ರಿಯೆ

ನಿಮ್ಮ ಡಿಮ್ಯಾಟ್ ಖಾತೆಗೆ ನಾಮಿನಿಯನ್ನು ಸೇರಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.

  1. ಏಂಜಲ್ ಒನ್ ವೆಬ್ ವೇದಿಕೆಗೆ ಲಾಗಿನ್ ಮಾಡಿ
  2. ನಿಮ್ಮ ಕ್ಲೈಂಟ್ ID(ಐಡಿ) ಪಕ್ಕದಲ್ಲಿ, ಬಲ-ಭಾಗದಲ್ಲಿರುವ ಡ್ರಾಪ್‌ಡೌನ್ ಮೆನು ಕಂಡುಕೊಳ್ಳಿ. ನಾಮಿನಿಯನ್ನು ಸೇರಿಸುವ ಆಯ್ಕೆಯನ್ನು ಕಂಡುಹಿಡಿಯಲು ನನ್ನ ಪ್ರೊಫೈಲ್ ಮೇಲೆ ಕ್ಲಿಕ್ ಮಾಡಿ.
  3. 'ನಾಮಿನಿಯನ್ನು ಸೇರಿಸಿ' ಮೇಲೆ ಕ್ಲಿಕ್ ಮಾಡಿ ಮತ್ತು ಹೆಸರು, ಹುಟ್ಟಿದ ದಿನಾಂಕ, ಸಂಬಂಧ, PAN(ಪ್ಯಾನ್) ಮತ್ತು ಹಂಚಿಕೆ % ಮುಂತಾದ ವಿವರಗಳನ್ನು ಸೇರಿಸಿ
  4. ನೀವು ಅನೇಕ ನಾಮಿನಿಗಳನ್ನು ಸೇರಿಸಲು ಬಯಸಿದರೆ, ಹಂತ 3 ಪುನರಾವರ್ತಿಸಿ
  5. 'ಇ-ಸೈನ್‌ಗಾಗಿ ಮುಂದುವರೆಯಿರಿ' ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಆಧಾರ್ ನಂಬರ್ ನಮೂದಿಸಿ
  6. ಈಗ ಆಧಾರ್‌ನೊಂದಿಗೆ ಜೋಡಿಸಿರುವ ಮೊಬೈಲ್ ಸಂಖ್ಯೆ ಪಡೆದ OTP(ಓಟಿಪಿ) ಯನ್ನು ನಮೂದಿಸಿ ಮತ್ತು ಪ್ರಕ್ರಿಯೆಯನ್ನು ಪೂರ್ಣಗೊಳಿಸಿ

ನಾಮಿನಿಗಳನ್ನು ಸೇರಿಸಲು ಆಫ್‌ಲೈನ್ ಪ್ರಕ್ರಿಯೆ

ನೀವು ನಾಮಿನೇಶನ್ ರೂಪವನ್ನು ಭರ್ತಿ ಮಾಡಬೇಕು (ಖಾತೆಸಂಬಂಧಿತ ವಿವರಗಳು ಮತ್ತು ನಿಮ್ಮ ಭೌತಿಕ ಸಹಿಯೊಂದಿಗೆ) ಮತ್ತು ಅದನ್ನು ಐಡಿ ಪುರಾವೆಯ ಪ್ರತಿಯೊಂದಿಗೆ ನಿಮ್ಮ ಬ್ರೋಕರ್ ಮುಖ್ಯ ಕಚೇರಿಯ ವಿಳಾಸಕ್ಕೆ ಕೊರಿಯರ್ ಮಾಡಬೇಕು (ಉದಾ: ಏಂಜಲ್ ಒನ್) (. ನಿಮ್ಮ ಡಿಮ್ಯಾಟ್ ಖಾತೆಯ ನಾಮಿನಿಯನ್ನು ಸೇರಿಸಿದಾಗ, ಡಿಮ್ಯಾಟ್ ಖಾತೆಯ ಅಡಿಯಲ್ಲಿ ನಿಮ್ಮ ಎಲ್ಲಾ ಸ್ವತ್ತುಗಳಿಗೆ ಇದೇ ರೀತಿಯ ನಾಮಿನೇಶನ್ ಕೂಡ ಅನ್ವಯವಾಗುತ್ತದೆ.

ಡಿಮ್ಯಾಟ್ ಖಾತೆಗೆ ನಾಮಿನಿಯನ್ನು ಬದಲಾಯಿಸುವುದು

ಡಿಮ್ಯಾಟ್ ಖಾತೆಗೆ ನಾಮಿನಿಯನ್ನು ಹೇಗೆ ಸೇರಿಸುವುದು ಎಂದು ಯೋಚಿಸುತ್ತಿರುವಾಗ, ನಿಮ್ಮ ಡಿಮ್ಯಾಟ್ ಖಾತೆಯ ನಾಮಿನಿಯನ್ನು ಆಯ್ಕೆ ಮಾಡುವಾಗ ನೀವು ತುಂಬಾ ಚೆನ್ನಾಗಿ ಯೋಚಿಸಬೇಕು, ಏಕೆಂದರೆ ನಿಮ್ಮ ಡಿಮ್ಯಾಟ್ ಖಾತೆಯ ನಾಮಿನಿಯನ್ನು ಬದಲಾಯಿಸುವಾಗ ನೀವು ಕೆಲವು ತೊಡಕುಗಳನ್ನು ಎದುರಿಸಬೇಕಾಗುತ್ತದೆ, ಅವುಗಳೆಂದರೆ:

– ನೀವು ನಾಮಿನಿಯನ್ನು ಆಯ್ಕೆ ಮಾಡಿದ ನಂತರ ಮತ್ತು ಆ ನಿರ್ದಿಷ್ಟ ನಾಮಿನಿಯನ್ನು ಬದಲಾಯಿಸುವಾಗ ಒಬ್ಬ ವ್ಯಕ್ತಿಯನ್ನು ನಾಮನಿರ್ದೇಶನ ಮಾಡಿದ ನಂತರ ನೀವು ರೂ. 25+18% GST(ಜಿ ಎಸ್ ಟಿ) ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ.

– ಖಾತೆಯ ಮಾರ್ಪಾಡಿನ ರೂಪದೊಂದಿಗೆ ನೀವು ನಾಮಿನೇಶನ್ ಅರ್ಜಿಯ ಕಾಯಂಪ್ರತಿ ಗಳನ್ನು ಕೂಡ ಒದಗಿಸಬೇಕು.

ನಾಮಿನಿಯನ್ನು ನೇಮಿಸುವ ಪ್ರಯೋಜನಗಳು

ನಿಮ್ಮ ಡಿಮ್ಯಾಟ್ ಖಾತೆಗೆ ನಾಮಿನಿಯನ್ನು ಸೇರಿಸಲು ಕೆಲವು ಕಾರಣಗಳು ಈ ಕೆಳಗಿನಂತಿವೆ:

– ಅನಿರೀಕ್ಷಿತ ಘಟನೆಯ ಸಂದರ್ಭದಲ್ಲಿ, ನಾಮಿನಿಯ ಉಪಸ್ಥಿತಿಯು ಡಿಮ್ಯಾಟ್ ಖಾತೆಯಲ್ಲ  ಹೊಂದಿರುವ ಷೇರುಗಳು, ಬಾಂಡ್‌ಗಳು, ಮ್ಯೂಚುಯಲ್ ಫಂಡ್ ಘಟಕಗಳು, ಜಿ-ಸೆಕ್‌ಗಳು ಇತ್ಯಾದಿಗಳ ಭದ್ರತೆಗಳ ವರ್ಗಾವಣೆಯನ್ನು ಸುಲಭಗೊಳಿಸುತ್ತದೆ

– NOC(ಎನ್ ಓ ಸಿ) (ನೋ ಅಬ್ಜೆಕ್ಷನ್ ಸರ್ಟಿಫಿಕೇಟ್) ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಅಫಿಡವಿಟ್‌ಗಳಂತಹ ಅನೇಕ  ದಾಖಲೆಗಳನ್ನು ಸಂಗ್ರಹಿಸುವ ಮತ್ತು ಸಲ್ಲಿಸುವ ದೀರ್ಘಾವಧಿಯ ಕಾರ್ಯವಿಧಾನಗಳಿಂದ (ಮತ್ತು ಕಾನೂನು ಹೋರಾಟಗಳು) ನಿಮ್ಮ ಕುಟುಂಬದ ಸದಸ್ಯರನ್ನು ಉಳಿಸುತ್ತದೆ

ಪ್ರಾಥಮಿಕ ಫಲಾನುಭವಿಯ ಅಕಾಲಿಕ  ಮರಣದ ಸಂದರ್ಭದಲ್ಲಿ ನಾಮಿನಿಯನ್ನು ನೇಮಿಸುವುದು ನಿಮಗೆ ಮತ್ತು ನಿಮ್ಮ ಸಂಬಂಧಿಕರಿಗೆ ಆಗುವ ತುಂಬಾ ತೊಂದರೆಯನ್ನು  ದೂರ ಮಾಡಬಹುದು. ಸಾಮಾನ್ಯವಾಗಿ, ತಮ್ಮ ಡಿಮ್ಯಾಟ್ ಖಾತೆ ತೆರೆಯುವಾಗ ಜನರು ನಾಮಿನಿಯನ್ನು ಆಯ್ಕೆ ಮಾಡುತ್ತಾರೆ. ನೀವು ಈಗಾಗಲೇ ಮಾಡದಿದ್ದರೆ, ಏಂಜಲ್ ಒನ್‌ನ ವೆಬ್ ಪೋರ್ಟಲ್‌ಗೆ ಲಾಗಿನ್ ಮಾಡುವ ಮೂಲಕ ನೀವು ನಾಮಿನಿಯನ್ನು ಕೂಡ ನಂತರ ಸೇರಿಸಬಹುದು.

ಮುಕ್ತಾಯ

ಅಹಿತಕರ ಘಟನೆಯ ಸಂದರ್ಭದಲ್ಲಿ ನಿಮ್ಮ ಹೂಡಿಕೆಗಳನ್ನು ನಿಮ್ಮ ಕಾನೂನು ಉತ್ತರಾಧಿಕಾರಿಗೆ ಸರಾಗವಾಗಿ ವರ್ಗಾಯಿಸುವುದನ್ನು ಖಚಿತಪಡಿಸಿಕೊಳ್ಳಲು ನಾಮಿನಿಯು ಸಹಾಯ ಮಾಡುತ್ತಾರೆ. ಇದು ನಿಮ್ಮ ಕುಟುಂಬದ ಸದಸ್ಯರಿಗೆ ಬಹಳಷ್ಟು ಸಮಯವನ್ನು ಉಳಿಸುತ್ತದೆ ಮತ್ತು ಅವರನ್ನು ಆರ್ಥಿಕವಾಗಿ ಸುರಕ್ಷಿತವಾಗಿರಿಸುತ್ತದೆ. ನೀವು ಹೊಸ ಹೂಡಿಕೆದಾರರಾಗಿದ್ದರೆ, ಆನ್‌ಬೋರ್ಡಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಾಗ ನಾಮಿನಿಯನ್ನು ಸೇರಿಸಿ. ಮತ್ತು ನೀವು ಅಸ್ತಿತ್ವದಲ್ಲಿರುವ ಡಿಮ್ಯಾಟ್  ಖಾತೆದಾರರಾಗಿದ್ದರೆ, ನಾಮಿನಿ(ಗಳನ್ನು) ಸೇರಿಸಲು ಇಲ್ಲಿ ಕ್ಲಿಕ್ ಮಾಡಿ.

ಏಂಜಲ್ ಒನ್ ಸಹಾಯದಿಂದ, ನೀವು ಸುಲಭವಾಗಿ ನಿಮ್ಮ ಡಿಮ್ಯಾಟ್ ಖಾತೆಯನ್ನುತೆರೆಯಬಹುದು ಮತ್ತು 5 ನಿಮಿಷಗಳಲ್ಲಿ  ಟ್ರೇಡಿಂಗ್ ಆರಂಭಿಸಬಹುದು. ನಿಮ್ಮ ಡಿಮ್ಯಾಟ್ ಖಾತೆಯೊಂದಿಗೆ ನೀವು ಹೊಂದಿರುವ ಯಾವುದೇ ಪ್ರಶ್ನೆಗಳನ್ನು ಪೂರ್ಣಗೊಳಿಸಲು ನೀವು ಏಂಜಲ್ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

Open Free Demat Account!
Join our 3 Cr+ happy customers