ವಿನಿಮಯ ಮತ್ತು ನಿಯಂತ್ರಕರು ವಿಧಿಸುವ ದಂಡಗಳ ವಿಧಗಳು

ದಂಡ ಎಂದರೇನು ಮತ್ತು ನೀವು ಹೂಡಿಕೆ ಮಾಡಲು ಪ್ರಾರಂಭಿಸಿದಾಗ ವಿಧಿಸಲಾಗುವ ವಿವಿಧ ದಂಡಗಳು ಯಾವುವು ಎಂಬುದನ್ನು ತಿಳಿದುಕೊಳ್ಳಲು ನೀವು ಉತ್ಸುಕರಾಗಿದ್ದೀರಾ? ದಂಡವು ಮಾರ್ಜಿನ್/ಶಾರ್ಟ್ ಡೆಲಿವರಿ ಜವಾಬ್ದಾರಿಗಳನ್ನು ಪೂರೈಸಲು ವಿಫಲವಾದ ಸದಸ್ಯರ ಮೇಲೆ ನಿಯಂತ್ರಕರು ವಿಧಿಸುವ ಮೊತ್ತವಾಗಿದೆ. ದಂಡ ಶುಲ್ಕಗಳನ್ನು ವಿಧಿಸುವುದು ನಿಯಂತ್ರಕರಿಗೆ ಮಾರುಕಟ್ಟೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಮತ್ತು ಪ್ರತಿಬಂಧಿಸಲು ಅಗತ್ಯವಾಗಿದೆ. ಒಮ್ಮೆ ಈ ದಂಡಗಳ ಬಗ್ಗೆ ನೀವು ಎಲ್ಲವನ್ನೂ ತಿಳಿದುಕೊಂಡ ನಂತರ, ಅವುಗಳನ್ನು ತಪ್ಪಿಸಲು ನೀವು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಬಹುದು. ಆದ್ದರಿಂದ ವಿನಿಮಯಗಳು ಮತ್ತು ನಿಯಂತ್ರಕರು ವಿಧಿಸುವ ವಿವಿಧ ರೀತಿಯ ದಂಡಗಳ ಬಗ್ಗೆ ಮತ್ತು ಅಂತಹ ಸಂದರ್ಭದಲ್ಲಿ ಏನು ಮಾಡಬೇಕು ಎಂಬುದರ ಬಗ್ಗೆ ಆಳವಾಗಿ ತಿಳಿದುಕೊಳ್ಳೋಣ.

1. ಮಾರ್ಜಿನ್ ಶಾರ್ಟ್‌ಫಾಲ್ ದಂಡ

ಮಾರ್ಜಿನ್ ಉತ್ಪನ್ನದ ಮೂಲಕ ದೋಷರಹಿತವಾಗಿ ಖರೀದಿಸಿದ ಡೆರಿವೇಟಿವ್ ಒಪ್ಪಂದಗಳು ಮತ್ತು ಷೇರುಗಳನ್ನು ಸಾಗಿಸಲು ಪಾವತಿಸಲಾದ ನಿರ್ದಿಷ್ಟ ಮುಂಗಡ ಹಣವನ್ನು ನಿರ್ದಿಷ್ಟವಾಗಿ ಮಾರ್ಜಿನ್ ಎಂದು ಕರೆಯಲಾಗುತ್ತದೆ ಮತ್ತು ಈ ಮುಂಗಡ ಉಳಿಕೆಯಲ್ಲಿನ ಯಾವುದೇ ಅಂತರವನ್ನು ಮಾರ್ಜಿನ್ ಶಾರ್ಟ್‌ಫಾಲ್ ಎಂದು ಕರೆಯಲಾಗುತ್ತದೆ. ನಿಯಂತ್ರಕರು ಸೂಚಿಸಿದಂತೆ, ಮಾರ್ಜಿನ್ ಶಾರ್ಟ್‌ಫಾಲ್ ದಂಡವನ್ನು ಇಂಟ್ರಾಡೇ ಸ್ಥಾನಗಳಲ್ಲಿ ಮತ್ತು ರಾತ್ರೋ ರಾತ್ರಿ ಸ್ಥಾನಗಳ ಮೇಲೆ ವಿಧಿಸಲಾಗುತ್ತದೆ.ಮೇಲಿನವುಗಳನ್ನು ಹೊರತುಪಡಿಸಿ, ನೀವು ಷೇರುಗಳನ್ನು ಮಾರಾಟ ಮಾಡಿದಾಗ ಮಾರ್ಜಿನ್ ದಂಡವನ್ನು ಕೂಡ ವಿಧಿಸಲಾಗುತ್ತದೆ ಆದರೆ TPIN (ಟಿಫಿನ್) ಅಧಿಕೃತಗೊಳಿಸಿಲ್ಲ. ಅಂತಹ ಸಂದರ್ಭದಲ್ಲಿ, ಟಿ ದಿನ ಮತ್ತು T((ಟಿ)+1 ದಿನಕ್ಕೆ ಮಾರ್ಜಿನ್ ದಂಡ ಅನ್ವಯವಾಗುತ್ತದೆ ಮತ್ತು T(ಟಿ)+2 ದಿನದಂದು ಹರಾಜು ದಂಡವನ್ನು ಕೂಡ ವಿಧಿಸಲಾಗುತ್ತದೆ

ದಂಡವನ್ನು ಆಕರ್ಷಿಸುವ ಮಾರ್ಜಿನ್ ಶಾರ್ಟ್ಫಾಲ್ ವಿಧಗಳು

  1. MTM(ಎಂ ಟಿ ಎಂ) ಮಾರ್ಜಿನ್ (ಮಾರ್ಕ್ ಟು ಮಾರ್ಕೆಟ್)
  2. ಪೀಕ್ ಮಾರ್ಜಿನ್ ಶಾರ್ಟ್‌ಫಾಲ್
  3. ಮುಂಗಡ ಮಾರ್ಜಿನ್ ಶಾರ್ಟ್‌ಫಾಲ್

ಮಾರ್ಜಿನ್ ದಂಡವನ್ನು ನೀವು ಹೇಗೆ ಲೆಕ್ಕ ಹಾಕಬಹುದು ಎಂಬುದು ಇಲ್ಲಿದೆ.

ಪ್ರತಿ ಗ್ರಾಹಕರಿಗೆ ಕಿರು ಸಂಗ್ರಹ ದಂಡದ ಶೇಕಡಾವಾರು
(< ರೂ. 1 ಲಕ್ಷ) ಮತ್ತು (ಅನ್ವಯವಾಗುವ ಮಾರ್ಜಿನ್‌ನ 10%) 0.5%
(= ರೂ. 1 ಲಕ್ಷ) ಅಥವಾ (= ಅನ್ವಯವಾಗುವ ಮಾರ್ಜಿನ್‌ನ 10%) 1.0%
  • ಒಂದು ವೇಳೆ ಸಣ್ಣ/ ಗ್ರಾಹಕರಿಗೆ ಮಾರ್ಜಿನ್‌ಗಳ ಸಂಗ್ರಹವಿಲ್ಲದಿದ್ದರೆ
    • ಸತತ 3 ಕ್ಕಿಂತ ಹೆಚ್ಚು ದಿನಗಳವರೆಗೆ ಮುಂದುವರೆಯುತ್ತದೆ, ನಂತರ ಶಾರ್ಟ್‌ಫಾಲ್ 3ನೇ ದಿನಗಳ ನಂತರ ನಿರಂತರ ಶಾರ್ಟ್‌ಫಾಲ್ ಪ್ರತಿ ದಿನಕ್ಕೆ ಶಾರ್ಟ್‌ಫಾಲ್ ಮೊತ್ತದ 5% ದಂಡವನ್ನು ವಿಧಿಸಲಾಗುತ್ತದೆ
    • ಒಂದು ವೇಳೆ, ತಿಂಗಳಲ್ಲಿ 5 ಕ್ಕಿಂತ ಹೆಚ್ಚು ದಿನಗಳ ಸಂದರ್ಭದಲ್ಲಿ, ಶಾರ್ಟ್‌ಫಾಲ್ 5 ನೇ ದಿನಕ್ಕೆ ಮೀರಿ ಪ್ರತಿ ದಿನಕ್ಕೆ ಶಾರ್ಟ್‌ಫಾಲ್ ಮೊತ್ತದ 5% ದಂಡವನ್ನು ವಿಧಿಸಲಾಗುವುದು

ಉದಾಹರಣೆಯೊಂದಿಗೆ ಇದನ್ನು ಅರ್ಥಮಾಡಿಕೊಳ್ಳೋಣ:

ರೂ 9,10,000 ನಿಮ್ಮ ಲೆಡ್ಜರ್‌ನಲ್ಲಿ ಹೊಂದಿದ್ದೀರಿ ಎಂದು ಅಂದುಕೊಳ್ಳೋಣ. ಮತ್ತು ನಿಮ್ಮ 2 ಪಟ್ಟುABC(ಎಬಿಸಿ) ಕಂಪನಿಯನ್ನು ಮುಂದುವರೆಸಲು ರೂ. 10,00,000 ಅಗತ್ಯವಿದೆ. ದಂಡವನ್ನು ಹೇಗೆ ವಿಧಿಸಲಾಗುತ್ತದೆ ಎಂಬುದನ್ನು ಈ ಕೆಳಗಿನ ಕೋಷ್ಟಕವು ತೋರಿಸುತ್ತದೆ.

ದಿನ ಭವಿಷ್ಯದ ಮಾರ್ಜಿನ್ ಅಗತ್ಯತೆ ಮಾರ್ಜಿನ್ ಶಾರ್ಟ್ಫಾಲ್ ದಂಡ
ಟಿ+1 ರೂ. 10,00,000/- ರೂ. 90,000/- ರೂ. 450/- (0.5%)
ಟಿ+2 ರೂ. 11,01,000/- ರೂ. 1,01,000/- ರೂ. 1,010/- (1%)
ಟಿ+3 ರೂ. 11,03,000/- ರೂ. 1,03,000/- ರೂ. 1,030/- (1%)
ಟಿ+4 ರೂ. 11,05,000/- ರೂ. 1,05,000/- ರೂ. 5,250/- (5%)
ಟಿ+5 ರೂ. 11,07,000/- ರೂ. 1,07,000/- ರೂ. 5,350/- (5%)

ಮೇಲಿನ ಉದಾಹರಣೆಯಲ್ಲಿ, 0.5% ದಂಡವನ್ನು T(ಟಿ)+1 ದಿನದವರೆಗೆ ವಿಧಿಸಲಾಗುತ್ತದೆ ಏಕೆಂದರೆ

  • ಮಾರ್ಜಿನ್ 1 ಲಕ್ಷಕ್ಕಿಂತ ಕಡಿಮೆ ಇದೆ
  • ಮಾರ್ಜಿನ್ ಕೊರತೆಯು ಅನ್ವಯವಾಗುವ ಮಾರ್ಜಿನ್‌ನ 10% ಕ್ಕಿಂತ ಕಡಿಮೆ ಇದೆ

ಆದಾಗ್ಯೂ, T(ಟಿ)+2 ಮತ್ತು T(ಟಿ)+3 ದಿನಗಳಲ್ಲಿ 1% ದಂಡವನ್ನು ವಿಧಿಸಲಾಗುತ್ತದೆ ಏಕೆಂದರೆ ಮಾರ್ಜಿನ್ ಕೊರತೆ ರೂ. 1,00,000 ಕ್ಕಿಂತ ಹೆಚ್ಚಾಗಿದೆ. ಮತ್ತು 3 ದಿನಗಳಿಗಿಂತ (T(ಟಿ)+4) ಕ್ಕಿಂತ ಹೆಚ್ಚು ದಿನಗಳವರೆಗೆ ಕೊರತೆ ಮುಂದುವರೆದರೆ, T(ಟಿ)+4 ಮತ್ತು T(ಟಿ)+5 ದಿನಗಳಲ್ಲಿ 5% ದಂಡವನ್ನು ವಿಧಿಸಲಾಗುತ್ತದೆ

ಯಾವುದೇ ವಹಿವಾಟಿಗೆ ಪ್ರವೇಶಿಸುವಾಗ ಸಾಕಷ್ಟು ಮಾರ್ಜಿನ್ ಲಭ್ಯವಿದೆ ಎಂದು ಖಚಿತಪಡಿಸಿಕೊಳ್ಳುವ ಮೂಲಕ ನೀವು ಮಾರ್ಜಿನ್ ದಂಡವನ್ನು ತಪ್ಪಿಸಬಹುದು.

2. ಹರಾಜು ದಂಡ

ನೀವು XX (ಎಕ್ಸ್ಎಕ್ಸ್) ಷೇರುಗಳನ್ನು ಮಾರಾಟ ಮಾಡಿದ್ದರೆ ಮತ್ತು ನೀವು ಅವುಗಳನ್ನು ವಿತರಿಸಲು ವಿಫಲವಾದರೆ, ವಿನಿಮಯವು ಹರಾಜು ನಡೆಸುತ್ತದೆ ಮತ್ತು T(ಟಿ)+3 ದಿನದಂದು ಅವುಗಳನ್ನು ವಿತರಿಸಲು ಹರಾಜು ಮಾರುಕಟ್ಟೆಯಲ್ಲಿ ಈ ಷೇರುಗಳನ್ನು ಖರೀದಿಸುತ್ತದೆ. ಅಂತಹ ಸಂದರ್ಭದಲ್ಲಿ, ಡೀಫಾಲ್ಟರ್ (ಈ ಸಂದರ್ಭದಲ್ಲಿ, ನೀವು) ಹರಾಜು ದಂಡ ಎಂದು ಕರೆಯಲ್ಪಡುವ ವಿನಿಮಯಕ್ಕೆ ದಂಡವನ್ನು ಪಾವತಿಸಬೇಕಾಗುತ್ತದೆ.

ಕೆಳಗಿನ ಕೋಷ್ಟಕವು ವಿವಿಧ ಸಂದರ್ಭಗಳಲ್ಲಿ ವಿಧಿಸಲಾಗುವ ಹರಾಜು ದಂಡ ಶುಲ್ಕಗಳ ಬಗ್ಗೆ ಉತ್ತಮ ತಿಳುವಳಿಕೆಯನ್ನು ನಿಮಗೆ ನೀಡುತ್ತದೆ.

ವರ್ಗ ಇದನ್ನು ಯಾವಾಗ ವಿಧಿಸಲಾಗುತ್ತದೆ? ಹರಾಜು ಬೆಲೆ/ದಂಡ
ಆಂತರಿಕ ಹರಾಜು (F&O(ಎಫ್&ಓ) ಸ್ಕ್ರಿಪ್) ಖರೀದಿದಾರರು ಮತ್ತು ಮಾರಾಟಗಾರರು ಏಂಜಲ್‌ ಒನ್ ಗ್ರಾಹಕರುಗಳು/ಸದಸ್ಯರಾಗಿದ್ದಾಗ ಮತ್ತು ಹರಾಜು ಮಾಡಿದ ಷೇರು F&O(ಎಫ್&ಓ) ಸ್ಕ್ರಿಪ್ ಆಗಿರುತ್ತದೆ ಟಿ ದಿನದಿಂದ T(ಟಿ)+2 ದಿನಕ್ಕೆ ಅತಿಹೆಚ್ಚಿನ ಬೆಲೆ ಅಥವಾ T(ಟಿ)+2 ದಿನಗಳ ಮುಚ್ಚುವ ದರ + 3%; ಯಾವುದು ಅಧಿಕವೋ ಅದು
ಆಂತರಿಕ ಹರಾಜು (F&O(ಎಫ್&ಓ) ಸ್ಕ್ರಿಪ್ ಅಲ್ಲದ) ಖರೀದಿದಾರರು ಮತ್ತು ಮಾರಾಟಗಾರರು ಏಂಜಲ್‌ ಒನ್ ಗ್ರಾಹಕರುಗಳು/ಸದಸ್ಯರಾಗಿದ್ದಾಗ ಮತ್ತು ಹರಾಜು ಮಾಡಿದ ಷೇರು F&O(ಎಫ್&ಓ) ಸ್ಕ್ರಿಪ್ ಅಲ್ಲದ ಟಿ ದಿನದಿಂದ T(ಟಿ)+2 ದಿನಕ್ಕೆ ಅತಿಹೆಚ್ಚಿನ ಬೆಲೆ ಅಥವಾ T(ಟಿ)+2 ದಿನಗಳ ಮುಚ್ಚುವ ದರ + 7%; ಯಾವುದು ಅಧಿಕವೋ ಅದು
ಮಾರುಕಟ್ಟೆ ಹರಾಜು ಖರೀದಿದಾರರು ಏಂಜಲ್ ಒನ್ ಗ್ರಾಹಕರು ಅಲ್ಲದಿದ್ದಾಗ ಮಾರುಕಟ್ಟೆ ಹರಾಜು ಮೌಲ್ಯದ 0.10% (ಮಾರುಕಟ್ಟೆ ಹರಾಜು ಮೌಲ್ಯ = ಹರಾಜು ದಿನದಲ್ಲಿ ಹಂಚಿಕೆ ಬೆಲೆ* ಷೇರುಗಳ ಸಂಖ್ಯೆ)
ಮಾರುಕಟ್ಟೆ ಮುಚ್ಚುವಿಕೆ ಆಂತರಿಕ ಮತ್ತು ಬಾಹ್ಯ ಹರಾಜುಗಳನ್ನು ಕಾರ್ಯಗತಗೊಳಿಸದಿದ್ದಾಗ (ಮಾರಾಟಗಾರ/ಖರೀದಿದಾರರು ಏಂಜಲ್ ಒನ್‌ನೊಂದಿಗೆ ನೋಂದಾಯಿತ ಡಿಮ್ಯಾಟ್ ಖಾತೆಯನ್ನುಹೊಂದಿದ್ದಾರೆ) T(ಟಿ)+2 ದಿನಗಳ ಮುಚ್ಚುವ ಬೆಲೆ + 20%

ಉದಾಹರಣೆಯೊಂದಿಗೆ ಇದನ್ನು ಅರ್ಥಮಾಡಿಕೊಳ್ಳೋಣ.

ನೀವು ಪ್ರತಿ ಷೇರಿಗೆ ರೂ. 100 ರಲ್ಲಿ 80 ಷೇರುಗಳನ್ನು ಮಾರಾಟ ಮಾಡಿದ್ದೀರಿ ಆದರೆ ನೀವು ಷೇರುಗಳನ್ನು ವಿತರಿಸಲು ಡೀಫಾಲ್ಟ್ ಮಾಡಿದ್ದೀರಿ. ಮಾರ್ಗಸೂಚಿಗಳ ಪ್ರಕಾರ, ವಿನಿಮಯವು ಹರಾಜಿನಲ್ಲಿ ಷೇರುಗಳನ್ನು ಖರೀದಿಸುತ್ತದೆ ಮತ್ತು ಅವುಗಳನ್ನು T(ಟಿ)+3 ದಿನದಂದು ವಿತರಣೆ ಮಾಡುತ್ತದೆ

T(ಟಿ)+3 ದಿನಗಳವರೆಗೆ ಷೇರು ಬೆಲೆಗಳು ಈ ಕೆಳಗಿನಂತಿವೆ

ದಿನ ಷೇರುಗಳ ಬೆಲೆ (ರೂ. ಗಳಲ್ಲಿ)
T(ಟಿ)ದಿನ 100
T(ಟಿ)+1 ದಿನ 120
T(ಟಿ)+2 ದಿನ 115
T(ಟಿ)+3 ದಿನ 130

ವಿವಿಧ ಸಂದರ್ಭಗಳಲ್ಲಿ ಹರಾಜು ದಂಡವನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ ಎಂಬುದರ ಬಗ್ಗೆ ಈ ಕೆಳಗಿನ ಕೋಷ್ಟಕವು ನಿಮಗೆ ಒಂದು ಕಲ್ಪನೆಯನ್ನು ನೀಡುತ್ತದೆ

ಸನ್ನಿವೇಶ ವರ್ಗ ಇದನ್ನು ಯಾವಾಗ ವಿಧಿಸಲಾಗುತ್ತದೆ ಹರಾಜು ಬೆಲೆ/ದಂಡ ಹರಾಜು ಬೆಲೆ/ದಂಡ
ಸನ್ನಿವೇಶ 1 ಆಂತರಿಕ ಹರಾಜು (F&O(ಎಫ್&ಓ) ಸ್ಕ್ರಿಪ್) ನೀವು ಮತ್ತು ಖರೀದಿದಾರರು ಏಂಜಲ್‌ ಒನ್‌ ಗ್ರಾಹಕರುಗಳು/ಸದಸ್ಯರಾಗಿದ್ದಾಗ ಮತ್ತು ಹರಾಜು ಮಾಡಿದ ಸ್ಟಾಕ್ F&O(ಎಫ್&ಓ) ಸ್ಕ್ರಿಪ್ ಆಗಿರುತ್ತದೆ ಟಿ ದಿನದಿಂದ T(ಟಿ)+2 ದಿನಕ್ಕೆ ಅತಿಹೆಚ್ಚಿನ ಬೆಲೆ ಅಥವಾ T(ಟಿ)+2 ದಿನಗಳ ಮುಚ್ಚುವ ದರ + 3%; ಯಾವುದು ಅಧಿಕವೋ ಅದು ಟಿ ದಿನದಿಂದ T(ಟಿ)+2 ವರೆಗೆ ಅತಿಹೆಚ್ಚು ಬೆಲೆ –ರೂ 9,600 (120*80) ಅಥವಾ ಟಿ+2 ದಿನಗಳ ಮುಚ್ಚುವ ದರ + 3% –ರೂ 9,476 {(115*80)+3%} ಹರಾಜು ಮೌಲ್ಯವು ರೂ 9,600 ಆಗಿರುತ್ತದೆ ಏಕೆಂದರೆ ಇದು ಎರಡರಲ್ಲಿ ಅಧಿಕವಾಗಿರುತ್ತದೆ
ಸನ್ನಿವೇಶ 2 ಆಂತರಿಕ ಹರಾಜು (F&O(ಎಫ್&ಓ) ಸ್ಕ್ರಿಪ್ ಅಲ್ಲದ) ನೀವು ಮತ್ತು ಖರೀದಿದಾರರು ಏಂಜಲ್‌ ಒನ್‌ ಗ್ರಾಹಕರುಗಳು/ಸದಸ್ಯರಾಗಿದ್ದಾಗ ಮತ್ತು ಹರಾಜು ಮಾಡಿದ ಸ್ಟಾಕ್ F&O(ಎಫ್&ಓ) ಸ್ಕ್ರಿಪ್ ಅಲ್ಲದ ಟಿ ದಿನದಿಂದ T(ಟಿ)+2 ದಿನಕ್ಕೆ ಅತಿಹೆಚ್ಚಿನ ಬೆಲೆ ಅಥವಾ (ಟಿ)T+2 ದಿನಗಳ ಮುಚ್ಚುವ ದರ + 7%; ಯಾವುದು ಅಧಿಕವೋ ಅದು ಟಿ ದಿನದಿಂದ T(ಟಿ)+2 ವರೆಗೆ ಅತಿಹೆಚ್ಚು ಬೆಲೆ –ರೂ 9,600 (120*80) ಅಥವಾ ಟಿ+2 ದಿನಗಳ ಮುಚ್ಚುವ ದರ + 7% –ರೂ 9,844 {(115*80)+7%} ಹರಾಜು ಮೌಲ್ಯವು ರೂ 9,844 ಆಗಿರುತ್ತದೆ ಏಕೆಂದರೆ ಇದು ಎರಡರಲ್ಲಿ ಅಧಿಕವಾಗಿರುತ್ತದೆ
ಸನ್ನಿವೇಶ 3 ಮಾರುಕಟ್ಟೆ ಹರಾಜು ಖರೀದಿದಾರರು ಏಂಜಲ್ ಒನ್‌ ಸದಸ್ಯರಲ್ಲದಿದ್ದಲ್ಲಿ ಮಾರುಕಟ್ಟೆ ಹರಾಜು ಮೌಲ್ಯದ 0.10% (ಮಾರುಕಟ್ಟೆ ಹರಾಜು ಮೌಲ್ಯ = ಹರಾಜು ದಿನದಲ್ಲಿ ಹಂಚಿಕೆ ಬೆಲೆ*. ಷೇರುಗಳ ಸಂಖ್ಯೆ) ರೂ. 10.4 ((130*80 ರ 0.10%)) ಆದ್ದರಿಂದ, ದಂಡ ರೂ. 10.4 ಹರಾಜು ಮೌಲ್ಯ 10,400
ಸನ್ನಿವೇಶ 4 ಮಾರುಕಟ್ಟೆ ಮುಚ್ಚುವಿಕೆ ಆಂತರಿಕ ಮತ್ತು ಬಾಹ್ಯ ಹರಾಜುಗಳನ್ನು ಕಾರ್ಯಗತಗೊಳಿಸದಿದ್ದರೆ ಮತ್ತು ನೀವು ಏಂಜಲ್ ಒನ್‌ನೋಂದಾಯಿತ ಮಾರಾಟಗಾರರಾಗಿದ್ದರೆ T(ಟಿ) +2 ದಿನಗಳ ಮುಚ್ಚುವ ಬೆಲೆ + 20% ಮುಚ್ಚುವ ಬೆಲೆ – ರೂ. 11,040 {(115*80)+20%}

ಹರಾಜು ದಂಡದಲ್ಲಿ ಇತರ ಪರಿಸ್ಥಿತಿಗಳು

ಟ್ರೇಡ್-ಟು-ಟ್ರೇಡ್‌ಗೆ ವಿತರಣೆಯನ್ನುನೀಡಲು ವಿಫಲವಾದ ಸಂದರ್ಭದಲ್ಲಿ ಮುಚ್ಚುವಿಕೆ

ಟ್ರೇಡ್-ಟು-ಟ್ರೇಡ್ ವಿಭಾಗದಲ್ಲಿ (ಷೇರುಗಳ ಡೆಲಿವರಿ ಕಡ್ಡಾಯವಾಗಿದೆ ಮತ್ತು ಅವುಗಳನ್ನು ನಿಮ್ಮ ಡಿಮ್ಯಾಟ್ ಖಾತೆಗೆ ಜಮೆ ಮಾಡಿದ ನಂತರ ನೀವು ಅವುಗಳನ್ನು ಮಾರಾಟ ಮಾಡಬಹುದು), ವಿತರಣೆಯಲ್ಲಿ ವಿಫಲವಾದ ಸಂದರ್ಭದಲ್ಲಿ, ಯಾವುದೇ ಆಂತರಿಕ ಹರಾಜು ಇರುವುದಿಲ್ಲ. ಹರಾಜು NSE (ಎನ್ ಎಸ್ ಇ) (ರಾಷ್ಟ್ರೀಯ ಸ್ಟಾಕ್ ಎಕ್ಸ್‌ಚೇಂಜ್) ನೇರವಾಗಿ ನಡೆಸುತ್ತದೆ ಮತ್ತು ಹರಾಜು ಬೆಲೆಯನ್ನು ಈ ಕೆಳಗೆ ನಮೂದಿಸಿದಂತೆ ಲೆಕ್ಕ ಹಾಕಲಾಗುತ್ತದೆ:

T(ಟಿ) ದಿನದಿಂದ T(ಟಿ)+1 ದಿನಕ್ಕೆ ಅತಿಹೆಚ್ಚು ಬೆಲೆ ಅಥವಾ T(ಟಿ) +1 ದಿನಗಳ ಮುಚ್ಚುವ ಬೆಲೆ + 20%, ಯಾವುದು ಅಧಿಕವೋ ಅದು.

ಕಾರ್ಪೊರೇಟ್ ಹರಾಜಿನ ಅಡಿಯಲ್ಲಿ ಭದ್ರತೆಗಳ ಕಡ್ಡಾಯ ಮುಚ್ಚುವಿಕೆ

ಕಾರ್ಪೊರೇಟ್ ಕ್ರಮಗಳನ್ನು ಹೊಂದಿರುವ ಭದ್ರತೆಗಳ ಸಂದರ್ಭದಲ್ಲಿ ಮತ್ತು ಕಾರ್ಪೊರೇಟ್ ಕ್ರಮಕ್ಕೆ ಯಾವುದೇ ‘ವಿತರಣೆ ಅವಧಿ’ ಇಲ್ಲದಿದ್ದರೆ, ಕಡಿಮೆ ವಿತರಣೆಯ ಎಲ್ಲಾ ಪ್ರಕರಣಗಳನ್ನು ಕಡ್ಡಾಯವಾಗಿ ಮುಚ್ಚಲಾಗುತ್ತದೆ. ಈ ವಿತರಣೆ ಇಲ್ಲದ ಅವಧಿಯಿಂದಾಗಿ ಯಾವುದೇ ಹರಾಜು ಅಥವಾ ಭದ್ರತೆಗಳ ವರ್ಗಾವಣೆ ನಡೆಯಬಹುದು. ಹರಾಜು ಬೆಲೆಯನ್ನು ಈ ಕೆಳಗಿನಂತೆ ಲೆಕ್ಕ ಹಾಕಬಹುದು.

ಇತ್ಯರ್ಥದ ಟಿ ದಿನದಿಂದ ಹಿಡಿದು ಹರಾಜು ದಿನದವರೆಗೆ ಅಥವಾ ಹರಾಜಿನ ದಿನದ ಮುಚ್ಚುವ ಬೆಲೆ + 10%; ಯಾವುದು ಅಧಿಕವೋ ಅದು

3. NSEFO (ಎನ್ ಎಸ್ ಇ ಎಫ್ ಓ) ಭೌತಿಕ ವಿತರಣಾ ಶಾರ್ಟೇಜ್‌ಗಳ ದಂಡ

ಮಾರಾಟಗಾರರು ಅಂಗೀಕೃತ ಸಂಖ್ಯೆಯ ಷೇರುಗಳನ್ನು ಖರೀದಿದಾರರಿಗೆ ತಲುಪಿಸಲು ವಿಫಲವಾದಾಗ, ದಂಡವನ್ನು ವಿನಿಮಯದಿಂದ ವಿಧಿಸಲಾಗುತ್ತದೆ. ಮಾಸಿಕ ಆಧಾರದ ಮೇಲೆ F&O(ಎಫ್&ಓ)ಸ್ಕ್ರಿಪ್‌ಗಳಲ್ಲಿನ ಟ್ರೇಡ್‌ಗಳಿಗಾಗಿ PCM(ಪಿ ಸಿ ಎಂ) ಈ ದಂಡವನ್ನು ವಿಧಿಸುತ್ತದೆ.

ಈ ಕೆಳಗಿನ ಕೋಷ್ಟಕವುವಿವಿಧ ಸಂದರ್ಭಗಳಲ್ಲಿ ವಿಧಿಸಲಾಗುವ ವಿವಿಧ ದಂಡಗಳನ್ನು ತೋರಿಸುತ್ತದೆ

ವರ್ಗ ಇದನ್ನು ಯಾವಾಗ ವಿಧಿಸಲಾಗುತ್ತದೆ ಹರಾಜು ಬೆಲೆ/ದಂಡ
ಆಂತರಿಕ ಹರಾಜು ಖರೀದಿದಾರರು ಮತ್ತು ಮಾರಾಟಗಾರರು ಏಂಜಲ್‌ ಒನ್‌ ಗ್ರಾಹಕರುಗಳು/ಸದಸ್ಯರಾಗಿದ್ದಾಗ ಟಿ ದಿನದಿಂದ T(ಟಿ) +2 ದಿನಕ್ಕೆ ಅತಿಹೆಚ್ಚಿನ ಬೆಲೆ ಅಥವಾ T(ಟಿ)+2 ದಿನಗಳ ಮುಚ್ಚುವ ದರ + 3%; ಯಾವುದು ಅಧಿಕವೋ ಅದು
ಮಾರುಕಟ್ಟೆ ಹರಾಜು ಖರೀದಿದಾರರು ಏಂಜಲ್ ಒನ್ ಗ್ರಾಹಕರು ಅಲ್ಲದಿದ್ದಾಗ ಫಿಸಿಕಲ್ ಕ್ಲಿಯರಿಂಗ್ ಸದಸ್ಯರಿಂದ (PCM(ಪಿ ಸಿ ಎಂ) ಹರಾಜು ದರವನ್ನು ಪಡೆಯಲಾಗಿದೆ
ಮಾರುಕಟ್ಟೆ ಮುಚ್ಚುವಿಕೆ ಆಂತರಿಕ ಮತ್ತು ಬಾಹ್ಯ ಹರಾಜುಗಳನ್ನು ಕಾರ್ಯಗತಗೊಳಿಸದಿದ್ದಾಗ (ಮಾರಾಟಗಾರ/ಖರೀದಿದಾರರು ಏಂಜಲ್ ಒನ್‌ನೊಂದಿಗೆ ನೋಂದಾಯಿತ ಡಿಮ್ಯಾಟ್ ಖಾತೆಯನ್ನು ಹೊಂದಿದ್ದರೆ ) ಟಿ ದಿನದಿಂದ T(ಟಿ) +2 ದಿನಕ್ಕೆ ಅತಿಹೆಚ್ಚು ಮುಚ್ಚುವ ಬೆಲೆ ಅಥವಾ T(ಟಿ) +2 ದಿನಗಳ ಮುಚ್ಚುವ ದರ + 3%; ಯಾವುದು ಅಧಿಕವೋ ಅದು

ಈ ಕೋಷ್ಟಕವನ್ನು ಮೇಲೆ ತಿಳಿಸಲಾದ ಉದಾಹರಣೆಯೊಂದಿಗೆ ಅರ್ಥಮಾಡಿಕೊಳ್ಳೋಣ, ನೀವು ಮುಂಬೈನಿಂದ ಹೊರಗಿರುತ್ತೀರಿ ಎಂದು ಭಾವಿಸೋಣ

ವರ್ಗ ಇದನ್ನು ಯಾವಾಗ ವಿಧಿಸಲಾಗುತ್ತದೆ? ಹರಾಜು ಬೆಲೆ/ದಂಡ ಹರಾಜು ಬೆಲೆ/ದಂಡ
ಆಂತರಿಕ ಹರಾಜು ಎರಡೂ ಸಂಬಂಧಿತ ಪಕ್ಷಗಳು ಏಂಜಲ್‌ ಒನ್‌ನ ಗ್ರಾಹಕರುಗಳು/ಸದಸ್ಯರಾಗಿದ್ದಾಗ ಟಿ ದಿನದಿಂದ T(ಟಿ)+2 ದಿನಕ್ಕೆ ಅತಿಹೆಚ್ಚಿನ ಬೆಲೆ ಅಥವಾ T(ಟಿ)+2 ದಿನಗಳ ಮುಚ್ಚುವ ದರ + 3%; ಯಾವುದು ಅಧಿಕವೋ ಅದು ಟಿ ದಿನದಿಂದ T(ಟಿ)+2 ದಿನಕ್ಕೆ ಅತಿಹೆಚ್ಚಿನ ಬೆಲೆ – ರೂ. 9,600 (120*80) ಅಥವಾ ಟಿ +2 ದಿನಗಳ ಮುಚ್ಚುವ ದರ + 3% – ರೂ. 9,476 {(115*80)+3%} ಹರಾಜು ಮೌಲ್ಯವು ಎರಡರಲ್ಲಿ ಹೆಚ್ಚಿರುವುದರಿಂದ ರೂ. 9,600 ಆಗಿರುತ್ತದೆ
ಮಾರುಕಟ್ಟೆ ಹರಾಜು ಖರೀದಿದಾರರು ಏಂಜಲ್ ಒನ್‌ನ ಸದಸ್ಯರಲ್ಲದಾಗ ಫಿಸಿಕಲ್ ಕ್ಲಿಯರಿಂಗ್ ಸದಸ್ಯರಿಂದ (PCM (ಪಿ ಸಿ ಎಂ)) ಹರಾಜು ದರವನ್ನು ಸ್ವೀಕರಿಸಲಾಗಿದೆ PCM(ಪಿ ಸಿ ಎಂ) ನಿಂದ ಪಡೆದ ದರವನ್ನು ವಿಧಿಸಲಾಗುತ್ತದೆ
ಮಾರುಕಟ್ಟೆ ಮುಚ್ಚುವಿಕೆ ಆಂತರಿಕ ಮತ್ತು ಬಾಹ್ಯ ಹರಾಜುಗಳನ್ನು ಕಾರ್ಯಗತಗೊಳಿಸದಿದ್ದರೆ ಮತ್ತು ನೀವು ಏಂಜಲ್ ಒನ್‌ನ ನೋಂದಾಯಿತ ಮಾರಾಟಗಾರರಾಗಿದ್ದರೆ ಟಿ ದಿನದಿಂದ T(ಟಿ)+2 ದಿನಕ್ಕೆ ಅತಿಹೆಚ್ಚಿನ ಬೆಲೆ ಅಥವಾ T(ಟಿ)+2 ದಿನಗಳ ಮುಚ್ಚುವ ದರ + 3%; ಯಾವುದು ಅಧಿಕವೋ ಅದು ಟಿ ದಿನದಿಂದ T(ಟಿ)+2 ದಿನಕ್ಕೆ ಅತಿಹೆಚ್ಚಿನ ಬೆಲೆ – ರೂ. 9,600 (120*80) ಅಥವಾ ಟಿ+2 ದಿನಗಳ ಮುಚ್ಚುವ ದರ + 3% – ರೂ. 9,476 {(115*80)+3%} ಹರಾಜು ಮೌಲ್ಯವು ಎರಡರಲ್ಲಿ ಹೆಚ್ಚಿರುವುದರಿಂದ ರೂ. 9,600 ಆಗಿರುತ್ತದೆ

4. ನಿಷೇಧದ ಅವಧಿಯ ದಂಡ

ಎಫ್&ಒ ವಿಭಾಗದಲ್ಲಿ ಷೇರುಗಳಿಗಾಗಿ ವಿನಿಮಯವು ಎಂಪಿಡಬ್ಲ್ಯೂಎಲ್ (ಮಾರುಕಟ್ಟೆಯ ವ್ಯಾಪಕ ಸ್ಥಾನದ ಮಿತಿಗಳು – ಯಾವುದೇ ಸಮಯದಲ್ಲಿ ತೆರೆಯಬಹುದಾದ ಒಪ್ಪಂದಗಳ ಗರಿಷ್ಠ ಸಂಖ್ಯೆ ಒಪ್ಪಂದಗಳು) ಅನ್ನು ಹೊಂದಿಸುತ್ತದೆ. ಭದ್ರತೆಯ ಮುಕ್ತ ಸ್ಥಾನಗಳು MPWL (ಎಂಪಿಡಬ್ಲ್ಯೂಎಲ್) ನ 95% ಮೀರಿದರೆ, ಷೇರುನಿಷೇಧದ ಅವಧಿಯನ್ನು ಪ್ರವೇಶಿಸುತ್ತದೆ. ನಿಷೇಧವುಜಾರಿಯಲ್ಲಿರುವ ಅವಧಿಯಲ್ಲಿ, ಪ್ರತಿದಿನದ ಅಂತ್ಯದ ವಿನಿಮಯವು ಯಾವುದೇ ಸದಸ್ಯರು ಅಥವಾ ಗ್ರಾಹಕರು ತಮ್ಮ ಅಸ್ತಿತ್ವದಲ್ಲಿರುವ ಭದ್ರತಾ ಸ್ಥಾನವನ್ನು ಹೆಚ್ಚಿಸಿಲ್ಲ ಅಥವಾ ಹೊಸ ಸ್ಥಾನವನ್ನು ರಚಿಸಿಲ್ಲ ಎಂದು ಖಚಿತಪಡಿಸುತ್ತದೆ. ಒಂದು ವೇಳೆ ಗ್ರಾಹಕರು /ಟ್ರೇಡಿಂಗ್ ಸದಸ್ಯರು ಮೇಲೆ ಹೇಳಿದಂತೆ ಮಾಡಿದರೆ, ಅವರು ದಂಡಕ್ಕೆ ಒಳಪಡುತ್ತಾರೆ. ಇದನ್ನು ಮಾರುಕಟ್ಟೆಯ ವ್ಯಾಪಕ ಸ್ಥಾನದ ಮಿತಿ ಉಲ್ಲಂಘನೆ ಎಂದು ಕೂಡ ಕರೆಯಲಾಗುತ್ತದೆ

ವಿಧಿಸಲಾದ ದಂಡವು ಹೆಚ್ಚಿನ ಸ್ಥಾನದ ಮೌಲ್ಯದ 1% ಆಗಿರುತ್ತದೆ, ಇದು ಕನಿಷ್ಠ ರೂ. 5,000 ಮತ್ತು ಗರಿಷ್ಠ ರೂ. 1,00,000 ಗೆ ಒಳಪಟ್ಟಿರುತ್ತದೆ. ನಿಷೇಧವು ಮುಂದುವರೆಯುವ ಸ್ಕ್ರಿಪ್‌ನ ಹೊಸ ಷೇರುಗಳನ್ನು ಖರೀದಿಸುವ ಮೂಲಕ ನೀವು ಈ ದಂಡವನ್ನು ತಪ್ಪಿಸಬಹುದು.

ಮುಕ್ತಾಯ

ಈಗ ನೀವು ವಿನಿಮಯ ಮತ್ತು ನಿಯಂತ್ರಕರು ವಿಧಿಸುವ ಎಲ್ಲಾ ದಂಡಗಳನ್ನು ಅರ್ಥಮಾಡಿಕೊಂಡಿದ್ದೀರಿ, ಅವುಗಳನ್ನು ತಪ್ಪಿಸಲು ನಿಮಗೆ ಸುಲಭವಾಗುತ್ತದೆ. ನೀವು ಮಾಡಬೇಕಾಗಿರುವುದು ಕೇವಲ ಟ್ರೇಡಿಂಗ್ ಮಾಡುವಾಗ ನಿಮ್ಮ ಖಾತೆಯಲ್ಲಿನ ಸಾಕಷ್ಟು ಮಾರ್ಜಿನ್ ಮತ್ತು ಷೇರುಗಳ ವಿರುದ್ಧ ಮಾರ್ಜಿನ್ ಹೊಂದಿರುವುದನ್ನು ಖಚಿತಪಡಿಸಿಕೊಳ್ಳಿ. ಒಂದು ವೇಳೆ ನಿಮ್ಮ ಮೇಲೆ ಯಾವುದೇ ದಂಡವನ್ನು ವಿಧಿಸಲಾದರೆ, ನೀವು ಅದರ ವಿವರಗಳನ್ನು ನಿಮ್ಮ ಲೆಡ್ಜರ್‌ನಲ್ಲಿ ನೋಡಬಹುದು. ಹೀಗಾಗಿ, ಚಿಂತಿಸಬೇಡಿ ಮತ್ತು ಟ್ರೇಡಿಂಗ್ ಆರಂಭಿಸ.