CALCULATE YOUR SIP RETURNS

ಸ್ಟಾಕ್ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

4 min readby Angel One
Share

ಪೂರೈಕೆ ಮತ್ತು ಬೇಡಿಕೆಯು ಷೇರು ಬೆಲೆಯನ್ನು ನಿರ್ಧರಿಸುತ್ತದೆ. ಬೇಡಿಕೆಯು ಹೆಚ್ಚಾಗಿದ್ದರೆ, ಅದು ಹೆಚ್ಚಾಗುತ್ತದೆ, ಮತ್ತು ಬೇಡಿಕೆಯು ಕಡಿಮೆಯಾಗಿದ್ದರೆ, ಅದು ಕಡಿಮೆಯಾಗುತ್ತದೆ. ಸ್ಟಾಕ್ ಬೆಲೆಗಳು ಸ್ಟಾಕ್ ನ ಬಿಡ್ ಮತ್ತು ಆಸ್ಕ್ ಅನ್ನು ಅವಲಂಬಿಸಿರುತ್ತದೆ. ನಿರ್ದಿಷ್ಟ ಬೆಲೆಗೆ ನಿರ್ದಿಷ್ಟ ಸಂಖ್ಯೆಯ ಷೇರುಗಳನ್ನು ಖರೀದಿಸಲು ಬಿಡ್ ಒಂದು ಆಫರ್ ಆಗಿದೆ. ಒಂದು ಆಸ್ಕ್ ಒಂದು ನಿರ್ದಿಷ್ಟ ಬೆಲೆಯಲ್ಲಿ ನಿರ್ದಿಷ್ಟ ಸಂಖ್ಯೆಯ ಷೇರುಗಳನ್ನು ಮಾರಾಟ ಮಾಡುವ ಆಫರ್ ಆಗಿದೆ.

ಈ ಸಮಯದಲ್ಲಿ ಗರಿಷ್ಠ ಸಂಖ್ಯೆಯ ಷೇರುಗಳನ್ನು ವಹಿವಾಟು ನಡೆಸುವ ಬೆಲೆಯನ್ನು ಕಂಡುಕೊಳ್ಳುವ ಮೂಲಕ ಎಕ್ಸ್ಚೇಂಜ್ ಕೇಂದ್ರಗಳು ತಕ್ಷಣವೇ ಸ್ಟಾಕ್ ಬೆಲೆಯನ್ನು ಲೆಕ್ಕ ಹಾಕುತ್ತವೆ. ಷೇರುಗಳ ಖರೀದಿ ಅಥವಾ ಮಾರಾಟದ ಆಫರ್‌ನಲ್ಲಿ ಬದಲಾವಣೆ ಇದ್ದರೆ ಬೆಲೆ ಬದಲಾಗುತ್ತದೆ.

ಷೇರಿನ ಮಾರುಕಟ್ಟೆ ಬೆಲೆಯನ್ನು ಲೆಕ್ಕ ಹಾಕುವುದು ಹೇಗೆ?

ಷೇರಿನ ಮಾರುಕಟ್ಟೆ ಮಿತಿಯನ್ನು ನಿರ್ಧರಿಸಲು, ನೀವು ಷೇರಿನ ಮಾರುಕಟ್ಟೆ ಬೆಲೆಯನ್ನು ಅಂದಾಜು ಮಾಡಬೇಕು. ಷೇರುಗಳು ಟ್ರೇಡರ್ ಗಳಿಗೆ ಎಷ್ಟು ಮೌಲ್ಯಯುತವಾಗಿವೆ ಎಂಬುದನ್ನು ಕಂಡುಹಿಡಿಯಲು, ಕಂಪನಿಯ ಕೊನೆಯ ಅಪ್ಡೇಟ್ ಮಾಡಿದ ಷೆರ್ ಮೌಲ್ಯವನ್ನು ಪಡೆದುಕೊಳ್ಳಿ ಮತ್ತು ಬಾಕಿ ಷೇರುಗಳ ಮೂಲಕ ಅದನ್ನು ಗುಣಕ ಪಡಿಸಿಕೊಳ್ಳಿ.

ಷೇರಿನ ಬೆಲೆಯನ್ನು ಲೆಕ್ಕ ಹಾಕಲು ಇನ್ನೊಂದು ವಿಧಾನವೆಂದರೆ ಗಳಿಕೆಯ ಅನುಪಾತದ ಬೆಲೆ. ಕಳೆದ 12 ತಿಂಗಳಲ್ಲಿ ಸ್ಟಾಕ್ ಬೆಲೆಯನ್ನು ವಿಭಜಿಸುವ ಮೂಲಕ ನೀವು P/E ಅನುಪಾತವನ್ನು ಲೆಕ್ಕ ಹಾಕಬಹುದು.

ಸ್ಟಾಕ್‌ನ ಆಂತರಿಕ ಮೌಲ್ಯ = P/E ರೇಶಿಯೋ X ಪ್ರತಿ ಷೇರಿಗೆ ಗಳಿಕೆ

ಬೆಳೆಯುತ್ತಿರುವ ಕಂಪನಿಗಳು ಸಾಮಾನ್ಯವಾಗಿ ಹೆಚ್ಚಿನ P/E ಅನುಪಾತವನ್ನು ಹೊಂದಿರುತ್ತವೆ ಮತ್ತು ಸ್ಥಾಪಿತ ವ್ಯವಹಾರವು ಕಡಿಮೆ P/E ಬೆಳವಣಿಗೆ ದರಗಳನ್ನು ಹೊಂದಿರುತ್ತದೆ.

ಷೇರುಗಳ ಆರಂಭಿಕ ಮೌಲ್ಯವನ್ನು ಹೇಗೆ ನಿರ್ಧರಿಸಲಾಗುತ್ತದೆ?

ಕಂಪನಿಯ ಷೇರುಗಳನ್ನು ಮೊದಲು ಪ್ರೈಮರಿ ಮಾರುಕಟ್ಟೆಯಲ್ಲಿ ನೀಡಲಾಗುತ್ತದೆ; ಬಂಡವಾಳದ ಅವಶ್ಯಕತೆಗಳನ್ನು ಪೂರೈಸಲು ಸಾಮಾನ್ಯ ಜನರಿಗೆ ಇನಿಷಿಯಲ್ ಪಬ್ಲಿಕ್ ಆಫರ್ (ಐಪಿಒ(IPO) ನೀಡಲಾಗುತ್ತದೆ. ಸಂಸ್ಥೆಯ ಕಾರ್ಯಕ್ಷಮತೆ ಮತ್ತು ನಿವ್ವಳ ಪ್ರಸ್ತುತ ಮೌಲ್ಯವನ್ನು ಪರಿಗಣಿಸಿ, ಷೇರಿನ ಆರಂಭಿಕ ಬೆಲೆಯನ್ನು ಐಪಿಒ(IPO) ಅಲ್ಲಿ ನಿರ್ಧರಿಸಲಾಗುತ್ತದೆ.

ಒಮ್ಮೆ ಟ್ರೇಡಿಂಗ್ ಆರಂಭವಾದ ನಂತರ, ಸೆಕೆಂಡರಿ ಮಾರುಕಟ್ಟೆಯಲ್ಲಿ ಷೇರುಗಳ ಬೇಡಿಕೆ ಮತ್ತು ಪೂರೈಕೆಯ ಆಧಾರದ ಮೇಲೆ ಷೇರು ಬೆಲೆಯು ಏರಿಳಿತವನ್ನು ಆರಂಭಿಸುತ್ತದೆ. ಸ್ಟಾಕ್‌ಗೆ ಹೆಚ್ಚು ಖರೀದಿದಾರರು ಇದ್ದರೆ ಬೆಲೆಗಳು ಹೆಚ್ಚಾಗಬಹುದು ಮತ್ತು ಹೆಚ್ಚು ಮಾರಾಟಗಾರರು ಇದ್ದರೆ ಕಡಿಮೆಯಾಗಬಹುದು.

ಯಾವ ಅಂಶಗಳು ನೇರವಾಗಿ ಷೇರಿನ ಬೆಲೆಯ ಮೇಲೆ ಪರಿಣಾಮ ಬೀರುತ್ತವೆ??

  1. ಪೂರೈಕೆ ಮತ್ತು ಬೇಡಿಕೆಯು ನೇರವಾಗಿ ಷೇರು ಬೆಲೆಯ ಮೇಲೆ ಪರಿಣಾಮ ಬೀರುವ ಅತ್ಯಂತ ನಿರ್ಣಾಯಕ ಅಂಶಗಳಾಗಿವೆ. ಒಂದು ವೇಳೆ ಷೇರು ಮಾರಾಟಕ್ಕಿಂತ ಹೆಚ್ಚು ಖರೀದಿಸಿದರೆ, ಬೇಡಿಕೆ ಪೂರೈಕೆಗಿಂತ ಹೆಚ್ಚಾಗಿರುವುದರಿಂದ ಬೆಲೆಯು ಹೆಚ್ಚಾಗುತ್ತದೆ.
  2. ಸರಕುಗಳು ಮತ್ತು ಸೇವೆಗಳನ್ನು ಉತ್ಪಾದಿಸುವ ಮತ್ತು ಮಾರಾಟ ಮಾಡುವುದರಿಂದ ಕಂಪನಿಯ ಗಳಿಕೆ ಮತ್ತು ಲಾಭವು ಅದರ ಷೇರು ಬೆಲೆಗಳ ಮೇಲೆ ಕೂಡ ಪರಿಣಾಮ ಬೀರಬಹುದು.
  3. ಮಾರುಕಟ್ಟೆಯಲ್ಲಿ ಟ್ರೇಡರ್ ಗಳು ಮತ್ತು ಹೂಡಿಕೆದಾರರ ನಡವಳಿಕೆ ಅಂಶಗಳು ಸ್ಟಾಕ್‌ಗಳ ಬೆಲೆಯನ್ನು ಬದಲಾಯಿಸಬಹುದು.
  4. ಪೂರೈಕೆ ಮತ್ತು ಬೇಡಿಕೆ ಸಮನಾಗಿದ್ದರೆ, ಷೇರಿನ ಬೆಲೆಗಳು ಸ್ಥಿರವಾಗಿರುತ್ತವೆ ಮತ್ತು ಬೆಲೆಯಲ್ಲಿ ಸ್ವಲ್ಪ ಹೆಚ್ಚಳ ಮತ್ತು ಇಳಿಕೆ ಇರುತ್ತದೆ. ಒಂದು ಅಂಶವು ಇನ್ನೊಂದನ್ನು ಮೀರಿಸಿದರೆ, ಹಠಾತ್ ಬದಲಾವಣೆಯನ್ನು ನಿರೀಕ್ಷಿಸಬಹುದು.
  5. ಕಂಪನಿಯು ಮಾರುಕಟ್ಟೆಯಲ್ಲಿ ಖರೀದಿಗಾಗಿ ಹೊಸ ಷೇರುಗಳನ್ನು ನೀಡಿದಾಗ, ನಂಬರ್ ಸೀಮಿತವಾಗಿರುತ್ತದೆ. ಹೆಚ್ಚಿನ ಹೂಡಿಕೆದಾರರು ಈ ಷೇರುಗಳನ್ನು ಖರೀದಿಸಲು ಪ್ರಯತ್ನಿಸುತ್ತಿದ್ದರೆ, ಮತ್ತು ಪೂರೈಕೆ ಕಡಿಮೆಯಾಗಿದ್ದರೆ, ಷೇರುಗಳ ಬೆಲೆ ಹೆಚ್ಚಾಗುತ್ತದೆ.
  6. ಒಂದು ವೇಳೆ ಕಂಪನಿಯು ಮಾರುಕಟ್ಟೆಯಿಂದ ಅದರ ಷೇರುಗಳನ್ನು ಹಿಂತಿರುಗಿಸಿದರೆ, ಇದು ಸಂಚರಣೆಯಲ್ಲಿ ಷೇರುಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ. ಕಡಿಮೆ ಮಾಡಿದ ಪೂರೈಕೆಯಿಂದಾಗಿ, ಬೆಲೆಗಳು ಹೆಚ್ಚಾಗಬಹುದು.

ಷೇರು ಬೆಲೆಗಳ ಮೇಲೆ ಪರೋಕ್ಷವಾಗಿ ಯಾವ ಅಂಶಗಳು ಪರಿಣಾಮ ಬೀರುತ್ತವೆ?

  1. ಬಡ್ಡಿ ದರಗಳು
  2. ಆರ್ಥಿಕ ನೀತಿಗಳಲ್ಲಿನ ಬದಲಾವಣೆಗಳು
  3. ಹಣದುಬ್ಬರ
  4. ಡಿಫ್ಲೇಶನ್
  5. ಮಾರ್ಕೆಟ್ ಸೆಂಟಿಮೆಂಟ್
  6. ಇಂಡಸ್ಟ್ರಿ ಟ್ರೇಡ್ಸ್
  7. ಜಾಗತಿಕ ಏರಿಳಿತಗಳು
  8. ಪ್ರಕೃತಿ ವಿಕೋಪಗಳು

ಉತ್ತಮ ಬ್ರೋಕರ್ ನಿಮಗೆ ಷೇರುಗಳ ಬೆಲೆಯನ್ನು ಹೆಚ್ಚು ನಿಖರವಾಗಿ ನಿರ್ಧರಿಸಲು ಮತ್ತು ಪರಿಣಾಮಕಾರಿಯಾಗಿ ವ್ಯಾಪಾರ ಮಾಡಲು ಸಹಾಯ ಮಾಡಬಹುದು. ಏಂಜಲ್ ಒನ್ ಮೂಲಕ ಟ್ರೇಡಿಂಗ್ ಪ್ರಾರಂಭಿಸಲು ಇಲ್ಲಿ ಕ್ಲಿಕ್ ಮಾಡಿ.

Learn Free Stock Market Course Online at Smart Money with Angel One.

Open Free Demat Account!
Join our 3 Cr+ happy customers